Monday, January 12, 2026

ಸತ್ಯ | ನ್ಯಾಯ |ಧರ್ಮ

SSLC ಪ್ರಶ್ನೆ ಪತ್ರಿಕೆ ಲೀಕ್ ಶಿಕ್ಷಕರು ಸೇರಿ ಎಂಟು ಮಂದಿ ಜೈಲು ಪಾಲು

ಬೆಂಗಳೂರು : ಎಸ್‌ಎಸ್‌ಎಲ್‌ಸಿ (SSLC) ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ (Question Paper) ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 8 ಜನರನ್ನು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು (Crime) ಬಂಧಿಸಿದ್ದಾರೆ.

ಗುರುತಿಸಲ್ಪಟ್ಟ ಬಂಧಿತರಲ್ಲಿ ತುಮಕೂರು ಜಿಲ್ಲೆಯಿಂದ ಗಿರೀಶ್ ವಿ.ಡಿ ಮುಖ್ಯೋಪಾಧ್ಯಾಯರಾಗಿದ್ದಾರೆ. ರಾಮನಗರದಿಂದ ಅಮ್ಜದ್ ಖಾನ್ ಸಹ ಶಿಕ್ಷಕರಾಗಿದ್ದಾರೆ. ಕಲಬುರಗಿ ಜಿಲ್ಲೆಯಿಂದ ಶಾಹಿದಾ ಬೇಗಂ ಮುಖ್ಯ ಶಿಕ್ಷಕಿ, ಫಾಹ್ಮಿದಾ ಸಹ ಶಿಕ್ಷಕಿ, ಮೊಹಮ್ಮದ್ ಸಿರಾಜುದ್ದೀನ್ ಶಿಕ್ಷಕ ಮತ್ತು ಫರ್ಜಾನಾ ಬೇಗಂ ಶಿಕ್ಷಕಿ ಎಂದು ಗುರುತಿಸಲಾಗಿದೆ. ಜನವರಿ 9 ರಂದು ನಡೆಯಬೇಕಿದ್ದ ಹಿಂದಿ ಪರೀಕ್ಷೆ ಮೊದಲು ದಿನ, ಜನವರಿ 8 ರಂದು, ನಿರಂಜನ್ ಶೆಟ್ಟಿ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಘಟನೆದ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ರಾಜು ಅವರು ಉತ್ತರ ವಿಭಾಗದ ಸೈಬರ್ ಸೆಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಪೋಲೀಸ್ ತನಿಖೆ ವೇಳೆ, ತುಮಕೂರು, ರಾಮನಗರ ಮತ್ತು ಕಲಬುರಗಿ ಜಿಲ್ಲೆಗಳ ಹೆಡ್ ಮಾಸ್ಟರ್‌ಗಳು, ಶಿಕ್ಷಕರು ಮತ್ತು ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಸೇರಿ ಒಟ್ಟು 8 ಜನರನ್ನು ಬಂಧಿಸಲಾಗಿದೆ.

ಈಗ ಪೊಲೀಸರು ಪ್ರಶ್ನೆಪತ್ರಿಕೆಯನ್ನು ವೈರಲ್ ಮಾಡಿದವರ ವಾಟ್ಸಪ್‌, ಇನ್‌ಸ್ಟಾ, ಟೆಲಿಗ್ರಾಂ ಖಾತೆಯ ಜೊತೆ ಮೊಬೈಲ್ ಪರಿಶೀಲನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಮತ್ತಷ್ಟು ಮಂದಿ ಬಂಧನವಾಗುವ ಸಾಧ್ಯತೆಯಿದೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page