Friday, June 14, 2024

ಸತ್ಯ | ನ್ಯಾಯ |ಧರ್ಮ

CWG 2022: ಪುರುಷರ ಲಾಂಗ್ ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ಗೆ ಬೆಳ್ಳಿ

ಬರ್ಮಿಂಗ್‌ ಹ್ಯಾಮ್‌ : 2022 ರಲ್ಲಿ ನಡೆಯುತ್ತಿರುವ  ಕಾಮನ್‌ವೆಲ್ತ್ ಗೇಮ್ಸ್  ಪುರುಷರ ಲಾಂಗ್ ಜಂಪ್‌ ಕ್ರೀಡಾಕೂಟದಲ್ಲಿ ಮುರಳಿ ಶ್ರೀಶಂಕರ್  8.08 ಮೀ ಜಿಗಿತದೊಂದಿಗೆ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. 
ಶ್ರೀಶಂಕರ್‌ ಅವರು ತಮ್ಮ ಐದನೇ ಜಿಗಿತದ ಮೂಲಕ ಈ ಸಾಧನೆಯನ್ನು ಸಾಧಿಸಿದರು,
ಬಹಮಾಸ್‌ನ ಲಕ್ವಾನ್ ನಾಯರ್ನ್ ಕೂಡ 8.08 ಮೀಟರ್‌ಗಳ ಅತ್ಯುತ್ತಮ ಜಿಗಿತವನ್ನು ಹೊಂದಿದ್ದ ಕಾರಣ ಇಬ್ಬರು ಸಮಬಲ ಪ್ರದರ್ಶನ ತೋರಿದ್ದರು. ನಂತರ ಇಬ್ಬರಿಗೂ ನೀಡಿದ ಅವಕಾಶದಲ್ಲಿ ಶ್ರೀಶಂಕರ್ ಅವರು 7.84 ಮೀಟರ್‌ ಜಿಗಿದರೆ, ನಾಯರ್ನ್ 7.98 ಮೀಟರ್‌ ಜಿಗಿದು ಚಿನ್ನಕ್ಕೆ ಕೊರಳೊಡ್ಡಿದರು. 
ದಕ್ಷಿಣ ಆಫ್ರಿಕಾದ ಜೋವನ್ ವ್ಯಾನ್ ವುರೆನ್ (8.06 ಮೀ) ಕಂಚಿನ ಪದಕ ಪಡೆದರು. ಹಾಗೆಯೇ ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಆಟಗಾರ ಮುಹಮ್ಮದ್ ಅನೀಸ್ ಯಾಹಿಯಾ 7.97ಮೀ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದರು.
ಸಿಡಬ್ಲ್ಯೂಜಿಯಲ್ಲಿ ಭಾರತದ ಪುರುಷ ಲಾಂಗ್ ಜಂಪ್‌ ನಲ್ಲಿ ಶ್ರೀಶಂಕರ್ ಅವರು ಬೆಳ್ಳಿಗೆ ಕೊರಳೊಡ್ಡಿ ಭಾರತಕ್ಕೆ ಮತ್ತೊಂದು ಪದಕದ ಸಂಖ್ಯೆಯನ್ನು ಹೆಚ್ಚಿಸಿದರು. 

Related Articles

ಇತ್ತೀಚಿನ ಸುದ್ದಿಗಳು