Saturday, September 20, 2025

ಸತ್ಯ | ನ್ಯಾಯ |ಧರ್ಮ

ಪ್ರದೀಪ್‌ ಈಶ್ವರ್‌ಗೆ ಧೈರ್ಯ ಇದ್ರೆ ಇಂಡಿಪೆಂಡೆಂಟ್‌ ಆಗಿ ನಿಂತು ಗೆದ್ದು ತೋರಿಸ್ಲಿ: ಸುಧಾಕರ್‌ ಸವಾಲು

ಚಿಕ್ಕಬಳ್ಳಾಪುರ: ಮೊದಲ ಸಲದ ಸ್ಪರ್ಧೆಯಲ್ಲೇ ರಾಜ್ಯದ ಪ್ರಭಾವಿ ಸಚಿವರನ್ನು ಸೋಲಿಸಿ ಎಲ್ಲರ ಹುಬ್ಬೇರಿಸಿದ್ದ ಶಾಸಕ ಪ್ರದೀಪ್‌ ಈಶ್ವರ್‌ ಅವರಿಗೆ ಅವರೆದುರು ಸೋತಿದ್ದ ಬಿಜೆಪಿಯ ಸುಧಾಕರ್‌ “ಧೈರ್ಯ ಇದ್ದರೆ ಈಗಿರುವ ಎಮ್ಮೆಲ್ಲೇ ಸೀಟಿಗೆ ರಾಜೀನಾಮೆ ನೀಡಿ ನನ್ನೆದುರಿಗೆ ಸ್ವತಂತ್ರವಾಗಿ ನಿಂತು ಗೆದ್ದು ತೋರಿಸಲಿ” ಎಂದು ಸವಾಲೆಸೆದಿದ್ದಾರೆ.

ಇದಲ್ಲದೆ ಅವರು ಸ್ವತಂತ್ರವಾಗಿ ಚುನಾವಣೆ ನಿಂತರೆ ಅವರ ಮುಖಕ್ಕೆ ಐದು ಸಾವಿರ ವೋಟು ಕೂಡಾ ಬೀಳುವುದಿಲ್ಲ ಎಂದು ಹಂಗಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರದಲ್ಲಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ.

“ಕ್ಷೇತ್ರದಲ್ಲಿ ರೌಡಿ ರಾಜಕಾರಣ ಬೆಳೆಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರ ಶಾಂತಿಯುತವಾಗಿತ್ತು. ಕ್ಷೇತ್ರದ ಬಿಜೆಪಿ ಮುಖಂಡರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿ ದೌರ್ಜನ್ಯ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ಗೂಂಡಾಗಿರಿ ರಾಜಕಾರಣಕ್ಕೆ ಮುಂದಾಗಿದ್ದಾರೆ” ಎಂದು ಹಾಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ವಾಗ್ದಾಳಿ ನಡೆಸಿದರು.

ಧೈರ್ಯ ಇದ್ದರೆ ಪ್ರದೀಪ್ ಈಶ್ವರ್​​​ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ವತಂತ್ರವಾಗಿ ಸ್ಪರ್ಧಿಸಲಿ. ನಾನು ಕೂಡ ಬಿಜೆಪಿಯಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧೆಸುತ್ತೇನೆ. ನಿನಗೆ ಎಷ್ಟು ಮತಗಳು ಬರುತ್ತದೆ? ನನಗೆ ಎಷ್ಟು ಮತ ಬರುತ್ತದೆ ನೋಡೋಣ. ಇಬ್ಬರಲ್ಲಿ ಯಾರು ಗೆಲ್ಲುತ್ತಾರೋ ನೋಡೋಣ ಎಂದು ಸವಾಲು ಹಾಕಿದರು.
ನಾನು ಈ ಹಿಂದೆ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಬಿಜೆಪಿಗೆ ನೆಲೆಯೇ ಇಲ್ಲದಿದ್ದ ಕ್ಷೇತ್ರದಿಂದ ಗೆಲ್ಲಿಸಿದ್ದೆ. ಈಗ ಪ್ರದೀಪ್‌ ಈಶ್ವರ್‌ಗೆ ಧೈರ್ಯ ಇದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿ. ನಾನೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ನೋಡೋಣ ಆಗ ಯಾರು ಗೆಲ್ಲತ್ತಾರೆಂದು ಎಂದು ಹೇಳಿದರು.

ಇದೇ ವೇಳೆ ಮೆಡಿಕಲ್​ ಕಾಲೇಜುಗಳ ಬಗ್ಗೆ ತನಿಖೆಗೆ ಸರ್ಕಾರ ಚಿಂತನೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ನಾನು ಅವ್ಯವಹಾರ, ಹಗರಣ ಮಾಡಿದ್ರೆ ನನಗೆ ಕಠಿಣ ಶಿಕ್ಷೆ ವಿಧಿಸಿ. ನನ್ನ ಮೇಲಿನ ಸೇಡಿಗೆ ಮೆಡಿಕಲ್​​ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಬೇಡಿ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page