Wednesday, July 17, 2024

ಸತ್ಯ | ನ್ಯಾಯ |ಧರ್ಮ

ವಿಡಿಯೋ | ಏರ್ ಇಂಡಿಯಾ ವಾಕಿನ್‌ ಸಂದರ್ಶನದಲ್ಲಿ ಕಾಲ್ತುಳಿತ: 600 ಪೋಸ್ಟ್‌ಗಳಿಗೆ 25 ಸಾವಿರ ಜನ ಹಾಜರಿ!

ಮುಂಬೈ: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೇಗಿದೆ ಎಂದು ತಿಳಿಯಬೇಕಾದರೆ ಈ ವಿಡಿಯೋ ನೋಡಿ. ಏರ್ ಇಂಡಿಯಾ ಕೈಗೊಂಡಿದ್ದ ನೇಮಕಾತಿ ಪ್ರಕ್ರಿಯೆಯೆಯೊಂದರಲ್ಲಿ ಉಂಟಾದ ಜನ ಜಂಗುಳಿಯಿಂದಾಗಿ ಸಂದರ್ಶನದ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿದೆ.

ಮುಂಬೈನ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಏರ್‌ಪೋರ್ಟ್ ಲೋಡರ್‌ ಹುದ್ದೆಗಳಿಗೆಂದು ಏರ್ ಇಂಡಿಯಾ ಕಂಪನಿ ವಾಕಿನ್ ಸಂದರ್ಶನ ಕರೆದಿತ್ತು. 600 ಹುದ್ದೆಗಳಿಗೆ ನಡೆದ ವಾಕ್‌-ಇನ್‌ ಸಂದರ್ಶನದಲ್ಲಿ ಸುಮಾರು 25,000 ಯುವಕರು ಭಾಗವಹಿಸಿದ್ದರು. ಇದರಿಂದ ವಿಮಾನ ನಿಲ್ದಾಣದಲ್ಲಿ ಪರಿಸ್ಥಿತಿ ಹತೋಟಿ ತಪ್ಪಿತು. ಏರ್ ಇಂಡಿಯಾ ಸಿಬ್ಬಂದಿ ಬಂದಿದ್ದ ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಬಯೋಡೇಟಾ ಫಾರಂ ನೀಡಲು ಜನ ಮುಗಿಬಿದ್ದರು. ಕೆಲಸದ ಆಸೆಯಲ್ಲಿ ಬಂದಿದ್ದ ಅಭ್ಯರ್ಥಿಗಳು ಗಂಟೆಗಟ್ಟಲೆ ಕಾದು ಕುಳಿತಿದ್ದರು. ಅವರು ನೀರು ಮತ್ತು ಆಹಾರವಿಲ್ಲದೆ ಬಳಲಿದ್ದರು. ಇದರಿಂದಾಗಿ ಕೆಲವರು ಅಸ್ವಸ್ಥರಾಗಿದ್ದರು.

ವಿಮಾನಗಳಲ್ಲಿ ಸಾಮಾಗ್ರಿಗಳನ್ನು ಲೋಡ್ ಮಾಡಲು ಮತ್ತು ಇಳಿಸಲು ಏರ್‌ಪೋರ್ಟ್ ಲೋಡರ್‌ಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಏರ್‌ಪೋರ್ಟ್ ಲೋಡರ್‌ಗಳು ಬ್ಯಾಗೇಜ್ ಬೆಲ್ಟ್‌ಗಳು ಮತ್ತು ರಾಂಪ್ ಟ್ರಾಕ್ಟರುಗಳನ್ನು ನಿರ್ವಹಿಸುತ್ತಾರೆ. ಪ್ರತಿ ವಿಮಾನದ ಲಗೇಜ್, ಸರಕು ಮತ್ತು ಆಹಾರ ಪೂರೈಕೆಯನ್ನು ನೋಡಿಕೊಳ್ಳಲು ಕನಿಷ್ಠ ಐದು ಲೋಡರ್‌ಗಳ ಅಗತ್ಯವಿರುತ್ತದೆ. ವಿಮಾನ ನಿಲ್ದಾಣದ ಲೋಡರ್‌ಗಳ ವೇತನವು ತಿಂಗಳಿಗೆ 20ರಿಂದ 25 ಸಾವಿರದವರೆಗೆ ಇರುತ್ತದೆ. ಅಧಿಕಾವಧಿಯೊಂದಿಗೆ, ಸಂಬಳ 30 ಸಾವಿರದವರೆಗೆ ತಲುಪಬಹುದು.

Related Articles

ಇತ್ತೀಚಿನ ಸುದ್ದಿಗಳು