Friday, June 14, 2024

ಸತ್ಯ | ನ್ಯಾಯ |ಧರ್ಮ

ಗಂಧದಗುಡಿ ಚಿತ್ರತಂಡದಿಂದ ಕನ್ನಡಿಗರಿಗೆ ಸಿಹಿ ಸುದ್ದಿ!: ನಾಳೆಯಿಂದ ಗಂಧದಗುಡಿ ರಿಯಾಯಿತಿ ಪ್ರದರ್ಶನ

ಬೆಂಗಳೂರು: ಕರ್ನಾಟಕ ರತ್ನ ಡಾ ಪುನೀತ್‌ ರಾಜಕುಮಾರ್‌ ಅಭಿನಯನದ ʼಗಂಧದಗುಡಿ ಸಿನಿಮಾವನ್ನು ನಾಳೆಯಿಂದ ಗುರುವಾರದ ವರೆಗೆ ರಿಯಾಯಿತಿ ದರದಲ್ಲಿ ಟಾಕೀಸುಗಳಲ್ಲಿ ಕನ್ನಡಿಗರು ನೋಡಬಹುದಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ʼನಾನು ಹಾಗೂ ಚಿತ್ರತಂಡ ಚರ್ಚಿಸಿ ತರಕರು ಹಾಗೂ ಪ್ರದರ್ಶಕರ ಸಹಕಾರದೊಂದಿಗೆ, ʼಗಂಧದಗುಡಿʼ ಸಿನಿಮಾವನ್ನು ದಿನಾಂಕ 7-11-2022 ರಿಂದ 10-11-2022ರ ವರೆಗೆ ರಿಯಾಯಿತಿ ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆʼ ಎಂದು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ದಿನದ ಸಿಂಗಲ್‌ ಸ್ಕ್ರೀನ್‌ ಥೀಯೇಟರ್‌ಗಳಲ್ಲಿ ರೂ. 56 ದರದಲ್ಲಿ ಹಾಗೂ ಮಲ್ಟಿಪ್ಲೆಕ್ಸ್‌ ಗಳಲ್ಲಿ 112 ರೂ. ದರದಲ್ಲಿ ರಾಜ್ಯದಾದ್ಯಂತ ಗಂಧದಗುಡಿ ಸಿನಿಮಾ ಪ್ರದರ್ಶನಗೊಳ್ಳಲಿದೆ.

ʼಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿಯ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಪುನೀತ್‌ ಅವರ ಹಂಬಲ ಈ ಸಿನಿಮಾ ರೂಪಗೊಳ್ಳಲು ಕಾರಣವಾಗಿದ್ದು, ʼಗಂಧದಗುಡಿʼ ಸಿನಿಮಾವನ್ನು ಎಲ್ಲಾ ವಯಸ್ಸಿನವರು ಅದರಲ್ಲೂ ಮಕ್ಕಳು ನೋಡಬೇಕೆಂಬುವುದು ಪುನೀತ್‌ ರಾಜಕುಮಾರ್‌ ಅವರ ಆಸೆಯಾಗಿತ್ತುʼ ಎಂದು ಆಶ್ವಿನಿ ಪುನೀತ್‌ ರಾಜಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು