Home ಇನ್ನಷ್ಟು ಕೋರ್ಟು - ಕಾನೂನು ED: 10 ವರ್ಷಗಳಲ್ಲಿ ಪಿಎಂಎಲ್‌ಎ ಅಡಿ ದಾಖಲಿಸಿದ್ದು 5,297 ಕೇಸ್, ಸಾಬೀತಾಗಿದ್ದು 40 ಕೇಸ್‌ ಮಾತ್ರ!

ED: 10 ವರ್ಷಗಳಲ್ಲಿ ಪಿಎಂಎಲ್‌ಎ ಅಡಿ ದಾಖಲಿಸಿದ್ದು 5,297 ಕೇಸ್, ಸಾಬೀತಾಗಿದ್ದು 40 ಕೇಸ್‌ ಮಾತ್ರ!

0

ಕಳೆದ ಹತ್ತು ವರ್ಷಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯ (ಇಡಿ) ಸುಮಾರು 5,000 ಪ್ರಕರಣಗಳನ್ನು ದಾಖಲಿಸಿದ್ದರೂ ಸಹ ಕೇವಲ 40 ಪ್ರಕರಣಗಳಷ್ಟೇ ಸಾಬೀತಾಗಿದೆ ಸುಪ್ರೀಂ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.

ತನಿಖಾ ಪ್ರಕ್ರಿಯೆಯನ್ನು ಸುಧಾರಿಸುವುದಕ್ಕೆ ಒತ್ತು ನೀಡಿ ಎಂದು ಕೋರ್ಡ್‌ ಇಡಿಗೆ ಸೂಚಿಸಿದೆ. ಬುಧವಾರ ಛತ್ತೀಸ್‌ಗಢದ ಉದ್ಯಮಿಯೊಬ್ಬರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇಡಿ ಕಾರ್ಯಕ್ಷಮತೆಯ ಬಗ್ಗೆ ಪ್ರಮುಖ ಟೀಕೆಗಳನ್ನು ದಾಖಲಿಸಿದೆ.

ಕಳೆದ ಹತ್ತು ವರ್ಷಗಳಲ್ಲಿ ಇಡಿ ಪಿಎಂಎಲ್‌ಎ ಕಾಯ್ದೆಯಡಿ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ ಎಂದು ಕೇಂದ್ರವು ಸಂಸತ್ತಿನಲ್ಲಿ ಬಹಿರಂಗಪಡಿಸಿದೆ. ಆದರೆ, ಅವುಗಳಲ್ಲಿ 40 ಪ್ರಕರಣಗಳಲ್ಲಿ ಮಾತ್ರ ಆರೋಪ ಸಾಬೀತಾಗಿದೆ. ಇದು ಎಂತಹ ಪರಿಸ್ಥಿತಿ ಎನ್ನುವುದನ್ನು ನೀವೇ ಯೋಚಿಸಿ ನೋಡಿ ಎಂದು ಕೋರ್ಟ್‌ ಇಡಿಗೆ ಹೇಳಿದೆ.

ಈ ಅಂಕಿಅಂಶಗಳು ನಿಮ್ಮ ತನಿಖಾ ಪ್ರಕ್ರಿಯೆಯನ್ನು ಸುಧಾರಿಸುವ ಅಗತ್ಯವನ್ನು ಹೇಳುತ್ತವೆ. ಕೇಸು ದಾಖಲಿಸುವುದಷ್ಟೇ ಅಲ್ಲ. ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಸಾಕಷ್ಟು ವೈಜ್ಞಾನಿಕ ಪುರಾವೆಗಳನ್ನೂ ಸಂಗ್ರಹಿಸಬೇಕು. ಮತ್ತು, ಈ ಪ್ರಕರಣಕ್ಕೆ ಬಂದಾಗ, ಕೆಲವರನ್ನು ಸಾಕ್ಷಿಗಳಾಗಿ ತೋರಿಸಲಾಗಿದೆ, ಆದರೆ ಯಾವುದೇ ವೈಜ್ಞಾನಿಕ ಪುರಾವೆಗಳನ್ನು ನ್ಯಾಯಾಲಯಕ್ಕೆ ಪ್ರಸ್ತುತಪಡಿಸಲಾಗಿಲ್ಲ. ಹಾಗಾಗಿ ವೈಜ್ಞಾನಿಕ ಪುರಾವೆಗಳನ್ನು ನೀವು ಪ್ರಸ್ತುತಪಡಿಸಬೇಕೆಂದು ಕೋರ್ಟ್ ಬಯಸುತ್ತದೆ ಎಂದು ಪೀಠ ಹೇಳಿದೆ.

2014ರಿಂದ ಇಲ್ಲಿಯವರೆಗೆ, ಇಡಿ ಪಿಎಂಎಲ್‌ಎ ಕಾಯ್ದೆಯಡಿ 5,297 ಪ್ರಕರಣಗಳನ್ನು ದಾಖಲಿಸಿದೆ, ಈ ಪೈಕಿ 40 ಪ್ರಕರಣಗಳಲ್ಲಿ ಆರೋಪ ಸಾಬೀತಾಗಿದೆ ಮತ್ತು ಉಳಿದ ಮೂರು ಪ್ರಕರಣಗಳನ್ನು ಕೈಬಿಡಲಾಗಿದೆ ಎಂದು ಸಂಸತ್ತಿನಲ್ಲಿ ಸರ್ಕಾರ ಹೇಳಿದೆ. ವಿರೋಧ ಪಕ್ಷಗಳು ಕಳೆದ ಕೆಲವು ವರ್ಷಗಳಿಂದ ಇಡಿ ಪ್ರಕರಣಗಳನ್ನು ತೀವ್ರವಾಗಿ ಟೀಕಿಸುತ್ತಿವೆ.

ಇಡಿ ದಾಖಲಿಸಿರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ಸಾಬೀತಾಗಿರುವುದು ಕೆಲವೇ ಕೆಲವು ಪ್ರಕರಣಗಳು ಎನ್ನುವ ಅಭಿಪ್ರಾಯಗಳೂ ಇವೆ. ಕೇಂದ್ರ ಬಿಡುಗಡೆ ಮಾಡಿರುವ ಅಂಕಿಅಂಶಗಳು ಈ ಟೀಕೆಗಳಿಗೆ ಪುಷ್ಟಿ ನೀಡುತ್ತಿರುವುದು ಗಮನಾರ್ಹ.

You cannot copy content of this page

Exit mobile version