Bogasege Dakkiddu – Peepal Media

ಬೊಗಸೆಗೆ ದಕ್ಕಿದ್ದು- 27 : ಚುನಾವಣಾ ಫಲಿತಾಂಶ ಮತ್ತು ಪಂಚತಂತ್ರದ ಪಾಠ
ಲೋಕಸಭಾ ಚುನಾವಣೆಯ ಫಲಿತಾಂಶ ಅಂತಿಮವಾಗಿ ಹೊರಬಿದ್ದಿದೆ. 400+ 420+ ಸ್ಥಾನಗಳನ್ನು ಗೆಲ್ಲುವುದಾಗಿ ಬೊಗಳೆ ಬಿಡುತ್ತಿದ್ದ ಬಿಜೆಪಿ ಮತ್ತು ಎನ್‌ಡಿಎಯ ಬೆಲೂನು ಟುಸ್ಸೆಂದಿದೆ. ಬಿಜೆಪಿಯ ಮತಗಳ ಪ್ರಮಾಣವೂ ಕುಸಿದಿದೆ. ಈಗಾಗಲೇ ಅಂಕಿಅಂಶಗಳು ಎಲ್ಲರಿಗೆ ಗೊತ್ತಿರಬಹುದಾದುದರಿಂದ ಅವುಗಳನ್ನು ಇಲ್ಲಿ ನೀಡಲು ಹೋಗುವುದಿಲ್ಲ. ಯಾರೇ ಸರಕಾರ ರಚಿಸಲಿ, ಈ ಕೆಳಗಿನ ಅಂಶಗಳು ಸ್ಪಷ್ಟವಾಗಿವೆ:

ಮುಂದಿನ ಐದು ವರ್ಷಗಳ ವರೆಗೆ ಯಾರೂ ಸಂವಿಧಾನ ಬದಲಾವಣೆಯ ಬಗ್ಗೆ ಚಕಾರವೆತ್ತಲೂ ಸಾಧ್ಯವಿಲ್ಲ ಎಂದು ಆಶಿಸಬಹುದು.

ಮುಂದೆ ಅಷ್ಟು ಸುಲಭವಾಗಿ ಸಂಸತ್ತಿನಲ್ಲಿ ಚರ್ಚೆಗೂ ಅವಕಾಶ ನೀಡದೆ, ಯದ್ವಾತದ್ವಾ ಆಧ್ಯಾದೇಶಗಳು ಮತ್ತು ಕಾನೂನುಗಳನ್ನು, ಸಂವಿಧಾನ ತಿದ್ದುಪಡಿಗಳನ್ನು ಮಾಡಲು ಸಾಧ್ಯವಿಲ್ಲ ಎಂಬುದು.

ಅಹಂಕಾರಿ, ಶೋಕಿಲಾಲ, ಸರ್ವಾಧಿಕಾರಿ ಪ್ರವೃತ್ತಿಯ ನಾಯಕರಿಗೆ ಪಾಠ ಕಲಿಸುವ ಮತ್ತು ಅವರ ಮದ ಇಳಿಸುವ ಶಕ್ತಿ ಮತದಾರರಿಗೆ ಇದೆ ಎಂಬುದು. (ಇದನ್ನು ಬ್ರೆಜಿಲ್‌ನಲ್ಲಿ ಬೊಲ್ಸನಾರೋ ಮತ್ತು ಯುಎಸ್ಎಯಲ್ಲಿ ಡೊನಾಲ್ಡ್ ಟ್ರಂಪ್ ಮುಂತಾದವರು ಈಗಾಗಲೇ ಅನುಭವಿಸಿದ್ದಾರೆ. ನರೇಂದ್ರ ಮೋದಿಗೂ ಇದೀಗ ಮನವರಿಕೆ ಆಗಿರಬಹುದು)

ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು “ಇಂಡಿಯಾ” ಕೂಟ ತೋರಿಸಿರುವುದು.

ಒಂದು ಸಾಮೂಹಿಕ ಹೋರಾಟದಲ್ಲಿ ಸಾಮೂಹಿಕ ಪ್ರತಿರೋಧ ತೋರದೇ, ಅಹಂಕಾರದಿಂದಲೋ, ಮೂರ್ಖತನದಿಂದಲೋ ಏಕಾಂಗಿಯಾಗಿ ಸ್ಪರ್ಧಿಸಿದ ಬಹುತೇಕ “ಇತರರು” ಬಹುದೊಡ್ಡ ನಷ್ಟ ಅನುಭವಿಸಿದ್ದಾರೆ ಎಂಬುದು.

ದೀರ್ಘವಾದ ಏಳು ಹಂತಗಳ ಚುನಾವಣಾ ಪ್ರಕ್ರಿಯೆಯ ವೇಳೆ ಎಲ್ಲರೂ ಪ್ರತಿಪಕ್ಷಗಳನ್ನು ಬೆಂಬಲಿಸುವ ಆತಂಕ, ಒತ್ತಡದಲ್ಲಿಯೇ ಇದ್ದರು. ಇದೀಗ ಫಲಿತಾಂಶವು ಸಂಪೂರ್ಣ ತೃಪ್ತಿ ನೀಡುವಂತೆ, ಸಮಾಧಾನದ ನಿಟ್ಟುಸಿರು ಬಿಡುವಂತೆ ಇಲ್ಲವಾದರೂ ಕಳೆದ ಚುನಾವಣೆಗೆ ಹೋಲಿಸಿದರೆ ಸಾಕಷ್ಟು ಸಮಾಧಾನಕರವಾಗಿದೆ. ಆದರೆ, ಗೋದಿ ಮೀಡಿಯಾ ಗುಲಾಮರು ಚಿಂತಾಕ್ರಾಂತರಾಗಿರುವ ಈ ಹಿನ್ನೆಲೆಯಲ್ಲಿ ಸ್ವಲ್ಪ ಲೈಟ್ ಹಾರ್ಟೆಡ್ ಅಂದರೆ, ಹಗುರವಾದ ವಿಷಯಗಳನ್ನು ಓದಿ ಸುಧಾರಿಸಿಕೊಳ್ಳೋಣ.

ಬೊಗಸೆಗೆ ದಕ್ಕಿದ್ದು…25ರಲ್ಲಿ ನಾನು ಸರ್ವಾಧಿಕಾರಿಗಳ ವಂಚನೆಯನ್ನು ವಿವರಿಸುವ ಪಂಚತಂತ್ರದ ಕೆಲವು ಕತೆಗಳನ್ನು ಹೇಳಿದ್ದೆ. ಬೊಗಸೆಗೆ ದಕ್ಕಿದ್ದು…26ರಲ್ಲಿ ರಾಜನಿಂದ ಅನ್ಯಾಯಕ್ಕೆ ಒಳಗಾದ ನಿಷ್ಟಾವಂತ ಸೇವಕರೂ ಆತನ ಸರ್ವನಾಶಕ್ಕೆ ಹಂಬಲಿಸುತ್ತಾರೆ ಎಂಬ ಪಂಚತಂತ್ರದ ಮಾತುಗಳನ್ನು ಬರೆದಿದ್ದೆ. ಅದು ಈ ಫಲಿತಾಂಶಗಳಲ್ಲಿ ನಿಜವಾಗಿದೆ. ಈಗ ದಮನಕಾರಿ ಅರಸರ ಸರ್ವನಾಶ ಹೇಗೆ ಎಂದು ಸೂಚಿಸುವ ಪಂಚತಂತ್ರದ ಇನ್ನಷ್ಟು ಕತೆಗಳನ್ನು ಇಲ್ಲಿ ಚುಟುಕಾಗಿ ಸಾರಾಂಶ ರೂಪದಲ್ಲಿ ಹೇಳುತ್ತಿದ್ದೇನೆ.

ಜಾಣ ಕೊಕ್ಕರೆ

ಒಂದು ಎತ್ತರವಾದ ಮರದ ಮೇಲೆ ನೂರಾರು ಕೊಕ್ಕರೆಗಳು ವಾಸವಾಗಿದ್ದವು. ಅದರಲ್ಲೊಂದು ಜಾಣ ಕೊಕ್ಕರೆಯೂ ಇತ್ತು. ಆ ಮರದ ಕೆಳಗೆ ಒಂದು ಚಿಕ್ಕ ಬಳ್ಳಿ ಹುಟ್ಟಿಕೊಂಡಿತು. ಆಗ ಆ ಜಾಣ ಕೊಕ್ಕರೆಯು ಉಳಿದವರಿಗೆ ಹೇಳಿತು: ಗೆಳೆಯರೇ, ಈ ಬಳ್ಳಿಯನ್ನು ಈಗಲೇ ಕತ್ತರಿಸಿ ಬಿಡೋಣ. ಇಲ್ಲವಾದರೆ ಅದು ಬೆಳೆದುಬಿಟ್ಟರೆ ಮುಂದೆ ಯಾರಾದರೂ ಅದನ್ನು ಹಿಡಿದು ಮೇಲೆ ಬಂದರೆ ನಮಗೆ ಅಪಾಯ. ಆದರೆ, ಯಾರೂ ಅದರ ಮಾತುಗಳನ್ನು ಕೇಳಲಿಲ್ಲ.

ಮುಂದೊಂದು ದಿನ ಆ ಬಳ್ಳಿ ದೊಡ್ಡದಾಗಿ ಬೆಳೆಯಿತು. ಒಂದು ದಿನ ಕೊಕ್ಕರೆಗಳೆಲ್ಲಾ ಆಹಾರ ಅರಸಿ ಹೊರಗೆ ಹೋಗಿದ್ದಾಗ ಒಬ್ಬ ಬೇಟೆಗಾರ ಅದೇ ಬಳ್ಳಿಯ ಸಹಾಯದಿಂದ ಆ ಭಾರೀ ಮರವನ್ನು ಹತ್ತಿ ದೊಡ್ಡ ಬಲೆಯನ್ನು ಬೀಸಿ ಹೋದ. ಸಂಜೆ ಬಂದ ಕೊಕ್ಕರೆಗಳ ಹಿಂಡಿನ ಕಾಲುಗಳು ಅದರಲ್ಲಿ ಸಿಕ್ಕಿ ಬಿದ್ದವು.

ಮರುದಿನ ಬೇಟೆಗಾರ ಬಂದಾಗ ಜಾಣ ಕೊಕ್ಕರೆ ಹೇಳಿತು: ಗೆಳೆಯರೇ, ನಾವೆಲ್ಲಾ ಸತ್ತಂತೆ ಬಿದ್ದುಕೊಳ್ಳೋಣ. ಬೇಟೆಗಾರ ಬಲೆಯನ್ನು ಬಿಚ್ಚಿದಾಗ ಎಲ್ಲರೂ ಒಮ್ಮಲೇ ಒಂದೇ ಹೊತ್ತಿಗೆ ಹಾರಿ ಬಿಡೋಣ! ನಂತರ ನಡೆದದ್ದು ಹೀಗೆಯೇ! ಕೊಕ್ಕರೆಗಳೆಲ್ಲಾ ಬಲೆ ಸಹಿತ ಹಾರಿದವು.

ನೀವೀಗ ಆ ಮರ ಭಾರತ, ಆ ಬಳ್ಳಿ ಆರೆಸ್ಸೆಸ್, ಬಿಜೆಪಿಯೇ ಬೇಟೆಗಾರ, ಕೊಕ್ಕರೆಗಳೇ ಪ್ರಜೆಗಳು ಎಂದು ಕಲ್ಪಿಸಿಕೊಂಡರೆ ನಾನು ಜವಾಬ್ದಾರಿ ಅಲ್ಲ. ಈ ಕತೆಯ ನೀತಿ ಎಂದರೆ: ಸಮಸ್ಯೆಯನ್ನು ಆರಂಭದಲ್ಲೇ ಬೆಳೆಯಲು ಬಿಡಬಾರದು ಮತ್ತು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು.

ರೋಗಕ್ಕಿಂತ ಔಷಧಿ ಅಪಾಯಕಾರಿ

ಒಂದು ಮರದ ಮೇಲೆ ಹಲವಾರು ಕೊಕ್ಕರೆಗಳು ವಾಸವಾಗಿದ್ದವು. ಮರದ ಬುಡದ ಬಿಲದಲ್ಲಿ ಒಂದು ಕರಿನಾಗರ ಹಾವು ವಾಸವಾಗಿತ್ತು. ಅದು ಮರದ ಮೇಲೆ ಹತ್ತಿ ಮೊಟ್ಟೆ ಮರಿಗಳನ್ನೆಲ್ಲಾ ತಿನ್ನುತ್ತಿತ್ತು. ಆಗ ಕೊಕ್ಕರೆಯ ಕತ್ತನ್ನು ತನ್ನ ಕಾಲುಗಳ ಇಕ್ಕುಳದಿಂದ ಹಿಡಿದು ತಿನ್ನುವ ಒಂದು ಏಡಿಗೆ ಚಿಂತೆಯಾಯಿತು. ಕೊಕ್ಕರೆಗಳೆಲ್ಲಾ ಹಾವಿನ ಪಾಲಾದರೆ ಹೇಗೆ ಎಂದು! ಅದು ಸಲಹೆ ನೀಡಿತು: ನೀವು ಮೀನುಗಳನ್ನು ಹಿಡಿದು ಮುಂಗುಸಿಯ ಬಿಲದಿಂದ ಹಾವಿನ ಬಿಲದ ವರೆಗೆ ಹಾಕುತ್ತಾ ಬನ್ನಿ ಎಂದು. ಕೊಕ್ಕರೆಗಳು ಹಾಗೆಯೇ ಮಾಡಿದವು. ಮುಂಗುಸಿ ಮೀನುಗಳನ್ನು ತಿನ್ನುತ್ತಾ ಬಂದು ಹಾವಿನ ಬಿಲ ತಲಪಿ ಹಾವನ್ನು ಕೊಂದು ತಿಂದಿತು. ಕೊಕ್ಕರೆಗಳಿಗೆ ಸಮಾಧಾನವಾಗಿ ಮುಂಗುಸಿಯನ್ನು ಆರಾಧಿಸಿದವು. ಮುಂದೆ ಮುಂಗುಸಿ ಹತ್ತು ವರ್ಷಗಳಿಂದ ಈ ಕೊಕ್ಕರೆಗಳ ಮೊಟ್ಟೆ ಮರಿಗಳನ್ನು ತಿನ್ನುತ್ತಿದೆ!

ಇದನ್ನು ನಮ್ಮ ಈಗಿನ ರಾಜಕೀಯ ಪರಿಸ್ಥಿತಿಗೆ ಹೋಲಿಸಿ. ನಿಮಗೆ ಯಾರಾದರೂ, ಏನಾದರೂ ನೆನಪಾದರೆ ಕೂಡಾ ನಾನು ಜವಾಬ್ದಾರಿ ಅಲ್ಲ! ಈಗ ದುಷ್ಟ ಅರಸನನ್ನು ಬಗ್ಡುಬಡಿಯಲು ಹೆಚ್ಚು ಬುದ್ಧಿವಂತ ಉಪಾಯವನ್ನು ಹೇಳುವ ಇನ್ನೊಂದು ಕತೆ:

ಕಾಗೆ ಮತ್ತು ಕರಿನಾಗರ

ಒಂದು ಕಾಗೆ ಒಂದು ಮರದಲ್ಲಿ ಸಂಸಾರ ಮಾಡುತ್ತಿತ್ತು. ಆ ಮರದ ಕೆಳಗಿನ ಬಿಲದಲ್ಲಿದ್ದ ಗಡ್ಡದ ಹಾವು ಒಂದು ದಿನ ಅದರ ಮೊಟ್ಟೆ ಮರಿಗಳನ್ನೆಲ್ಲಾ ತಿಂದುಹಾಕಿತು. ದುಃಖದಿಂದ ಅತ್ತ ಕಾಗೆ, ಈ ಹಾವಿಗೆ ಬುದ್ಧಿ ಕಲಿಸಬೇಕೆಂದು ಒಂದು ಉಪಾಯ ಮಾಡಿತು.

ಅಲ್ಲಿನ ರಾಜಕುಮಾರಿ ಒಂದು ಕೊಳದಲ್ಲಿ ಮೀಯುತ್ತಿದ್ದಾಗ ತನ್ನ ಆಭರಣಗಳನ್ನು ಕಳಚಿ ದಡದಲ್ಲಿ ಇಟ್ಟಿದ್ದಳು. ಕಾಗೆ ಅದರಿಂದ ಒಂದು ಅಮೂಲ್ಯ ವಜ್ರದ ಹಾರವನ್ನು ಎತ್ತಿಕೊಂಡು ಎಲ್ಲರ ಕಣ್ಣೆದುರೇ ಹಾರಿತು. ರಾಜಭಟರು ಅದರ ಬೆನ್ನುಹತ್ತಿದರು. ಅದು ಹಾರವನ್ನು ಹಾವಿನ ಬಿಲದ ಒಳಗೆ ಹಾಕಿತು. ಇದನ್ನು ನೋಡಿದ ರಾಜಕುಮಾರಿಯ ಅಂಗರಕ್ಷಕರು ಬಿಲವನ್ನು ಅಗೆದಾಗ ಹಾವು ಹೊರಬಂತು. ಅವರದನ್ನು ಹೊಡೆದುಕೊಂದರು. ಇಂತಹಾ ಚತುರ ಉಪಾಯಗಳಿಗೆ ನನ್ನ ಸಹಮತವಿದೆ.

ಒಗ್ಗಟ್ಟಿನಲ್ಲಿ ಬಲವಿದೆ

ಒಂದು ಗುಬ್ಬಚ್ಚಿ ಕಾಡಿನ ಒಂದು ಮರದಲ್ಲಿ ವಾಸವಾಗಿತ್ತು. ಅಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟಿತ್ತು. ಒಂದು ದಿನ ಮದವೇರಿದ ಒಂದು ಮೊದ್ದ ಆನೆ ಸುಖಾಸುಮ್ಮನೆ ನಮ್ಮ ಸಿಎಎ ರೀತಿಯಲ್ಲಿ ಒಂದು ಕೊಂಬೆಯನ್ನು ಅಲ್ಲಾಡಿಸಿತು. ಮೊಟ್ಟೆಗಳೆಲ್ಲವೂ ನೆಲಕ್ಕೆ ಬಿದ್ದು ಒಡೆದು ಹೋದವು. ಪಾಪ, ಅಸಾಹಯಕ ಗುಬ್ಬಚ್ಚಿ ಅಳುತ್ತಾ ಕುಳಿತಿದ್ದಾಗ, ಒಂದು ಮರಕುಟಿಗ ಹಕ್ಕಿ ಬಂದು ಸಮಾಧಾನ ಹೇಳಿತು. ಆದರೇನು? ಈ ಹುಚ್ಚು ಆನೆಯನ್ನು ನಿರ್ನಾಮ ಮಾಡುವುದು ಹೇಗೆ? ಎರಡು ಹಕ್ಕಿಗಳು? ಅವು ಇನ್ನೊಂದು ಜೀರುಂಡೆ ಬಳಿ ಹೋದವು. ನಂತರ ಜೀರುಂಡೆಯ ಗೆಳೆಯನಾದ ಒಂದು ಕಪ್ಪೆಯ ಬಳಿಗೆ ಹೋದವು.

ಆ ಕಪ್ಪೆ ಸಲಹೆ ಹೇಳಿತು: ಜೀರುಂಡೆ, ನೀನು ಆನೆಯ ಕಿವಿಯ ಬಳಿ ಗುಂಯ್ಗುಡಬೇಕು. ಆಗ ಅದು ನಿನ್ನ ಸಂಗೀತ ಕೇಳಿ ಕಣ್ಣು ಮುಚ್ಚುತ್ತದೆ. ಆಗ ನೀನು- ಮರಕುಟಿಗ ಅದರ ಕಣ್ಣುಗಳಿಗೆ ಚುಚ್ಚಬೇಕು. ಆಗ ಅದು ನೋವಿನಿಂದ ಕಣ್ಣುಮುಚ್ಚಿ ನೀರಿಗಾಗಿ ಓಡುತ್ತದೆ. ಆಗ ನಾನು ಒಂದು ಪ್ರಪಾತದ ಅಂಚಿನಲ್ಲಿ ಕುಳಿತು ವಾಟರ್ ವಾಟರ್ ಎಂದು ವಟಗುಟ್ಟುತ್ತೇನೆ. ಕಪ್ಪೆ ಇರುವಲ್ಲಿ ನೀರಿದೆ ಎಂದು ಆನೆ ಅಲ್ಲಿಗೆ ಧಾವಿಸುತ್ತದೆ. ಪ್ರಪಾತಕ್ಕೆ ಬಿದ್ದು ಸಾಯುತ್ತದೆ. ಮುಂದೆ ಹಾಗೆಯೇ ಆಯಿತು. ಚಿಕ್ಕಪುಟ್ಟ ಪ್ರಾಣಿ ಪಕ್ಷಿ, ಕೀಟಗಳು ದೈತ್ಯ ಆನೆಯನ್ನು ಉರುಳಿಸಿದವು.

ಈಗ ನನಗೆ ಈ ಕತೆ ಬರೆಯುವಾಗ “ಇಂಡಿಯಾ” ನೆನಪಿಗೆ ಬರುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆ. ಕೆಲವು ಕೈಕೊಟ್ಟದ್ದರಿಂದ ಇಲ್ಲಿ ಯೋಜನೆ ಸಂಪೂರ್ಣ ಯಶಸ್ವಿ ಆಗಲಿಲ್ಲ. ಈ ಕತೆಗಳು ನಿಮಗೆ ಇಷ್ಟವಾದರೆ, ಬಿಜೆಡಿ, ಬಿಎಸ್ಪಿಯಂತಹ ಕೆಲವು ಪಕ್ಷಗಳು ಈ ಕೂಟವನ್ನು ಸೇರದೇ, ಒಗ್ಗಟ್ಟನ್ನು ತೋರದೇ, ಶತ್ರುವನ್ನು ಗೆಲ್ಲಿಸಿ ನಿರ್ನಾಮವಾದ ಕುರಿತೂ ಕೆಲವು ಕತೆಗಳಿವೆ. ಇವುಗಳನ್ನು ನೀವು ಬಯಸಿದಲ್ಲಿ ಮುಂದೆ ನೋಡೋಣ.

ಬೊಗಸೆಗೆ ದಕ್ಕಿದ್ದು – 26 : ಪಂಚತಂತ್ರ ಮತ್ತು ಸರ್ವಾಧಿಕಾರಿ ಕೇಸರಿ ನರಿ!
ಬೊಗಸೆಗೆ ದಕ್ಕಿದ್ದು…25ರಲ್ಲಿ ನಾನು ಕ್ರಿಸ್ತಪೂರ್ವ 200ರ ಸುಮಾರಿಗೆ ಬರೆಯಲಾದ ಪಂಚತಂತ್ರ ಕತೆಗಳ ಬಗ್ಗೆ ಬರೆದಿದ್ದೆ. ಸಾಮಾಜಿಕ ನಡವಳಿಕೆ ಮತ್ತು ರಾಜನೀತಿಯನ್ನು ಬಹಳಷ್ಟು ಪ್ರಾಣಿಗಳ ಪಾತ್ರಗಳ ಮೂಲಕ ಕಲಿಸುವ ಈ ಕತೆಗಳಲ್ಲಿ ಬಹಳಷ್ಟನ್ನು ಸರ್ವಾಧಿಕಾರಿಗಳು ಮತ್ತವರ ನಾಚಿಕೆಗೆಟ್ಟ ಚೇಲಾಗಳಿಗೆ ಅನ್ವಯಿಸಬಹುದು. ಎರಡುಮೂರು ಕತೆಗಳನ್ನು ಚುಟುಕಾಗಿಯೇ ಹಿಂದೆ ಬರೆದಿದ್ದೆ. ಇಲ್ಲಿಯೂ ಇಂತಹ ಒಂದೆರಡು ಕತೆಗಳನ್ನು ಚುಟುಕಾಗಿಯೇ ನೋಡೋಣ.

ಇದನ್ನೂ ಓದಿ : ಬೊಗಸೆಗೆ ದಕ್ಕಿದ್ದು- 25 : ಪಂಚತಂತ್ರ ಮತ್ತು ಸರ್ವಾಧಿಕಾರಿ ಮಂಕಿ!

ಪಂಚತಂತ್ರದಲ್ಲಿ ಗದ್ಯ ರೂಪದ ಕತೆಗಳಿಗಳಷ್ಟೇ ಪದ್ಯ ರೂಪದ ನೀತಿ, ತಂತ್ರಗಳಿವೆ. ಅವುಗಳಲ್ಲಿ ಒಂದು ಪದ್ಯದ ಸಾರಾಂಶ ಹೀಗಿದೆ: ರಾಜನಿಂದ ತೊಂದರೆಗೊಳಗಾದ ನೌಕರರನು, ರಾಜನನ್ನು ಗೌರವಿಸುತ್ತಿದ್ದವನೂ ಆಗೌರವ ತೋರುತ್ತಾನೆ. ಸೇವೆ ಮಾಡಲೆಂದೇ ಹುಟ್ಟಿದವನೂ, ತರಬೇತಿ ಪಡೆದವನೂ ರಾಜನ ಸರ್ವನಾಶಕ್ಕೆ ಹಂಬಲಿಸುತ್ತಾನೆ!

ಇದು ಮೊದಲಿನಿಂದಲೂ ರಾಜರು, ನವಾಬರು, ಬ್ರಿಟಿಷರ ಅಡಿಯಲ್ಲಿ ನಲುಗಿ, ಗುಲಾಮಿಯನ್ನೇ ರಕ್ತಗತ ಮಾಡಿಕೊಂಡಿರುವ ಭಾರತೀಯರ ಈಗಿನ ಪರಿಸ್ಥಿತಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ. ಸರ್ವಾಧಿಕಾರಿಯಿಂದ ತೀರಾ ತೊಂದರೆಗೆ ಒಳಗಾಗಿರುವ ಅವರಲ್ಲಿ ಅನೇಕರು ಗುಲಾಮಿಯು ಅಭ್ಯಾಸವಾಗಿದ್ದರೂ ಈಗ, ಈ ಸರ್ವಾಧಿಕಾರಿಯ ನಾಶಕ್ಕೆ ಹಂಬಲಿಸುತ್ತಿದ್ದಾರೆ.

ಇನ್ನೊಂದು ಪದ್ಯ ಹೀಗೆ ಹೇಳುತ್ತದೆ: ಅಯೋಗ್ಯ ಮಂತ್ರಿಗಳಿಂದ ಸುತ್ತುವರಿಯಲ್ಪಟ್ಟಿರುವ ನೀಚ ರಾಜನಿಂದ ಪ್ರಜೆಗಳಿಗೆ ಒಳಿತಿಗಿಂತ ಕೆಡುಕೇ ಆಗುವುದು! ಸರ್ವಾಧಿಕಾರಿಯ ಅಡಿಯಲ್ಲಿ ಬದುಕುತ್ತಿರುವ ಜನರಿಗೆ ಒಂದಲ್ಲ ಒಂದು ದಿನ ಇದು ಮನವರಿಕೆಯಾಗಲೇ ಬೇಕು.

ಈಗ- ಪ್ರಜೆಗಳ ಭ್ರಮೆ, ಮೂಢನಂಬಿಕೆ ಮತ್ತು ಭಯದಿಂದಲೇ ಸರ್ವಾಧಿಕಾರಿಗಳು ಹುಟ್ಟಿಕೊಳ್ಳುತ್ತಾರೆ ಮತ್ತು ಒಂದು ದಿನ ಅವರ ಮುಖವಾಡ ಕಳಚಿ ಹೋಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಒಂದು ಕತೆಯನ್ನು ಚುಟುಕಾಗಿ ನೋಡೋಣ:

ನೀಲ ನರಿ
ಒಂದು ಕಾಡಿನಲ್ಲಿ ಒಂದು ಗತಿಗೇಡಿ ನರಿಯು ಅಲೆದಾಡುತ್ತಿತ್ತು. ಒಂದು ದಿನ ಹಸಿವೆಯಿಂದ ತೊಳಲಾಡುತ್ತಿದ್ದ ಅದು ಕತ್ತಲಿನ ವೇಳೆಗೆ ಒಂದು ಪಟ್ಟಣದೊಳಗೆ ತಪ್ಪಿ ಪ್ರವೇಶಿಸಿತು. ಆಗ, ಅಲ್ಲಿನ ನಾಯಿಗಳು ಚೂಪಾದ ಹಲ್ಲುಗಳನ್ನು ತೋರಿಸುತ್ತಾ ನರಿಯ ಬೆನ್ನುಬಿದ್ದವು. ಪುಕ್ಕಲ ನರಿಯು ಸತ್ತೆನೋ ಕೆಟ್ಟೆನೋ ಎಂದು ಬಾಲ ಮುದುಡಿ ಓಡುತ್ತಾ, ಬಟ್ಟೆಗೆ ಬಣ್ಣ ಹಾಕುವವನೊಬ್ಬನ ಮನೆಯ ಅಂಗಳಕ್ಕೆ ನುಗ್ಗಿತು. ಅಲ್ಲಿ ಬಣ್ಣದ ಹಲವು ತೊಟ್ಟಿಗಳಿದ್ದವು. ನರಿಯು ನೀಲಿ ಬಣ್ಣವಿದ್ದ ತೊಟ್ಟಿಗೆ ಬಿದ್ದು ಅಲ್ಲಿಯೇ ಅಡಗಿತು.

ನಂತರ ಹೇಗೋ ತೊಟ್ಟಿಯಿಂದ ಹೊರಬಂದ ನರಿಯು ಕಾಡಿಗೆ ಪರಾರಿಯಾಯಿತು. ನೀಲ ಬಣ್ಣ ಮೆತ್ತಿದ್ದ ನರಿಯನ್ನು ಕಾಡಿನ ಬೇರೆ ಪ್ರಾಣಿಗಳು ಎಂದೂ ಕಂಡಿರಲಿಲ್ಲ. ಇದು ಆಕಾಶದಿಂದಲೇ ಉದುರಿರಬೇಕೆಂದು ನಂಬಿ ಅವು ಓಡಲಾರಂಭಿಸಿದವು. ಆಗ, ಸುಳ್ಳು ಹೇಳುವುದರಲ್ಲಿ ನಿಪುಣನಾದ ಈ ಕಂಕನರಿಯು ಅವುಗಳನ್ನು ಕರೆದು, ಈ ಕಾಡೇ ಅಪಾಯದಲ್ಲಿದೆ, ಕಾಡಿನ ಧರ್ಮ ಅಪಾಯದಲ್ಲಿದೆ, ಅದರ ರಕ್ಷಣೆಗೆ ತನ್ನನ್ನು ದೇವರೇ ಇಲ್ಲಿನ ರಾಜನನ್ನಾಗಿ ನೇಮಿಸಿ ಕಳಿಸಿದ್ದಾನೆ ಎಂದು ಬೊಗಳೆ ಬಿಟ್ಟಿತು. ಉಳಿದ ಮೂರ್ಖ ಪ್ರಾಣಿಗಳು ಅದನ್ನು ನಂಬಿದವು.

ಈ ಕುಟಿಲ ನರಿಯು ಕೆಲವು ಪ್ರಾಣಿಗಳನ್ನು ಬೇರೆಬೇರೆ ಹುದ್ದೆಗಳಿಗೆ ನೇಮಿಸಿ, ತನ್ನದೇ ಜಾತಿಯ ಇತರ ನರಿಗಳನ್ನು ನೆರೆಯ ಕಾಡಿಗೆ ಓಡಿಸಿತು. ಅಂದಿನಿಂದ ಉಳಿದ ಪ್ರಾಣಿಗಳು ಬೇಟೆಯಾಡಿ ತಂದುಕೊಟ್ಟ ಮಾಂಸವನ್ನು ತಿನ್ನುತ್ತಾ, ಈ ಶೋಕಿಲಾಲ ನರಿಯು ಮಹಾರಾಜರನ್ನೂ ಮೀರಿಸುವಂತೆ ಐಷಾರಾಮಿ ಜೀವನ ನಡೆಸಿತು. ಉಳಿದ ಪ್ರಾಣಿಗಳು ಗುಲಾಮರಂತೆ ಅದರ ಸೇವೆ ಮಾಡಿದವು.

ಹೀಗಿರುತ್ತಾ, ಒಂದು ದಿನ ಪಕ್ಕದ (ರಷ್ಯಾ, ಉತ್ತರ ಕೊರಿಯಾ, ಇಸ್ರೇಲ್ ಮುಂತಾದ) ಕಾಡುಗಳಲ್ಲಿ ನರಿಗಳು ಗಟ್ಟಿಯಾಗಿ ಊಳಿಟ್ಟವು. ಈ ನರಿಯ ಕಣ್ಣಿನಿಂದ ಆನಂದಬಾಷ್ಪ ಸುರಿದು, ಅದೂ ಗಟ್ಟಿಯಾಗಿ ಊಳಿಡಲು ಆರಂಭಿಸಿತು. ಆಗ ಇತರ ಪ್ರಾಣಿಗಳಿಗೆ ಇದೊಂದು ನರಿ ಎಂದು ಗೊತ್ತಾಯಿತು. ಸಿಟ್ಟುಗೊಂಡ ಅವು ಅದನ್ನು ಸಿಗಿದು ಕೊಂದವು.

ಈ ಕತೆಯಲ್ಲಿ ನರಿ ನೀಲ ಬಣ್ಣದ ತೊಟ್ಟಿಗೆ ಬಿದ್ದದ್ದಲ್ಲ; ಕೇಸರಿ ಬಣ್ಣದ ತೊಟ್ಟಿಗೆ ಬಿದ್ದದ್ದು ಎಂದು ಊಹಿಸಿದರೆ ಸಾಕು, ಎಲ್ಲವೂ ಅರ್ಥವಾಗುತ್ತದೆ. ಕಾಡಿನ ರಕ್ಷಣೆಗೆ ದೇವರು ರಾಜನಾಗಿ ಮಾಡಿ ಕಳಿಸಿದ್ದು, ಧರ್ಮ ರಕ್ಷಣೆ, ಚಹಾ ಮಾರಿದ್ದು, ಹಿಮಾಲಯ ತಿರುಗಿದ್ದು, ಭಿಕ್ಷೆ ಬೇಡಿದ್ದು, ಮೊಸಳೆ ಹಿಡಿದ ಬೊಗಳೆಗಳೆಲ್ಲಾ ನೆನಪಾಗುತ್ತವೆ. ಈಗ ಈ ಕೇಸರಿ ನರಿ ಬಾಯಿಗೆ ಬಂದಂತೆ ಊಳಿಡುತ್ತಿದೆ. ಪ್ರಜೆಗಳಿಗೆ ಅರ್ಥವಾದೀತೆ?

ಇದೇ ಕತೆಯ ಇನ್ನೊಂದು ಆವೃತ್ತಿಯಲ್ಲಿ ನೀಲ ನರಿಯ ನೀಚತನ ಊಳಿಟ್ಟದ್ದರಿಂದ ಗೊತ್ತಾದುದಲ್ಲ! ಅದು “ಮೋದ”ಲ ದಿನದಿಂದಲೇ ಊಳಿಡುತ್ತಿತ್ತು. ಒಂದು ದಿನ ಕಾಡಿನಲ್ಲಿ ಭಾರೀ ಮಳೆ ಸುರಿಯುತ್ತದೆ. ಆಗ ನರಿಯ ಬಣ್ಣವೆಲ್ಲಾ ಕರಗಿ, ಅದು ಉಳಿದ ಪ್ರಾಣಿಗಳ ಎದುರು ಬತ್ತಲೆಯಾಗಿ ನಿಲ್ಲುತ್ತದೆ. ಅವು ಕೋಪದಿಂದ ಅದನ್ನು ಕೊಲ್ಲುತ್ತವೆ. ಈ ಕಷ್ಟಕಾಲದ ಬಿರುಬೇಸಗೆಯಲ್ಲೂ ಪ್ರಜಾಪ್ರಭುತ್ವದ ಮಹಾಮೋಡದಿಂದ ಚುನಾವಣೆಯ ಮಳೆ ಸುರಿಯುತ್ತಿದೆ. ಕೇಸರಿ ನರಿಯ ಬಣ್ಣ ಕರಗಿ ಅದೂ ಬೆತ್ತಲಾಗಬಹುದೆ?

ಪಂಚತಂತ್ರದಲ್ಲಿ ಸರ್ವಾಧಿಕಾರಿಗಳು ಮತ್ತು ಅವರ ಕುಟಿಲ ಚೇಲಾಗಳು ಮುಗ್ಧ ಜನರನ್ನು, ಜೊತೆಗಾರರನ್ನೇ ಹೇಗೆ ವಂಚಿಸುತ್ತಾರೆ, ಮುಗಿಸಿಬಿಡುತ್ತಾರೆ ಎಂಬುದನ್ನೂ ಸೂಚಿಸುವ ಕತೆಗಳಿವೆ. ಅವುಗಳಲ್ಲಿ ಒಂದನ್ನು ಚುಟುಕಾಗಿ ಹೇಳುತ್ತೇನೆ:

ಮೋಸಹೋದ ಒಂಟೆ
ಒಮ್ಮೆ ಒಬ್ಬ ವರ್ತಕ ಹಲವು ಒಂಟೆಗಳ ಮೇಲೆ ಸರಕುಗಳನ್ನು ಹೇರಿ ಒಂದು ಕಡೆ ಹೋರಟಿದ್ದ. ಕಾಡಿನ ಮಧ್ಯೆ ಒಂದು ಒಂಟೆ ಕುಂಟಲಾರಂಭಿಸಿತು. ಕಾಡಿನ ನಡುವೆ ನಿಧಾನ ಮಾಡುವುದು ಅಪಾಯವಾದುದರಿಂದ, ವರ್ತಕ ಆ ಒಂಟೆಯ ಸರಕುಗಳನ್ನು ಬೇರೆ ಒಂಟೆಗಳಿಗೆ ಹೇರಿ, ಅದನ್ನು ಅಲ್ಲಿಯೇ ಬಿಟ್ಟು ಮುಂದುವರಿದ.

ಆ ಕಾಡಿನಲ್ಲಿ ಒಂದು ಮುದಿ (ಗಡ್ಡದ) ಸಿಂಹವಿತ್ತು. ಅದಕ್ಕೆ ಸಲಹೆಗಾರರಾಗಿ ಒಂದು ಚಿರತೆ, ಒಂದು (ಬೋಡ) ನರಿ, ಒಂದು (ಯೋಗಿ) ಕಾಗೆ ಸಲಹೆಗಾರರಾಗಿ ಇದ್ದರು. ಇವರೆಲ್ಲರೂ ಕುಟಿಲ ಬುದ್ಧಿಯ ನೀಚರು. ಸಿಂಹವು ಭಾರತದ ಕಾಡಿನಲ್ಲಿ (ಚೀತಾದಷ್ಟೇ ಅಪರೂಪವಾದ) ವಿಚಿತ್ರ ರೂಪದ ಒಂಟೆಯನ್ನು ಕಂಡು ಅಚ್ಚರಿಗೊಂಡು ಅದಕ್ಕೆ ಆಶ್ರಯ ನೀಡಿತು.

ಒಂದು ದಿನ ಸಿಂಹವು (ಚೀನಾದ) ಕಾಡಿನ ಆನೆಯೊಂದಿಗೆ ಹೋರಾಡುವಾಗ ಗಾಯಗೊಂಡು ಅದಕ್ಕೆ ಬೇಟೆ ಸಾಧ್ಯವಾಗದೇ ಅದಕ್ಕೆ ಬಾಯಿಬಡಕೊಳ್ಳುವುದು ಮಾತ್ರ ಸಾಧ್ಯವಾಯಿತು. ಇದರಿಂದಾಗಿ ಅದೂ, ಅದು ತಿಂದು ಉಳಿದ ಎಂಜಲನ್ನೇ ತಿಂದು ಅಭ್ಯಾಸವಾಗಿದ್ದ ಚಿರತೆ, (ಬೋಡ) ನರಿ, (ಯೋಗಿ) ಕಾಗೆ ಕೂಡಾ ಉಪವಾಸಬಿದ್ದವು. ಬಡ ಒಂಟೆ ಮಾತ್ರ ಹುಲ್ಲು ತಿಂದು ಆರಾಮವಾಗಿ ಬದುಕಿತ್ತು.

ಆಗ ಈ ಮೂರೂ ಕುಟಿಲ ಸಲಹೆಗಾರರು ಸಿಂಹಕ್ಕೆ ಒಂಟೆಯನ್ನೇ ಕೊಂದು ತಿನ್ನುವ ಸಲಹೆ ನೀಡಿದವು. ಆದರೆ, ರಕ್ಷಣೆಯ ಭರವಸೆ ನೀಡಿದ್ದ ಸಿಂಹವು (ಕಾಡಿನ ಸಾಮಾಜಿಕ ಮಾಧ್ಯಮಗಳಿಗೆ ಅಂಜಿ) ಹಾಗೆ ಮಾಡಲು ಒಪ್ಪಲಿಲ್ಲ. ಆಗ ಅವು- ಒಂಟೆ ತಾನಾಗಿಯೇ ಕಾಡಿಗಾಗಿ ಪ್ರಾಣ ಕೊಡಲು ಒಪ್ಪಿ ಮುಂದೆ ಬಂದರೆ, ನೀವದನ್ನು ಕೊಲ್ಲಬಹುದಲ್ಲವೆ ಎಂದು ಕೇಳಿದವು. ಸಿಂಹಕ್ಕೂ ಅದೇ ಬೇಕಿತ್ತು. ಅದು ಒಪ್ಪಿತು.

ಒಂಟೆಯ ಮುಂದೆ ಕಾಡಿನ ರಾಜ ಅಪಾಯದಲ್ಲಿ, ಕಾಡು ಅಪಾಯದಲ್ಲಿ, ಧರ್ಮ ಅಪಾಯದಲ್ಲಿ ಇತ್ಯಾದಿ ಕೋರಸ್ ಗೀತೆಗಳನ್ನು ಹಾಡಲಾರಂಭಿಸಿದವು. ನಾವು ದೇಶಕ್ಕಾಗಿ ತ್ಯಾಗ ಮಾಡಬೇಕು, ನಮ್ಮ ರಾಜ ಸತ್ತರೆ ನಮಗ್ಯಾರು ಗತಿ? ಈ ಕಾಡು ನಾಶವಾಗುತ್ತದೆ, ಕಾಡು ಅಪಾಯದಲ್ಲಿ! ದೇಶ, ಧರ್ಮ ಅಪಾಯದಲ್ಲಿ! ಒಂಟೆ ಬಹಳ ಇಂಪ್ರೆಸ್ ಆಯಿತು!

ಮೂರೂ ಕುಟಿಲ ಪ್ರಾಣಿಗಳೂ, ನಮ್ಮನ್ನು ಕೊಂದು ತಿಂದು ನಿಮ್ಮ ಜೀವ ಉಳಿಸಿಕೊಂಡು ದೇಶ ರಕ್ಷಿಸಿ, ಧರ್ಮ ರಕ್ಷಿಸಿ ಎಂದು ಸಿಂಹದ ಬಳಿ ಅಂಗಲಾಚಿದವು! (ಗಡ್ಡದ) ಸಿಂಹವು ಒಂದೊಂದು ಕಾರಣ ನೀಡಿ ಅವುಗಳನ್ನು ಕೊಲ್ಲಲು ನಿರಾಕರಿಸಿತು. (ಒಂದೇ ಜಾತಿ, ಒಂದೇ ಧರ್ಮ, ಒಂದೇ ರಾಜ್ಯ ಒಂದೇ ಪಕ್ಷ ಇತ್ಯಾದಿ). ಒಮ್ಮೆಲೇ ಉತ್ತೇಜಿತಗೊಂಡ ಮೂರ್ಖ, ಭಕ್ತ ಒಂಟೆಯಲ್ಲಿ ದೇಶಪ್ರೇಮ, ಧರ್ಮ ಪ್ರೇಮ ಜಾಗೃತವಾಗಿ, ಅದು- ನನ್ನನ್ನೇ ಕೊಂದು ತಿಂದು ನಿಮ್ಮ ಹಸಿವು ನೀಗಿಸಿ, ಬದುಕಿ, ದೇಶ ಮತ್ತು ಧರ್ಮದ ರಕ್ಷಣೆ ಮಾಡಿ ಎಂದು ಹೇಳಿತು. ಅಷ್ಟು ಹೇಳಿದ್ದೇ ತಡ, ಸಿಂಹವು ಅದನ್ನು ಕೊಂದಿತು. ಎಲ್ಲಾ ದುಷ್ಟರು ಮೃಷ್ಟಾನ್ನ ಭೋಜನ ಮಾಡಿದವು, ಗೆಳೆಯರಿಗೂ ಪಾಲು ಕೊಟ್ಟವು!

ಒಂಟೆಗೆ ದೇಶಪ್ರೇಮಿ ಶೌರ್ಯ ಪ್ರಶಸ್ತಿ, ಪರಮವೀರ ಚಕ್ರ, ಪದ್ಮ ಪ್ರಶಸ್ತಿ, ಜ್ಞಾನಪೀಠ ಇತ್ಯಾದಿ ಕೊಡಲಾಯಿತೆ ಎಂಬುದು ನನಗೆ ಗೊತ್ತಿಲ್ಲ! ಅದರ ಮೂರ್ಖತನದ ಬಗ್ಗೆ ಮರುಕವಾಗುತ್ತದೆ. ಗಡ್ಡದ ಸಿಂಹವು ಬಳಸಿ ಎಸೆದವರು ನೆನಪಾಗುತ್ತಾರೆ. ಸೈನಿಕರು ಬಿಸಿಲು, ಮಳೆ, ಚಳಿ ಎನ್ನದೇ ನಿಮಗಾಗಿ ದೇಶ ಕಾಯುತ್ತಿದ್ದಾರೆ, ಗಡ್ಡದ ಮಹಾರಾಜರು ನೆರೆಯ ದೇಶಗಳಿಗೆ ಲಾಲ್ ಆಂಖ್ ತೋರಿಸುತ್ತಾರೆ, ಅವರು ವಿಶ್ವಗುರು, ದೇಶಕ್ಕಾಗಿ ಗ್ಯಾಸ್ ಬಿಡಿ, ಅದು ಬಿಡಿ, ಇದು ಬಿಡಿ, ತ್ಯಾಗ ಮಾಡಿ… ದೇಶಕ್ಕಾಗಿ ಇಷ್ಟೂ ಮಾಡಲು ಸಾಧ್ಯವಿಲ್ಲವೇ?… ಇತ್ಯಾದಿ ನೆನಪಾಗುತ್ತವೆ. ಜೊತೆಗೆ ಕೈಲಾಗದ, ನಾಲಾಯಕ್ ಮುದಿ ಗಡ್ಡದ ಸಿಂಹ ಕೂಡಾ! ನಿಮಗೆ ನೆನಪಾಯಿತೆ?

ಸಾವಿರಾರು ವರ್ಷಗಳಲ್ಲಿ ಪಂಚತಂತ್ರದ ಕತೆಗಳು ಹಲವು ಬದಲಾವಣೆಗಳೊಂದಿಗೆ ಪ್ರಪಂಚದಾದ್ಯಂತ ನೂರಾರು ಆವೃತ್ತಿಗಳು ಚಾಲ್ತಿಯಲ್ಲಿವೆ. ನಾನೂ ಇಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿರುವುದಕ್ಕೆ ಯಾರ ಕ್ಷಮೆಯನ್ನೂ ಕೇಳಬೇಕಾದದ್ದಿಲ್ಲ. ಪಂಚತಂತ್ರದಲ್ಲಿ ಪ್ರಬಲರಾದ ಸರ್ವಾಧಿಕಾರಿಗಳನ್ನು ತೊಲಗಿಸುವುದು ಹೇಗೆ ಎಂಬುದನ್ನು ಸೂಚಿಸುವ ಕತೆಗಳೂ ಕೆಲವಿವೆ. ಅವುಗಳನ್ನು ಮುಂದೆ ನೋಡೋಣ.

ಬೊಗಸೆಗೆ ದಕ್ಕಿದ್ದು – 23 : 1924ರ “ಸರ್ಫರೋಶಿ ಕೀ ತಮನ್ನಾ”ಮತ್ತು 2024ರ ಚುನಾವಣೆ
ನಾವು ಈ 2024ರಲ್ಲಿ ಭಾರತದ ಇತಿಹಾಸಕ್ಕೇ ತಿರುವು ನೀಡಬಲ್ಲ ಮಹಾಚುನಾವಣೆಯನ್ನು ಎದುರಿಸುತ್ತಿರುವಾಗ, ಸರಿಯಾಗಿ ನೂರು ವರ್ಷಗಳ ಹಿಂದೆ 1924ರಲ್ಲಿ ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ಸಾಮಾನ್ಯ ಭಾರತೀಯರನ್ನು ಒಳಗೊಂಡ ಆಧುನಿಕ ಕಾಲದ ಕ್ರಾಂತಿಯ ಕಹಳೆ ಮೊಳಗಿತ್ತು ಎಂಬುದೊಂದು ವಿಶೇಷ. 1857ರಲ್ಲಿ ನಡೆದ “ಪ್ರಥಮ” ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆಯು ಮೂಲತಃ ಬ್ರಿಟಿಷ್ ಸೇನೆಯಲ್ಲಿ ಚಾಕರಿ ಮಾಡುತ್ತಿದ್ದು, ಅಸಮಾಧಾನಗೊಂಡ ಭಾರತೀಯ ಸೈನಿಕರು, ಬ್ರಿಟಿಷರಿಂದ ಅವಮಾನಕ್ಕೀಡಾದ ಚಿಕ್ಕ ಸಂಸ್ಥಾನಗಳ ಅರಸರು, ಪಾಳೆಯಗಾರರು ಮತ್ತು ಜಮೀನ್ದಾರರು ನಡೆಸಿದ ಹೋರಾಟವಾಗಿತ್ತೇ ಹೊರತು, ಅದಕ್ಕೆ ಪ್ರಜಾಪ್ರಭುತ್ವದ ವಾಸನೆಯೇ ಇರಲಿಲ್ಲ. ಆದರೆ, ಇದರಿಂದ ಭಾರತವು ಈಸ್ಟ್ ಇಂಡಿಯಾ ಕಂಪನಿಯ ದಮನಕಾರಿ ಆಡಳಿತದದಿಂದ ಬ್ರಿಟಿಷ್ ರಾಣಿಯ ಸ್ವಲ್ಪ ಮಟ್ಟಿನ ತೋರಿಕೆಗಾದರೂ ಕಾನೂನಿನ ಆಡಳಿತ ಇದ್ದ ರಾಣಿಸತ್ತೆಯ ತೆಕ್ಕೆಗೆ ಬಂತೆಂಬುದು ನಿಜ. ಆದರೆ, ಇದಕ್ಕೆ ಮೊದಲೇ ಟಿಪ್ಪು ಸುಲ್ತಾನನ ಹೋರಾಟ, ಬಿಲ್, ಸಂತಾಲ್, ಗೊಂಡ್ ಮುಂತಾದ ಬುಡಕಟ್ಟು ಜನರ ದಂಗೆಗಳು ನಡೆದಿದ್ದವು. ನಮ್ಮ ದಕ್ಷಿಣ ಕನ್ನಡದಲ್ಲೇ ಕಲ್ಯಾಣಪ್ಪನ ನೇತೃತ್ವದಲ್ಲಿ ಅಮರ ಸುಳ್ಯ ದಂಗೆ ನಡೆದಿತ್ತು. ಇವೂ ಕೂಡಾ ಪ್ರಜಾಪ್ರಭುತ್ವಕ್ಕಾಗಿ ನಡೆದವುಗಳಲ್ಲ. ಆದುದರಿಂದಲೇ 1924ರ ಕ್ರಾಂತಿಯ ಆರಂಭ ಮಹತ್ವ ಪಡೆದಿದೆ.

ಅಂದಿನ ಹೋರಾಟವು ದಮನಕಾರಿ ರಾಣಿಸತ್ತೆಯ ವಿರುದ್ಧ ನಡೆದಿದ್ದರೆ, 2024ರ ಚುನಾವಣೆ ಎಂಬ ಪ್ರಜಾಪ್ರಭುತ್ವವಾದಿ ಹೋರಾಟವು, ಸಂವಿಧಾನವನ್ನೇ ಬದಲಿಸಿ, ಮತ್ತೆ “ಮೇಲ್ಜಾತಿ”ಗಳು ದಣಿಗಳಾಗಿರುವ, ಪ್ರಜಾಪ್ರಭುತ್ವದ ಸೋಗಿನ ಸರ್ವಾಧಿಕಾರಿ ಖ್ವಾಸಿ ರಾಜಸತ್ತೆಗೆ ಮರಳಿ ಕೊಂಡೊಯ್ಯುವ ಬಲಪಂಥೀಯ ಕೋಮುವಾದಿಗಳ ಪ್ರಯತ್ನದ ವಿರುದ್ಧ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ, ನಾವು ನಮ್ಮ ಹಿರಿಯರು ಮಹಾನ್ ತ್ಯಾಗಗಳನ್ನು ಮಾಡಿ ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕೆಂದರೆ, ಹಿಂದಿನ ಹೋರಾಟಗಳಿಂದ ಸ್ವಲ್ಪವಾದರೂ ಸ್ಫೂರ್ತಿ ಪಡೆಯಬೇಕು. ಇಲ್ಲಿ ಹೇಳಿದುದರಲ್ಲಿ ನನ್ನದು ಏನೂ ಇಲ್ಲ. ಇತಿಹಾಸದ ದಾಖಲೆಗಳಲ್ಲಿ ಹೇಳಿರುವುದನ್ನೇ ಇಲ್ಲಿ ಸಂಗ್ರಹಿಸಿ ನೀಡಲಾಗಿದೆ ಅಷ್ಟೇ. (ಅವುಗಳನ್ನು ಬರೆದು ದಾಖಲಿಸಿದವರಿಗೆ ಧನ್ಯವಾದ ಹೇಳಬೇಕು.)

1924ರಲ್ಲಿ ಇಂತದ್ದೇ, ಅಥವಾ ಹೆಚ್ಚು ಆತಂಕಕಾರಿ ಸನ್ನಿವೇಶದಲ್ಲಿ ಪೂರ್ವ ಬಂಗಾಳದ ಹಳ್ಳಿಯೊಂದರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಎಸೋಸಿಯೇಷನ್ ಅಥವಾ ಆರ್ಮಿ(ಎಚ್‌ಆರ್‌ಎ)ಯ ಸ್ಥಾಪನೆಯಾಯಿತು. ಅದರ ಗುರಿಯೆಂದರೆ, ಬ್ರಿಟಿಷ್ ಆಡಳಿತಕ್ಕೆ ಸಶಸ್ತ್ರ ಪ್ರತಿರೋಧ ಒಡ್ಡುವುದು. ಅದರ ಸ್ಥಾಪಕ ಸದಸ್ಯರಲ್ಲಿ ಒಬ್ಬರೆಂದರೆ, “ಸರ್ಫರೋಶಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ/ ದೇಖ್ ನಾ ಹೈ ಜೋರ್ ಕಿತ್‌ನಾ ಬಾಜು-ಎ-ಖಾತಿಲ್‌ ಮೇ ಹೈ” (ಕ್ರಾಂತಿಯ ಹಂಬಲ ಈಗ ನಮ್ಮ ಎದೆಯಲ್ಲಿದೆ/ ಹಂತಕನ ತೋಳುಗಳಲ್ಲಿ ಬಲವೆಷ್ಟಿದೆ ನೋಡಲಿದೆ) ಎಂಬ ಪ್ರಸಿದ್ಧ ಕ್ರಾಂತಿಕಾರಿ ಗೀತೆ ಬರೆದ ರಾಮಪ್ರಸಾದ್ ಬಿಸ್ಮಿಲ್. ಇನ್ನೊಬ್ಬ ಸ್ಥಾಪಕ ಸದಸ್ಯ ಎಂದರೆ, ಸಚೀಂದ್ರನಾಥ್ ಸನ್ಯಾಲ್. ಅವರ ಪ್ರಭಾವದಿಂದಲೇ ಮುಂದೆ 1924ರಲ್ಲಿ ಲಾಹೋರ್ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕ್ರಾಂತಿಕಾರಿ ಭಗತ್ ಸಿಂಗ್, ಅವರ ಶಿಷ್ಯನಾದದ್ದು. ಸನ್ಯಾಲ್ ಅವರು ಆಗಲೇ, ಮುಂದೆ ಕ್ರಾಂತಿಕಾರಿಗಳ ಮಾರ್ಗದರ್ಶಕ ಗ್ರಂಥವಾಗಿಯೇ ಹೋದ “ಬಂಡಿ ಜೀವನಿ” (ಬಂಡಾಯ ಜೀವನ)ಯನ್ನು ಬರೆದಿದ್ದರು. ಎಚ್‌ಆರ್‌ಎಯ ಸ್ಪಷ್ಟ ಉದ್ದೇಶವು ಸಾರ್ವತ್ರಿಕ ವಯಸ್ಕ ಚುನಾವಣೆಯ ಮೂಲಕ ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಎಂಬ ಒಕ್ಕೂಟ ಗಣರಾಜ್ಯದ ಸ್ಥಾಪನೆಯಾಗಿದ್ದು, ಇದು ಕಾರ್ಯರೂಪಕ್ಕೆ ಬಂದಿದ್ದರೆ, ಮುಂದೆ 1947ರಲ್ಲಿ ಭಾರತದ ವಿಭಜನೆಯು ತಪ್ಪುತ್ತಿತ್ತು ಎನ್ನಲಾಗುತ್ತದೆ.

ಸಶಸ್ತ್ರ ಹೋರಾಟವನ್ನು ಹಣವಿಲ್ಲದೇ ನಡೆಸಲು ಸಾಧ್ಯವಿರಲಿಲ್ಲ. ಜನರನ್ನು ನೇಮಕಾತಿ ಮಾಡಿ ಅವರಿಗೆ ತರಬೇತಿ ನೀಡುವುರು, ಶಸ್ತ್ರಾಸ್ತ್ರಗಳ ಖರೀದಿ, ರಾಷ್ಟ್ರೀಯ ಮಟ್ಟದಲ್ಲಿ ಒಂದು ಬಲವಾದ ಪ್ರಚಾರಾಭಿಯಾನದ ಸಂಘಟನೆ ಇತ್ಯಾದಿಗಳಿಗೆಲ್ಲ ಹಣಕಾಸು ಒದಗಿಸಬೇಕಾಗಿತ್ತು.

ಉತ್ತರ ಭಾರತದ ಕ್ರಾಂತಿಕಾರಿಗಳು ಸಂಘಟಿತರಾಗಿ ಮೂಡಿಬಂದವರಲ್ಲಿ ಮೊದಲಿಗರಾಗಿದ್ದು, ರಾಮಪ್ರಸಾದ್ ಬಿಸ್ಮಿಲ್, ಸಚೀಂದ್ರನಾಥ ಸನ್ಯಾಲ್, ಸಚೀಂದ್ರನಾಥ ಭಕ್ಷಿ, ಮತ್ತು ಜಗದೀಶ್ ಚಂದ್ರ ಚಟರ್ಜಿ 1924ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಎಸೋಸಿಯೇಷನ್ ಅಥವಾ ಆರ್ಮಿ (ಎಚ್‌ಆರ್‌ಎ)ಯನ್ನು ಸ್ಥಾಪಿಸಿದರು. 1924ರ ಅಕ್ಟೋಬರ್ ತಿಂಗಳಲ್ಲಿ ಕಾನ್ಪುರದಲ್ಲಿ ಭೇಟಿಯಾದ ಅವರು, ವಸಾಹತುಶಾಹಿ ಆಡಳಿತವನ್ನು ಕಿತ್ತೆಸೆದು ಒಂದು ಪ್ರಜಾಸತ್ತಾತ್ಮಕ ಒಕ್ಕೂಟ ಭಾರತವನ್ನು ಸ್ಥಾಪಿಸುವ ಪ್ರತಿಜ್ಞೆ ಮಾಡಿದರು.

1925ರ ಆಗಸ್ಟ್ 9ರಂದು ಹತ್ತು ಜನರು ಲಕ್ನೋ ಸಮೀಪದ ಕಾಕೋರಿ ಎಂಬ ಒಂದು ಅಜ್ಞಾತ ಹಳ್ಳಿಯ ಬಳಿ ನಂಬರ್ 8 ಡೌನ್ ರೈಲನ್ನು ನಿಲ್ಲಿಸಿ ರೈಲ್ವೇಯ ಅಧಿಕೃತ ಖಜಾನೆಯನ್ನು ದೋಚಿದರು. ಆದರೆ, ಅವರೆಲ್ಲರನ್ನು ಬೇಗನೇ ಬಂಧಿಸಲಾಯಿತು. ಸರಕಾರದ ಪ್ರತೀಕಾರ ತ್ವರಿತ ಮತ್ತು ಕಟುವಾಗಿತ್ತು. ಅಶ್ಫಾಕುಲ್ಲಾ ಖಾನ್, ರಾಮಪ್ರಸಾದ್ ಬಿಸ್ಮಿಲ್, ರೋಷನ್ ಸಿಂಗ್ ಮತ್ತು ರಾಜೇಂದ್ರ ಲಾಹಿರಿ ಸೇರಿದಂತೆ ಐವರನ್ನು ಗಲ್ಲಿಗೇರಿಸಲಾಯಿತು. ನಾಲ್ವರನ್ನು ಅಂಡಮಾನಿನಲ್ಲಿ ಕ್ರೂರ ಜೈಲಿನಲ್ಲಿ ಜೀವನಪರ್ಯಂತ ಶಿಕ್ಷೆ ಅನುಭವಿಸಲು ಕಳುಹಿಸಲಾಯಿತು. ಅವರಲ್ಲಿ ಒಬ್ಬರಾದ ಮಹಾವೀರ್ ಸಿಂಗ್ ನಂತರ ಜೀವಂತವಾಗಿ ಹೊರಬಂದರು. ಉಳಿದ ಹದಿನೇಳು ಮಂದಿಗೆ ದೀರ್ಘಕಾಲದ ಜೈಲುವಾಸ ಕಾದಿತ್ತು. ಅವರಲ್ಲಿ ಒಬ್ಬರಾದ ಚಂದ್ರಶೇಖರ ಅಜಾದ್ ಅಚ್ಚರಿಕಾರಕ ರೀತಿಯಲ್ಲಿ ತಪ್ಪಿಸಿಕೊಂಡರು.

ಕಾರ್ಯವ್ಯೂಹಾತ್ಮಕ ಚಾತುರ್ಯ ಇದ್ದ ಭಗತ್ ಸಿಂಗ್ ಕ್ರಾಂತಿಕಾರಿ ಚಳವಳಿಯನ್ನು ಮತ್ತೆ ಸಕ್ರಿಯಗೊಳಿಸುವ ಅವಕಾಶವನ್ನು ಕಂಡರು. ಹಾಗಾಗಿ 1926ರಲ್ಲಿ ನವ್‌ಜವಾನ್ ಭಾರತ್ ಸಭಾ ಪ್ರಸಿದ್ಧಿಗೆ ಬಂತು. ಅದು ಯುವಜನರನ್ನು ಸಮಾಜವಾದಿ, ಧರ್ಮಾತೀತ ವೇದಿಕೆಯಡಿ- ಕೋಮುವಾದಿ ರಾಜಕೀಯದ ವಿರುದ್ಧ ಒಟ್ಟಿಗೆ‌ ತರುವ ಉದ್ದೇಶ‌ ಹೊಂದಿತ್ತು. ಭಗತ್ ಸಿಂಗ್ ಇಂತಾ ತೀವ್ರ ಕ್ರಮ ಕೈಗೊಳ್ಳಲೇಬೇಕಾಗಿತ್ತು. 1925ರ ಕಾಕೋರಿ ಸಂಚು ಪ್ರಕರಣದ ಯೋಜಕರ ಸೋಲು ಭಾರತದಲ್ಲಿ ಕ್ರಾಂತಿಕಾರಿ ಹೋರಾಟದ ನಾಯಕತ್ವವನ್ನೇ ನಿರ್ಮೂಲನ ಮಾಡಿತ್ತು. ರಾಮಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕುಲ್ಲಾ ಖಾನ್ ಆಗಿನ ಅಲ್ಪಕಾಲದ ಚಳವಳಿಯ ಉಜ್ವಲ ನಾಯಕರಾಗಿದ್ದವರು ಇನ್ನಿಲ್ಲವಾಗಿದ್ದರು. ಒಂದೇ ಏಟಿನಲ್ಲಿ ಭಾರತೀಯ ಕ್ರಾಂತಿಕಾರಿ ಚಳವಳಿಯ ನಾಯಕತ್ವವನ್ನು ತೊಡೆದುಹಾಕಲಾಗಿತ್ತು ಮತ್ತು ಹೊಸ ಪೀಳಿಗೆಯ ಕ್ರಾಂತಿಕಾರಿ ನಾಯಕರ ಅಗತ್ಯವಿತ್ತು. ಎಚ್‌ಆರ್‌ಎಯ ಬೂದಿಯಿಂದ ಕ್ರಾಂತಿಕಾರಿ ಚಳವಳಿಗೆ ಮರುಹುಟ್ಟು ನೀಡಿ ಅದನ್ನು ಮುನ್ನಡೆಸುವ ನಾಯಕರ ಅಗತ್ಯವಿತ್ತು.

ಆರ್ಯಸಮಾಜವಾದಿ ಮತ್ತು ಗದ್ದರ್‌ವಾದಿ ಪ್ರಬಲ ಕ್ರಾಂತಿಕಾರಿ ಹಿನ್ನೆಲೆ ಮತ್ತು ಪರಂಪರೆಯ ಕುಟುಂಬದಿಂದ ಬಂದ ಭಗತ್ ಸಿಂಗ್ ಅವರಿಗೆ ಈ ಗುಣಗಳ ಬಳುವಳಿಯಿತ್ತು. 1919ರಲ್ಲಿ ಹನ್ನೆರಡು ವರ್ಷಗಳ ಹುಡುಗನಾಗಿದ್ದಾಗಲೇ ಅವರು ಅಮೃತಸರದ ಜಲಿಯನ್‌ವಾಲಾ ಬಾಗ್‌ನಲ್ಲಿ ಜನರಲ್ ಡಾಯರ್ ನೂರಾರು ಅಮಾಯಕ ಜನರನ್ನು ಕೊಲ್ಲಿಸಿದ ಹತ್ಯಾಕಾಂಡದಿಂದ ರೋಸಿಹೋಗಿದ್ದರು. ಅನೇಕ ಇತರರಂತೆಯೇ ಅವರು ಗಾಂಧಿಯವರ ಅಸಹಕಾರ ಚಳವಳಿಯ ಜೊತೆ ಸೇರಿದ್ದರು. ಆದರೆ ಗಾಂಧಿಯವರು ಬೇಗನೇ ಈ ಚಳವಳಿಯನ್ನು ಹಿಂತೆಗೆದುಕೊಂಡಿದ್ದರು. ಉಳಿದ ಅನೇಕರಂತೆ ಭಗತ್ ಸಿಂಗ್ ಕೂಡಾ ಅವರ ವಿಷಯದಲ್ಲಿ ಭ್ರಮನಿರಸನಗೊಂಡಿದ್ದರು. 1926ರಲ್ಲಿ ಅವರು ಸ್ಥಾಪಿಸಿದ ನವ್‌ಜವಾನ್ ಭಾರತ್ ಸಭಾ ಮುಂದೆ 1928ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಎಸೋಸಿಯೇಷನ ಅಸ್ಥಿಯಿಂದ ಅಸ್ತಿತ್ವಕ್ಕೆ ಬಂದ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಎಸೋಸಿಯೇಷನ್‌ಗೆ ಒಂದು ಅಸ್ಪಷ್ಟ ಮುನ್ನುಡಿಯಂತಿತ್ತು. ಹಿಂದೂಸ್ತಾನ್ ರಿಪಬ್ಲಿಕನ್ ಎಸೋಸಿಯೇಷನ್‌ನ ಕ್ಷಣಿಕ ಇತಿಹಾಸವು ನಿಧಿ ಸಂಗ್ರಹ ಮತ್ತು ಕಾಕೋರಿ ಘಟನೆಯನ್ನು ಮೀರಿ ಬೆಳೆಯಲು ಸಾಧ್ಯವಾಗಿರಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ನವ್‌ಜವಾನ್ ಭಾರತ್ ಸಭಾದ ಚಳವಳಿಯು ಜಾತಿ, ಧರ್ಮಗಳನ್ನು ಮೀರಿ ಒಂದು ರೀತಿಯ ಅತಿಕ್ರಮಣಕಾರಿ‌ ಸಾಮಾಜಿಕತೆಯನ್ನು ಉತ್ತೇಜಿಸುವ ವ್ಯಕ್ತಿಗಳನ್ನು ಜೊತೆಗೆ ತರಲು ಯಶಸ್ವಿಯಾಗಿತ್ತು.

ಆದುದರಿಂದ 1925ರ ಕಾಕೋರಿ ಸಂಚು ಪ್ರಕರಣವು ಸ್ವಾತಂತ್ರ್ಯ ಚಳವಳಿಗೆ ಒಂದು ನಿರ್ಣಾಯಕ ಕ್ಷಣವಾಗಿತ್ತು. ಇದು ಬಹಳಷ್ಟು ಕಡೆಗಣಿಸಲಾದ ಘಟನೆಯಾಗಿದ್ದರೂ, ಅದಕ್ಕೆ ಅತ್ಯಂತ ಐತಿಹಾಸಿಕ ಮಹತ್ವವಿದೆ. ಏಕೆಂದರೆ, ಅದರ ಕಾರಣದಿಂದ ಎಚ್‌ಆರ್‌ಎಯ ಎಳೆಯ ನಾಯಕರು ಮೃತರಾಗಿದ್ದುದರಿಂದ ಭಗತ್ ಸಿಂಗ್, ಸ್ವಾತಂತ್ರ್ಯ ಹೋರಾಟದ ಉರಿಯುತ್ತಿರುವ ಕುಲುಮೆಗೆ ಧುಮುಕಿದರು.

ಈ ಸಂಘರ್ಷವು ಗಾಂಧಿಯವರ ಸಂಘರ್ಷಕ್ಕಿಂತ ಬೇರೆಯಾಗಿತ್ತು. ಅದು ಕೋಮುವಾದವನ್ನು ಎದುರಿಸಿ ನಿಂತಿತ್ತು. ಜನಾಂಗ, ವರ್ಗ, ಜಾತಿಗಳ ಹಂಗಿಲ್ಲದೆ ಒಂದು ಬಲವಾದ ರಾಷ್ಟ್ರೀಯ ಏಕತೆಯನ್ನು ರೂಪಿಸುವುದಕ್ಕಿಂತಲೂ ತುರ್ತಾದ ಕೆಲಸ ಬೇರೊಂದಿರಲಿಲ್ಲ. ವಸಾಹತುವಾದವು ಒಬ್ಬರನ್ನು ಒಬ್ಬರ ವಿರುದ್ಧ ಎತ್ತಿಕಟ್ಟುವುದರ ಮೂಲಕ ಭಾರತದಂತ ವೈವಿಧ್ಯಮಯ ದೇಶದ ಏಕತೆಗೆ ಅಪಾಯವಾಗಿತ್ತು. ಭಾರತವು ಸ್ವಾತಂತ್ರ್ಯದ ಕಡೆಗೆ ಯಶಸ್ವಿಯಾಗಿ ಮುನ್ನಡೆಯಬೇಕಾದರೆ, ಇದು ಈಗಿನ ಮೊದಲ ಆದ್ಯತೆಯಾಗಿತ್ತು. ಬ್ರಿಟಿಷರು ಆಗ ಮಾಡಿದುದನ್ನೇ ಈಗಿನ ಪ್ರಭುಗಳು ಈಗ ಮಾಡುತ್ತಿದ್ದಾರೆ ಎಂಬುದನ್ನು ನಾವು ನೆನಪಿಡಬೇಕು. ಆಗಿನ ಕ್ರಾಂತಿಕಾರಿಗಳು ಅಗತ್ಯವೆಂದು ಕಂಡುಕೊಂಡ ಜಾತ್ಯತೀತ ಏಕತೆಯೇ ಇಂದಿನ ಅಗತ್ಯ ಕೂಡಾ.

1927ರಲ್ಲಿ ತನ್ನನ್ನು ಗಲ್ಲಿಗೇರಿಸುವುದಕ್ಕೆ ಕೇವಲ ಮೂರು ದಿನಗಳಿಗೆ ಮೊದಲು ಅಶ್ಫಾಕುಲ್ಲಾ ಖಾನ್ ಭಾರತದಲ್ಲಿ ಕೋಮುವಾದದ ಬೆಳವಣಿಗೆಯ ಕುರಿತು ಎಚ್ಚರಿಸುತ್ತಾ, ತನ್ನ ದೇಶವಾಸಿಗಳನ್ನುದ್ದೇಶಿಸಿ ಬರೆದ ಬಹಿರಂಗ ಪತ್ರಕ್ಕಿಂತ ಚೆನ್ನಾಗಿ ಬೇರೇನೂ ಇದನ್ನು ತೋರಿಸಿಕೊಡಲಾರದು. ಅವರು ತಬ್ಲೀಗ್ ಮತ್ತು ಶುದ್ಧಿ ಚಳವಳಿಗಳನ್ನು ಖಂಡಿಸಿದರು. “ಹಿಂದೂಗಳು ಮತ್ತು ಮುಸ್ಲಿಮರು ಜೊತೆಯಾಗಿ ಬದುಕಲು ಕಲಿಯಬೇಕು; ಇಲ್ಲದಿದ್ದರೆ, ಚಾಕರಿಯ ಗುಲಾಮಗಿರಿಯ ಸಂಕೋಲೆಯಿಂದ ಕಳಚಿಕೊಳ್ಳಲು ಅವರು ವಿಫಲವಾಗುವರು. ಅವರು ಇದರಲ್ಲಿ ವಿಫಲರಾದರೆ, ಪರಿಣಾಮವು ಋಣಾತ್ಮಕವಾಗಿ ಕಟುವಾಗಿರುವುದು: ಏಳು ಕೋಟಿ ಮುಸ್ಲಿಮರನ್ನು ಶುದ್ಧೀಕರಿಸುವುದು ಅಸಾಧ್ಯ‌. ಅದೇ ರೀತಿಯಲ್ಲಿ ಇದು ಸ್ವಾತಂತ್ರ್ಯಕ್ಕಾಗಿನ ಹೋರಾಟದ ಮೇಲೆ ಪರಿಣಾಮ ಬೀರುವುದು. ಇಪ್ಪತ್ತೈದು ಕೋಟಿ ಹಿಂದೂಗಳನ್ನು ಇಸ್ಲಾಮಿಗೆ ಮತಾಂತರ ಮಾಡಬಹುದು ಎಂದು ಯೋಚಿಸುವುದೇ ಅಸಂಬದ್ಧ. ಆದರೆ, ಹೌದು. ನಾವೆಲ್ಲರೂ ಗುಲಾಮಗಿರಿಯ ಸಂಕೋಲೆಯನ್ನು ನಮ್ಮ ಕೊರಳ ಸುತ್ತ ಹಾಕಿಕೊಳ್ಳುವುದು ಸುಲಭ” ಎಂಬುದವರ ಸುಸ್ಪಷ್ಟ ಮಾತುಗಳಾಗಿದ್ದವು.

ಇದೇ ಮಾತುಗಳನ್ನು ಮಹಾವೀರ್ ಸಿಂಗ್ ಅವರು ಕೂಡಾ ಅಂಡಮಾನಿನ ಜೈಲಿನಲ್ಲಿ ಜೀವನ ಪರ್ಯಂತದ ಸಜೆಯನ್ನು ಎದುರು ನೋಡುತ್ತಿದ್ದಾಗ ತನ್ನ ತಂದೆಯವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ:

“ಸಮಾಜ ಎಂದರೆ ಆರ್ಯ ಸಮಾಜ ಅಥವಾ ಇನ್ಯಾವುದೇ ಸಂಕುಚಿತ ಸಮಾಜವೆಂದು ನನ್ನ ಅರ್ಥವಲ್ಲ. ಸಮಾಜ ಎಂದರೆ, ಸಾಮಾನ್ಯ ಜನರ ಸಮಾಜ. ಯಾಕೆಂದರೆ, ಈ ಧಾರ್ಮಿಕ ಸಮಾಜಗಳು, ತಮ್ಮ ಸಮೀಪದೃಷ್ಟಿಯ ಕಾರಣದಿಂದಾಗಿ ನನಗೆ ಅರ್ಥಹೀನ. ಮೇಲಾಗಿ, ನಾನು ಎಲ್ಲಾ ಧರ್ಮಗಳಿಂದ ದೂರ ಉಳಿಯಲು ಬಯಸುತ್ತೇನೆ; ಏಕೆಂದರೆ, ಅವು ಸಂಕುಚಿತ, ಸ್ವಯಂಕೇಂದ್ರಿಯವಾಗಿವೆ ಮತ್ತು ಅನ್ಯಾಯವನ್ನು ಆಧರಿಸಿವೆ ಹಾಗೂ ತಮ್ಮ ಹಾಗೆಯೇ ಇತರರೂ ಮಾಡಬೇಕೆಂದು ಬಯಸುತ್ತವೆ. ಮಾನವ ಮತ್ತು ಸಮಾಜಕ್ಕೆ ಆತ್ಯಂತ ಹೆಚ್ಚು ಅನುಕೂಲ ತಂದುಕೊಡುವ ತತ್ವವೆಂದು ನಾನು ನಂಬಿರುವುದೆಂದರೆ: ಮಾನವ ಸಂಬಂಧಗಳು- ಯಾವುದೇ ಜಾತಿ, ಧರ್ಮ, ಬಣ್ಣ ಮತ್ತು ಹಣದ ತಾರತಮ್ಯದ ಮೇಲೆ ಆಧರಿಸಿರಬಾರದು.”

ಭಾರತವು ಸ್ವಾತಂತ್ರ್ಯವನ್ನು ಪಡೆಯುವುದರ ಮೂಲಕ, ಒಂದು ಸ್ವರೂಪದ ದಮನಕಾರಿ ಆಡಳಿತದ ಬದಲು ಇನ್ನೊಂದು ಸ್ವರೂಪದ ದಮನಕಾರಿ ಆಡಳಿತವನ್ನು ತರಬಾರದು ಎಂದು ಅಶ್ಫಾಕುಲ್ಲಾ ಖಾನ್ ಸಾಕಷ್ಟು ಸ್ಪಷ್ಟಪಡಿಸಿದ್ದಾರೆ. ಇದೇ ಅಪಾಯ ಇಂದಿನ ಸಂದರ್ಭದಲ್ಲಿ ನಮಗೆ ಎದುರಾಗಿರುವುದು.

“ಪರಕೀಯರ ಆಡಳಿತವು ದುಷ್ಟತನ ಎಂದು ನಾನು ಪರಿಗಣಿಸುತ್ತೇನೆ. ಅದೇ ಹೊತ್ತಿಗೆ ದುರ್ಬಲರಿಗೆ ಹಕ್ಕುಗಳನ್ನು ನಿರಾಕರಿಸಲಾಗುವ ಯಾವುದೇ ಪ್ರಜಾಸತ್ತಾತ್ಮಕ ಭಾರತೀಯ ಆಡಳಿತವನ್ನು ನಾನು ದ್ವೇಷಿಸುತ್ತೇನೆ: ಅದು ಶ್ರೀಮಂತರು ಮತ್ತು ಜಮೀನುದಾರರ ರಚನೆಯಾಗಿದ್ದರೆ ಅಥವಾ ಅದರಲ್ಲಿ ರೈತರು ಮತ್ತು ಕಾರ್ಮಿಕರ ಭಾಗವಹಿಸುವಿಕೆ ಇಲ್ಲದಿದ್ದರೆ ಅಥವಾ ಸರಕಾರಿ ಕಾನೂನುಗಳು ಅಸಮಾನತೆ ಮತ್ತು ಅಸಮಾನ ವ್ಯವಹಾರದ ಮೇಲೆ ಆಧರಿಸಿದ್ದರೆ…” ಇದುವೇ ಇಂದಿನ ಸಂದರ್ಭದಲ್ಲಿ ನಮ್ಮ ಮಾತೂ ಆಗಬೇಕು ಅಲ್ಲವೇ?!

(ಕ್ರಾಂತಿಕಾರಿಗಳು 1925ರ ಸುತ್ತಮುತ್ತ ಕೋಮುವಾದ ವಿರೋಧಿ ಸಂಘಟನೆಯನ್ನು ರೂಪಿಸಿಕೊಳ್ಳುತ್ತಿರುವಾಗಲೇ ಹಿಂದೂ ಕೋಮುವಾದಿಗಳು ಆರೆಸ್ಸೆಸ್ಸನ್ನು ಸ್ಥಾಪಿಸಿದರು. ಈ ಕುರಿತು ಇನ್ನಷ್ಟು ಮುಂದಿನ ಅಂಕಣದಲ್ಲಿ)

“ಎಲ್ಲರ ಕನ್ನಡ” ಎಂದರೆ ಯಾವ ಕನ್ನಡ? : “ಬೊಗಸೆಗೆ ದಕ್ಕಿದ್ದು… 21
ಕನ್ನಡದ ಹೆಗಲೇರಿರುವ ಸಂಸ್ಕೃತವನ್ನು ಕೆಳಗಿಳಿಸಬೇಕು; ಹಲವಾರು ಸಂಸ್ಕೃತ ಪದಗಳನ್ನು ಗುಡಿಸಿಹಾಕಿ ಭಾಷೆಯನ್ನು ಸರಳಗೊಳಿಸಬೇಕು ಎಂಬ ಕುರಿತು ಎರಡು ಮಾತಿಲ್ಲ. ಅದರೆ, ಕೆಲವರು ಮುನ್ನೆಲೆಗೆ ತರಲು ಹೆಣಗುತ್ತಿರುವ ಕನ್ನಡದ ರೂಪವನ್ನು “ಎಲ್ಲರ ಕನ್ನಡ” ಎನ್ನಲು ಸಾಧ್ಯವೆ? ಎಲ್ಲರು ಎಂದರೆ ಯಾರ್ಯಾರು? ಈ ಕಲ್ಪನೆಯಲ್ಲೇ ತಪ್ಪಿದೆಯೆ?

ಸಂಸ್ಕೃತವೇ ತುಂಬಿರುವ “ಶಿಷ್ಟ” ಕನ್ನಡವನ್ನು ಸರಳಗೊಳಿಸಿ, ಸಂಸ್ಕೃತದ ಬದಲು ಕನ್ನಡ ಪದಗಳನ್ನು ಬಳಸಿ ಬರೆಯುವ ಒಂದು ಕನ್ನಡವನ್ನು ಕೆಲವರು ಚಾಲ್ತಿಗೆ ತರುತ್ತಿದ್ದಾರೆ. ಜೊತೆಗೆ ಮಹಾಪ್ರಾಣಗಳು, ಅನುಸ್ವಾರ, ವಿಸರ್ಗ, (ಅಂ, ದುಃ ಇತ್ಯಾದಿ), ಐ, ಔ ಇತ್ಯಾದಿಗಳನ್ನು ಬಿಟ್ಟು, ಬರೆಯುವ ರೂಪವನ್ನು ಬದಲಿಸಿ ತಮಗೆ ಸರಿಕಂಡಂತೆ ಕನ್ನಡ ಬರೆಯಲು ಆರಂಭಿಸಿದ್ದಾರೆ. ಕೆಲವರು ಯಾರಿಗೂ ಪರಿಚಯವಿಲ್ಲದ, ಸತ್ತುಹೋದ ಹಳೆಗನ್ನಡ ಪದಗಳನ್ನೂ, ಸ್ಥಳೀಯವಾಗಿ ಮಾತ್ರ ಬಳಕೆಯಲ್ಲಿರುವ ಆಡುನುಡಿಗಳನ್ನೂ ಬಳಸುತ್ತಿದ್ದಾರೆ. ಇದು ಸಾಮಾನ್ಯವಾಗಿ ಕಂಡುಬರುತ್ತಿರುವುದು ಇಲೆಕ್ಟ್ರಾನಿಕ್ ಸಾಮಾಜಿಕ ಮಾಧ್ಯಮಗಳಲ್ಲಿ. ಇದನ್ನು ಅವರು “ಎಲ್ಲರ ಕನ್ನಡ” ಎಂದು ಕರೆಯುತ್ತಿದ್ದಾರೆ. ಹಳೆರೀತಿಯಲ್ಲಿ ಅಂದರೆ, ಈಗ ಚಾಲ್ತಿಯಲ್ಲಿರುವ ರೀತಿಯಲ್ಲಿ ಬರೆಯುತ್ತಿರುವವರಿಗೆ ಇದನ್ನು ಓದುವುದು ಬರೆಯುವುದು ಸ್ವಲ್ಪ ಕಷ್ಟವಾಗುತ್ತಿದೆ. ಅದರಲ್ಲೂ ಕನ್ನಡ ತಾಯಿನುಡಿಯಲ್ಲದ, ಶಾಲೆಯಲ್ಲಿ ಕನ್ನಡ ಕಲಿತವರಿಗೆ. ಹಾಗಿರುವಾಗ, ಇದನ್ನು ಕನ್ನಡದ ಇನ್ನೊಂದು ರೂಪ ಎಂದು ಸೇರಿಸಿಕೊಳ್ಳಬಹುದೇ ಹೊರತು, ಇದು “ಎಲ್ಲರ ಕನ್ನಡ” ಹೇಗಾಗುತ್ತದೆ? ನಾವು ಕನ್ನಡವನ್ನು ಸಂಸ್ಕೃತದ ಬಿಗಿ ಹಿಡಿತದಿಂದ ಬಿಡಿಸಿ, ಅದನ್ನು ಸರಳಗೊಳಿಸಬೇಕು ನಿಜ; ಆದರೆ, ಹೀಗೊಂದು “ಎಲ್ಲರ ಕನ್ನಡ” ಇರಲು ಸಾಧ್ಯವೆ?

ಉದಾಹರಣೆಗೆ ಮಾವನ್ನೇ ತೆಗೆದುಕೊಳ್ಳೋಣ. ಮಾವಿನಲ್ಲಿ ನೆಕ್ಕರೆ, ಮುಂಡಪ್ಪ, ಅಲ್ಫೋನ್ಸೊ, ನೀಲಂ, ಆಪೂಸು, ರಸಪುರಿ, ತೋತಾಪುರಿ ಎಂದು ಸಾವಿರ ಸಾವಿರ ಜಾತಿಗಳಿವೆ. ಹೇಳಲು ಹೆಸರೇ ಇಲ್ಲದ, ಹುಳಿ, ಸಿಹಿ, ವಾಸನೆ, ಘಾಟು, ಸೊನೆಯ ಕಾಟುಮಾವುಗಳೂ ಇವೆ. ಬಣ್ಣ, ಗಾತ್ರ, ಆಕಾರ, ರುಚಿ, ವಾಸನೆ, ಒಗರು ಇವಲ್ಲವೂ ಒಂದಕ್ಕಿಂತ ಒಂದು ಬೇರೆಯೇ! ಇವುಗಳಲ್ಲಿ ಯಾವುದು ಎಲ್ಲರ ಮಾವು? ತೊನ್ನೂರು, ಕಜೆ, ಜಯ, ಐಆರ್, ದೀರ್ಸಾಲೆ, ಗಂಧಸಾಲೆ, ಬಾಸ್‌ಮತಿ… ಜೊತೆಗೆ ಬೆಳ್ತಿಗೆ, ಕುಚ್ಚಲು, ಅರೆ ಬೆಳ್ತಿಗೆ ಹೀಗೆ… ಯಾವುದು ಎಲ್ಲರ ಅಕ್ಕಿ, ಎಲ್ಲರ ಭತ್ತ?

ಯಾವುದೇ ಭಾಷೆಯೂ ಅಷ್ಟೇ. ಅದು ಪ್ರದೇಶದಿಂದ ಪ್ರದೇಶಕ್ಕೆ, ಕೆಲವೇ ಮೈಲಿಗಳ ಅಂತರದಲ್ಲಿ ಕೊಂಚಕೊಂಚವೇ ಬದಲಾಗುತ್ತಾ, ಬದಲಾಗುತ್ತಾ ಎರಡು ದೂರ ಪ್ರದೇಶಗಳ ಮಾತುಗಳು ಒಬ್ಬರಿನ್ನೊಬ್ಬರಿಗೆ ಅರ್ಥವೇ ಆಗದಿರುವುದನ್ನು ನೋಡುತ್ತೇವೆ. ಅದರ ರಾಗ, ಲಯ, ಬಳಸುವ ಪದಗಳು, ಅವುಗಳ ಬಳಕೆಯ ಕ್ರಮ, ವಾಕ್ಯ ರಚನೆ ಅಷ್ಟೇ ಏಕೆ, ಮೂಲ ವ್ಯಾಕರಣವೂ ಎದ್ದುಕಾಣುವಷ್ಟು ಬದಲಾಗಿರುತ್ತದೆ. ಕೆಲವೊಮ್ಮೆ ಒಂದು ಕಡೆಯಲ್ಲಿ ಸಾಮಾನ್ಯವಾಗಿ ಬಳಸುವ ಪದಗಳು ಇನ್ನೊಂದು ಕಡೆಯಲ್ಲಿ ಅಶ್ಲೀಲ, ಒರಟು ಅರ್ಥವನ್ನೂ ನೀಡಬಹುದು. ಜೊತೆಗೆ ಒಂದು ಪ್ರದೇಶದ ಭೌಗೋಳಿಕ ಪರಿಸರವು, ಅಲ್ಲಿನ ನಿತ್ಯಜೀವನದ ವ್ಯವಹಾರಗಳು ಅದರದ್ದೇ ಆದ ಪದಗಳ ಕಣಜವನ್ನೇ ಹುಟ್ಟುಹಾಕಿರಬಹುದು. ಮಲೆನಾಡಿನ, ಕರಾವಳಿ, ಬಯಲು ಸೀಮೆಯ- ಕಾಡು, ಕಡಲು, ಬಯಲುಗಳೇ ತಮ್ಮದೇ ಆದ ನೂರಾರು ಪದಗಳನ್ನು ಹುಟ್ಟುಹಾಕಿವೆ.

ಅದೇ ರೀತಿಯಲ್ಲಿ ಗಡಿಪ್ರದೇಶಗಳಲ್ಲಿ ಕನ್ನಡವು ನೆರೆಯ ಭಾಷೆಗಳಿಂದ ಕೊಡುಕೊಳ್ಳುವಿಕೆಯನ್ನು ನಡೆಸುತ್ತಲೇ ಇವೆ. ಅವುಗಳ ಪ್ರಭಾವ ದಟ್ಟವಾಗಿ ಕಾಣಬಹುದು. ಉದಾಹರಣೆಗ ಶೈಲಿ ಮತ್ತು ಪದಬಳಕೆಯಿಂದಲೇ ಕಾಸರಗೋಡಿನ ಕನ್ನಡ ಪತ್ರಕರ್ತರನ್ನು ಗುರುತಿಸಬಹುದು. ಅದೇ ರೀತಿಯಲ್ಲಿ ತುಳು, ಕೊಂಕಣಿ, ಬ್ಯಾರಿ, ಅರೆಬಾಸೆ, ಕುಂದಗನ್ನಡ, ಹವ್ಯಕ, ಮಲಯಾಳಂ, ಮುಂಬಯಿ ಸಂಪರ್ಕದ ಹಿಂದಿ, ಇಂಗ್ಲೀಶ್ ಹೀಗೆ ನಿತ್ಯವೂ ಹಲವು ಭಾಷೆಗಳು ಕಿವಿಗೆ ಬೀಳುವ ದಕ್ಷಿಣ ಕರಾವಳಿಯ ಜಿಲ್ಲೆಗಳಲ್ಲಿ ಕನ್ನಡದ ಮೇಲೆ ಈ ಭಾಷೆಗಳ ಪ್ರಭಾವ ಎದ್ದು ಕಾಣುತ್ತದೆ. ಮೇಲಾಗಿ ಇಲ್ಲಿ ಕನ್ನಡ ಓದು, ಬರಹ, ಮಾತುಬಲ್ಲವರು ಬಳಸುವ ಕನ್ನಡವು ಹೆಚ್ಚಾಗಿ ಶಾಲೆಗಳಲ್ಲಿ ಕಲಿಸುವ ಸಂಸ್ಕೃತ ತುಂಬಿದ ಪುಸ್ತಕದ ಕನ್ನಡದ ಜೊತೆಗೆಯೇ ತನ್ನದೇ ಆದ ಪ್ರಾದೇಶಿಕ ಸೊಗಡನ್ನು ಬೆಳೆಸಿಕೊಂಡಿದೆ ಎಂಬುದನ್ನು ಗುರುತಿಸಬೇಕು. ಇಲ್ಲಿ ಬಳಸುವ ಕನ್ನಡ ಪದಗಳು ಬೇರೆ ಕಡೆಗಳವರಿಗೆ ಅರ್ಥವಾಗದು. (ಉದಾ: ಅವನದ್ದೆಂತ ಸಾವು ಮಾರ್ರೆ? ಒಟ್ರಾಸಿ ಮಾತಾಡ್ತಾನೆ.) ಈ ಒಟ್ರಾಸಿ ಕಲಬುರ್ಗಿಯವರಿಗೆ ಗೊತ್ತಾಗುವುದೆ?

ಈ ಭಾಷೆಗಳು ಕನ್ನಡದ ಉಚ್ಚಾರಣೆಯಲ್ಲಿಯೂ ಪ್ರಭಾವ ಬೀರಿರುವುದನ್ನು ನೋಡಬಹುದು. “ಎಲ್ಲರ ಕನ್ನಡ”ದ ಪ್ರತಿಪಾದಕರ ನ್ಯಾಯಯುತ ದೂರೆಂದರೆ, ಹಳ್ಳಿಗರಿಗೆ ಮಹಾಪ್ರಾಣ ಮತ್ತು ಕೆಲವು ಅಕ್ಷರಗಳನ್ನು ಉಚ್ಚರಿಸಲು ಆಗುವುದಿಲ್ಲ ಎಂಬುದು. ಬ್ರಾಹ್ಮಣರ ತುಳು ಬಿಟ್ಟರೆ “ಳ” ಅಕ್ಷರವನ್ನೇ ಬಳಸದ ಹೆಚ್ಚಿನ ತುಳುವರಿಗೆ “ಳ” ಉಚ್ಚರಿಸಲು ಬರುವುದಿಲ್ಲ. ಆವರು ಮಾತಿನಲ್ಲಿ “ಲ” ಬಳಸುತ್ತಾರೆ. ಅದೇ ರೀತಿ “ಶ”ದ ಬದಲು “ಸ”, “ಣ”ದ ಬದಲು “ನ” ಬಳಸುವುದು ಹೆಚ್ಚು. ಅದೇ ರೀತಿಯಲ್ಲಿ, ಬ್ಯಾರಿಗಳು ಅದಲುಬದಲು ಎಂಬಂತೆ “ಲ”ದ ಬದಲು “ಳ” ಮತ್ತು “ಸ”ದ ಬದಲು “ಶ”, “ನ”ದ ಬದಲು “ಣ” ಬಳಸುವುದನ್ನು ಹೆಚ್ಚಾಗಿ ಕಾಣಬಹುದು. ಅಲ್ಲದೇ ಅವರಲ್ಲಿ ಮಹಾಪ್ರಾಣದ ಅನಗತ್ಯ ಬಳಕೆ ಸ್ವಲ್ಪ ಹೆಚ್ಚು. ಮಲಯಾಳಂ ಪ್ರಭಾವ ಇದಕ್ಕೆ ಕಾರಣವಿರಬಹುದು.

ಕೊಂಕಣಿಗಳು ಸ್ವಲ್ಪ ಅತಿ ಎನಿಸುವಷ್ಟು ಪುಸ್ತಕದ ಕನ್ನಡ ಮಾತನಾಡುತ್ತಾರೆ. ಜಿಎಸ್‌ಬಿ, ಸಾರಸ್ವತರು ಮತ್ತು ಕ್ರೈಸ್ತರು ಮಾತಾಡುವ ಕೊಂಕಣಿಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ, ಅದರ ದ್ರಾವಿಡವಲ್ಲದ ವ್ಯಾಕರಣದ ಪ್ರಭಾವ ಅವರ ಕನ್ನಡದ ಮೇಲೂ ಆಗುತ್ತದೆ. ಉದಾರಣೆಗೆ, ಕೊಂಕಣಿಯ ವಿಭಕ್ತಿಗಳಲ್ಲಿ “ಅವನಿಗೆ” ಮತ್ತು “ಅವನನ್ನು” ಎಂಬ ವ್ಯತ್ಯಾಸವಿಲ್ಲ. ಅದುದರಿಂದ ಅವರು “ಅವನನ್ನು ಕರೆ’ ಎಂದು ಹೇಳುವುದಿಲ್ಲ; “ಅವನಿಗೆ ಕರೆ” ಎಂದೇ ಹೇಳುತ್ತಾರೆ. (ಸಾಮಾನ್ಯವಾಗಿ ಅವನನ್ನು ಕರೆ, ಅವನಿಗೆ ಕೊಡು ಎಂದಿರಬೇಕಲ್ಲವೆ?) ಮರಾಠಿ ಪ್ರಭಾವದ ಪ್ರದೇಶಗಳಲ್ಲಿಯೂ ಇದನ್ನೇ ಗಮನಿಸಬಹುದು. ತಮಿಳು, ತೆಲುಗು ಗಡಿಗಳಲ್ಲೂ ಇಂತಹ ಪ್ರಭಾವ ಇದೆ. ಉದಾಹರಣೆಗೆ “ಕೇಳಿದೆ” ಎಂದು ಹೇಳಬಹುದಾದಲ್ಲಿ “ಕೇಳಲ್ಪಟ್ಟೆ” ಎಂಬ ಪ್ರಯೋಗವನ್ನು ನೋಡಬಹುದು.

ಇಷ್ಟವಾದ ಪುಸ್ತಕಗಳನ್ನು ಮತ್ತೆ ಮತ್ತೆ ಓದುವ ಪರಿಪಾಟದಂತೆ ಇತ್ತೀಚೆಗೆ ಮೂರು ಕನ್ನಡ ಪುಸ್ತಕಗಳನ್ನು ಓದಿದೆ. ಆದರೆ, ಈ ಬಾರಿ ಓದಿದ್ದು ಮಾತ್ರ ಸರಳಗನ್ನಡ ಮತ್ತು ಪ್ರಾದೇಶಿಕ ಭಾಷಾ ವೈವಿಧ್ಯವನ್ನು ಗಮನದಲ್ಲಿ ಇಟ್ಟುಕೊಂಡು. ಅವುಗಳಲ್ಲಿ ಒಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ “ಪಂಪ ಭಾರತ” ಅಥವಾ “ವಿಕ್ರಮಾರ್ಜುನ ವಿಜಯಂ”. ಇದರ ಜೊತೆಗೆ ಅನಂತ ರಂಗಾಚಾರ್ ಅವರ ಸಂಸ್ಕೃತಮಯ ಕನ್ನಡ ವಿವರಣೆಯಿದೆ.

ಕನ್ನಡದ ಆದಿಕವಿ ಎನ್ನಲಾಗುವ ಪಂಪನ ಕಾವ್ಯದಲ್ಲೇ ಹೇರಳವಾಗಿ ಸಂಸ್ಕೃತ ತುಂಬಿರುವಾಗ ಮೂಲಕನ್ನಡ ಹುಡುಕಲು ನಾವು ಎಷ್ಟು ಹಿಂದೆ ಹೋಗಬೇಕಾದೀತು? ಅವನೇ ತನ್ನನ್ನು ಕವಿತಾಗುಣಾರ್ಣವನೆಂದು ಸಂಸ್ಕೃತದಲ್ಲಿಯೇ ಹೇಳಿಕೊಳ್ಳುತ್ತಾನೆ. ಅವನ ಅಧ್ಯಾಯಗಳೂ ಪ್ರಥಮಾಶ್ವಾಸಂ, ದ್ವಿತೀಯ… ಎಂದು ಸಂಸ್ಕತದಲ್ಲಿಯೇ ಆರಂಭವಾಗುತ್ತದೆ. ಪಂಪನು “ಉತ್ತಮವಾದ ಕಾವ್ಯದ ತಿರುಳನ್ನೂ, ತನ್ನ ಕಾವ್ಯದ ಮೂಲತತ್ವವನ್ನೂ ಶ್ರುತಪಡಿಸಿರುವುದು” ಹೀಗೆ:
ಮೃದು ಪದಗತಿಯಿಂ ರಸಭಾ
ವದ ಪೆರ್ಚಿಂ ಪಣ್ಯವನಿತೆಯೊಲ್ ಕೃತಿಸೌಂದ
ರ್ಯದ ಚಾತುರ್ಯದ ಕಣಿಯಿನೆ
ವಿದಗ್ಧಬುಧಜನಮನ್, ಆಲೆಯಲೇವೇಡಾ

ಈ ಕನ್ನಡ ನಿಮಗೇನಾದರೂ ಅರ್ಥವಾಯಿತೆ? ಪಂಪ, ರನ್ನ, ಕುಮಾರವ್ಯಾಸ, ರಾಘವಾಂಕ… ಹೀಗೆ… ಹಳೆಗನ್ನಡ ಕಾವ್ಯಗಳು ಕುತೂಹಲಕಾರಿಯಾದರೂ, ಈಗ ಮರೆಯಾಗಿರುವ ಕನ್ನಡ ಪದಗಳನ್ನು ಹೊಂದಿವೆಯಾದರೂ, ಸಂಸ್ಕೃತಮಯ ವಿವರಣೆಗಳ ಜೊತೆ, ಬದಿಯಲ್ಲಿ ಡಿಕ್ಷನರಿ ಇಟ್ಟುಕೊಂಡು ಅರ್ಥಮಾಡಿಕೊಳ್ಳಬೇಕಾದ ಕಾವ್ಯಗಳಿಂದ ಕನ್ನಡದ ಪದಗಳನ್ನು ಹೆಕ್ಕಿ ತಂದು, ಸಂಸ್ಕೃತ ಪದಗಳ ಜಾಗದಲ್ಲಿ ಕೂರಿಸಿ ಸಿದ್ಧಪಡಿಸಿದ ಕನ್ನಡವು “ಎಲ್ಲರ ಕನ್ನಡ” ಆಗುವುದಾದರೂ ಹೇಗೆ?

ಇನ್ನೊಂದು ಪುಸ್ತಕ ದೇವನೂರ ಮಹದೇವರ “ದ್ಯಾವನೂರು ಮತ್ತು ಒಡಲಾಳ”. ಅವರು “ಕುಸುಮಬಾಲೆ” ಬರೆದಾಗ, ಅದು ಅರ್ಥವಾಗುವುದಿಲ್ಲ; ಅದನ್ನು ಮತ್ತೆ ಕನ್ನಡದಲ್ಲಿ ಬರೆಯಬೇಕೆಂದು ಹಂಗಿಸಿದವರು ಇದ್ದಾರೆ. ನಂಜನಗೂಡು ಕಡೆಯ ನೆಲದ ಕನ್ನಡ ದ್ಯಾವನೂರು ಮತ್ತು ಒಡಲಾಳದಲ್ಲಿದೆ. ಅದನ್ನು ಕನ್ನಡವಲ್ಲ ಎಂದು ಹೇಳಲಾದೀತೆ? ಅಲ್ಲಿ ಬರುವ ಅದ್ದರಿಸು, ಅವಚವಿ, ಕಲಕೆತ್ತಿ, ಬೆಂಮನ್ಸೆ ಮುಂತಾದ ಅಚ್ಚಗನ್ನಡ ಪ್ರಾದೇಶಿಕ ಪದಗಳನ್ನು ಎತ್ತಿತಂದು ಸಂಸ್ಕೃತ ಪದಗಳ ಜಾಗದಲ್ಲಿ ಕೂರಿಸಿದರೆ ಅದು “ಎಲ್ಲರ ಕನ್ನಡ” ಆಗುವುದೇ?

ಮೂರನೆಯದು ಯಶವಂತ ಚಿತ್ತಾಲರ “ಐವತ್ತೊಂದು ಕತೆಗಳು”. ಉತ್ತರ ಕನ್ನಡ, ಧಾರವಾಡ, ಮುಂಬೈಯಲ್ಲಿ ಮೊದಲು ಕನ್ನಡದಲ್ಲಿ, ನಂತರ ಇಂಗ್ಲೀಷಿನಲ್ಲಿ ತಾಂತ್ರಿಕ ಶಿಕ್ಷಣ ಪಡೆದ, ಕೊಂಕಣಿ ತಾಯಿನುಡಿಯ, ತಾವೇ ಹೇಳಿಕೊಂಡಂತೆ ಮುಂಬಯಿ ನಗರದಲ್ಲಿ ಕನ್ನಡ ಮಾತನಾಡುವವರ ಒಡನಾಟಕ್ಕೆ ಸದಾ ಹಾತೊರೆಯುತ್ತಿದ್ದ ಯಶವಂತ ಚಿತ್ತಾಲರ ಕತೆಗಳಲ್ಲಿ ಜೀವತಳೆಯುವ ಉತ್ತರ ಕನ್ನಡದ ಭಾಷೆ ಎಲ್ಲಾ ಪ್ರದೇಶಗಳ ಸಾಮಾನ್ಯ ಕನ್ನಡಿಗರಿಗೆ ಅರ್ಥವಾಗಬಹುದೆ? ಸಲಗಿ, ಚೂಳಿ, ತರ್ತೆ, ಪೇಂಟಿ, ಮೀನ ಆಸೆ, ನಾಣಿಗೆ ಇತ್ಯಾದಿಗಳ ಜೊತೆಗೆ- ಕೊಂಕಣಿ, ಮರಾಠಿ ಪ್ರಭಾವದ ಕನ್ನಡದ ಪದಗಳನ್ನು ಸಂಸ್ಕೃತ ಪದಗಳ ಜಾಗದಲ್ಲಿ ಕೂರಿಸಿದರೆ, ಅದು “ಎಲ್ಲರ ಕನ್ನಡ”ವಾದೀತೆ? ಇಲ್ಲಿನ ಕನ್ನಡದಲ್ಲಿ ಮೊದಲೇ ಹೇಳಿದಂತೆ “ಅವನಿಗೆ”, “ಅವನನ್ನು’ ಎಂಬುದಕ್ಕೆ ಒಟ್ಟಾಗಿ “ಅವನಿಗೆ’ ಎಂದೇ ಬಳಸಲಾಗುತ್ತದೆ. ಅಲ್ಲದೇ “ಅಲ್ಲಿ ಇರುವ” ಎಂಬುದನ್ನು ಭೂತಕಾಲ ಎಂಬಂತೆ “ಅಲ್ಲಿ ಇದ್ದ” ಎಂದು ಹೇಳಲಾಗುತ್ತದೆ. ಅಂದರೆ, ವ್ಯಾಕರಣದಲ್ಲಿಯೂ ಬೇರೆತನ.

ಈ ರೀತಿಯಾಗಿ ಧಾರವಾಡ-ಹುಬ್ಳಿ, ಹಾಸನ, ಮೈಸೂರು, ಮಂಡ್ಯ, ಬಳ್ಳಾರಿ, ಕುಂದ, ಅರೆ, ಹವ್ಯಕ ಮತ್ತು ಟಿವಿ, ರೇಡಿಯೋಗಳ ಇಂಗ್ಲೀಶ್ಗನ್ನಡ ಸೇರಿದಂತೆ ನೂರಾರು ಸ್ಥಳೀಯ ಕನ್ನಡ ಭಾಷೆಗಳಿರುವಾಗ, ಸಾವಿರಾರು ನೆಲದ ಪದಗಳು ಇರುವ, ನೂರಾರು ಲಯ, ಶೈಲಿ, ಸ್ವಂತಿಕೆ ಇರುವ ಭಾಷೆಯನ್ನು ಎಲ್ಲರಿಗೂ ಅರ್ಥವಾಗುವ “ಎಲ್ಲರ ಕನ್ನಡ”ವಾಗಿಸುವುದು ಹೇಗೆ? ಅದು ಸಾಧ್ಯವಿಲ್ಲದ ಮಾತು. ಸರಳವಾದ ಸಂಸ್ಕೃತ ಪದಗಳನ್ನು ಉಳಿಸಿಕೊಂಡು, ಸಾಧ್ಯವಾದಲ್ಲೆಲ್ಲಾ ಕನ್ನಡ ಪದಗಳನ್ನೇ ಬಳಸಿ, ಒಂದು ಸರಳ ಕನ್ನಡವನ್ನು ರೂಪಿಸಬಹುದು. ನಾನಿದನ್ನು ಬರವಣಿಗೆಯ ವಿಷಯದಲ್ಲಿ ಹೇಳುತ್ತಿದ್ದೇನೆ. ಆಡುಗನ್ನಡವನ್ನು ನಿಯಂತ್ರಿಸಲು ಸಾಧ್ಯವಿಲ್ಲ.

ಹಾಗೆ ನೋಡಿದರೆ ಪ್ರಾದೇಶಿಕ ಸೊಗಡಿನ ಕನ್ನಡ ಆಯಾ ಪ್ರದೇಶಗಳ ಆಡುಮಾತಿನಲ್ಲಿ ತಾನಾಗಿ ಬೆಳೆಯುತ್ತಿದೆ. ಎರಡು ಪ್ರದೇಶಗಳ ಜನರು ಜೊತೆ ಸೇರಿದಾಗ ತಮ್ಮದೇ ಸಂಪರ್ಕ ಭಾಷೆಯೊಂದನ್ನು ಸಹಜ ರೀತಿಯಲ್ಲಿ ಹುಟ್ಟುಹಾಕುತ್ತಾರೆ. ಸಾಹಿತ್ಯದಲ್ಲಿಯೂ ಪ್ರಾದೇಶಿಕ ಸೊಗಡು ಚಂದಗಾಣಾಗಿ ಹರಡುತ್ತಿದೆ. ಹಾಗೆ ನೋಡಿದರೆ, ಸರಳಗನ್ನಡ, ಎಲ್ಲರ ಕನ್ನಡ ಬೇಕಾಗಿರುವುದು ಸಾಮಾನ್ಯ ಜನರು ಸಹಜವಾಗಿ ಮಾತನಾಡುವುದಕ್ಕೆ ಅಲ್ಲ. ನಾವು ಬರೆಯುವ, ಭಾಷಣ ಬಿಗಿಯುವ, ಶಾಲೆಗಳಲ್ಲಿ ಕಲಿಸುವ, ಕಲಿಯುವ, ಸಂವಹನದ ಭಾಷೆಗೆ, ಮಾಧ್ಯಮಗಳ ಭಾಷೆಗೆ, ಮುಖ್ಯವಾಗಿ, ಬರವಣಿಗೆಯ ಅಂದರೆ, “ಲಿಖಿತ” ಭಾಷೆಗೆ, ಪಂಡಿತರ “ಸ್ವಯಂ ಘೋಷಿತ ಶಿಷ್ಟ ಭಾಷೆ”ಗೆ ಅದು ಬೇಕಾಗಿರುವುದು.

ಆದುದರಿಂದಲೇ, ಎಲ್ಲರಿಗೂ ಅರ್ಥವಾಗುವ, ಪ್ರಾದೇಶಿಕ ಸೊಗಡನ್ನು ಉಳಿಸಿಕೊಂಡ, ಸಂಸ್ಕೃತದ ನೊಗ ಇಳಿಸಿದ ಒಂದು ಸರಳಗನ್ನಡ ಸಂವಹನಕ್ಕಾಗಿ ನಮಗೆ ಬೇಕಾಗಿದೆ. ಇದು ಸಹಜವಾಗಿ ಆಗಬೇಕೇ ಹೊರತು, ಕೇವಲ ಮಹಾಪ್ರಾಣಗಳನ್ನು ಬಿಡುವುದರಿಂದ, ಬರೆಯುವ ಶೈಲಿಯನ್ನೇ ಬದಲಿಸಿ, ಹಳೆಗನ್ನಡ ಪದಗಳನ್ನು ತುಂಬಿ ಹೊಸದೊಂದು ಅಪರಿಚಿತ ಭಾಷೆಯನ್ನು ರೂಪಿಸುವುದರ ಮೂಲಕ ಅಲ್ಲ. ಹೇರಿಕೆ, ಒತ್ತಾಯ, ಅಣಕದಿಂದಲೂ ಆಲ್ಲ! ಕನ್ನಡಿಗರು ಎಂದರೆ, ಸಾಮಾಜಿಕ ತಾಣಗಳನ್ನು ಬಳಸುವವರು ಮಾತ್ರವಲ್ಲ. ಇವುಗಳ ಹೊರಗೆ ಕೋಟ್ಯಂತರ ಕನ್ನಡಿಗರಿದ್ದಾರೆ. ಅವರನ್ನು ಮುಟ್ಟುವುದು ಹೇಗೆ? ಈ ಎಲ್ಲಾ ಆಯಾಮಗಳ ಕುರಿತು ಮುಂದಿನ ಚಿಂತನೆಗಳು ನಡೆಯಬೇಕು. ಇದು ಬಾಣಲೆ ನೀರಿನಲ್ಲಿ ನಡೆಯುವ ಚಂಡಮಾರುತವಾಗಲಿ, ಅಂಗೈ ಒಳಗಿನ ಕ್ರಾಂತಿಯಾಗಲೀ ಅಲ್ಲ. ಜನರಿಗೆ ಒಗ್ಗದಿದ್ದರೆ, “ಎಲ್ಲರ ಕನ್ನಡ” ಯಾರಿಗೂ ಅರ್ಥವಾಗದ ಕನ್ನಡವಾದೀತು.

(ಪೀಪಲ್‌ನಲ್ಲಿ ಪ್ರಕಟವಾದ “ಸಂಸ್ಕೃತದ ದಬ್ಬಾಳಿಕೆಗೆ ಕನ್ನಡಿಗರ ಕೀಳರಿಮೆ ಕಾರಣ” ಮತ್ತು “ಕನ್ನಡದ ಬೆನ್ನೇರಿ ಕುಳಿತಿರುವ ಸಂಸ್ಕೃತ” ಎಂಬ ಬರಹಗಳನ್ನು ಓದಿ).

ನಿಜವಾದ ಕಾಶ್ಮೀರಿ ಫೈಲ್ಸ್! : ಭಟ್, ಪಂಡಿತ್ ಎಂಬ ಮುಸ್ಲಿಮರೂ, ಮೀರ್, ವಲಿ ಎಂಬ ಹಿಂದೂಗಳೂ… ಬೊಗಸೆಗೆ ದಕ್ಕಿದ್ದು – 20
ಇಂದು ಕೋಮುವಾದಿ ಕೇಂದ್ರ ಸರಕಾರವು ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಕಿತ್ತುಕೊಂಡು, ವಿಭಜಿಸಿ, ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿಕೊಂಡಿದೆ. ಆರೆಸ್ಸೆಸ್ ಕಲ್ಪನೆಯ “ಹಿಂದೂ ರಾಷ್ಟ್ರ”ದಲ್ಲಿ ಅದೊಂದೇ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಿದ್ದುದೇ ಇದಕ್ಕೆ ಮೂಲಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪ್ರತ್ಯೇಕತಾವಾದ, ಭಯೋತ್ಪಾದನೆ ಇತ್ಯಾದಿ ನೆಗೆಟಿವ್ ವಿಚಾರಕ್ಕೆ ಹೆಚ್ಚಿನ ಪ್ರಚಾರ ನೀಡಲಾಗುತ್ತಿದ್ದು, ಇದಕ್ಕೆ ಒಂದು ಉದಾಹರಣೆ ಎಂದರೆ, “ಕಾಶ್ಮೀರ್ ಫೈಲ್ಸ್” ಎಂಬ ಸರಕಾರಿ ಬೆಂಬಲದ ವಿಷಚಿತ್ರ. ಕಾಶ್ಮೀರಿ ಮುಸ್ಲಿಮರನ್ನು ಯಾವುದೇ ಮಾನವೀಯ ಸಂವೇದನೆ ಇಲ್ಲದ ಪ್ರಾಣಿಗಳೇನೋ ಎಂಬಂತೆ ಸುಳ್ಳಾಗಿ ಚಿತ್ರಿಸಿ, ದೇಶದ ಉಳಿದ ಭಾಗಗಳ “ಹಿಂದೂ”ಗಳ ರೊಚ್ಚನ್ನು ಕೆರಳಿಸಿ ಮತಗಳಾಗಿ ಪರಿವರ್ತನೆ ಮಾಡುವುದೇ ಈ ಚಿತ್ರದ ಮತ್ತು ಸರಕಾರದ ಉದ್ದೇಶವಾಗಿದೆ.

ಅದೇನೇ ಇದ್ದರೂ, ಸಾಟಿಯಿಲ್ಲದ ಪ್ರಾಕೃತಿಕ ಸೌಂದರ್ಯ, ಸೇಬು, ಕೇಸರಿಗೆ ಹೆಸರಾಗಿರುವಂತೆ ಕಾಶ್ಮೀರವು ಮೂಲತಃ ಸೌಹಾರ್ದಕ್ಕೂ ಹೆಸರಾಗಿದೆ. ಇಲ್ಲಿನ ಹಿಂದೂಗಳು ಮತ್ತು ಮುಸ್ಲಿಮರು ಸಮಾನ ಕೌಟುಂಬಿಕ ಹೆಸರುಗಳನ್ನು ಹೊಂದಿರುವುದು ಈ ಸಾಮರಸ್ಯದ ಕುತೂಹಲಕಾರಿ ಬೇರುಗಳನ್ನು ಸೂಚಿಸುತ್ತದೆ. ಅಂದಹಾಗೆ, ಮೋದಿ, ಶಾ ಎಂಬ ಸರ್‌ನೇಮ್ ಅಂದರೆ ಪಿತೃ ಹೆಸರು ಮುಸ್ಲಿಮರಲ್ಲಿಯೂ ಇದೆ ಎಂಬುದನ್ನು ಇದನ್ನು ಓದುವಾಗ ಮನಸ್ಸಿನ ಮೂಲೆಯಲ್ಲಿ ಇಟ್ಟುಕೊಂಡಿರೋಣ.

ಬಿಜೆಪಿಯ ಕೋಮುವಿಭಜನೆಯ ಅಂಜೆಂಡಾಕ್ಕೆ ಅನುಗುಣವಾಗಿಯೇ ನಿರ್ಮಿಸಲಾಗಿರುವ ಅಪಪ್ರಚಾರ ಚಿತ್ರ “ಕಾಶ್ಮೀರ್ ಫೈಲ್ಸ್”ನಿಂದಾಗಿ “ಕಾಶ್ಮೀರಿ ಪಂಡಿತ”ರ ಹೆಸರು ಮತ್ತೊಮ್ಮೆ ಜನರ ಬಾಯಲ್ಲಿ ಆಡುತ್ತಿದೆ. ಪಂಡಿತರು ಎಂದರೆ ಬ್ರಾಹ್ಮಣರು ಮಾತ್ರ; ಅವರನ್ನು ಮುಸ್ಲಿಮರು ಹಣಿದು ಕ್ರೂರ ದೌರ್ಜನ್ಯ ನಡೆಸಿದ್ದಾರೆ ಎಂಬ ತಿರುಚಿದ ಚಿತ್ರಣವನ್ನು ಏಕಪಕ್ಷೀಯವಾಗಿ ಈ ಚಿತ್ರ ನೀಡುತ್ತದೆ. ಮತಾಂಧ ಭಯೋತ್ಪಾದಕ ಕೃತ್ಯಗಳನ್ನು ಕಾಶ್ಮೀರದ ಎಲ್ಲಾ ಮುಸ್ಲಿಮರ ತಲೆಗೆ ಕಟ್ಟುವ ಈ ಪ್ರಯತ್ನದಲ್ಲಿ, ಭಯೋತ್ಪಾದಕರನ್ನು ಎದುರು ಹಾಕಿಕೊಂಡು ಹಿಂದೂಗಳನ್ನು ರಕ್ಷಿಸಿದ ಸಾಮಾನ್ಯ ಮುಸ್ಲಿಮರು, ಉಗ್ರರೇ ಕೊಂದ ಸಾವಿರಾರು ಮುಸ್ಲಿಮರ ಫೈಲುಗಳನ್ನು ಯಾರೂ ತೆರೆದಿಲ್ಲ.

ಕೆಲವು ದಶಕಗಳ ಹಿಂದೆ ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆ ಹುಟ್ಟಿಕೊಳ್ಳುವುದಕ್ಕೆ ಮೊದಲು ಕಾಶ್ಮೀರ ಎಂದ ಕೂಡಲೇ ನೆನಪಿಗೆ ಬರುತ್ತಿದ್ದುದು ಸೇಬು, ತಾವರೆ, ಕೇಸರಿ, ಹಿಮ, ಭೂಲೋಕದ ಸ್ವರ್ಗ ಎಂದು ಕರೆಯಲಾಗುತ್ತಿದ್ದ ಸುಂದರ ಪ್ರಕೃತಿ, ಮುಸ್ಲಿಮರು ಬಹುಸಂಖ್ಯಾತರಾಗಿರುವ ಭಾರತದ ಏಕೈಕ ರಾಜ್ಯದ ಸುಂದರ ರೂಪದ ಜನರು. ಅದಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಕೋಮು ಸೌಹಾರ್ದ.

ಮಧ್ಯಕಾಲೀನ ಇತಿಹಾಸದಲ್ಲಿ ತುರ್ಕ್ಮೇನಿಸ್ತಾನದಿಂದ ಬಂದ ಆಕ್ರಮಣಕಾರರು ಇಲ್ಲಿ ನಡೆಸಿದ ಲೂಟಿ, ಅತ್ಯಾಚಾರ, ಅನಾಚಾರಗಳ ವಿವರಗಳು ಸಿಗುತ್ತವಾದರೂ, ಆಧುನಿಕ ಕಾಲದ ನಾಲ್ನೂರು ವರ್ಷಗಳ ಇತಿಹಾಸದಲ್ಲಿ ಇತ್ತೀಚಿನ ದಶಕಗಳನ್ನು ಬಿಟ್ಟರೆ, ಕೋಮುಸೌಹಾರ್ದ ಎಂಬುದು ಕಾಶ್ಮೀರದ ಮೂಲ ಸೆಲೆಯಾಗಿತ್ತು. ಇಲ್ಲಿ ಎರಡೂ ಕೋಮುಗಳ ರಾಜಕೀಯ ವ್ಯಕ್ತಿಗಳು ನಡೆಸಿದ ರಾಜಕೀಯದಾಟಗಳ, ಆದ ಸಾವು-ನೋವುಗಳು ಮತ್ತು ಅಶಾಂತಿಯ ಬಗ್ಗೆ ಇಲ್ಲಿ ಉಲ್ಲೇಖಿಸುವುದಿಲ್ಲ. ಅನುಕೂಲಕ್ಕೆ ತಕ್ಕಂತೆ ಒಂದು ದೇಶ, ರಾಜ್ಯ, ಧರ್ಮ, ಜಾತಿಗೆ ಸೇರಿದ ಎಲ್ಲಾ ಜನರನ್ನು ಒಂದೇ ಬುಟ್ಟಿಯಲ್ಲಿ ಇಟ್ಟು ತೂಗಿ ಆವರ ಗುಣಸ್ವಭಾವಗಳನ್ನು ನಿರ್ಧರಿಸಿ ದ್ವೇಷಿಸುವ ರೋಗಕ್ಕೆ ಉತ್ತಮ ಮದ್ದೆಂದರೆ, ಆ ಜನರ ಬಗ್ಗೆ ಹೆಚ್ಚುಹೆಚ್ಚು ತಿಳಿದುಕೊಳ್ಳುವುದು. ಹಾಗಾಗಿ, ಕಾಶ್ಮೀರದ ಸೌಹಾರ್ದದ ಬೇರುಗಳನ್ನು ಅಲ್ಲಿನ ಹೆಸರುಗಳಲ್ಲಿ ಹುಡುಕುವ ಚಿಕ್ಕ ಪ್ರಯತ್ನವನ್ನು ಇಲ್ಲಿ ವಿವಿಧ ಮೂಲಗಳಲ್ಲಿ ಓದಿದ್ದ ವಿಷಯಗಳ ಆಧಾರದಲ್ಲಿ ಮಾಡಿದ್ದೇನೆ.

ಕಾಶ್ಮೀರದ ಭಯೋತ್ಪಾದನೆಯ ಆರಂಭದಲ್ಲಿ ಮಕ್ಬೂಲ್ ಭಟ್ ಎಂಬ ಜಮ್ಮು-ಕಾಶ್ಮೀರ್ ಲಿಬರೇಷನ್ ಫ್ರಂಟ್ (ಜೆಕೆಎಲ್ಎಫ್) ಸಂಘಟನೆಯ ನಾಯಕನನ್ನು ಗಲ್ಲಿಗೇರಿಸಿದಾಗ, ಅಲ್ಲಿ ಆತನ ಪರ ವಿರೋಧ ವಾದಗಳು ಹುಟ್ಟಿಕೊಂಡವು. ಭಯೋತ್ಪಾದನೆಯೂ ಹೆಚ್ಚಾಯಿತು. ಆದರೆ, ದೇಶದ ಉಳಿದ ಕಡೆಗಳಲ್ಲಿ ಆತನ ಹೆಸರಿನಲ್ಲಿದ್ದ ಭಟ್ ಎಂಬ ಪದವೇ ಭಾರೀ ಕುತೂಹಲ ಹುಟ್ಟಿಸಿತ್ತು. ಕೆಲವು ಪತ್ರಿಕೆಗಳೂ ಅದು ‘ಭಟ್’ ಇರಬಹುದು ಎಂದು ನಂಬಲಾರದೆ, ಬೇಕೆಂದೇ ‘ಬಟ್’ ಎಂದು ಬರೆದಿದ್ದವು. ನಂತರ ಕೆಲವರು ಆತ ಮತಾಂತರಗೊಂಡ ಬ್ರಾಹ್ಮಣ ಎಂದು ವಾದಿಸಿದ್ದರು. ಹಾಗಿದ್ದರೆ, ಹಿಂದೂಗಳಿಗೆ ಮುಸ್ಲಿಂ ಕೌಟುಂಬಿಕ ಹೆಸರು ಇರುವುದೇಕೆ ಎಂಬುದನ್ನು ಅವರು ವಿವರಿಸಲಿಲ್ಲ. ನಾನದನ್ನು ಇಲ್ಲಿ ವಿವರಿಸಲು ಬಯಸುತ್ತೇನೆ.

ಅಲ್ಲಿ ಭಟ್ ರೀತಿಯಲ್ಲಿಯೇ ಋಷಿ, ವಲಿ, ಮಿರ್ಜಾ, ಧಾರ್, ಅಥವಾ ಧರ್, ಪೀರ್, ಖೂನ್, ಚಕೂ, ದುರಾನಿ, ಕಚ್ರೂ, ದ್ರಬೂ, ಕಲೂ, ಕನ್ನ, ಕಾವ್, ಕಲೂ, ಖರ್, ಖುದಾ, ಕಿಚ್ಲೂ, ರೈನಾ ಇತ್ಯಾದಿ ನೂರಾರು ಸಾಮಾನ್ಯ ಕೌಟುಂಬಿಕ ಹೆಸರುಗಳನ್ನು ಹಿಂದೂಗಳೂ, ಮುಸ್ಲಿಯರೂ ಹೊಂದಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ, ಮುಸ್ಲಿಮರಿಗೆ ಋಷಿ, ಪಂಡಿತ್ ಹೆಸರುಗಳಿರುವುದು ನಂಬಲಾಗದ ನಿಜ. ವಲಿ ಎಂದರೆ ಅರೇಬಿಕ್‌ನಲ್ಲಿ ಸ್ನೇಹಿತ, ರಕ್ಷಕ ಎಂಬ ಅರ್ಥವಿದೆ. ಈ ಹೆಸರನ್ನು  ಅಲ್ಲಾಹ್ ಎದುರು ಸೇರಿಸುತ್ತಾರೆ. ಆದರೆ, ಕಾಶ್ಮೀರದಲ್ಲಿ ಮುಸ್ಲಿಮರಿಗಿಂತ ಹಿಂದೂ ವಲಿಗಳು ಹೆಚ್ಚಿದ್ದಾರೆ!

ಕಾಶ್ಮೀರದ ಪದ್ಮಶ್ರೀ ವಿಜೇತ ಹೃದಯ ತಜ್ಞ ಡಾ. (ಪ್ರೊಫೆಸರ್) ಉಪೇಂದ್ರ ಕೌಲ್ ಅವರು ಒಂದು ಲೇಖನದಲ್ಲಿ ತಮ್ಮ ಮೂಲ ಕೌಟುಂಬಿಕ ಹೆಸರು ಖಾನ್ ಎಂದು ಬರೆದಿದ್ದಾರೆ. ಅವರ ಹಿರಿಯರು 1752ರಿಂದ 1819ರ ತನಕ ಅಫ್ಘಾನಿಸ್ತಾನದ ರಾಜರ ಆಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಖಾನ್ ಪದವಿ ಅಥವಾ ಹುದ್ದೆ ಹೊಂದಿದ್ದರಂತೆ. ಅವರ ತಂದೆ ಮೆಟ್ರಿಕ್ ಕಲಿಯುತ್ತಿದ್ದ ವೇಳೆ ಇರಿಸುಮುರುಸು ತಪ್ಪಿಸಲು ಕೌಲ್ ಎಂದು ಬದಲಿಸಿದ್ದರಂತೆ. ಜೊತೆಗೆ ಈ ವೈದ್ಯರು ಕೆಲವು ದೊಡ್ಡ ಜನರ ಉದಾಹರಣೆಗಳನ್ನೂ ಕೊಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ನಾಗರಿಕ ಸೇವಾ ಆಯೋಗದ ಮಾಜಿ ಅಧ್ಯಕ್ಷ ಶಫಿ ಪಂಡಿತ್, ಮಾಜಿ ಡಿಜಿಪಿ ಗುಲಾಂ ಜೀಲಾನಿ ಪಂಡಿತ್ ಅಪ್ಪಟ ಮುಸ್ಲಿಮರು. ಪ್ರಸಿದ್ಧ ವೈದ್ಯ ಡಾ. ಮಹಾರಾಜ್ ಕಿಷನ್ ಪೀರ್, ಪ್ರಸಿದ್ಧ ವಕೀಲ ಬನ್ಸಿಲಾಲ್ ವಲಿ ಹಿಂದೂಗಳು. ಅಲ್ಲಿ ಇಂತಾ ಹೆಸರುಗಳು ಹಿಂದೂ ಮತ್ತು ಮುಸ್ಲಿಂ ಕೌಟುಂಬಿಕ, ಧಾರ್ಮಿಕ ಹಿನ್ನೆಲೆಯನ್ನು ಸೂಚಿಸುವುದಿಲ್ಲ. ಕಾಶ್ಮೀರದಲ್ಲಿ ಸೂಫಿ ಪಂಥವು ಹಿಂದೆಯೇ ಬಲವಾಗಿ ಬೇರೂರಿದ್ದು, ಅಲ್ಲಿ ಕೋಮುಸೌಹಾರ್ದಕ್ಕೆ ಕಾರಣವಾಯಿತು. ಉದಾರಣೆಗೆ 1637ರಲ್ಲಿ ಶ್ರೀನಗರದಲ್ಲಿ ಹುಟ್ಟಿದ ಕೇಶವ್ ಗೋಬಿಂದ್ ಕೌಲ್ ಎಂಬವರು ಬಾಲ್ಯದಲ್ಲೇ ಸೂಫೀ ಪಂಥ ಆನುಸರಿಸಿ ಹಿಂದೂಗಳಿಗೂ ಮುಸ್ಲಿಮರಿಗೂ ಋಷಿ ಪೀರ್ ಆದರು. ಭಾರತದಲ್ಲಿ ಭಕ್ತಿಪಂಥದ ಕಬೀರ್, ಶಿರಡಿ ಬಾಬಾ ಮುಂತಾದವರಂತೆ ಅವರ ಸಾವಿನ ಸುತ್ತಲೂ “ಹಿಂದು, ಮುಸ್ಲಿಮರು ಶವಸಂಸ್ಕಾರ ತಮ್ಮ ಧರ್ಮದ ಪ್ರಕಾರ ಆಗಬೇಕು ಎಂದು ಹಟ ಹಿಡಿದಾಗ ಶವವು ಹೂವಾಯಿತು. ಎರಡೂ ಕೋಮಿನವರು ತಮ್ಮತಮ್ಮ ಪದ್ಧತಿಯಂತೆ ಆಂತ್ಯ ಸಂಸ್ಕಾರ ಮಾಡಿದರು” ಎಂಬಂತ ದಂತಕತೆ ಇವರ ಸುತ್ತಲೂ ಇದೆ. ಅವರನ್ನು “ಪೀರ್ ಪಂಡಿತ್ ಪದ್‌ಶಾ ಹರ್ದು ಮುಶ್ಕಿಲ್ ಆಸಾನ್” ಎಂದರೆ, ಕಷ್ಟ ಸುಲಭಗೊಳಿಸುವ ಪೀರ್ ಪಂಡಿತ್  ಎಂದು ಇಂದಿಗೂ ಎರಡು ಕಡೆ ಆರಾಧಿಸಲಾಗುತ್ತಿದೆ.

ಕಾಶ್ಮೀರದ ಹಲವಾರು ಕೌಟುಂಬಿಕ ಹೆಸರುಗಳು ಧರ್ಮಕ್ಕೆ ಸಂಬಂಧಿಸಿದವುಗಳೇ ಅಲ್ಲ. ಆವು ಹುದ್ದೆ ಮತ್ತು ವೃತ್ತಿಗೆ ಸಂಬಂಧಿಸಿದವುಗಳು. ಭಾರತದ ಉಳಿದ ಭಾಗಗಳಲ್ಲೂ ಮೋದಿ (ಗಾಣಿಗ), ಶಾ, ಪಟೇಲ್, ಕೊತ್ವಾಲ್, ಜಮಾದಾರ್, ನಾಯ್ಕ್ ಇತ್ಯಾದಿಯಾಗಿ- ಕುಟುಂಬದ ಹೆಸರುಗಳು ಹಿಂದೂ ಮತ್ತು ಮುಸ್ಲಿಂ ಇಬ್ಬರಲ್ಲಿ ಇದ್ದರೂ, ಅವು ಕಾಶ್ಮೀರದಷ್ಟು ವ್ಯಾಪಕ, ವರ್ಣರಂಜಿತ ಮತ್ತು ತಮಾಷೆಯದ್ದೂ ಆಗಿಲ್ಲ.

ಅರಂ (ತರಕಾರಿ ಬೆಳೆಯುವ ರೈತ), ಕ್ರಾಲ್ (ಕುಂಬಾರ), ಗೋರು (ಗೌಳಿಗ), ವಝ (ಬಾಣಸಿಗ), ಬಝಾಝ್ (ಬಟ್ಟೆ ವ್ಯಾಪಾರಿ) ಈ ರೀತಿಯ ಕೌಟುಂಬಿಕ ಹೆಸರುಗಳು ಹಿಂದೂಗಳಲ್ಲೂ ಮುಸ್ಲಿಮರಲ್ಲೂ ಇವೆ. ಇಂತಹ ಸಮಾನ ಹೆಸರುಗಳನ್ನು ಪ್ರಾಣಿ, ಪಕ್ಷಿ, ಹಣ್ಣು, ತರಕಾರಿ, ಸ್ವಭಾವ, ಇತ್ಯಾದಿಗಳ ಹೋಲಿಕೆಯ ಕಾರಣದಿಂದಲೋ ಬಂದ ಕೌಟುಂಬಿಕ ಹೆಸರುಗಳು ಮಾತ್ರವಲ್ಲದೆ, ಯಾರಿಗೋ ಇರಿಸಲಾಗಿರಬಹುದಾದ ಅಡ್ಡ ಹೆಸರುಗಳೂ ತಲೆತಲಾಂತರದಿಂದ ಹರಿದುಬಂದಿವೆ. ಎರಡೂ ಕೋಮುಗಳಲ್ಲಿ ಇರುವ ಕೆಲವು ತಮಾಷೆಯ ಕೌಟುಂಬಿಕ ಹೆಸರುಗಳನ್ನು ನೋಡಬೇಕೆಂದರೆ: ಹಂಗ್ಲೂ (ಜಿಂಕೆ), ಖರ್ (ಕತ್ತೆ), ಬ್ರಕು (ಬೆಕ್ಕು), ಕಂಟ್ರೂ (ಗುಬ್ಬಚ್ಚಿ), ಕಕ್ರೂ (ಕೋಳಿ), ಕಾವ್ (ಕಾಗೆ), ಬ್ರಂಬ್ರೂ (ಭ್ರಮರ), ಕೊಟ್ರೂ (ಪಾರಿವಾಳ), ದಂಡ್ (ಹೋರಿ), ಹೂನ್ (ನಾಯಿ), ಯೆಚ್ (ಯೇತಿ), ಕೋಕಿಲೂ (ಕೋಗಿಲೆ)… ಹಿರಿಯ ಅಧಿಕಾರಿ ಎಂ.ಕೆ. ಕಾವ್, ಹಿರಿಯ ಪತ್ರಕರ್ತ ಎಂ.ಎಲ್. ಕೊಟ್ರೂ ಅವರ ಹೆಸರು ಕೇಳಿ ಅವರು ಹಿಂದೂಗಳೇ ಮುಸ್ಲಿಮರೇ ಎಂದು ಹೇಳುವುದು ಕಷ್ಟ. ಈ ಮಟ್ಟಿನ ಸೌಹಾರ್ದ, ಸಾಮರಸ್ಯ ಕಾಶ್ಮೀರದ್ದು!

ಪ್ರಾಣಿ, ಪಕ್ಷಿ ಬಿಡಿ, ಹಣ್ಣು, ತರಕಾರಿಗಳ ಹೆಸರುಗಳನ್ನು ಹೊಂದಿರುವ ಹಿಂದೂ, ಮುಸ್ಲಿಮರ ಸಂಖ್ಯೆಯೂ ಕಡಿಮೆಯಿಲ್ಲ. (ಮಹಾರಾಷ್ಟ್ರ, ಉತ್ತರ ಕರ್ನಾಟಕದಲ್ಲೂ ವಾಘ್ (ಹುಲಿ), ಪಡುವಳ್ (ಪಡುವಲ), ಉಳ್ಳಾಗಡ್ಡಿ (ಈರುಳ್ಳಿ) ಇತ್ಯಾದಿ ಹೆಸರುಗಳು ಇವೆಯಾದರೂ, ಕಾಶ್ಮೀರದಷ್ಟು ವ್ಯಾಪಕವಾಗಿಲ್ಲ. ಕೆಲವು ಉದಾರಣೆಗಳು: ಮುಜೂಸ್ (ಬೀಟ್ರೂಟ್), ಬಮ್‌ಚೂಟ್ಸ್ (ಕ್ವಿಂನ್ಸ್ ಆಪಲ್), ಕಖ್ (ಹರಿವೆ), ವಾಂಗೂ (ಬದನೆ), ನದ್ರೂಸ್ (ತಾವರೆ ದಂಡು)… ಇದು ಇಲ್ಲಿಗೆ ಮುಗಿಯುವುದಿಲ್ಲ. ಯಾರದ್ದೋ ಗುಣ ಸ್ವಭಾವದ ಕಾರಣದಿಂದ ತಲೆತಲಾಂತರಕ್ಕೆ ಅಂಟಿಕೊಂಡ ಹೆಸರುಗಳೂ ಇವೆ. ಇವೂ ಎರಡೂ ಧರ್ಮದವರಿಗೆ ಸೇರಿವೆ: ಹಕೂ (ಒಣ, ಸಪ್ಪೆ ಮನುಷ್ಯ) ಟ್ರಕ್ರೂ (ಹಟಮಾರಿ)…

ಅಡ್ಡ ಹೆಸರುಗಳನ್ನು ಇಡುವುದರಲ್ಲಿ ಹಿಂದೂ, ಮುಸ್ಲಿಂ ಕಾಶ್ಮೀರಿಗಳು ಎಷ್ಟು ಹಾಸ್ಯಪ್ರಜ್ಞೆಯ ಚುರುಕು ಜನರೆಂದರೆ, ಉದಾರಣೆಗಾಗಿ ಪ್ರಸಿದ್ಧ ಇತಿಹಾಸಕಾರ ಪಂಡಿತ್ ಆನಂದ ಕೌಲ್ ಆವರು ಹೇಳಿರುವ ‘ತೆಂಗ್’ ಕುಟುಂಬನಾಮದವರ ಕುರಿತ ತಮಾಷೆಯ ದಂತಕತೆಯನ್ನು ನೋಡೋಣ. ವಾಸದೇವ ಎಂಬ ವ್ಯಕ್ತಿಯೊಬ್ಬ ಇದ್ದ. ಅವನ ಅಂಗಳದಲ್ಲಿ ಒಂದು ದೊಡ್ಡ ನೇರಳೆ ಮರವಿತ್ತು. ಅದಕ್ಕಾಗಿ ಅವನಿಗೆ ವಾಸದೇವ ತುಲ್ (ನೇರಳೆ) ಎಂಬ ಅಡ್ಡ ಹೆಸರಿಟ್ಟರು. ಅದು ಅವನಿಗೆ ಕಿರಿಕಿರಿಯಾಗಿ ಮರವನ್ನು ಕಡಿಸಿದ. ಮರದ ಬೊಡ್ಡೆ ಉಳಿಯಿತು. ಜನರು ಅವನಿಗೆ ವಾಸದೇವ ಮೌಂಡ್ (ಬೊಡ್ಡೆ) ಎಂದು ಹೆಸರಿಟ್ಟರು. ಅವನು ಬೊಡ್ಡೆ ಅಗೆಸಿ ಕಿತ್ತೆಸೆದ. ಆದರೆ, ಒಂದು ತಗ್ಗಿನ ಗುಂಡಿ ಉಳಿಯಿತು. ಜನರು ಅವನಿಗೆ ವಾಸದೇವ ಖಡ್ (ಗುಂಡಿ) ಎಂದು ಹೆಸರಿಟ್ಟರು. ಅವನು ಗುಂಡಿಯನ್ನು ಮುಚ್ಚಿಸಿದ. ಆದರೆ ಒಂದು ದಿಣ್ಣೆ ಉಳಿಯಿತು. ಜನರು ಅವನಿಗೆ ವಾಸದೇವ ತೆಂಗ್ (ದಿಣ್ಣೆ) ಎಂದು ಹೆಸರಿಟ್ಟರು. ಬೇಸತ್ತ ಅವನು ಸಾಯಲಿ ಎಂದು ಬಿಟ್ಟುಬಿಟ್ಟ. ತೆಂಗ್ ಕುಟುಂಬನಾಮ ಇಂದಿಗೂ ಉಳಿದಿದೆ.

ಈ ಕಾಶ್ಮೀರಿ ಹೆಸರುಗಳ ಪುರಾಣವು ಅಲ್ಲಿನ ಜನರ ಸಾಮಾಜಿಕ, ಸಾಂಸ್ಕೃತಿಕ ಮಿಳಿತ ಮತ್ತು ಸೌಹಾರ್ದ, ಸಹಬಾಳ್ವೆಯ ತಲೆತಲಾಂತರಗಳ ಸಮಾನ ಮೂಲ ಸ್ವಭಾವವನ್ನು ಸೂಚಿಸುತ್ತದೆ. ಆದರೆ, ಹಳೆಯ ಗಾಯಗಳನ್ನು ತುರಿಸಿ ತುರಿಸಿ ರಕ್ತ ಹರಿಯುವ ವೃಣವಾಗಿ ಇರಿಸಿಕೊಳ್ಳಲು ಬಯಸಿದವರಿಗೆ ಇವೆಲ್ಲವೂ ಕಾಣುವುದು ಕಷ್ಟ.

ಕೊನೆಯ ಮಾತು:
ಇಲ್ಲಿ ಒಂದನ್ನು ಬರೆಯಬೇಕೇ ಬೇಡವೆ ಎಂದು ಯೋಚಿಸುತ್ತೇನೆ. ಬರೆಯಬೇಕು. ದಾಖಲಿಸಬೇಕು. ಅದು ಪತ್ರಕರ್ತರ ಕೆಲಸ- ಎಷ್ಟು ಅಪ್ರಿಯವಾದರೂ ಸರಿ. “ಕಾಡು”, “ಭುಜಂಗಯ್ಯನ ದಶಾವತಾರಗಳು”, “ಸುಟ್ಟ ತಿಕದ ದೇವರು” ಬರೆದ ಶ್ರೀಕೃಷ್ಣ ಆಲನಹಳ್ಳಿ 40ನೇ ವಯಸ್ಸಲ್ಲಿ ತೀರಿಕೊಂಡರು. ನಾನು ಸ್ವತಃ ಕತೆಗಳ ಮನುಷ್ಯ. ಕಾವ್ಯಗಳ ಮನುಷ್ಯನಲ್ಲ. ಕೆಲವು ಸಲ ನನಗೇ ಇದು ಚೆನ್ನಾಗಿದೆ ಅನಿಸುವ ಒಂದೆರಡು ಕವನಗಳು ನನ್ನ ಎದೆಯಲ್ಲಿ ಹುಟ್ಟಿವೆ. ಆದರೆ, ಒಂದು ಕವನ ಅಥವಾ ಒಂದು ಸಾಲು ನನ್ನ ಎದೆಯ ಗೋಡೆಗೆ ಹಳೆಯ ಗಡಿಯಾದಂತೆ ಮೊಳೆ ಹೊಡೆದು ಕೂತುಬಿಟ್ಟು ಕಾಡಿಸುತ್ತದೆ. ಅದುವೇ: “ಪಾಪಿಯ ಹೂವಿಗೆ ಪಾಪದ ನೆರಳಿಲ್ಲ.”
ಇದು “ಲಂಕೇಶ್ ಪತ್ರಿಕೆ”ಯಲ್ಲಿ ಪ್ರಕಟವಾಯಿತೋ, ಬೇರೆಲ್ಲೋ ನನಗೆ ನೆನಪಿಲ್ಲ. ಇಲ್ಲಿ ಪಾಪಿಯ ಹೂವು ಯಾವುದು? ಪಾಪಿ ಯಾರು‌? ಬಹುಶಃ ನಾವೇ. ಇಲ್ಲಿ ಆಲನಹಳ್ಳಿ ಪಾಪಿಯ ಹೂ ಎಂದಿದ್ದೇ ಒಂದು ನಿಗೂಢ ವಿಷಯವಾಗಿತ್ತು. ಆ ಕವನವನ್ನು ಇಲ್ಲಿ ಉಲ್ಲೇಖಿಸಲು ಕಾರಣವೆಂದರೆ, ಅದು- ಅವರೇ ಬರೆದಿದ್ದಂತೆ ಕಾಶ್ಮೀರದ ಭೇಟಿಯ ನಂತರವಾಗಿತ್ತು  ಮೂರು ದಶಕಗಳ ನಂತರ ನನಗೆ ಅಚಾನಕ್ಕಾಗಿ ಒಂದು ಜ್ಞಾನೋದಯವಾಯಿತು. ಇವರು ಬರೆದ ಪಾಪಿ ಎಂಬುದು poppy- ಒಂದು ಮಾದಕ ಗಿಡ. ನಾವಿರುವ ಸಮಾಜದಲ್ಲಿ ಘಾತಕ ಗಿಡ. ಸುಂದರ ಕೆಂಪು ಹೂಗಳನ್ನು ಬಿಡುತ್ತದೆ. ಅದರಲ್ಲಾಗುವ ಕಾಯಿಯಿಂದ ಹೆರಾಯಿನ್ ಮುಂತಾದ ಹಲವು ಚಿನ್ನಕ್ಕಿಂತ ಹೆಚ್ಚು ಬೆಲೆ ಬಾಳುವ ಬಿಳಿ ವಸ್ತು ಹುಟ್ಟುತ್ತದೆ. ಎಳೆಯ ಜೀವನಗಳನ್ನು ನಾಶಪಡಿಸುತ್ತದೆ. ಅದರಿಂದ ಬರುವ ಹಣ ವಿಶ್ವದಲ್ಲೇ ಮೂರನೇ ಅತ್ಯಂತ ದೊಡ್ಡ ಬಿಸಿನೆಸ್ಸು. ಭಯೋತ್ಪಾದನೆಯ, ಭ್ರಷ್ಟಾಚಾರದ ಇಂಧನ.

ಆಲನಹಳ್ಳಿ ಬರೆದಿರುವುದು ಅದೇ. ಪಾಪಿ (poppy) ಗಿಡದ ವಿಷಯ. ನಿಮ್ಮ ಪಾಪದಲ್ಲಿ ಆ ಸುಂದರ ಕೆಂಪು ಹೂವಿನ ಪಾಲಿಲ್ಲ. ಹೂವಿಗೆ ಮುಗ್ಧತೆ, ಹುಟ್ಟುವ ಮಕ್ಕಳ ಘಾತಕತನ. ಇದನ್ನು ನಾನು ಆಲನಹಳ್ಳಿ ಗೌರವಾರ್ಥ ಬರೆದಾಗ ಅವರ ತೀರಾ ಹತ್ತಿರದ ಸಂಬಂಧಿ ನನ್ನ ಫೇಸ್ಬುಕ್ ಪೋಸ್ಟನ್ನು ಎತ್ತಿ ಹಾಕಿದ್ದರು. ನಾನು ಬರೆದದ್ದನ್ನು ಅವರೇ ಬರೆದಂತೆ ತೋರಿಸಿಕೊಂಡಿದ್ದರು. ಅಭಿಮಾನಿಗಳು ಹೊಗಳಿದಾಗಲೂ, ನಾನು ಬರೆದದ್ದಲ್ಲ; ಅವರು ಬರೆದದ್ದು ಎಂದು ಹೇಳಲಿಲ್ಲ. ನಾನೀಗ ಇಷ್ಟು ಹೇಳುತ್ತೇನೆ: ನಾನು ಪಾಪಿಯ ಹೂ. ನನಗೆ ಪಾಪದ ನೆರಳಿಲ್ಲ! ನೀವು!?

ಬ್ರಾಹ್ಮಣಶಾಹಿ ಯಜಮಾನ್ಯದ ಸರ್ವಾಧಿಕಾರ ಸ್ಥಾಪನೆಯೇ ಆರೆಸ್ಸೆಸ್ ಗುರಿ – ಬೊಗಸೆಗೆ ದಕ್ಕಿದ್ದು… 19
ದೇಶದಲ್ಲಿ ಆರೆಸ್ಸೆಸ್ಸಿನ, ಬ್ರಾಹ್ಮಣ್ಯದ ಕುಟಿಲ ಸಂಚುಗಳನ್ನು ವಿಫಲಗೊಳಿಸಬೇಕಾದರೆ, ಸಂವಿಧಾನವನ್ನು, ಕಾನೂನಿನ ಆಡಳಿತವನ್ನು, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಉಳಿಸಬೇಕಾದರೆ ಇರುವ ಒಂದೇ ಒಂದು ದಾರಿಯೆಂದರೆ, ಮುಂದಿನ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಕೆಳಗಿಳಿಸುವುದು

ಹಿಟ್ಲರ್‌ನ ನಾಝಿ ಪಕ್ಷದ ಸಂಘಟನೆಯ ಮಾದರಿಯಲ್ಲಿಯೇ ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂದರೆ, ಆರೆಸ್ಸೆಸ್- ಹಿಟ್ಲರನಂತೆ ಒಂದೊಂದು ಕೆಲಸಕ್ಕೂ ಒಂದೊಂದು ಅಡಿಯಾಳು ಸಂಘಟನೆಯನ್ನು ಹೊಂದಿದೆ. ಕೆಲವು ಪರಮ ಭ್ರಷ್ಟ ಅತಿಶ್ರೀಮಂತರು ಅದರ ಬೆನ್ನಿಗಿದ್ದರೆ, ಆದು ಅವರ ಬೆನ್ನಿಗಿದೆ. ಜೊತೆಗೆ ತನ್ನದು ಸಾಂಸ್ಕೃತಿಕ, ಸಮಾಜಸೇವಾ ಸಂಘಟನೆ ಎಂದು ಹೇಳುತ್ತಾ ಬಂದಿರುವ ಅದು, ಆಳುವ ಬಿಜೆಪಿಯನ್ನೇ ನಿಯಂತ್ರಿಸುತ್ತಿದೆ. ಇದೀಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಆರೆಸ್ಸೆಸ್ಸಿನ ಸುಪ್ತ ಕನಸುಗಳನ್ನು ಸಾಕಾರಗೊಳಿಸುತ್ತಿದೆ. ಆ ಸುಪ್ತ ಕನಸುಗಳಾದರೂ ಏನು?

ಈ ಕನಸುಗಳೆಂದರೆ, ಬ್ರಾಹ್ಮಣ್ಯದ ಪ್ರಾಬಲ್ಯ ಮತ್ತು ನೇತೃತ್ವದ ವರ್ಣಾಶ್ರಮವನ್ನು ಗಟ್ಟಿಗೊಳಿಸುವುದು, ದೇಶ ಮತ್ತು ಸಮಾಜದ ನಿಯಂತ್ರಣ, ಸಂವಿಧಾನದ ಬದಲು ಮನುವಾದವನ್ನು ತರುವುದು, ನ್ಯಾಯಾಂಗವನ್ನು ನಿಯಂತ್ರಿಸುವುದು, ಶೂದ್ರವರ್ಗವನ್ನು ಸೇವಕರನ್ನಾಗಿ ಮಾಡುವುದು, ಸನಾತನ ಮೌಲ್ಯ ಆಥವಾ ಕಂದಾಚಾರಗಳನ್ನು ಮರುಸ್ಥಾಪಿಸುವುದು; ದಲಿತರು ಮುಸ್ಲಿಮರು, ಕ್ರೈಸ್ತರನ್ನು ಸಾಮಾಜಿಕವಾಗಿ ಅಡಿಗೆ ತಳ್ಳುವುದು ಅಥವಾ ಬದಿಗೆ ಸರಿಸುವುದು ಮತ್ತು ಅಂತಿಮವಾಗಿ ಹಿಂದೂತ್ವದ, ಆಂದರೆ ಬ್ರಾಹ್ಮಣಶಾಹಿ ನಿಯಂತ್ರಣದ ಸರ್ವಾಧಿಕಾರ ಸ್ಥಾಪಿಸುವುದು. ಮೋದಿ ಸರಕಾರ ವಿಧೇಯ ಸೇವಕನಂತೆ ಈ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆ ಇಡುತ್ತಿರುವುದನ್ನು ಅಂತರರಾಷ್ಟ್ರೀಯವಾಗಿಯೂ ಗಮನಿಸಲಾಗಿದೆ. ಈ ಎಲ್ಲಾ ನಡೆಗಳನ್ನು ಮತ್ತೊಮ್ಮೆ ವಿವರಿಸಬೇಕಾಗಿಲ್ಲ.

ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹೊತ್ತಿನಲ್ಲೇ  ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ಮತ್ತು ಕಾಂಗ್ರೆಸ್ ಮತ್ತು ತೆರಿಗೆ ಇಲಾಖೆಯ ನಡುವಿನ ಸದ್ಯ ನ್ಯಾಯಾಲಯದಲ್ಲಿರುವ ಹಳೆಯ ಪ್ರಕರಣದಲ್ಲಿ ತೆರಿಗೆ ವಂಚನೆಯ ಆರೋಪ ಹೊರಿಸಿ ಮುಖ್ಯ ಪ್ರತಿಪಕ್ಷದ ಬ್ಯಾಂಕ್ ಖಾತೆಯನ್ನೇ ಸ್ಥಂಬನಗೊಳಿಸಿರುವುದು ಇತ್ತೀಚಿನ ಉದಾಹರಣೆಗಳು. ಈ ಹಿನ್ನೆಲೆಯಲ್ಲಿ ಆರೆಸ್ಸೆಸ್ಸಿನ ಒಳಹೊರಗನ್ನು ಸ್ವಲ್ಪ ತಿಳಿದುಕೊಳ್ಳಬೇಕಾದ ಅಗತ್ಯವಿದೆ.

1925ರ ಸೆಪ್ಟೆಂಬರ್ 27ರಂದು ಸ್ಥಾಪನೆಯಾದ ಆರೆಸ್ಸೆಸ್ ರಾಷ್ಟ್ರಪ್ರೇಮದ ಹೆಸರಿನಲ್ಲಿ ಪ್ರತಿಪಾದಿಸುತ್ತಾ ಬಂದಿರುವ ರಾಷ್ಟ್ರ ಯಾವುದು, ಅದಕ್ಕಾಗಿ ಬಳಸಿಕೊಳ್ಳುತ್ತಿರುವ ನಾಜಿ ತಂತ್ರಗಳು ಯಾವುವು, ಅದನ್ನು ಸ್ಥಾಪಿಸಿದ ಕೇಶವರಾವ್ ಬಲಿರಾಮ ಹೆಡಗೆವಾರ್ ಯಾರು ಮತ್ತು ಆತನ ವಿಚಾರಗಳೇನು ಎಂಬುದನ್ನು ತಿಳಿದುಕೊಳ್ಳುವುದು ಇಂದಿಗೆ ಪ್ರಸ್ತುತವಾಗಿದೆ.

ಆರೆಸ್ಸಿಗರು ಡಾಕ್ಟರ್ ಜೀ ಎಂದು ಕರೆಯುವ ಈ ವ್ಯಕ್ತಿ- ಜೀವ ಉಳಿಸುವ ವೈದ್ಯನಾಗದೆ ಸಮಾಜದಲ್ಲಿ ಪ್ರಾಣ ಹರಣಕ್ಕೆ ಕಾರಣವಾಗುವ ಕೋಮುವಾದ ಹರಡುವ ವೈದ್ಯನಾದದ್ದನ್ನು ನಾವು ಮನಗಾಣಬೇಕು. ಇಂದು ಈ ವ್ಯಕ್ತಿ ಪಠ್ಯ ಪುಸ್ತಕಗಳಲ್ಲಿ ಪಾಠವಾಗಿ ಮಕ್ಕಳ ಎಳೆ ಮನಸ್ಸುಗಳನ್ನು ಪ್ರವೇಶಿಸುತ್ತಿರುವಾಗ, ಕರಾವಳಿ, ಮಲೆನಾಡಿನ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿರುವ ಆರೆಸ್ಸೆಸ್ ಶಾಖೆಗಳಲ್ಲಿ ಕುಟಿಲವಾಗಿ ರೂಪಿಸಿದ ಆಟಗಳ ಮೂಲಕ ಈತನ ವಿಚಾರಗಳನ್ನು ಹರಡಲಾಗುತ್ತಿರುವಾಗ ಇದು ಇನ್ನಷ್ಟು ಪ್ರಸ್ತುತ.

ಆರೆಸ್ಸೆಸ್ಸಿಗೆ ಮೂಲ ಪ್ರೇರಣೆಯಾಗಿದ್ದದ್ದು ಕಾಂಗ್ರೆಸಿನ ಒಳಗೇ ಇದ್ದ “ಮೇಲ್ಜಾತಿ”ಯ ಹಿಂದೂ ಮಹಾಸಭಾ ಎಂಬ ಒಂದು ಸಮಾನಾಸಕ್ತಿ ಗುಂಪು. 1923ರಲ್ಲಿ ಇದು ಮದನ ಮೋಹನ ಮಾಳವೀಯ ಎಂಬವರ ನೇತೃತ್ವದಲ್ಲಿ ಒಂದು ಸ್ವಯಂ ಆಸ್ತಿತ್ವ ಇರುವ ಸಂಘಟನೆಯಾಗಿ ಹುಟ್ಟಿತು. ಇಂದು ಈತನನ್ನೂ ಒಬ್ಬ ರಾಷ್ಟ್ರೀಯ ನಾಯಕನಾಗಿ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ‘ಹಿಂದೂ’ ಹೆಸರಿನಲ್ಲಿ ಬ್ರಾಹ್ಮಣವಾದಿ ಮೇಲ್ಜಾತಿಗಳ ಹಿತರಕ್ಷಣೆಗಾಗಿಯೇ ಇದ್ದ ಈ ಸಂಘಟನೆ ತಳವರ್ಗದವರನ್ನು ಸೇರಿಸಿಕೊಳ್ಳಲೂ ಇಲ್ಲ. ತಳವರ್ಗದವರು ಅದನ್ನು ಮೂಸಿ ನೋಡಲೂ ಇಲ್ಲ. ಅದು ವರ್ಣಾಶ್ರಮ ಧರ್ಮ, ಬ್ರಾಹ್ಮಣ್ಯದ ಮೇಲ್ಮೆಯನ್ನು ಉಳಿಸಿಕೊಳ್ಳಲು ಬಯಸುವ ಒಂದು ಪಿತೂರಿಗಾರರ, ಪ್ರಚೋದಕರ ಹಲ್ಲಿಲ್ಲದ ಸಂಘಟನೆಯಾಗಿ ಉಳಿದುಕೊಂಡಿತ್ತು. ಇದೇ ವ್ಯಕ್ತಿಗಳು ಪಂಜಾಬ್ ಹಿಂದೂ-ಸಿಖ್ ನೆಲೆಯಲ್ಲಿ ವಿಭಜನೆಯಾಗಿ “ಹಿಂದೂ” ಹರ್ಯಾಣ ಹುಟ್ಟಲು ಕಾರಣರಾದವರು. ದೇಶವನ್ನು ಕೋಮು ನೆಲೆಯಲ್ಲಿ ವಿಭಜಿಸಲು ಮುಸ್ಲಿಂ ಲೀಗ್ ಜೊತೆ ಕೈ ಜೋಡಿಸಿ ಪಾಕಿಸ್ತಾನ, ಬಾಂಗ್ಲಾ ದೇಶ ಹುಟ್ಟಲು ಕಾರಣರಾದವರು.

ಮಾಳವೀಯರ ವಿಚಾರಗಳಿಂದ ಪ್ರಭಾವಿತರಾದ ಕೇಶವರಾವ್ ಬಲಿರಾಮ ಹೆಡಗೆವಾರ್ ಅವರ ಎಳೆ ಮನಸ್ಸಿಗೆ ಹೊಕ್ಕಿದ್ದೂ ಇದೇ ಬಾಲಿಶ ವಿಚಾರಗಳೇ ಆಗಿದ್ದವು. ಕೇವಲ 5000 ಸಾವಿರ ಸೈನಿಕರನ್ನು ಹೊಂದಿದ್ದ ರಾಬರ್ಟ್ ಕ್ಲೈವ್ ಹೇಗೆ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಡಿಗಲ್ಲು ಹಾಕಿದ? ಅಲ್ಲಾವುದ್ದೀನ್ ಖಿಲ್ಜಿ ಹೇಗೆ ಹದಿನೇಳು ಬಾರಿ ದಂಡಯಾತ್ರೆ ಮಾಡಿ ಸೋಮನಾಥ ಸಹಿತ ಹಲವಾರು ದೇವಾಲಯಗಳಿಗೆ ದಾಳಿ ಮಾಡಿ ಸಂಪತ್ತು ಲೂಟಿ ಮಾಡಿದ? ಇತ್ಯಾದಿ ವಿಚಾರಗಳು ಅವರ ತಲೆಯಲ್ಲಿದ್ದವು. ಆದರೆ, ಸೋಮನಾಥಪುರದಲ್ಲಿ ಬ್ರಾಹ್ಮಣರ ಅಪಾರ ಪ್ರಮಾಣದ ಸಂಪತ್ತನ್ನು ಬಚ್ಚಿಡಲಾಗಿತ್ತು; ಅದಕ್ಕಾಗಿ ಹಿಂದೂ ರಾಜರುಗಳೂ ಅದಕ್ಕೆ ಮತ್ತು ಅಂತಹಾ ಬೇರೆ ದೇವಾಲಯಗಳಿಗೆ ದಾಳಿ ಮಾಡಿದ್ದರು; ಇದರಿಂದ ಬಡ ಜನರಿಗಾಗಲೀ ದೇವಾಲಯ ಪ್ರವೇಶ ಇಲ್ಲದ ದಲಿತರಿಗಾಗಲೀ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ; ಖಿಲ್ಜಿಯ ಸೇನಾನಾಯಕ ಮಲ್ಲಿಕ್ ಕಾಫರ್ ಒಬ್ಬ ಮತಾಂತರಗೊಂಡ ಹಿಂದೂವಾಗಿದ್ದ; ಅವನು ಮತಾಂತರವಾಗಲು ಕಾರಣವೇನು? ದಾಳಿಗಳು ನಡೆದಾಗ ಹಿಂದೂ ರಾಜರುಗಳೇನು ಮಾಡುತ್ತಿದ್ದರು? ಭಾರತ ಎಂಬ ದೇಶ ಇತ್ತೆ? ಕ್ಲೈವ್ ಆದಿಯಾಗಿ ಬ್ರಿಟಿಷರ ವಿರುದ್ಧ ಎರಡು ಮೂರು ಶತಮಾನ ಕಾಲ ಹಿಂದೂಗಳಾಗಲಿ, ಮುಸ್ಲಿಮರಾಗಲೀ- ಭಾರತೀಯರು ಎಂಬ ನೆಲೆಯಲ್ಲಿ ಯಾಕೆ ಒಟ್ಟಾಗಲಿಲ್ಲ? ಬ್ರಿಟಿಷರೂ, ಮೊಗಲರೂ, ಅವರೂ, ಇವರೂ- ಎಲ್ಲಾ ಆಡಳಿತಗಾರರು ಒಂದೇ ಎಂಬ ಭಾವನೆ- ಮೇಲು ಕೀಳಿನ ಜಾತಿವ್ಯವಸ್ಥೆಗೆ ಒಗ್ಗಿಕೊಂಡಿದ್ದ ಭಾರತೀಯರಲ್ಲಿ ಇರಲಿಲ್ಲವೆ? ಎಲ್ಲರ ಸೇವೆ ಮಾಡಿ ಬದುಕಿದವರಾದ ಶೂದ್ರರು, ದಲಿತರನ್ನು, ಒಟ್ಟಾಗಿ ಹೇಳುವುದಾದರೆ ಕೆಳವರ್ಗಗಳ ಜನರನ್ನು ಆಳಿದವರು ಇದೇ ಬ್ರಾಹ್ಮಣರಲ್ಲವೆ?

ಈ ಪ್ರಶ್ನೆಗಳು ಬಹುಶಃ ಬ್ರಾಹ್ಮಣರಾಗಿದ್ದ ಹೆಡಗೆವಾರ್ ತಲೆಗೆ ಹೊಳೆದಿರಲಾರದು. ಆತ ಹಿಂದೂ ಏಕತೆಯನ್ನು ಪ್ರತಿಪಾದಿಸಿದಾಗ, ಆ ಹಿಂದೂತ್ವ- ಸಮಾನತೆಯ ಹಿಂದೂತ್ವ ಆಗಿರಲಿಲ್ಲ. ಬದಲಾಗಿ ಬಹುಸಂಖ್ಯಾತರು ಬ್ರಾಹ್ಮಣ್ಯವನ್ನು ಒಪ್ಪಿಕೊಂಡು, ಅವರ ಅಡಿಯಾಳುಗಳಾಗಿ ಉಳಿದವರು ಬದುಕುವ ಹಿಂದೂತ್ವವಾಗಿತ್ತು. ಅವರ ಹಿಂದೂತ್ವ ವೇದ-ಉಪನಿಷದ್‌ಗಳಲ್ಲಿ ಇದ್ದ ಕೆಲವು ಉದಾತ್ತ ತತ್ವಗಳು (ಋಗ್ವೇದದ ಸಹಾನುಭವತು, ಸಹಾನೌಭುನತ್ತು… ಜತೆಗೆ ಬಾಳುವ, ಜೊತೆಗೆ ಉಣ್ಣುವ..) ಮತ್ತು ಸರ್ವೇ ಜನಾ ಸುಖಿನೋ ಭವಂತು ಎಂಬಂತಹ ಆದರ್ಶಗಳ ಮೇಲೆ ನಿಂತಿರಲಿಲ್ಲ. ಮುಖ್ಯವಾಗಿ, ಮುಸ್ಲಿಮರ ವಿರುದ್ಧ ಹಿಂದೂಗಳು ಭೇದಭಾವವನ್ನು ಒಪ್ಪಿಕೊಂಡು ಒಂದಾಗಬೇಕು ಎಂಬ ಆಗ್ರಹದ ಮೇಲೆ ನಿಂತಿತ್ತು!

ವೈದ್ಯಕೀಯ ಕಲಿಯುತ್ತಿದ್ದಾಗ ಕಲ್ಕತ್ತಾದಲ್ಲಿ ಹೆಡಗೇವಾರ್ ಅವರಿಗೆ ಬಲಪಂಥೀಯ ಭೂಗತ ಗುಪ್ತ ಸಮಾಜಗಳ ಸಂಪರ್ಕ ಸಿಕ್ಕಿತು. ಅವರ ತಂತ್ರ-ಕುತಂತ್ರಗಳನ್ನು ಬಹುಶಃ ಚೆನ್ನಾಗಿಯೇ ಕಲಿತುಕೊಂಡರು. ಅವರು ಆರೆಸ್ಸೆಸ್ ಸ್ಥಾಪಿಸುವ ಕೆಲವರ್ಷ ಮೊದಲಷ್ಟೇ ಜರ್ಮನಿಯ ಜರ್ಮನ್ ನ್ಯಾಷನಲಿಸ್ಟ್ ಸೋಷಿಯಲಿಸ್ಟ್ ಪಾರ್ಟಿ ಸ್ಥಾಪನೆಯಾಗಿತ್ತು. ಅದರ ಸಂಘಟನಾ ಸಂರಚನೆ (Organisational structure) ವಿದ್ಯಾವಂತರಾಗಿದ್ದ ಹೆಡಗೇವಾರ್ ಅವರ ಗಮನಕ್ಕೆ ಬಂದಿರುವ ಎಲ್ಲಾ ಸಾಧ್ಯತೆಗಳಿವೆ. ಆ ಪಕ್ಷದಲ್ಲಿ ಮುಂದೆ ಎಸ್‌ಎಸ್ (ಸ್ಟ್ರೂಮ್ಸ್  ಸ್ಷ್ರಾಫೆಲ್- ಭದ್ರತಾ ಸಿಬ್ಬಂದಿ ಅಥವಾ ಚೌಕಿದಾರ್!) ಎಂದು ಕರೆಸಿಕೊಂಡ ಸಮವಸ್ತ್ರಧಾರಿ ಗೂಂಡಾ ವಿಭಾಗವಿತ್ತು. ಅದು ಮುಂದೆ ಭಯಾನಕ ಹಿಂಸಾಚಾರಕ್ಕೆ ಅಸ್ತ್ರವಾಯಿತು. ಅದೇ ಮಾದರಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತರಿಗೆ ಬ್ರಿಟಿಷ್ ಕಾಲದ ಆಗಿನ ಪೊಲೀಸರ ಸಮವಸ್ತ್ರದ ಮಾದರಿಯಲ್ಲಿ (ವಿದೇಶಿ!) ಖಾಕಿ ಚಡ್ಡಿ, ಬೆಲ್ಟು-ಬೂಟುಗಳನ್ನು ನೀಡಿದ್ದಲ್ಲದೆ, ಕೈಗೊಂದು ದಂಡವನ್ನೂ ನೀಡಲಾಯಿತು! ಇದೀಗ ಉತ್ತರದ ರಾಜ್ಯಗಳಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನೂ ನೀಡಲಾಗುತ್ತಿದೆ. ಮಕ್ಕಳ ಕೈಗೆ ತ್ರಿಶೂಲ, ಖಡ್ಗಗಳನ್ನು ನೀಡಲಾಗುತ್ತಿದೆ.

ಆರೆಸ್ಸೆಸ್‌ನ ಸಂಘಟನೆಯಲ್ಲಿ ನಾಜಿ ಸಂರಚನೆ ಇರುವುದನ್ನು ಗಮನಿಸಬಹುದು. ಒಬ್ಬ ಸರಸಂಘಚಾಲಕ (ಪರಮೋಚ್ಛ ನಾಯಕ- ಹಿಟ್ಲರನಂತೆ ಫ್ಯುರರ್) ಇರುತ್ತಾನೆ. ಆತ ಪ್ರಶ್ನಾತೀತ! ನಂತರ ಸಂಘಚಾಲಕರು, ಪ್ರಾದೇಶಿಕ ಸಂಚಾಲಕರು, ಪ್ರಾಂತ ಸಂಚಾಲಕರು, ತಳಮಟ್ಟದಲ್ಲಿ ಪ್ರಚಾರಕರು ಇರುತ್ತಾರೆ. ಇವರು ಈ ಸಂಘಟನೆಗೆ ಜನರನ್ನು, ಅದರಲ್ಲೂ ಬುದ್ಧಿ ಬೆಳೆಯದ ಎಳೆಯ ಬಾಲಕರನ್ನು ಸೇರಿಸುತ್ತಾರೆ. ಸಂಘದ ಶಾಖೆಗಳಲ್ಲಿ ಭಗವಾಧ್ವಜವನ್ನು ಇಟ್ಟುಕೊಂಡು ವ್ಯಾಯಾಮ ಮತ್ತಿತರ ಕವಾಯತುಗಳನ್ನು ಅರೆಮಿಲಿಟರಿ ಮಾದರಿಯಲ್ಲಿ ನಡೆಸಲಾಗುತ್ತದೆ. (ದಕ್ಷ-ಎಟೆನ್ಷನ್, ವಿಶ್ರಮ್- ಸ್ಟ್ಯಾಂಡ್ ಎಟ್ ಈಸ್, ವಿಸರ್ಜನ್- ಡಿಸ್‌ಪರ್ಸ್ ಇತ್ಯಾದಿ).

ಪ್ರತೀ ಶಾಖೆಯಲ್ಲಿ ಒಬ್ಬ ಬೌದ್ಧಿಕ್ ಪ್ರಮುಖ್ ಇರುತ್ತಾನೆ. ಪೊಲಿಟಿಕಲ್ ಕಮಿಸ್ಸಾರ್ ರೀತಿಯಲ್ಲಿ. ಆತ ಆರೆಸ್ಸೆಸ್ ಸಿದ್ಧಾಂತಗಳನ್ನು ಹೇಳಿಕೊಟ್ಟು ಬ್ರೈನ್‌ವಾಶ್ ಮಾಡುತ್ತಾನೆ. ಆತ ಮೇಲಿನವರ ನೇರ ನಿಯಂತ್ರಣದಲ್ಲಿದ್ದು ಉಳಿದವರಿಗಿಂತ ಮೇಲಿರುತ್ತಾನೆ. ಇಲ್ಲಿ ‘ಆತ’ ಎಂಬುದಕ್ಕೆ ಮಹತ್ವ ಇದೆ. ಆರೆಸ್ಸೆಸ್‌ನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ದೇಶವನ್ನು ಭಾರತ ಮಾತೆ ಎನ್ನುವ ಆರೆಸ್ಸೆಸ್ ಬಳಗದಲ್ಲಿ ರಾಷ್ಟ್ರ ಸೇವಿಕಾ ಸಂಘ ಎಂಬ ಪ್ರತ್ಯೇಕ ಸಂಘಟನೆ ಇದೆ. ಇದು ಸ್ವಯಂಸೇವಕನೊಬ್ಬನ ತಾಯಿ ಲಕ್ಷ್ಮೀಬಾಯಿ ಕೇಳ್ಕರ್ ಎಂಬವರಿಂದ ಪ್ರಾರಂಭವಾಯಿತು. 1936ರಲ್ಲಿ ಆಕೆ ಸಂಘದಲ್ಲೇ ಸ್ತ್ರೀಯರ ವಿಭಾಗ ಒಂದನ್ನು ಸ್ಥಾಪಿಸುವಂತೆ ಹೆಡಗೆವಾರರನ್ನು ಭೇಟಿ ಮಾಡಿದಾಗ, ಆತ ಸುತಾರಾಂ ಒಪ್ಪಲಿಲ್ಲ. ಕೊನೆಗೆ ಆರೆಸ್ಸೆಸ್ ಮಾದರಿಯಲ್ಲೇ ಪ್ರತ್ಯೇಕ ಸಂಘಟನೆ ಮಾಡಿಕೊಳ್ಳಿ ಎಂದರು.

ಬೌದ್ಧಿಕ್ ಪ್ರಮುಖ್‌ಗಳು ಶಾಖೆಯಲ್ಲಿ ಆಟ, ಕತೆಗಳ ಮೂಲಕ ಹೇಗೆ ದ್ವೇಷಭಾವನೆಯನ್ನು ಗೊತ್ತೇ ಆಗದಂತೆ ಬಿತ್ತುತ್ತಾರೆ ಎಂಬುದನ್ನು ಹಿಂದೆ ಜನಸಂಘದಲ್ಲಿ ಇದ್ದು ಶಾಸಕರೂ ಆಗಿದ್ದ ಎ.ಕೆ.ಸುಬ್ಬಯ್ಯ ಅವರು ತಮ್ಮ ಆರ್.ಎಸ್.ಎಸ್ ಅಂತರಂಗ ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ. (1988, ಸಂಗಾತಿ ಪ್ರಕಾಶನ. ಈಗ ಬೇರೆ ಪ್ರಕಾಶನಗಳೂ ಮರುಮುದ್ರಣ ಮಾಡಿವೆ.)

“ಒಂದು ಉದಾಹರಣೆ ಮಾತ್ರ ಇಲ್ಲಿಡುತ್ತೇನೆ. ‘ಮೈ ಶಿವಾಜಿ ಹೂಂ’ ಎನ್ನುವ ಆಟವನ್ನು ಶಾಖೆಗಳಲ್ಲಿ ಆಡಿಸುತ್ತಾರೆ. ಮಕ್ಕಳೆಲ್ಲರೂ ‘ಮೈ ಶಿವಾಜಿ ಹೂಂ, ಮೈ ಶಿವಾಜಿ ಹೂಂ’ ಎಂದು ಓಡಾಡುತ್ತಾರೆ. ಮಧ್ಯದಲ್ಲಿ ಒಬ್ಬ ‘ಮೈ ಔರಂಗಜೇಬ್ ಹೂಂ’ ಎನ್ನುತ್ತಾನೆ. ಉಳಿದ ಮಕ್ಕಳು ಮಕ್ಕಳೆಲ್ಲರೂ ಹೋಗಿ ‘ಮೈ ಔರಂಗಜೇಬ್ ಹೂಂ’ ಎಂದವನ ಮೇಲೆ ಬೀಳುತ್ತಾರೆ – ಅವನನ್ನು ಥಳಿಸುತ್ತಾರೆ.” ಎಂದು ಸುಬ್ಬಯ್ಯ ಬರೆದಿದ್ದಾರೆ. ಇಂತದ್ದೇ ಬ್ರೈನ್ ವಾಷಿಂಗ್ ಕೆಲಸವನ್ನು ನಾಜಿಗಳು ‘ಹಿಟ್ಲರ್ ಯೂತ್’ ಎಂಬ ಸಂಘಟನೆಯ ಹೆಸರಲ್ಲಿ ಮಾಡಿದ್ದರು.

ಹಿಂದೂ ಮಹಾಸಭಾದಲ್ಲಿ ಎರಡು-ಮೂರು ವರ್ಷ ಸಕ್ರಿಯರಾಗಿದ್ದ ಹೆಡಗೆವಾರ್ ಬ್ರಿಟಿಷ್ ಗುಲಾಮ ವಿನಾಯಕ ದಾಮೋದರ ಸಾವರ್ಕರ್ ಅವರ ವಿಚಾರಗಳಿಂದಲೂ ಪ್ರಭಾವಿತರಾಗಿದ್ದರು. ಅಂಡಮಾನ್ ಜೈಲಿನಲ್ಲಿದ್ದು, ನಂತರ ಬ್ರಿಟಿಷರಿಗೆ ‘ಕ್ಷಮಾಪಣಾ’ ಪತ್ರ ಬರೆದಿದ್ದ ಸಾವರ್ಕರ್ ಅವರನ್ನು ಈಗ ವೀರ ಸಾವರ್ಕರ್ ಎಂದು ಹೊಗಳುತ್ತಿರುವ ಹಿಂದೂತ್ವದ ಬೆಂಬಲಿಗರು, ಗೋಹತ್ಯೆ ಬಗ್ಗೆ ಸಾವರ್ಕರರ ವಿಚಾರಗಳನ್ನು ತಿಳಿದರೆ  ಕಂಗಾಲಾಗಿಬಿಡಬಹುದು. ತಿನ್ನುವವರನ್ನು ಅವರ ಪಾಡಿಗೆ ಬಿಟ್ಟರೆ ಒಳ್ಳೆಯದು ಎಂಬುದು ಅವರ ನಿಲುವು.

ಆರಂಭದಲ್ಲಿ ಹೆಡಗೆವಾರ್ ಅವರು ಬ್ರಿಟಿಷರ ವಿರುದ್ಧ ಪ್ರತಿರೋಧದಲ್ಲಿ ಭಾಗವಹಿಸಿ ಒಂದು ವರ್ಷ ಜೈಲು ಅನುಭವಿಸಿದ್ದರೂ, ನಂತರ ಬ್ರಿಟಿಷರ ವಿರುದ್ಧ ಒಂದು ಗಟ್ಟಿಯಾದ ನಿಲುವು ತಳೆಯಲು ಅಸಮರ್ಥವಾಗಿದ್ದರು ಎಂಬುದು ವಾಸ್ತವ. ಇದೀಗ ಭಗತ್‌ ಸಿಂಗ್ ಅವರಂತಹ ಕಮ್ಯುನಿಸ್ಟ್ ಒಲವಿದ್ದ ಕ್ರಾಂತಿಕಾರಿಗಳನ್ನು ತಮ್ಮವರೆಂದು ಹೇಳಿಕೊಳ್ಳುತ್ತಿರುವವರು, ಆಗ ಬ್ರಿಟಿಷರನ್ನು ಓಲೈಸುವ ಕಾರ್ಯದಲ್ಲಿ ತೊಡಗಿದ್ದರು ಎಂಬುದಕ್ಕೆ ಲಿಖಿತ ಸಾಕ್ಷ್ಯಾಧಾರಗಳಿದ್ದರೂ, ಒಂದು ಅಂಕಣದ ಸೀಮಿತತೆಯಲ್ಲಿ ಅದನ್ನು ಪ್ರಸ್ತುತಪಡಿಸಲಾಗದು. ಆರೆಸ್ಸೆಸ್ಸನ್ನು ಕೇವಲ ಒಂದು ಬಾರಿ ಮಾತ್ರ ನಿಷೇಧಿಸಿದ್ದ ಬ್ರಿಟಿಷರು, ಈ ಸಂಘಟನೆಯು ತಮ್ಮ ಆಡಳಿತಕ್ಕೆ ‘ಉಪಯೋಗಿ’ ಎಂದು ಬರೆದ ಪತ್ರಗಳು ಕೂಡ ಲಭ್ಯವಿವೆ.

‘ಧರ್ಮ-ಸಂಸ್ಕೃತಿ ರಕ್ಷಣೆ ಮೂಲಕ ಸ್ವಾತಂತ್ರ್ಯ’ ಇದು ಅವರ ಘೋಷಣೆ! ಅರ್ಥವೇನು?
ನಂತರ ಬಂದ ‘ಗುರೂಜಿ’ ಅಥವಾ ಎಂ.ಎಸ್. ಗೋಲ್ವಾಲ್ಕರ್ ಎಂಬ ಸರಸಂಘಚಾಲಕರು ಸ್ವಾತಂತ್ರ್ಯ  ಚಳವಳಿಯಿಂದ ಇನ್ನಷ್ಟು ದೂರ ಸರಿದರು. ಬ್ರಿಟಿಷರಿಗೆ ಪರವಾದ ನಿಲುವುಗಳನ್ನು ಕುರಿತು 1940ರಲ್ಲಿ ಎಲ್ಲಾ ಪ್ರಾದೇಶಿಕ ಸಂಘ ಚಾಲಕರಿಗೆ ಕಳುಹಿಸಲಾಗಿತ್ತು. ಗೋಲ್ವಾಲ್ಕರ್ ಅವರ ‘ಶ್ರೀ ಗುರೂಜಿ ದರ್ಶನ’ ಸಂಪುಟ 4ರಲ್ಲಿ (ಭಾರತೀಯ ವಿಚಾರ ಸಾಧನ ಪ್ರಕಾಶನ, 1974) ಇಂತಹ ಹಲವಾರು ವಿಚಾರಗಳನ್ನು ನೋಡಬಹುದು. (‘ವೇಬ್ಯಾಕ್ ಮೆಷಿನ್’ ಎಂಬ ನೆಟ್‌ನಲ್ಲಿ ಲಭ್ಯವಿರುವ ಪಿಡಿಎಫ್‌ನಲ್ಲಿ ಕೂಡಾ ಇಂತಹ ವಿಚಾರಗಳಿವೆ). ಶಂಶುಲ್ ಇಸ್ಲಾಂ ಅವರ ‘ರಿಲೀಜಿಯಸ್ ಡೈಮೆನ್ಷನ್ಸ್’ ಎಂಬ ಪುಸ್ತಕದಲ್ಲೂ ಬಹಳಷ್ಟು ವಿವರ –ದಾಖಲೆಗಳಿವೆ.

ಅದಿರಲಿ, ದೇಶಪ್ರೇಮಿ ಎಂದು ಕರೆದುಕೊಳ್ಳುತ್ತಿರುವ ಆರೆಸ್ಸೆಸ್- ಬ್ರಿಟಿಷ್ ಆಡಳಿತದಲ್ಲಿ ಒಂದು ಬಾರಿ ಮಾತ್ರ ನಿಷೇಧಕ್ಕೆ ಗುರಿಯಾಗಿತ್ತು. ಅದು 1947ರ ಮೊದಲ ಭಾಗದಲ್ಲಿ – ಅದೂ ಕೂಡ ಪಂಜಾಬ್ ಪ್ರಾಂತ್ಯದಲ್ಲಿ! ಕಾರಣ- ಸ್ವಾತಂತ್ರ್ಯ ಹೋರಾಟವಲ್ಲ – ಅವಿಭಜಿತ ಪಂಜಾಬಿನಲ್ಲಿ ಕೋಮುಗಲಭೆ ಹಬ್ಬಿಸಲು ಯತ್ನಿಸಿದ್ದು. ಆದರೆ, ಸ್ವಾತಂತ್ರ್ಯದ ಬಳಿಕ ಆರೆಸ್ಸೆಸ್ ಮೂರು ಭಾರಿ ನಿಷೇಧಿತವಾಯಿತು!. ಯಾವುದೇ ಜನಪರ ಹೋರಾಟದ ಕಾರಣಗಳಿಗಲ್ಲ!, ದೇಶದ ಶಾಂತಿಯನ್ನು ಕದಡಿದ ಕಾರಣಕ್ಕಾಗಿ! ‘ಕದಡಿದ ನೀರಲ್ಲಿ ಮೀನು ಹಿಡಿಯುವುದು’ ಎಂಬ ಮಾತು ಆರೆಸ್ಸೆಸ್ಸಿಗೆ ಚೆನ್ನಾಗಿ ಅನ್ವಯವಾಗುತ್ತದೆ.

ಮೊದಲ ಬಾರಿಗೆ 1948ರಲ್ಲಿಯೇ ಗೃಹ ಸಚಿವ, ಉಪಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಅದನ್ನು ನಿಷೇಧಿಸಿದ್ದರು- ಕಾರಣ? ಗಾಂಧೀಜಿ ಹತ್ಯೆಯ ನಂತರ- ನಾಗಪುರ ಆದಿಯಾಗಿ ಎಲ್ಲೆಡೆ ಅದು ಸಿಹಿಹಂಚಿದ್ದು!. ಈಗ ಬಿಜೆಪಿಯೇ ಅವರ ಪ್ರತಿಮೆ ನಿರ್ಮಿಸಿ ತಮ್ಮವರೆಂದು ಹೇಳಿಕೊಳ್ಳುತ್ತಿದೆ. ಎರಡನೇ ಬಾರಿ 1975-77ರಲ್ಲಿ ತುರ್ತು ಪರಿಸ್ಥಿತಿ ವೇಳೆ. ಇದಕ್ಕೆ ಕಾರಣ -ಬಲಪಂಥೀಯರು ಬಿತ್ತುತ್ತಿದ್ದ ವಿಷಬೀಜವಾಗಿದ್ದರೆ (ಸಿಪಿಐ ಇದಕ್ಕಾಗಿ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿತ್ತು), ಇನ್ನೊಂದು ಕಡೆಯಲ್ಲಿ ಕಮ್ಯುನಿಸ್ಟರು ಪ್ರಬಲವಾಗಿ ಸಂಸತ್ತಿನಲ್ಲೂ ಗಣನೀಯ ಸ್ಥಾನ ಪಡೆದದ್ದು. ಮತ್ತೊಂದು ಕಡೆಯಲ್ಲಿ ನಕ್ಸಲೀಯರು ಕಲ್ಕತ್ತಾವನ್ನೇ ಪ್ರತಿಭಟನಕಾರರಿಂದ ತುಂಬುವಂತಹ ಪ್ರಭಾವಿ ಮಟ್ಟಕ್ಕೆ ಬೆಳೆದದ್ದು. ಮೂವರು ತದ್ವಿರುದ್ಧ ಗುಣಲಕ್ಷಣಗಳ ವಿರೋಧಿಗಳನ್ನು ಒಂದೇ ಏಟಿಗೆ ಮಟ್ಟಹಾಕುವ ದುಸ್ಸಾಹಸಕ್ಕೆ ಇಂದಿರಾ ಗಾಂಧಿಯವರು ಕೈಹಾಕಿದ್ದರು.

ಮೂರನೇ ಬಾರಿ ಅದು ಅಲ್ಪಕಾಲದ ನಿಷೇಧಕ್ಕೆ ಒಳಗಾದದ್ದು, 1992ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿ ಮುಸ್ಲಿಮರ ವಿರುದ್ಧ ಶೂದ್ರರನ್ನು, ಅಷ್ಟೇ ಏಕೆ ಇವರಿಂದ ದಮನಿತರಾದ ದಲಿತರನ್ನು ಎತ್ತಿ ಕಟ್ಟಿ-‘ಹಿಂದೂ’ ಎಂಬುದಕ್ಕೆ ಒಂದು ವಂಚಕ ವ್ಯಾಖ್ಯಾನ ಬರೆದಾಗ!.

ಇದೀಗ ಹಿಜಾಬ್, ಹಲಾಲ್ ಇತ್ಯಾದಿ ವಿವಾದಗಳನ್ನು ಎಬ್ಬಿಸುವಾಗ ಇಂದೂ ಮುಸುಕಿನಲ್ಲಿ ಕುಳಿತ ಹಿಂದೂ-ರಾಜಪೂತ ಮಹಿಳೆಯರು ನೆನಪಾಗದೆ ಮುಸ್ಲಿಂ ಮಹಿಳೆಯರ ಹಿಜಾಬ್, ಬುರ್ಖಾ ನೆನಪಾಗುತ್ತದೆ. ದಲಿತರಿಗೆ ಸತ್ತ ದನವನ್ನು ಕೊಂಡೊಯ್ದು ತಿನ್ನಿ ಎಂಬ “ಉದಾರತೆ” ತೋರಿಸಿದ ಈ ದನ ತಿನ್ನುತ್ತಿದ್ದ ಬ್ರಾಹ್ಮಣ್ಯಕ್ಕೆ ಇಂದು ದನ ತಿನ್ನುವ ಮುಸ್ಲಿಮರು, ಕ್ರೈಸ್ತರು, ದಲಿತರು ಪಾಪಿಗಳಂತೆ ಕಾಣುತ್ತಿದ್ದಾರೆ.

ಕೊನೆಗೆ ಒಂದೇ ಮಾತು: ದೇಶದಲ್ಲಿ ಆರೆಸ್ಸೆಸ್ಸಿನ, ಬ್ರಾಹ್ಮಣ್ಯದ ಕುಟಿಲ ಸಂಚುಗಳನ್ನು ವಿಫಲಗೊಳಿಸಬೇಕಾದರೆ, ಸಂವಿಧಾನವನ್ನು, ಕಾನೂನಿನ ಆಡಳಿತವನ್ನು, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಉಳಿಸಬೇಕಾದರೆ ಇರುವ ಒಂದೇ ಒಂದು ದಾರಿಯೆಂದರೆ, ಮುಂದಿನ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಕೆಳಗಿಳಿಸುವುದು.

ಕರಾವಳಿಯಲ್ಲಿ ಬೆಂಕಿ ; ಹಚ್ಚುವವರು, ಹಚ್ಚಿಸುವವರು – ಬೊಗಸೆಗೆ ದಕ್ಕಿದ್ದು.. 18
1977ರ ಕೋಮುಗಲಭೆಗಳಿಗೆ ಮುನ್ನ 1968ರಲ್ಲಿ ಮಂಗಳೂರಿನ ಬಂದರು ಪ್ರದೇಶದಲ್ಲಿ ಕೋಮುಗಲಭೆ ನಡೆದು ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದ. ಆದರೆ, ನಂತರ ದಕ್ಷಿಣ ಕನ್ನಡದಲ್ಲಿ ಗಂಭೀರ ಕೋಮುಗಲಭೆಗಳು ಕೆಲವರ್ಷ ನಡೆದಿರಲಿಲ್ಲ. 1988ರ ಗಲಭೆ, 1998-99ರಲ್ಲಿ ನಡೆದ ಅತ್ಯಂತ ಭೀಕರ ಗಲಭೆಗಳ ಬಗ್ಗೆ ಬೊಗಸೆಗೆ ದಕ್ಕಿದ್ದು-17ರಲ್ಲಿ ಬರೆದಿದ್ದೇನೆ. ಇಲ್ಲಿ ಘಟನೆಗಳನ್ನು ಕಾಲಾನುಕ್ರಮಣಿಕೆಯಲ್ಲಿ ಬರೆಯುವ ಬದಲು, ಯಾವೆಲ್ಲಾ ರೀತಿಯಲ್ಲಿ ಕೋಮುವಾದವನ್ನು, ದ್ವೇಷವನ್ನು  ಬೆಳೆಸಲಾಗುತ್ತಿದೆ ಎಂಬುದನ್ನು ವಿವರಿಸುತ್ತಾ, ಅದಕ್ಕೆ ಸಂಬಂಧಿಸಿದ ಬಿಡಿ ಘಟನೆಗಳ ವಿವರಗಳನ್ನು ಉದಾಹರಣೆಯಾಗಿ ನೀಡಲಾಗಿದೆ. ಇಲ್ಲಿ ಸಂಘಟನೆಗಳ ನಾಯಕರ ಹೆಸರುಗಳನ್ನು ಉಲ್ಲೇಖಿಸದೆ, ಕೋಮುಗಲಭೆಗೆ ಕಾರಣಗಳನ್ನು ಮಾತ್ರ ವಿಶ್ಲೇಷಿಸಲಾಗಿದೆ.

ಕೋಮು ಸಂಘಟನೆಗಳು
ಇಲ್ಲಿ ಮೊದಲಿಗೆ, ಕೋಮುವಾದದ ಬೆಳವಣಿಗೆ ಕಾರಣವಾದ ಸಂಘಟನೆಗಳನ್ನು ಗುರುತಿಸಬೇಕು. ಸಂಘಪರಿವಾರ ಎಂದು ಕರೆಯಲಾಗುವ ಆರೆಸ್ಸೆಸ್‌ನ ಅಂಗಸಂಸ್ಥೆಗಳಾದ ಹಿಂದೂ ಜಾಗರಣ ವೇದಿಕೆ, ಬಜರಂಗದಳ ಸಂಘಟನೆಗಳು, ಅವುಗಳಿಗೆ ಪ್ರತಿಸ್ಪರ್ಧಿಯಾಗಿ ಹುಟ್ಟಿಕೊಂಡಿದ್ದ ಹಿಂದೂ ಜಾಗರಣ ವೇದಿಕೆ ಮತ್ತು ಶ್ರೀರಾಮ ಸೇನೆ ಇತ್ಯಾದಿಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗುರುತಿಸಬೇಕು. ಆರೆಸ್ಸೆಸ್ ರಾಜಕೀಯ ರಹಿತ  ಸಂಘಟನೆ ಎಂದು ಹೇಳಿಕೊಳ್ಳುತ್ತಿದ್ದರೂ ಬಿಜೆಪಿಯನ್ನು (ಹಿಂದೆ ಜನಸಂಘವನ್ನು) ನಿಯಂತ್ರಿಸುವ ಬ್ರಾಹ್ಮಣ ನಾಯಕತ್ವದ ಸಂಘಟನೆಯಾಗಿದೆ.

ಕೆಲವು ಕೆಳಜಾತಿಗಳ ನಾಯಕತ್ವ ಇರುವ ಸ್ವಲ್ಪ ಕಲಿತ ಯುವಕರಿರುವ ಅಧೀನ ಸಂಘಟನೆ ಹಿಂದೂ ಜಾಗರಣ ವೇದಿಕೆಯಾಗಿದೆ. ಇದರ ಪ್ರಮುಖ ನಾಯಕರು ಮೇಲ್ಜಾತಿಯವರೇ. ಇದರ ಸದಸ್ಯರು ನೇರವಾಗಿ ಗಲಭೆಗಳಲ್ಲಿ ಭಾಗವಹಿಸದೆ ಸಂಘಟನೆ, ಪ್ರಚಾರ, ಪ್ರಚೋದನೆ, ಅಪಪ್ರಚಾರ, ಕಾರ್ಯತಂತ್ರಗಳ ಯೋಜನೆ,  ಅನುಷ್ಟಾನ ಇತ್ಯಾದಿಗಳಲ್ಲಿ ಹೆಚ್ಚಾಗಿ ತೊಡಗಿರುತ್ತಾರೆ. ಬಿಜೆಪಿಯ ಪಕ್ಷದ ಭಾವೀ ನಾಯಕರು ಮೂಡಿಬರುವುದು ಇಲ್ಲಿಂದಲೇ.

ಬಜರಂಗದಳವು ಹೆಚ್ಚು ವಿದ್ಯಾಭ್ಯಾಸವಿಲ್ಲದ, ಧರ್ಮದ ಬಗ್ಗೆ ಹೆಚ್ಚು ತಿಳಿದಿರದ ಕೆಳಜಾತಿಗಳಿಗೆ ಬಡ, ಮಧ್ಯಮ ವರ್ಗಗಳಿಗೆ ಸೇರಿದ ಅಂಧ ಸೈನಿಕರನ್ನು ಹೊಂದಿದೆ. ಇವರೇ ಹೆಚ್ಚಾಗಿ ಕೋಮುಶಾಂತಿ ಕದಡುವ ಕಾಲಾಳುಗಳಾಗಿ ನೇರವಾಗಿ ಭಾಗವಹಿಸುತ್ತಾರೆ. ಕ್ರಿಮಿನಲ್ ಹಿನ್ನೆಲೆ ಇರುವವರೂ ಇಲ್ಲಿದ್ದು, ಕೆಲವರು ಧರ್ಮಕ್ಕೆ ಸಂಬಂಧವೇ ಇಲ್ಲದ ಗುರುತರ ಅಪರಾಧಗಳಿಗಾಗಿ ಜೈಲು ಪಾಲಾಗಿದ್ದಾರೆ. ಎಲ್ಲಾ ಸಂಘಟನೆಗಳಲ್ಲಿ ಪ್ರಚೋದನಕಾರಿ ಮತ್ತು ಉದ್ರೇಕಕಾರಿ ಭಾಷಣ ಮಾಡುವವರು ಹುಟ್ಟಿಕೊಂಡಿದ್ದಾರೆ. ಇವರಲ್ಲಿ ಬಿಜೆಪಿಯ ಪ್ರಮುಖ ನಾಯಕರು ಮತ್ತು ಜನಪ್ರತಿನಿಧಿಗಳೂ ಸೇರಿದ್ದಾರೆ.

ಹಿಂದೂ ಯುವಸೇನೆಯು 1990 ದಶಕದಲ್ಲಿ ಆರೆಸ್ಸೆಸ್‌ನ ಬ್ರಾಹ್ಮಣ ಪ್ರಾಬಲ್ಯಕ್ಕೆ, ಆರೆಸ್ಸೆಸ್ಸಿನ ಸ್ಥಳೀಯ ನಾಯಕತ್ವಕ್ಕೆ ಪ್ರತಿಯಾಗಿ ಶೂದ್ರರು ಹುಟ್ಟು ಹಾಕಿದ ಸಂಘಟನೆ. ಇದು ಗಣೇಶೋತ್ಸವ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುತ್ತಾ, ಅಂಬ್ಯುಲೆನ್ಸ್ ಸೇವೆ ಇತ್ಯಾದಿ ಒದಗಿಸುತ್ತಾ, ಸಾಕಷ್ಟು ಪ್ರಬಲವಾಗಿ ಬೆಳೆಯುತ್ತಿತ್ತು. ಇದರಲ್ಲಿ ಹಿಂದೂ ಗೂಂಡಾ ಎಲಿಮೆಂಟುಗಳು ದೊಡ್ಡ ಪ್ರಮಾಣದಲ್ಲಿ ಇದ್ದವು. ಉತ್ತಮ ಸಂಘಟಕನಾಗಿದ್ದ ಇದರ ಸ್ಥಾಪಕ ಗುಣಕರ ಶೆಟ್ಟಿ ಮಂಗಳೂರಿನ ಗಣಪತಿ ಹೈಸ್ಕೂಲಿನ ಬಳಿ ಹಿಂದೂಗಳಿಂದಲೇ ಕೊಲೆಯಾದ ಬಳಿಕ ಅದರ ಪ್ರಭಾವ ಸಂಪೂರ್ಣ ಕುಸಿದು, ಸದಸ್ಯರು ಬೇರೆಬೇರೆ ಸಂಘಟನೆಗಳಲ್ಲಿ ಹರಿದು ಹಂಚಿಹೋದರು.

ಶ್ರೀರಾಮ ಸೇನೆಯು ಹಿಂದೂ ಹೆಸರಿನಲ್ಲಿ ಯಾವುದೇ ತಾತ್ವಿಕ ನೆಲೆಗಟ್ಟು ಇಲ್ಲದ, ಮುಖ್ಯವಾಗಿ ಗೂಂಡಾ ಎಲಿಮೆಂಟುಗಳಿಂದಲೇ ತುಂಬಿದ ಸಂಘಟನೆಯಾಗಿದೆ. ವಸೂಲಿ, ಬಡ್ಡಿ ವ್ಯವಹಾರ, ಗೋರಕ್ಷಣೆಯ ನೆಪದಲ್ಲಿ ದಾಳಿ, ನೈತಿಕ ಪೊಲೀಸ್‌ಗಿರಿ ಇತ್ಯಾದಿ ನೆಪದಲ್ಲಿ ಹಲ್ಲೆ ಮತ್ತು ದಾಳಿ, ಕೋಮುಪ್ರಚೋದಕ ಭಾಷಣ, ಅನ್ಯ ಕೋಮಿನವರ ಮೇಲೆ ಅಕಾರಣ ಹಲ್ಲೆ ಇತ್ಯಾದಿಗಳನ್ನು ನಡೆಸಿದ ಆರೋಪ ಈ ಸಂಘಟನೆಯ ಮೇಲಿದೆ.

ಮುಸ್ಲಿಮರು ಹಿಂದೆ ಇಂತಹಾ ಬಲವಾದ ಯೋಜಿತ ಸಂಘಟನೆಗಳನ್ನು ಹೊಂದಿರಲಿಲ್ಲ. ಅವರ ಕೃತ್ಯಗಳು ರಕ್ಷಣಾತ್ಮಕ ಮತ್ತು ಪ್ರತಿಕ್ರಿಯಾತ್ಮಕವಾಗಿದ್ದವು. ತಮ್ಮ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮಾತ್ರ ಅವರು ಆಕ್ರಮಣಕಾರಿಯಾಗಿದ್ದರು. ಕೋಮುಗಲಭೆಗಳ ಸಂದರ್ಭಗಳಲ್ಲಿ ಮಸೀದಿಗಳಲ್ಲಿ ಒಟ್ಟು ಸೇರುತ್ತಿದ್ದರು. ನಂತರ ಬೇರೆ ಬೇರೆ ಮಸೀದಿಗಳಿಗೆ ಸಂದೇಶ ಹೋಗಿ ಉದ್ರಿಕ್ತ ಪರಿಸ್ಥಿತಿ ಉಂಟಾಗುತ್ತಿತ್ತು. ಇದೊಂದು ರಕ್ಷಣಾತ್ಮಕ ಪ್ರತಿಕ್ರಿಯೆಯಾಗಿರುತ್ತಿತ್ತು.  ಆದರೆ, ಮುಸ್ಲಿಂ  ಧಾರ್ಮಿಕ ನಾಯಕರನ್ನು ಸಂಪರ್ಕಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿತ್ತು. ಕಾಂಗ್ರೆಸ್ ಅವರನ್ನು ಬೆಂಬಲಿಸುತ್ತಿತ್ತು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ಬಳಿಕ ಪರಿಸ್ಥಿತಿ ನಿಧಾನವಾಗಿ ಮತ್ತು ಸಂಪೂರ್ಣವಾಗಿ ಬದಲಾಯಿತು. ಹಲವಾರು ಉಗ್ರವಾದಿ, ಆಕ್ರಮಣಕಾರಿ ಸಂಘಟನೆಗಳು ಹುಟ್ಟಿಕೊಂಡವು. ಅವು ಧಾರ್ಮಿಕ ನಾಯಕರ ನಿಯಂತ್ರಣಕ್ಕೂ ಸಿಗದಾದವು.

ಎರಡು ಕೋಮುಗಳ ನಡುವಿನ ಕಂದರ ವಿಸ್ತಾರವಾಗುತ್ತಾ ಹೋಯಿತು. ಗ್ರಾಮ ಮಟ್ಟದಲ್ಲಿ ನಡೆಯುತ್ತಿದ್ದ ಭೂತದೈವಾರಾದನೆ ಜಾತ್ರೆಗಳಿಗೆ ಹೋಗುವುದನ್ನು ಮುಸ್ಲಿಮರು ನಿಲ್ಲಿಸಿದರು. ಹೋದವರನ್ನು ಹಿಂದೂ ಸಂಘಟನೆಗಳವರು ಹೊಡೆದೋಡಿಸಲು ಆರಂಭಿಸಿದರು. ದರ್ಗಾಗಳಿಗೆ ಹೋಗುತ್ತಿದ್ದ ಮುಸ್ಲಿಮೇತರರ ಸಂಖ್ಯೆ ಕಡಿಮೆಯಾಯಿತು. ಮುಸ್ಲಿಮರಲ್ಲಿಯೂ ಸಂಘಟನೆ, ಪ್ರತಿರೋಧ, ಆಂದೋಲನ ಬಲವಾಗುತ್ತಾ ಹೋಯಿತು. 1993-2006ರ ತನಕ ಈ ಪ್ರಕ್ರಿಯೆ ನಡೆಯಿತು. ಕರ್ನಾಟಕ ಫಾರಂ ಫಾರ್ ಡಿಗ್ನಿಟಿ (ಕೆಡಿಎಫ್) ಹುಟ್ಟಿಕೊಂಡು ಮುಸ್ಲಿಮರಿಗಾದ ಅನ್ಯಾಯಗಳ ವಿರುದ್ಧ ಪ್ರತಿಭಟನೆ ಆರಂಭಿಸಿತು. ಇಂತಹಾ ಚಟುವಟಿಕೆಗಳೇ ಮುಂದೆ ಹೆಚ್ಚು ಆಕ್ರಮಣಕಾರಿಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್.ಐ) ಸ್ಥಾಪನೆಗೆ ಕಾರಣವಾಯಿತು. ಅದು ಹಿಂದೂ ಸಂಘಟನೆಗಳ ಪ್ರತಿರೂಪವಾಗಿ, ಅವು ಹಿಂದೂ ಹುಡುಗಿಯರ ವಿರುದ್ಧ ಪೊಲೀಸ್‌ಗಿರಿ ನಡೆಸುವಂತೆ, ತಾನು ಮುಸ್ಲಿಂ ಮಹಿಳೆಯರ ಮೇಲೆ ಪೋಲೀಸ್‌ಗಿರಿಗೆ ಇಳಿಯಿತು. ಜೊತೆ ಸಂಘಪರಿವಾರದಂತೆ ಹಿಂಸಾಚಾರ, ಪ್ರತೀಕಾರ ಕೃತ್ಯಗಳಿಗೂ ಮುಂದಾಯಿತು. ಮುಂದೆ ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರೂಪದಲ್ಲಿ ರಾಜಕೀಯ ಪಕ್ಷವಾಗಿ ಚುನಾವಣಾ ರಾಜಕಾರಣಕ್ಕೆ ಇಳಿದ ಬಳಿಕ ಅದಕ್ಕೆ ಹೆಚ್ಚಿನ ಬಲವೂ ಬಂತು. ಚೌಕಾಸಿಯ ಶಕ್ತಿಯೂ ಬಂತು. ಸಮಸ್ಯೆ ಇನ್ನಷ್ಟು ಪ್ರಚೋದಕವೂ, ಜಟಿಲವೂ ಆಯಿತು. ಈ ಸಂಘಟನೆಗಳಲ್ಲೂ ತಾತ್ವಿಕ ಹಿನ್ನೆಲೆ ಇರುವವರು ಇದ್ದರೂ, ಗೂಂಡಾ ಮತ್ತು ಕ್ರಿಮಿನಲ್ ಎಲಿಮೆಂಟುಗಳು ದೊಡ್ಡ ಪ್ರಮಾಣದಲ್ಲಿವೆ. ಪ್ರಚೋದನಕಾರಿ ಭಾಷಣ ಮಾಡುವ ರಾಜಕೀಯ, ಧಾರ್ಮಿಕ ನಾಯಕರೂ ಇಲ್ಲಿಯೂ ಇದ್ದಾರೆ.

ಈ ರೀತಿಯ ಬೆಳವಣಿಗೆಗೆ ಕಾರಣವಾದ ಘಟನೆಗಳಲ್ಲಿ ಒಂದನ್ನು ಇಲ್ಲಿ ಗುರುತಿಸಲಾಗಿದೆ. ಇದು ಮುಂದೆ ಪೊಳಲಿ, ಮಾಡೂರು ಮುಂತಾದ ಪ್ರದೇಶಗಳು ಹಲವು ಕೊಲೆಗಳಿಗೆ ಸಾಕ್ಷಿಯಾಗಿ, ಕೋಮುಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿಕೊಳ್ಳುವುದಕ್ಕೆ ಕಾರಣವಾಯಿತು. 2006ರ ಅಕ್ಟೋಬರ್ 7ರಂದು ಬಜರಂಗ ದಳದ ಕಾರ್ಯಕರ್ತರ ಗುಂಪೊಂದು ಪೊಳಲಿಯಲ್ಲಿ ಅಂಬ್ಯುಲೆನ್ಸ್ ಒಂದನ್ನು ತಡೆದು ನಿಲ್ಲಿಸಿತು. ಬೊಳಿಯಾರಿನ ಮೊಹಮ್ಮದ್ ಅಶ್ರಫ್ ಎಂಬವರು ದುಬೈಗೆ ವಿಮಾನ ಹಿಡಿಯಲು ಇತರ ಏಳು ಮಂದಿ ಗೆಳೆಯರ ಜೊತೆ ಅವರಲ್ಲೊಬ್ಬರ ಅಂಬ್ಯುಲೆನ್ಸ್ ಕಾರಿನಲ್ಲಿ ಬಜ್ಪೆಗೆ ತೆರಳುತ್ತಿದ್ದರು. ಅವರನ್ನು ನಿಲ್ಲಿಸಿ ಕೆಳಗಿಳಿಸಿದ ಈ ಕಾರ್ಯಕರ್ತರು ಜೈ ಶ್ರೀ ರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದರು. ಅವರು ಒಪ್ಪದೇ ಇದ್ದಾಗ ಯದ್ವಾತದ್ವಾ ತಲವಾರು ಬೀಸಿದರು. ಅವರಲ್ಲಿ ಇಬ್ರಾಹಿಂ ಎಂಬವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಎಲ್ಲರೂ ಆಸ್ಪತ್ರೆ ಸೇರಿದರು. ಕೋಮುಗಲಭೆಗಳಲ್ಲಿ ನಡೆದ ಕೊಲೆ, ಪ್ರತೀಕಾರದ ಯೋಜಿತ ಕೊಲೆಗಳನ್ನು ಹೊರತುಪಡಿಸಿದರೆ, ಉಡುಪಿಯ ಹಿರಿಯಡ್ಕದಲ್ಲಿ ಪರಿಚಯವೂ ಇಲ್ಲದವರ ಮೇಲೆ, ಕೇವಲ ಕೋಮುಕಾರಣಕ್ಕಾಗಿ ಗೋಸಾಗಾಟದ ಆರೋಪದಲ್ಲಿ ಮುಸ್ಲಿಂ ತಂದೆ-ಮಗನನ್ನು ಬೆತ್ತಲೆಗೊಳಿಸಿ ಥಳಿಸಲಾದ ರಾಜ್ಯದ  ಮೊದಲ ಸಾಮೂಹಿಕ ಲಿಂಚಿಂಗ್ ಪ್ರಕರಣವು ಒಂದು ಅಮಾನುಷ ಘಟನೆ. ಇದರಲ್ಲಿ ತಂದೆ ಹುಸೈನಬ್ಬ ಎಂಬ ವೃದ್ಧ  ಸಾವಿಗೀಡಾಗಿದ್ದರು. ಇದರ ಆರೋಪಿಗಳು ಬಿಡುಗಡೆಗೊಂಡಾಗ ಹೂಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು. ಇದು ಮುಸ್ಲಿಂ ಉಗ್ರವಾದಿ, ಪ್ರತೀಕಾರವಾದಿ ಸಂಘಟನೆಗಳನ್ನು ಇನ್ನಷ್ಟು ಬಲಗೊಳಿಸಿತು.

ಆ ನಂತರ ಮೇ 13, 2003ರಲ್ಲಿ ಮಂಗಳೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಆಗಿನ ಅಧ್ಯಕ್ಷರಾಗಿದ್ದ  ಎಂ.ಡಿ. ಜಬ್ಬಾರ್ ಅವರನ್ನು ಹೆಂಡತಿ ಮಕ್ಕಳ ಎದುರೇ ಕೊಂದದ್ದು, ಪ್ರತೀಕಾರವಾಗಿ ನ್ಯಾಯಾಲಯದಲ್ಲಿ  ಬಿಡುಗಡೆಗೊಂಡ ಅದರ ಮುಖ್ಯ  ರೂವಾರಿ ಎನ್ನಲಾದ ಪೊಳಲಿ ಅನಂತು ಎಂಬಾತನನ್ನು ಕೊಂದದ್ದು ಸೇರಿದಂತೆ ಕೋಮುಸಂಬಂಧಿ ಕೊಲೆಗಳ ಸರಣಿಯೇ ನಡೆದಿದೆ. ಜೊತೆಗೆ ಯಾರ ಜೊತೆಗೂ ಜಗಳವಿಲ್ಲದ ಅಮಾಯಕ ವ್ಯಕ್ತಿಗಳೂ ಎರಡೂ ಕಡೆಗಳಲ್ಲಿ ಬಲಿಯಾಗಿದ್ದಾರೆ. ಇಲ್ಲಿ ಕೊಲೆಯಾದವರೂ, ಜೈಲಿನಲ್ಲಿ ಕೊಳೆತವರೂ ಎಲ್ಲರೂ ಕೆಳಜಾತಿಗಳ, ಕೆಳವರ್ಗಗಳ ಸಾಮಾನ್ಯ ಜನರಾಗಿರುವುದು ಗಮನಾರ್ಹ.

1990ರ ದಶಕದಲ್ಲಿ ಈಗ ಭಯೋತ್ಪಾದನೆ ಆರೋಪದಲ್ಲಿ ಜೈಲಿನಲ್ಲಿರುವ ಕೇರಳ ಪಿಡಿಎಫ್ ಪಕ್ಷದ ನಾಯಕನಾಗಿದ್ದ ಅಬ್ದುಲ್ ನಾಸೆರ್ ಮದನಿಯ ಮಂಗಳೂರು ಸಭೆಯು ಸಾಮಾನ್ಯ ಹಿಂದೂಗಳಲ್ಲಿಯೂ ನಡುಕ ಹುಟ್ಟಿಸುವಂತಿತ್ತು. ಆರೆಸ್ಸೆಸ್ ಮಾದರಿಯಲ್ಲಿ ಕಪ್ಪು ಮಿಲಿಟರಿ ರೀತಿಯ ಸಮವಸ್ತ್ರ ಧರಿಸಿದ ಕಾರ್ಯಕರ್ತರ ದಂಡೇ ಮೆರವಣಿಗೆ ಮತ್ತು ಸಭೆಯಲ್ಲಿತ್ತು. ಇದು ಕೂಡಾ ಸಾಮಾನ್ಯ ಹಿಂದೂ ಮತ್ತು ಮುಸ್ಲಿಮರಿಬ್ಬರೂ ಪರಸ್ಪರ ಹೆಚ್ಚು ಅಪನಂಬಿಕೆ ತೋರಿ, ಕೋಮುವಾದಿಗಳ ಕಡೆಗೆ ವಾಲುವಂತೆ ಮಾಡಿತು.

ಸಂಘಟನೆಗಳ ಸ್ವರೂಪ
ಜಿಲ್ಲೆಯಲ್ಲಿ ನಡೆದಿರುವ ಕೋಮುಗಲಭೆ ಮತ್ತು ಹಿಂಸಾಚಾರಗಳನ್ನು ಸ್ಥೂಲವಾಗಿ ಗಮನಿಸುವ ಮೊದಲು ಎರಡೂ ಕೋಮುಗಳ ಸಂಘಟನೆಗಳಲ್ಲಿ ಇರುವ ಸಮಾನತೆಗಳನ್ನು ಮತ್ತು ಅವುಗಳ ರಚನೆಗಳನ್ನು ಗುರುತಿಸುವ ಅಗತ್ಯವಿದೆ.

ಮುಖ್ಯವಾಗಿ ಎರಡೂ ರೀತಿಯ ಸಂಘಟನೆಗಳಲ್ಲಿ ಸೂತ್ರಧಾರಿಗಳಾಗಿರುವವರು ಅತ್ಯಂತ ಪ್ರಭಾವಿಗಳಾಗಿರುವ ಮೇಲ್ಜಾತಿ ಮತ್ತು ಮೇಲ್ವರ್ಗಗಳ ಮುಂದಾಳುಗಳು, ಶ್ರೀಮಂತ ವರ್ತಕರು, ಉದ್ಯಮಿಗಳು, ಧಾರ್ಮಿಕ ಅಥವಾ ರಾಜಕೀಯ ನಾಯಕರಾಗಿರುತ್ತಾರೆ. ಅವರು ಎಲ್ಲಿಯೂ ನೇರವಾಗಿ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದೇ ಎಲ್ಲವನ್ನೂ ನಿಯಂತ್ರಿಸುತ್ತಾರೆ. ಇವರನ್ನು ಮುಟ್ಟಲು ಯಾವುದೇ ಸರಕಾರ ಹಿಂಜರಿಯುವ ಪರಿಣಾಮವಾಗಿ ಪೊಲೀಸರೂ ಅಸಹಾಯಕರಾಗಿರಬೇಕಾಗುತ್ತದೆ. ಜಿಲ್ಲೆಯಲ್ಲಿ ಇದನ್ನು ಮೀರಿದ ಅನೇಕ ಅಧಿಕಾರಿಗಳು ವರ್ಗಾವಣೆಗೆ ಒಳಗಾದ ಹಲವು ನಿದರ್ಶನಗಳಿವೆ. ಇವರು ಗಲಭೆಗಳಲ್ಲಿ, ಕ್ರಿಮಿನಲ್ ಕೃತ್ಯಗಳಲ್ಲಿ ಬಂಧಿತರಾದವರನ್ನು ಬಿಡಿಸುವುದು, ನೆರವು ನೀಡುವುದು ಇತ್ಯಾದಿಗಳ ಮೂಲಕ ಜೀವನಪರ್ಯಂತ ಗುಲಾಮರನ್ನಾಗಿ ಮಾಡುತ್ತಾರೆ.

ಎರಡನೇ ರೀತಿಯವರೆಂದರೆ ಎರಡನೇ ಹಂತದ ನಾಯಕರಾಗಿರುವವರು. ಇಂತವರಲ್ಲಿ ಕೆಲವರು ತಾತ್ವಿಕ ನಿಷ್ಟೆ ಹೊಂದಿದ್ದರೂ, ಹೆಚ್ಚಿನವರು ಕೆಳಹಂತದ ರಾಜಕೀಯ ನಡೆಸುವ ಮರಿ ಪುಡಾರಿಗಳು, ಮರಳು, ಬಡ್ಡಿ ವ್ಯವಹಾರ, ಗೂಂಡಾಗಿರಿ, ವಸೂಲಿ, ಕ್ಲಬ್, ಜೂಜು, ವಾಹನ, ಭೂವ್ಯವಹಾರ, ಮ್ಯಾನ್ ಪವರ್ ಇತ್ಯಾದಿಯಾಗಿ ಅಕ್ರಮ ಚಟುವಟಿಕೆಗಳನ್ನೂ, ಅಂಗಡಿ, ಶೋರೂಂ, ಗುತ್ತಿಗೆ, ಮದ್ಯ ಮಾರಾಟ ಇತ್ಯಾದಿಯಾಗಿ ಅರೆಕಾನೂನು ಬಾಹಿರ, ಅಂದರೆ ಉದ್ದಿಮೆ ಕಾನೂನುಬದ್ಧವಾಗಿದ್ದರೂ ಅಕ್ರಮ ಚಟುವಟಿಕೆ ನಡೆಸುವ ವ್ಯವಹಾರಗಳಲ್ಲಿ ತೊಡಗಿಕೊಂಡವರಾಗಿದ್ದಾರೆ. ಇವರು ಧಾರ್ಮಿಕ, ಕ್ರೀಡಾ ಸೋಗಿನ ಕಾರ್ಯಕ್ರಮಗಳನ್ನು ನಡೆಸುತ್ತಾ, ನೆರವು ನೀಡುತ್ತಾ, ಬಾವುಟ, ಬಂಟಿಂಗ್, ಬ್ಯಾನರ್, ಕಟೌಟ್ ಇತ್ಯಾದಿಗಳಲ್ಲಿ ಸ್ಪರ್ಧೆ ನಡೆಸುತ್ತಾ, ಕ್ಷುಲ್ಲಕ ಕಾರಣಗಳಿಗಾಗಿ ತಂಟೆ ತಕರಾರು, ಉದ್ವಿಗ್ನತೆ ಎಬ್ಬಿಸುತ್ತಾ, ಸಭೆ, ಪ್ರತಿಭಟನೆಗಳನ್ನು ಆಯೋಜಿಸುತ್ತಾ ಇರುತ್ತಾರೆ. ಇಂತವರಿಗೆ ಗೂಂಡಾ ಎಲಿಮೆಂಟುಗಳನ್ನು ಪೋಷಿಸುವುದು, ತಮ್ಮ ಚಟುವಟಿಕೆಗಳಿಗೆ ರಾಜಕೀಯ, ಧಾರ್ಮಿಕ ನಾಯಕರ ಆಶೀರ್ವಾದ ಪಡೆಯುವುದು ಅನಿವಾರ್ಯವಾಗಿರುತ್ತದೆ. ಇವರು ಕೂಡಾ ಕಾನೂನಿನ ಕೈಗೆ ಸಿಗುವುದಿಲ್ಲ.

ಮೂರನೇ ವರ್ಗವೆಂದರೆ ಇಂತಹಾ ಗಲಭೆ ಗಲಾಟೆಗಳಲ್ಲಿ ಭಾಗವಹಿಸಿ ಜೀವ ಕಳೆದುಕೊಳ್ಳುವ, ಜೀವ ತೆಗೆಯುವ, ಜೀವ ಕಳೆದುಕೊಳ್ಳುವ, ಹಲ್ಲೆ ಮಾಡುವ, ಹಲ್ಲೆಗೆ ಒಳಗಾಗುವ, ಜೈಲುಪಾಲಾಗುವ, ಜೀವನ ಹಾಳುಮಾಡಿಕೊಳ್ಳುವ, ಹೆತ್ತವರು ಮತ್ತು ಕುಟುಂಬವನ್ನು ಸಂಕಟಕ್ಕೆ ತಳ್ಳುವ ಯುವಕರು. ಇವರಲ್ಲಿ ಕೆಲವರು ಪ್ರಾಮಾಣಿಕವಾಗಿಯೇ ಕೋಮು ಪಿತ್ತವನ್ನು ನೆತ್ತಿಗೇರಿಸಿಕೊಂಡವರು. ಇಂತವರಲ್ಲಿ ಕುಡುಕರು, ಗಾಂಜಾ ವ್ಯಸನಿಗಳು, ನಿರುದ್ಯೋಗಿಗಳು, ಸೋಮಾರಿಗಳು, ಶೋಕಿಲಾಲರು, ಗೂಂಡಾಗಳು, ಸೈಕೊಗಳು, ಕಳ್ಳ ದರೋಡೆಕೋರರು, ರೇಪಿಸ್ಟರೇ ಮೊದಲಾಗಿ ಪಕ್ಕಾ ಕ್ರಿಮಿನಲ್‌ಗಳು ಇರುತ್ತಾರೆ. ಮೊದಲಿಗೆ ಇವರಿಗೆ ನೆರವಾಗುವ ಸಂಘಟನೆಗಳು, ಪಕ್ಷಗಳು ಅವರು ತೊಂದರೆಗೆ ಸಿಲುಕಿ ಮುಳುಗುತ್ತಿರುವಾಗ ಕೈ ಬಿಡುತ್ತವೆ. ಅವರಿಗೂ ತಮಗೂ ಸಂಬಂಧವೇ ಇಲ್ಲ ಎಂದು ಹೇಳಿ ಕೈತೊಳೆದುಕೊಳ್ಳುತ್ತವೆ. ಸತ್ತಾಗ ಪ್ರತಿಭಟನೆಯ ನಾಟಕವಾಡುತ್ತಾ, ಪ್ರತೀಕಾರಕ್ಕಾಗಿ ಪ್ರಚೋದಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಇದು ಎಲ್ಲಾ ಬಣ್ಣಗಳ ಮಟ್ಟಿಗೂ ನಿಜ. ಹೆಚ್ಚಿನ ಸಲ ಎರಡೂ ಕೋಮುಗಳಿಗೆ ಸೇರಿದ ಇಂತವರ ನಡುವಿನ ವೈಯಕ್ತಿಕ ವ್ಯವಹಾರ ಮತ್ತು ಸ್ಪರ್ಧೆಗೆ ಸಂಬಂಧಿಸಿಯೇ ಕೋಮು ಉದ್ವಿಗ್ನತೆ ಉಂಟಾಗುತ್ತದೆ.

ನಾಲ್ಕನೇ ವರ್ಗವೇ ಇಂತಹಾ ಕೋಮುವಾದಿ ಚಟುವಟಿಕೆಗಳು, ಹಿಂಸಾಚಾರ, ಬಂದ್ ಪ್ರತಿಭಟನೆಗಳಿಂದ ಕೆಲಸವಿಲ್ಲದೇ ತೊಂದರೆ ಅನುಭವಿಸುವ, ಕೆಲವೊಮ್ಮೆ ಹಲ್ಲೆಗೂ ಒಳಗಾಗುವ ಕಾರ್ಮಿಕರಾದಿಯಾಗಿ ಜನಸಾಮಾನ್ಯರು. ಇವರು ಯಾವ ಚಟುವಟಕೆಗಳಲ್ಲಿ ಭಾಗವಹಿಸದಿದ್ದರೂ, ತೊಂದರೆ ಅನುಭವಿಸಿದರೂ ಮಾನಸಿಕವಾಗಿ ಒಂದಲ್ಲ ಒಂದು ಗುಂಪು ಅಥವಾ ಪಕ್ಷವನ್ನು ಮುಗ್ಧವಾಗಿ ಬೆಂಬಲಿಸುವವರು ಅಥವಾ ಸಮರ್ಥಿಸುವವರು.

ಇಲ್ಲೊಂದು ವಿಚಿತ್ರ ವಿದ್ಯಮಾನವನ್ನು ಗಮನಿಸಬೇಕು. ಅದೆಂದರೆ, ಸಾರ್ವಜನಿಕವಾಗಿ ಕಚ್ಚಾಡುವಂತೆ ಕಾಣಿಸಿಕೊಳ್ಳುವ ಒಂದನೇ ಮತ್ತು ಎರಡನೇ ಹಂತದ ನಾಯಕರು ಪರಸ್ಪರ ಸಂಪರ್ಕ, ವ್ಯವಹಾರದಲ್ಲಿದ್ದು, ಜನಸಾಮಾನ್ಯರನ್ನು ಮಾತ್ರ ಕಚ್ಚಾಡಿಸುವುದು. ಇದಕ್ಕೆ ಎರಡು ಉದಾಹರಣೆಗಳನ್ನು ಕೊಡಬಹುದು.

ರಾಜಕೀಯವಾಗಿ, ಎಸ್‌ಡಿಪಿಐಯ ಮೇಲೆ ಇರುವ ಆರೋಪವೆಂದರೆ, ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ತೀವ್ರ ವಿರುದ್ಧವಾಗಿರುವಂತೆ ತೋರಿಸಿಕೊಳ್ಳುತ್ತದೆ. ಕಾಂಗ್ರೆಸ್ ಅಷ್ಟು ಪ್ರಬಲ ವಿರೋಧ ಮಾಡುತ್ತಿಲ್ಲ; ಮೃದು ಹಿಂದೂತ್ವ ತಳೆಯುತ್ತಿದೆ ಎಂದು ಆರೋಪಿಸುತ್ತದೆ. ಆದರೆ ಚುನಾವಣೆಯ ವೇಳೆ ಸ್ಪರ್ಧಿಸಿ, ಮುಸ್ಲಿಂ ಮತಗಳನ್ನು ಒಡೆದು, ತಾನೂ ಗೆಲ್ಲದೆ, ತನ್ನ ಪರಮ ವೈರಿಯಾದ ಬಿಜೆಪಿ ಗೆಲ್ಲಲು ಸುಲಭ ಮಾಡಿಕೊಡುತ್ತಿದೆ ಎಂಬದೇ ಈ ಆರೋಪ.

ವ್ಯವಹಾರದ ಉದಾಹರಣೆ ಕೊಡಬೇಕೆಂದರೆ, ಶ್ರೀಮಂತ ಮುಸ್ಲಿಮರ ಒಡೆತನದ ಮಂಗಳೂರಿನ ಹೆಚ್ಚಿನ ಮಾಲ್, ಬಜಾರ್, ಆರ್ಕೇಡ್, ಶೋರೂಂಗಳ ಸೆಕ್ಯುರಿಟಿ ಗುತ್ತಿಗೆಯನ್ನು ಹಿಂದೂ ಸಂಘಟನೆಗಳು ನಡೆಸುವ ಸೆಕ್ಯೂರಿಟಿ ಏಜೆನ್ಸಿಗಳಿಗೆ ನೀಡಲಾಗಿದೆ. ಗಲಾಟೆ ಮಾಡುವವರೇ ಕಾವಲುಗಾರರಾದರೆ, ಗಲಾಟೆಯೇ ಇರುವುದಿಲ್ಲ ಎಂಬ ತರ್ಕ ಇರಬಹುದು. ಆದರೆ, ಈ ಕೋಮು ಸಂಘಟನೆಗಳಿಗೆ ತಮ್ಮ ಗೂಂಡಾ ಪಡೆಗಳಿಗೆ ಸುಲಭದ ಉದ್ಯೋಗ ಒದಗಿಸಿ, ಸಾಕಲು ಇದು ಅನುಕೂಲವಾಗುತ್ತದೆ. ಜನಸಾಮಾನ್ಯರಿಗೆ ಇದರ ಪರಿವೆಯೇ ಇರುವುದಿಲ್ಲ.

ಒಟ್ಟಿನಲ್ಲಿ ದಕ್ಷಿಣ ಕನ್ನಡದ ಕೋಮು ಸಮಸ್ಯೆಗೆ ಧರ್ಮ ಒಂದು ನೆಪವಾಗಿದ್ದು, ಅದರ ಮೂಲ ಮೇಲು ಜಾತಿ ಮತ್ತು ವರ್ಗಗಳ ರಾಜಕೀಯ ಮತ್ತು ಆರ್ಥಿಕ ಮಾಫಿಯಾದಲ್ಲಿದೆ. ಆರ್ಥಿಕವಾಗಿ ಮುಂದುವರಿದಿರುವ, ಅತೀಬುದ್ಧಿವಂತರ ಜಿಲ್ಲೆಗಳಲ್ಲಿ ಕೋಮುವಾದ ಬೆಳೆಯಲು ಈ ಆರ್ಥಿಕ ಕಾರಣವೂ ಒಂದಾಗಿರಬಹುದು ಮತ್ತು ಗೂಂಡಾಗಿರಿ ಮಾಡುವವರಿಗೆ ಒಂದು ಧಾರ್ಮಿಕ ಐಡೆಂಟಿಟಿ ಮತ್ತು ಹುಸಿ ಸ್ದಾನಮಾನ ದೊರಕಿಸಿಕೊಡುವುದು ಇನ್ನೊಂದು ಕಾರಣವಾಗಿರಬಹುದು.

ದಕ್ಷಿಣ ಕನ್ನಡದಲ್ಲಿಕೋಮುಗಲಭೆಗಳಕತೆ ಗೊತ್ತಾ?
ಬೊಗಸೆಗೆ ದಕ್ಕಿದ್ದು…17

-ನಿಖಿಲ್ ಕೋಲ್ಪೆ

ಕರ್ನಾಟಕ ಕರಾವಳಿಯಲ್ಲಿ ಕೋಮುವಾದದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ, ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಪರಿಸ್ಥಿತಿಯನ್ನೂ ಗಮನಿಸಬೇಕು. ಹಿಂದೆ ಬಹುತೇಕ ಗ್ರಾಮೀಣ ಹಿಂದೂಗಳು ಕೃಷಿ ಮತ್ತು ಹೈನುಗಾರಿಕೆ ಮುಂತಾದ ಕೃಷಿ ಸಂಬಂಧಿ ಉದ್ಯೋಗಗಳು, ಮೂರ್ತೆದಾರಿಕೆ (ತಾಳೆ ಮರದಿಂದ ಶೇಂದಿ ಇಳಿಸುವುದು), ಮೀನುಗಾರಿಕೆ, ಕುಂಬಾರಿಕೆಯಂತಹಾ ಜಾತಿ ಸಂಬಂಧಿ ಉದ್ಯೋಗಗಳಲ್ಲಿ ಮತ್ತು ಕೃಷಿಕೂಲಿಯಲ್ಲಿ ತೊಡಗಿದ್ದರು. ಮುಸ್ಲಿಮರು ಮೀನು, ದಿನಸಿ ಸೇರಿದಂತೆ ಬೇರೆಬೇರೆ ವ್ಯಾಪಾರಗಳಲ್ಲಿ ತೊಡಗಿದ್ದರು. ಈ ಉದ್ಯೋಗಗಳು ಪರಸ್ಪರ ಪೂರಕವಾಗಿದ್ದುದರಿಂದ ಯಾವುದೇ ಸ್ಪರ್ಧೆ ಇಲ್ಲದೇ ಸಾಮರಸ್ಯ ನೆಲೆಸಿತ್ತು.

ಇದನ್ನು ಇಂದಿಗೂ ನಡೆಯುತ್ತಿರುವ ಮೀನುಗಾರಿಕೆಯ ವೃತ್ತಿಯಲ್ಲಿ ಗಮನಿಸಬಹುದು. ಮೊಗವೀರ ಸಮುದಾಯದ ಮುಖ್ಯ ಉದ್ಯೋಗವೇ ಮೀನುಗಾರಿಕೆ. ಗಂಡಸರು ಮೀನು ಹಿಡಿಯುವ ಕೆಲಸವನ್ನು ಮಾಡಿದರೆ, ಮಹಿಳೆಯರು ಕರಾವಳಿ ಭಾಗದಲ್ಲಿ ಮೀನು ಮಾರಾಟ ಮಾಡುತ್ತಾರೆ. ಅವರೇ ದೈನಂದಿನ ವ್ಯವಹಾರದಲ್ಲಿ ಗಂಡಸರಿಗೆ ಸರಿಸಾಟಿಯಾಗಿ ಪಾಲುಗೊಳ್ಳಬೇಕಾಗಿದೆ. ಆದುದರಿಂದ, ಅವರು ದಿಟ್ಟತನಕ್ಕೆ ಹೆಸರಾಗಿದ್ದಾರೆ. ಆದರೆ, ಒಳಭಾಗದ ಹಳ್ಳಿಗಳಿಗೆ ಮೀನು ಪೂರೈಕೆ, ಮಾರಾಟ ಮಾಡುವವರಲ್ಲಿ 90 ಶೇಕಡಾ ಮುಸ್ಲಿಮರೇ ಆಗಿದ್ದಾರೆ. ಈಗ ಪೈಪೋಟಿಗೆಂದು ಆರೆಸ್ಸೆಸ್ ಪ್ರೇರಿತ ಶೂದ್ರರೂ ಮೀನು ಮಾರಾಟ ಆರಂಭಿಸಿದ್ದಾರೆ. ಈ ಎರಡೂ ವೃತ್ತಿಗಳು ಪರಸ್ಪರ ಪೂರಕವಾಗಿದ್ದು, ಸೌಹಾರ್ದ ಅನಿವಾರ್ಯವಾಗಿದೆ. ಆದರೆ, ವ್ಯವಹಾರ ಸಂಬಂಧಿ ಚೌಕಾಶಿಯ ಜೊತೆಗೆ, ಪರಸ್ಪರ ಅಸೂಯೆಗಳೂ ಇರುತ್ತವೆ. ಇದು ಕೋಮುಗಲಭೆಗಳ ಸಂದರ್ಭದಲ್ಲಿ ಭುಗಿಲೇಳುತ್ತದೆ. ಅನಿವಾರ್ಯವಾಗಿ ಅಷ್ಟೇ ಬೇಗನೇ ತಣಿಯುತ್ತದೆ ಕೂಡಾ.

ಜಿಲ್ಲೆಯಲ್ಲಿ ಕೋಮು ಗಲಭೆಗಳು ನಡೆದಾಗ ಅವು ಹೆಚ್ಚಿನ ತೀವ್ರತೆ ಪಡೆಯುವುದು ಮೊಗವೀರ ಮತ್ತು ಮುಸ್ಲಿಂ ಸಮುದಾಯಗಳು ಹೆಚ್ಚಾಗಿರುವ ಸ್ಥಳಗಳಲ್ಲಿ ಎಂಬ ಕುತೂಹಲಕಾರಿ ಅಂಶವನ್ನು ಗಮನಿಸಬಹುದು. (ಉದಾಹರಣೆಗೆ ಬೈಕಂಪಾಡಿ, ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ, ಉಳ್ಳಾಲ ಇತ್ಯಾದಿ). ಈ ಮೂಲಕ ಕೋಮುವಾದದ ಸಮಸ್ಯೆಯು ಒಂದು ರೀತಿಯ ಮನೋವೈಜ್ಞಾನಿಕ ಆಯಾಮ ಹೊಂದಿರುವುದನ್ನು ಕಾಣಬಹುದು. ಕೋಮುಗಲಭೆಗಳ ಸಂದರ್ಭಗಳಲ್ಲಿ, ಹಳ್ಳಿಗಳಲ್ಲಿ ಮುಸ್ಲಿಂ ಮೀನು ವ್ಯಾಪಾರಿಗಳ ಮೇಲೆ ನಡೆದ ಅಪ್ರಚೋದಿತ ದಾಳಿಗಳನ್ನು ಗಮನಿಸಬಹುದು.

ಆದರೆ, ಜಿಲ್ಲೆಯಲ್ಲಿ ಇನ್ನೊಂದು ವ್ಯಾವಹಾರಿಕ ವೈರುಧ್ಯವನ್ನು ಕಾಣಬಹುದು. ಗೌಡ ಸಾರಸ್ವತ ಸಮುದಾಯದ ಬಹುತೇಕ ಜನರು ಅಂಗಡಿ ವ್ಯಾಪಾರವನ್ನು ಅವಲಂಬಿಸಿದವರು. ಅದೇ ರೀತಿಯಲ್ಲಿ ಮುಸ್ಲಿಮರು ಕೂಡಾ ವ್ಯಾಪಾರವನ್ನೇ ಅವಲಂಬಿಸಿರುವುದರಿಂದ ಹಿತಾಸಕ್ತಿ ಸಂಘರ್ಷಗಳು ಇರುತ್ತವೆ. ಜಿಲ್ಲೆಯಲ್ಲಿರುವ ಪೇಟೆಗಳ ರಚನೆಯನ್ನು ಗಮನಿಸಬಹುದು. ಮುಖ್ಯಪೇಟೆಯನ್ನು ಮೇಲಿನ ಪೇಟೆ ಎಂದು ಕರೆಯಲಾಗುತ್ತಿದ್ದು, ಅಲ್ಲಿ ಜಿಎಸ್‌ಬಿ ಸಮುದಾಯದ ಪ್ರಾಬಲ್ಯ ಇರುತ್ತದೆ. ಅದೇ ರಸ್ತೆಯ ಇನ್ನೊಂದು ಭಾಗದಲ್ಲಿ ತಪ್ಪದೇ ಒಂದು ‘ಕೆಳಗಿನ ಪೇಟೆ’ ಇದ್ದು, ಅಲ್ಲಿ ಮುಸ್ಲಿಮರ ಪ್ರಾಬಲ್ಯ ಇರುತ್ತದೆ. ಮೇಲಿನ ಪೇಟೆಯಲ್ಲಿ ದೇವಾಲಯಗಳೂ, ಕೆಳಗಿನ ಪೇಟೆಯಲ್ಲಿ ಮಸೀದಿಗಳೂ ಇರುತ್ತವೆ.

ಕೋಮುಗಲಭೆಗಳು, ತಂಟೆಗಳು ಇಂತಹಾ ಪೇಟೆಗಳಲ್ಲಿ ಹೆಚ್ಚಾಗಿ ಭುಗಿಲೇಳುವುದನ್ನು ಗಮನಿಸಬಹುದು. (ಉದಾಹರಣೆಗೆ ಬಿ.ಸಿ.ರೋಡ್-ಕೈಕಂಬ, ಬಂಟ್ವಾಳ, ಕಲ್ಲಡ್ಕ, ಪಾಣೆಮಂಗಳೂರು, ಬಂದರು-ಕಾರ್‌ಸ್ಟ್ರೀಟ್, ಪುತ್ತೂರು, ವಿಟ್ಲ, ಉಪ್ಪಿನಂಗಡಿ) ಇಲ್ಲಿನ ಹಿಂದೂ-ಮುಸ್ಲಿಂ ವ್ಯಾಪಾರಿಗಳು ನೇರವಾಗಿ ಗಲಭೆಗಳಲ್ಲಿ ಭಾಗವಹಿಸಿರುವುದಾಗಲೀ, ಬಂಧನಕ್ಕೆ ಒಳಗಾಗಿರುವುದಾಗಲೀ ತೀರಾ ಅಪರೂಪ. ಆದರೆ, ಹಿನ್ನೆಲೆಯಲ್ಲಿ ಅವರ ಪಾತ್ರವಿರುವುದು ಕಂಡುಬರುತ್ತದೆ. ಅಲ್ಲಿ ನಡೆಯುವ ಗಲಭೆಗಳಲ್ಲಿ ಭಾಗವಹಿಸುವವರು ಸಾಮಾನ್ಯವಾಗಿ, ಸಾಮಾನ್ಯ ಮುಸ್ಲಿಮರು ಮತ್ತು ಬಿಲ್ಲವ, ಕುಲಾಲ (ಕುಂಬಾರ) ಇತ್ಯಾದಿಯಾಗಿ ಗ್ರಾಮೀಣ ಸಮುದಾಯದವರು. ಬ್ರಾಹ್ಮಣ ಅಥವಾ ಗೌಡ ಸಾರಸ್ವತ ಸಮುದಾಯಗಳ ಒಬ್ಬರೂ ಇಂತಹ ಗಲಭೆಗಳಲ್ಲಿ ಸತ್ತದ್ದಾಗಲೀ, ಬಂಧನಕ್ಕೆ ಒಳಗಾದದ್ದಾಗಲೀ ನನಗಂತೂ ಗೊತ್ತಿಲ್ಲ. ಊರು ಹೊತ್ತಿ ಉರಿಯುತ್ತಿರುವಾಗ ಅವರು ಮನೆಯ ಬಾಗಿಲು ಭದ್ರಪಡಿಸಿಕೊಂಡು ಪಿಟೀಲು ಬಾರಿಸುತ್ತಾರೆ.

ಇತ್ತೀಚೆಗೆ ಆಧುನೀಕರಣ, ನಗರೀಕರಣದ ಕಾರಣದಿಂದ ಸಾಂಪ್ರದಾಯಿಕ ಉದ್ಯೋಗಗಳು ನಶಿಸಿ, ಹೊಸಹೊಸ ರೀತಿಯ ಉದ್ಯೋಗ, ಉದ್ದಿಮೆ, ವ್ಯಾಪಾರಗಳನ್ನು ಅವಲಂಬಿಸಲೇ ಬೇಕಾಗಿರುವುದರಿಂದ, ಅವುಗಳಿಗಾಗಿ ವಿವಿಧ ಸಮುದಾಯಗಳ ನಡುವೆ ಉಂಟಾಗುವ ಪೈಪೋಟಿ, ವ್ಯವಹಾರಗಳು ಕೋಮುಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತವೆ ಎಂಬುದನ್ನು ಗಮನಿಸಬೇಕು.

ರಾಜಕೀಯ ಕಾರಣಗಳಿಗಾಗಿ ವಿವಿಧ ಪಕ್ಷಗಳು ಮತ್ತು ಸಂಘಟನೆಗಳು ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿವೆ. ಕೋಮು ಧ್ರುವೀಕರಣ ಮತ್ತು ಮತಬ್ಯಾಂಕ್ ರಾಜಕಾರಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಸಮಸ್ಯೆ ಉಲ್ಭಣಿಸುವುದಕ್ಕೆ ಕಾರಣಗಳಾಗಿವೆ. ರಾಜಕೀಯ ಪಕ್ಷಗಳ ಅಪರಾಧೀಕರಣ, ಕ್ರಿಮಿನಲ್‌ಗಳಿಗೆ ರಾಜಕೀಯ ಆಶ್ರಯ, ಪೊಲೀಸ್ ಕೆಲಸಗಳಲ್ಲಿ ಪ್ರಭಾವಿ ರಾಜಕಾರಣಿಗಳ ಹಸ್ತಕ್ಷೇಪ, ಠಾಣೆಗಳಿಗೆ ಮುತ್ತಿಗೆ ಹಾಕಿ ಒತ್ತಡ ಹೇರುವ ತಂತ್ರ, ಕೋಮು ಉದ್ವಿಗ್ನತೆಯನ್ನು ಶಮನ ಮಾಡುವ ಬದಲು ಇನ್ನಷ್ಟು ಪ್ರಚೋದನೆ ನೀಡುವ ಉದ್ರೇಕಕಾರಿ ಭಾಷಣಗಳನ್ನು ಮಾಡುವುದು ಇತ್ಯಾದಿಗಳೂ ಕೋಮುವಾದದ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿವೆ. ಗಾಂಜಾ ಇತ್ಯಾದಿ ಮಾದಕ ವಸ್ತುಗಳ ಮಾರಾಟ ಜಾಲಗಳೂ ತಮ್ಮ ಪಾಲು ಸಲ್ಲಿಸಿವೆ. ಅದನ್ನು ಪರಿಶೀಸುವುದಕ್ಕಿಂತ ಮೊದಲು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊತ್ತಮೊದಲಾಗಿ ಕೋಮುಗಲಭೆ ಆರಂಭವಾದ ಹಿನ್ನೆಲೆಯನ್ನು ಪರಿಶೀಲಿಸುವುದು ಅಗತ್ಯ.

ಸುಲಭವಾಗಿ ಸಿಗುವ ದಾಖಲೆಗಳನ್ನು ಮಾತ್ರವೇ ನೋಡಿ ಹೇಳುವುದಾದರೆ, 1968ರಲ್ಲಿ ಕರಾವಳಿ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕನ್ನಡದಲ್ಲಿ ಕೋಮು ಉದ್ವಿಗ್ನತೆ ಹೆಚ್ಚಿತ್ತು. ಸುಳ್ಳು ವದಂತಿಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೂ ತಲಪಿದವು. ಆ ಸಂದರ್ಭದಲ್ಲಿಯೇ ಮಂಗಳೂರಿನಲ್ಲಿ ಮಟನ್ ಖಾದರ್ ಎಂಬಾತನಿಗೂ, ಮೀನು ಮಾರುವ ಒಬ್ಬರು ಮೊಗವೀರ ಮಹಿಳೆಗೂ ಪ್ರೇಮಸಂಬಂಧವಿದೆ ಎಂಬ ವದಂತಿ ಮೊದಲ ಗಲಭೆಗೆ ಕಾರಣವಾಯಿತು. ಈ ಗಲಭೆಯಲ್ಲಿ ಮಂಗಳೂರಿನ ಹಳೆ ಬಂದರು ಪ್ರದೇಶದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ಸಾವಿಗೀಡಾದ ಬಗ್ಗೆ ಮಾಹಿತಿ ಸಿಗುತ್ತದೆ.

1975ರ ಹೊತ್ತಿಗೆ, ಅಂದರೆ ತುರ್ತು ಪರಿಸ್ಥಿತಿಯ ಹೊತ್ತಿಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಬಲವಾಗಿದ್ದು, ಬಹುತೇಕ ಎಲ್ಲಾ ಮುಸ್ಲಿಮರು, ಕ್ರೈಸ್ತರು ಹಾಗೂ ಬಹುಸಂಖ್ಯೆಯಲ್ಲಿ ಹಿಂದೂಗಳು ಕಾಂಗ್ರೆಸನ್ನು ಬೆಂಬಲಿಸುತ್ತಿದ್ದರು. ಮುಸ್ಲಿಂ ಲೀಗ್ ಇದ್ದರೂ, ಪ್ರಬಲವಾಗಿರಲಿಲ್ಲ. ಕಾಂಗ್ರೆಸ್‌ಗೆ ಎದುರಾಳಿಯಾಗಿ ಇದ್ದದ್ದು, ಆರೆಸ್ಸೆಸ್ ಮತ್ತು ಸಂಘ ಪರಿವಾರದ ಬೆಂಬಲವಿರುವ ಹಿಂದೂವಾದಿ ಜನಸಂಘ. ಅದು ಆರೆಸ್ಸೆಸ್ಸಿನ ಸಂಘಟಿತ ಅಪಪ್ರಚಾರ, ಕೋಮುವಿಷ ಬಿತ್ತನೆಯ ಹೊರತಾಗಿಯೂ ಹೆಚ್ಚಿನ ಹಿಂದೂಗಳು ಅದಕ್ಕೆ ಓಟು ಹಾಕುತ್ತಿರಲಿಲ್ಲ. ಅದು ನಂತರ ಪ್ರತಿಪಕ್ಷಗಳ ಕೂಟವಾದ ಜನತಾ ಪಕ್ಷದಲ್ಲಿ ವಿಲಯನವಾಗಿ, ಆ ಬಳಿಕ ವಿಭಜನೆಗೊಂಡು ಈಗಿನ ಭಾರತೀಯ ಜನತಾ ಪಕ್ಷವಾಗಿ, ತನ್ನನ್ನು ಹಿಂದೂ ಪಕ್ಷ ಎಂದು ಘೋಷಿಕೊಂಡಿತು.

ಆ ಹೊತ್ತಿನಲ್ಲಿ ಮಂಗಳೂರು, ಕಲ್ಲಡ್ಕ, ಪಾಣೆಮಂಗಳೂರು, ವಿಟ್ಲ, ಬಂಟ್ವಾಳ, ಉಪ್ಪಿನಂಗಡಿ ಮತ್ತು ಪುತ್ತೂರಿನಲ್ಲಿ ಕೋಮುವಾದಿ ಧ್ರುವೀಕರಣದ ಪ್ರಯತ್ನಗಳು ಜೋರಾಗಿ ನಡೆಯುತ್ತಿದ್ದವು. ಅಲ್ಲಿ ಆರೆಸ್ಸೆಸ್, ಸಂಘಟನಾತ್ಮಕವಾಗಿ ಹೆಚ್ಚಿನ ಬಲ ಹೊಂದಿತ್ತು. ಮುಸ್ಲಿಮರಲ್ಲಿ ಹೇಳಿಕೊಳ್ಳುವ ಸಂಘಟನೆಗಳು ಇರಲಿಲ್ಲವಾದರೂ, ದೊಡ್ಡ ಸಂಖ್ಯೆ ಮತ್ತು ಕಾಂಗ್ರೆಸ್ ಬೆಂಬಲದಿಂದ ಅವರಲ್ಲಿ ಕೆಲವರು ರಾಜಕೀಯವಾಗಿ ಸಾಕಷ್ಟು ಸಶಕ್ತರಾಗಿದ್ದರು. ವಿಟ್ಲ ವಿಧಾನಸಭಾ ಕ್ಷೇತ್ರವು ಬಿ.ಎ. ಉಮ್ಮರಬ್ಬ ಸೇರಿದಂತೆ ಹಲವಾರು ಮುಸ್ಲಿಂ ಶಾಸಕರನ್ನು ಆಯ್ಕೆ ಮಾಡಿದ್ದು, ಜನರು ಸಾಮಾನ್ಯವಾಗಿ ಕೋಮುವಾದಿಗಳಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ.

ಇಂತಹಾ ಸಂದರ್ಭದಲ್ಲಿ, ಅಂದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಲ್ಲಡ್ಕದಲ್ಲಿ ಇಸ್ಮಾಯಿಲ್ ಎಂಬ ವ್ಯಾಪಾರಿಯೊಬ್ಬರು ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕನಾಗಿ ಬೆಳೆಯುತ್ತಾ, ಪೊಲೀಸ್ ವಲಯದಲ್ಲೂ ಪ್ರಭಾವ ಹೊಂದಿದ್ದರು. ಆ ಸಂದರ್ಭದಲ್ಲಿ ಪ್ರತಿಪಕ್ಷಗಳ ಅನೇಕ ನಾಯಕರು, ಹಿಂದೂ ಸಂಘಟನೆಗಳ ನಾಯಕರು ಆಂತರಿಕ ಭದ್ರತಾ ಕಾಯಿದೆ (Maintenance of Internal Security Act-MISA) ಅನ್ವಯ ಬಂಧಿತರಾಗಿದ್ದರು. ಪೊಲೀಸ್ ದೌರ್ಜನ್ಯವೂ ನಡೆಯುತ್ತಿತ್ತು. ಇದಕ್ಕೆ ಇಸ್ಮಾಯಿಲ್ ಅವರ ಕುಮ್ಮಕ್ಕು ಕಾರಣ ಎಂದು ಈ ಸಂಘಟನೆಗಳವರು ಭಾವಿಸಿದ್ದರು.

ಒಂದು ರಾತ್ರಿ ಇಸ್ಮಾಯಿಲ್ ಅವರನ್ನು ನಕಲಿ ಪೊಲೀಸ್ ಜೀಪ್‌ನಲ್ಲಿ, ನಕಲಿ ಪೋಲೀಸ್ ಉಡುಪಿನಲ್ಲಿ ಬಂದವರು ಕರೆದೊಯ್ದಿದ್ದರು. ಅವರ ಶವ ನಂತರ ಕೊಳೆತ ಸ್ಥಿತಿಯಲ್ಲಿ ನದಿಯಲ್ಲಿ ಪತ್ತೆಯಾಗಿತ್ತು. ಇಸ್ಮಾಯಿಲ್ ಕೊಲೆ ಪ್ರಕರಣ ಎಂದು ಕುಖ್ಯಾತವಾದ ಈ ಪ್ರಕರಣದಲ್ಲಿ, ಪೊಲೀಸರು ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳ ಹಿಂದೂ ಸಂಘಟನೆಗಳ ಕೆಲವು ಪ್ರಮುಖ ನಾಯಕರನ್ನು ಬಂಧಿಸಿದ್ದರು. ಅವರಲ್ಲಿ ಕೆಲವರು ಅಮಾಯಕ ವ್ಯಾಪಾರಿಗಳೂ ಇದ್ದರು. ಆಗ ತುರ್ತು ಪರಿಸ್ಥಿತಿ ಇದ್ದುದರಿಂದ ಪೊಲೀಸರನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇರಲಿಲ್ಲ. ಕೊಲೆಯಿಂದಾಗಿ ಮುಸ್ಲಿಮರಿಗೂ, ಯದ್ವಾತದ್ವಾ ಬಂಧನದಿಂದಾಗಿ ಹಿಂದೂಗಳಿಗೂ ಅಸಮಾಧಾನ ಒಳಗೊಳಗೇ ಹೊಗೆಯಾಡುತ್ತಿತ್ತು. ಈ ಪ್ರಕರಣದ ಸಂದರ್ಭದಲ್ಲಿಯೇ ಕಲ್ಲಡ್ಕ ಪ್ರಭಾಕರ ಭಟ್ಟ ಈ ಭಾಗದಲ್ಲಿ ಪ್ರಖ್ಯಾತ ಮತ್ತು ಕುಖ್ಯಾತ ಎರಡೂ ಆದದ್ದು.

ಇದು ಕೋಮುಗಲಭೆಯ ರೂಪದಲ್ಲಿ ಹೊರಹೊಮ್ಮಿದ್ದು, 1977ರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು, ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ. ಮೊರಾರ್ಜಿ ದೇಸಾಯಿ ಸರಕಾರ ಅಧಿಕಾರಕ್ಕೆ ಬಂದಾಗ ಇಂದಿರಾ ಗಾಂಧಿಯವರನ್ನು ಬಂಧಿಸಲಾಯಿತು. ಆಗ ಪ್ರತಿಭಟನೆಯಾಗಿ ಕಾಂಗ್ರೆಸ್ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಹೊರಟಿತು. ಹಿಂದೂ ಬಾಹುಳ್ಯವಿದ್ದ ಮೇಲಿನ ಪೇಟೆ, ಮುಸ್ಲಿಂ ಪ್ರಾಬಲ್ಯದ ಕೆಳಗಿನ ಪೇಟೆಗಳು ಇದ್ದಂತಹ ಪಾಣೆಮಂಗಳೂರು, ಬಂಟ್ವಾಳ, ಬಿ.ಸಿ.ರೋಡ್ ಮುಂತಾದ ಪೇಟೆಗಳಲ್ಲಿ ಇದು ಅಪಾಯಕಾರಿಯಾಗಿತ್ತು. ಏಕೆಂದರೆ, ಅಂಗಡಿಗಳನ್ನು ಮುಚ್ಚಿಸಲು ಹೊರಟ ಕಾಂಗ್ರೆಸಿಗರಲ್ಲಿ ಮುಸ್ಲಿಮರೇ ಹೆಚ್ಚಾಗಿದ್ದರು.

ಘರ್ಷಣೆಗಳು ನಡೆದು, ಇಡೀ ಪ್ರಕರಣ ಕೋಮುಗಲಭೆಯ ಸ್ವರೂಪ ಪಡೆಯಿತು. ಬೇಕಾಬಿಟ್ಟಿ ವದಂತಿಗಳು ಹಬ್ಬಿ ಗ್ರಾಮೀಣ ಪ್ರದೇಶಗಳಿಂದ ಯುವಕರು ಬರುತ್ತಿದ್ದಂತೆ, ಗಲಭೆ ಗಂಭೀರ ಸ್ವರೂಪ ಪಡೆದು ಎಲ್ಲಡೆ ವ್ಯಾಪಿಸಿತು. ಬಿ.ಸಿ. ರೋಡ್ ಕೈಕಂಬದ ಮಸೀದಿ ಸೇರಿದಂತೆ ಹಲವು ಪೂಜಾಸ್ಥಳಗಳ ಮೇಲೆ ದಾಳಿ, ಕಲ್ಲೆಸೆತ ಇತ್ಯಾದಿ ನಡೆದು ಹಲವರು ಗಂಭೀರವಾಗಿ ಗಾಯಗೊಂಡರು. ಈ ಸಂದರ್ಭದಲ್ಲಿ ಹಲವರನ್ನು ಪೊಲೀಸರು ಬಂಧಿಸಿದರು. ಆದರೆ, ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದುದರಿಂದ ಹಿಂದೂ ಮತ್ತು ಮುಸ್ಲಿಂ ಬಂಧಿತರ ನಡುವೆ ಪೊಲೀಸರು ತಾರತಮ್ಯ ನಡೆಸುತ್ತಿದ್ದಾರೆ ಎಂದೂ, ಕಾಂಗ್ರೆಸ್ ಮುಸ್ಲಿಮರನ್ನು ಮಾತ್ರ ರಕ್ಷಿಸುತ್ತಿದೆ ಎಂದೂ ವದಂತಿ ಹಬ್ಬಿಸಲಾಯಿತು. ಆರೆಸ್ಸೆಸ್ ಆಗಲೂ, ಈಗಲೂ ಈ ವಿಷಯದಲ್ಲಿ ಎತ್ತಿದ ಕೈ.

ಆಗ ಉಂಟಾದ ಕಂದರ ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿದ್ದು, ಹಿಂದೂವಾದಿ ಸಂಘಟನೆಗಳು ಪ್ರಾಬಲ್ಯ ಹೆಚ್ಚಿಸುತ್ತಾ ಬಂದಿವೆ. ಒಂದು ಬಣ್ಣದ ಕೋಮುವಾದ ಇನ್ನೊಂದು ಬಣ್ಣದ ಕೋಮುವಾದವನ್ನು ಹುಟ್ಟುಹಾಕುತ್ತದೆ ಮತ್ತು ಅವು ಪರಸ್ಪರರ ಕಾರಣದಿಂದ ಬೆಳೆಯುತ್ತದೆ ಎಂಬುದಕ್ಕೆ ಸರಿಯಾಗಿ ಮುಸ್ಲಿಮರಲ್ಲಿಯೂ ಹಲವಾರು ಸಂಘಟನೆಗಳು ಹುಟ್ಟಿಕೊಂಡವು. ಇವುಗಳು ಕಾಂಗ್ರೆಸಿಗೆ ವಿರೋಧವಾಗಿದ್ದು, ತೀವ್ರಗಾಮಿ ನಿಲುವನ್ನು ಹೊಂದಿದ್ದವು. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆದುನಿಂತಿರುವ ಕೋಮುವಾದದ ಸಮಸ್ಯೆಯ ಮೂಲಕಾರಣ ಇರುವುದು ಇಲ್ಲಿಯೇ!

ಮತ್ತೆ 1979ರಲ್ಲಿ ಖ್ಯಾತ ಚಿತ್ರ ನಿರ್ದೇಶಕ, ಲೇಖಕ ವಿಶುಕುಮಾರ್ ಅವರ ಕನ್ನಡ ಚಿತ್ರ ‘ಕರಾವಳಿ’ಯ ಕಾರಣದಿಂದ ಗಲಭೆ ಉಂಟಾಯಿತು. ಅದು ಮೀನುಗಾರ ಮುಸ್ಲಿಂ ಯುವಕ ಮತ್ತು ಮೊಗವೀರ ಸಮುದಾಯದ ಮಹಿಳೆಯ ನಡುವಿನ ಪ್ರೇಮಕತೆಯಾಗಿದ್ದುದೇ ಇದಕ್ಕೆ ಕಾರಣ. ಈ ಗಲಭೆಗಳಲ್ಲಿ ಭಾಗವಹಿಸಿದವರಲ್ಲಿ ಬಿಲ್ಲವರೂ ಇದ್ದು, ಇದೇ ವಿಶುಕುಮಾರ್ ಅವರೇ ಬಿಲ್ಲವ ಅವಳಿ ವೀರರಾದ ಕೋಟಿ-ಚೆನ್ನಯರ ಸೂಪರ್ ಹಿಟ್ ಚಿತ್ರ ತೆಗೆದವರು ಎಂದೂ ಅವರು ನೋಡಲಿಲ್ಲ.

ಈ ಗಲಭೆಗಳು ಮಂಗಳೂರಿನ ಹೊಯ್ಗೆಬಜಾರ್, ಕುದ್ರೋಳಿ, ಬಂದರು ಮುಂತಾದ ಪ್ರದೇಶಗಳಲ್ಲಿ ತೀವ್ರವಾಗಿತ್ತು. ಈ ಘಟನೆಯಲ್ಲಿ ಕೆಲವರು ಪ್ರಾಣಕಳೆದುಕೊಂಡರು ಎಂದು ಹೇಳಲಾಗುತ್ತದೆಯಾದರೂ, ನಿಖರ ಮಾಹಿತಿ ಸದ್ಯಕ್ಕೆ ನನ್ನಲ್ಲಿ ಲಭ್ಯವಿಲ್ಲ. ಈ ಘಟನೆಯಲ್ಲಿ ಮುಸ್ಲಿಮರ ಮತ್ತು ಗೌಡ ಸಾರಸ್ವತ ಸಮುದಾಯದವರ ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದು ಮಾಹಿತಿ ಸಿಗುತ್ತದೆ.

ಹಿಂದೆಲ್ಲಾ ಉಳ್ಳಾಲ ಪ್ರದೇಶವು ಕೋಮುಸೌಹಾರ್ದಕ್ಕೆ ಹೆಸರಾಗಿತ್ತು. ಇದಕ್ಕೆ ದೊಡ್ಡ ಇತಿಹಾಸವಿದ್ದು, ಆ ಕುರಿತು “ಬೊಗಸೆಗೆ ದಕ್ಕಿದ್ದು-16″ರಲ್ಲಿ ಬರೆದಿದ್ದೇನೆ. ಕೃಷ್ಣಜನ್ಮಾಷ್ಟಮಿಯ ಸಂದರ್ಭದಲ್ಲಿ ಮುಸ್ಲಿಮರು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. 1980ರ ದಶಕದಲ್ಲಿ ಮಲ್ಲಕಂಭಕ್ಕೆ ಹಂದಿಯ ಕೊಬ್ಬನ್ನು ಸವರಲಾಗುತ್ತದೆ ಎಂದು ಇಂತಹಾ ಉತ್ಸವಗಳಲ್ಲಿ ಭಾಗವಹಿಸುವುದನ್ನು ‘ಶಿರ್ಕ್’ ಎಂದು ಕರೆಯುವ ಕೆಲವು ಅತಿಸಂಪ್ರದಾಯವಾದಿ ಮುಸ್ಲಿಮರು ಈ ವದಂತಿ ಹಬ್ಬಿಸಿದರು ಎಂದು ಸುದ್ದಿಯಾಗಿತ್ತು. ಆಗಿನಿಂದ ಮುಸ್ಲಿಮರ ಭಾಗವಹಿಸುವಿಕೆ ಕಡಿಮೆಯಾಗುತ್ತಾ ಹೋಯಿತು. ಇಂದು ಸಾಮಾನ್ಯ ಸ್ಥಿತಿಯಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದದಿಂದಲೇ ಸಹಬಾಳ್ವೆ ನಡೆಸುತ್ತಿದ್ದರೂ, ಸದಾ ಬೂದಿ ಮುಚ್ಚಿದ ಕೆಂಡದಂತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಅದು ಸ್ಫೋಟಕ ಸ್ಥಿತಿ ತಲಪುತ್ತದೆ. ಚುನಾವಣೆಗಳು ಹತ್ತಿರ ಬಂದಾಗ ಬೆಂಕಿ ಹಚ್ಚುವ ಸಂಸದರೂ, ಶಾಸಕರೂ, ದ್ವೇಷಪ್ರೇಮಿಗಳೂ ಒಂದು ಬೆಂಕಿ ಕಡ್ಡಿ ಹೊತ್ತಿಸಿದರೂ ಸಾಕು, ಅದು ಸಿಡಿಯುತ್ತದೆ.

ನಂತರ, 1989ರಲ್ಲಿ ಬೈಕಂಪಾಡಿ, ಹೊಸಬೆಟ್ಟು- ಹೀಗೆ ದಕ್ಷಿಣ ಕನ್ನಡದ ಕಡಲತಡಿಯ ಉದ್ದಕ್ಕೂ ಕೋಮುಗಲಭೆ ಉಂಟಾಗಿತ್ತಾದರೂ, ಅದು ಮುಖ್ಯವಾಗಿ ಭಾರೀ ಪ್ರಮಾಣದಲ್ಲಿ ಅಂಗಡಿಗಳ ಲೂಟಿ, ಬೆಂಕಿ ಹಚ್ಚುವಿಕೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಲ್ಲಿಯೇ ಕೊನೆಗೊಂಡಿತು. ಜೀವಹಾನಿಯೇನೂ ಆಗಲಿಲ್ಲ.

ನಂತರ ಸಣ್ಣಪುಟ್ಟ ಸಂಘರ್ಷಗಳು ಅಲ್ಲಲ್ಲಿ ನಡೆದೇ ಇದ್ದರೂ, ಇತಿಹಾಸದ ಅತೀ ದೊಡ್ಡ ಕೋಮುಗಲಭೆ ನಡೆದದ್ದು 1998-99ರಲ್ಲಿ. 1998ರ ಡಿಸೆಂಬರ್ 29ರಂದು ಆರಂಭವಾದ ಈ ಗಲಭೆ ಸುರತ್ಕಲ್ ಸಮೀಪದ ಚೊಕ್ಕಬೆಟ್ಟುವಿನಲ್ಲಿ ಆರಂಭವಾಗಿ ನಂತರದಲ್ಲಿ ಸುತ್ತಲಿನ ಕೃಷ್ಣಾಪುರ, ಬೈಕಂಪಾಡಿ, ಕುಳಾಯಿ, ಹೊಸಬೆಟ್ಟು, ತಡಂಬೈಲ್, ಕಾನ, ಕಾಟಿಪಳ್ಳ, ನಂತರ ಮಂಗಳೂರು ನಗರ, ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳಿಗೆ ವ್ಯಾಪಿಸಿತ್ತು. ಈ ಗಲಭೆಯಲ್ಲಿ ಎಂಟು ಮಂದಿ ಅಧಿಕೃತ ಮೂಲಗಳ ಪ್ರಕಾರ ಪ್ರಾಣ ಕಳೆದುಕೊಂಡಿದ್ದರು. ಇವರಲ್ಲಿ ಆರು ಮಂದಿ ಮುಸ್ಲಿಮರು ಮತ್ತು ಇಬ್ಬರು ಹಿಂದೂಗಳು. ಅನಧಿಕೃತ ವರದಿಗಳ ಪ್ರಕಾರ ಈ ಸಂಖ್ಯೆ 16 ಆಗಿತ್ತು. 100ಕ್ಕೂ ಹೆಚ್ಚು ಮಂದಿ ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಮನೆಗೆ ನುಗ್ಗಿ ಹೆಂಗಸರು, ಮಕ್ಕಳು, ವೃದ್ಧರ ಮೇಲೆಯೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಅಮಾನುಷ ಘಟನೆಗಳೂ ನಡೆದಿದ್ದವು. ಘಟನೆಯಲ್ಲಿ ಭಾರೀ ಆಸ್ತಿಪಾಸ್ತಿ ಹಾನಿ ಸಂಭವಿಸಿದ್ದು, 165 ಮನೆಗಳನ್ನು ಧ್ವಂಸ ಮಾಡಲಾಗಿದ್ದು, ಇವುಗಳಲ್ಲಿ 98 ಮುಸ್ಲಿಮರು ಮತ್ತು 67 ಹಿಂದೂಗಳ ಮನೆಗಳಾಗಿದ್ದವು. ಮುಸ್ಲಿಮರ ನಾಲ್ಕು ಆರಾಧನಾ ಸ್ಥಳಗಳನ್ನು ಧ್ವಂಸ ಮಾಡಲಾಗಿತ್ತು. ಈ ಅಂಕಿ-ಅಂಶಗಳನ್ನು ನೀಡುತ್ತಿರುವ ಕಾರಣವೆಂದರೆ- ಕಾರಣ ಏನೇ ಇರಲಿ, ಯಾರೇ ಇರಲಿ- ಎರಡೂ ಕಡೆಗಳವರು ಧರ್ಮಗಳ ಹೆಸರಿನಲ್ಲಿ ಮನುಷ್ಯತ್ವ ಮರೆತು ನಾಯಿಗಳ ರೀತಿ ಕಾದಾಡಿದ್ದರು ಎಂಬುದನ್ನು ಸೂಚಿಸುವುದಾಗಿದೆ.‌‌‌

ಗಲಭೆ ಕಾರಣ ಕ್ಷುಲ್ಲಕವಾದದ್ದು. ಚೊಕ್ಕಬೆಟ್ಟುವಿನಲ್ಲಿ ಗುಜರಿ ಮಾರುವವನೊಬ್ಬ ಒಂದು ಮನೆಯಿಂದ ಗುಜರಿ ಕದ್ದಿದ್ದ. ಆತನನ್ನು ಹಿಡಿದ ಮನೆಯವರು, ನೆರೆಯವರು ಆತನಿಗೆ ಥಳಿಸಿದ್ದರು. ಇದು ಒಂದು ಸಮುದಾಯದ ಕೆಲವರು, ಕಲ್ಲೆಸೆತ ಆರಂಭಿಸುವುದಕ್ಕೆ ಕಾರಣವಾಗಿತ್ತು. ಆದರೆ, ಇದು ಕೇವಲ ನೆಪವಾಗಿತ್ತು. ಇದಕ್ಕಿಂತಲೂ ಮೊದಲು ಬೇರೆ ಮೂರು ಪ್ರತ್ಯೇಕ ಘಟನೆಗಳು ನಡೆದಿದ್ದವು.

1998ರ ನವೆಂಬರ್‌ನಲ್ಲಿ ಕುಳಾಯಿಯಲ್ಲಿ ಕ್ರೈಸ್ತರ ಸಣ್ಣ ಪಂಥವಾದ ಇವಾಂಜಲಿಕ್ (ಇವರು ಕೆಥೋಲಿಕ್ ಅಲ್ಲ) ಚರ್ಚಿಗೆ ನುಗ್ಗಿದ ಹಿಂದೂತ್ವವಾದಿಗಳು ರಾಜಾರೋಷವಾಗಿ ನುಗ್ಗಿ ಎಲ್ಲರನ್ನು ಥಳಿಸಿ, ಅದನ್ನು ಧ್ವಂಸಗೊಳಿಸಿದ್ದರು. ಇದು ದೇಶದಾದ್ಯಂತ ಕ್ರೈಸ್ತ ಧಾರ್ಮಿಕ ಸಂಸ್ಥೆಗಳ ಮೇಲೆ ನಡೆಯುತ್ತಿದ್ದ ದಾಳಿಗಳ ಭಾಗವಾಗಿತ್ತು. ಇಲ್ಲಿ ಆ ತನಕ ಕೆಥೋಲಿಕರ ಮೇಲೆ ಯಾವುದೇ ದಾಳಿಗಳು ನಡೆದಿರಲಿಲ್ಲವಾದರೂ (ನಂತರ ನಡೆದವು) ಇಂತಹಾ ಭಯಹುಟ್ಟಿಸುವ ಕೃತ್ಯ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಆತಂಕ ಸೃಷ್ಟಿಸಿತ್ತು.

ಇನ್ನೊಂದು ಘಟನೆ ಎಂದರೆ, ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯನ್ನು ಚುಡಾಯಿಸಿದ ಎಂಬ ಆರೋಪದಲ್ಲಿ ಆತನಿಗೆ ಹಿಂದೂತ್ವವಾದಿಗಳ ಗುಂಪೊಂದು ಥಳಿಸಿದ್ದು. ಅದರ ಆರೋಪಿಗಳನ್ನು ಪೊಲೀಸರು ಬಂಧಿಸಿದಾಗ ಪೊಲೀಸರು ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ಪೊಲೀಸರ ಕೆಲಸವನ್ನು ತಾವೇ ಮಾಡುತ್ತೇವೆ, ತಮ್ಮನ್ನು ಅವರು ಬಂಧಿಸುವಂತಿಲ್ಲ ಎಂಬ ಮನೋಭಾವ ಹುಟ್ಟಿ ಇಂದಿನ ವರೆಗೆ ಬೆಳೆದುಬಂದಿರುವುದು ಬಹುಶಃ ಇದೇ ಘಟನೆಯಿಂದ. ಈ ಘಟನೆ ಕೂಡಾ ಕಂದರವನ್ನು ಆಳಗೊಳಿಸಿತ್ತು. ಮೋರಲ್ ಪೊಲೀಸಿಂಗ್ ಎಂಬ ನಾಜಿ ದುಷ್ಟ ವಿದ್ಯಮಾನದ ಆರಂಭ ಇಲ್ಲಿಯೇ ಆದುದು.

ಆಗಲೇ ಇನ್ನೊಂದು ಘಟನೆಯೂ ನಡೆದಿತ್ತು. ಸುರತ್ಕಲ್‌ನಲ್ಲಿ ಹಾಕಿದ್ದ ಯಕ್ಷಗಾನದ ಬ್ಯಾನರ್ ಒಂದನ್ನು ಕಿಡಿಗೇಡಿಗಳು ಹರಿದುಹಾಕಿದ್ದರು. ಆಗ ಉಂಟಾದ ಉದ್ವಿಗ್ನತೆಯಿಂದ ಯಕ್ಷಗಾನ ಪ್ರದರ್ಶನವೇ ನಿಂತಿತ್ತು. ಇದು ಕೂಡಾ ಧಾರ್ಮಿಕ ಭಾವನೆಗೆ ನೋವುಂಟುಮಾಡುವ ಕೆಲಸವೇ ಆಗಿತ್ತು. ಕೆಲವೇ ಕಿಡಿಗೇಡಿ ಕೃತ್ಯಗಳು, ಪರಿಸ್ಥಿತಿ ಅರಿಯುವುದರಲ್ಲಿ ಪೊಲೀಸ್ ಗುಪ್ತಚರ್ಯೆಯ ವೈಫಲ್ಯ, ಪೊಲೀಸರ ಕಾರ್ಯದಲ್ಲಿ ರಾಜಕಾರಣದ ಹಸ್ತಕ್ಷೇಪ, ಕಾನೂನನ್ನು ಕೈಗೆತ್ತಿಕೊಳ್ಳುವುದು ಇತ್ಯಾದಿಗಳು ಹೇಗೆ ಪರಿಸ್ಥಿತಿಯನ್ನು ಹದಗೆಡಿಸಬಲ್ಲವು ಎಂಬುದನ್ನು ಈ ಘಟನೆಗಳು ತೋರಿಸುತ್ತವೆ.

ಈ ಗಲಭೆ ಹರಡುವುದಕ್ಕೆ ವದಂತಿಗಳೂ ಕಾರಣವಾಗಿದ್ದವು. ಇವುಗಳನ್ನು ಹರಡುವುದಕ್ಕೆ ಎರಡೂ ಕಡೆಗಳ ರಾಜಕೀಯ ಹಿತಾಸಕ್ತಿಗಳ ಪ್ರೇರಣೆಯೂ ಇತ್ತು. ವದಂತಿಯ ಸ್ವರೂಪಗಳು ಉಳಿದ ಕಡೆಗಳಂತೆಯೇ ಇದ್ದವು; ಈಗಲೂ ಇವೆ. ‘ನಮ್ಮವರ’ ಮೇಲೆ ದಾಳಿ ಮಾಡುತ್ತಿದ್ದಾರೆ, ‘ನಮ್ಮವರ’ ಮನೆಗೆ ನುಗ್ಗಿ ಹೊಡೆದಿದ್ದಾರೆ, ನಮ್ಮ ಹೆಣ್ಣು ಮಕ್ಕಳ ಮೇಲೆ, ಅಕ್ಕತಂಗಿಯರ ಮೇಲೆ ಅತ್ಯಾಚಾರ ಮಾಡಿದ್ದಾರೆ, ‘ನಮ್ಮ’ ತಂದೆ ತಾಯಿಯ ಮೇಲೆ ಕೈ ಹಾಕಿದ್ದಾರೆ, ಪೊಲೀಸರು ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ, ‘ನಮ್ಮವರಿಗೆ’ ಹೊಡೆದಿದ್ದಾರೆ- ಇವು ಹಿಂದೆ ಬಾಯಿಮಾತಿನ ಮೂಲಕ ನಡೆಯುತ್ತಿದ್ದವು, ಇಂದು ಸಾಮಾಜಿಕ ಜಾಲತಾಣಗಳ ಕಾರಣದಿಂದ ಕ್ಷಣಮಾತ್ರದಲ್ಲಿ ನಡೆಯುತ್ತಿವೆ.

ಇಲ್ಲಿ ಆರಂಭವಾದ ಗಲಭೆಗಳ ಪರಿಣಾಮ ಇಲ್ಲಿಗೇ ನಿಲ್ಲಲಿಲ್ಲ. ಸುರತ್ಕಲ್ ಪರಿಸರದಲ್ಲಿಯೇ ಹಲವಾರು ಕೊಲೆಗಳು, ಪ್ರತೀಕಾರಗಳು ನಂತರದ ವರ್ಷಗಳಲ್ಲಿ ನಡೆದವು, ಈಗಲೂ ಈ ಉದ್ವಿಗ್ನತೆ ಮುಂದುವರಿಯುತ್ತಿದೆ. ಆಗಾಗ ಬೆಂಕಿ ಹಚ್ಚಲಾಗುತ್ತಿದೆ. ಬಿಜೆಪಿ ಸಂಸದ, ಶಾಸಕರು ಮತ್ತು ಆರೆಸ್ಸೆಸ್ ಗಿರಾಕಿಗಳು ಅದರಲ್ಲಿ ಚಳಿಕಾಯಿಸುತ್ತಿದ್ದಾರೆ.

ಬೊಗಸೆಗೆ ದಕ್ಕಿದ್ದು – 16: ಕರಾವಳಿಯಲ್ಲಿ ಕೋಮು ಸಾಮರಸ್ಯದ ಇತಿಹಾಸ
“ಬಪ್ಪನಾಡಿನ ದೇವಾಲಯವನ್ನು ಕಟ್ಟಿಸಿದಾತ ಬಪ್ಪಬ್ಯಾರಿ ಎಂಬ ಮುಸ್ಲಿಂ ವ್ಯಾಪಾರಿ ಎಂಬುದು ಎಲ್ಲರಿಗೂ ಗೊತ್ತು. ಆತನನ್ನೇ ಈಗ ಚಡ್ಡಿಗಳು ಬಬ್ರುವಾಹನ ಮಾಡುತ್ತಿದ್ದಾರೆ.” ಚಿಂತಕರಾದ ನಿಖಿಲ್ ಕೋಲ್ಪೆಯವರ ಬರಹದಲ್ಲಿ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸೇರಿದಂತೆ ಕರ್ನಾಟಕ ರಾಜ್ಯದ ಕರಾವಳಿ ಭಾಗದಲ್ಲಿ ಕೋಮುವಾದ ಹೆಡೆಯೆತ್ತಿ ನಿಂತಿದೆ. ಧರ್ಮದ ಆಧಾರದಲ್ಲಿ ಮತಕೇಳುವ ಪರಿಪಾಠ ಹಿಂದಿಗಿಂತಲೂ ಹೆಚ್ಚಾಗಿದೆ. ರಾಜಕೀಯ ಲಾಭಕ್ಕಾಗಿ ಧರ್ಮಗಳನ್ನು ವಿಭಜಿಸಿ ಪರಸ್ಪರ ಹೊಡೆದಾಡಿಸುವ ಪ್ರಯತ್ನಗಳೂ ನಿರಂತರ ನಡೆಯುತ್ತಿವೆ. ಕೋಮು ಆಧಾರದಲ್ಲಿ ಅವರು- ನಾವು ಎನ್ನುವ ಸ್ಥಿತಿಗೆ ಸಮಾಜ ಬಂದು ಮುಟ್ಟಿದೆ. ಆದರೆ, ಎರಡು ಮೂರು ದಶಕಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಕರಾವಳಿಗೆ ಕೋಮು ಸೌಹಾರ್ದದ ದೊಡ್ಡ ಇತಿಹಾಸವೇ ಇದೆ. ಹಲವು ಶತಮಾನಗಳಿಂದ ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನರು ಜೊತೆಜೊತೆಯಾಗಿ ಒಬ್ಬರಿಗೊಬ್ಬರು ಹೊಂದಿಕೊಂಡು ಬದುಕುತ್ತಿದ್ದಾರೆ.

ಇತಿಹಾಸಕಾರರು ಅಂಜುಮನ್ ಶಾಸನಗಳೆಂದು ಕರೆಯುವ ದಾಖಲೆಗಳು ಕರಾವಳಿಯಲ್ಲಿದ್ದ ಕೋಮು ಸಾಮರಸ್ಯವನ್ನು ಎತ್ತಿತೋರಿಸುತ್ತವೆ.1418ರ ಕೊಡಿಯಾಲ್ ಬೈಲ್ ಶಾಸನದ ಪ್ರಕಾರ ಇಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾನಿಕನಾಗಿದ್ದ ತಿಮ್ಮಣ್ಣ ಒಡೆಯ ನಾಲ್ಕು ಮಸೀದಿಗಳನ್ನು ಧ್ವಂಸ ಮಾಡಿದ್ದ. ಅಂಜುಮನ್ ದೂರು ನೀಡಿದಾಗ ದೊರೆ ಅವರಿಗೆ ದತ್ತಿ ನೀಡಿದ್ದಲ್ಲದೇ, ಯಾವುದೇ ಹಿಂದೂ ಆ ಜಾಗದಲ್ಲಿ ತೊಂದರೆ ಉಂಟು ಮಾಡಿದರೆ, ತನಗೆ ಮತ್ತು ದೇವರಿಗೆ ಉತ್ತರದಾಯಿ ಎಂದು ತಾಕೀತು ಮಾಡಿದ್ದ.

1551ರ ಒಂದು ಶಾಸನದ ಪ್ರಕಾರ, ಇಕ್ಬಾಲ್ ಖಾನ್ ಎಂಬಾತ ಬಾರಕೂರಿನಲ್ಲಿ ವಿಜಯನಗರ ಅರಸರ ಸ್ಥಾನಿಕ ಅಧಿಕಾರಿಯಾಗಿದ್ದಾಗ ಕೋಟೇಶ್ವರಲ್ಲಿ ಒಂದು ದೇವಾಲಯವನ್ನು ಕೆಲವರು ನಾಶಮಾಡಿ ಹಲವರನ್ನು ಕೊಂದಿದ್ದರು. ಆಗ ಇಕ್ಬಾಲ್ ಖಾನ್ ತಕ್ಷಣವೇ ದೇವಾಲಯವನ್ನು ಮರುನಿರ್ಮಿಸಿಕೊಟ್ಟಿದ್ದ.

1615ರ ಒಂದು ಶಾಸನದ ಪ್ರಕಾರ ಹಿಂದೂ ರಾಜನೊಬ್ಬ (ಹೆಸರು ಉಲ್ಲೇಖಿಸಿಲ್ಲ) ಪಶ್ಚಿಮಘಟ್ಟದ ಅಪರಿಚಿತ ಸ್ಥಳದಲ್ಲಿ ಮಸೀದಿ ಕಟ್ಟಿಸಿದ ಉಲ್ಲೇಖ ಇದೆ. ನಂತರ ಕೆಳದಿಯ ಅರಸ ವೆಂಕಟಪ್ಪ ನಾಯಕ 1627ರಲ್ಲಿ ಭುವನಗಿರಿ ಎಂಬಲ್ಲಿ ದರ್ಗಾ ಕಟ್ಟಿಸಿದ ಉಲ್ಲೇಖ ಶಾಸನವೊಂದರಲ್ಲಿದೆ. ವೆಂಕಟಪ್ಪ ನಾಯಕನ ನೆರವಿನಿಂದ ಮುಲ್ಲಾ ಹಾಜಿ ಎಂಬಾತ 1628ರಲ್ಲಿ ಹುಲಿಕಲ್ ಘಾಟಿಯಲ್ಲಿ ದರ್ಗಾ ಒಂದನ್ನು ಕಟ್ಟಿಸಿದ್ದ. ವೆಂಕಟಪ್ಪ ನಾಯಕನ ಮಗ ತಾವರೆಕೆರೆ ಮಸೀದಿಗೆ ಎಡಹಳ್ಳಿ ಎಂಬ ಗ್ರಾಮವನ್ನು ಉಂಬಳಿಯಾಗಿ ನೀಡಿದ ಉಲ್ಲೇಖ ಇದೆ.

ಕೆಳದಿಯ ರಾಣಿ ಚೆನ್ನಮ್ಮ ಮಂಗಳೂರು ಸಮೀಪದ ಗಂಜಿಮಠ ಮತ್ತು ಕಿನ್ನಿಕಂಬಳ ಗ್ರಾಮಗಳಲ್ಲಿ ಮುಸ್ಲಿಂ ಸಂತರಿಗೆ ನೆಲದಾನ ಮಾಡಿದ ಉಲ್ಲೇಖವಿದೆ.

ಅಜಿಲ ಅರಸರು ಬಂಟ್ವಾಳ ತಾಲೂಕಿನ ಅಜಿಲಮೊಗರು ದರ್ಗಾಕ್ಕೆ ನೆಲದಾನ ಮಾಡಿದ ಉಲ್ಲೇಖವಿದೆ. ನೇತ್ರಾವತಿ ನದಿಯ ದಡದಲ್ಲಿರುವ ಈ ದರ್ಗಾಕ್ಕೆ ಉರೂಸಿನ ಸಂದರ್ಭದಲ್ಲಿ ನದಿಯಾಚೆ ಇರುವ ಕಡೇಶ್ವಾಲ್ಯ ದೇವಾಲಯದಿಂದ ಅಕ್ಕಿ ಮೆರವಣಿಗೆಯಲ್ಲಿ ಬರುತ್ತದೆ. ಅಲ್ಲಿನ ಜಾತ್ರೆಯ ಸಂದರ್ಭ ದರ್ಗಾದಿಂದ ಎಣ್ಣೆ ಮೆರವಣಿಗೆಯಲ್ಲಿ ಹೋಗುತ್ತದೆ. ಇದರ ಹಿಂದೆ ಸಾಂಕೇತಿಕತೆ ಇದೆ. ಹಿಂದೂಗಳು ಹೆಚ್ಚಾಗಿ ರೈತರು. ಹಾಗಾಗಿ ಅಕ್ಕಿ ನೀಡುತ್ತಾರೆ. ಮುಸ್ಲಿಮರು ಹೆಚ್ಚಾಗಿ ವ್ಯಾಪಾರಿಗಳು ಅದಕ್ಕಾಗಿ ಎಣ್ಣೆ ನೀಡುತ್ತಾರೆ. ಒಬ್ಬರ ಮೇಲೆ ಇನ್ನೊಬ್ಬರು ಅವಲಂಬಿಸಿದ್ದಾರೆ. ಈ ಸಹಕಾರವನ್ನೇ ಈ ಸಂಪ್ರದಾಯ ಬಿಂಬಿಸುತ್ತದೆ. ಇಂದು ಇಲ್ಲಿ ನದಿಯು ಅಣೆಕಟ್ಟಿನ ನೀರಿನಿಂದ ಮುಳುಗಿದೆ ಮತ್ತು ಇಲ್ಲೀಗ ಒಂದು ಸೇತುವೆಯೂ ಆಗುತ್ತಿದೆ. ಹಿಂದಿನ ಹೃದಯದ ಸೇತುವೆಯನ್ನು ಇದು ಮತ್ತೆ ಕಟ್ಟಬಹುದೇ? ಗೊತ್ತಿಲ್ಲ!

ಇಂತಹ ಪರಂಪರೆ ಇರುವ ತುಳುನಾಡಿನಲ್ಲಿ ಇಂದು ಕೋಮುದ್ವೇಷ ಹೆಚ್ಚಾಗಿದೆ.

ಕರಾವಳಿಗೆ 1342ರಷ್ಟು ಹಿಂದೆಯೇ ಭೇಟಿ ನೀಡಿದ್ದ ಪ್ರವಾಸಿ ಇಬ್ನ್ ಬತೂತ ಮಂಗಳೂರನ್ನು ಮಂಜರುನ್ ಎಂದು ಕರೆದಿದ್ದಾನೆ. ಇಲ್ಲಿ ಹಿಂದೂ- ಮುಸ್ಲಿಮರು ಅಣ್ಣತಮ್ಮಂದಿರಂತೆ ಬದುಕುತ್ತಿದ್ದಾರೆ ಎಂದು ಆತ ತನ್ನ ಪ್ರವಾಸ ಕಥನದಲ್ಲಿ ದಾಖಲಿಸಿದ್ದಾನೆ. ಇಲ್ಲಿ 4000 ಮುಸ್ಲಿಮರು ವ್ಯಾಪಾರ ಮಾಡುತ್ತಿದ್ದು, ಕೆಲವರು ಉನ್ನತ ಮಟ್ಟದ ಅಧಿಕಾರಿಗಳಾಗಿಯೂ ಇದ್ದರು ಎಂದು ಆತ ಬರೆದಿದ್ದಾನೆ.

ವಿಜಯನಗರಕ್ಕೆ ಪರ್ಷಿಯಾದ ರಾಯಭಾರಿಯಾಗಿ 1448ರಲ್ಲಿ ಬಂದಿದ್ದ ಅಬ್ದುಲ್ ರಜಾಕ್ ಮಂಗಳೂರಿಗೆ ಬಂದು ಬಂಟ್ವಾಳ ತಾಲೂಕಿನ ಪೊಳಲಿ ರಾಜರಾಜೇಶ್ವರಿ ದೇವಾಲಯದ ದರ್ಶನ ಮಾಡಿದ ದಾಖಲೆಯಿದೆ.

ಇಲ್ಲಿ ಮುಸ್ಲಿಮರಿಗೆ ಉನ್ನತ ಸ್ಥಾನಮಾನ ಇರುವುದಾಗಿ 16ನೇ ಶತಮಾನದಲ್ಲಿ ಬಂದಿದ್ದ ಪೋರ್ಚುಗೀಸ್ ಯಾತ್ರಿ ದುಆರ್ತೆ ಬರ್ಬೋಸ ಬರೆದಿದ್ದಾನೆ.

ಮೂಸ ಬ್ಯಾಯಿ (ಬ್ಯಾರಿ) ಎಂಬಾತ ಕೆಳದಿ ರಾಜ್ಯದ ಸೇನಾಪತಿಗಳಲ್ಲಿ ಒಬ್ಬನಾಗಿದ್ದ ಎಂದು 1523ರಲ್ಲಿ ಇಲ್ಲಿಗೆ ಬಂದಿದ್ದ ಪೀಟರ್ ಡೇಲ್ವಿಲ್ಲೆ ಬರೆದಿದ್ದಾನೆ. ಉಳ್ಳಾಲ ರಾಣಿ ಅಬ್ಬಕ್ಕ, ಚೌಟ ಮತ್ತು ಬಂಗ ಅರಸರ ಸೇನೆಗಳಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಮರು ಇರುವುದನ್ನು ಕೂಡ ಆತ ಉಲ್ಲೇಖಿಸಿದ್ದಾನೆ.

ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ಕರಾವಳಿಯ ಹಲವಾರು ದೇಗುಲಗಳಿಗೆ ತಸ್ದೀಕ್ ಅಥವಾ ಉಂಬಳಿ ನೀಡಿದ್ದಾರೆ. ಟಿಪ್ಪು ಮಂಗಳೂರಿನ ಹೃದಯ ಭಾಗದಲ್ಲಿರುವ ಪ್ರಸಿದ್ಧ ಶರವು ಮಹಾಗಣಪತಿ ದೇವಾಲಯಕ್ಕೆ ಇಡೀ ಮೂಡುಶೆಡ್ಡೆ ಗ್ರಾಮವನ್ನು ಉಂಬಳಿ ನೀಡಿದ್ದ. ದಿನದ ಖರ್ಚಿಗೆ ಒಂದು ವರಹ (ನಾಲ್ಕು ರೂಪಾಯಿ- ಆ ಕಾಲಕ್ಕೆ ಇದು ದೊಡ್ಡ ಮೊತ್ತ) ತಸ್ದೀಕ್ ನೀಡಲಾಗುತ್ತಿತ್ತು. ಅದಲ್ಲದೇ ವರ್ಷಕ್ಕೆ ಏಳ್ನೂರ ತೊಂಭತ್ತಮೂರು ರೂಪಾಯಿ ಅರ್ವತ್ತೊಂಭತ್ತು ಪೈಸೆ ತಸ್ದೀಕ್ ನೀಡಲಾಗುತ್ತಿತ್ತು.

ಇದಕ್ಕಿಂತ ಕುತೂಹಲಕಾರಿ ವಿಷಯ ಎಂದರೆ, ಈಗಿನ ಧರ್ಮಸ್ಥಳದ ಮೂಲ ಹೆಸರು ಕುಡುಮ. ಅಲ್ಲಿನ ಆಡಳಿತಗಾರ ಮಂಜಯ್ಯ ಹೆಗ್ಗಡೆಯನ್ನು ಕೆಲವರು ಕೊಲೆ ಮಾಡಿದಾಗ, ತಕ್ಷಣ ಮಧ್ಯ ಪ್ರವೇಶಿಸಿದ ಟಿಪ್ಪು, ಆತನ ಮಗ ಕುಮಾರ ಹೆಗ್ಗಡೆಗೆ ಅಧಿಕಾರ ವರ್ಗಾಯಿಸಿದ್ದ!

ಬಪ್ಪನಾಡಿನ ದೇವಾಲಯವನ್ನು ಕಟ್ಟಿಸಿದಾತ ಬಪ್ಪಬ್ಯಾರಿ ಎಂಬ ಮುಸ್ಲಿಂ ವ್ಯಾಪಾರಿ ಎಂಬುದು ಎಲ್ಲರಿಗೂ ಗೊತ್ತು. ಆತನನ್ನೇ ಈಗ ಚಡ್ಡಿಗಳು ಬಬ್ರುವಾಹನ ಮಾಡುತ್ತಿದ್ದಾರೆ.

ತುಳುನಾಡಿನ ಭೂತಾರಾಧನೆಯಲ್ಲೂ ಮುಸ್ಲಿಮರಿಗೆ ಪ್ರಮುಖ ಪಾತ್ರವಿದೆ. ಇಲ್ಲಿ ವೀರರು ಮತ್ತು ನಿಗೂಢವಾಗಿ ಕಾಣೆಯಾದವರು, ದುರಂತ ಮರಣವನ್ನಪ್ಪಿದವರು ಭೂತಗಳಾದದ್ದು ಎಲ್ಲರಿಗೂ ಗೊತ್ತಿದೆ. ಆದುದರಿಂದಲೇ ಈ ನೆಲದಲ್ಲಿ ಮುಸ್ಲಿಂ ಭೂತಗಳು, ಚೀನೀ ಭೂತಗಳೂ ಇವೆ. ಬಿಲ್ಲವ ವೀರರಾದ ಕೋಟಿ- ಚೆನ್ನಯರ ಕೆಲವು ಗರಡಿಗಳಲ್ಲಿ ಮುಸ್ಲಿಂ ಮಕ್ಕಳು ಎಂಬ ಮರದ ಪ್ರತಿಮೆಗಳು ಇವೆ.
ತುಳುವರು, ಅದರಲ್ಲೂ ಮೊಗವೀರರು ಮುಖ್ಯವಾಗಿ ಆರಾಧಿಸುವ ಬೊಬ್ಬರ್ಯ ಮೂಲದಲ್ಲಿ ಬಬ್ಬು ಬ್ಯಾರಿ ಅಥವಾ ಬಾವ ಬ್ಯಾರಿ! ಬೆಲಿಯ ಅಂದರೆ ದೊಡ್ಡ ಫಾತಿಮ ಮತ್ತು ಮುರವೆ ಬ್ಯಾರಿ ದಂಪತಿಗಳ ಮಗ.

ಅದಲ್ಲದೇ ಆಲಿ ಭೂತವೂ ಇದೆ. ಆತ ಮಂತ್ರವಾದಿಯಾಗಿದ್ದವನು. ಅತ್ತಾವರ ದೈವಂಗಳ್, ಜುಮಾದಿ, ಸಿರಿ ಮುಂತಾದ ಪಾಡ್ದನಗಳಲ್ಲಿ ಮುಸ್ಲಿಂ ಪಾತ್ರಗಳು ಬರುತ್ತವೆ.

ಭೂತಾರಾಧನೆಯಲ್ಲಿ ಮುಸ್ಲಿಮರಿಗೆ ಗೌರವದ ಮತ್ತು ಮಹತ್ವದ ಸ್ಥಾನವಿತ್ತು. ಉದ್ಯಾವರ ಮಾಡ, ಬಸರೂರು, ಬಾರಕೂರು ಮುಂತಾದ ಕಡೆಗಳಲ್ಲಿ ದೈವಾರಾಧನೆ ಆರಂಭವಾಗಬೇಕಾದರೆ, ಮುಸ್ಲಿಮರ ಹಾಜರಾತಿ ಇರಲೇಬೇಕಾಗಿತ್ತು. ಉದಾಹರಣೆಗೆ ಉದ್ಯಾವರ ಮಾಡದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರು ವೀಳ್ಯ ಕೊಡಬೇಕು.

ನನ್ನೂರಾದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಅರಸು ಮುಂಡತ್ತಾಯ ಮಾಡ ಸಹಿತ ಹಲವು ಕಡೆ ತಲೆತಲಾಂತರಗಳಿಂದ ಅಲಂಕಾರ ಮತ್ತು ಸುಡುಮದ್ದಿನ ಕೆಲಸ ಮುಸ್ಲಿಮರಿಗೇ! (ಉಡುಪಿ ಪರ್ಯಾಯದಲ್ಲೂ ಹೀಗಿತ್ತು).

ಕುಂದಾಪುರ ಕರಾವಳಿಯಲ್ಲಿ ಮೀನುಗಾರರು ಮೀನಿನ ಬರದ ಸಮಯದಲ್ಲಿ ನಡೆಸುವ ಸೀರಣಿ ಪೂಜೆ ಅಂದರೆ, ಪುಟ್ಟ ದೋಣಿಯಲ್ಲಿ ಪಂಚಕಜ್ಜಾಯವನ್ನು ತೇಲಿ ಬಿಡುವ ವಿಧಿಗಳನ್ನು ಮುಸ್ಲಿಂ ಮೌಲವಿಗಳು ನಡೆಸುತ್ತಿದ್ದರು.
ಅಜಿಲಮೊಗರು, ಮಂಗಳೂರಿನ ಸೈದಾನಿ ಬೀಬಿ ದರ್ಗಾ, ಕಾಜೂರು ಮುಂತಾದ ದರ್ಗಾಗಳಿಗೆ ಸಾವಿರಾರು ಮುಸ್ಲಿಮೇತರರು ಹರಕೆ ಹೊರುತ್ತಾರೆ. ಮಂಗಳೂರಿನ ಬೋಳಾರದಲ್ಲಿ ಇದ್ದ ನನ್ನ ಅಜ್ಜಿ ಗೌರಿ ವಾರಕ್ಕೊಮ್ಮೆ ನನ್ನನ್ನು ಅಲ್ಲಿಗೆ ಒಯ್ದು ಒಂದು ತುಂಡು ಮಲ್ಲಿಗೆ ಇಡುತ್ತಿದ್ದರು. ಕೆಲವರ್ಷಗಳ ಹಿಂದಿನ ತನಕ ಕಂದಾವರ ಬೈಲು ದರ್ಗಾದ ಆಡಳಿತ ಹಿಂದೂ ಕುಟುಂಬವೊಂದು ನೋಡಿಕೊಳ್ಳುತ್ತಿತ್ತು.

ಕಾರ್ಕಳದ ಅತ್ತೂರು ಚರ್ಚಿಗೆ ಸಾವಿರಾರು ಅನ್ಯ ಧರ್ಮೀಯರು ಹರಕೆ ಹೊರುತ್ತಾರೆ, ಜಾತ್ರೆಯಲ್ಲಿ ಭಾಗವಹಿಸುತ್ತಾರೆ.

ಹಿಂದೆ ಹಿಂದೂ, ಮುಸ್ಲಿಂ, ಕ್ರೈಸ್ತರು ಪರಸ್ಪರರ ಹಬ್ಬಗಳಲ್ಲಿ ಭಾಗವಹಿಸುತ್ತಿದ್ದರು. ಈಗ ಅವೆಲ್ಲಾ ಕಡಿಮೆಯಾಗಿರುವುದು ಕಂಡುಬರುತ್ತದೆ. ಈ ಐತಿಹಾಸಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೋಮುವಾದದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಪೊಲೀಸರು ಕೂಡಾ ಇಂತಹಾ ಹಿನ್ನೆಲೆಯನ್ನು ತಿಳಿದುಕೊಂಡು, ಅದರಂತೆಯೇ ಕಾರ್ಯಾಚರಿಸಿದರೆ, ಕೋಮುಶಕ್ತಿಗಳನ್ನು ನಿಯಂತ್ರಿಸಿ, ಸೌಹಾರ್ದ ಕಾಪಾಡಲು ಅನುಕೂಲವಾಗುವವುದು. ಇಲ್ಲಿ ಸರಕಾರ ತೆಗೆದುಕೊಳ್ಳುವ ದೃಢ ನಿರ್ಧಾರ ಬಹಳ ಮುಖ್ಯ.

(ಇಲ್ಲಿ ಬರೆದಿರುವ ಬೂತಗಳ ಮತ್ತು ಇತಿಹಾಸದ ವಿಷಯಗಳನ್ನು ನನ್ನ ಸ್ವಂತ ಅನುಭವ ಮತ್ತು ಇತ್ತೀಚೆಗೆ ದಿವಂಗತರಾದ ಮಾನ್ಯ ಅಮೃತ ಸೋಮೇಶ್ವರ ಗುರುಗಳು ಮತ್ತಿತರ ಗೌರವಾನ್ವಿತ ಹಿರಿಯರ ಬರಹಗಳ ಆಧಾರದಲ್ಲಿ ಬರೆದಿದ್ದೇನೆ. ಧರ್ಮದ ಮದವೇರಿದ ತಪ್ಪುದಾರಿಗೆ ಇಳಿದ ಬಂಧುಗಳು ಇದನ್ನು ಪ್ರಶ್ನಿಸಬೇಡಿ.)

ಬಿಜೆಪಿಯ ಪುಂಡ ಹಿಂದೂತ್ವಕ್ಕೆ ಮಾದರಿ ಶಿವಸೇನೆ
ಬೊಗಸೆಗೆ ದಕ್ಕಿದ್ದು…13

ನಿಖಿಲ್ ಕೋಲ್ಪೆ

ಮಹಾರಾಷ್ಟ್ರ ರಾಜಕಾರಣದಲ್ಲಿ ಗಮನಾರ್ಹ ಶಕ್ತಿಯಾಗಿ ಬೆಳೆದುಬಂದಿರುವ ಶಿವಸೇನೆಯು ಮೂಲತಃ ಒಂದು ಪ್ರಾದೇಶಿಕ, ರಾಷ್ಟ್ರವಾದಿ, ತೀವ್ರ ಬಲಪಂಥೀಯ ರಾಜಕೀಯ ಪಕ್ಷವಾಗಿದ್ದು, ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಇತ್ತೀಚೆಗಷ್ಟೇ ಸ್ವಲ್ಪ ಸೌಮ್ಯ ನಿಲುವು ತೋರಿಸಿದ್ದರೂ, ಅದರೊಳಗಿನ ತೀವ್ರ ಹಿಂದೂತ್ವವಾದಿ ಶಕ್ತಿಗಳು ಬಿಜೆಪಿಯ ಪ್ರಚೋದನೆಯಿಂದ ಮತ್ತೆಮತ್ತೆ ಹೆಡೆಯೆತ್ತಿವೆ.

ತನ್ನ ಆಕ್ರಮಣಕಾರಿ ತತ್ವಗಳಿಗೆ ಅನುಗುಣವಾಗಿ ಘರ್ಜಿಸುವ ಹುಲಿಯನ್ನು ಪಕ್ಷದ ಚಿಹ್ನೆಯನ್ನಾಗಿಯೂ, ಬಿಲ್ಲು ಬಾಣವನ್ನು ಚುನಾವಣಾ ಚಿಹ್ನೆಯನ್ನಾಗಿಯೂ ಹೊಂದಿರುವ ಶಿವಸೇನೆಯ ಇತಿಹಾಸವನ್ನು ದೇಶದಲ್ಲಿ ಹಿಂದೂ ತೀವ್ರವಾದವು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನೋಡಬೇಕು. ಯಾಕೆಂದರೆ, ಇಂದು ದೇಶದಾದ್ಯಂತ ಬಿಜೆಪಿಯೊಳಗೆ ಬೆಳೆಯುತ್ತಿರುವ- ಮರಾಠಿಯಲ್ಲಿ ಟಪೋರಿ ಅಂದರೆ, “ಹಾದಿಬೀದಿಯ ಪುಂಡ, ನಾಲಾಯಕ್” ಹಿಂದೂತ್ವಕ್ಕೆ ಮಾದರಿಯಾಗಿರುವುದೇ ಶಿವಸೇನೆ. ನಮ್ಮಲ್ಲಿಯೂ ಬಜರಂಗದಳ, ಆ ಸೇನೆ ಈ ಸೇನೆ ಎಂದು ಇಂತಹ ಶಕ್ತಿಗಳು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಅರ್ಥ ಮಾಡಿಕೊಳ್ಳಲು ಶಿವಸೇನೆಯ ಇತಿಹಾಸವನ್ನು ಸ್ವಲ್ಪವಾದರೂ ನೋಡುವುದು ಅಗತ್ಯ.

ಹೊಸ ರಾಜಕೀಯ ಕಥನ

ಶಿವಸೇನೆಯು ಹುಟ್ಟಿದಾಗ ಅದು ಮಹಾರಾಷ್ಟ್ರದಲ್ಲಿ ಒಂದು ಹೊಸ ರಾಜಕೀಯ ಕಥನ ಅಥವಾ ಪರಿಕಲ್ಪನೆಯನ್ನೇ ರೂಪಿಸಿತು. ಅದೆಂದರೆ, ಮರಾಠರ ಹಕ್ಕು ಮತ್ತು ಹಿಂದೂ ರಾಷ್ಟ್ರೀಯತೆ. ಅದಕ್ಕೆಂದೇ ರೂಪಿತವಾದ ಘೋಷಣೆ “ಮರಾಠಿ ಮಾಣುಸ್”- ಎಂದರೆ ಮರಾಠಿ ಮನುಷ್ಯ. “ಅಮ್ಚಿ ಮಾಠಿ, ಅಮ್ಚಿ ಮಾಣುಸ್”- ಎಂದರೆ, “ನಮ್ಮ ಮಣ್ಣು, ನಮ್ಮ ಜನ” ಎಂಬುದು ಇಂದಿಗೂ ಅಲ್ಲಿ ಜನಪ್ರಿಯ ಘೋಷಣೆ. “ಅಮ್ಚಿ ಮುಂಬಯಿ” ಕೂಡಾ ಇದೇ ಬ್ರಾಂಡಿನದ್ದು. ಇದಕ್ಕೆ ಸಂಕೇತವಾಗಿ ಬಳಸಿದ್ದು, ಇಂದು ಹಿಂದೂ ಹೋರಾಟಗಾರ ಎಂದು ಸಂಘಪರಿವಾರವು ಸುಳ್ಳಾಗಿ ಬಿಂಬಿಸುತ್ತಿರುವ ಮರಾಠಾ ಸ್ವಾಭಿಮಾನದ ಸಂಕೇತವಾದ ಶಿವಾಜಿಯನ್ನು. ಅದಕ್ಕೆಂದೇ ಪಕ್ಷದ ಹೆಸರು ಶಿವಸೇನೆ. ಪಕ್ಷದ ಬೆಳವಣಿಗೆಯ ಗುರಿ ಅಸಂಖ್ಯಾತ ನಿರುದ್ಯೋಗಿ, ಹತಾಶ ಶೂದ್ರ ಯುವಜನರಾಗಿದ್ದರೆ, ಆಕ್ರಮಣದ ಗುರಿ ಮೂಲತಃ ದಕ್ಷಿಣ ಭಾರತೀಯರು ಹಾಗೂ ನಂತರದಲ್ಲಿ ಹಿಂದಿ ಭಾಷಿಕರು ಮತ್ತು ಸಾಮಾನ್ಯವಾಗಿ ಮುಸ್ಲಿಮರು.

ಪ್ರೇರಣೆ: ಆರೆಸ್ಸೆಸ್ ಮತ್ತು ಹಿಟ್ಲರ್. ಹಿಟ್ಲರನ ಕುಖ್ಯಾತ ಗೂಂಡಾ ಸೈನಿಕ ಪಡೆ ವಾಫೆನ್ ಎಸ್‌ಎಸ್ ಮತ್ತು ಶಿವಸೇನೆಯ ಹೆಸರಿನ ಎಸ್‌ಎಸ್ ಒಂದೇ ಆಗಿರುವುದು ಕಾಕತಾಳೀಯವೇನಲ್ಲ. ಇಂದು ಬಿಜೆಪಿಯ ಉಗ್ರವಾದಿ ಮುಖವಾಗಿರುವ ಬಜರಂಗದಳ ಇತ್ಯಾದಿಗಳ ಈಗಿನ ರೂಪವೇ ಶಿವಸೇನೆಯ ಹಿಂದಿನ ರೂಪ. ಶಿವಸೇನೆಯು ಬಿಜೆಪಿಯಿಂದ ದೂರವಾಗಲು ಮೂಲಕಾರಣವೇ ಇಂತಾ ಶಕ್ತಿಗಳು. ಅದೇ ಶಕ್ತಿಗಳು ಪ್ರಾದೇಶಿಕವಾದ ಶಿವಸೇನೆಯಿಂದ, ರಾಷ್ಟ್ರೀಯವೂ ಲಾಭದಾಯಕವೂ ಆದ ಬಿಜೆಪಿಯ ಕಡೆಗೆ ಆಕರ್ಷಿತವಾದದ್ದು. ಮಿತ್ರಪಕ್ಷಗಳನ್ನು ನುಂಗಿ ನೀರು ಕುಡಿಯುವುದರಲ್ಲಿ ಬಿಜೆಪಿ ಎತ್ತಿದ ಕೈ ಎಂಬುದಕ್ಕೆ ಹತ್ತಿರದ ಉದಾಹರಣೆ ಎಂದರೆ, ಗೋವಾದ ಪ್ರಬಲ ಬಲಪಂಥೀಯ ಪಕ್ಷವಾಗಿದ್ದ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಇದೀಗ ಅದು ಹೇಳಹೆಸರಿಲ್ಲದಂತೆ ಆಗಿದೆ. ಕರ್ನಾಟಕದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಅವರಿಗಿಂತಲೂ ಹೆಚ್ಚಾಗಿ ಹಿಂದೂತ್ವದ ಪುಂಗಿ ಊದುತ್ತಿರುವ ಕುಮಾರಸ್ವಾಮಿ ಇತ್ಯಾದಿಗಳಿಗೆ ಇದರ ಅರಿವಿದ್ದಂತಿಲ್ಲ.

ದೇಶದಲ್ಲಿ ತೀವ್ರವಾದಿ ಹಿಂದೂತ್ವದ ಬೆಳವಣಿಗೆಗೆ ಕಾರಣಗಳೇನು ಮತ್ತು ನಮ್ಮ ಪರಿಸ್ಥಿತಿಗೂ- ಶಿವಸೇನೆಯು ಬಿಜೆಪಿಗಿಂತಲೂ ಬಹಳ ಹಿಂದೆಯೇ ಪ್ರಬಲವಾಗಿ ಬೆಳೆದ ಐತಿಹಾಸಿಕ ಪರಿಸ್ಥಿತಿಗೂ ಸಾಮ್ಯವಿದೆಯೇ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡೇ ಅದನ್ನು ಚುಟುಕಾಗಿ ನೋಡೋಣ.

ಹಿನ್ನೆಲೆ

ಸ್ವಾತಂತ್ರ್ಯದ ಬಳಿಕ ಉಳಿದ ಬ್ರಿಟಿಶ್ ಕಾಲದ ಪ್ರೆಸಿಡೆನ್ಸಿಗಳಲ್ಲಿ ಮತ್ತು ರಾಜರು ಆಳುತ್ತಿದ್ದ ರಾಜ್ಯಗಳಲ್ಲಿ ಬೇರೆಬೇರೆ ಭಾಷೆಗಳನ್ನು ಮಾತನಾಡುವ ಪ್ರದೇಶಗಳಿದ್ದವು. ಕರ್ನಾಟಕ ಏಕೀಕರಣ ಚಳವಳಿ ನಡೆದಂತೆ ಮಹಾರಾಷ್ಟ್ರದಲ್ಲೂ ಹಿಂಸಾತ್ಮಕವಾದ ಮಹಾರಾಷ್ಟ್ರ ಏಕೀಕರಣ ಚಳವಳಿ ನಡೆಯಿತು. ಮುಂಬಯಿಯಲ್ಲಿ ಈಗಿನಂತೆ ಆಗಲೂ ಶ್ರೀಮಂತ ಗುಜರಾತಿಗಳ ಪ್ರಾಬಲ್ಯವಿತ್ತು. ಏಕೀಕರಣ ಚಳುವಳಿಯನ್ನು ನಿರ್ದಯವಾಗಿ ದಮನಿಸಿದವರು (ನಂತರ ಪ್ರಧಾನಿಯಾದ) ಗುಜರಾತಿ ಮುಖ್ಯಮಂತ್ರಿ ಮೊರಾರ್ಜಿ ದೇಸಾಯಿ ಎಂಬುದನ್ನು ಗಮನಿಸಬೇಕು. 1960ರಲ್ಲಿ ಬಾಂಬೆ ಪ್ರೆಸಿಡೆನ್ಸಿಯನ್ನು ಒಡೆದು ಮಹಾರಾಷ್ಟ್ರ ಮತ್ತು ಗುಜರಾತ್ ಭಾಷಾವಾರು ರಾಜ್ಯಗಳ ಸ್ಥಾಪನೆಯಾಯಿತು. ನಿಜಾಮನ ಹೈದರಾಬಾದ್ ಪ್ರಾಂತ್ಯದ ಮರಾಠಿ ಭಾಷಿಕ ಪ್ರದೇಶಗಳೂ ಸೇರಿ, ಮುಂಬಯಿ ರಾಜಧಾನಿಯಾಯಿತು. ಆದರೆ, ರಾಜಧಾನಿಯಲ್ಲಿ ಶ್ರೀಮಂತ ವ್ಯಾಪಾರಿ ಮಾರ್ವಾಡಿ, ಗುಜರಾತಿಗಳದ್ಧೇ ಕಾರುಬಾರು. ಜೊತೆಗೆ ಮುಂಬಯಿ ಕೈಗಾರಿಕಾ-ವಾಣಿಜ್ಯ ನಗರವಾಗಿ ಬೆಳೆದಿದ್ದುದರಿಂದ ದಕ್ಷಿಣ ಭಾರತೀಯರೂ ಸೇರಿದಂತೆ ಎಲ್ಲಾ ಕಡೆಗಳ ಜನರು ಉದ್ಯೋಗ ಅರಸಿ ಮುಂಬಯಿ ಸೇರಿದ್ದರು. ನಿರುದ್ಯೋಗ ತಾಂಡವವಾಡುತ್ತಿದ್ದುದರಿಂದ ಈ ಕುರಿತು ಮರಾಠಿಗರಲ್ಲಿ ತೀವ್ರವಾದ ಅಸಮಾಧಾನವಿತ್ತು. ಅಸೂಯೆ ಇತ್ತು.

ಸ್ಥಾಪನೆ

ಇದನ್ನೇ ಬಂಡವಾಳ ಮಾಡಿಕೊಂಡ ಬಾಳಾ ಠಾಕ್ರೆ ಜೂನ್ 19, 1966ರಲ್ಲಿ ಶಿವಸೇನೆಯನ್ನು ಒಂದು ರಾಜಕೀಯ ಪಕ್ಷವಾಗಿ ಸ್ಥಾಪನೆ ಮಾಡಿದರು. ಇದನ್ನು ಅವರು ಒಮ್ಮೆಗೇ ಮಾಡಲಿಲ್ಲ. ಮರಾಠ ಮತ್ತು ಬಲಪಂಥೀಯ ಚಿಂತಕರಾಗಿ ಸ್ವಲ್ಪ ಹೆಸರು ಮಾಡಿದ್ದ ಪ್ರಬೋಧನ್‌ಕರ್ ಠಾಕ್ರೆ ಅವರ ಮಗನಾದ ಬಾಳಾ ಠಾಕ್ರೆ ಆಗ ಪ್ರಖ್ಯಾತವಾಗಿದ್ದ ಫ್ರೀ ಪ್ರೆಸ್ ಜರ್ನಲ್‌‌ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದರು. (ಅಂದಹಾಗೆ ಆಗ ನನ್ನ ಪತ್ರಿಕಾ ವೃತ್ತಿಯ ಗುರು ಹಾಗೂ ದೊಡ್ಡಪ್ಪ ಎಸ್.ಬಿ. ಕೋಲ್ಪೆಯವರು ಪ್ರೀ ಪ್ರೆಸ್ ಜರ್ನಲ್‌ನಲ್ಲಿಯೇ ಮುಖ್ಯ ವರದಿಗಾರರೂ, ನಂತರ ಸ್ವಲ್ಪ ಕಾಲ ಸಂಪಾದಕರೂ ಆಗಿದ್ದ ಎಸ್.ಬಿ. ಕೋಲ್ಪೆ ಅವರ ಕಿರಿಯ ಸಹೋದ್ಯೋಗಿ ಠಾಕ್ರೆ. ಅವರು ಹೇಳಿದಂತೆ ಹಿಂದೂ-ಮುಸ್ಲಿಂ ಗಲಭೆಗಳ ವೇಳೆ ವರದಿ ಮಾಡಲು ಬರಲು ಹೇಳಿದರೆ, ಕಚೇರಿಯಲ್ಲಿಯೇ ಮುದುಡಿ ಕುಳಿತಿರುತ್ತಿದ್ದ ಹೇಡಿ.)

ಠಾಕ್ರೆ ಅತ್ಯುತ್ತಮ ಗೆರೆಗಳ ಪ್ರಖರ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದರು. ನಂತರ ರಾಜೀನಾಮೆ ನೀಡಿ “ಮಾರ್ಮಿಕ್” ಎಂಬ ಪತ್ರಿಕೆಯನ್ನು ಆರಂಭಿಸಿದ್ದರು. ಇದರಲ್ಲಿ ಆವರು ಬರೆಯುತ್ತಿದ್ದ ಕಟುವಾದ ರಾಜಕೀಯ ವಿಷ ತುಂಬಿದ ವ್ಯಂಗ್ಯಚಿತ್ರಗಳು ಮತ್ತು ವಿಡಂಬನೆಗಳೇ ಪ್ರಮುಖವಾಗಿದ್ದವು. ಇದು ಜನಪ್ರಿಯವಾಯಿತು. ಮುಂದೆ ಶಿವಸೇನೆಯು ಬಳಸಿದ ದಕ್ಷಿಣ ಭಾರತೀಯ ವಿರೋಧಿ “ಲುಂಗಿ ಬಗಾವೋ, ಪುಂಗಿ ಬಜಾವೋ” ಅಥವಾ “ಲುಂಗಿ ಓಡಿಸಿ, ಪುಂಗಿ ಬಾರಿಸಿ” ಎಂಬ ಪ್ರಚೋದನಾತ್ಮಕ ಘೋಷಣೆಯ ಮೂಲ ಇರುವುದು ಇಲ್ಲಿಯೇ. ಆ ಕಾಲದಲ್ಲಿ ದಕ್ಷಿಣ ಭಾರತೀಯರು, ಮುಖ್ಯವಾಗಿ ತಮಿಳರು ಲುಂಗಿ ಧರಿಸಿದರೆ, ಮರಾಠಿ ಮತ್ತಿತರು ಕಚ್ಚೆ ಅಥವಾ ಪೈಜಾಮ ಮತ್ತು ಬಿಳಿ ದೋಣಿ ಟೊಪ್ಪಿ ಧರಿಸುತ್ತಿದ್ದರು. ಇದನ್ನು ತುಳುವರು “ಓಡ ಕಂಕಣೆ ಪಾಡ್ದಿನಿ” ಎಂದರೆ, “ದೋಣಿ ಮಗುಚಿ ಹಾಕಿದ್ದು” ಎಂದು ತಮಾಶೆ ಮಾಡುತ್ತಿದ್ದರು. ಇದನ್ನು ಹೇಳುವ ಕಾರಣ ಎಂದರೆ, ಒಳಗೊಳಗೇ ಹೊಗೆಯಾಡುತ್ತಿದ್ದ ಭಾಷಾ, ಪ್ರಾದೇಶಿಕ ಅಸಮಾಧಾನವನ್ನು ತೋರಿಸುವುದು. ಪ್ಯಾಂಟು ಸೂಟು ಪ್ರತಿಷ್ಟೆಯ ಸಂಕೇತವಾಗಿತ್ತು. ಈ ನೆಲೆಯಲ್ಲಿ ಜನರನ್ನು ಗುರುತಿಸಿ ದ್ವೇಷಿಸಲು ಸುಲಭವಾಗಿತ್ತು. ನರೇಂದ್ರ ಮೋದಿ ಹಿಂದೆ ಮುಸ್ಲಿಮರನ್ನು ಗುರಿ ಮಾಡಿ, “ಉಡುಪು ಗುರುತು ಹೇಳುತ್ತದೆ” ಎಂದು ಹೇಳಿಕೆ ನೀಡಿದ್ದಕ್ಕೆ ಇದೇ ಪ್ರೇರಣೆಯಾಗಿದ್ದಿರಬಹುದು.

ಹೊಸದಾಗಿ ಸ್ಥಾಪಿತವಾದ ಪಕ್ಷವು ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗಿ ಯುವಕರನ್ನು ಆಕರ್ಷಿಸಿತು. ಶಿವಸೇನೆಯ ಕಾರ್ಯಕರ್ತರು ಮೊದಲಿಗೆ ಸರಕಾರಿ ಅಧಿಕಾರಿಗಳು, ಖಾಸಗಿ ಸಂಸ್ಥೆಗಳನ್ನು ಬೆದರಿಸಿ, ತಮ್ಮವರಿಗೆ ಕೆಲಸ ಕೊಡಿಸಲು ಆರಂಭಿಸಿದರು. ಉದ್ಯೋಗ ಮಾರ್ಗದರ್ಶನ, ಅರ್ಜಿ ಬರೆದುಕೊಡುವುದು ಇತ್ಯಾದಿಗಳನ್ನು ಮಾಡುತ್ತಿದ್ದರು. ಆಗ ಅಧಿಕಾರಿಗಳು ಹೆಚ್ಚಾಗಿ ಮರಾಠಿಯೇತರರೇ ಆಗಿದ್ದು, ಅವರನ್ನು ಬೆದರಿಸಿ ಮರಾಠಿ ಕಾರ್ಮಿಕರ ಪರವಾಗಿ ನಿಂತರು. ಇದರ ಜೊತೆಯಲ್ಲಿ ಕಾರ್ಯಕರ್ತರಿಗೆ ಸ್ದಳೀಯವಾಗಿ ಗೂಂಡಾಗಿರಿ ನಡೆಸಿ ವಸೂಲಿ ಮಾಡುವ ಅವಕಾಶವೂ ಇತ್ತು. ಇವೆಲ್ಲವೂ ಹತಾಶ ಜನರನ್ನು ಮರಾಠಿ ಸ್ವಾಭಿಮಾನದ ನೆಲೆಯಲ್ಲಿ ಪಕ್ಷದ ಕಡೆಗೆ ಆಕರ್ಷಿಸಿದವು. ಜೊತೆಗೆ ಠಾಕ್ರೆಯ ಹಿಟ್ಲರ್ ಮಾದರಿಯ, ಕಂಚಿನ ಕಂಠದ, ಶತ್ರುಗಳನ್ನೂ ಮಂತ್ರಮುಗ್ಧಗೊಳಿಸುವ ಭಾಷಣಕಲೆ ಬಹಳವಾಗಿ ನೆರವಾಯಿತು. ಠಾಕ್ರೆ ಭಾಷಣಗಳಿಗೆ ಸಾವಿರಾರು ಜನರು ಸೇರುತ್ತಿದ್ದರು. ಶಿವಸೇನೆ ಎಂದರೆ ಎಲ್ಲರೂ ಬೆದರಲು ಆರಂಭಿಸಿದರು.

ಕಮ್ಯುನಿಸ್ಟ್ ದಮನ

ಆಗ ಮುಂಬಯಿಯಲ್ಲಿ ಅಸಂಖ್ಯಾತ ಬಟ್ಟೆ ಮಿಲ್ಲುಗಳು ಮತ್ತು ಇತರ ಕಾರ್ಖಾನೆಗಳಿದ್ದವು. ಅವುಗಳ ಮಾಲಕರು ಮುಖ್ಯವಾಗಿ ಗುಜರಾತಿ-ಮಾರ್ವಾಡಿಗಳಾಗಿದ್ದರು. ಇಲ್ಲೆಲ್ಲಾ ಕಮ್ಯುನಿಸ್ಟ್ ನೇತೃತ್ವದ ಕಾರ್ಮಿಕ ಸಂಘಟನೆಗಳಿದ್ದವು. ಇಲ್ಲಿ ಕಮ್ಯುನಿಸ್ಟರು ಎಷ್ಟು ಪ್ರಬಲರಾಗಿದ್ದರು ಎಂದರೆ, ಹಲವಾರು ನಗರಪಾಲಿಕೆ ಸದಸ್ಯರೂ, ಶಾಸಕರೂ ಆಯ್ಕೆಯಾಗುತ್ತಿದ್ದರು. ಇದು ಕಾಂಗ್ರೆಸಿಗೆ ಬೆದರಿಕೆಯಾಗಿತ್ತು. ಆಗ ಅವರನ್ನು ಹಿಂಸಾತ್ಮಕವಾಗಿ ಬಗ್ಗುಬಡಿಯಲು- ಕಾಂಗ್ರೆಸಿನ ಹಣದ ಚೀಲ ಎಂದರೆ, ಫಂಡ್ ರೈಸರ್ ಎಂದೇ ಹೆಸರಾಗಿದ್ಧ ಇನ್ನೊಬ್ಬ ಗುಜರಾತಿ ನಾಯಕ ರಜನಿಭಾಯ್ ಪಟೇಲ್ ಶಿವಸೇನೆಯನ್ನು ಬಳಸಿದರು ಎಂಬ ಆರೋಪವಿದೆ. ಇದಕ್ಕೆ ಗುಜರಾತಿ ಮಿಲ್ಲು ಮಾಲಕರ ಹಣಬೆಂಬಲವಿತ್ತು. ಮುಂದೆ ಶಿವಸೇನೆಗೆ ಪ್ರಬಲವಾಗಿ ಸೆಡ್ಡುಹೊಡೆದು ನಿಂತ ದಲಿತ್ ಪ್ಯಾಂಥರ್ಸ್ ಮತ್ತು ಅಂಬೇಡ್ಕರ್ ಅವರು ಸ್ಥಾಪಿಸಿದ್ದ ಆರ್‌ಪಿಐ, ಅಥವಾ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ನಾಯಕರನ್ನು ಹಣಬಲದಿಂದ ಭ್ರಷ್ಟಗೊಳಿಸಿ ಅವುಗಳು ಒಡೆದು ನುಚ್ಚುನೂರಾಗುವಂತೆ ಮಾಡಿದ ಕುಖ್ಯಾತಿಯೂ ಈ ಗುಜರಾತಿಗೆ ಇದೆ. ಶಿವಸೇನೆಯ ಜೊತೆಗೆ ಅವರು ಭೂಗತ ಸಂಪರ್ಕ ಹೊಂದಿದ್ದ ಕಾರ್ಮಿಕ ನಾಯಕ “ಕಾಮ್‌ಗಾರ್ ಆಗಾಡಿ”ಯ ಡಾ. ದತ್ತಾ ಸಾಮಂತ್ ಅವರನ್ನು ಬೆಳೆಸಿದರು. ಸಾಮಂತ್ ನಂತರ ಭೂಗತ ಜಗತ್ತಿನಿಂದಲೇ ಕೊಲೆಯಾದರು.

ನಂತರದಲ್ಲಿ ಶಿವಸೇನೆಯ ಕಾಮ್‌ಗಾರ್ ಸೇನಾ ಮತ್ತು ಸಾಮಂತ್ ಆವರ ಕಾಮ್‌ಗಾರ್ ಅಗಾಡಿ- ಕಾರ್ಮಿಕ ಸಂಘಟನೆಯ ಕ್ಷೇತ್ರಕ್ಕೆ ಭಯಾನಕವಾದ ಹಿಂಸೆಯನ್ನು ತಂದವು. ಕಮ್ಯುನಿಸ್ಟ್ ಕಾರ್ಮಿಕ ನಾಯಕರು ಒಬ್ಬರ ಬೆನ್ನಿಗೆ ಒಬ್ಬರು ಕೊಲೆಯಾಗತೊಡಗಿದರು. ಕಮ್ಯುನಿಸ್ಟರು ಬಹುತೇಕ ನಿರ್ನಾಮವಾದರು. ನಂತರದಲ್ಲಿ ಶಿವಸೇನೆಯು ಕಾಂಗ್ರೆಸಿಗೆ ಸಂಪೂರ್ಣವಾಗಿ ತಿರುಗಿಬಿದ್ದಿತು.

ಎಪ್ಪತ್ತರ ದಶಕದಲ್ಲಿ ಶಿವಸೇನೆಯು ಮರಾಠಿಗರನ್ನು ಪ್ರಚೋದಿಸಿ ದಕ್ಷಿಣ ಭಾರತೀಯರ ವಿರುದ್ಧ ಛೂಬಿಟ್ಟಿತು. ಶಿವಸೇನಾ ಕಾರ್ಯಕರ್ತರು ದಕ್ಷಿಣ ಭಾರತೀಯರ, ಮುಖ್ಯವಾಗಿ ಉಡುಪಿ ಹೊಟೇಲುಗಳ ಮೇಲೆ ದಾಳಿ ಆರಂಭಿಸಿತು. 1974-75ರಲ್ಲಿ ಬೆಳಗಾವಿ ವಿಷಯದಲ್ಲಿ ಹಿಂಸಾತ್ಮಕ ಗಡಿ ಗಲಾಟೆಯನ್ನು ಎಬ್ಬಿಸಿತು. ಒಮ್ಮೆಯಂತೂ ನಾಲ್ಕು ತಿಂಗಳುಗಳ ಕಾಲ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಬಸ್ ಸೇರಿದಂತೆ ವಾಹನ ಸಂಚಾರ ಸಂಪೂರ್ಣ ನಿಂತಿತ್ತು. ಕೊನೆಗೆ ಮುಂಬಯಿಯ ಬಂಟ ಸಮುದಾಯದವರು, ನಂತರ ಬಿಲ್ಲವರು ತಮ್ಮ ವ್ಯಾಪಾರ ಉಳಿಸಲು ತಮ್ಮದೇ ಪಡೆಕಟ್ಟಿಕೊಂಡು ಶಿವಸೇನೆಗೆ ಸರಿಯಾದ ಎದುರೇಟು ನೀಡಿದ್ದರು. ಆಗ ಉಂಟಾದ ರಾಜಿ ಇಂದೂ ಮುಂದುವರಿದಿದ್ದು, ಬಂಟ ಸಮುದಾಯದ ಹಲವರು ಶಿವಸೇನೆಯ ಕಾರ್ಪೊರೇಟರುಗಳು, ಶಾಸಕರು ಆಗಿದ್ದಾರೆ.

ಹಿಂದೂತ್ವದ ಬಂಡಿ

1968ರ ಮಾರ್ಚ್‌ನಲ್ಲಿ ನಡೆದ ಬೃಹನ್ಮುಂಬಯ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಶಿವಸೇನೆಯು 140ರಲ್ಲಿ 42 ಸ್ಥಾನಗಳನ್ನು ಗೆದ್ದಿತು. 1968ರ ಆಗಸ್ಟ್ ತಿಂಗಳಲ್ಲಿ ಮರಾಠಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಕಾಮ್‌ಗಾರ್ ಸೇನಾ ಸ್ಥಾಪಿಸಿತು. ನಂತರ ನಡೆದ ಹಿಂಸಾತ್ಮಕ ಕಥಾನಕವನ್ನು ಈಗಾಗಲೇ ಚುಟುಕಾಗಿ ನೋಡಿದ್ದೀರಿ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಮತ್ತು ಮುಂಬಯಿ ಹಾಗೂ ನೆರೆಯ ಥಾಣೆ ಜಿಲ್ಲೆ ಬಿಟ್ಟರೆ ಇಡೀ ಮಹಾರಾಷ್ಟ್ರದಲ್ಲಿ ಅದು ಹೇಳಿಕೊಳ್ಳುವ ಪ್ರಭಾವ ಬೀರಲಿಲ್ಲ. ಹಾಗಾಗಿ, ದಕ್ಷಿಣ ಭಾರತೀಯರೂ ಹಿಂದೂಗಳು ಎಂಬುದನ್ನು ಮರೆತು ದಾಳಿ ಮಾಡಿದ್ದ ಶಿವಸೇನೆಯು ಹಿಂದೂತ್ವದ ಬಂಡಿಯೇರಿ ಪುಂಗಿ ಊದಲು ಆರಂಭಿಸಿತು. ದಕ್ಷಿಣ ಭಾರತೀಯರನ್ನು ಗುರಿ ಮಾಡುವುದು ಕಡಿಮೆಯಾಯಿತು.

1989ರ ಚುನಾವಣೆಯಲ್ಲಿ ಅದು ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡಿತು. 1995-1999ರ ನಡುವೆ ಅದು ಮೈತ್ರಿ ಸರಕಾರ ನಡೆಸಿತು. ಮೊದಲ ಬಾರಿಗೆ ಶಿವಸೇನೆಯು ಮುಖ್ಯಮಂತ್ರಿ ಪದಕ್ಕೆ ಏರಿ ಮನೋಹರ ಜೋಶಿ ಮುಖ್ಯಮಂತ್ರಿಯಾದರು. 1999ರಿಂದ 2014ರ ತನಕ ಈ ಕೂಟ ಪ್ರತಿಪಕ್ಷದಲ್ಲಿತ್ತು. 2014ರ ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯಲ್ಲಿ ಜಗಳವಾಡಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದವು. ಬಿಜೆಪಿ ಅತೀದೊಡ್ಡ ಪಕ್ಷವಾಗಿ ಮೂಡಿಬಂದು, ನಂತರ ಅವು ಜೊತೆಯಾಗಿಯೇ ಸರಕಾರ ಸ್ಥಾಪಿಸಿದವು. ನಂತರ ಇವುಗಳು ಹತ್ತಿರ-ದೂರ ಆಗುತ್ತಲೇ ಇದ್ಧು, ಅಂತಿಮವಾಗಿ 2014ರಲ್ಲಿ ಶಿವಸೇನೆಯು ಎನ್‌ಡಿಎಯಿಂದ ಹೊರಬಂತು.

ಪಕ್ಷದ ಬೆಳವಣಿಗೆಯಲ್ಲಿ ಬಾಳಾ ಠಾಕ್ರೆಯ ಆಣ್ಣನ ಮಗ ರಾಜ್ ಠಾಕ್ರೆ, ಸ್ವಂತ ಮಗ ಉದ್ಧವ್ ಠಾಕ್ರೆಗಿಂತ- ತನ್ನ ಚಾಣಾಕ್ಷತನ ಮತ್ತು ತಂತ್ರಗಳಿಂದ ಹೆಚ್ಚಿನ ಕೊಡುಗೆ ಸಲ್ಲಿಸಿದ್ಧರು. ಆದರೆ, ಸಾಯುವ ಕಾಲಕ್ಕೆ ಬಾಳಾ ಠಾಕ್ರೆ ಸ್ವಂತ ಮಗ ಉದ್ಧವ್‌ರನ್ನೇ ಉತ್ತರಾಧಿಕಾರಿ ಎಂದು ಘೋಷಿಸಿದರು. ಇದರಿಂದ ಕೋಪಗೊಂಡ ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಸ್ಥಾಪಿಸಿದರೂ, ಹೆಚ್ಚಿನ ಯಶಸ್ಸು ಕಾಣಲಿಲ್ಲ. ಈಗ ಆ ಪಕ್ಷವು ಬೀದಿ ಪುಂಡಾಟಕ್ಕೆ ಸೀಮಿತವಾಗಿದೆ.

ನಂತರದಲ್ಲಿ ಶಿವಸೇನೆಯು ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಜೊತೆಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರ ವಿಕಾಸ್ ಆಗಾಡಿ ಹೆಸರಿನಲ್ಲಿ ಸರಕಾರ ಸ್ದಾಪಿಸಿ ಉದ್ಧವ್ ಠಾಕ್ರೆ ಮಂತ್ರಿಯಾದದ್ದು, ಪಕ್ಷವು ಮತ್ತೆ ಮತ್ತೆ ಒಡೆದದ್ದು ಇತ್ತೀಚಿನ ಕತೆ.

ಆದರೆ, ಶಿವಸೇನೆಯು ತನ್ನ ಬೆಳವಣಿಗೆಯ ಉದ್ದಕ್ಕೂ ಬಳಸಿದ ಕಾರ್ಯತಂತ್ರಗಳೂ ಬಹಳ ಉದ್ದವಾಗಿದ್ದು, ತುಂಬಾ ಕುತೂಹಲಕಾರಿಯಾಗಿವೆ. ಭಿವಂಡಿ ಸೇರಿದಂತೆ ಬಿಜೆಪಿಗಿಂತ ಮೊದಲೇ ಕೋಮುಗಲಭೆಗಳನ್ನು ವ್ಯವಸ್ಥಿತವಾಗಿ ತನ್ನ ಬೆಳವಣಿಗೆ ಮತ್ತು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡದ್ದು ಶಿವಸೇನೆ. ಪಾಕಿಸ್ತಾನವನ್ನು ಶತ್ರುವೆಂದು ಬಿಂಬಿಸಿ ಲಾಭ ಪಡೆಯುವುದನ್ನು ಕಲಿಸಿಕೊಟ್ಟದ್ದು ಶಿವಸೇನೆ. ಹಲವಾರು ಮಂದಿರ ಮಸೀದಿ ವಿವಾದಗಳನ್ನು ಬಿಜೆಪಿಯು ಬಾಬ್ರಿ ಮಸೀದಿ ವಿವಾದವನ್ನುವನ್ನು ಬಳಸಿಕೊಳ್ಳುವುದಕ್ಕೆ ಮೊದಲೇ ಬಳಸಿಕೊಂಡದ್ದು ಶಿವಸೇನೆ. ಬಾಬ್ರಿ ಮಸೀದಿ ನಾಶದ ಬಳಿಕ ದೇಶದಲ್ಲೇ ಮೊದಲು ಮುಂಬಯಿಯಲ್ಲಿ ಗಲಭೆ ಎಬ್ಬಿಸಿದ್ಧು ಶಿವಸೇನೆ. ಇಂತಾ ಹಲವಾರು ವಿಷಯಗಳಿದ್ದು, ಅವುಗಳ ಬಗ್ಗೆಯೇ ಪ್ರತ್ಯೇಕವಾಗಿ ಹೇಳಬಹುದು.