Tuesday, June 18, 2024

ಸತ್ಯ | ನ್ಯಾಯ |ಧರ್ಮ

ಪಾಕ್ ಮೇಲಿನ ಸರ್ಜಿಕಲ್ ಸ್ಟ್ರೈಕ್ ; ಸುಳ್ಳು ಸುದ್ದಿ ಎಂದ ರಕ್ಷಣಾ ಸಚಿವಾಲಯ

ಪಾಕಿಸ್ತಾನದ ಮೇಲೆ ಮತ್ತೊಂದು ಸರ್ಜಿಕಲ್‌ ಸ್ಟ್ರೈಕ್‌ ಆಗಿದೆ ಎಂಬ ವರದಿಯನ್ನು ರಕ್ಷಣಾ ಸಚಿವಾಲಯ ತಳ್ಳಿ ಹಾಕಿದೆ. ಗಡಿಯೊಳಗೆ ನುಸುಳುವ ಯತ್ನಿಸಿದ ಉಗ್ರರನ್ನು ಹತ್ಯೆ ಮಾಡಿದ್ದು ಬಿಟ್ಟರೆ ಯಾವ ಸರ್ಜಿಕಲ್ ಸ್ಟ್ರೈಕ್ ನ್ನೂ ಭಾರತೀಯ ಸೇನೆ ಮಾಡಿಲ್ಲ ಎಂಬುದನ್ನು ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

ಭಾರತದ ಗಡಿ ಪ್ರದೇಶ ಬಾಲಾಕೋಟ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ (LoC) ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಅವರು ಬಾಲಕೋಟ್ ವಲಯದ ಹಮೀರ್‌ಪುರ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ, ದಟ್ಟ ಮಂಜು, ದಟ್ಟ ಪೊದೆಗಳ ಅನುಕೂಲಗಳನ್ನು ಬಳಸಿಕೊಂಡು ಗಡಿಯೊಳಗೆ ಒಳನುಸುಳಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಭಯೋತ್ಪಾದಕರನ್ನು ಗುರುತಿಸಿ ಅವರನ್ನು ಕೊಲ್ಲಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತದ ಮಾಧ್ಯಮವೊಂದು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ, ಭಾರತಿಯ ಸೇನೆ ಶನಿವಾರ ರಾತ್ರಿ LoC ಗಡಿಯನ್ನು ದಾಟಿ, 2.5 ಕಿ.ಮೀ ಮುಂದಕ್ಕೆ ಪ್ರವೇಶಿಸಿ ಪಾಕಿಸ್ತಾನಿ ಭಯೋತ್ಪಾದಕರ 4 ಲಾಂಚಿಂಗ್ ಪ್ಯಾಡ್‌ಗಳನ್ನು ನಾಶಪಡಿಸಿದೆ ಎಂದು ವರದಿ ಮಾಡಿತ್ತು.

ಅಷ್ಟೆ ಅಲ್ಲದೆ ಈ ಸರ್ಜಿಕಲ್ ಸ್ಟ್ರೈಕ್‌ನಲ್ಲಿ 7-8 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ, ಕಾರ್ಯಾಚರಣೆ ಬಳಿಕ ಎಲ್ಲಾ ಸೈನಿಕರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿತ್ತು. ಸಧ್ಯ ಇದೇ ವರದಿಯನ್ನು ಆದರಿಸಿ ಸಾಮಾಜಿಕ ಜಾಲತಾಣಗಳ ಅನೇಕ ಕಡೆಗಳಲ್ಲಿ ಭಾರತದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶಂಸೆ, ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಇದು ಸತ್ಯಕ್ಕೆ ದೂರವಾದ ವರದಿ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು