ಪಥನವಾದ ವಿಮಾನದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಇದ್ದ ಬಗ್ಗೆ ದೃಢಪಡಿಸಿದ ಸಿಬ್ಬಂದಿ

ಅಹಮದಾಬಾದ್ ನಲ್ಲಿ ಭೀಕರವಾಗಿ ಪಥನಗೊಂಡ ವಿಮಾನದಲ್ಲಿ ಗುಜರಾತ್ ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಇದ್ದ ಬಗ್ಗೆ ವಿಮಾನ ನಿಲ್ದಾಣದ ಸಿಬ್ಬಂದಿ ದೃಢಪಡಿಸಿದ್ದಾರೆ. ಪ್ರಯಾಣಿಕರು ಸೇರಿದಂತೆ ಒಟ್ಟು 242 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

ವಿಮಾನ ಪಥನವಾದ ಜಾಗದಲ್ಲಿ ದಟ್ಟವಾದ ಹೊಗೆ ಸುತ್ತುವರಿದಿದೆ. ವಿಮಾನ ನಿಲ್ದಾಣದಿಂದ 10 ಕಿಲೋಮೀಟರ್ ದೂರದಲ್ಲಿ ಈ ಅಪಘಾತ ನಡೆದಿದೆ. ಟೇಕಾಫ್ ಆದ ಐದೇ ನಿಮಿಷದಲ್ಲಿ ಈ ಘಟನೆ ನಡೆದಿದೆ.

ಈಗಾಗಲೇ 60 ಮಂದಿ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. 100 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈಗಾಗಲೇ ಸ್ಥಳಕ್ಕೆ ಅಂಬುಲೆನ್ಸ್‌ ಮತ್ತು ಅಗ್ನಿಶಾಮಕ ದಳ ಧಾವಿಸಿವೆ.

Related Articles

ಇತ್ತೀಚಿನ ಸುದ್ದಿಗಳು