Tuesday, January 27, 2026

ಸತ್ಯ | ನ್ಯಾಯ |ಧರ್ಮ

T20 ವಿಶ್ವ ಕಪ್‌ : ಭಾರತ ಮತ್ತು ಇಂಗ್ಲೆಂಡ್‌ ಎರಡನೇ ಸಮಿಫೈನಲ್‌, ತಂಡಕ್ಕೆ ನೆರವಾದ ಕೊಹ್ಲಿ-ಪಾಂಡ್ಯಾ

ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ ಭಾರತ 168/6

ಅಡಿಲೇಡ್‌ ಓವೆಲ್‌: ಭಾರತ ಇಂಗ್ಲೆಂಡ್‌ ನಡುವಿನ ಎರಡನೇ ಸೆಮಿಫೈನಲ್‌ ಪಂದ್ಯ ಇಂದು ನಡೆಯುತ್ತಿದ್ದು ಭಾರತ ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ 168 ರನ್‌ ಗಳಿಸಿದೆ. ಟಾಸ್‌ ಗೆದ್ದು ಫೀಲ್ದಿಂಗ್‌ ಆಯ್ದುಕೊಂಡಿದ್ದ ಇಂಗ್ಲೆಂಡ್‌ ಎರಡನೇ ಓವರ್‌ನಲ್ಲಿ ಕೆ.ಎಲ್‌ ರಾಹುಲ್‌ ವಿಕೇಟ್‌ ಪಡೆದಿದ್ದು ಭಾರತಕ್ಕೆ ಭಾರಿ ಹಿನ್ನಡೆ ಎನ್ನಬಹುದು. ನಂತರ ರೋಹಿತ್‌ ಜೊತೆಗೂಡಿದ ರನ್‌ ಮಿಷಿನ್‌ ಕೊಹ್ಲಿ ಇಬ್ಬರೂ ಒಂದಷ್ಟು ಕಾಲ ಜವಾಬ್ದಾರಿಯುತವಾಗಿ ಆಡುತ್ತ ಇಬ್ಬರ ಜೊತೆಯಾಟದಲ್ಲಿ 47 ರನ್‌ ಗಳಿಸಿದರು.

ಓಂಬತ್ತನೇ ಓವರ್‌ನಲ್ಲಿ ರೋಹಿತ್‌ ಶರ್ಮಾ ಅವರು ಜೊರ್ಡನ್‌ ಕೈಗೆ ವಿಕೇಟ್‌ ಒಪ್ಪಿಸಿ ಹೊರನಡೆದರೆ ನಂತರ ಬಂದಂತಹ ಸೂರ್ಯಕುಮಾರ್‌ ಯಾದವ್‌ ಸಹಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಹು ನಿರೀಕ್ಷೆ ಹೊಂದಿದ್ದ ಸೂರ್ಯಕುಮಾರ್‌ ಗಳಿಸಿದ್ದು ಮಾತ್ರ ಕೇವಲ 14 ರನ್.‌ ತಂಡಕ್ಕೆ ಎಂದಿನಂತೆ ಅಪದ್ಭಾಂದವರಾಗಿದ್ದು ಮಾತ್ರ  ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯಾ . ಒಂದೆಡೆ ವಿಕೇಟ್‌ ಕಳೆದುಕೋಳ್ಳುತ್ತಿದ್ದರೂ ಸಹ ಯಾವುದೇ ರೀತಿಯಲ್ಲೂ ಗೊಂದಲಕ್ಕೊಳಗಾಗದೆ ಮಂದಗತಿಯಲ್ಲಿ ಶೂರು ಮಾಡಿ ಉತ್ತಮ ಸ್ಟ್ರೈಕ್‌ ರೇಟ್‌ ನತ್ತ ಭಾರತವನ್ನ ಕೊಂಡೊಯ್ಯುತ್ತಿದ್ದರು. ಕೋಹ್ಲಿಗೆ ಹಾರ್ದಿಕ್‌ ಪಾಂಡ್ಯಾ ಸಹ ಉತ್ತಮ ರೀತಿಯಲ್ಲಿ ಸ್ಟ್ರೈಕ್‌ ನೀಡುತ್ತಾಬಂದಿದ್ದು ಅವಶ್ಯವಾಗಿತ್ತು ಮತ್ತು ಹಾಗೆಯೇ ಮುಂದುವರೆದರೂ ಸಹ.

ಕೊಹ್ಲಿಯ ಅರ್ಧ ಶತಕದ ನಂತರ ಅವರ ಅಬ್ಬರದ ಆಟಕ್ಕೆ ಕಾದಿದ್ದ ಅಭಿಮಾನಿಗಳಿಗೆ ಪಾಂಡ್ಯ ಭರ್ಜರಿ ಮನರಂಜನೆಯನ್ನೇ ಕೊಟ್ಟುಬಿಟ್ಟರು. ಕೊಹ್ಲಿಯ ಆಟಕ್ಕಾಗಿ ಕಾದಿದ್ದ ಅಭಿಮಾನಿಗಳಿಗೆ ಕೊಹ್ಲಿ ಅರ್ಧ ಶತಕಕ್ಕೆ ಕ್ರಿಸ್‌ ವೂಕ್ಸ್‌ ಕೈಗೆ ವಿಕೇಟ್‌ ಒಪ್ಪಿಸಿ ಹೊರನಡೆದದ್ದು ಮಾತ್ರ ಅಭಿಮಾನಿಗಳಲ್ಲಿ ನಿರಾಸೆಯನ್ನು ಉಂಟು ಮಾಡಿತು. ಕೊಹ್ಲಿ ಮತ್ತು ಪಾಂಡ್ಯ ಜೊತೆಯಾಟ ತಂಡಕ್ಕೆ 61 ರನ್‌ ತಂದುಕೊಟ್ಟಿತು. ಕೊಹ್ಲಿ ನಂತರ ಪಾಂಡ್ಯ ಆಟಕ್ಕೆ ಕಡಿವಾಣ ಹಾಕಲು ಇಂಗ್ಲೆಂಡ್‌ ಆಟಗಾರರಿಗೆ ಆಗಲೇ ಇಲ್ಲ.

ಒಟ್ಟಾರೆ ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ ಭಾರತ 6 ವಿಕೆಟ್‌ ನೀಡಿ, 168 ರನ್‌ ಗಳಿಸಿದ್ದು, ಭಾರತದ ಬೌಲರ್‌ಗಳ ಮೇಲೆ ತಂಡದ ಗೆಲುವು ಆಧರಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page