Monday, June 17, 2024

ಸತ್ಯ | ನ್ಯಾಯ |ಧರ್ಮ

ಗುಜರಾತ್ ಮಾದರಿಗಿಂತಲೂ ತಮಿಳುನಾಡು ಮಾಡೆಲ್ ಬೆಸ್ಟ್ – ತಮಿಳುನಾಡು ಸಿಎಂ ಸ್ಟಾಲಿನ್

ಬಿಜೆಪಿ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಒಡೆಯಲು ಧರ್ಮವನ್ನು “ಅಸ್ತ್ರ” ವಾಗಿ ಬಳಸುತ್ತಿದೆ ಎಂದು ಆರೋಪಿಸುತ್ತಾ ತಮಿಳುನಾಡು ಮುಖ್ಯಮಂತ್ರಿ ಎಂ. ಸ್ಟಾಲಿನ್ ಸೋಮವಾರ ತಮ್ಮ “ದ್ರಾವಿಡ ಮಾದರಿ (Dravidian model)”ಯು “ಗುಜರಾತ್ ಮಾದರಿ ಅಭಿವೃದ್ಧಿ (Gujarat Model)” ಗಿಂತ ಹೆಚ್ಚು ಪರಿಣಾಮಕಾರಿ ಎಂದು ಹೇಳಿದ್ದಾರೆ.

ಸೋಮವಾರ ತಮ್ಮ ‘ಸ್ಪೀಕಿಂಗ್ ಫಾರ್ ಇಂಡಿಯಾ (Speaking for India) ಪಾಡ್‌ಕ್ಯಾಸ್ಟ್‌ನ ಮೊದಲ ಸಂಚಿಕೆಯಲ್ಲಿ ಮಾತನಾಡುತ್ತಾ ಸ್ಟಾಲಿನ್ “ಗುಜರಾತ್ ಮಾಡೆಲ್ ಆಫ್ ಡೆವಲಪ್‌ಮೆಂಟ್” ಅನ್ನು 2000 ಮತ್ತು 2011 ರ ದಶಕಗಳಲ್ಲಿ ಗುಜರಾತ್ ಕಂಡ ನಾಯಕತ್ವ ಇಲ್ಲದ ಬೆಳವಣಿಗೆಯನ್ನು ವಿವರಿಸಲು ಬಿಜೆಪಿ ಈ ಪದವನ್ನು ಹೆಚ್ಚಾಗಿ ಬಳಸುತ್ತಿದೆ ಎಂದು ಹೇಳಿದರು.

“… ತಮಿಳುನಾಡಿನಲ್ಲಿ ನಾವು ಮಾಡಿದ ದ್ರಾವಿಡ ಮಾದರಿಯ ಸಾಧನೆಗಳನ್ನು ಅಂಕಿಅಂಶಗಳ ಸಹಿತ ಪಟ್ಟಿ ಮಾಡಿದ ನಂತರ ಒಂದು ಕಾಲದಲ್ಲಿ ಪ್ರಸಿದ್ಧವಾಗಿದ್ದ ಗುಜರಾತ್ ಮಾಡೆಲ್ ನ ಸದ್ದಿಲ್ಲ,” ಸ್ಟಾಲಿನ್ (Stalin) ಹೇಳಿದರು.

ಸ್ಟಾಲಿನ್ ಅವರ ದ್ರಾವಿಡ ಮುನ್ನೇತ್ರ ಕಳಗಂ (Dravida Munnetra Kazhagam – DMK) ಪ್ರಕಾರ ದ್ರಾವಿಡ ಮಾದರಿ ಎಂದರೆ ಎಲ್ಲರನ್ನೂ ಒಳಗೊಳ್ಳುವುದು, ನೀತಿ ವಿನ್ಯಾಸ ಮತ್ತು ಅವುಗಳ ಜಾರಿಯನ್ನು ಸುಲಭವಾಗಿಸಲು ಯೋಜನೆ ಮತ್ತು ಪ್ರಜಾಸತ್ತಾತ್ಮಕ ಆಡಳಿತ.

ತಮ್ಮ ಪಾಡ್‌ಕ್ಯಾಸ್ಟ್ (Podcast) ಅನ್ನು “ದಕ್ಷಿಣ ಭಾರತದ ದನಿ” ಎಂದು ಕರೆದ ಸ್ಟಾಲಿನ್ “ಸಂಸತ್ತಿನ ಮೂರನೇ ಅತಿದೊಡ್ಡ ಪಕ್ಷದ ಮುಖ್ಯಸ್ಥನಾಗಿ ಮತ್ತು ನಿಮ್ಮಲ್ಲಿ ಒಬ್ಬನಿಗೆ ಭಾರತಕ್ಕಾಗಿ ಮಾತನಾಡುವುದು ಈ ಪಾಡ್‌ಕ್ಯಾಸ್ಟ್ ಗುರಿ ಇದೆ” ಎಂದು ಹೇಳಿದರು.

ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಪ್ರಚಾರ ಮಾಡುವ ಸುಳ್ಳು ಸುದ್ದಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ಪಾಡ್ ಕ್ಯಾಸ್ಟ್ ಸಹಾಯ ಮಾಡುಲಿದ್ದು ಹಿಂದಿ ಸೇರಿದಂತೆ ತೆಲುಗು, ಮಲಯಾಳಂ, ಕನ್ನಡ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಿಸಲಾಗುತ್ತದೆ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು