ಸಂಸದೆ ಸ್ವಾತಿ ಮಲಿವಾಲ್ ತಮ್ಮ ಅಹಂಕಾರವನ್ನು ಬಿಡಬೇಕು ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸಲಹೆ ನೀಡಿದ್ದಾರೆ.
ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಯಾವುದೇ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಒಂದೇ ಒಂದು ಸ್ಥಾನ ಗೆಲ್ಲಲಾಗಲಿಲ್ಲ. ಕಿಂಗ್ ಮೇಕರ್ ಆಗಲು ಚುನಾವಣಾ ಕಣಕ್ಕೆ ಇಳಿದಿದ್ದ ಪಕ್ಷ ಹೀನಾಯ ಸೋಲು ಕಂಡಿದೆ. ಹಲವು ಸ್ಥಾನಗಳಲ್ಲಿ ಅಭ್ಯರ್ಥಿಗಳ ಠೇವಣಿ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಬಂಡಾಯ ಸಂಸದೆ ಸ್ವಾತಿ ಮಲಿವಾಲ್ ಸಾಮಾಜಿಕ ಜಾಲತಾಣದಲ್ಲಿ ಕೇಜ್ರಿವಾಲ್ ಅವರನ್ನು ಟೀಕಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ಏಕಾಂಗಿಯಾಗಿ ಪಕ್ಷವನ್ನು ಕಣಕ್ಕಿಳಿಸಿದ್ದರು ಎಂದು ಅವರು ಟೀಕಿಸಿದ್ದಾರೆ. ಆಮ್ ಆದ್ಮಿ ಪಕ್ಷ ಇಂಡಿಯಾ ಮೈತ್ರಿಕೂಟಕ್ಕೆ ದ್ರೋಹ ಬಗೆದು ಕಾಂಗ್ರೆಸ್‌ನ ಮತಗಳನ್ನು ಲೂಟಿ ಮಾಡಿದೆ ಎಂಬ ಆರೋಪವನ್ನೂ ಹೊರಿಸಿದ್ದಾರೆ. ಅದೆಲ್ಲದರ ಜೊತೆಗೆ ವಿನೇಶ್ ಫೋಗಟ್ ಅವರನ್ನು ಸೋಲಿಸಲು ಅಭ್ಯರ್ಥಿಯನ್ನೂ ಕಣಕ್ಕಿಳಿಸಲಾಗಿತ್ತು. ಎಎಪಿ ತನ್ನ ಸ್ವಂತ ರಾಜ್ಯದಲ್ಲಿ ಠೇವಣಿ ಉಳಿಸಲು ಸಾಧ್ಯವಾಗದ ಪರಿಸ್ಥಿತಿಯನ್ನು ಏಕೆ ತಲುಪಿದೆ ಎಂದು ಯೋಚಿಸಬೇಕಿದೆ ಅವರು ವಿಷಾದಿಸಿದರು. ಕೇಜ್ರಿವಾಲ್ ಅಹಂ ಬಿಟ್ಟು ಮುಖವಾಡವನ್ನು ಕಳಚಿಡಬೇಕು. ನಾಟಕಗಳನ್ನು ನಿಲ್ಲಿಸಿ ಜನರಿಗಾಗಿ ಕೆಲಸ ಮಾಡಬೇಕು ಎಂದು ಸ್ವಾತಿ ಟ್ವೀಟ್ ಮಾಡಿದ್ದಾರೆ.