Saturday, July 12, 2025

ಸತ್ಯ | ನ್ಯಾಯ |ಧರ್ಮ

ಚೀನಾಕ್ಕೆ ನಮ್ಮ ನೆಲವನ್ನು ಬಿಟ್ಟುಕೊಟ್ಟ ಮೋದಿಯನ್ನುಇಡೀ ದೇಶವೇ ಒಂದಾಗಿ ವಿರೋಧಿಸಬೇಕಿದೆ: ಸುಬ್ರಮಣಿಯನ್‌ ಸ್ವಾಮಿ

ದೆಹಲಿ: ಬಿಜೆಪಿಯೊಳಗಿ ಇನ್‌ ಸೈಡ್‌ ಕ್ರಿಟಿಕ್‌ ಮತ್ತೆ ಮೋದಿ ವಿರುದ್ಧ ತಮ್ಮ ಟೀಕಾಸ್ತ್ರವನ್ನು ಬೀಸಿದ್ದಾರೆ. ಅವರು ಬಿಜೆಪಿ ಮೋದಿಯನ್ನು ಮೂರನೇ ಅವಧಿಗೆ ಪ್ರಧಾನಿಯನ್ನಾಗಿ ಘೋಷಿಸಿದಲ್ಲಿ ಮೋದಿಯನ್ನು ಭಾರತೀಯರೆಲ್ಲರೂ ಒಟ್ಟಾಗಿ ಮೋದಿಯನ್ನು ಸೋಲಿಸಬೇಕು ಎಂದು ಕರೆಕೊಟ್ಟಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ X ವೇದಿಕೆಯಲ್ಲಿ ಪೋಸ್ಟ್‌ ಮಾಡಿರುವ ಅವರು ಮೋದಿಯನ್ನು ಸೋಲಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂಬ ಅರ್ಥದಲ್ಲಿ ಬರೆದಿದ್ದಾರೆ.

ಅವರು ಪೋಸ್ಟ್‌ ಹೀಗಿದೆ: “ಬಿಜೆಪಿ ಮೂರನೇ ಅವಧಿಯ ಪ್ರಧಾನಿ ಅಭ್ಯರ್ಥಿಯಾಗಿ ಮೋದಿಯನ್ನು ಮುಂದಿಟ್ಟಲ್ಲಿ ದೇಶವೇ ಒಂದಾಗಿ ಮೋದಿಯನ್ನು ಬಹಿರಂಗವಾಗಿ ವಿರೋಧಿಸಬೇಕು. 4065 ಚದರ ಕಿಲೋಮೀಟರ್ ವಿಸ್ತೀರ್ಣದ ನಿರ್ವಿವಾದ ಭಾರತೀಯ ಭೂಪ್ರದೇಶವನ್ನು ನುಂಗಲು ಚೀನಾಕ್ಕೆ ಮುಕ್ತ ಪ್ರವೇಶವನ್ನು ನೀಡುವ ಮೂಲಕ ಅವರು ಭಾರತ ಮಾತೆಯನ್ನು ನಿರಾಸೆಗೊಳಿಸಿದ್ದಾರೆ ಮತ್ತು “ಕೋಯಿ ಆಯಾ ನಹೀಂ..” ಎಂದು ನಮಗೆ ಸುಳ್ಳು ಹೇಳಿದ್ದಾರೆ.”

ಇತ್ತೀಚೆಗೆ ಮೋದಿ ವಿರುದ್ಧ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿರುವ ಸುಬ್ರಮಣಿಯನ್‌ ಸ್ವಾಮಿ ವಿರುದ್ಧ ಅವರ ಪಕ್ಷವು ಯಾವುದೇ ಕ್ರಮವನ್ನು ಕೈಗೊಳ್ಳದೆ ಇರುವುದು ಸಹ ಅಚ್ಚರಿಯ ಸಂಗತಿಯಾಗಿದೆ. ಸ್ವಾಮಿ ಮೋದಿಯವರ ವಿರುದ್ಧ ಹಲವು ಗುರುತರ ಆರೋಪಗಳನ್ನು ಮಾಡುತ್ತಿದ್ದು ಅವು ಹೆಚ್ಚು ಚರ್ಚೆಯಾಗದೆ ಸೋಷಿಯಲ್‌ ಮೀಡಿಯಾ ವೇದಿಕೆಗಳಿಗೇ ಸೀಮಿತವಾಗುತ್ತಿರುವುದು ಕೂಡಾ ರಾಜಕೀಯ ಆಸಕ್ತರಲ್ಲಿ ಅಚ್ಚರಿ ಮೂಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page