Monday, December 8, 2025

ಸತ್ಯ | ನ್ಯಾಯ |ಧರ್ಮ

ಬೀದಿನಾಯಿಗಳಿಗೆ ಬೆಂಗಳೂರಿನಲ್ಲಿ ಇನ್ಮುಂದೆ ಪ್ರತಿನಿತ್ಯ ಮಾಂಸದೂಟ ಭಾಗ್ಯ

ಬೆಂಗಳೂರು : ಪಂಚ ಗ್ಯಾರಂಟಿಗಳನ್ನು ಕೊಟ್ಟ ಕಾಂಗ್ರೆಸ್‌‍ ಸರ್ಕಾರವು (Congress Govt) ಇದೀಗ ಬೀದಿ ನಾಯಿಗಳಿಗೆ (Street Dogs) ಭರ್ಜರಿ ಬಾಡೂಟ (Food) ಹಾಕಿಸುವ ಮೂಲಕ ಮತ್ತೊಂದು ಭಾಗ್ಯ ನೀಡಲು ಮುಂದಾಗಿದೆ. ಈ ಹಿಂದೆ ಜಿಬಿಎ ಅಧಿಕಾರಿಗಳು ನಾಯಿಗಳಿಗೆ ಬಿರಿಯಾನಿ ಊಟ ನೀಡೋದಕ್ಕೆ ಮುಂದಾಗಿದ್ದು, ಈ ಬಾರಿ ಬೀದಿನಾಯಿಗಳಿಗೆ ಪ್ರತಿನಿತ್ಯ ಎರಡು ಬಾರಿ ಚಿಕನ್‌ ಊಟ ಕರುಣಿಸಲು ನಿರ್ಧಾರ ಮಾಡಿದ್ದಾರೆ. ಬೀದಿ ನಾಯಿಗಳಿಗೆ ಬಿರಿಯಾನಿ ಭಾಗ್ಯ ನೀಡುವ ಈ ನಿರ್ಧಾರಕ್ಕೆ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಈಗ ಪ್ರತಿ ನಿತ್ಯ ಎರಡು ಬಾರಿ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಿದೆ.

ಕಳೆದ ವಾರ ಸುಪ್ರೀಂ ಕೋರ್ಟ್‌ ಕೂಡ ಬೀದಿ ನಾಯಿಗಳಿಗೆ ಶೆಲ್ಟರ್‌ ನಿರ್ಮಾಣ ಮಾಡಿ ನಾಯಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಿ ಎಂದು ಎಲ್ಲಾ ರಾಜ್ಯಗಳಿಗೂ ಸೂಚಿಸಿತ್ತು. ಸರ್ಕಾರಿ ಕಚೇರಿ.. ಶಿಕ್ಷಣ ಸಂಸ್ಥೆಗಳು, ಸ್ಟೇಡಿಯಂ ಸೇರಿದಂತೆ ಜನನಿಬಿಡ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಿ ಅಂತ ಅದೇಶ ನೀಡಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್‌ ಅದೇಶದ ಅನ್ವಯ ಬೀದಿ ನಾಯಿಗಳಿಗೆ ಶೆಲ್ಟರ್‌ ನಿರ್ಮಾಣ ಮಾಡಿ ನಿತ್ಯ ಎರಡು ಬಾರಿ ಚಿಕನ್‌ ಊಟ‍ ನೀಡೋದಕ್ಕೆ ಜಿಬಿಎ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಒಂದು ನಾಯಿಗೆ ಒಂದು ಬಾರಿಯ ಊಟಕ್ಕೆ 25 ರೂ ನಿಗದಿ ಮಾಡಲಾಗಿದೆ. ಹೀಗಾಗಿ ಬೀದಿ ನಾಯಿಗೆ ಪ್ರತಿನಿತ್ಯ 50 ರೂ. ಖರ್ಚು ಮಾಡಬೇಕಾಗಿದೆ. ಊಟದಲ್ಲಿ 150 ಗ್ರಾಂ ಅಕ್ಕಿ, 100 ಗ್ರಾಂ ಚಿಕನ್‌ ಸೇರಿರುತ್ತದೆ. ಈಗಾಗಲೇ ಸುಪ್ರೀಂ ಕೋರ್ಟ್‌ ಸೂಚನೆಯಂತೆ ಬೆಂಗಳೂರು ನಗರದಲ್ಲಿಯೇ 2,206 ಬೀದಿ ನಾಯಿಗಳನ್ನು ಗುರುತು ಮಾಡಲಾಗಿದ್ದು, ಈ ನಾಯಿಗಳ ನಿರ್ವಹಣೆಗೆ ಪ್ರತಿ ತಿಂಗಳು ಸುಮಾರು 67 ಲಕ್ಷ ರೂ.ಗಳನ್ನು ಖರ್ಚು ಮಾಡಬೇಕಿದೆ.

ಬೀದಿನಾಯಿಗಳಿಗೆ ಬಾಡೂಟದ ಬಿಬಿಎಂಪಿ ಕ್ರಮಕ್ಕೆ ಟೀಕಿಸಿದ್ದ ಬಿಜೆಪಿ:  ಕಳೆದ ಜೂನ್‌ ತಿಂಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತರು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳ ಪೈಕಿ 5 ಸಾವಿರ ಬೀದಿ ನಾಯಿಗಳಿಗೆ ಪ್ರತಿ ನಿತ್ಯ ಮಾಂಸಹಾರಿ ಊಟವನ್ನು ಒದಗಿಸುವ ಸಂಬಂಧ 2.8 ಕೋಟಿ ರೂ. ಮೊತ್ತದ ಟೆಂಡ‌ರ್ ಅನ್ನು ಆಹ್ವಾನಿಸಿದ್ದರು. ಈ ಸಂಬಂಧ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page