Saturday, January 24, 2026

ಸತ್ಯ | ನ್ಯಾಯ |ಧರ್ಮ

ಭಾರತ್‌ ಜೋಡೋ ಯಾತ್ರೆಯಲ್ಲಿ, ಆತ್ಮಹತ್ಯೆಗೆ ಯತ್ನಿಸಿದ ಯುವಕ

ರಾಜಸ್ಥಾನ : 4ನೇ ದಿನದ ಭಾರತ್‌ ಜೋಡೋ ಯಾತ್ರೆಯ ನಡುವೆಯೇ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ನಡೆಸಿದೆ.

ರಾಜಸ್ಥಾನದ ಕೋಟಾದಲ್ಲಿ ನಡೆಯುತ್ತಿರುವ ನಾಲ್ಕನೇ ದಿನದ ಭಾರತ್‌ ಜೋಡೋ ಯಾತ್ರೆಯಲ್ಲಿ ಕುಲದೀಪ್‌ ಶರ್ಮಾ ಎಂಬ ಯುವಕ ರಾಜಸ್ಥಾನದ ವಾಣಿಜ್ಯ ಕಾಲೇಜು ಬಳಿಯ ರಾಜೀವ್‌ ಗಾಂಧಿ ಪ್ರತಿಮೆಯ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ರಾಹುಲ್‌ ಗಾಂಧಿಯವರು ರಾಜೀವ್‌ ಗಾಂಧಿಯವರಿಗೆ ಮಾಲಾರ್ಪಣೆ ಮಾಡುವ ವೇಳೆ, ಯುವಕ ತನ್ನ ಮೈಮೇಲೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಯಾತ್ರೆಯಲ್ಲಿ ಗದ್ದಲ ಉಂಟಾಗಿದೆ. ಯುವಕನಿಗೆ ಹಚ್ಚಿಕೊಂಡಿದ್ದ ಬೆಂಕಿಯನ್ನು ಅಕ್ಕಪಕ್ಕದವನ್ನು ನಂದಿಸಿದ್ದು, ಆತನನ್ನು ಆಂಬ್ಯುಲೆನ್ಸ್‌ ಮುಖಾಂತರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕುಲದೀಪ್‌ ಶರ್ಮಾ ಆಂಬ್ಯುಲೆನ್ಸ್‌ನಲ್ಲಿ ಕುಳಿತಿದ್ದಾಗ ʼ ರಾಹುಲ್‌ ಗಾಂಧಿ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆತನೊಂದಿಗೆ ಪೊಲೀಸರು , ಸಿಐಡಿ ಗುಪ್ತಚರ ದಳದವರು ಕೂಡ ಆಸ್ಪತ್ರೆಗೆ ತೆರಳಿದ್ದು, ಯುವಕನನ್ನು ವಶಕ್ಕೆ ಪಡೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page