Friday, June 14, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಗೆ ಶಾಕ್.. ಕಾಂಗ್ರೆಸ್ ಪಾಳಯಕ್ಕೆ ಹಾರಿದ ಇಬ್ಬರು ಶಾಸಕರು..?

  • ಸಿಎಂ ಜೊತೆ ಬಿಜೆಪಿ ಶಾಸಕರ ರಹಸ್ಯ ಸಭೆ
  • ರೇಣುಕಾಚಾರ್ಯಗೆ ಗ್ರೀನ್ ಸಿಗ್ನಲ್

ಬೆಂಗಳೂರು: ಮರಳಿ ಮನೆಗೆ ಕಾರ್ಯಕ್ರಮಕ್ಕೆ ಬ್ರೇಕ್ ಬಿದ್ದಿದೆ ಎಂದು ಭಾವಿಸಿರುವಾಗಲೇ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತೆ ಭೇಟಿ ಮಾಡಿದ್ದಾರೆ.

ಮೂರೂವರೆ ವರ್ಷಗಳ ಕಾಲ ಬಿಜೆಪಿಯಲ್ಲೇ ಸಚಿವರಾಗಿ ಮುಂದುವರಿದಿದ್ದ ಇವರಿಬ್ಬರೂ ವಾರದ ಹಿಂದೆಯಷ್ಟೇ ತಮ್ಮ ಸ್ವಂತ ಗೂಡಾದ ಕಾಂಗ್ರೆಸ್‌ಗೆ ಹೋಗಲು ಯತ್ನಿಸಿದ್ದರು. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಲರ್ಟ್ ಆಗಿ ಇಬ್ಬರ ಜತೆಗೂ ಚರ್ಚೆ ನಡೆಸಿದರು.
ಈ ಮೂಲಕ ಬಿಜೆಪಿ ತೊರೆಯುವ ಇರಾದೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ವಿವಾದ ಇತ್ಯರ್ಥಗೊಂಡಿದೆ ಎಂದು ಬಿಜೆಪಿ ಮೂಲಗಳು ಭಾವಿಸಿರುವ ಹೊತ್ತಿನಲ್ಲಿಯೇ ಉಭಯ ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಿಎಂ ಭೇಟಿ ಬಳಿಕ ಎಸ್ ಟಿ ಸೋಮಶೇಖರ್ ಪಕ್ಷ ಸೇರಲು ಗ್ರೀನ್ ಸಿಗ್ನಲ್ ನೀಡಲಾಗಿದೆಯಂತೆ. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಲೋಕಸಭೆ ಚುನಾವಣೆವರೆಗೂ ಉಪಚುನಾವಣೆ ನಡೆಯುವ ಸಾಧ್ಯತೆ ಇಲ್ಲದಿರುವ ಕಾರಣ ಅಷ್ಟು ದಿನ ಹುದ್ದೆ ಇಲ್ಲದೆ ಮುಂದುವರಿಯದಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರೇಣುಕಾಚಾರ್ಯ ಅವರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಿಎಂ, ಡಿಸಿಎಂ ಜತೆ ಸರಣಿ ಸಭೆ ನಡೆಸಿರುವುದು ಕೂಡ ಚರ್ಚೆಗೆ ಗ್ರಾಸವಾಯಿತು.
ಸಿಎಂ ಭೇಟಿಗೂ ಮುನ್ನ ರಾಜಕೀಯ ಗುರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಇನ್ನು ಪಕ್ಷದಲ್ಲಿ ಮುಂದುವರಿಯಲಾರೆ ಎಂದು ಮನವರಿಕೆ ಮಾಡಿಸಿದಂತಿದೆ ಎನ್ನಲಾಗುತ್ತಿದೆ. ರೇಣುಕಾಚಾರ್ಯ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ಮುಂಬರುವ ಎಂಎಲ್ ಸಿ ಚುನಾವಣೆಯ ಗೆಲುವಿನ ಹೊಣೆಯನ್ನು ಪಕ್ಷದ ಅಭ್ಯರ್ಥಿಯೇ ಹೊತ್ತುಕೊಳ್ಳಲಿದ್ದು, ಬಳಿಕ ರಾಜಕೀಯ ಭವಿಷ್ಯಕ್ಕೆ ತಕ್ಕ ಮನ್ನಣೆ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು