Monday, June 17, 2024

ಸತ್ಯ | ನ್ಯಾಯ |ಧರ್ಮ

ಟಿ-20 ವಿಶ್ವಕಪ್‌: ಭಾರತಕ್ಕೆ ಪಾಕಿಸ್ತಾನದೆದುರು ಫೈನಲ್‌ ಆಡಲು ನಾವು ಬಿಡುವುದಿಲ್ಲ

ಅಡಿಲೇಡ್ ಓವಲ್ (ಆಸ್ಟ್ರೇಲಿಯಾ):‌ ಟಿ-20 ವಿಶ್ವಕಪ್‌ ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಕಣಕ್ಕಿಳಿಯಲು ನಾವು ಬಿಡುವುದಿಲ್ಲ ಎಂದು ಇಂಗ್ಲೇಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಹೇಳಿದ್ದಾರೆ.

ʼಅಡಿಲೇಡ್ ಓವಲ್‌ʼನಲ್ಲಿ ಗುರುವಾರ ನಡೆಯಲಿರುವ ಟಿ 20 ವಿಶ್ವಕಪ್‌ ಎರಡನೇ ಸೆಮಿಫೈನಲ್‌ನಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ ಭಾರತ ತಂಡವನ್ನುಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರವರು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್‌ನಲ್ಲಿ ಯಾವ ತಂಡ ಜಯಗಳಿಸುವುದೊ, ಆ ತಂಡದ ವಿರುದ್ಧ ಪೈನಲ್‌ನಲ್ಲಿ ಆಡಲಿದೆ.

 ಭಾರತದ ವಿರುದ್ಧದ ಪಂದ್ಯದ ಮೊದಲು, ನಾಯಕ ಜೋಸ್ ಬಟ್ಲರ್ ಅವರು ತಮ್ಮ ತಂಡದ ಸಿದ್ಧತೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಡೇವಿಡ್ ಮಲಾನ್ ಮತ್ತು ಮಾರ್ಕ್ ವುಡ್‌ಗೆ ಗಾಯದ ಭಯ ಕಾಡುತ್ತಿರುವುದಾಗಿ ತಿಳಿಸಿದರು. ನಂತರ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹೆಚ್ಚು ರನ್‌ಗಳಿಸದಂತೆ ಕಟ್ಟಿಹಾಕುತ್ತೇವೆ ಎಂದು ಸಹ ಹೇಳಿದ್ದಾರೆ.

ಈ ವೇಳೆ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ಫರ್ಧಿಸಲು ನಾವು ಬಿಡುವುದಿಲ್ಲ, ಏಕೆಂದರೆ ನಮ್ಮ ತಂಡ ಭಾರತ ತಂಡವನ್ನು ಸೋಲಿಸುವ ಎಲ್ಲಾ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಂದುವರೆದು ಮಾತನಾಡಿದ ಅವರು, ʼನೋಡಿ, ನಾವು ಖಂಡಿತವಾಗಿಯೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಆಟವಾಡುವುದನ್ನು ನಾವು ನೋಡಲು ಬಯಸುವುದಿಲ್ಲ. ಆದ್ದರಿಂದ ಈ ರೀತಿ ನಡೆಯದಂತೆ ನಾವು ನಮ್ಮಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ನಾವು ಮಾಡುತ್ತೇವೆʼ ಎಂದು ಬಟ್ಲರ್ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ʼಭಾರತವು ಕ್ರಿಕೆಟ್‌ ಜಗತ್ತಿನಲ್ಲಿ ಬಹಳ ಬಲಿಷ್ಠ ತಂಡ. ಅದನ್ನ ಅವರು ಬಹಳ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾರೆ. ಸ್ವಾಭಾವಿಕವಾಗಿ ಭಾರತ ತಂಡದ ಆಟಗಾರರು ಒಳ್ಳೆಯ ಪ್ರತಿಭೆಯುಳ್ಳಂತವರು, ಹಾಗಾಗಿಯೇ ಅವರ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರಿದ್ದಾರೆʼ ಎಂದು ಬಟ್ಲರ್ ಹೇಳಿದರು.

ಬಲಗೈ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಬಗ್ಗೆ ಮಾತನಾಡಿದ ಬಟ್ಲರ್, ಅವರು ಪ್ರಸಕ್ತ ಟೂರ್ನಿಯಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ, ಏಕೆಂದರೆ ಅವರು ಉತ್ತಮ ಸ್ಟ್ರೈಕ್ ರೇಟ್‌ನಲ್ಲಿ ಮೂರು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಅವರ ಆಟ ನೋಡುವುದೆ ಒಂದು ಅದ್ಭುತ. ಅವರು ಇಲ್ಲಿಯವರಗೆ ಆಟವಾಡಿರುವ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಸೂರ್ಯಕುಮಾರ್‌ ಕಣಕ್ಕೆ ಇಳಿದಾಗ ಹೆಚ್ಚು ರನ್‌ಗಳಿಸಲು ನೋಡುತ್ತಾರೆ. ಅದಲ್ಲದೇ ಅವರು ಹೊಡೆಯುವ ಎಲ್ಲಾ ಹೊಡೆತಗಳನ್ನು ಅತ್ಮವಿಶ್ವಾಸದಿಂದ ಹೊಡೆಯುತ್ತಾರೆ. ಹಾಗಾಗಿಯೇ ಅವರು ಮೈದಾನದ ಎಲ್ಲಾ ಕಡೆಗೂ ಚೆಂಡನ್ನು ಕಳಿಸುತ್ತಾರೆ ಎಂದು ಹೇಳಿದರು. ಹೀಗಾಗಿ ಇಂತಹ ಒಳ್ಳೆಯ ಆಟಗಾರನ ವಿಕೆಟ್‌ ಪಡೆಯಲು ನಮ್ಮ ತಂಡದ ಬೌಲರ್‌ಗಳು ಹಲವಾರು ಸಿದ್ದತೆಗಳನ್ನು ನಡೆಸಿದ್ದಾರೆ ಎಂದರು.

 ಯಜುವೇಂದ್ರ ಚಹಲ್ ವಿಶ್ವಕಪ್ನಲ್ಲಿ ಯಾವುದೇ ಪಂದ್ಯದಲ್ಲಿ ಆಡದಿರುವುದು ನಿಮಗೆ ಆಶ್ಚರ್ಯ ತಂದಿದೆಯೇ ಎಂದು ಕೇಳಿದಾಗ, ಬಟ್ಲರ್ ಪ್ರತಿಕ್ರಯಿಸಿ, ಯೂಜಿ ಒಬ್ಬ ಶ್ರೇಷ್ಠ ಬೌಲರ್, ನಾನು ʼಐಪಿಎಲ್‌ʼನಲ್ಲಿ ಅವರೊಂದಿಗೆ ಆಡುವುದನ್ನು ನಿಜವಾಗಿಯೂ ಆನಂದಿಸಿದ್ದೇನೆ. ಅವರು ಉತ್ತಮ ಬೌಲರ್, ಅವರು ಯಾವಾಗಲೂ ವಿಕೆಟ್ ಪಡೆಯಲು ತುಂಬಾ ಉತ್ಸುಕರಾಗಿರುತ್ತಾರೆ. ಹಾಗಾಗಿ ಅವರು ಶ್ರೇಷ್ಠ ಬೌಲರ್ ಎಂದು ನನಗೆ ಖಾತ್ರಿಯಿದೆ,” ಎಂದು ಹೇಳಿದರು.

ಮಲಾನ್ ಮತ್ತು ವುಡ್‌ಗೆ ಆದ ಗಾಯಗಳ ಬಗ್ಗೆ ಮಾತನಾಡಿದ ಬಟ್ಲರ್, ನಾವು ವೈದ್ಯಕೀಯ ತಂಡವನ್ನು ನಂಬುತ್ತೇವೆ. ಜೊತೆಗೆ ಆ ಇಬ್ಬರು ಆಟಗಾರರನ್ನು ಸಹ. ಅವರು ಸದ್ಯಕ್ಕೆ ಗಾಯದಿಂದ ಸುಧಾರಿಸಿಕೊಂಡಿದ್ದು, ಸಮಿಫೈನಲ್‌ನಲ್ಲಿ ಆಡಲಿದ್ದಾರೆ ಎಂದು ತಿಳಿಸಿದರು.

ಭುವನೇಶ್ವರ್ ಕುಮಾರ್ ಅವರನ್ನು ಎದುರಿಸುವ ತಮ್ಮ ಸಿದ್ಧತೆಯ ಬಗ್ಗೆ ಮಾತನಾಡಿದ ಬಟ್ಲರ್, ʼನನ್ನ ಸ್ವಂತ ಆಟದ ಬಗ್ಗೆ ನನಗೆ ಯಾವಾಗಲೂ ವಿಶ್ವಾಸವಿದೆ. ಭಾರತದಂತಹ ನಂಬರ್‌ ಒನ್‌ ತಂಡದಲ್ಲಿ, ಇತರ ತಂಡಗಳಿಗಿಂತ ಕಷ್ಟವೆನಿಸುವ ಬೌಲರ್‌ಗಳು ಇರುತ್ತಾರೆ. ಆ ಪಟ್ಟಿಯಲ್ಲಿ ಭುವನೇಶ್ವರ್‌ ಕೂಡ ಒಬ್ಬರು. ನಾನು ಯಾವಾಗಲೂ ಚೆನ್ನಾಗಿ ತಯಾರಿ ನಡೆಸುತ್ತೇನೆ, ಹಾಗಾಗಿ ನಾನು ಯಾರಿಗೂ ಹೆದರುವುದಿಲ್ಲ. ಏಕೆಂದರೆ ನಾನು ಆಟವಾಡುವ ಸಂದರ್ಭದಲ್ಲಿ ನನ್ನ ಮುಂದೆ ಬರುವ ಚೆಂಡನ್ನು ನೋಡುತ್ತೇನೆಯೇ ಹೊರತು ಎಸೆತಗಾರನನ್ನಲ್ಲ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು