Wednesday, June 26, 2024

ಸತ್ಯ | ನ್ಯಾಯ |ಧರ್ಮ

ಟಿ-20 ವಿಶ್ವಕಪ್‌: ಜಿಂಬಾಬ್ವೆಗೆ 187 ಗುರಿ ನೀಡಿದ ಭಾರತ

ಮೆಲ್ಬೋರ್ನ್: 2022ರ ಟಿ-20 ವಿಶ್ವಕಪ್‌ ಟೂರ್ನಿಯ ಇಂದಿನ ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ, ಭಾರತವು ಕೆ.ಎಲ್‌.ರಾಹುಲ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರ ಉತ್ತಮ ಪ್ರದರ್ಶನದೊಂದಿಗೆ, ಎದುರಾಳಿ ಜಿಂಬಾಬ್ವೆ ತಂಡಕ್ಕೆ  187 ರನ್‌ ಗುರಿ ನೀಡಿದೆ.

ಟಾಸ್‌ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆಮಾಡಿಕೊಂಡಿತು. ನಂತರ ಮೈದಾನಕ್ಕಿಳಿದ ಭಾರತದ ಆರಂಭಿಕ ಆಟಗಾರರು, ಮೊದಲ ಎರಡು ಓವರ್‌ಗಳಲ್ಲಿ ರಭಸದ ಆಟವಾಡಲು ಪ್ರಾರಂಭಿಸಿತು. ಅದೇ ರೀತಿ ಆಟ ಮುಂದುವರೆಸಲು ಹೋದ ನಾಯಕ ರೋಹಿತ್‌ ಶರ್ಮಾ, 4ನೇ ಓವರ್‌ನಲ್ಲಿ ಬ್ಲೆಸ್ಸಿಂಗ್‌ ಮುಜರಬಾನಿ ಬೌಲಿಂಗ್‌ ವೇಳೆ ಕ್ಯಾಚ್‌ ನೀಡಿದರು. ನಂತರ ಬಂದ ವಿರಾಟ್‌ ಕೊಹ್ಲಿ ಕೂಡ ತನ್ನ ಸಾಮರ್ಥ ಪ್ರದರ್ಶಿಸದೆ 25 ಎಸೆತಗಳಲ್ಲಿ 26 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.

ನಂತರ ಅರ್ಧಶತಕಗಳಿಸಿ ಸ್ಕ್ರೀಜ್‌ ನಲ್ಲಿ ಉತ್ತಮವಾಗಿ ಆಟವಾಡುತ್ತಿದ್ದ ಕೆ.ಎಲ್‌. ರಾಹುಲ್‌ ಕೂಡ ಸಿಕಂದರ್ ರಜಾ ಬೌಲಿಂಗ್‌ ವೇಳೆ ರಭಸವಾಗಿ ಹೊಡೆಯಲು ಹೋಗಿ ಕ್ಯಾಚ್‌ ನೀಡಿದರು. ಹೊಡಿ-ಬಡಿ ಆಟಗಾರನಾದ ರಿಷಬ್‌ ಪಂತ್‌ ಸಿಕ್ಸ್‌ ಹೊಡೆಯಲು ಮುಂದಾಗಿ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದರು.

ಆದರೆ ಸೂರ್ಯಕುಮಾರ್‌ ಯಾದವ್‌ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸ್‌ ಬಾರಿಸುವ ಮೂಲಕ 25 ಎಸೆತಗಳಲ್ಲಿ 61 ರನ್‌ ಗಳಿಸಿದರು. ಈ ಮೂಲಕ ಭಾರತ ತಂಡ 20‌ ಓವರ್‌ಗಳಲ್ಲಿ 5 ವಿಕೆಟ್‌ ನೀಡಿ 186 ರನ್‌ ಕಲೆಹಾಕಿತು.

ಜಿಂಬಾಬ್ಬೆ ತಂಡ ಬೌಲರ್‌ಗಳಾದ ಸೀನ್ ವಿಲಿಯಮ್ಸ್ 2 ವಿಕೆಟ್‌, ಸಿಕಂದರ್‌ ರಜಾ, ಬ್ಲೆಸ್ಸಿಂಗ್‌ ಮುಜರಬಾನಿ, ರಿಚರ್ಡ್ ನಾಗರವ ತಲಾ ಒಂದೊಂದು ವಿಕೆಟ್‌ ಪಡೆಯುವುದರ ಮೂಲಕ ಭಾರತ ತಂಡದ 5 ಮುಖ್ಯ ಆಟಗಾರರನ್ನು ಪೆವಿಲಿಯನ್‌ ಸೇರಿಸಿದರು.

Related Articles

ಇತ್ತೀಚಿನ ಸುದ್ದಿಗಳು