Friday, June 14, 2024

ಸತ್ಯ | ನ್ಯಾಯ |ಧರ್ಮ

ಭಾರತದ ಸಂವಿಧಾನ ಬಗ್ಗೆ ರಾಜ್ಯ ಮಟ್ಟದ ಲೇಖನ ಸ್ಪರ್ಧೆ

ಬೆಂಗಳೂರು: ಭಾರತ ಸಂವಿಧಾನದ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದಲಿತ ಮತ್ತು ಮಹಿಳಾ ಚಳುವಳಿ ಹಾಗು ಬೇರು ಸಂಸ್ಥೆಯು ರಾಜ್ಯ ಮಟ್ಟದ ಭಾರತ ಸಂವಿಧಾನ ಕುರಿತ ಲೇಖನ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು, ಉತ್ತಮ ಲೇಖನಕ್ಕೆ ಬಹುಮಾನ ನೀಡಲಾಗುತ್ತಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು, 1. ಸಂವಿಧಾನ ಮತ್ತು ನನ್ನ ಬದುಕು, 2. ಸಂವಿಧಾನ ಮತ್ತು ಸಾಮಾಜಿಕ ನ್ಯಾಯ, 3. ಸಂವಿಧಾನ ಮತ್ತು ಭಾರತದ ಅಭಿವೃದ್ಧಿ, 4. ಸಂವಿಧಾನ ಮತ್ತು ತಳ ಸಮುದಾಯಗಳು ಈ  ನಾಲ್ಕು ವಿಷಯಗಳಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿ ಅದರ ಕುರಿತು ಲೇಖನ ಬರೆದು ಕಳುಹಿಸಿ ಬಹುಮಾನ ಗೆಲ್ಲಬಹುದಾಗಿದೆ.

ಸ್ಪರ್ಧೆಯ ನಿಯಮಗಳು

  • 18 ರಿಂದ 25 ವರ್ಷದೊಳಗಿನ ಯುವ ಜನರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
  • ಲೇಖನ ಸ್ವಂತ ಬರವಣಿಗೆಯಾಗಿರಬೇಕು.
  • ಲೇಖನ ಕನಿಷ್ಟ 800 ರಿಂದ 2000 ಸಾವಿರ ಪದಗಳು ಇರಬೇಕು.
  • ಲೇಖನವನ್ನು ನುಡಿ ಅಥವಾ ಯುನಿಕೋಡ್ ನಲ್ಲಿ ಟೈಪ್ ಮಾಡಿರಬೇಕು.

ತಮ್ಮ ಸ್ಪರ್ಧಾತ್ಮಕ ಲೇಖನಗಳನ್ನು ಆಯೋಜಕರಿಗೆ ದಿನಾಂಕ : 31/12/2022 ರ ಒಳಗೆ beruorg@gmail.com  ಅಥವಾ dmcchaluvali@gmail.com  ಇ- ಮೇಲ್ ವಿಳಾಸಕ್ಕೆ ಕಳಹಿಸಬೇಕಾಗಿದೆ.

ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರದ ಜೊತೆಗೆ ಮೊದಲನೇ ಬಹುಮಾನ-3000 ಎರಡನೇ ಬಹುಮಾನ-2000 ಮೂರನೇ ಬಹುಮಾನ-1000 ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಬೇರು ಸಂಸ್ಥೆ- 9008660371-beruorg@gmail.com ದಲಿತ ಮತ್ತು ಮಹಿಳಾ ಚಳುವಳಿ-9945966683- dmcchaluvali@gmail.com  ಇವರನ್ನು ಸಂಪರ್ಕಿಸಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು