Home ರಾಜಕೀಯ ಮೋದಿ ಮಹಿಳಾ ವಿರೋಧಿ, ಎಐಎಡಿಎಂಕೆ ಈಗ ಅಮಿತ್ ಶಾ ಡಿಎಂಕೆ: ಸಿಎಂ ಸ್ಟಾಲಿನ್ ವಾಗ್ದಾಳಿ

ಮೋದಿ ಮಹಿಳಾ ವಿರೋಧಿ, ಎಐಎಡಿಎಂಕೆ ಈಗ ಅಮಿತ್ ಶಾ ಡಿಎಂಕೆ: ಸಿಎಂ ಸ್ಟಾಲಿನ್ ವಾಗ್ದಾಳಿ

0

ಕಡಲೂರು: ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯು ಮೆಟ್ರೋ ರೈಲಿನಂತಹ ಯೋಜನೆಗಳ ಆರ್ಥಿಕ ಲಾಭದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ರಾತ್ರಿ ಕಡಲೂರಿನಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿಯವರಿಗೆ ಮಹಿಳೆಯರ ಪ್ರಗತಿಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂಬುದು ಈ ಹೇಳಿಕೆಯಿಂದ ಸಾಬೀತಾಗಿದೆ ಎಂದು ಕಿಡಿಕಾರಿದರು.

ಡಿಎಂಕೆ ಸರ್ಕಾರ ಜಾರಿಗೆ ತಂದಿರುವ ‘ವಿಡಿಯಲ್ ಪಯಣಂ’ (ಉಚಿತ ಬಸ್ ಪ್ರಯಾಣ) ಯೋಜನೆಯಿಂದ ಮೆಟ್ರೋ ರೈಲು ಲಾಭಕ್ಕೆ ಧಕ್ಕೆಯಾಗುತ್ತದೆ ಎಂದು ಪ್ರಧಾನಿ ಮೋದಿಯವರು ಇತ್ತೀಚಿನ ಸಂದರ್ಶನವೊಂದರಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಇದನ್ನು ಉಲ್ಲೇಖಿಸಿದ ಸ್ಟಾಲಿನ್, “ಈ ಯೋಜನೆಯು ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಿರುವ ‘ಆರ್ಥಿಕ ಕ್ರಾಂತಿ’ಯಾಗಿದೆ. ಒಂದು ವೇಳೆ ತಮಿಳುನಾಡಿನಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಮೊದಲು ಈ ಯೋಜನೆಯನ್ನು ನಿಲ್ಲಿಸುತ್ತಾರೆ,” ಎಂದು ಮತದಾರರನ್ನು ಎಚ್ಚರಿಸಿದರು.

ಇದೇ ವೇಳೆ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಸ್ಟಾಲಿನ್, ಪಳನಿಸ್ವಾಮಿ ಅವರು ತಮಿಳುನಾಡಿನ ಹಕ್ಕುಗಳನ್ನು ಬಿಜೆಪಿಗೆ ಅಡವಿಟ್ಟಿದ್ದಾರೆ ಎಂದು ಆರೋಪಿಸಿದರು. ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ ಹೆಸರಿನಲ್ಲಿದ್ದ ಪಕ್ಷವನ್ನು ಪಳನಿಸ್ವಾಮಿ ಅವರು ಈಗ ‘ಅಮಿತ್ ಶಾ ಡಿಎಂಕೆ’ ಆಗಿ ಪರಿವರ್ತಿಸಿದ್ದಾರೆ ಎಂದು ಅವರು ಲೇವಡಿ ಮಾಡಿದರು. ತಮಿಳುನಾಡು ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಸಾಗಬೇಕಾದರೆ ಮತ್ತೆ ‘ದ್ರಾವಿಡ ಮಾಡೆಲ್ 2.0’ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂದು ಅವರು ಕರೆ ನೀಡಿದರು.

You cannot copy content of this page

Exit mobile version