Saturday, June 29, 2024

ಸತ್ಯ | ನ್ಯಾಯ |ಧರ್ಮ

24 ವಾರಗಳ ಗರ್ಭದ ಅಬಾರ್ಷನ್‌ ನಿರಾಕರಿಸಿದ ಸುಪ್ರೀಂ ಕೋರ್ಟ್:‌ ಸರ್ಕಾರದ ಮೇಲೆ ಮಗುವಿನ ಜವಾಬ್ದಾರಿ

ಬೆಂಗಳೂರು, ಅಕ್ಟೋಬರ್.‌16:  ಮಹಿಳೆಯೊಬ್ಬರು ಪೋಸ್ಟ್‌ ಪಾರ್ಟಮ್ ಸೈಕೋಸಿಸ್ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣಕ್ಕೆ 26 ವಾರಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅಬಾರ್ಷನ್‌ಗಾಗಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಮಗು ಹುಟ್ಟಿದ ನಂತರ ರಾಜ್ಯವು ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 26 ವಾರಗಳ ಗರ್ಭಿಣಿ ಮಹಿಳೆ  ಅಬಾರ್ಷನ್‌ಗಾಗಿ ಏಮ್ಸ್‌ಗೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.  

ಗರ್ಭಾವಸ್ಥೆಯ ಅವಧಿಯು 24 ವಾರಗಳನ್ನು ದಾಟಿದ ಕಾರಣ ನ್ಯಾಯಾಲಯವು ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ ಪೀಠವು, ಈ ಗರ್ಭಾವಸ್ಥೆಯು ಮಹಿಳೆಗೆ ತಕ್ಷಣದ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ, ಅಲ್ಲದೆ ಈ ಮನವಿ ಭ್ರೂಣದ ಅಸಹಜ ಬೆಳವಣಿಗೆಗೆ ಸಂಬಂಧಿಸಿಲ್ಲ ಎಂದು ಹೇಳಿದೆ.

ಮಗುವನ್ನು ಯಾರಿಗಾದರೂ ದತ್ತು ನೀಡಲು ಪೋಷಕರು ನಿರ್ಧರಿಸಬಹುದು ಮತ್ತು ತಾಯಿ ಏಮ್ಸ್‌ನಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಬೇಕು. ಈ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಬೇಕು  ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ..

ಲ್ಯಾಕ್ಟೇಷನಲ್ ಅಮೆನೋರಿಯಾ ಎಂಬ ಖಾಯಿಲೆಯ ಕಾರಣದಿಂದಾಗಿ ತನ್ನ ಮೂರನೇ ಗರ್ಭಾವಸ್ಥೆಯ ಬಗ್ಗೆ ತಿಳಿದಿರಲಿಲ್ಲ. ಈ ಅಸ್ವಸ್ಥತೆ ರೋಗಿಯ ಮುಟ್ಟನ್ನು ತಡೆಯುವುದು, ಪ್ರಸವಾನಂತರದ ಖಿನ್ನತೆಯನ್ನು ಉಂಟು ಮಾಡುತ್ತದೆ. ಹೀಗಾಗಿ ಮಹಿಳೆಯು ಈ ತಿಂಗಳ ಆರಂಭದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು.

ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (MTP) ಕಾಯಿದೆಯಡಿಯಲ್ಲಿ ವಿವಾಹಿತ ಮಹಿಳೆಯರಿಗೆ ಇರುವ ಅಬಾರ್ಷನ್‌ ಮಾಡಿಸಿಕೊಳ್ಳಲು ಇರುವ ಅವಧಿ ಗರಿಷ್ಠ ಮಿತಿ 24 ವಾರಗಳು. ಅತ್ಯಾಚಾರದಿಂದ ಬದುಕುಳಿದವರು ಸೇರಿದಂತೆ ವಿಶೇಷ ಅಗತ್ಯತೆಯುಳ್ಳವರು ಮತ್ತು ಅಪ್ರಾಪ್ತ ವಯಸ್ಕರು ಅವಕಾಶವಿದೆ.

ಆದಾಗ್ಯೂ, ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ವಾದ ಮಂಡಿಸಿ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿರುವಂತೆ 24 ವಾರಗಳ ಈ ಮಾರ್ಗಸೂಚಿ ಈಗ ‘ಬಳಕೆಯಲ್ಲಿಲ್ಲ’ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು