Wednesday, November 19, 2025

ಸತ್ಯ | ನ್ಯಾಯ |ಧರ್ಮ

ಕಬ್ಬು ಬೆಳೆಗಾರರ ನಡುವೆ ತಾರತಮ್ಯ ನಿಲ್ಲಿಸಿ, ಏಕರೂಪದ ಬೆಲೆ ನೀಡಿ – ರೈತ ಮುಖಂಡ ಎನ್.ಎಲ್.ಭರತ್‌ರಾಜ್

ಹಾಸನ: ಕಬ್ಬು ಬೆಳೆಗಾರರ ನಡುವೆ ತಾರತಮ್ಯ ನಿಲ್ಲಿಸಿ, ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಳೆದು ಟನ್ ಕಬ್ಬಿಗೆ 3200 ರೂ. ಅಥವಾ ಕಟಾವು ಮತ್ತು ಸಾಗಾಣಿಕೆ ವೆಚ್ಚ ಸೇರಿಸಿ ಟನ್ ಕಬ್ಬಿಗೆ 4೦೦೦ ರೂ. ನಿಗದಿಪಡಿಸಬೇಕೆಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್‌ರಾಜ್ , ಕಬ್ಬಿನ ಬೆಲೆಯಲ್ಲಿ ರಾಜ್ಯಾದ್ಯಂತ ಏಕರೂಪ ಬೆಲೆ ನಿಗದಿಗೊಳಿಸಿ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಳೆದು ಪ್ರತಿ ಟನ್‌ಗೆ 3200 ರೂ ಅಥವಾ ಕಟಾವು ಮತ್ತು ಸಾಗಾಣಿಕ ವೆಚ್ಚ ಸೇರಿಸಿ ಪ್ರತಿ ಟನ್‌ಗೆ 4000 ರೂ.ರಿಕವರಿ ಮಾನದಂಡ ಕೈಬಿಟ್ಟು ನಾಡಿನಾದ್ಯಂತ ಏಕರೂಪ ಬೆಲೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರ ಹೋರಾಟ ತೀವ್ರವಾದಾಗ ರಾಜ್ಯ ಸರ್ಕಾರ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಳೆದು 3200 ರೂ ಹಾಗೂ 3300 ರೂ ನಿಗದಿಪಡಿಸಿದೆ. ಆದರೆ ಅದೇ ಬೆಲೆಯನ್ನು ದಕ್ಷಿಣ ಕರ್ನಾಟಕ ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ನೀಡದೆ ಪ್ರಾದೇಶಿಕ ತಾರತಮ್ಯ ಮಾಡಿ ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿದರು.ಉಕ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಟನ್‌ಗೆ ಕನಿಷ್ಠ 1೦೦೦ ನಷ್ಟ್ಟ ಉಂಟಾಗುತ್ತದೆ. ಆದರೆ ಕಬ್ಬು ಬೆಳೆಯಲು ತಗಲುವ ವೆಚ್ಚ ಇಡೀ ರಾಜ್ಯದಲ್ಲಿ ಬಹುತೇಕ ಒಂದೇ ಆಗಿರುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಖಾಜಿ ನ್ಯಾಯ ಪಂಚಾಯಿತಿ ಮಾಡುವುದನ್ನು ಕೈಬಿಟ್ಟು ಎಸ್‌ಎಪಿಯನ್ನ ಟನ್ ಕಬ್ಬಿಗೆ 5೦೦ ರೂ. ನಿಗದಿಪಡಿಸಿ, ಸಕ್ಕರೆ ಕಂಪನಿಯ ಮಾಲೀಕರು ನಿಗದಿತ ಬೆಲೆ ನೀಡಲು ಕಾನೂನಿನ ವ್ಯಾಪ್ತಿಯೊಳಗೆ ತೀರ್ಮಾನಿಸಬೇಕೆಂದರು.

ನ್ಯಾಯಯುತ ಲಾಭದಾಯಕ ಬೆಲೆ ಎಫ್‌ಆರ್‌ಪಿ ನಿಗದಿಪಡಿಸುವಲ್ಲೂ ಕೇಂದ್ರ ಸರ್ಕಾರ ಸಹ ನಯವಂಚನೆ ಮಾಡಿದೆ 2009 ಕ್ಕಿಂತ ಮೊದಲು ಶೇ. 8.50 ಸಕ್ಕರೆ ಇಳುವರಿ,2000 ದಿಂದ 2018 ರವರೆಗೆ ಶೇ. 9.50 ಸಕ್ಕರೆ ಇಳುವರಿ, 2018 ರಿಂದ 22 ರವರೆಗೆ ಶೇ. 1೦. ಸಕ್ಕರೆ ಇಳುವರಿ, ೨೦೨೨ ರಿಂದ ಶೇ.1೦.25 ಸಕ್ಕರೆ ಇಳುವವರಿ ಆಧಾರದ ಮೇಲೆ ಎಫ್‌ಆರ್‌ಪಿ ನಿಗದಿಪಡಿಸುತ್ತಿದೆ. ಇದರಲ್ಲಿ ಮೋದಿ ಅವರ ಮೋಸ ಜನರಿಗೆ ಅರಿವಾಗಬೇಕು.ಒಂದು ಪರ್ಸೆಂಟ್ ಹೆಚ್ಚಾದರೆ 346 ರೂ. ಎಫ್‌ಆರ್‌ಪಿ ಜೊತೆಗೆ ನೀಡಬೇಕಾಗುತ್ತದೆ. ಆ ಕಾರಣದಿಂದಾಗಿ ಸಕ್ಕರೆ ಇಳುವರಿಯ ಪ್ರಮಾಣವನ್ನೇ ಕಡಿಮೆ ಮಾಡುವಂತಹ ಯತ್ನ ಸರ್ಕಾರಗಳು ಹಾಗೂ ಕಾರ್ಖಾನೆಗಳು ಸಹ ಮಾಡುತ್ತವೆ ಎಂದು ದೂರಿದರು.

ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ಬಹಳ ಅನ್ಯಾಯವಾಗುತ್ತಿದ್ದು, ಕಟಾವು ಮತ್ತು ಸಾಗಾಣಿಕೆ ವೆಚ್ಚ 900 ರಿಂದ 1300 ರವರೆಗೆ ಆಗುತ್ತಿದೆ. ಬೆಳಗಾವಿ ಕಬ್ಬಿನ ದರಕ್ಕೂ ನಮಗೂ 1,೦೦೦ ದಷ್ಟು ನಷ್ಟ ಆಗುತ್ತಿದೆ. ಹಾಗಾಗಿ ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆ ಮಾಲೀಕರೇ ಕೊಟ್ಟು ನಮಗೂ 3,3೦೦ ರೂ.ಗಳ ಬೆಲೆ ನೀಡಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಟಿಯಲ್ಲಿ ಹೆಚ್.ಆರ್.ನವೀನ್‌ಕುಮಾರ್,ಹೆಚ್.ಎಸ್.ಮಂಜುನಾಥ್, ವಾಸುದೇವ ಕಲ್ಕೆರೆ, ತೇಜಸ್‌ಗೌಡ ಇದ್ದರು. ಕಬ್ಬು ಸರಬರಾಜು ಮಾಡಿದ ರೈತರಿಗೆ 14 ದಿನದೊಳಗೆ ಹಣ ಪಾವತಿ ಮಾಡಬೇಕು. ಪ್ರತಿಯೊಬ್ಬ ರೈತ ತನ್ನ ಕಬ್ಬಿನ ಸಕ್ಕರೆ ಇಳುವರಿ ಪರೀಕ್ಷಿಸಲು ಮುಕ್ತ ಲ್ಯಾಬ್ ವ್ಯವಸ್ಥೆಯನ್ನು ಸರ್ಕಾರವೇ ಕಲ್ಪಿಸಬೇಕು. ಸಕ್ಕರೆ ಇಳುವರಿ ಘೋಷಣೆ ಮಾಡಲು ಜಿಲ್ಲಾಡಳಿತ ಸಕ್ಕರೆ ತಜ್ಞರು, ಕೃಷಿ ಇಲಾಖೆ ಕಬ್ಬು ಬೆಳೆಗಾರ ಸಂಘದ ಮುಖಂಡರ ಸಮಿತಿ ರಚಿಸಿ ಕನಿಷ್ಠ 15 ದಿನಕ್ಕೊಮ್ಮೆ ಪರೀಕ್ಷೆ ನಡೆಸಿ ಸರಾಸರಿ ಘೋಷಣೆ ಮಾಡಬೇಕೆಂದು ಭರತ್‌ರಾಜ್ ಒತ್ತಾಯಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page