Wednesday, February 11, 2026

ಸತ್ಯ | ನ್ಯಾಯ |ಧರ್ಮ

ರಾಜಸ್ಥಾನ ಸರ್ಕಾರದಿಂದ ಸೂರ್ಯ ನಮಸ್ಕಾರ ಕಡ್ಡಾಯ: ಅಲ್ಪಸಂಖ್ಯಾತ ಧರ್ಮಿಯರಿಂದ ವಿರೋಧ

ಜೈಪುರ: ರಾಜಸ್ಥಾನದಲ್ಲಿ ಎಲ್ಲ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿರುವ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಕೆಲವು ಮುಸ್ಲಿಂ ಸಂಘಟನೆಗಳು ವಿರೋಧಿಸಿದ್ದು, ಭಾರೀ ವಿವಾದ ಸೃಷ್ಟಿಯಾಗಿದೆ.


ಸೂರ್ಯ ನಮಸ್ಕಾರ ಮಾಡುವಂತೆ ಎಲ್ಲ ಶಾಲಾ ಮಕ್ಕಳಿಗೂ ಬಲವಂತಗೊಳಿಸಬಾರದು ಸರಕಾರದ ಈ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಜಮೀಯತ್ ಉಲೇಮಾ ಹಿಂದ್ ಸೇರಿದಂತೆ ಮುಸ್ಲಿಮ್ ಸಂಘಟನೆಗಳು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿವೆ. ಸೋಮವಾರ ಜೈಪುರದಲ್ಲಿ ಸಮಾವೇಶಗೊಂಡ ಜಮೀಯತ್ ಉಲೇಮಾ ಹಿಂದ್ ನ ರಾಜ್ಯ ಕಾರ್ಯಕಾರಣಿಯು ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಬಹಿಷ್ಕರಿಸುವಂತೆ ಮುಸ್ಲಿಮ್ ಸಮುದಾಯವನ್ನು ಆಗ್ರಹಿಸಿದೆ.


ರಾಜಸ್ಥಾನದ ಶಾಲೆಗಳಲ್ಲಿ ಫೆ.15ರಿಂದ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿರುವ ಭಜನ್ ಲಾಲ್ ಶರ್ಮಾ ನೇತೃತ್ವದ ಸರಕಾರವು, ಆದೇಶವನ್ನು ಪಾಲಿಸದಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.


ಸೂರ್ಯ ನಮಸ್ಕಾರವು ಮಂತ್ರಗಳ ಪಠಣದೊಂದಿಗೆ ಸೂರ್ಯನನ್ನು ಆರಾಧಿಸುವ ಹಲವಾರು ಯೋಗಭಂಗಿಗಳನ್ನು ಒಳಗೊಂಡಿದೆ. ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಸೂರ್ಯನನ್ನು ದೇವರು ಎಂದು ಒಪ್ಪಿಕೊಂಡಂತಾಗುತ್ತದೆ ಮತ್ತು ತಮ್ಮ ಧರ್ಮವು ಇದನ್ನು ಅನುಮತಿಸುವುದಿಲ್ಲ ಎಂದು ಮುಸ್ಲಿಮ್ ಸಂಘಟನೆಗಳು ವಾದ ಮಂಡಿಸಿವೆ.


ರಾಜ್ಯದಲ್ಲಿಯ ನೂತನ ಬಿಜೆಪಿ ಸರಕಾರವು ಫೆ.15, ಸೂರ್ಯ ಸಪ್ತಮಿಯಂದು ಆಯೋಜಿಸಿರುವ ಬೃಹತ್ ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮುಸ್ಲಿಮ್ ಸಂಸ್ಥೆಗಳು ತಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಸೂಚಿಸಿದ್ದು, ಇದು ಈಗ ವಿವಾದಕ್ಕೆ ಕಾರಣವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page