Thursday, June 13, 2024

ಸತ್ಯ | ನ್ಯಾಯ |ಧರ್ಮ

ಸ್ವಂತ ಮಗುವನ್ನೇ ಕೊಂದ ಸುಚನಾ ಸೇಠ್, ಪ್ರಕರಣವೇನು? ಯಾರೀಕೆ?

ಬೆಂಗಳೂರು ಮೂಲದ ಎಐ ಸ್ಟಾರ್ಟ್‌ಅಪ್‌ನ ಸಿಇಒ ಸುಚನಾ ಸೇಠ್ ಅವರನ್ನು ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಮಗುವಿನ ದೇಹವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಕ್ಯಾಬ್‌ನಲ್ಲಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಆಕೆ ಸಿಕ್ಕಿಬಿದ್ದಿದ್ದು ಈಗ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ

ಹೋಟೆಲ್ ನಲ್ಲಿ ತನ್ನ ಸ್ವಂತ ಮಗುವನ್ನೇ ಕೊಂದು ಸೂಟ್ ಕೇಸ್ ನಲ್ಲಿ ಶವ ತುಂಬಿ ರವನಿಸುತ್ತಿದ್ದ ಸ್ಟಾರ್ಟ್ ಅಪ್ ಫೌಂಡರ್ ಕೂಡಾ ಆಗಿರುವ ಸುಚನಾ ಅವರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.

ಹೋಟೆಲ್ ರೂಂ ಖಾಲಿ ಮಾಡಿ ಬೆಂಗಳೂರಿಗೆ ಹೊರಡಲು ಸಿದ್ಧರಾಗಿದ್ದ ಸುಚನಾ ಟ್ಯಾಕ್ಸಿಯತ್ತ ಸೂಟ್ ಕೇಸ್ ಹಿಡಿದು ಸಾಗುತ್ತಿದ್ದಾಗ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ, ನಿಮ್ಮ ಜೊತೆ ಬಂದಿದ್ದ ಮಗು ಎಲ್ಲಿ ಎಂದು ವಿಚಾರಿಸಿದ್ದಾರೆ. ಆಗ ಸುಚನಾ ಮಗುವನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದೇನೆ ಎಂದು ಹೇಳಿ ಟ್ಯಾಕ್ಸಿ ಹತ್ತಿ ಬೆಂಗಳೂರಿಗೆ ಹೊರಟಿದ್ದಾರೆ.

ಆದರೆ ಆಕೆಯ ಉತ್ತರದ ಬಗ್ಗೆ ಅಷ್ಟು ಸ್ಪಷ್ಟತೆ ಹೊಂದದ ಹೋಟೆಲ್ ಸಿಬ್ಬಂದಿಗೆ ಆಕೆಯ ಬಗ್ಗೆ ಅನುಮಾನ ಹೆಚ್ಚಾಗಿದೆ. ತಕ್ಷಣ ಅವರು ತಂಗಿದ್ದ ಹೋಟೆಲ್ ರೂಮ್ ಗೆ ಸ್ವಚ್ಛತೆಗೆ ಸಿಬ್ಬಂದಿ ಕಳುಹಿಸಿದ್ದಾರೆ. ಈ ವೇಳೆ ರೂಮ್ ನಲ್ಲಿ ರಕ್ತದ ಕಲೆಗಳು ಬಿದ್ದಿರುವುದು ಪತ್ತೆಯಾಗಿದೆ.

ಹೋಟೆಲ್ ನವರು ಕೂಡಲೇ ಗೋವಾ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಆಕೆ ಹೊರಟ ಟ್ಯಾಕ್ಸಿ ನಂಬರ್ ಸೂಚನೆ ತಗೆದುಕೊಂಡು ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಟ್ಯಾಕ್ಸಿ ಚಾಲಕನನ್ನು ಪತ್ತೆ ಮಾಡಿ ಕರೆ ಮಾಡಿ ತೆರಳುತ್ತಿದ್ದ ಮಾರ್ಗದಲ್ಲಿಯೇ ಅಡ್ಡಗಟ್ಟಿದ್ದಾರೆ.

ಆ ನಂತರ ಪೊಲೀಸರ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಐನಮಂಗಲ ಠಾಣೆ ಬಳಿ ಚಾಲಕ ಕಾರು ನಿಲ್ಲಿಸುತ್ತಿದ್ದಂತೆ ಪೊಲೀಸರು ಸುಚನಾಳನ್ನು ವಶಕ್ಕೆ ಪಡೆದ ಪಡೆದಿದ್ದಾರೆ. ಕಾರಿನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್ ತೆಗೆದು ಪರಿಶೀಲಿಸಿದಾಗ ಅದರಲ್ಲಿ ಮಗುವಿನ ಶವ ಪತ್ತೆಯಾಗಿದ್ದು, ಅರೆಕ್ಷಣ ಪೊಲೀಸರೇ ಶಾಕ್ ಆಗಿದ್ದಾರೆ.

ಇನ್ನು ಆಕೆ ತನ್ನ ಸ್ವಂತ ಮಗುವನ್ನು ಕೊಂದ ಬಗ್ಗೆ ಇನ್ನೂ ನಿಖರ ಕಾರಣಗಳು ಅಧಿಕೃತವಾಗಿ ತಿಳಿದು ಬಂದಿಲ್ಲ. ಮಾಹಿತಿಯ ಪ್ರಕಾರ ಆಕೆಯ ಗಂಡನ ಜೊತೆಗಿನ ಸಂಬಂಧದಲ್ಲಿನ ಅಸಮಾಧಾನ ಆಕೆಯನ್ನು ಇಷ್ಟು ಕ್ರೌರ್ಯಕ್ಕೆ ಇಳಿಯಲು ಪ್ರೇರೇಪಿಸಿದೆ ಎಂಬುದು ತಿಳಿದು ಬಂದಿದೆ. ತನಿಖೆಯ ನಂತರವಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಿದೆ.

ಸುಚನಾ ಸೇಠ್ ಬಗ್ಗೆ ಮಾಹಿತಿ
ಸುಚನಾ ಸೇಠ್ ಅವರು ದಿ ಮೈಂಡ್‌ಫುಲ್ AI ಲ್ಯಾಬ್‌ನ ಸಂಸ್ಥಾಪಕರು. ಅವರು ನಾಲ್ಕು ವರ್ಷಗಳಿಂದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ, ಇದು ಕೃತಕ ಬುದ್ಧಿಮತ್ತೆಯಲ್ಲಿ AI ಬಗೆಗಿನ ಸಂಶೋಧನೆಯನ್ನು ಕೇಂದ್ರೀಕರಿಸುತ್ತದೆ.

ಸುಚನಾ ಸೇಠ್ ಅವರು ಎರಡು ವರ್ಷಗಳ ಕಾಲ ಬರ್ಕ್‌ಮನ್ ಕ್ಲೈನ್ ​​ಸೆಂಟರ್‌ನಲ್ಲಿ ತಮ್ಮ ಸಂಸ್ಥೆಯನ್ನು ಅಂಗಸಂಸ್ಥೆಯಾಗಿ ಕೆಲಸ ಮಾಡಿದರು. ಮ್ಯಾಸಚೂಸೆಟ್ಸ್‌ನ ಬೋಸ್ಟನ್‌ನಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಜವಾಬ್ದಾರಿಯುತ ಯಂತ್ರ ಕಲಿಕೆಯ ಬಗ್ಗೆ ಅಲ್ಲಿನ ಆಡಳಿತಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ.

ತಮ್ಮ ಸ್ವಂತ ಸಂಸ್ಥೆ ದಿ ಮೈಂಡ್‌ಫುಲ್ AI ಲ್ಯಾಬ್ ಅನ್ನು ಸ್ಥಾಪಿಸುವ ಮೊದಲು ಸುಚನಾ ಸೇಠ್, ಬೆಂಗಳೂರಿನ ಬೂಮರಾಂಗ್ ಕಾಮರ್ಸ್‌ನಲ್ಲಿ ಹಿರಿಯ ಡೇಟಾ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ. ಅವರು ಆಪ್ಟಿಮೈಸೇಶನ್ ಮತ್ತು ಬುದ್ಧಿವಂತಿಕೆಗಾಗಿ ಡೇಟಾ-ಚಾಲಿತ ಉತ್ಪನ್ನಗಳನ್ನು ವಿನ್ಯಾಸಗೊಳಿಸಿದ್ದಾರೆ. ಸುಚನಾ ಸೇಠ್ ಕಂಪನಿಯ ಡೇಟಾ ಸೈನ್ಸಸ್ ಗ್ರೂಪ್‌ನಲ್ಲಿ ಹಿರಿಯ ವಿಶ್ಲೇಷಕ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು.

ಸುಚನಾ ಸೇಠ್ ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಖಗೋಳ ಭೌತಶಾಸ್ತ್ರದೊಂದಿಗೆ ಪ್ಲಾಸ್ಮಾ ಭೌತಶಾಸ್ತ್ರದಲ್ಲಿ ಪರಿಣತಿ ಹೊಂದಿರುವ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ, ಅಲ್ಲಿ ಅವರು 2008 ರಲ್ಲಿ ಪ್ರಥಮ ದರ್ಜೆ ಗೌರವಗಳನ್ನು ಗಳಿಸಿದರು.

Related Articles

ಇತ್ತೀಚಿನ ಸುದ್ದಿಗಳು