Friday, June 14, 2024

ಸತ್ಯ | ನ್ಯಾಯ |ಧರ್ಮ

ಇಸ್ರೇಲ್ ದಾಳಿ : ಜೋ ಬೈಡೆನ್ ನೇತೃತ್ವದ ಶೃಂಗಸಭೆ ರದ್ದು

ಇಸ್ರೇಲ್ ಕಾರ್ಯಾಚರಣೆಯಯಲ್ಲಿ ಗಾಜಾ ಆಸ್ಪತ್ರೆ ಮೇಲಿನ ಭೀಕರ ದಾಳಿ ಹಿನ್ನೆಲೆಯಲ್ಲಿ ಇಸ್ರೇಲ್‌ ರಕ್ಷಣೆಯನ್ನು ಬೆಂಬಲಿಸಲು ಅಮೆರಿಕ ನೇತೃತ್ವದ ರಾಜತಾಂತ್ರಿಕ ಪ್ರಯತ್ನಗಳು ಹಿಂದೇಟು ಹಾಕಿವೆ.

ದಾಳಿಯ ಹಿನ್ನೆಲೆಯಲ್ಲಿ ಇಂದು ಜೋರ್ಡಾನ್ ನ ಅಮ್ಮನ್ ನಲ್ಲಿ ಆಯೋಜಿಸಿದ್ದ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಭೇಟಿಯನ್ನು ಅಮೇರಿಕಾ ರದ್ದು ಮಾಡಿದೆ. ಇಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಮತ್ತು ಇತರ ಅರಬ್‌ ನಾಯಕರ ನಡುವೆ ತುರ್ತು ಭೇಟಿಯ ಶೃಂಗಸಭೆ ಕರೆಯಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಈ ಭೇಟಿ ರದ್ದಾಗಿದೆ.

ಜೋರ್ಡಾನ್‌ನ ವಿದೇಶಾಂಗ ಸಚಿವ ಅಬ್ದುಲ್ಲಾ ಅವರು, ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸ್ಸಿ ಮತ್ತು ಪ್ಯಾಲೆಸ್ಟೀನ್‌ ಪ್ರಾಧಿಕಾರದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಬೈಡೆನ್‌ ನಡೆಸಬೇಕಿದ್ದ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ‘ದುರಂತಕ್ಕೆ ಗಾಜಾದಲ್ಲಿನ ಭಯೋತ್ಪಾದಕರೇ ಹೊಣೆಗಾರರಾಗಿದ್ದಾರೆ’ ಎಂದು ಆರೋಪಿಸಿದ್ದಾರೆ. ಆದರೆ ಜಾಗತಿಕವಾಗಿ ಇದು ಇಸ್ರೇಲ್ ನದ್ದೇ ದಾಳಿ ಎಂದು ಹಲವು ನಾಯಕರು, ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು