Home ರಾಜಕೀಯ ಗುಜರಾತ್ ಫಲಿತಾಂಶದ ಬಗ್ಗೆ ರಾಜ್ಯ ಬಿಜೆಪಿ ಉತ್ಸಾಹ: 2023ಕ್ಕೆ ಸ್ಥಳೀಯ ಸಮಸ್ಯೆಗಳು ಮುಖ್ಯ ಎಂದ ಕಾಂಗ್ರೆಸ್

ಗುಜರಾತ್ ಫಲಿತಾಂಶದ ಬಗ್ಗೆ ರಾಜ್ಯ ಬಿಜೆಪಿ ಉತ್ಸಾಹ: 2023ಕ್ಕೆ ಸ್ಥಳೀಯ ಸಮಸ್ಯೆಗಳು ಮುಖ್ಯ ಎಂದ ಕಾಂಗ್ರೆಸ್

0

ಬೆಂಗಳೂರು: ಗುಜತಾರ್‌ನಲ್ಲಿ ಬಿಜೆಪಿ ಗೆದ್ದಿರುವುದರಿಂದ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರದ ಪಟ್ಟ ಏರುವ ಲಕ್ಷಣಗಳು ಕಂಡುಬರುತ್ತಿವೆ ಎಂದು ಅಭಿಪ್ರಾಯ ಪಟ್ಟಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯ ಕಾಂಗ್ರೆಸ್‌ ಪಕ್ಷ, ಒಂದು ರಾಜ್ಯದ ಚುನಾವಣೆಗೂ, ಇನ್ನೊಂದು ರಾಜ್ಯದ ಚುನಾವಣೆಗೂ ಯಾವುದೇ ಸಂಬಂಧವಿಲ್ಲ, ಹೀಗಾಗಿ ಚುನಾವಣೆಗಳಿಗೆ ಮುಖ್ಯವಾಗಿ ಬೇಕಾಕಿರುವುದು ಅಲ್ಲಿನ ಸ್ಥಳಿಯ ಸಮಸ್ಯೆಗಳು ಎಂದು ಹೇಳಿದೆ.

ಕರ್ನಾಟಕದ ಎರಡೂ ಪ್ರಮುಖ ಪಕ್ಷಗಳು ಗುರುವಾರದ ವಿಧಾನಸಭಾ ಚುನಾವಣಾ ಫಲಿತಾಂಶಗಳಲ್ಲಿ ಪ್ರೋತ್ಸಾಹವನ್ನು ಕಂಡಿವೆ. ಆಡಳಿತಾರೂಢ ಬಿಜೆಪಿ ಗುಜರಾತ್‌ನಲ್ಲಿ ತನ್ನ ಪ್ರಚಂಡ ಗೆಲುವಿನಿಂದ ಸ್ಫೂರ್ತಿ ಪಡೆದುಕೊಂಡಿದ್ದರೆ, ಕಾಂಗ್ರೆಸ್ ಪಕ್ಷವು ಹಿಮಾಚಲ ಪ್ರದೇಶದಲ್ಲಿ ಭರ್ಜರಿ ಗೆಲುವಿನಿಂದ ಸ್ಪೂರ್ತಿ ಪಡೆದುಕೊಂಡಿದೆ ಎನ್ನಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಕಾರ, ʼಗುಜರಾತ್ ಫಲಿತಾಂಶವು ಏಪ್ರಿಲ್ 2023 ರಲ್ಲಿ ಮತ ಚಲಾಯಿಸುವಾಗ ಕರ್ನಾಟಕದ ಚುನಾವಣಾ ಫಲಿತಾಂಶದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಇತರ ಪಕ್ಷಗಳು ಆಡಳಿತ ನಡೆಸುತ್ತಿರುವ ಸರ್ಕಾರಗಳ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದರೂ, ಜನರು ಬಿಜೆಪಿ ಸರ್ಕಾರಗಳನ್ನು ಬೆಂಬಲಿಸುವ ವಾತಾವರಣವಿದ. ಗುಜರಾತ್ ಫಲಿತಾಂಶವನ್ನು ನೋಡುವುದಾದರೆ, ಜನರು ಉತ್ತಮ ಆಡಳಿತಕ್ಕೆ ಪ್ರತಿಫಲ ನೀಡುತ್ತಾರೆ ಎಂದೆನಿಸುತ್ತಿದೆ ಎಂದು ಹೇಳಿದ್ದಾರೆ.

ʼಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಸಂಘಟನೆಯಿಂದಾಗಿ ಪಶ್ಚಿಮ ರಾಜ್ಯದಲ್ಲಿ ಸತತ ಏಳನೇ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಗುಜರಾತ್ ಫಲಿತಾಂಶವು ಮುಂದಿನ ಕರ್ನಾಟಕ  ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಘಟಕಕ್ಕೆ 140 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಭರವಸೆ ಮಾಡಿಸಿದೆ. ಹೀಗಾಗಿ ವಿರೋಧ ಪಕ್ಷಗಳು ಈಗಲಾದರೂ ರಾಜ್ಯದಲ್ಲಿ ಅಧಿಕಾರ ಪಡೆಯುವ ಬಗ್ಗೆ ಹಗಲುಗನಸು ಕಾಣುವುದನ್ನು ನಿಲ್ಲಿಸಬೇಕುʼ ಎಂದು ಹೇಳಿದ್ದಾರೆ.

ʼಗುಜರಾತ್ ಫಲಿತಾಂಶವು ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವು ಯಾವುದೇ ಪ್ರಚಾರವಿಲ್ಲದೆ ಸುಲಭವಾಗಿ ಗೆಲ್ಲುತ್ತದೆ ಎಂದು ಅಭಿಪ್ರಾಪಟ್ಟಿದ್ದಾರೆ.

ʼಕರ್ನಾಟಕವು ಅತ್ಯಂತ ಭ್ರಷ್ಟ ಸರ್ಕಾರವನ್ನು ಹೊಂದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದು,  ವಿಧಾನಸಭಾ ಚುನಾವಣೆಯ ಫಲಿತಾಂಶವು ಸ್ಥಳೀಯ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.

ಗುಜರಾತ್‌ ನಲ್ಲಿ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ಮತಗಳನ್ನು ಕಬಳಿಸಿದೆ ಎಂದು ಆರೋಪಿಸಿದ ಸಿದ್ದರಾಮಯ್ಯನವರು, ʼಬಿಜೆಪಿಯೂ, ಎಎಪಿಗೆ ಹಣಕಾಸು ನೆರವು ನೀಡುವ ಮತ್ತು ಅದರ ಗೆಲುವನ್ನು ಖಚಿತಪಡಿಸಿಕೊಳ್ಳಲು ಮತಗಳನ್ನು ವಿಭಜಿಸುವ ತಂತ್ರವನ್ನು ಬಳಸಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ  ಜೆಡಿಎಸ್ ಅನ್ನು ಬಳಸುವ ಮೂಲಕ ಅದೇ ತಂತ್ರವನ್ನು ಅನುಸರಿಸಬಹುದು. ಆದರೆ ಅದು ಇಲ್ಲಿ ಕೆಲಸ ಮಾಡುವುದಿಲ್ಲʼ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

You cannot copy content of this page

Exit mobile version