Home ದೆಹಲಿ ನೀಟ್ ಪರೀಕ್ಷಾ ಸುಧಾರಣೆ, ನಿಲೇಕಣಿ ಸಮಿತಿ ವರದಿಗಾಗಿ ಕಾದು ಕುಳಿತ -‌ ಸುಪ್ರಿಂ ಕೋರ್ಟ್

ನೀಟ್ ಪರೀಕ್ಷಾ ಸುಧಾರಣೆ, ನಿಲೇಕಣಿ ಸಮಿತಿ ವರದಿಗಾಗಿ ಕಾದು ಕುಳಿತ -‌ ಸುಪ್ರಿಂ ಕೋರ್ಟ್

ನವದೆಹಲಿ : ನೀಟ್-ಯುಜಿ (NEET UG) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಗೊಂದಲದ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಆನ್‌ಲೈನ್ (Online exams) ಮಾದರಿಯಲ್ಲಿ ನಡೆಸುವ ಕುರಿತು ಸುಪ್ರೀಂ ಕೋರ್ಟ್ (Supreme court) ವಿಚಾರಣೆ ನಡೆಸಿದೆ. ಸಾಂಪ್ರದಾಯಿಕ ಲಿಖಿತ ಪರೀಕ್ಷೆಯಿಂದ ಆನ್‌ಲೈನ್ ವ್ಯವಸ್ಥೆಗೆ ಬದಲಾಗುವಾಗ ಸೈಬರ್ ಭದ್ರತೆ ಹಾಗೂ ದತ್ತಾಂಶ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಇದಕ್ಕಾಗಿ ನವೀನ ತಾಂತ್ರಿಕ ಪರಿಹಾರಗಳ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಹೀಗೆ ಪರೀಕ್ಷಾ ಪದ್ಧತಿಯನ್ನು ಸಮಗ್ರವಾಗಿ ಸುಧಾರಿಸಲು ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆ ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ. ಈ ಸಮಿತಿಯಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಎಸ್. ಸೋಮನಾಥ್ ಸೇರಿದಂತೆ ಪ್ರಮುಖ ಶಿಕ್ಷಣ ಮತ್ತು ಭದ್ರತಾ ತಜ್ಞರಿದ್ದಾರೆ. ನಂದನ್ ನಿಲೇಕಣಿ ಸಮಿತಿ ನೀಡುವ ಸಲಹೆ ಹಾಗೂ ವರದಿಯನ್ನು ಪರಿಶೀಲಿಸಿದ ನಂತರವೇ ಆನ್‌ಲೈನ್ ನೀಟ್ ಪರೀಕ್ಷೆಯ ಕುರಿತು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಕೋರ್ಟ್ ತಿಳಿಸಿದ್ದು, ವಿಚಾರಣೆಯನ್ನು ಆಗಸ್ಟ್ 3ಕ್ಕೆ ಮುಂದೂಡಿದೆ.

You cannot copy content of this page

Exit mobile version