ಏಷ್ಯಾ ಕಪ್ ಸೋಲಿನ ಎಫೆಕ್ಟ್ ಈಗ ಕ್ರಿಕೆಟ್ ತಂಡದ ಆಯ್ಕೆದಾರರಿಗೆ ಗೊತ್ತಾದಂತಿದೆ. ಏಷ್ಯಾ ಕಪ್ ನಲ್ಲಿ ಹಿರಿಯ ಆಟಗಾರರನ್ನು ಕೈ ಬಿಟ್ಟು ಅನಗತ್ಯ ಪ್ರಯೋಗ ಮಾಡಿ ಸೋಲಿನ ರುಚಿ ನೋಡಿದ ಮೇಲೆ ಮತ್ತೆ ಈಗ ಎಲ್ಲ ಹಿರಿಯ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ವಾಪಸ್ ಕರೆಸಲಾಗಿದೆ.
ಆದಾಗ್ಯೂ, ಏಷ್ಯಾಕಪ್‌ನಲ್ಲಿ ಗಾಯಗೊಂಡಿದ್ದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ತಂಡವು ಕಳೆದುಕೊಂಡಿದೆ. ಆದರೆ ವೇಗದ ಬೋಲರ್ ಬುಮ್ರಾ ಜೊತೆಗೆ, ಇನ್ನೊಬ್ಬ ಪ್ರಮುಖ ಬೌಲರ್ ಹರ್ಷಲ್ ಪಟೇಲ್ ಕೂಡ ತಂಡಕ್ಕೆ ಮರಳಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆಗೆ ಅರ್ಷದೀಪ್ ಸಿಂಗ್ ಮತ್ತು ಭುವನೇಶ್ವರ್ ಕುಮಾರ್ ತಂಡದಲ್ಲಿರುವ ಇತರ ಇಬ್ಬರು ವೇಗಿಗಳು. ಇನ್ನು ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್ ಮತ್ತು ಅಕ್ಷರ್ ಪಟೇಲ್ ಸ್ಪೆಷಲಿಸ್ಟ್ ಸ್ಪಿನ್ನರ್‌ಗಳಾಗಿದ್ದಾರೆ.
ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಸೇರಿದಂತೆ ಬ್ಯಾಟಿಂಗ್ ಲೈನ್ ಅಪ್ ನಿರೀಕ್ಷಿತ ಲೆಕ್ಕದಲ್ಲೇ ಇದೆ.
ವೇಗಿ ಮೊಹಮ್ಮದ್ ಶಮಿ, ಸಹ ವೇಗಿ ದೀಪಕ್ ಚಹಾರ್, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಮತ್ತು ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಸ್ಟ್ಯಾಂಡ್‌ಬೈ ಆಟಗಾರರು ಎಂದು ಹೆಸರಿಸಲಾಗಿದೆ.
T20 ವಿಶ್ವಕಪ್ ತಂಡ: ರೋಹಿತ್ ಶರ್ಮಾ (c), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್
ಇನ್ನು ವಿಶ್ವಕಪ್ ಟೂರ್ನಮೆಂಟ್‌ಗೆ ಮುಂಚಿತವಾಗಿ, ಭಾರತವು ಮೂರು ಪಂದ್ಯಗಳ T20I ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ ಮತ್ತು ನಂತರ ದಕ್ಷಿಣ ಆಫ್ರಿಕಾ ವಿರುದ್ಧ T20I ಮತ್ತು ODI ಸರಣಿಯಲ್ಲಿ ಸೆಣೆಸಲಿದೆ.
ಭಾರತವು ಎರಡೂ T20I ಸರಣಿಗಳಿಗೆ ತಮ್ಮ ತಂಡಗಳನ್ನು ಹೆಸರಿಸಿದೆ, ಈ ಸರಣಿಯು ಭಾರತ ತಂಡಕ್ಕೆ ಡ್ರೆಸ್ ರಿಹರ್ಸಲ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದರೆ ತಪ್ಪಿಲ್ಲ.
ಈ ತಂಡದಲ್ಲಿ ಅರ್ಷದೀಪ್‌ಗೆ ವಿಶ್ರಾಂತಿ ನೀಡಿ ಭಾರತವು ಶಮಿ ಮತ್ತು ಚಹಾರ್ ಅವರನ್ನು ಎರಡೂ ಸರಣಿಗಳಿಗೆ ಆಯ್ಕೆ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯಕ್ಕೆ ತಂಡವನ್ನು ಇನ್ನೂ ಪ್ರಕಟಿಸಿಲ್ಲ.
ಆಸ್ಟ್ರೇಲಿಯಾ T20Is ತಂಡ: ರೋಹಿತ್ ಶರ್ಮಾ (c), KL ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.
ದಕ್ಷಿಣ ಆಫ್ರಿಕಾ T20Is: ರೋಹಿತ್ ಶರ್ಮಾ (c), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್ (WK), ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.