Monday, January 12, 2026

ಸತ್ಯ | ನ್ಯಾಯ |ಧರ್ಮ

ಟಿ -20 ವಿಶ್ವಕಪ್: ಸಾಂಪ್ರದಾಯಿಕ ಎದುರಾಳಿ ತಂಡಗಳ ಪಂದ್ಯಕ್ಕೆ ಮಳೆರಾಯನ  ಆತಂಕ

ಹೊಸದಿಲ್ಲಿ : ICC ಪುರುಷರ T20 ವಿಶ್ವಕಪ್ 2022 ರ ಬಹು ನಿರೀಕ್ಷಿತ ಪದ್ಯಗಳಲ್ಲೊಂದಾದ  ಭಾರತ ಮತ್ತು ಪಾಕಿಸ್ತಾನದ ನಡುವಿನ  ಪಂದ್ಯವು, ಇಂದು (ಭಾನುವಾರ) ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಹವಾಮಾನ ವರದಿ ನೀಡಿರುವ ಮಾಹಿತಿ ಪ್ರಕಾರ, ಇಂದು ಮೆಲ್ಬೋರ್ನ್ ನಲ್ಲಿ ಮೋಡಕವಿದ  ವಾತಾವರಣ  ಸೃಷ್ಟಿಯಾಗಿದ್ದು, ಮಳೆ  ಬರುವ  ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ.

ಈ ದಿನದಂದು  ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಭಾನುವಾರ ಮಳೆ ಪ್ರಮಾಣ ಶೇ 91ರಷ್ಟಿದ್ದು, ಗಾಳಿಯ ವೇಗ ಗಂಟೆಗೆ ಸುಮಾರು 15 ಕಿ.ಮೀ. ಇರುವುದರಿಂದ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಈ ಹಿನ್ನಲೆಯಲ್ಲಿ ಇಂದು ನಡೆಯುವ  ಪಂದ್ಯದಲ್ಲಿ, ಕಡಿಮೆ ಓವರ್‌ಗಳ ಪಂದ್ಯ ನಡೆಯುವ  ಸಾಧ್ಯತೆ ಇದೆ. ಇಲ್ಲವಾದರೆ  ಪಂದ್ಯ  ಸಂಪೂರ್ಣ ರದ್ದಾಗುವ  ಸಾಧ್ಯತೆ ಹೆಚ್ಚಿದೆ.

ಒಂದು ವೇಳೆ ಈ ಪಂದ್ಯ ರದ್ದಾದರೆ, ಪಂದ್ಯವನ್ನು ವೀಕ್ಷಿಸಲು ಕಾದು ಕುಳಿತಿರುವ ಎರಡೂ ತಂಡಗಳ ಅಭಿಮಾನಿಗಳಿಗೆ  ನಿರಾಸೆಯಾಗಲಿದ್ದು, ಇಂದು ಪಂದ್ಯ  ನಡೆಯಬೇಕೆನ್ನುವುದು ಅಭಿಮಾನಿಗಳ  ಆಸೆಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page