hindiimposition – Peepal Media

ಕೇಂದ್ರದ ಹಿಂದಿ ಹೇರಿಕೆಗೆ ವಿರೋಧ: ಅ,15 ರಂದು ಎಂ.ಕೆ. ಸ್ಟಾಲಿನ್ ಪಕ್ಷದಿಂದ ಪ್ರತಿಭಟನೆ
ಚೆನ್ನೈ: ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿಸುವ ಸಂಸದೀಯ ಸಮಿತಿಯ ಶಿಫಾರಸಿನ ವಿರುದ್ಧ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆಯ) ಯುವ ಮತ್ತು ವಿದ್ಯಾರ್ಥಿ ಘಟಕ ತಮಿಳುನಾಡಿನಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.

ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಹಾಗೂ ಸ್ಟಾಲಿನ್‌ ಅವರ ಪುತ್ರ ಉದಯ್‌ ಸ್ಟಾಲಿನ್ ಮತ್ತು ವಿದ್ಯಾರ್ಥಿ ಘಟಕದ ಕಾರ್ಯದರ್ಶಿ ಸಿವಿಎಂಪಿ ಎಳಿಲರಸನ್‌ ಅವರು ಬುಧವಾರ ಜಂಟಿಯಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿದರು.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಿಂದಿ ಭಾಷೆಯ ಹೇರಿಕೆಯ ವಿರುದ್ಧ ಕೇಂದ್ರವನ್ನು ಖಂಡಿಸಿದ ನಂತರ, ಅವರು ತಮ್ಮ ಹೇಳಿಕೆಯಲ್ಲಿ ʼಹಿಂದಿ ಹೇರಿಕೆʼ ವಿರುದ್ಧ ಇತಿಹಾಸದಲ್ಲಿ ಯುವಕರು ಮಾಡಿದ ತ್ಯಾಗವನ್ನು ಪಟ್ಟಿ ಮಾಡಿದ್ದಾರೆ. ಅಮಿತ್‌ ಶಾ ಅವರ ಶಿಪಾರಸು ಭವಿಷ್ಯದ ಪೀಳಿಗೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಹೀಗಾಗಿ ʼನಮ್ಮ ಮೇಲೆ ಇನ್ನೊಂದು ಭಾಷಾ ಯುದ್ಧವನ್ನು ಹೇರಬೇಡಿʼ ಎಂದು ಹೇಳಿದರು.

ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ʼಹಿಂದಿ ಹೇರಿಕೆ ನೀತಿʼ ವಿರುದ್ಧ ಪ್ರತಿಭಟನೆಯನ್ನು ಘೋಷಿಸಿದರು. ನಂತರ ಅಕ್ಟೋಬರ್ 15 ರಂದು ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಸಲು ಡಿಎಂಕೆ ಯೋಜಿಸಿದೆ ಎಂದು ತಿಳಿಸಿದರು.

ಇದಕ್ಕೆ ಮೊದಲು ಅ.10ರಂದು ಸ್ಟಾಲಿನ್‌ ತಾವು ಮಾಡಿದ್ದ ಸರಣಿ ಟ್ವೀಟ್‌ ನಲ್ಲಿ  ಹಿಂದಿ ಹೇರಿಕೆ ಪ್ರಯತ್ನದ ವಿರುದ್ಧ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದರು. ಅವರು ತಮ್ಮ ಟ್ವೀಟ್‌ ನಲ್ಲಿ ʼಭಾರತದ ಭಾಷಾ ವೈವಿದ್ಯತೆಯನ್ನು ಕಡೆಗಣಿಸಿ ಹಿಂದಿ ಹೇರಿಕೆ ಮಾಡಲು ಕೇಂದ್ರದ ಬಿಜೆಪಿ ಸರ್ಕಾರ ತೀವ್ರ ರೀತಿಯಲ್ಲಿ ನಡೆಸುತ್ತಿರುವ ಪ್ರಯತ್ನ ಆತಂಕದ ಮಟ್ಟ ತಲುಪಿದೆ. ಅಧಿಕೃತ ಭಾಷೆ ಕುರಿತ ಸಂಸದೀಯ ಸಮಿತಿಯ ವರದಿಯ 11ನೆಯ ಸಂಪುಟದ ಪ್ರಸ್ತಾವಗಳು ಭಾರತದ ಆತ್ಮದ ಮೇಲೆ ನಡೆಸಿರುವ ನೇರವಾದ ಪ್ರಹಾರವಾಗಿʼ ಎಂದು ಬರೆದಿದ್ದರು. ಮುಂದುವರೆದು, ʼಹಿಂದಿ ಹೇರಿಕೆ ಮಾಡಿದ್ದೇ ಆದಲ್ಲಿ ಹಿಂದಿ ಮಾತನಾಡದ ವಿಶಾಲ ಜನಮೂಹವು ಎರಡನೆಯ ದರ್ಜೆಯ ನಾಗರಿಕರಾಗುತ್ತಾರೆ. ಹಿಂದಿ ಹೇರಿಕೆ ನಡೆಸುವುದು ಭಾರತದ ಸಮಗ್ರತೆಗೆ ವಿರುದ್ಧವಾದ ನಡೆ. ಆಳುವ ಬಿಜೆಪಿ ಸರ್ಕಾರವು ಹಿಂದೆ ನಡೆದ ಹಿಂದಿ ವಿರೋಧಿ ಚಳವಳಿಗಳಿಂದ ಪಾಠ ಕಲಿಯುವುದು ಒಳ್ಳೆಯದುʼ ಎಂದು ಸಹ ಬಿಜೆಪಿ ಸರ್ಕಾರವನ್ನು ಎಚ್ಚರಿಸಿದ್ದರು.

ಇದೇ ಸಂದರ್ಭದಲ್ಲಿ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹ ಅ.12ರಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಹಿಂದಿಯನ್ನು ಹೇರಲು ನಡೆಸುತ್ತಿರುವ ಪ್ರಯತ್ನಗಳನ್ನು ʼಒಪ್ಪಲಸಾಧ್ಯʼ ಎಂದಿದ್ದರು. ಕೇಂದ್ರ ಸರ್ಕಾರದ ಸೇವೆಗಳ ಪರೀಕ್ಷೆಗಳ ಮಾಧ್ಯಮವನ್ನು ಹಿಂದಿಯನ್ನಾಗಿಸುವ ಮತ್ತು ಐಐಟಿ, ಐಐಎಂಗಳಲ್ಲಿ ಅಧ್ಯಯನ ಭಾಷೆಯನ್ನು ಹಿಂದಿಯನ್ನಾಗಿಸುವ ಅಧಿಕೃತ ಭಾಷಾ ಸಂಸದೀಯ ಸಮಿತಿಯ ಪ್ರಸ್ತಾಪಗಳನ್ನು ಕೇರಳ ಸರ್ಕಾರ ಒಪ್ಪಲು ಸಾದ್ಯವೇ ಇಲ್ಲ ಎಂದು ತಿಳಿಸಿದ್ದರು.

ಹಿಂದಿ ಹೇರಿಕೆ ; ಕೇಂದ್ರ ಸರ್ಕಾರದಿಂದ ಹಿಂಬಾಗಿಲ ರಾಜಕಾರಣ!
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಂಸತ್ತಿನ ಅಧಿಕೃತ ಭಾಷಾ ಸಮಿತಿಯು, ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ತಾಂತ್ರಿಕ ಅಥವಾ ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಹಿಂದಿ ಭಾಷೆಯನ್ನು ಅಳವಡಿಸಬೇಕು ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಶಿಫಾರಸು ಮಾಡಿದೆ.

“ದೇಶದ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಸಂಸ್ಥೆಗಳಲ್ಲಿ ಹಿಂದಿ ಭಾಷೆಯನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಾಗಿ ಅಳವಡಿಸಬೇಕು ಮತ್ತು ಇಂಗ್ಲಿಷ್ ಬಳಕೆಯನ್ನು ಐಚ್ಛಿಕವಾಗಿ ಮಾಡಬೇಕು” ಎಂದು ಈ ಸಮಿತಿ ಶಿಫಾರಸು ಮಾಡಿದೆ. ಕಳೆದ ತಿಂಗಳು ಈ ಸಮಿತಿಯು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ವರದಿಯಲ್ಲಿ ಈ ಎಲ್ಲಾ ಅಂಶಗಳು ಉಲ್ಲೇಖಿಸಲ್ಪಟ್ಟಿವೆ.

ಅಧಿಕೃತ ಭಾಷಾ ಸಮಿತಿಯು ರಾಷ್ಟ್ರಪತಿಗಳಿಗೆ ಸಲ್ಲಿಸಿದ ವರದಿಯ 11 ನೇ ಸಂಪುಟದಲ್ಲಿ “ಇಂಗ್ಲಿಷ್ ಸಂಪೂರ್ಣವಾಗಿ ಅಗತ್ಯವಿರುವಲ್ಲಿ ಮಾತ್ರ ಬೋಧನಾ ಮಾಧ್ಯಮವಾಗಿರಬೇಕು, ಆ ಸಂಸ್ಥೆಗಳಲ್ಲಿ ಕ್ರಮೇಣ ಇಂಗ್ಲಿಷ್ ಅನ್ನು ಹಿಂದಿಯೊಂದಿಗೆ ವಿಲೀನಗೊಳಿಸಬೇಕು” ಎಂದೂ ಉಲ್ಲೇಖಿಸಲಾಗಿದೆ.

ವಿಶ್ವವಿದ್ಯಾಲಯಗಳು, ತಾಂತ್ರಿಕ ಅಥವಾ ವೈದ್ಯಕೀಯ ಸಂಸ್ಥೆಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಭಾಷೆಯು ಮಾಧ್ಯಮ ಭಾಷೆ ಆಗದ ಹೊರತು ಹಿಂದಿ ಎಲ್ಲರ ಸಮೂಹ ಭಾಷೆಯಾಗಲು ಸಾಧ್ಯವಿಲ್ಲ ಎಂದು ಸಮಿತಿ ಗಮನಿಸಿ, ಈ ನಿರ್ಧಾರಕ್ಕೆ ಬಂದಿದೆ. ಈ ಕಾರಣದಿಂದ ಹಿಂದಿಯನ್ನು ಒತ್ತಾಯಪೂರ್ವಕವಾಗಿ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಬೋಧನೆಯ ವಿಷಯವಾಗಿ ತಂದು ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಿಸಿಕೊಳ್ಳುವ ಹುನ್ನಾರ ಅಧಿಕೃತ ಭಾಷಾ ಸಮಿತಿಯ ಉದ್ದೇಶ ಎಂಬುದು ಸ್ಪಷ್ಟವಾಗಿದೆ.

ಈ ಅಧಿಕೃತ ಭಾಷಾ ಸಮಿತಿಯನ್ನು 1976 ರಲ್ಲಿ ಅಧಿಕೃತ ಭಾಷಾ ಕಾಯಿದೆ – 1963 ರ ಅಡಿಯಲ್ಲಿ ಸ್ಥಾಪಿಸಲಾಯಿತು. ಈ ಸಮಿತಿಯು ಸಂಸತ್ತಿನ 30 ಸದಸ್ಯರನ್ನು ಒಳಗೊಂಡಿದೆ. ಅದರಲ್ಲಿ ಲೋಕಸಭೆಯಿಂದ 20 ಮತ್ತು ರಾಜ್ಯಸಭೆಯಿಂದ 10 ಸದಸ್ಯರು ಒಳಗೊಂಡಿರುತ್ತಾರೆ. ಈ ಸಮಿತಿಯು ಹಿಂದಿ ಬಳಕೆಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸುತ್ತದೆ. ಈ ಪ್ರಗತಿಯಲ್ಲಿ ಆದ ಮಹತ್ವದ ಬದಲಾವಣೆಗಳ ಶಿಫಾರಸುಗಳನ್ನು ಮಾಡುವ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುತ್ತದೆ.

ಹಿಂದಿ ಭಾಷಾ ಅಭಿವೃದ್ಧಿಗೆ ಸಂಬಂಧಿಸಿದ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ ಇತ್ತೀಚಿನ ವರದಿಯಲ್ಲಿ, ತರಬೇತಿ ಸಂಸ್ಥೆಗಳಲ್ಲಿ ಹಿಂದಿ ಕಲಿಕಾ ಮಾಧ್ಯಮವಾಗಿ ಬಳಸಲು ಶಿಫಾರಸು ಮಾಡಿದೆ. ಇದರ ಜೊತೆಗೆ ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲೀಷ್ ಪ್ರಶ್ನೆಪತ್ರಿಕೆಯನ್ನು ತೆಗೆದುಹಾಕುವುದು ಮತ್ತು ನ್ಯಾಯಾಲಯಗಳ ವಿಚಾರಣೆಯ ಆಯ್ಕೆಗಾಗಿ ಹಿಂದಿ ಭಾಷೆಯ ಭಾಷಾಂತರಕ್ಕೆ ಸಮಿತಿಯು ಮಾಡಿದ ವರದಿಯಲ್ಲಿ ಶಿಫಾರಸು ಮಾಡಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲವು ತಾಂತ್ರಿಕ ಶಿಕ್ಷಣ ಸಂಸ್ಥೆಗಳಾಗಿದ್ದರೆ, ಕೇಂದ್ರೀಯ ವಿದ್ಯಾಲಯಗಳು (KVs), ನವೋದಯ ವಿದ್ಯಾಲಯಗಳು (NVs) ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳು ತಾಂತ್ರಿಕೇತರ ಸಂಸ್ಥೆಗಳ ವರ್ಗಕ್ಕೆ ಸೇರುತ್ತವೆ.

“ಕೆಲವೊಂದು ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿ ಭಾಷಾ ಮಾಧ್ಯಮದ ಆಯ್ಕೆಯು ಲಭ್ಯವಿರುವುದಿಲ್ಲ ಮತ್ತು ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆಯನ್ನು ಕಡ್ಡಾಯವಾಗಿ ಸೇರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಹಿಂದಿ ಭಾಷೆಗಿಂತ ಇಂಗ್ಲಿಷ್‌ ಭಾಷೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಆದ್ದರಿಂದ, ಕಡ್ಡಾಯ ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆಗಳನ್ನು ನಿಲ್ಲಿಸಬೇಕು ಮತ್ತು ಇವುಗಳಲ್ಲಿ ಹಿಂದಿ ಆಯ್ಕೆಗಳನ್ನು ನೀಡಬೇಕು. ಬಹು ಮುಖ್ಯವಾಗಿ ಇಂಗ್ಲಿಷ್ ಬದಲಿಗೆ ಹಿಂದಿಯ ಪ್ರಶ್ನೆ ಪತ್ರಿಕೆಯನ್ನು ಕಡ್ಡಾಯವಾಗಿ ಸೇರಿಸಬೇಕು” ಎಂದು ಈ ಸಮಿತಿಯು ತಾವು ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಅಷ್ಟೆ ಅಲ್ಲದೆ ಹಿಂದಿಯಲ್ಲಿ ವ್ಯವಹರಿಸದ ಅಧಿಕಾರಿಗಳು ಮತ್ತು ನೌಕರರಿಗೆ ಕಡ್ಡಾಯವಾಗಿ ಎಚ್ಚರಿಕೆ ನೀಡಿ, ಹಿಂದಿ ಭಾಷೆ ಬಳಸದೇ ಇದ್ದಲ್ಲಿ ಅಂತಹ ಅಧಿಕಾರಿ ಮತ್ತು ನೌಕರರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದೂ ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

“ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಹಿಂದಿಯಲ್ಲಿ ವ್ಯವಹರಿಸುವುದು ಕಡ್ಡಾಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಉದ್ಯೋಗಿಗಳ ಆಯ್ಕೆಯ ಸಮಯದಲ್ಲಿ ಹಿಂದಿ ಜ್ಞಾನದ ಅವಶ್ಯಕತೆ ಮುಖ್ಯವಾಗಿದೆ. ಆದ್ದರಿಂದ ಉದ್ಯೋಗಿಗಳ ಆಯ್ಕೆಗೆ ಹಿಂದಿ ಜ್ಞಾನವನ್ನು ಖಚಿತಪಡಿಸಿಕೊಳ್ಳಬೇಕು” ಎಂದೂ ಸಹ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಶಿಫಾರಸು ವರದಿಯಲ್ಲಿ ಈ ಸಮಿತಿ ಉಲ್ಲೇಖಿಸಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ವರದಿಗಳು ಸ್ಥಳೀಯ ಭಾಷೆಗಳನ್ನು ತುಳಿಯುವ ಮತ್ತು ಆ ಭಾಷೆಗಳ ಅವಸಾನಕ್ಕೆ ಕಾರಣವಾಗುವ ವಿಚಾರ ಎಂದೇ ಈ ಬಗ್ಗೆ ತಜ್ಞರು ಅಭಿಪ್ರಾಯ ಪಡುತ್ತಾರೆ. ಇಂತಹ ವರದಿಗೆ ರಾಷ್ಟ್ರಪತಿಗಳು ಸಹಿ ಹಾಕಿದರೆ ಭವಿಷ್ಯದಲ್ಲಿ ಇತರೆ ಭಾಷಿಕರು ನಿರುದ್ಯೋಗದ ಹಾದಿ ಹಿಡಿಯುವುದು ಖಚಿತ ಎಂದೇ ಅಭಿಪ್ರಾಯ ಪಡಲಾಗಿದೆ. ಅಮಿತ್ ಶಾ ನೇತೃತ್ವದ ಸಮಿತಿಯ ಇಂತಹ ಅವೈಜ್ಞಾನಿಕ ಶಿಫಾರಸುಗಳಿಂದ ಇತರೆ ಭಾಷೆಗಳ ಮೇಲೆ ಗದಾಪ್ರಹಾರ ಮಾಡುವುದು ಎಷ್ಟು ಸರಿ.? ಒತ್ತಾಯಪೂರ್ವಕವಾಗಿ ಒಂದು ಭಾಷೆ ಹೇರುವುದು, ಇನ್ನೊಂದು ಭಾಷೆಯನ್ನು ಸಾಯಿಸುವುದರ ಸಮಾನ ಉದ್ದೇಶ ಹೊಂದಿದೆ ಎಂಬುದು ಈ ರೀತಿಯ ನಿರ್ಧಾರದಿಂದ ಸಾಬೀತಾಗಿದೆ.

ಅಮಿತ್ ಶಾ ಕಾರ್ಯಕ್ರಮದಲ್ಲಿ ಹಿಂದಿ ಬ್ಯಾನರ್: ಕರವೇ ಕಿಡಿಕಿಡಿ
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ ಕಾರ್ಯಕ್ರಮದಲ್ಲಿ ಹಿನ್ನೆಲೆ ಬ್ಯಾನರ್ ನಲ್ಲಿ ಸಂಪೂರ್ಣ ಹಿಂದಿ ಬಳಕೆ ಮಾಡಿರುವುದರ ವಿರುದ್ಧ ಕನ್ನಡಪರ ಸಂಘಟನೆಗಳು ಕಿಡಿಕಾರಿವೆ.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಅಮಿತ್ ಶಾ ಭಾಗವಹಿಸಿದ್ದು, ವೇದಿಕೆ ಸಂಪೂರ್ಣ ಹಿಂದಿಮಯವಾಗಿರುವುದು ಕನ್ನಡಪರರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಕರ್ನಾಟಕದಲ್ಲಿ ಭಾಗವಹಿಸಿರುವ ಕಾರ್ಯಕ್ರಮದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದನ್ನು ಕನ್ನಡಿಗರೆಲ್ಲರೂ ಒಟ್ಟಾಗಿ ವಿರೋಧಿಸಬೇಕಿದೆ. ಸ್ವಾತಂತ್ರ ದೊರೆತ ನೆನಪಿಗಾಗಿ ಆಚರಿಸುತ್ತಿರುವ 75ನೇ ವರ್ಷದ ಅಮೃತ ಮಹೋತ್ಸವದಲ್ಲಿ  ನೆಲದ ಭಾಷೆಯನ್ನೇ ಭಾರತ ಸರಕಾರ ಕಡೆಗಣಿಸುತ್ತಿರುವುದು ನಿಜಕ್ಕೂ ಖಂಡನಾರ್ಹ. ಇದನ್ನು ಕರವೇ ಕಟುವಾಗಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

ಒಕ್ಕೂಟ ಸರ್ಕಾರ ಪದೇಪದೇ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುವ ಮೂಲಕ ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸಲು ಪ್ರಯತ್ನಿಸುತ್ತಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಕನ್ನಡಕ್ಕೆ ಧಕ್ಕೆಯಾದರೆ ಕರವೇ ಸಹಿಸುವುದಿಲ್ಲ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್ ಈ ಕುರಿತು ಟ್ವೀಟ್ ಮಾಡಿದ್ದು, ಕನ್ನಡ ನಾಡಿನಿಂದ ಕನ್ನಡವನ್ನೇ ದೂರವಾಗಿಸುತ್ತಿರುವ ನಡೆಗಳ ನಡುವೆ ಯಾವ ಕಾರಣಕ್ಕಾಗಿ ಕನ್ನಡಿಗರು 75 ನೇ ಸ್ವಾತಂತ್ರದ ಅಮೃತ ಮಹೋತ್ಸವ ಆಚರಿಸಬೇಕೋ ನನಗೆ ತಿಳಿಯುತ್ತಿಲ್ಲಾ. ಸ್ವತಂತ್ರ ಬಂದಿರೋದು ಹಿಂದಿ ಮೂಲಭೂತವಾದಿಗಳಿಗೆ, ಅಧಿಕಾರ ಬ್ರಿಟೀಶರಿಂದ ಹಿಂದಿ ಮೂಲಭೂತವಾದಿಗಳಿಗೆ ವರ್ಗಾವಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.