Wednesday, January 7, 2026

ಸತ್ಯ | ನ್ಯಾಯ |ಧರ್ಮ

ಹಾಸನದ ಮಸೀದಿ, ಮತ್ತು ದರ್ಗಾಗಳಿಗೆ 90 ಲಕ್ಷಗಳ ಅನುದಾನ ಒದಗಿಸಿ ಹಿನ್ನೆಲೆಯಲ್ಲಿ – ಸ್ವರೂಪ ಪ್ರಕಾಶ್ ರವರಿಗೆ ಸನ್ಮಾನ

ಹಾಸನ : ನಗರದ ಮಸೀದಿ, ಈದ್ಗಾ ಮತ್ತು ದರ್ಗಾಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿ ಅಭಿವೃದ್ಧಿಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಪೆನ್ಷನ್ ಮೊಹಲ್ಲ ಡಿಎಸ್ಎಂ ಹಾಲ್ನಲ್ಲಿ ಮುಸಲ್ಮಾನ್ ಬಾಂಧವರು ಶಾಸಕ ಸ್ವರೂಪ ಪ್ರಕಾಶ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ಕಳೆದ ಹಲವು ವರ್ಷಗಳ ಬೇಡಿಕೆಯಾಗಿದ್ದ ದರ್ಗಾ ಮತ್ತು ಈದ್ಗಾಗಳ ಅಭಿವೃದ್ಧಿಗೆ ಸರ್ಕಾರದ ಜೊತೆ ಚರ್ಚಿಸಿ ಸುಮಾರು 90 ಲಕ್ಷಗಳ ಅನುದಾನ ತಂದು ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಸೀದಿಗಳು, ದರ್ಗಾ, ಈದ್ಗಾ ಗಳ ಅಭಿವೃದ್ಧಿಗೆ ಹಣ ಒದಗಿಸಿದ ಹಿನ್ನೆಲೆಯಲ್ಲಿ ಶಾಸಕರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಾಸಕ ಸ್ವರೂಪ ಪ್ರಕಾಶ್ ಮಾತನಾಡಿ, ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವಾರು ಮಸೀದಿಗಳು . ಈದ್ಗಾ, ದರ್ಗಾಗಳು ಇವೆ ಮುಸಲ್ಮಾನರ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸರ್ಕಾರದ ಅನುದಾನದ ಜತೆಗೆ ಶಾಸಕರ ಅನುದಾನವನ್ನು ನೀಡಿ ಅವರ ಕ್ಷೇಮ ಅಭಿವೃದ್ಧಿಗೆ ಕೆಲಸ ಮಾಡಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅನುದಾನ ತಂದು ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಇನ್ನಷ್ಟು ಹೊಸ ಅಭಿವೃದ್ಧಿ ಕಾಮಗಾರಿಗಳಿಗೆ ತನ್ನ ಕೈಲಾದಷ್ಟು ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಮುಸಲ್ಮಾನ್ ಸಮುದಾಯವನ್ನು ಮೇಲೆತ್ತುವ ನಿಟ್ಟಿನಲ್ಲಿ ಶ್ರಮವಹಿಸುವುದಾಗಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page