Friday, June 14, 2024

ಸತ್ಯ | ನ್ಯಾಯ |ಧರ್ಮ

ಟಿ-20 ವಿಶ್ವಕಪ್‌: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 71 ರನ್‌ಗಳ ಭರ್ಜರಿ ಜಯ

ಮೆಲ್ಬೋರ್ನ್: ಇಂದು ನಡೆದ ಟಿ-20 ವಿಶ್ವಕಪ್‌ ಪಂದ್ಯದಲ್ಲಿ ಭಾರತವು ಜಿಂಬಾಬ್ವೆ ವಿರುದ್ಧ 71 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ತಂಡ, 3ನೇ ಓವರ್‌ನಲ್ಲಿ ನಾಯಕ ರೋಹಿತ್‌ ಶರ್ಮಾ ವಿಕೆಟ್‌ ಕಳೆದುಕೊಂಡು ʼಪವರ್‌ ಫ್ಲೇʼ ಹಂತದಲ್ಲಿ ನಿಧಾನಗತಿಯಲ್ಲಿ ಆಟ ಪ್ರಾಂರಂಭಿಸಿತು. ನಂತರ ಕೆ.ಎಲ್‌. ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಜೊತೆಯಾಟದಿಂದ 10 ಓವರ್‌ಗಳಿಗೆ 80ರನ್‌ಗಳ ಗಡಿ ದಾಟಿತು. ಈ ವೇಳೆ ವಿರಾಟ್‌ ಕೊಹ್ಲಿ, ಅರ್ಧಶತಕಗಳಿಸಿದ್ದ ರಾಹುಲ್‌ ಇಬ್ಬರು ಸರದಿಯಾಗಿ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದರು.

ನಂತರ ಬಂದ ಸೂರ್ಯಕುಮಾರ್‌ ಯಾದವ್‌ ರಭಸದ ಆಟವಾಡಿ 25 ಎಸೆತಗಳಿಗೆ 61 ರನ್‌ಗಳಿಸದರು, ಈ ಮೂಲಕ ಹಾರ್ದಿಕ್‌ ಪಾಂಡ್ಯ ಮತ್ತು ಸೂರ್ಯ ಕುಮಾರ್‌ ಯಾದವ್‌ ಜೊತೆಯಾಟದಿಂದ ಭಾರತ 5 ವಿಕೆಟ್‌ ನೀಡಿ 186 ರನ್‌ ಗಳಿಸಿತು.
ನಂತರ ಸವಾಲಿನ ಮೊತ್ತ ಬೆನ್ನತ್ತಿದ ಜಿಂಬಾಬ್ವೆ ತಂಡದ ಆಟಗಾರರು, ಭಾರತೀಯ ಬೌಲರ್‌ಗಳ ದಾಳಿಗೆ ನಲುಗಿದರು. ಹೀಗಾಗಿ ಸಿಖಂದರ್‌ ರಾಜಾ, ವೆಲ್ಲಿಂಗ್ಟನ್‌ ಮಸಕಡ್ಜಾ ಹೊರತುಪಡಿಸಿ ಯಾವೊಬ್ಬ ಆಟಗಾರನು ಕೂಡ ಹೆಚ್ಚು ರನ್‌ಗಳಿಸದೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು.

ಜಿಂಬಾಬ್ವೆ ತಂಡಕ 20 ಓವರ್‌ಗಳಿಗೆ ತನ್ನ ಎಲ್ಲಾ ವಿಕೆಟ್‌ ಒಪ್ಪಿಸಿದ್ದರಿಂದ ಕೇವಲ 115 ರನ್‌ ಮಾತ್ರ ಗಳಿಸಲು ಸಾಧ್ಯವಾಯಿತು.

ಸ್ಕೋರ್ ಕಾರ್ಡ್

ಭಾರತ : 186/5(20)

ಕೆ.ಎಲ್ ರಾಹುಲ್ : 521(35), ರೋಹಿತ್ ಶರ್ಮಾ : 15(13), ವಿರಾಟ್ ಕೊಹ್ಲಿ : 26(25), ಸೂರ್ಯಕುಮರ್ ಯಾದವ್ (ನಾಟ್ ಔಟ್ ) : 61(25), ರಿಷಬ್ ಪಂತ್ : 3(5), ಹಾರ್ದಿಕ್ ಪಾಂಡ್ಯ : 18(18), ಅಕ್ಸರ್ ಪಟೇಲ್ : 0(0), ಇತರೆ : 12

ಬೌಲಿಂಗ್

ರಿಚರ್ಡ್ ಎನ್‌ಗರವ : 4-1-44-1, ಟರಂಡೈ ಚಾತರ : 4-0-34-0, ಬ್ಲೆಸಿಂಗ್ ಮುಜ಼ಾರಾಬನಿ : 4-0-50-1, ವೆಲ್ಲಿಂಗ್ಟನ್ ಮಸಕಡ್ಜಾ : 2-0-12-0, ರ್ಯಾನ್‌ ಬರ್ಲ್: 1-0-14-0, ಸಿಖಂದರ್ ರಾಜಾ಼ : 3-0-18-1, ಸೀನ್ ವಿಲಿಮ್ಸ್ : 2-0-9-2,

ಜಿಂಬಾಬ್ವೆ : 115(17.2)

ವೆಸ್ಲೆ ಮದೆವೆರೆ : 0(1), ಕ್ರೈಗ್ ಎರ್ವಿನ್ : 13(15), ರೇಗಿಸ್ ಚಕಬ್ವಾ : 0(6), ಸೀನ್ ವಿಲಿಯಮ್ಸ್ : 11(18), ಸಿಖಂದರ್ ರಾಜಾ಼ : 34(24), ಟೋನಿ‌ ಮುನ್ಯೊಂಗಾ : 5(4), ರ್ಯಾನ್‌ ಬರ್ಲ್ : 35(22), ವೆಲ್ಲಿಂಗ್ಟನ್ ಮಸಕಡ್ಜಾ : 1(7), ರಿಚರ್ಡ್ ಎನ್‌ಗವರ : 1(2), ಟೆಂಡೈ ಚತಾರ : 4(4), ಬ್ಲೆಸ್ಸಿಂಗ್ ಮುಸಾರಬನಿ : 0(2), ಇತರೆ: 11

ಬೌಲಿಂಗ್

ಭುವನೇಶ್ವರ್ ಕುಮಾರ್ : 3-1-11-1, ಅರ್ಶದೀಪ್ ಸಿಂಗ್ : 2-0-9-1, ಮೊಹಮ್ಮದ್ ಶಮಿ : 2-0-14-2, ಹಾರ್ದಿಕ್ ಪಾಂಡ್ಯ : 3-0-16-2, ರವಿಚಂದ್ರನ್ ಅಶ್ವಿನ್ : 4-0-22-3, ಅಕ್ಸರ್ ಪಟೇಲ್ : 3-0-40-1

Related Articles

ಇತ್ತೀಚಿನ ಸುದ್ದಿಗಳು