nikhil kolpe – Peepal Media

ಬೊಗಸೆಗೆ ದಕ್ಕಿದ್ದು- 27 : ಚುನಾವಣಾ ಫಲಿತಾಂಶ ಮತ್ತು ಪಂಚತಂತ್ರದ ಪಾಠ
ಲೋಕಸಭಾ ಚುನಾವಣೆಯ ಫಲಿತಾಂಶ ಅಂತಿಮವಾಗಿ ಹೊರಬಿದ್ದಿದೆ. 400+ 420+ ಸ್ಥಾನಗಳನ್ನು ಗೆಲ್ಲುವುದಾಗಿ ಬೊಗಳೆ ಬಿಡುತ್ತಿದ್ದ ಬಿಜೆಪಿ ಮತ್ತು ಎನ್‌ಡಿಎಯ ಬೆಲೂನು ಟುಸ್ಸೆಂದಿದೆ. ಬಿಜೆಪಿಯ ಮತಗಳ ಪ್ರಮಾಣವೂ ಕುಸಿದಿದೆ. ಈಗಾಗಲೇ ಅಂಕಿಅಂಶಗಳು ಎಲ್ಲರಿಗೆ ಗೊತ್ತಿರಬಹುದಾದುದರಿಂದ ಅವುಗಳನ್ನು ಇಲ್ಲಿ ನೀಡಲು ಹೋಗುವುದಿಲ್ಲ. ಯಾರೇ ಸರಕಾರ ರಚಿಸಲಿ, ಈ ಕೆಳಗಿನ ಅಂಶಗಳು ಸ್ಪಷ್ಟವಾಗಿವೆ:

ಮುಂದಿನ ಐದು ವರ್ಷಗಳ ವರೆಗೆ ಯಾರೂ ಸಂವಿಧಾನ ಬದಲಾವಣೆಯ ಬಗ್ಗೆ ಚಕಾರವೆತ್ತಲೂ ಸಾಧ್ಯವಿಲ್ಲ ಎಂದು ಆಶಿಸಬಹುದು.

ಮುಂದೆ ಅಷ್ಟು ಸುಲಭವಾಗಿ ಸಂಸತ್ತಿನಲ್ಲಿ ಚರ್ಚೆಗೂ ಅವಕಾಶ ನೀಡದೆ, ಯದ್ವಾತದ್ವಾ ಆಧ್ಯಾದೇಶಗಳು ಮತ್ತು ಕಾನೂನುಗಳನ್ನು, ಸಂವಿಧಾನ ತಿದ್ದುಪಡಿಗಳನ್ನು ಮಾಡಲು ಸಾಧ್ಯವಿಲ್ಲ ಎಂಬುದು.

ಅಹಂಕಾರಿ, ಶೋಕಿಲಾಲ, ಸರ್ವಾಧಿಕಾರಿ ಪ್ರವೃತ್ತಿಯ ನಾಯಕರಿಗೆ ಪಾಠ ಕಲಿಸುವ ಮತ್ತು ಅವರ ಮದ ಇಳಿಸುವ ಶಕ್ತಿ ಮತದಾರರಿಗೆ ಇದೆ ಎಂಬುದು. (ಇದನ್ನು ಬ್ರೆಜಿಲ್‌ನಲ್ಲಿ ಬೊಲ್ಸನಾರೋ ಮತ್ತು ಯುಎಸ್ಎಯಲ್ಲಿ ಡೊನಾಲ್ಡ್ ಟ್ರಂಪ್ ಮುಂತಾದವರು ಈಗಾಗಲೇ ಅನುಭವಿಸಿದ್ದಾರೆ. ನರೇಂದ್ರ ಮೋದಿಗೂ ಇದೀಗ ಮನವರಿಕೆ ಆಗಿರಬಹುದು)

ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು “ಇಂಡಿಯಾ” ಕೂಟ ತೋರಿಸಿರುವುದು.

ಒಂದು ಸಾಮೂಹಿಕ ಹೋರಾಟದಲ್ಲಿ ಸಾಮೂಹಿಕ ಪ್ರತಿರೋಧ ತೋರದೇ, ಅಹಂಕಾರದಿಂದಲೋ, ಮೂರ್ಖತನದಿಂದಲೋ ಏಕಾಂಗಿಯಾಗಿ ಸ್ಪರ್ಧಿಸಿದ ಬಹುತೇಕ “ಇತರರು” ಬಹುದೊಡ್ಡ ನಷ್ಟ ಅನುಭವಿಸಿದ್ದಾರೆ ಎಂಬುದು.

ದೀರ್ಘವಾದ ಏಳು ಹಂತಗಳ ಚುನಾವಣಾ ಪ್ರಕ್ರಿಯೆಯ ವೇಳೆ ಎಲ್ಲರೂ ಪ್ರತಿಪಕ್ಷಗಳನ್ನು ಬೆಂಬಲಿಸುವ ಆತಂಕ, ಒತ್ತಡದಲ್ಲಿಯೇ ಇದ್ದರು. ಇದೀಗ ಫಲಿತಾಂಶವು ಸಂಪೂರ್ಣ ತೃಪ್ತಿ ನೀಡುವಂತೆ, ಸಮಾಧಾನದ ನಿಟ್ಟುಸಿರು ಬಿಡುವಂತೆ ಇಲ್ಲವಾದರೂ ಕಳೆದ ಚುನಾವಣೆಗೆ ಹೋಲಿಸಿದರೆ ಸಾಕಷ್ಟು ಸಮಾಧಾನಕರವಾಗಿದೆ. ಆದರೆ, ಗೋದಿ ಮೀಡಿಯಾ ಗುಲಾಮರು ಚಿಂತಾಕ್ರಾಂತರಾಗಿರುವ ಈ ಹಿನ್ನೆಲೆಯಲ್ಲಿ ಸ್ವಲ್ಪ ಲೈಟ್ ಹಾರ್ಟೆಡ್ ಅಂದರೆ, ಹಗುರವಾದ ವಿಷಯಗಳನ್ನು ಓದಿ ಸುಧಾರಿಸಿಕೊಳ್ಳೋಣ.

ಬೊಗಸೆಗೆ ದಕ್ಕಿದ್ದು…25ರಲ್ಲಿ ನಾನು ಸರ್ವಾಧಿಕಾರಿಗಳ ವಂಚನೆಯನ್ನು ವಿವರಿಸುವ ಪಂಚತಂತ್ರದ ಕೆಲವು ಕತೆಗಳನ್ನು ಹೇಳಿದ್ದೆ. ಬೊಗಸೆಗೆ ದಕ್ಕಿದ್ದು…26ರಲ್ಲಿ ರಾಜನಿಂದ ಅನ್ಯಾಯಕ್ಕೆ ಒಳಗಾದ ನಿಷ್ಟಾವಂತ ಸೇವಕರೂ ಆತನ ಸರ್ವನಾಶಕ್ಕೆ ಹಂಬಲಿಸುತ್ತಾರೆ ಎಂಬ ಪಂಚತಂತ್ರದ ಮಾತುಗಳನ್ನು ಬರೆದಿದ್ದೆ. ಅದು ಈ ಫಲಿತಾಂಶಗಳಲ್ಲಿ ನಿಜವಾಗಿದೆ. ಈಗ ದಮನಕಾರಿ ಅರಸರ ಸರ್ವನಾಶ ಹೇಗೆ ಎಂದು ಸೂಚಿಸುವ ಪಂಚತಂತ್ರದ ಇನ್ನಷ್ಟು ಕತೆಗಳನ್ನು ಇಲ್ಲಿ ಚುಟುಕಾಗಿ ಸಾರಾಂಶ ರೂಪದಲ್ಲಿ ಹೇಳುತ್ತಿದ್ದೇನೆ.

ಜಾಣ ಕೊಕ್ಕರೆ

ಒಂದು ಎತ್ತರವಾದ ಮರದ ಮೇಲೆ ನೂರಾರು ಕೊಕ್ಕರೆಗಳು ವಾಸವಾಗಿದ್ದವು. ಅದರಲ್ಲೊಂದು ಜಾಣ ಕೊಕ್ಕರೆಯೂ ಇತ್ತು. ಆ ಮರದ ಕೆಳಗೆ ಒಂದು ಚಿಕ್ಕ ಬಳ್ಳಿ ಹುಟ್ಟಿಕೊಂಡಿತು. ಆಗ ಆ ಜಾಣ ಕೊಕ್ಕರೆಯು ಉಳಿದವರಿಗೆ ಹೇಳಿತು: ಗೆಳೆಯರೇ, ಈ ಬಳ್ಳಿಯನ್ನು ಈಗಲೇ ಕತ್ತರಿಸಿ ಬಿಡೋಣ. ಇಲ್ಲವಾದರೆ ಅದು ಬೆಳೆದುಬಿಟ್ಟರೆ ಮುಂದೆ ಯಾರಾದರೂ ಅದನ್ನು ಹಿಡಿದು ಮೇಲೆ ಬಂದರೆ ನಮಗೆ ಅಪಾಯ. ಆದರೆ, ಯಾರೂ ಅದರ ಮಾತುಗಳನ್ನು ಕೇಳಲಿಲ್ಲ.

ಮುಂದೊಂದು ದಿನ ಆ ಬಳ್ಳಿ ದೊಡ್ಡದಾಗಿ ಬೆಳೆಯಿತು. ಒಂದು ದಿನ ಕೊಕ್ಕರೆಗಳೆಲ್ಲಾ ಆಹಾರ ಅರಸಿ ಹೊರಗೆ ಹೋಗಿದ್ದಾಗ ಒಬ್ಬ ಬೇಟೆಗಾರ ಅದೇ ಬಳ್ಳಿಯ ಸಹಾಯದಿಂದ ಆ ಭಾರೀ ಮರವನ್ನು ಹತ್ತಿ ದೊಡ್ಡ ಬಲೆಯನ್ನು ಬೀಸಿ ಹೋದ. ಸಂಜೆ ಬಂದ ಕೊಕ್ಕರೆಗಳ ಹಿಂಡಿನ ಕಾಲುಗಳು ಅದರಲ್ಲಿ ಸಿಕ್ಕಿ ಬಿದ್ದವು.

ಮರುದಿನ ಬೇಟೆಗಾರ ಬಂದಾಗ ಜಾಣ ಕೊಕ್ಕರೆ ಹೇಳಿತು: ಗೆಳೆಯರೇ, ನಾವೆಲ್ಲಾ ಸತ್ತಂತೆ ಬಿದ್ದುಕೊಳ್ಳೋಣ. ಬೇಟೆಗಾರ ಬಲೆಯನ್ನು ಬಿಚ್ಚಿದಾಗ ಎಲ್ಲರೂ ಒಮ್ಮಲೇ ಒಂದೇ ಹೊತ್ತಿಗೆ ಹಾರಿ ಬಿಡೋಣ! ನಂತರ ನಡೆದದ್ದು ಹೀಗೆಯೇ! ಕೊಕ್ಕರೆಗಳೆಲ್ಲಾ ಬಲೆ ಸಹಿತ ಹಾರಿದವು.

ನೀವೀಗ ಆ ಮರ ಭಾರತ, ಆ ಬಳ್ಳಿ ಆರೆಸ್ಸೆಸ್, ಬಿಜೆಪಿಯೇ ಬೇಟೆಗಾರ, ಕೊಕ್ಕರೆಗಳೇ ಪ್ರಜೆಗಳು ಎಂದು ಕಲ್ಪಿಸಿಕೊಂಡರೆ ನಾನು ಜವಾಬ್ದಾರಿ ಅಲ್ಲ. ಈ ಕತೆಯ ನೀತಿ ಎಂದರೆ: ಸಮಸ್ಯೆಯನ್ನು ಆರಂಭದಲ್ಲೇ ಬೆಳೆಯಲು ಬಿಡಬಾರದು ಮತ್ತು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು.

ರೋಗಕ್ಕಿಂತ ಔಷಧಿ ಅಪಾಯಕಾರಿ

ಒಂದು ಮರದ ಮೇಲೆ ಹಲವಾರು ಕೊಕ್ಕರೆಗಳು ವಾಸವಾಗಿದ್ದವು. ಮರದ ಬುಡದ ಬಿಲದಲ್ಲಿ ಒಂದು ಕರಿನಾಗರ ಹಾವು ವಾಸವಾಗಿತ್ತು. ಅದು ಮರದ ಮೇಲೆ ಹತ್ತಿ ಮೊಟ್ಟೆ ಮರಿಗಳನ್ನೆಲ್ಲಾ ತಿನ್ನುತ್ತಿತ್ತು. ಆಗ ಕೊಕ್ಕರೆಯ ಕತ್ತನ್ನು ತನ್ನ ಕಾಲುಗಳ ಇಕ್ಕುಳದಿಂದ ಹಿಡಿದು ತಿನ್ನುವ ಒಂದು ಏಡಿಗೆ ಚಿಂತೆಯಾಯಿತು. ಕೊಕ್ಕರೆಗಳೆಲ್ಲಾ ಹಾವಿನ ಪಾಲಾದರೆ ಹೇಗೆ ಎಂದು! ಅದು ಸಲಹೆ ನೀಡಿತು: ನೀವು ಮೀನುಗಳನ್ನು ಹಿಡಿದು ಮುಂಗುಸಿಯ ಬಿಲದಿಂದ ಹಾವಿನ ಬಿಲದ ವರೆಗೆ ಹಾಕುತ್ತಾ ಬನ್ನಿ ಎಂದು. ಕೊಕ್ಕರೆಗಳು ಹಾಗೆಯೇ ಮಾಡಿದವು. ಮುಂಗುಸಿ ಮೀನುಗಳನ್ನು ತಿನ್ನುತ್ತಾ ಬಂದು ಹಾವಿನ ಬಿಲ ತಲಪಿ ಹಾವನ್ನು ಕೊಂದು ತಿಂದಿತು. ಕೊಕ್ಕರೆಗಳಿಗೆ ಸಮಾಧಾನವಾಗಿ ಮುಂಗುಸಿಯನ್ನು ಆರಾಧಿಸಿದವು. ಮುಂದೆ ಮುಂಗುಸಿ ಹತ್ತು ವರ್ಷಗಳಿಂದ ಈ ಕೊಕ್ಕರೆಗಳ ಮೊಟ್ಟೆ ಮರಿಗಳನ್ನು ತಿನ್ನುತ್ತಿದೆ!

ಇದನ್ನು ನಮ್ಮ ಈಗಿನ ರಾಜಕೀಯ ಪರಿಸ್ಥಿತಿಗೆ ಹೋಲಿಸಿ. ನಿಮಗೆ ಯಾರಾದರೂ, ಏನಾದರೂ ನೆನಪಾದರೆ ಕೂಡಾ ನಾನು ಜವಾಬ್ದಾರಿ ಅಲ್ಲ! ಈಗ ದುಷ್ಟ ಅರಸನನ್ನು ಬಗ್ಡುಬಡಿಯಲು ಹೆಚ್ಚು ಬುದ್ಧಿವಂತ ಉಪಾಯವನ್ನು ಹೇಳುವ ಇನ್ನೊಂದು ಕತೆ:

ಕಾಗೆ ಮತ್ತು ಕರಿನಾಗರ

ಒಂದು ಕಾಗೆ ಒಂದು ಮರದಲ್ಲಿ ಸಂಸಾರ ಮಾಡುತ್ತಿತ್ತು. ಆ ಮರದ ಕೆಳಗಿನ ಬಿಲದಲ್ಲಿದ್ದ ಗಡ್ಡದ ಹಾವು ಒಂದು ದಿನ ಅದರ ಮೊಟ್ಟೆ ಮರಿಗಳನ್ನೆಲ್ಲಾ ತಿಂದುಹಾಕಿತು. ದುಃಖದಿಂದ ಅತ್ತ ಕಾಗೆ, ಈ ಹಾವಿಗೆ ಬುದ್ಧಿ ಕಲಿಸಬೇಕೆಂದು ಒಂದು ಉಪಾಯ ಮಾಡಿತು.

ಅಲ್ಲಿನ ರಾಜಕುಮಾರಿ ಒಂದು ಕೊಳದಲ್ಲಿ ಮೀಯುತ್ತಿದ್ದಾಗ ತನ್ನ ಆಭರಣಗಳನ್ನು ಕಳಚಿ ದಡದಲ್ಲಿ ಇಟ್ಟಿದ್ದಳು. ಕಾಗೆ ಅದರಿಂದ ಒಂದು ಅಮೂಲ್ಯ ವಜ್ರದ ಹಾರವನ್ನು ಎತ್ತಿಕೊಂಡು ಎಲ್ಲರ ಕಣ್ಣೆದುರೇ ಹಾರಿತು. ರಾಜಭಟರು ಅದರ ಬೆನ್ನುಹತ್ತಿದರು. ಅದು ಹಾರವನ್ನು ಹಾವಿನ ಬಿಲದ ಒಳಗೆ ಹಾಕಿತು. ಇದನ್ನು ನೋಡಿದ ರಾಜಕುಮಾರಿಯ ಅಂಗರಕ್ಷಕರು ಬಿಲವನ್ನು ಅಗೆದಾಗ ಹಾವು ಹೊರಬಂತು. ಅವರದನ್ನು ಹೊಡೆದುಕೊಂದರು. ಇಂತಹಾ ಚತುರ ಉಪಾಯಗಳಿಗೆ ನನ್ನ ಸಹಮತವಿದೆ.

ಒಗ್ಗಟ್ಟಿನಲ್ಲಿ ಬಲವಿದೆ

ಒಂದು ಗುಬ್ಬಚ್ಚಿ ಕಾಡಿನ ಒಂದು ಮರದಲ್ಲಿ ವಾಸವಾಗಿತ್ತು. ಅಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟಿತ್ತು. ಒಂದು ದಿನ ಮದವೇರಿದ ಒಂದು ಮೊದ್ದ ಆನೆ ಸುಖಾಸುಮ್ಮನೆ ನಮ್ಮ ಸಿಎಎ ರೀತಿಯಲ್ಲಿ ಒಂದು ಕೊಂಬೆಯನ್ನು ಅಲ್ಲಾಡಿಸಿತು. ಮೊಟ್ಟೆಗಳೆಲ್ಲವೂ ನೆಲಕ್ಕೆ ಬಿದ್ದು ಒಡೆದು ಹೋದವು. ಪಾಪ, ಅಸಾಹಯಕ ಗುಬ್ಬಚ್ಚಿ ಅಳುತ್ತಾ ಕುಳಿತಿದ್ದಾಗ, ಒಂದು ಮರಕುಟಿಗ ಹಕ್ಕಿ ಬಂದು ಸಮಾಧಾನ ಹೇಳಿತು. ಆದರೇನು? ಈ ಹುಚ್ಚು ಆನೆಯನ್ನು ನಿರ್ನಾಮ ಮಾಡುವುದು ಹೇಗೆ? ಎರಡು ಹಕ್ಕಿಗಳು? ಅವು ಇನ್ನೊಂದು ಜೀರುಂಡೆ ಬಳಿ ಹೋದವು. ನಂತರ ಜೀರುಂಡೆಯ ಗೆಳೆಯನಾದ ಒಂದು ಕಪ್ಪೆಯ ಬಳಿಗೆ ಹೋದವು.

ಆ ಕಪ್ಪೆ ಸಲಹೆ ಹೇಳಿತು: ಜೀರುಂಡೆ, ನೀನು ಆನೆಯ ಕಿವಿಯ ಬಳಿ ಗುಂಯ್ಗುಡಬೇಕು. ಆಗ ಅದು ನಿನ್ನ ಸಂಗೀತ ಕೇಳಿ ಕಣ್ಣು ಮುಚ್ಚುತ್ತದೆ. ಆಗ ನೀನು- ಮರಕುಟಿಗ ಅದರ ಕಣ್ಣುಗಳಿಗೆ ಚುಚ್ಚಬೇಕು. ಆಗ ಅದು ನೋವಿನಿಂದ ಕಣ್ಣುಮುಚ್ಚಿ ನೀರಿಗಾಗಿ ಓಡುತ್ತದೆ. ಆಗ ನಾನು ಒಂದು ಪ್ರಪಾತದ ಅಂಚಿನಲ್ಲಿ ಕುಳಿತು ವಾಟರ್ ವಾಟರ್ ಎಂದು ವಟಗುಟ್ಟುತ್ತೇನೆ. ಕಪ್ಪೆ ಇರುವಲ್ಲಿ ನೀರಿದೆ ಎಂದು ಆನೆ ಅಲ್ಲಿಗೆ ಧಾವಿಸುತ್ತದೆ. ಪ್ರಪಾತಕ್ಕೆ ಬಿದ್ದು ಸಾಯುತ್ತದೆ. ಮುಂದೆ ಹಾಗೆಯೇ ಆಯಿತು. ಚಿಕ್ಕಪುಟ್ಟ ಪ್ರಾಣಿ ಪಕ್ಷಿ, ಕೀಟಗಳು ದೈತ್ಯ ಆನೆಯನ್ನು ಉರುಳಿಸಿದವು.

ಈಗ ನನಗೆ ಈ ಕತೆ ಬರೆಯುವಾಗ “ಇಂಡಿಯಾ” ನೆನಪಿಗೆ ಬರುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆ. ಕೆಲವು ಕೈಕೊಟ್ಟದ್ದರಿಂದ ಇಲ್ಲಿ ಯೋಜನೆ ಸಂಪೂರ್ಣ ಯಶಸ್ವಿ ಆಗಲಿಲ್ಲ. ಈ ಕತೆಗಳು ನಿಮಗೆ ಇಷ್ಟವಾದರೆ, ಬಿಜೆಡಿ, ಬಿಎಸ್ಪಿಯಂತಹ ಕೆಲವು ಪಕ್ಷಗಳು ಈ ಕೂಟವನ್ನು ಸೇರದೇ, ಒಗ್ಗಟ್ಟನ್ನು ತೋರದೇ, ಶತ್ರುವನ್ನು ಗೆಲ್ಲಿಸಿ ನಿರ್ನಾಮವಾದ ಕುರಿತೂ ಕೆಲವು ಕತೆಗಳಿವೆ. ಇವುಗಳನ್ನು ನೀವು ಬಯಸಿದಲ್ಲಿ ಮುಂದೆ ನೋಡೋಣ.

ಬೊಗಸೆಗೆ ದಕ್ಕಿದ್ದು – 26 : ಪಂಚತಂತ್ರ ಮತ್ತು ಸರ್ವಾಧಿಕಾರಿ ಕೇಸರಿ ನರಿ!
ಬೊಗಸೆಗೆ ದಕ್ಕಿದ್ದು…25ರಲ್ಲಿ ನಾನು ಕ್ರಿಸ್ತಪೂರ್ವ 200ರ ಸುಮಾರಿಗೆ ಬರೆಯಲಾದ ಪಂಚತಂತ್ರ ಕತೆಗಳ ಬಗ್ಗೆ ಬರೆದಿದ್ದೆ. ಸಾಮಾಜಿಕ ನಡವಳಿಕೆ ಮತ್ತು ರಾಜನೀತಿಯನ್ನು ಬಹಳಷ್ಟು ಪ್ರಾಣಿಗಳ ಪಾತ್ರಗಳ ಮೂಲಕ ಕಲಿಸುವ ಈ ಕತೆಗಳಲ್ಲಿ ಬಹಳಷ್ಟನ್ನು ಸರ್ವಾಧಿಕಾರಿಗಳು ಮತ್ತವರ ನಾಚಿಕೆಗೆಟ್ಟ ಚೇಲಾಗಳಿಗೆ ಅನ್ವಯಿಸಬಹುದು. ಎರಡುಮೂರು ಕತೆಗಳನ್ನು ಚುಟುಕಾಗಿಯೇ ಹಿಂದೆ ಬರೆದಿದ್ದೆ. ಇಲ್ಲಿಯೂ ಇಂತಹ ಒಂದೆರಡು ಕತೆಗಳನ್ನು ಚುಟುಕಾಗಿಯೇ ನೋಡೋಣ.

ಇದನ್ನೂ ಓದಿ : ಬೊಗಸೆಗೆ ದಕ್ಕಿದ್ದು- 25 : ಪಂಚತಂತ್ರ ಮತ್ತು ಸರ್ವಾಧಿಕಾರಿ ಮಂಕಿ!

ಪಂಚತಂತ್ರದಲ್ಲಿ ಗದ್ಯ ರೂಪದ ಕತೆಗಳಿಗಳಷ್ಟೇ ಪದ್ಯ ರೂಪದ ನೀತಿ, ತಂತ್ರಗಳಿವೆ. ಅವುಗಳಲ್ಲಿ ಒಂದು ಪದ್ಯದ ಸಾರಾಂಶ ಹೀಗಿದೆ: ರಾಜನಿಂದ ತೊಂದರೆಗೊಳಗಾದ ನೌಕರರನು, ರಾಜನನ್ನು ಗೌರವಿಸುತ್ತಿದ್ದವನೂ ಆಗೌರವ ತೋರುತ್ತಾನೆ. ಸೇವೆ ಮಾಡಲೆಂದೇ ಹುಟ್ಟಿದವನೂ, ತರಬೇತಿ ಪಡೆದವನೂ ರಾಜನ ಸರ್ವನಾಶಕ್ಕೆ ಹಂಬಲಿಸುತ್ತಾನೆ!

ಇದು ಮೊದಲಿನಿಂದಲೂ ರಾಜರು, ನವಾಬರು, ಬ್ರಿಟಿಷರ ಅಡಿಯಲ್ಲಿ ನಲುಗಿ, ಗುಲಾಮಿಯನ್ನೇ ರಕ್ತಗತ ಮಾಡಿಕೊಂಡಿರುವ ಭಾರತೀಯರ ಈಗಿನ ಪರಿಸ್ಥಿತಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ. ಸರ್ವಾಧಿಕಾರಿಯಿಂದ ತೀರಾ ತೊಂದರೆಗೆ ಒಳಗಾಗಿರುವ ಅವರಲ್ಲಿ ಅನೇಕರು ಗುಲಾಮಿಯು ಅಭ್ಯಾಸವಾಗಿದ್ದರೂ ಈಗ, ಈ ಸರ್ವಾಧಿಕಾರಿಯ ನಾಶಕ್ಕೆ ಹಂಬಲಿಸುತ್ತಿದ್ದಾರೆ.

ಇನ್ನೊಂದು ಪದ್ಯ ಹೀಗೆ ಹೇಳುತ್ತದೆ: ಅಯೋಗ್ಯ ಮಂತ್ರಿಗಳಿಂದ ಸುತ್ತುವರಿಯಲ್ಪಟ್ಟಿರುವ ನೀಚ ರಾಜನಿಂದ ಪ್ರಜೆಗಳಿಗೆ ಒಳಿತಿಗಿಂತ ಕೆಡುಕೇ ಆಗುವುದು! ಸರ್ವಾಧಿಕಾರಿಯ ಅಡಿಯಲ್ಲಿ ಬದುಕುತ್ತಿರುವ ಜನರಿಗೆ ಒಂದಲ್ಲ ಒಂದು ದಿನ ಇದು ಮನವರಿಕೆಯಾಗಲೇ ಬೇಕು.

ಈಗ- ಪ್ರಜೆಗಳ ಭ್ರಮೆ, ಮೂಢನಂಬಿಕೆ ಮತ್ತು ಭಯದಿಂದಲೇ ಸರ್ವಾಧಿಕಾರಿಗಳು ಹುಟ್ಟಿಕೊಳ್ಳುತ್ತಾರೆ ಮತ್ತು ಒಂದು ದಿನ ಅವರ ಮುಖವಾಡ ಕಳಚಿ ಹೋಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಒಂದು ಕತೆಯನ್ನು ಚುಟುಕಾಗಿ ನೋಡೋಣ:

ನೀಲ ನರಿ
ಒಂದು ಕಾಡಿನಲ್ಲಿ ಒಂದು ಗತಿಗೇಡಿ ನರಿಯು ಅಲೆದಾಡುತ್ತಿತ್ತು. ಒಂದು ದಿನ ಹಸಿವೆಯಿಂದ ತೊಳಲಾಡುತ್ತಿದ್ದ ಅದು ಕತ್ತಲಿನ ವೇಳೆಗೆ ಒಂದು ಪಟ್ಟಣದೊಳಗೆ ತಪ್ಪಿ ಪ್ರವೇಶಿಸಿತು. ಆಗ, ಅಲ್ಲಿನ ನಾಯಿಗಳು ಚೂಪಾದ ಹಲ್ಲುಗಳನ್ನು ತೋರಿಸುತ್ತಾ ನರಿಯ ಬೆನ್ನುಬಿದ್ದವು. ಪುಕ್ಕಲ ನರಿಯು ಸತ್ತೆನೋ ಕೆಟ್ಟೆನೋ ಎಂದು ಬಾಲ ಮುದುಡಿ ಓಡುತ್ತಾ, ಬಟ್ಟೆಗೆ ಬಣ್ಣ ಹಾಕುವವನೊಬ್ಬನ ಮನೆಯ ಅಂಗಳಕ್ಕೆ ನುಗ್ಗಿತು. ಅಲ್ಲಿ ಬಣ್ಣದ ಹಲವು ತೊಟ್ಟಿಗಳಿದ್ದವು. ನರಿಯು ನೀಲಿ ಬಣ್ಣವಿದ್ದ ತೊಟ್ಟಿಗೆ ಬಿದ್ದು ಅಲ್ಲಿಯೇ ಅಡಗಿತು.

ನಂತರ ಹೇಗೋ ತೊಟ್ಟಿಯಿಂದ ಹೊರಬಂದ ನರಿಯು ಕಾಡಿಗೆ ಪರಾರಿಯಾಯಿತು. ನೀಲ ಬಣ್ಣ ಮೆತ್ತಿದ್ದ ನರಿಯನ್ನು ಕಾಡಿನ ಬೇರೆ ಪ್ರಾಣಿಗಳು ಎಂದೂ ಕಂಡಿರಲಿಲ್ಲ. ಇದು ಆಕಾಶದಿಂದಲೇ ಉದುರಿರಬೇಕೆಂದು ನಂಬಿ ಅವು ಓಡಲಾರಂಭಿಸಿದವು. ಆಗ, ಸುಳ್ಳು ಹೇಳುವುದರಲ್ಲಿ ನಿಪುಣನಾದ ಈ ಕಂಕನರಿಯು ಅವುಗಳನ್ನು ಕರೆದು, ಈ ಕಾಡೇ ಅಪಾಯದಲ್ಲಿದೆ, ಕಾಡಿನ ಧರ್ಮ ಅಪಾಯದಲ್ಲಿದೆ, ಅದರ ರಕ್ಷಣೆಗೆ ತನ್ನನ್ನು ದೇವರೇ ಇಲ್ಲಿನ ರಾಜನನ್ನಾಗಿ ನೇಮಿಸಿ ಕಳಿಸಿದ್ದಾನೆ ಎಂದು ಬೊಗಳೆ ಬಿಟ್ಟಿತು. ಉಳಿದ ಮೂರ್ಖ ಪ್ರಾಣಿಗಳು ಅದನ್ನು ನಂಬಿದವು.

ಈ ಕುಟಿಲ ನರಿಯು ಕೆಲವು ಪ್ರಾಣಿಗಳನ್ನು ಬೇರೆಬೇರೆ ಹುದ್ದೆಗಳಿಗೆ ನೇಮಿಸಿ, ತನ್ನದೇ ಜಾತಿಯ ಇತರ ನರಿಗಳನ್ನು ನೆರೆಯ ಕಾಡಿಗೆ ಓಡಿಸಿತು. ಅಂದಿನಿಂದ ಉಳಿದ ಪ್ರಾಣಿಗಳು ಬೇಟೆಯಾಡಿ ತಂದುಕೊಟ್ಟ ಮಾಂಸವನ್ನು ತಿನ್ನುತ್ತಾ, ಈ ಶೋಕಿಲಾಲ ನರಿಯು ಮಹಾರಾಜರನ್ನೂ ಮೀರಿಸುವಂತೆ ಐಷಾರಾಮಿ ಜೀವನ ನಡೆಸಿತು. ಉಳಿದ ಪ್ರಾಣಿಗಳು ಗುಲಾಮರಂತೆ ಅದರ ಸೇವೆ ಮಾಡಿದವು.

ಹೀಗಿರುತ್ತಾ, ಒಂದು ದಿನ ಪಕ್ಕದ (ರಷ್ಯಾ, ಉತ್ತರ ಕೊರಿಯಾ, ಇಸ್ರೇಲ್ ಮುಂತಾದ) ಕಾಡುಗಳಲ್ಲಿ ನರಿಗಳು ಗಟ್ಟಿಯಾಗಿ ಊಳಿಟ್ಟವು. ಈ ನರಿಯ ಕಣ್ಣಿನಿಂದ ಆನಂದಬಾಷ್ಪ ಸುರಿದು, ಅದೂ ಗಟ್ಟಿಯಾಗಿ ಊಳಿಡಲು ಆರಂಭಿಸಿತು. ಆಗ ಇತರ ಪ್ರಾಣಿಗಳಿಗೆ ಇದೊಂದು ನರಿ ಎಂದು ಗೊತ್ತಾಯಿತು. ಸಿಟ್ಟುಗೊಂಡ ಅವು ಅದನ್ನು ಸಿಗಿದು ಕೊಂದವು.

ಈ ಕತೆಯಲ್ಲಿ ನರಿ ನೀಲ ಬಣ್ಣದ ತೊಟ್ಟಿಗೆ ಬಿದ್ದದ್ದಲ್ಲ; ಕೇಸರಿ ಬಣ್ಣದ ತೊಟ್ಟಿಗೆ ಬಿದ್ದದ್ದು ಎಂದು ಊಹಿಸಿದರೆ ಸಾಕು, ಎಲ್ಲವೂ ಅರ್ಥವಾಗುತ್ತದೆ. ಕಾಡಿನ ರಕ್ಷಣೆಗೆ ದೇವರು ರಾಜನಾಗಿ ಮಾಡಿ ಕಳಿಸಿದ್ದು, ಧರ್ಮ ರಕ್ಷಣೆ, ಚಹಾ ಮಾರಿದ್ದು, ಹಿಮಾಲಯ ತಿರುಗಿದ್ದು, ಭಿಕ್ಷೆ ಬೇಡಿದ್ದು, ಮೊಸಳೆ ಹಿಡಿದ ಬೊಗಳೆಗಳೆಲ್ಲಾ ನೆನಪಾಗುತ್ತವೆ. ಈಗ ಈ ಕೇಸರಿ ನರಿ ಬಾಯಿಗೆ ಬಂದಂತೆ ಊಳಿಡುತ್ತಿದೆ. ಪ್ರಜೆಗಳಿಗೆ ಅರ್ಥವಾದೀತೆ?

ಇದೇ ಕತೆಯ ಇನ್ನೊಂದು ಆವೃತ್ತಿಯಲ್ಲಿ ನೀಲ ನರಿಯ ನೀಚತನ ಊಳಿಟ್ಟದ್ದರಿಂದ ಗೊತ್ತಾದುದಲ್ಲ! ಅದು “ಮೋದ”ಲ ದಿನದಿಂದಲೇ ಊಳಿಡುತ್ತಿತ್ತು. ಒಂದು ದಿನ ಕಾಡಿನಲ್ಲಿ ಭಾರೀ ಮಳೆ ಸುರಿಯುತ್ತದೆ. ಆಗ ನರಿಯ ಬಣ್ಣವೆಲ್ಲಾ ಕರಗಿ, ಅದು ಉಳಿದ ಪ್ರಾಣಿಗಳ ಎದುರು ಬತ್ತಲೆಯಾಗಿ ನಿಲ್ಲುತ್ತದೆ. ಅವು ಕೋಪದಿಂದ ಅದನ್ನು ಕೊಲ್ಲುತ್ತವೆ. ಈ ಕಷ್ಟಕಾಲದ ಬಿರುಬೇಸಗೆಯಲ್ಲೂ ಪ್ರಜಾಪ್ರಭುತ್ವದ ಮಹಾಮೋಡದಿಂದ ಚುನಾವಣೆಯ ಮಳೆ ಸುರಿಯುತ್ತಿದೆ. ಕೇಸರಿ ನರಿಯ ಬಣ್ಣ ಕರಗಿ ಅದೂ ಬೆತ್ತಲಾಗಬಹುದೆ?

ಪಂಚತಂತ್ರದಲ್ಲಿ ಸರ್ವಾಧಿಕಾರಿಗಳು ಮತ್ತು ಅವರ ಕುಟಿಲ ಚೇಲಾಗಳು ಮುಗ್ಧ ಜನರನ್ನು, ಜೊತೆಗಾರರನ್ನೇ ಹೇಗೆ ವಂಚಿಸುತ್ತಾರೆ, ಮುಗಿಸಿಬಿಡುತ್ತಾರೆ ಎಂಬುದನ್ನೂ ಸೂಚಿಸುವ ಕತೆಗಳಿವೆ. ಅವುಗಳಲ್ಲಿ ಒಂದನ್ನು ಚುಟುಕಾಗಿ ಹೇಳುತ್ತೇನೆ:

ಮೋಸಹೋದ ಒಂಟೆ
ಒಮ್ಮೆ ಒಬ್ಬ ವರ್ತಕ ಹಲವು ಒಂಟೆಗಳ ಮೇಲೆ ಸರಕುಗಳನ್ನು ಹೇರಿ ಒಂದು ಕಡೆ ಹೋರಟಿದ್ದ. ಕಾಡಿನ ಮಧ್ಯೆ ಒಂದು ಒಂಟೆ ಕುಂಟಲಾರಂಭಿಸಿತು. ಕಾಡಿನ ನಡುವೆ ನಿಧಾನ ಮಾಡುವುದು ಅಪಾಯವಾದುದರಿಂದ, ವರ್ತಕ ಆ ಒಂಟೆಯ ಸರಕುಗಳನ್ನು ಬೇರೆ ಒಂಟೆಗಳಿಗೆ ಹೇರಿ, ಅದನ್ನು ಅಲ್ಲಿಯೇ ಬಿಟ್ಟು ಮುಂದುವರಿದ.

ಆ ಕಾಡಿನಲ್ಲಿ ಒಂದು ಮುದಿ (ಗಡ್ಡದ) ಸಿಂಹವಿತ್ತು. ಅದಕ್ಕೆ ಸಲಹೆಗಾರರಾಗಿ ಒಂದು ಚಿರತೆ, ಒಂದು (ಬೋಡ) ನರಿ, ಒಂದು (ಯೋಗಿ) ಕಾಗೆ ಸಲಹೆಗಾರರಾಗಿ ಇದ್ದರು. ಇವರೆಲ್ಲರೂ ಕುಟಿಲ ಬುದ್ಧಿಯ ನೀಚರು. ಸಿಂಹವು ಭಾರತದ ಕಾಡಿನಲ್ಲಿ (ಚೀತಾದಷ್ಟೇ ಅಪರೂಪವಾದ) ವಿಚಿತ್ರ ರೂಪದ ಒಂಟೆಯನ್ನು ಕಂಡು ಅಚ್ಚರಿಗೊಂಡು ಅದಕ್ಕೆ ಆಶ್ರಯ ನೀಡಿತು.

ಒಂದು ದಿನ ಸಿಂಹವು (ಚೀನಾದ) ಕಾಡಿನ ಆನೆಯೊಂದಿಗೆ ಹೋರಾಡುವಾಗ ಗಾಯಗೊಂಡು ಅದಕ್ಕೆ ಬೇಟೆ ಸಾಧ್ಯವಾಗದೇ ಅದಕ್ಕೆ ಬಾಯಿಬಡಕೊಳ್ಳುವುದು ಮಾತ್ರ ಸಾಧ್ಯವಾಯಿತು. ಇದರಿಂದಾಗಿ ಅದೂ, ಅದು ತಿಂದು ಉಳಿದ ಎಂಜಲನ್ನೇ ತಿಂದು ಅಭ್ಯಾಸವಾಗಿದ್ದ ಚಿರತೆ, (ಬೋಡ) ನರಿ, (ಯೋಗಿ) ಕಾಗೆ ಕೂಡಾ ಉಪವಾಸಬಿದ್ದವು. ಬಡ ಒಂಟೆ ಮಾತ್ರ ಹುಲ್ಲು ತಿಂದು ಆರಾಮವಾಗಿ ಬದುಕಿತ್ತು.

ಆಗ ಈ ಮೂರೂ ಕುಟಿಲ ಸಲಹೆಗಾರರು ಸಿಂಹಕ್ಕೆ ಒಂಟೆಯನ್ನೇ ಕೊಂದು ತಿನ್ನುವ ಸಲಹೆ ನೀಡಿದವು. ಆದರೆ, ರಕ್ಷಣೆಯ ಭರವಸೆ ನೀಡಿದ್ದ ಸಿಂಹವು (ಕಾಡಿನ ಸಾಮಾಜಿಕ ಮಾಧ್ಯಮಗಳಿಗೆ ಅಂಜಿ) ಹಾಗೆ ಮಾಡಲು ಒಪ್ಪಲಿಲ್ಲ. ಆಗ ಅವು- ಒಂಟೆ ತಾನಾಗಿಯೇ ಕಾಡಿಗಾಗಿ ಪ್ರಾಣ ಕೊಡಲು ಒಪ್ಪಿ ಮುಂದೆ ಬಂದರೆ, ನೀವದನ್ನು ಕೊಲ್ಲಬಹುದಲ್ಲವೆ ಎಂದು ಕೇಳಿದವು. ಸಿಂಹಕ್ಕೂ ಅದೇ ಬೇಕಿತ್ತು. ಅದು ಒಪ್ಪಿತು.

ಒಂಟೆಯ ಮುಂದೆ ಕಾಡಿನ ರಾಜ ಅಪಾಯದಲ್ಲಿ, ಕಾಡು ಅಪಾಯದಲ್ಲಿ, ಧರ್ಮ ಅಪಾಯದಲ್ಲಿ ಇತ್ಯಾದಿ ಕೋರಸ್ ಗೀತೆಗಳನ್ನು ಹಾಡಲಾರಂಭಿಸಿದವು. ನಾವು ದೇಶಕ್ಕಾಗಿ ತ್ಯಾಗ ಮಾಡಬೇಕು, ನಮ್ಮ ರಾಜ ಸತ್ತರೆ ನಮಗ್ಯಾರು ಗತಿ? ಈ ಕಾಡು ನಾಶವಾಗುತ್ತದೆ, ಕಾಡು ಅಪಾಯದಲ್ಲಿ! ದೇಶ, ಧರ್ಮ ಅಪಾಯದಲ್ಲಿ! ಒಂಟೆ ಬಹಳ ಇಂಪ್ರೆಸ್ ಆಯಿತು!

ಮೂರೂ ಕುಟಿಲ ಪ್ರಾಣಿಗಳೂ, ನಮ್ಮನ್ನು ಕೊಂದು ತಿಂದು ನಿಮ್ಮ ಜೀವ ಉಳಿಸಿಕೊಂಡು ದೇಶ ರಕ್ಷಿಸಿ, ಧರ್ಮ ರಕ್ಷಿಸಿ ಎಂದು ಸಿಂಹದ ಬಳಿ ಅಂಗಲಾಚಿದವು! (ಗಡ್ಡದ) ಸಿಂಹವು ಒಂದೊಂದು ಕಾರಣ ನೀಡಿ ಅವುಗಳನ್ನು ಕೊಲ್ಲಲು ನಿರಾಕರಿಸಿತು. (ಒಂದೇ ಜಾತಿ, ಒಂದೇ ಧರ್ಮ, ಒಂದೇ ರಾಜ್ಯ ಒಂದೇ ಪಕ್ಷ ಇತ್ಯಾದಿ). ಒಮ್ಮೆಲೇ ಉತ್ತೇಜಿತಗೊಂಡ ಮೂರ್ಖ, ಭಕ್ತ ಒಂಟೆಯಲ್ಲಿ ದೇಶಪ್ರೇಮ, ಧರ್ಮ ಪ್ರೇಮ ಜಾಗೃತವಾಗಿ, ಅದು- ನನ್ನನ್ನೇ ಕೊಂದು ತಿಂದು ನಿಮ್ಮ ಹಸಿವು ನೀಗಿಸಿ, ಬದುಕಿ, ದೇಶ ಮತ್ತು ಧರ್ಮದ ರಕ್ಷಣೆ ಮಾಡಿ ಎಂದು ಹೇಳಿತು. ಅಷ್ಟು ಹೇಳಿದ್ದೇ ತಡ, ಸಿಂಹವು ಅದನ್ನು ಕೊಂದಿತು. ಎಲ್ಲಾ ದುಷ್ಟರು ಮೃಷ್ಟಾನ್ನ ಭೋಜನ ಮಾಡಿದವು, ಗೆಳೆಯರಿಗೂ ಪಾಲು ಕೊಟ್ಟವು!

ಒಂಟೆಗೆ ದೇಶಪ್ರೇಮಿ ಶೌರ್ಯ ಪ್ರಶಸ್ತಿ, ಪರಮವೀರ ಚಕ್ರ, ಪದ್ಮ ಪ್ರಶಸ್ತಿ, ಜ್ಞಾನಪೀಠ ಇತ್ಯಾದಿ ಕೊಡಲಾಯಿತೆ ಎಂಬುದು ನನಗೆ ಗೊತ್ತಿಲ್ಲ! ಅದರ ಮೂರ್ಖತನದ ಬಗ್ಗೆ ಮರುಕವಾಗುತ್ತದೆ. ಗಡ್ಡದ ಸಿಂಹವು ಬಳಸಿ ಎಸೆದವರು ನೆನಪಾಗುತ್ತಾರೆ. ಸೈನಿಕರು ಬಿಸಿಲು, ಮಳೆ, ಚಳಿ ಎನ್ನದೇ ನಿಮಗಾಗಿ ದೇಶ ಕಾಯುತ್ತಿದ್ದಾರೆ, ಗಡ್ಡದ ಮಹಾರಾಜರು ನೆರೆಯ ದೇಶಗಳಿಗೆ ಲಾಲ್ ಆಂಖ್ ತೋರಿಸುತ್ತಾರೆ, ಅವರು ವಿಶ್ವಗುರು, ದೇಶಕ್ಕಾಗಿ ಗ್ಯಾಸ್ ಬಿಡಿ, ಅದು ಬಿಡಿ, ಇದು ಬಿಡಿ, ತ್ಯಾಗ ಮಾಡಿ… ದೇಶಕ್ಕಾಗಿ ಇಷ್ಟೂ ಮಾಡಲು ಸಾಧ್ಯವಿಲ್ಲವೇ?… ಇತ್ಯಾದಿ ನೆನಪಾಗುತ್ತವೆ. ಜೊತೆಗೆ ಕೈಲಾಗದ, ನಾಲಾಯಕ್ ಮುದಿ ಗಡ್ಡದ ಸಿಂಹ ಕೂಡಾ! ನಿಮಗೆ ನೆನಪಾಯಿತೆ?

ಸಾವಿರಾರು ವರ್ಷಗಳಲ್ಲಿ ಪಂಚತಂತ್ರದ ಕತೆಗಳು ಹಲವು ಬದಲಾವಣೆಗಳೊಂದಿಗೆ ಪ್ರಪಂಚದಾದ್ಯಂತ ನೂರಾರು ಆವೃತ್ತಿಗಳು ಚಾಲ್ತಿಯಲ್ಲಿವೆ. ನಾನೂ ಇಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿರುವುದಕ್ಕೆ ಯಾರ ಕ್ಷಮೆಯನ್ನೂ ಕೇಳಬೇಕಾದದ್ದಿಲ್ಲ. ಪಂಚತಂತ್ರದಲ್ಲಿ ಪ್ರಬಲರಾದ ಸರ್ವಾಧಿಕಾರಿಗಳನ್ನು ತೊಲಗಿಸುವುದು ಹೇಗೆ ಎಂಬುದನ್ನು ಸೂಚಿಸುವ ಕತೆಗಳೂ ಕೆಲವಿವೆ. ಅವುಗಳನ್ನು ಮುಂದೆ ನೋಡೋಣ.

ಬೊಗಸೆಗೆ ದಕ್ಕಿದ್ದು – 23 : 1924ರ “ಸರ್ಫರೋಶಿ ಕೀ ತಮನ್ನಾ”ಮತ್ತು 2024ರ ಚುನಾವಣೆ
ನಾವು ಈ 2024ರಲ್ಲಿ ಭಾರತದ ಇತಿಹಾಸಕ್ಕೇ ತಿರುವು ನೀಡಬಲ್ಲ ಮಹಾಚುನಾವಣೆಯನ್ನು ಎದುರಿಸುತ್ತಿರುವಾಗ, ಸರಿಯಾಗಿ ನೂರು ವರ್ಷಗಳ ಹಿಂದೆ 1924ರಲ್ಲಿ ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ಸಾಮಾನ್ಯ ಭಾರತೀಯರನ್ನು ಒಳಗೊಂಡ ಆಧುನಿಕ ಕಾಲದ ಕ್ರಾಂತಿಯ ಕಹಳೆ ಮೊಳಗಿತ್ತು ಎಂಬುದೊಂದು ವಿಶೇಷ. 1857ರಲ್ಲಿ ನಡೆದ “ಪ್ರಥಮ” ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆಯು ಮೂಲತಃ ಬ್ರಿಟಿಷ್ ಸೇನೆಯಲ್ಲಿ ಚಾಕರಿ ಮಾಡುತ್ತಿದ್ದು, ಅಸಮಾಧಾನಗೊಂಡ ಭಾರತೀಯ ಸೈನಿಕರು, ಬ್ರಿಟಿಷರಿಂದ ಅವಮಾನಕ್ಕೀಡಾದ ಚಿಕ್ಕ ಸಂಸ್ಥಾನಗಳ ಅರಸರು, ಪಾಳೆಯಗಾರರು ಮತ್ತು ಜಮೀನ್ದಾರರು ನಡೆಸಿದ ಹೋರಾಟವಾಗಿತ್ತೇ ಹೊರತು, ಅದಕ್ಕೆ ಪ್ರಜಾಪ್ರಭುತ್ವದ ವಾಸನೆಯೇ ಇರಲಿಲ್ಲ. ಆದರೆ, ಇದರಿಂದ ಭಾರತವು ಈಸ್ಟ್ ಇಂಡಿಯಾ ಕಂಪನಿಯ ದಮನಕಾರಿ ಆಡಳಿತದದಿಂದ ಬ್ರಿಟಿಷ್ ರಾಣಿಯ ಸ್ವಲ್ಪ ಮಟ್ಟಿನ ತೋರಿಕೆಗಾದರೂ ಕಾನೂನಿನ ಆಡಳಿತ ಇದ್ದ ರಾಣಿಸತ್ತೆಯ ತೆಕ್ಕೆಗೆ ಬಂತೆಂಬುದು ನಿಜ. ಆದರೆ, ಇದಕ್ಕೆ ಮೊದಲೇ ಟಿಪ್ಪು ಸುಲ್ತಾನನ ಹೋರಾಟ, ಬಿಲ್, ಸಂತಾಲ್, ಗೊಂಡ್ ಮುಂತಾದ ಬುಡಕಟ್ಟು ಜನರ ದಂಗೆಗಳು ನಡೆದಿದ್ದವು. ನಮ್ಮ ದಕ್ಷಿಣ ಕನ್ನಡದಲ್ಲೇ ಕಲ್ಯಾಣಪ್ಪನ ನೇತೃತ್ವದಲ್ಲಿ ಅಮರ ಸುಳ್ಯ ದಂಗೆ ನಡೆದಿತ್ತು. ಇವೂ ಕೂಡಾ ಪ್ರಜಾಪ್ರಭುತ್ವಕ್ಕಾಗಿ ನಡೆದವುಗಳಲ್ಲ. ಆದುದರಿಂದಲೇ 1924ರ ಕ್ರಾಂತಿಯ ಆರಂಭ ಮಹತ್ವ ಪಡೆದಿದೆ.

ಅಂದಿನ ಹೋರಾಟವು ದಮನಕಾರಿ ರಾಣಿಸತ್ತೆಯ ವಿರುದ್ಧ ನಡೆದಿದ್ದರೆ, 2024ರ ಚುನಾವಣೆ ಎಂಬ ಪ್ರಜಾಪ್ರಭುತ್ವವಾದಿ ಹೋರಾಟವು, ಸಂವಿಧಾನವನ್ನೇ ಬದಲಿಸಿ, ಮತ್ತೆ “ಮೇಲ್ಜಾತಿ”ಗಳು ದಣಿಗಳಾಗಿರುವ, ಪ್ರಜಾಪ್ರಭುತ್ವದ ಸೋಗಿನ ಸರ್ವಾಧಿಕಾರಿ ಖ್ವಾಸಿ ರಾಜಸತ್ತೆಗೆ ಮರಳಿ ಕೊಂಡೊಯ್ಯುವ ಬಲಪಂಥೀಯ ಕೋಮುವಾದಿಗಳ ಪ್ರಯತ್ನದ ವಿರುದ್ಧ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ, ನಾವು ನಮ್ಮ ಹಿರಿಯರು ಮಹಾನ್ ತ್ಯಾಗಗಳನ್ನು ಮಾಡಿ ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕೆಂದರೆ, ಹಿಂದಿನ ಹೋರಾಟಗಳಿಂದ ಸ್ವಲ್ಪವಾದರೂ ಸ್ಫೂರ್ತಿ ಪಡೆಯಬೇಕು. ಇಲ್ಲಿ ಹೇಳಿದುದರಲ್ಲಿ ನನ್ನದು ಏನೂ ಇಲ್ಲ. ಇತಿಹಾಸದ ದಾಖಲೆಗಳಲ್ಲಿ ಹೇಳಿರುವುದನ್ನೇ ಇಲ್ಲಿ ಸಂಗ್ರಹಿಸಿ ನೀಡಲಾಗಿದೆ ಅಷ್ಟೇ. (ಅವುಗಳನ್ನು ಬರೆದು ದಾಖಲಿಸಿದವರಿಗೆ ಧನ್ಯವಾದ ಹೇಳಬೇಕು.)

1924ರಲ್ಲಿ ಇಂತದ್ದೇ, ಅಥವಾ ಹೆಚ್ಚು ಆತಂಕಕಾರಿ ಸನ್ನಿವೇಶದಲ್ಲಿ ಪೂರ್ವ ಬಂಗಾಳದ ಹಳ್ಳಿಯೊಂದರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಎಸೋಸಿಯೇಷನ್ ಅಥವಾ ಆರ್ಮಿ(ಎಚ್‌ಆರ್‌ಎ)ಯ ಸ್ಥಾಪನೆಯಾಯಿತು. ಅದರ ಗುರಿಯೆಂದರೆ, ಬ್ರಿಟಿಷ್ ಆಡಳಿತಕ್ಕೆ ಸಶಸ್ತ್ರ ಪ್ರತಿರೋಧ ಒಡ್ಡುವುದು. ಅದರ ಸ್ಥಾಪಕ ಸದಸ್ಯರಲ್ಲಿ ಒಬ್ಬರೆಂದರೆ, “ಸರ್ಫರೋಶಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ/ ದೇಖ್ ನಾ ಹೈ ಜೋರ್ ಕಿತ್‌ನಾ ಬಾಜು-ಎ-ಖಾತಿಲ್‌ ಮೇ ಹೈ” (ಕ್ರಾಂತಿಯ ಹಂಬಲ ಈಗ ನಮ್ಮ ಎದೆಯಲ್ಲಿದೆ/ ಹಂತಕನ ತೋಳುಗಳಲ್ಲಿ ಬಲವೆಷ್ಟಿದೆ ನೋಡಲಿದೆ) ಎಂಬ ಪ್ರಸಿದ್ಧ ಕ್ರಾಂತಿಕಾರಿ ಗೀತೆ ಬರೆದ ರಾಮಪ್ರಸಾದ್ ಬಿಸ್ಮಿಲ್. ಇನ್ನೊಬ್ಬ ಸ್ಥಾಪಕ ಸದಸ್ಯ ಎಂದರೆ, ಸಚೀಂದ್ರನಾಥ್ ಸನ್ಯಾಲ್. ಅವರ ಪ್ರಭಾವದಿಂದಲೇ ಮುಂದೆ 1924ರಲ್ಲಿ ಲಾಹೋರ್ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕ್ರಾಂತಿಕಾರಿ ಭಗತ್ ಸಿಂಗ್, ಅವರ ಶಿಷ್ಯನಾದದ್ದು. ಸನ್ಯಾಲ್ ಅವರು ಆಗಲೇ, ಮುಂದೆ ಕ್ರಾಂತಿಕಾರಿಗಳ ಮಾರ್ಗದರ್ಶಕ ಗ್ರಂಥವಾಗಿಯೇ ಹೋದ “ಬಂಡಿ ಜೀವನಿ” (ಬಂಡಾಯ ಜೀವನ)ಯನ್ನು ಬರೆದಿದ್ದರು. ಎಚ್‌ಆರ್‌ಎಯ ಸ್ಪಷ್ಟ ಉದ್ದೇಶವು ಸಾರ್ವತ್ರಿಕ ವಯಸ್ಕ ಚುನಾವಣೆಯ ಮೂಲಕ ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಎಂಬ ಒಕ್ಕೂಟ ಗಣರಾಜ್ಯದ ಸ್ಥಾಪನೆಯಾಗಿದ್ದು, ಇದು ಕಾರ್ಯರೂಪಕ್ಕೆ ಬಂದಿದ್ದರೆ, ಮುಂದೆ 1947ರಲ್ಲಿ ಭಾರತದ ವಿಭಜನೆಯು ತಪ್ಪುತ್ತಿತ್ತು ಎನ್ನಲಾಗುತ್ತದೆ.

ಸಶಸ್ತ್ರ ಹೋರಾಟವನ್ನು ಹಣವಿಲ್ಲದೇ ನಡೆಸಲು ಸಾಧ್ಯವಿರಲಿಲ್ಲ. ಜನರನ್ನು ನೇಮಕಾತಿ ಮಾಡಿ ಅವರಿಗೆ ತರಬೇತಿ ನೀಡುವುರು, ಶಸ್ತ್ರಾಸ್ತ್ರಗಳ ಖರೀದಿ, ರಾಷ್ಟ್ರೀಯ ಮಟ್ಟದಲ್ಲಿ ಒಂದು ಬಲವಾದ ಪ್ರಚಾರಾಭಿಯಾನದ ಸಂಘಟನೆ ಇತ್ಯಾದಿಗಳಿಗೆಲ್ಲ ಹಣಕಾಸು ಒದಗಿಸಬೇಕಾಗಿತ್ತು.

ಉತ್ತರ ಭಾರತದ ಕ್ರಾಂತಿಕಾರಿಗಳು ಸಂಘಟಿತರಾಗಿ ಮೂಡಿಬಂದವರಲ್ಲಿ ಮೊದಲಿಗರಾಗಿದ್ದು, ರಾಮಪ್ರಸಾದ್ ಬಿಸ್ಮಿಲ್, ಸಚೀಂದ್ರನಾಥ ಸನ್ಯಾಲ್, ಸಚೀಂದ್ರನಾಥ ಭಕ್ಷಿ, ಮತ್ತು ಜಗದೀಶ್ ಚಂದ್ರ ಚಟರ್ಜಿ 1924ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಎಸೋಸಿಯೇಷನ್ ಅಥವಾ ಆರ್ಮಿ (ಎಚ್‌ಆರ್‌ಎ)ಯನ್ನು ಸ್ಥಾಪಿಸಿದರು. 1924ರ ಅಕ್ಟೋಬರ್ ತಿಂಗಳಲ್ಲಿ ಕಾನ್ಪುರದಲ್ಲಿ ಭೇಟಿಯಾದ ಅವರು, ವಸಾಹತುಶಾಹಿ ಆಡಳಿತವನ್ನು ಕಿತ್ತೆಸೆದು ಒಂದು ಪ್ರಜಾಸತ್ತಾತ್ಮಕ ಒಕ್ಕೂಟ ಭಾರತವನ್ನು ಸ್ಥಾಪಿಸುವ ಪ್ರತಿಜ್ಞೆ ಮಾಡಿದರು.

1925ರ ಆಗಸ್ಟ್ 9ರಂದು ಹತ್ತು ಜನರು ಲಕ್ನೋ ಸಮೀಪದ ಕಾಕೋರಿ ಎಂಬ ಒಂದು ಅಜ್ಞಾತ ಹಳ್ಳಿಯ ಬಳಿ ನಂಬರ್ 8 ಡೌನ್ ರೈಲನ್ನು ನಿಲ್ಲಿಸಿ ರೈಲ್ವೇಯ ಅಧಿಕೃತ ಖಜಾನೆಯನ್ನು ದೋಚಿದರು. ಆದರೆ, ಅವರೆಲ್ಲರನ್ನು ಬೇಗನೇ ಬಂಧಿಸಲಾಯಿತು. ಸರಕಾರದ ಪ್ರತೀಕಾರ ತ್ವರಿತ ಮತ್ತು ಕಟುವಾಗಿತ್ತು. ಅಶ್ಫಾಕುಲ್ಲಾ ಖಾನ್, ರಾಮಪ್ರಸಾದ್ ಬಿಸ್ಮಿಲ್, ರೋಷನ್ ಸಿಂಗ್ ಮತ್ತು ರಾಜೇಂದ್ರ ಲಾಹಿರಿ ಸೇರಿದಂತೆ ಐವರನ್ನು ಗಲ್ಲಿಗೇರಿಸಲಾಯಿತು. ನಾಲ್ವರನ್ನು ಅಂಡಮಾನಿನಲ್ಲಿ ಕ್ರೂರ ಜೈಲಿನಲ್ಲಿ ಜೀವನಪರ್ಯಂತ ಶಿಕ್ಷೆ ಅನುಭವಿಸಲು ಕಳುಹಿಸಲಾಯಿತು. ಅವರಲ್ಲಿ ಒಬ್ಬರಾದ ಮಹಾವೀರ್ ಸಿಂಗ್ ನಂತರ ಜೀವಂತವಾಗಿ ಹೊರಬಂದರು. ಉಳಿದ ಹದಿನೇಳು ಮಂದಿಗೆ ದೀರ್ಘಕಾಲದ ಜೈಲುವಾಸ ಕಾದಿತ್ತು. ಅವರಲ್ಲಿ ಒಬ್ಬರಾದ ಚಂದ್ರಶೇಖರ ಅಜಾದ್ ಅಚ್ಚರಿಕಾರಕ ರೀತಿಯಲ್ಲಿ ತಪ್ಪಿಸಿಕೊಂಡರು.

ಕಾರ್ಯವ್ಯೂಹಾತ್ಮಕ ಚಾತುರ್ಯ ಇದ್ದ ಭಗತ್ ಸಿಂಗ್ ಕ್ರಾಂತಿಕಾರಿ ಚಳವಳಿಯನ್ನು ಮತ್ತೆ ಸಕ್ರಿಯಗೊಳಿಸುವ ಅವಕಾಶವನ್ನು ಕಂಡರು. ಹಾಗಾಗಿ 1926ರಲ್ಲಿ ನವ್‌ಜವಾನ್ ಭಾರತ್ ಸಭಾ ಪ್ರಸಿದ್ಧಿಗೆ ಬಂತು. ಅದು ಯುವಜನರನ್ನು ಸಮಾಜವಾದಿ, ಧರ್ಮಾತೀತ ವೇದಿಕೆಯಡಿ- ಕೋಮುವಾದಿ ರಾಜಕೀಯದ ವಿರುದ್ಧ ಒಟ್ಟಿಗೆ‌ ತರುವ ಉದ್ದೇಶ‌ ಹೊಂದಿತ್ತು. ಭಗತ್ ಸಿಂಗ್ ಇಂತಾ ತೀವ್ರ ಕ್ರಮ ಕೈಗೊಳ್ಳಲೇಬೇಕಾಗಿತ್ತು. 1925ರ ಕಾಕೋರಿ ಸಂಚು ಪ್ರಕರಣದ ಯೋಜಕರ ಸೋಲು ಭಾರತದಲ್ಲಿ ಕ್ರಾಂತಿಕಾರಿ ಹೋರಾಟದ ನಾಯಕತ್ವವನ್ನೇ ನಿರ್ಮೂಲನ ಮಾಡಿತ್ತು. ರಾಮಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕುಲ್ಲಾ ಖಾನ್ ಆಗಿನ ಅಲ್ಪಕಾಲದ ಚಳವಳಿಯ ಉಜ್ವಲ ನಾಯಕರಾಗಿದ್ದವರು ಇನ್ನಿಲ್ಲವಾಗಿದ್ದರು. ಒಂದೇ ಏಟಿನಲ್ಲಿ ಭಾರತೀಯ ಕ್ರಾಂತಿಕಾರಿ ಚಳವಳಿಯ ನಾಯಕತ್ವವನ್ನು ತೊಡೆದುಹಾಕಲಾಗಿತ್ತು ಮತ್ತು ಹೊಸ ಪೀಳಿಗೆಯ ಕ್ರಾಂತಿಕಾರಿ ನಾಯಕರ ಅಗತ್ಯವಿತ್ತು. ಎಚ್‌ಆರ್‌ಎಯ ಬೂದಿಯಿಂದ ಕ್ರಾಂತಿಕಾರಿ ಚಳವಳಿಗೆ ಮರುಹುಟ್ಟು ನೀಡಿ ಅದನ್ನು ಮುನ್ನಡೆಸುವ ನಾಯಕರ ಅಗತ್ಯವಿತ್ತು.

ಆರ್ಯಸಮಾಜವಾದಿ ಮತ್ತು ಗದ್ದರ್‌ವಾದಿ ಪ್ರಬಲ ಕ್ರಾಂತಿಕಾರಿ ಹಿನ್ನೆಲೆ ಮತ್ತು ಪರಂಪರೆಯ ಕುಟುಂಬದಿಂದ ಬಂದ ಭಗತ್ ಸಿಂಗ್ ಅವರಿಗೆ ಈ ಗುಣಗಳ ಬಳುವಳಿಯಿತ್ತು. 1919ರಲ್ಲಿ ಹನ್ನೆರಡು ವರ್ಷಗಳ ಹುಡುಗನಾಗಿದ್ದಾಗಲೇ ಅವರು ಅಮೃತಸರದ ಜಲಿಯನ್‌ವಾಲಾ ಬಾಗ್‌ನಲ್ಲಿ ಜನರಲ್ ಡಾಯರ್ ನೂರಾರು ಅಮಾಯಕ ಜನರನ್ನು ಕೊಲ್ಲಿಸಿದ ಹತ್ಯಾಕಾಂಡದಿಂದ ರೋಸಿಹೋಗಿದ್ದರು. ಅನೇಕ ಇತರರಂತೆಯೇ ಅವರು ಗಾಂಧಿಯವರ ಅಸಹಕಾರ ಚಳವಳಿಯ ಜೊತೆ ಸೇರಿದ್ದರು. ಆದರೆ ಗಾಂಧಿಯವರು ಬೇಗನೇ ಈ ಚಳವಳಿಯನ್ನು ಹಿಂತೆಗೆದುಕೊಂಡಿದ್ದರು. ಉಳಿದ ಅನೇಕರಂತೆ ಭಗತ್ ಸಿಂಗ್ ಕೂಡಾ ಅವರ ವಿಷಯದಲ್ಲಿ ಭ್ರಮನಿರಸನಗೊಂಡಿದ್ದರು. 1926ರಲ್ಲಿ ಅವರು ಸ್ಥಾಪಿಸಿದ ನವ್‌ಜವಾನ್ ಭಾರತ್ ಸಭಾ ಮುಂದೆ 1928ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಎಸೋಸಿಯೇಷನ ಅಸ್ಥಿಯಿಂದ ಅಸ್ತಿತ್ವಕ್ಕೆ ಬಂದ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಎಸೋಸಿಯೇಷನ್‌ಗೆ ಒಂದು ಅಸ್ಪಷ್ಟ ಮುನ್ನುಡಿಯಂತಿತ್ತು. ಹಿಂದೂಸ್ತಾನ್ ರಿಪಬ್ಲಿಕನ್ ಎಸೋಸಿಯೇಷನ್‌ನ ಕ್ಷಣಿಕ ಇತಿಹಾಸವು ನಿಧಿ ಸಂಗ್ರಹ ಮತ್ತು ಕಾಕೋರಿ ಘಟನೆಯನ್ನು ಮೀರಿ ಬೆಳೆಯಲು ಸಾಧ್ಯವಾಗಿರಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ನವ್‌ಜವಾನ್ ಭಾರತ್ ಸಭಾದ ಚಳವಳಿಯು ಜಾತಿ, ಧರ್ಮಗಳನ್ನು ಮೀರಿ ಒಂದು ರೀತಿಯ ಅತಿಕ್ರಮಣಕಾರಿ‌ ಸಾಮಾಜಿಕತೆಯನ್ನು ಉತ್ತೇಜಿಸುವ ವ್ಯಕ್ತಿಗಳನ್ನು ಜೊತೆಗೆ ತರಲು ಯಶಸ್ವಿಯಾಗಿತ್ತು.

ಆದುದರಿಂದ 1925ರ ಕಾಕೋರಿ ಸಂಚು ಪ್ರಕರಣವು ಸ್ವಾತಂತ್ರ್ಯ ಚಳವಳಿಗೆ ಒಂದು ನಿರ್ಣಾಯಕ ಕ್ಷಣವಾಗಿತ್ತು. ಇದು ಬಹಳಷ್ಟು ಕಡೆಗಣಿಸಲಾದ ಘಟನೆಯಾಗಿದ್ದರೂ, ಅದಕ್ಕೆ ಅತ್ಯಂತ ಐತಿಹಾಸಿಕ ಮಹತ್ವವಿದೆ. ಏಕೆಂದರೆ, ಅದರ ಕಾರಣದಿಂದ ಎಚ್‌ಆರ್‌ಎಯ ಎಳೆಯ ನಾಯಕರು ಮೃತರಾಗಿದ್ದುದರಿಂದ ಭಗತ್ ಸಿಂಗ್, ಸ್ವಾತಂತ್ರ್ಯ ಹೋರಾಟದ ಉರಿಯುತ್ತಿರುವ ಕುಲುಮೆಗೆ ಧುಮುಕಿದರು.

ಈ ಸಂಘರ್ಷವು ಗಾಂಧಿಯವರ ಸಂಘರ್ಷಕ್ಕಿಂತ ಬೇರೆಯಾಗಿತ್ತು. ಅದು ಕೋಮುವಾದವನ್ನು ಎದುರಿಸಿ ನಿಂತಿತ್ತು. ಜನಾಂಗ, ವರ್ಗ, ಜಾತಿಗಳ ಹಂಗಿಲ್ಲದೆ ಒಂದು ಬಲವಾದ ರಾಷ್ಟ್ರೀಯ ಏಕತೆಯನ್ನು ರೂಪಿಸುವುದಕ್ಕಿಂತಲೂ ತುರ್ತಾದ ಕೆಲಸ ಬೇರೊಂದಿರಲಿಲ್ಲ. ವಸಾಹತುವಾದವು ಒಬ್ಬರನ್ನು ಒಬ್ಬರ ವಿರುದ್ಧ ಎತ್ತಿಕಟ್ಟುವುದರ ಮೂಲಕ ಭಾರತದಂತ ವೈವಿಧ್ಯಮಯ ದೇಶದ ಏಕತೆಗೆ ಅಪಾಯವಾಗಿತ್ತು. ಭಾರತವು ಸ್ವಾತಂತ್ರ್ಯದ ಕಡೆಗೆ ಯಶಸ್ವಿಯಾಗಿ ಮುನ್ನಡೆಯಬೇಕಾದರೆ, ಇದು ಈಗಿನ ಮೊದಲ ಆದ್ಯತೆಯಾಗಿತ್ತು. ಬ್ರಿಟಿಷರು ಆಗ ಮಾಡಿದುದನ್ನೇ ಈಗಿನ ಪ್ರಭುಗಳು ಈಗ ಮಾಡುತ್ತಿದ್ದಾರೆ ಎಂಬುದನ್ನು ನಾವು ನೆನಪಿಡಬೇಕು. ಆಗಿನ ಕ್ರಾಂತಿಕಾರಿಗಳು ಅಗತ್ಯವೆಂದು ಕಂಡುಕೊಂಡ ಜಾತ್ಯತೀತ ಏಕತೆಯೇ ಇಂದಿನ ಅಗತ್ಯ ಕೂಡಾ.

1927ರಲ್ಲಿ ತನ್ನನ್ನು ಗಲ್ಲಿಗೇರಿಸುವುದಕ್ಕೆ ಕೇವಲ ಮೂರು ದಿನಗಳಿಗೆ ಮೊದಲು ಅಶ್ಫಾಕುಲ್ಲಾ ಖಾನ್ ಭಾರತದಲ್ಲಿ ಕೋಮುವಾದದ ಬೆಳವಣಿಗೆಯ ಕುರಿತು ಎಚ್ಚರಿಸುತ್ತಾ, ತನ್ನ ದೇಶವಾಸಿಗಳನ್ನುದ್ದೇಶಿಸಿ ಬರೆದ ಬಹಿರಂಗ ಪತ್ರಕ್ಕಿಂತ ಚೆನ್ನಾಗಿ ಬೇರೇನೂ ಇದನ್ನು ತೋರಿಸಿಕೊಡಲಾರದು. ಅವರು ತಬ್ಲೀಗ್ ಮತ್ತು ಶುದ್ಧಿ ಚಳವಳಿಗಳನ್ನು ಖಂಡಿಸಿದರು. “ಹಿಂದೂಗಳು ಮತ್ತು ಮುಸ್ಲಿಮರು ಜೊತೆಯಾಗಿ ಬದುಕಲು ಕಲಿಯಬೇಕು; ಇಲ್ಲದಿದ್ದರೆ, ಚಾಕರಿಯ ಗುಲಾಮಗಿರಿಯ ಸಂಕೋಲೆಯಿಂದ ಕಳಚಿಕೊಳ್ಳಲು ಅವರು ವಿಫಲವಾಗುವರು. ಅವರು ಇದರಲ್ಲಿ ವಿಫಲರಾದರೆ, ಪರಿಣಾಮವು ಋಣಾತ್ಮಕವಾಗಿ ಕಟುವಾಗಿರುವುದು: ಏಳು ಕೋಟಿ ಮುಸ್ಲಿಮರನ್ನು ಶುದ್ಧೀಕರಿಸುವುದು ಅಸಾಧ್ಯ‌. ಅದೇ ರೀತಿಯಲ್ಲಿ ಇದು ಸ್ವಾತಂತ್ರ್ಯಕ್ಕಾಗಿನ ಹೋರಾಟದ ಮೇಲೆ ಪರಿಣಾಮ ಬೀರುವುದು. ಇಪ್ಪತ್ತೈದು ಕೋಟಿ ಹಿಂದೂಗಳನ್ನು ಇಸ್ಲಾಮಿಗೆ ಮತಾಂತರ ಮಾಡಬಹುದು ಎಂದು ಯೋಚಿಸುವುದೇ ಅಸಂಬದ್ಧ. ಆದರೆ, ಹೌದು. ನಾವೆಲ್ಲರೂ ಗುಲಾಮಗಿರಿಯ ಸಂಕೋಲೆಯನ್ನು ನಮ್ಮ ಕೊರಳ ಸುತ್ತ ಹಾಕಿಕೊಳ್ಳುವುದು ಸುಲಭ” ಎಂಬುದವರ ಸುಸ್ಪಷ್ಟ ಮಾತುಗಳಾಗಿದ್ದವು.

ಇದೇ ಮಾತುಗಳನ್ನು ಮಹಾವೀರ್ ಸಿಂಗ್ ಅವರು ಕೂಡಾ ಅಂಡಮಾನಿನ ಜೈಲಿನಲ್ಲಿ ಜೀವನ ಪರ್ಯಂತದ ಸಜೆಯನ್ನು ಎದುರು ನೋಡುತ್ತಿದ್ದಾಗ ತನ್ನ ತಂದೆಯವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ:

“ಸಮಾಜ ಎಂದರೆ ಆರ್ಯ ಸಮಾಜ ಅಥವಾ ಇನ್ಯಾವುದೇ ಸಂಕುಚಿತ ಸಮಾಜವೆಂದು ನನ್ನ ಅರ್ಥವಲ್ಲ. ಸಮಾಜ ಎಂದರೆ, ಸಾಮಾನ್ಯ ಜನರ ಸಮಾಜ. ಯಾಕೆಂದರೆ, ಈ ಧಾರ್ಮಿಕ ಸಮಾಜಗಳು, ತಮ್ಮ ಸಮೀಪದೃಷ್ಟಿಯ ಕಾರಣದಿಂದಾಗಿ ನನಗೆ ಅರ್ಥಹೀನ. ಮೇಲಾಗಿ, ನಾನು ಎಲ್ಲಾ ಧರ್ಮಗಳಿಂದ ದೂರ ಉಳಿಯಲು ಬಯಸುತ್ತೇನೆ; ಏಕೆಂದರೆ, ಅವು ಸಂಕುಚಿತ, ಸ್ವಯಂಕೇಂದ್ರಿಯವಾಗಿವೆ ಮತ್ತು ಅನ್ಯಾಯವನ್ನು ಆಧರಿಸಿವೆ ಹಾಗೂ ತಮ್ಮ ಹಾಗೆಯೇ ಇತರರೂ ಮಾಡಬೇಕೆಂದು ಬಯಸುತ್ತವೆ. ಮಾನವ ಮತ್ತು ಸಮಾಜಕ್ಕೆ ಆತ್ಯಂತ ಹೆಚ್ಚು ಅನುಕೂಲ ತಂದುಕೊಡುವ ತತ್ವವೆಂದು ನಾನು ನಂಬಿರುವುದೆಂದರೆ: ಮಾನವ ಸಂಬಂಧಗಳು- ಯಾವುದೇ ಜಾತಿ, ಧರ್ಮ, ಬಣ್ಣ ಮತ್ತು ಹಣದ ತಾರತಮ್ಯದ ಮೇಲೆ ಆಧರಿಸಿರಬಾರದು.”

ಭಾರತವು ಸ್ವಾತಂತ್ರ್ಯವನ್ನು ಪಡೆಯುವುದರ ಮೂಲಕ, ಒಂದು ಸ್ವರೂಪದ ದಮನಕಾರಿ ಆಡಳಿತದ ಬದಲು ಇನ್ನೊಂದು ಸ್ವರೂಪದ ದಮನಕಾರಿ ಆಡಳಿತವನ್ನು ತರಬಾರದು ಎಂದು ಅಶ್ಫಾಕುಲ್ಲಾ ಖಾನ್ ಸಾಕಷ್ಟು ಸ್ಪಷ್ಟಪಡಿಸಿದ್ದಾರೆ. ಇದೇ ಅಪಾಯ ಇಂದಿನ ಸಂದರ್ಭದಲ್ಲಿ ನಮಗೆ ಎದುರಾಗಿರುವುದು.

“ಪರಕೀಯರ ಆಡಳಿತವು ದುಷ್ಟತನ ಎಂದು ನಾನು ಪರಿಗಣಿಸುತ್ತೇನೆ. ಅದೇ ಹೊತ್ತಿಗೆ ದುರ್ಬಲರಿಗೆ ಹಕ್ಕುಗಳನ್ನು ನಿರಾಕರಿಸಲಾಗುವ ಯಾವುದೇ ಪ್ರಜಾಸತ್ತಾತ್ಮಕ ಭಾರತೀಯ ಆಡಳಿತವನ್ನು ನಾನು ದ್ವೇಷಿಸುತ್ತೇನೆ: ಅದು ಶ್ರೀಮಂತರು ಮತ್ತು ಜಮೀನುದಾರರ ರಚನೆಯಾಗಿದ್ದರೆ ಅಥವಾ ಅದರಲ್ಲಿ ರೈತರು ಮತ್ತು ಕಾರ್ಮಿಕರ ಭಾಗವಹಿಸುವಿಕೆ ಇಲ್ಲದಿದ್ದರೆ ಅಥವಾ ಸರಕಾರಿ ಕಾನೂನುಗಳು ಅಸಮಾನತೆ ಮತ್ತು ಅಸಮಾನ ವ್ಯವಹಾರದ ಮೇಲೆ ಆಧರಿಸಿದ್ದರೆ…” ಇದುವೇ ಇಂದಿನ ಸಂದರ್ಭದಲ್ಲಿ ನಮ್ಮ ಮಾತೂ ಆಗಬೇಕು ಅಲ್ಲವೇ?!

(ಕ್ರಾಂತಿಕಾರಿಗಳು 1925ರ ಸುತ್ತಮುತ್ತ ಕೋಮುವಾದ ವಿರೋಧಿ ಸಂಘಟನೆಯನ್ನು ರೂಪಿಸಿಕೊಳ್ಳುತ್ತಿರುವಾಗಲೇ ಹಿಂದೂ ಕೋಮುವಾದಿಗಳು ಆರೆಸ್ಸೆಸ್ಸನ್ನು ಸ್ಥಾಪಿಸಿದರು. ಈ ಕುರಿತು ಇನ್ನಷ್ಟು ಮುಂದಿನ ಅಂಕಣದಲ್ಲಿ)

ಬಿಜೆಪಿಯ ವಾಟ್ಸಪ್ ಇತಿಹಾಸದ:‌ ಸೃಷ್ಟಿಕರ್ತನೇ ಪಿ.ಎನ್. ಓಕ್
ಬೊಗಸೆಗೆ ದಕ್ಕಿದ್ದು…22
ನಿಖಿಲ್‌ ಕೊಲ್ಪೆ

ಇತಿಹಾಸವನ್ನು ಹಿಂದೂತ್ವದ ತಮ್ಮ ಸಿದ್ಧಸೂತ್ರಗಳಿಗೆ ಅನುಸಾರವಾಗಿ ತಿರುಚುವುದು ಸಂಘ ಪರಿವಾರಕ್ಕೆ ಹೊಸದೇನಲ್ಲ. ಅವರದನ್ನು ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದು, ಕೋಮುದ್ವೇಷದ ವಿಷವನ್ನು ಸಾಮಾನ್ಯ ಜನರ ನಡುವೆ ಬಿತ್ತಿ ಅಧಿಕಾರದ ಬೆಳೆ ತೆಗೆಯುವುದರಲ್ಲಿ ಯಶಸ್ವಿಯೂ ಆಗಿದ್ದಾರೆ. ಗಾಂಧಿ ಮತ್ತು ನೆಹರೂ ಬಗ್ಗೆ- ಅವರ ಚಾರಿತ್ರ್ಯವನ್ನೇ ಧ್ವಂಸ ಮಾಡಲು ಯತ್ನಿಸುವ ಅಶ್ಲೀಲ ಕಟ್ಟುಕತೆಗಳನ್ನು ಅವರು ಕಟ್ಟಿ, ಶಾಖೆಗಳ ಮೂಲಕ ಹರಡಿ, ತಮ್ಮ ಕಾರ್ಯಕರ್ತರ ಮೂಲಕ ಜನರ ನಡುವೆ ಹರಡಿದ್ದಾರೆ.

ಆದರೆ ಇಂದು- ವಾಟ್ಸಾಪ್, ಯೂಟ್ಯೂಬ್, ಫೇಸ್‌ಬುಕ್ ಮುಂತಾದ ಪ್ರಭಾವಿ ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ, ಸತ್ಯದ ತಲೆಯ ಮೇಲೆ ಹೊಡೆದಂತೆ ಸಂಘಪರಿವಾರದ ಸುಳ್ಳುಗಳು ಹರಿದಾಡುತ್ತಿವೆ. ಇತಿಹಾಸವನ್ನು ತಿರುಚುವುದು ಮಾತ್ರವಲ್ಲ; ಅದನ್ನೇ ಆಧಿಕೃತಗೊಳಿಸಿ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪಠ್ಯಪುಸ್ತಕಗಳಲ್ಲಿ ತುರುಕಿಸಿ, ಎಳೆಯ ಮಕ್ಕಳ ಮನಸ್ಸಿಗೆ ವಿಷ ತುಂಬಿಸುವ ಕೆಲಸಗಳು ನಡೆಯುತ್ತಿವೆ. ಅಯೋಧ್ಯೆ ಅಥವಾ ಫೈಜಾಬಾದ್‌ನಲ್ಲಿ ರಾಮಜನ್ಮಭೂಮಿ ಕುರಿತ ಸುಳ್ಳುಗಳು, ಇಡೀ ಸ್ವಾತಂತ್ರ್ಯ ಹೋರಾಟ ಮಾತ್ರವಲ್ಲದೆ, ಸಾವರ್ಕರ್ ಕುರಿತು, ಶಿವಾಜಿಯ ಕುರಿತು, ಮೊಗಲ್ ದೊರೆಗಳ ಕುರಿತು ಟಿಪ್ಪು ಸುಲ್ತಾನರ ಸಹಿತ, ಮುಸ್ಲಿಂ ದೊರೆಗಳೂ ಸೇರಿದಂತೆ ಇಡೀ ಮಾನವ ಇತಿಹಾಸ ಕುರಿತು ವಾಟ್ಸಾಪ್ ಮುಂತಾದ ವೇದಿಕೆಗಳಲ್ಲಿ ಹರಡಲಾಗುತ್ತಿರುವ ಸಾವಿರಾರು ವಿಕೃತ ಸುಳ್ಳುಗಳು ಓದುಗರಿಗೆ ಪರಿಚಿತವೇ.

ಇದೀಗ ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ದೊಡ್ಡದೊಡ್ಡ ನಾಯಕರಿಂದ ಹಿಡಿದು, ಸಾಮಾಜಿಕ ಜಾಲತಾಣಗಳ ಬಾಡಿಗೆ ಬರಹಗಾರರು ಮತ್ತು ಎರಡು ರೂಪಾಯಿ ಗಿರಾಕಿಗಳು ಕೂಡಾ ಸುಳ್ಳು, ಕಪೋಲಕಲ್ಪಿತ, ತಿರುಚಿದ ಇತಿಹಾಸವನ್ನು ಹೆಚ್ಚುಹೆಚ್ಚಾಗಿ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ಮಾಡುತ್ತಿದ್ದಾರೆ ಎನ್ನುವುದಕ್ಕಿಂತ ಅಪಪ್ರಚಾರ ಮಾಡುತ್ತಿದ್ದಾರೆ ಎನ್ನುವುದೇ ಹೆಚ್ಚು ಸರಿ. ಆದುದರಿಂದ ಈ ಸುಳ್ಳುಗಳ ಮೂಲ ಪುರುಷ ಯಾರು ಎಂಬುದನ್ನು ಸ್ವಲ್ಪ ತಿಳಿದುಕೊಳ್ಳೋಣ.

ಇಂತಾ ಎಲ್ಲಾ ಸುಳ್ಳುಗಳ, ಅಪಪ್ರಚಾರಗಳ, ಆರೆಸ್ಸೆಸ್ ನಂಬಿರುವ ಇತಿಹಾಸದ ಮೂಲಪುರುಷ ಮತ್ತು ಸೃಷ್ಟಿಕರ್ತನೇ ಸ್ವಯಂಘೋಷಿತ ಇತಿಹಾಸಕಾರ ಪಿ. ಎನ್. ಓಕ್ ಅಥವಾ ಪುರುಷೋತ್ತಮ ನಾಗೇಶ ಓಕ್. ವಾಸ್ತವದಲ್ಲಿ ಈತ ಇತಿಹಾಸಕಾರನೇ ಅಲ್ಲ. ಆದರೆ, ಪ್ರಪಂಚ ಕಂಡ ಅತ್ಯಂತ ಪ್ರತಿಭಾವಂತ ಇತಿಹಾಸ್ಯಕಾರ; ಜೋಕರ್. ಈತನ ಕುರಿತು ಹಿಂದೆ ಬೇರೆಡೆ ಬರೆದಿದ್ದೆನಾದರೂ, ಅದು ಕೆಲವೇ ಜನರಿಗೆ ತಲಪಿರುವ ಕಾರಣದಿಂದ ಆತನ ಕುರಿತು ಇಲ್ಲಿ ಮತ್ತೆ ಬರೆಯಬೇಕೆನಿಸಿದೆ.

ಈತ ಬಾಲಿವುಡ್‌ನಲ್ಲಿ ಚಿತ್ರಕತೆ ಬರೆಯುತ್ತಿದ್ದರೆ, ಬಹಳಷ್ಟು ಹಣವನ್ನೂ, ಪ್ರಸಿದ್ಧಿಯನ್ನು ಗಳಿಸಬಹುದಾಗಿದ್ದ- ಹುಲುಸಾದ ಕಲ್ಪನೆ ಹೊಂದಿದ್ದ ವ್ಯಕ್ತಿ. ಕ್ರೈಸ್ತ ಧರ್ಮ, ಇಸ್ಲಾಂ, ಮಕ್ಕಾದಲ್ಲಿರುವ ಕಾಬಾ, ತಾಜ್‌ಮಹಲ್ ಸೇರಿದಂತೆ ಹಿಂದೂವೇತರ ಎಲ್ಲವನ್ನೂ ವಿವಾದಕ್ಕೆಳೆದ ವ್ಮಕ್ತಿಯೀತ. ಆತನೀಗ ಸಂಘ ಪರಿವಾರದ ಅಧಿಕೃತ ಇತಿಹಾಸಕಾರ. ಅವರ ಬರಹಗಳಲ್ಲಿ ಆತನ ಹೆಸರು ಬರೆಯುವಾಗ ಮಹಾನ್, ಪೂಜ್ಯರು ಇತ್ಯಾದಿ ವಿಶೇಷಣಗಳನ್ನೂ ಬಳಸಲಾಗುತ್ತಿದೆ.

ನಮ್ಮ ರಾಜ್ಯದಲ್ಲಿ ರೋಹಿತ್ ಚಕ್ರತೀರ್ಥ ಎಂಬಾತನ ನೇತೃತ್ವದಲ್ಲಿ ನಡೆದ ಪಠ್ಯಪುಸ್ತಕಗಳ ಅಧ್ವಾನ, ಟಿಪ್ಪುವಿನ ಕುರಿತು ವಿಕೃತವಾಗಿ ಬರೆದು ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ಹುಟ್ಟುಹಾಕಿ, ಅಡ್ಡಂಡ ಕಾರ್ಯಪ್ಪ ಎಂಬಾತ ಬರೆದಿರುವ ಕುತ್ಸಿತ ನಾಟಕ, ಸೂಲಿಬೆಲೆ, ಮಹೇಶ್ ಹೆಗ್ಡೆ ಮುಂತಾದವರು ಸಾಮಾಜಿಕ ತಾಣಗಳಲ್ಲಿ ಹರಡುತ್ತಿರುವ ವಿಷಬೀಜಗಳು, ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಅಪ್ಪಟ ಸುಳ್ಳುಗಳು ತಾಜ್‌ಮಹಲ್, ಕಾಶಿಯ ಗ್ಯಾನವ್ಯಾಪಿ ದೇವಾಲಯ-ಮಸೀದಿ ಮುಂತಾದ ವಿವಾದಗಳು ಚರ್ಚೆಯಾಗುತ್ತಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ- ಇಂತಾ ಸುಳ್ಳು ಇತಿಹಾಸದಲ್ಲಿ ಇಂತಹಾ ವ್ಯಕ್ತಿಗಳ ಗುರುವಾದ ವ್ಯಕ್ತಿಯ ಬಗ್ಗೆ ಜಾತ್ಯತೀತ ಜನತೆ ಸ್ವಲ್ಪವಾದರೂ ತಿಳಿದಿರಬೇಕು, ಎಚ್ಚರಿಕೆ ಹೊಂದಿರಬೇಕು.

ಯಾವುದೇ ಜಾಲತಾಣ ತೆರೆದರೂ, ಈತನ ಸುಳ್ಳು ಇತಿಹಾಸವನ್ನು ಹರಡುವ, ಅದೇ ರೀತಿಯ ಬೇರೆ ಸುಳ್ಳುಗಳನ್ನು ಹರಡುವ, ಈತನನ್ನು ವೈಭವೀಕರಿಸುವ ಸಾವಿರಾರು ಅಜ್ಞಾನಿ ಬರಹಗಳು ಮತ್ತು ವಿಡಿಯೋಗಳು ಸಿಗುತ್ತವೆ. ಇವುಗಳ ನಡುವೆ, ಈತನ ನಗೆಪಾಟಲು ಸುಳ್ಳುಗಳನ್ನು ಖಂಡಿಸುವ ಬರಹ ಅಥವಾ ವಿಡಿಯೋಗಳು ಕಾಣದಂತಾಗಿವೆ. ವಾಟ್ಸಾಪ್ ಯುನಿವರ್ಸಿಟಿಗೆ ಈತನ ವಿಧಾನ ಮತ್ತು ಕಲ್ಪನೆಗಳೇ ಜೀವಾಳವಾಗಿವೆ. ಮೊದಲಿಗೆ ತೀರಾ ಚುಟುಕಾಗಿ ಈತನ ಜೀವನದ ಹಿನ್ನೆಲೆಯನ್ನು ನೋಡೊಣ.

ಮಾರ್ಚ್ 2, 1917ರಂದು ಬ್ರಿಟಿಷ್ ಸಾಮ್ರಾಜ್ಯದ ಇಂದೋರ್ ಪ್ರಾಂತ್ಯದಲ್ಲಿ ಮರಾಠ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಪಿ. ಎನ್. ಓಕ್, ಆಗ್ರಾ ವಿಶ್ವವಿದ್ಯಾಲಯದಲ್ಲಿ ಎಂ.ಎ. ಮತ್ತು ಮುಂಬೈ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು. ನಂತರ ಬ್ರಿಟಿಷ್ ಆಡಳಿತದಲ್ಲಿ ಮೊದಲ ದರ್ಜೆಯ ಗಜೆಟೆಡ್ ಅಧಿಕಾರಿಯಾಗಿದ್ದರು. ಎರಡನೇ ಮಹಾಯುದ್ಧದ ಕಾಲದಲ್ಲಿ ತಾನು ನೇತಾಜಿಯವರ ಇಂಡಿಯನ್ ನ್ಯಾಷನಲ್ ಆರ್ಮಿ ಸೇರಿ, ಜಪಾನೀಯರ ಜೊತೆ, ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದೆನೆಂದೂ, ಸಿಂಗಾಪುರ ಮತ್ತು ರಂಗೂನ್ ನಡುವೆ ಓಡಾಡುತ್ತಾ ಬ್ರಿಟಿಷರ ಕೈಗೆ ಸಿಗದೇ ತಪ್ಪಿಸಿಕೊಂಡೆನೆಂದೂ ಅವರು ಹೇಳಿಕೊಂಡಿದ್ದಾರೆ. ಇದು ಅವರು ಬರೆದ ಇತಿಹಾಸದಂತೆ ಅಥವಾ ನರೇಂದ್ರ ಮೋದಿಯ ಹಿನ್ನೆಲೆಯಷ್ಟೇ ಪ್ರಶ್ನಾರ್ಹ. 1964ರಲ್ಲಿ ಈತ ಭಾರತೀಯ ಇತಿಹಾಸ ಪುನರ್ರಚನೆಗೆ ಎಂದೇ ಒಂದು ಸಂಘಟನೆ ಕಟ್ಟಿದರು. 2007ರ ಡಿಸೆಂಬರ್ 4ರಂದು ಪುಣೆಯಲ್ಲಿ ನಿಧನರಾದರು.

ಈತ ಭಾರತದ ಕೋಮುಸಾಮರಸ್ಯಕ್ಕೆ ಬಹಳಷ್ಟು ಹಾನಿಮಾಡಿದ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಕೆಲವು ಉದಾಹರಣೆಗಳು ಎಂದರೆ: ತಾಜ್‌ಮಹಲ್ ವಾಸ್ ಎ ರಾಜ್‌ಪೂತ್ ಪ್ಯಾಲೇಸ್, ಇಂಡಿಯನ್ ಕ್ಷತ್ರಿಯಾಸ್ ಒನ್ಸ್ ರೂಲ್ಡ್ ಬಾಲಿ ಟು ಬಾಲ್ಟಿಕ್ ಎಂಡ್ ಕೊರಿಯಾ ಟು ಕಾಬಾ, ಹೂ ಸೇಸ್ ಅಕ್ಬರ್ ವಾಸ್ ಗ್ರೇಟ್?, ಭಾರತ್ ಮೇ ಮುಸ್ಲಿಂ ಸುಲ್ತಾನ್, ಲಕ್ನೋಸ್ ಇಮಾಂಬರಾಸ್ ಆರ್ ಹಿಂದೂ ಪ್ಯಾಲೇಸಸ್, ಡೆಲ್ಲೀಸ್ ರೆಡ್ ಫೋರ್ಟ್ ಈಸ್ ಹಿಂದೂಸ್ ಲಾಲ್ ಕೋಟ್, ಕ್ರಿಶ್ಚಿಯಾನಿಟಿ ಈಸ್ ಕೃಷ್ಣ ನೀತಿ, ಫತೇಪುರ್ ಸಿಕ್ರಿ ಏಕ್ ಹಿಂದೂ ನಗರಿ -ಇತ್ಯಾದಿ. ಇವೇ ಇಂದು ವಾಟ್ಸಾಪ್ ವಿಶ್ವವಿದ್ಯಾಲಯದ ಇತಿಹಾಸ ಪಠ್ಯಪುಸ್ತಕಗಳು.

ಈತನ “ಮಹಾನ್” ಸಂಶೋಧನೆಗಳಲ್ಲಿ ಮುಖ್ಯವಾದವುಗಳು ಎಂದರೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಹಿಂದೂ ಧರ್ಮದ ಪ್ರಭಾವದಿಂದ ಹುಟ್ಟಿದವು ಎಂದೂ, ಏಸುಕ್ರಿಸ್ತ ಯೌವನದಲ್ಲಿ ಭಾರತಕ್ಕೆ ಬಂದಿದ್ದ ಎಂದೂ, ಪೋಪ್ ಎಂಬುದು ವೇದಕಾಲದ ಹುದ್ದೆ ಎಂದೂ, ವ್ಯಾಟಿಕನ್ ಹೆಸರು ಸಂಸ್ಕೃತದ ವಾಟಿಕಾ ಪದದಿಂದ ಬಂದಿದೆ ಎಂದೂ, ಅಯರ್‌ಲ್ಯಾಂಡ್ ಹಿಂದೆ ಐಯ್ಯರ್ ಬ್ರಾಹ್ಮಣರಿಗೆ ಸೇರಿತ್ತು ಎಂದೂ, ಮಕ್ಕಾದ ಕಾಬಾ, ಭಾರತದ ತಾಜ್‌ಮಹಲ್, ಬ್ರಿಟನಿನ ವೆಸ್ಟ್‌ಮಿನಿಸ್ಟರ್ ಅಬೇ ಮೊದಲು ಶಿವ ದೇವಾಲಯಗಳಾಗಿದ್ದವು ಎಂದು ಹೇಳಿದ್ದು. ಇವೆಲ್ಲವೂ ಹುಚ್ಚುತನದ ಪರಮಾವಧಿ ಎಂದು ಜಗತ್ತಿನ ಪ್ರಮುಖ ಇತಿಹಾಸಕಾರರು ಈಗಾಗಲೇ ಹೇಳಿದ್ದಾರೆ.

ಇಡೀ ಜಗತ್ತೇ ಪುರಾತನ ಹಿಂದೂ ಸಾಮ್ರಾಜ್ಯವಾಗಿತ್ತು ಎಂಬ ಭ್ರಮೆಯಲ್ಲಿದ್ದ ಓಕ್‌ಗೆ ಎಲ್ಲಾ ಹೆಸರು, ಸ್ಥಳಗಳಲ್ಲಿ ಹಿಂದೂತ್ವವೇ ಕಾಣುತ್ತಿತ್ತು. ಎಲ್ಲಾ ಇಸ್ಲಾಮಿಕ್ ಕಟ್ಟಡಗಳು, ಸ್ಮಾರಕಗಳು ಈತನಿಗೆ ಹಿಂದೂಗಳು ಕಟ್ಟಿದವುಗಳಂತೆ ಕಾಣುತ್ತಿದ್ದವು. ನಿಜವಾದ ಇತಿಹಾಸ ಬರೆಯಲು ಹಿಂದಿನ ದಾಖಲೆಗಳು, ಶಾಸನಗಳು, ಬರಹಗಳು, ಉಲ್ಲೇಖಗಳು, ಪ್ರವಾಸಿ ಕಥನಗಳು, ಉತ್ಖನನದಲ್ಲಿ ದೊರೆತ ವಸ್ತುಗಳು, ಸಮಕಾಲೀನ ಅಧ್ಯಯನಗಳು, ಕಾಲ ನಿರ್ಣಯಕ್ಕೆ ಕಾರ್ಬನ್‌ ಡೇಟಿಂಗ್‌ನಂತಾ ಪರೀಕ್ಷೆಗಳು, ಸಮಕಾಲೀನ ಅಧ್ಯಯನಗಳು ಇತ್ಯಾದಿಗಳ ಆಳವಾದ ಅಧ್ಯಯನ ಮಾಡಬೇಕಾಗುತ್ತದೆ. ಅದನ್ನು ಇತರ ಇತಿಹಾಸಕಾರರು ಒಪ್ಪಬೇಕಾಗುತ್ತದೆ. ಇದು ಯಾವುದನ್ನೂ ಮಾಡದ ಓಕ್, ಒಂದು ಪದ, ಹೆಸರು- ಸಂಸ್ಕೃತದ ಪದ, ಹೆಸರಿಗೆ ಹತ್ತಿರವಾಗಿದ್ದರೆ ಸಾಕು, ಅದನ್ನು ಹಿಂದೂ ಎನ್ನುವ ಹುಚ್ಚುತನ ಹತ್ತಿಸಿಕೊಂಡಿದ್ದರು.

ಅವರು ಬರೆದಿದ್ದ 13 ಪುಟಗಳ ಒಂದು ಪುಸ್ತಿಕೆಯಲ್ಲಿ ಕಾಬಾ ಶಿವ ದೇವಾಲಯ ಎಂದೂ, ಅರಬರು ವೇದದ ಹಿನ್ನೆಲೆ ಹೊಂದಿದ್ದರು ಎಂದೂ, ರಾಜಾ ವಿಕ್ರಮಾದಿತ್ಯನ ಉಲ್ಲೇಖ ಇರುವ ಬರಹ ಕಾಬಾದ ಒಳಗೆ ಇದೆಯೆಂದೂ ಬರೆದಿದ್ದರು. ಇದಕ್ಕೆ ಆಧಾರಗಳಿಲ್ಲವೆಂದೂ, ಅಲ್ಲಿ ಉಲ್ಲೇಖಿಸಲಾದ ರಾಜರು ಮತ್ತು ಕಾಲಕ್ಕೆ ಯಾವುದೇ ತಾಳಮೇಳವಿಲ್ಲ ಎಂದೂ ಇತಿಸಾಸಜ್ಞರು ಸಾಬೀತುಪಡಿಸಿದ್ದಾರೆ.

ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿ ಓಕ್ ಹೇಳಿದ್ದೆಲ್ಲವನ್ನೂ ದೊಡ್ಡ ದೊಡ್ಡ ಇತಿಹಾಸಜ್ಞರು ಚಿಂದಿ ಮಾಡಿ, ಅವರನ್ನು ಒಂದು ಹಾಸ್ಯದ ವಸ್ತುವನ್ನಾಗಿ ಮಾಡಿದ್ದಾರೆ. ಕೆಲವರು ಆತನನ್ನು ಕ್ರ್ಯಾಕ್‌ಪಾಟ್ ಎಂದರೆ ತಲೆ ಕೆಟ್ಟವ ಎಂದೂ ಬಣ್ಣಿಸಿದ್ದಾರೆ. ಕೆಲವೇ ತಮಾಷೆಯ ವಿಷಯಗಳನ್ನು ಉಲ್ಲೇಖಿಸಬೇಕು ಎಂದರೆ, ವೆಟಿಕನ್ ಎಂದರೆ, ಸಂಸ್ಕೃತದ ವಾಟಿಕಾ ಎಂದರೆ ಗುರುಕುಲ, ಕ್ರಿಶ್ಚಿಯಾನಿಟಿ ಎಂದರೆ ಕೃಷ್ಣ ನೀತಿ, ಅಬ್ರಹಾಂ ಎಂದರೆ ಬ್ರಹ್ಮ ಇತ್ಯಾದಿ.

ತಾಜ್‌ಮಹಲನ್ನು ಕಟ್ಟಿಸಲು ಶಹಜಹಾನ್ ರಾಜಪೂತ ದೊರೆ ಜೈಸಿಂಗ್‌‌ನಿಂದ ಜಮೀನು ಖರೀದಿಸಿದ್ದನು ಎಂದು ಪ(ಬಾ)ದ್‌ಶಾನಾಮಾ ಎಂಬ ದಾಖಲೆಯಲ್ಲಿರುವ ಬರೆದಿದೆ ಎಂಬುದನ್ನೇ ತಪ್ಪಾಗಿ ಅನ್ವಯಿಸಿ, ಅಲ್ಲಿ ಶಿವಮಂದಿರ ಇತ್ತು, ತಾಜ್‌ಮಹಲ್ ಒಳಗೆ ಶಿವಲಿಂಗವಿದೆ ಇತ್ಯಾದಿ ಸುಳ್ಳುಗಳನ್ನು ಬರೆದ ಓಕ್, ತಾನು ಹೇಳಿದ್ದು ತಪ್ಪೆಂದು ಸಾಬೀತಾದಾಗ ಹಲವು ಬಾರಿ ಹೊಸ ಸುಳ್ಳುಗಳನ್ನು ಹೇಳಿದ್ದಾರೆ. ಆದರೆ, ಹಿಂದೂತ್ವದ ಪಡೆಗಳು ಅದೇ ಸಾಬೀತಾದ ಸುಳ್ಳುಗಳನ್ನು ಹಿಡಿದು ಮತ್ತೆ ಮತ್ತೆ ನ್ಯಾಯಾಲಯದ ಮೆಟ್ಟಲೇರುತ್ತಿವೆ, ಪ್ರಚಾರ ಮಾಡುತ್ತಿವೆ.

ಓಕ್ ಸ್ವತಃ ತಾಜ್‌ಮಹಲ್ ವಿಷಯದಲ್ಲಿ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದರು. ಆಗ ಅವರ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಾಲಯವು, ಅವರ ಬಟ್ಟೆಯೊಳಗೆ ಜೇನುನೊಣ ಹೊಕ್ಕಿದೆ ಎಂದು ತಮಾಷೆ ಮಾಡಿತ್ತು. ಇಂದೂ ಕೂಡಾ ಬಟ್ಟೆಯೊಳಗೆ ಕೋಮುವಾದ, ಪೊಳ್ಳು ರಾಷ್ಟ್ರೀಯತೆ, ಉಗ್ರವಾದದಂತಾ ಹಲವಾರು ಜೇನುನೊಣಗಳು ಹೊಕ್ಕಂತೆ ವರ್ತಿಸುತ್ತಿರುವ ಸಂಘಪರಿವಾರದವರು, ತಮ್ಮ ಗುರು ಓಕ್‌ ಅವರಿಂತಲೂ ಹುಚ್ಚಾಗಿ ವರ್ತಿಸುತ್ತಿದ್ದಾರೆ. ಒಂದೇ ಸುಳ್ಳನ್ನು ಸಾವಿರ ಸಲ ಹೇಳಿ ಸತ್ಯ ಮಾಡುವ ಗೊಬೆಲ್ಸ್ ತಂತ್ರವನ್ನು ವಿಫಲಗೊಳಿಸಲು- ನಿರಂತರವಾಗಿ ಈ ಸುಳ್ಳುಗಳನ್ನು ಬಯಲುಗೊಳಿಸಬೇಕಾಗಿದೆ. ಸಾಮಾನ್ಯ ಜನರು ವ್ಯವಸ್ಥಿತ ಮತ್ತು ಆಕರ್ಷಕವಾದ ಕಟ್ಟುಕತೆಗಳನ್ನು ಸುಲಭವಾಗಿ ನಂಬುವುದರಿಂದ ಇದನ್ನು ಯಾರೂ ಹಗುರವಾಗಿ ಪರಿಗಣಿಸುವಂತಿಲ್ಲ.

“ಎಲ್ಲರ ಕನ್ನಡ” ಎಂದರೆ ಯಾವ ಕನ್ನಡ? : “ಬೊಗಸೆಗೆ ದಕ್ಕಿದ್ದು… 21
ಕನ್ನಡದ ಹೆಗಲೇರಿರುವ ಸಂಸ್ಕೃತವನ್ನು ಕೆಳಗಿಳಿಸಬೇಕು; ಹಲವಾರು ಸಂಸ್ಕೃತ ಪದಗಳನ್ನು ಗುಡಿಸಿಹಾಕಿ ಭಾಷೆಯನ್ನು ಸರಳಗೊಳಿಸಬೇಕು ಎಂಬ ಕುರಿತು ಎರಡು ಮಾತಿಲ್ಲ. ಅದರೆ, ಕೆಲವರು ಮುನ್ನೆಲೆಗೆ ತರಲು ಹೆಣಗುತ್ತಿರುವ ಕನ್ನಡದ ರೂಪವನ್ನು “ಎಲ್ಲರ ಕನ್ನಡ” ಎನ್ನಲು ಸಾಧ್ಯವೆ? ಎಲ್ಲರು ಎಂದರೆ ಯಾರ್ಯಾರು? ಈ ಕಲ್ಪನೆಯಲ್ಲೇ ತಪ್ಪಿದೆಯೆ?

ಸಂಸ್ಕೃತವೇ ತುಂಬಿರುವ “ಶಿಷ್ಟ” ಕನ್ನಡವನ್ನು ಸರಳಗೊಳಿಸಿ, ಸಂಸ್ಕೃತದ ಬದಲು ಕನ್ನಡ ಪದಗಳನ್ನು ಬಳಸಿ ಬರೆಯುವ ಒಂದು ಕನ್ನಡವನ್ನು ಕೆಲವರು ಚಾಲ್ತಿಗೆ ತರುತ್ತಿದ್ದಾರೆ. ಜೊತೆಗೆ ಮಹಾಪ್ರಾಣಗಳು, ಅನುಸ್ವಾರ, ವಿಸರ್ಗ, (ಅಂ, ದುಃ ಇತ್ಯಾದಿ), ಐ, ಔ ಇತ್ಯಾದಿಗಳನ್ನು ಬಿಟ್ಟು, ಬರೆಯುವ ರೂಪವನ್ನು ಬದಲಿಸಿ ತಮಗೆ ಸರಿಕಂಡಂತೆ ಕನ್ನಡ ಬರೆಯಲು ಆರಂಭಿಸಿದ್ದಾರೆ. ಕೆಲವರು ಯಾರಿಗೂ ಪರಿಚಯವಿಲ್ಲದ, ಸತ್ತುಹೋದ ಹಳೆಗನ್ನಡ ಪದಗಳನ್ನೂ, ಸ್ಥಳೀಯವಾಗಿ ಮಾತ್ರ ಬಳಕೆಯಲ್ಲಿರುವ ಆಡುನುಡಿಗಳನ್ನೂ ಬಳಸುತ್ತಿದ್ದಾರೆ. ಇದು ಸಾಮಾನ್ಯವಾಗಿ ಕಂಡುಬರುತ್ತಿರುವುದು ಇಲೆಕ್ಟ್ರಾನಿಕ್ ಸಾಮಾಜಿಕ ಮಾಧ್ಯಮಗಳಲ್ಲಿ. ಇದನ್ನು ಅವರು “ಎಲ್ಲರ ಕನ್ನಡ” ಎಂದು ಕರೆಯುತ್ತಿದ್ದಾರೆ. ಹಳೆರೀತಿಯಲ್ಲಿ ಅಂದರೆ, ಈಗ ಚಾಲ್ತಿಯಲ್ಲಿರುವ ರೀತಿಯಲ್ಲಿ ಬರೆಯುತ್ತಿರುವವರಿಗೆ ಇದನ್ನು ಓದುವುದು ಬರೆಯುವುದು ಸ್ವಲ್ಪ ಕಷ್ಟವಾಗುತ್ತಿದೆ. ಅದರಲ್ಲೂ ಕನ್ನಡ ತಾಯಿನುಡಿಯಲ್ಲದ, ಶಾಲೆಯಲ್ಲಿ ಕನ್ನಡ ಕಲಿತವರಿಗೆ. ಹಾಗಿರುವಾಗ, ಇದನ್ನು ಕನ್ನಡದ ಇನ್ನೊಂದು ರೂಪ ಎಂದು ಸೇರಿಸಿಕೊಳ್ಳಬಹುದೇ ಹೊರತು, ಇದು “ಎಲ್ಲರ ಕನ್ನಡ” ಹೇಗಾಗುತ್ತದೆ? ನಾವು ಕನ್ನಡವನ್ನು ಸಂಸ್ಕೃತದ ಬಿಗಿ ಹಿಡಿತದಿಂದ ಬಿಡಿಸಿ, ಅದನ್ನು ಸರಳಗೊಳಿಸಬೇಕು ನಿಜ; ಆದರೆ, ಹೀಗೊಂದು “ಎಲ್ಲರ ಕನ್ನಡ” ಇರಲು ಸಾಧ್ಯವೆ?

ಉದಾಹರಣೆಗೆ ಮಾವನ್ನೇ ತೆಗೆದುಕೊಳ್ಳೋಣ. ಮಾವಿನಲ್ಲಿ ನೆಕ್ಕರೆ, ಮುಂಡಪ್ಪ, ಅಲ್ಫೋನ್ಸೊ, ನೀಲಂ, ಆಪೂಸು, ರಸಪುರಿ, ತೋತಾಪುರಿ ಎಂದು ಸಾವಿರ ಸಾವಿರ ಜಾತಿಗಳಿವೆ. ಹೇಳಲು ಹೆಸರೇ ಇಲ್ಲದ, ಹುಳಿ, ಸಿಹಿ, ವಾಸನೆ, ಘಾಟು, ಸೊನೆಯ ಕಾಟುಮಾವುಗಳೂ ಇವೆ. ಬಣ್ಣ, ಗಾತ್ರ, ಆಕಾರ, ರುಚಿ, ವಾಸನೆ, ಒಗರು ಇವಲ್ಲವೂ ಒಂದಕ್ಕಿಂತ ಒಂದು ಬೇರೆಯೇ! ಇವುಗಳಲ್ಲಿ ಯಾವುದು ಎಲ್ಲರ ಮಾವು? ತೊನ್ನೂರು, ಕಜೆ, ಜಯ, ಐಆರ್, ದೀರ್ಸಾಲೆ, ಗಂಧಸಾಲೆ, ಬಾಸ್‌ಮತಿ… ಜೊತೆಗೆ ಬೆಳ್ತಿಗೆ, ಕುಚ್ಚಲು, ಅರೆ ಬೆಳ್ತಿಗೆ ಹೀಗೆ… ಯಾವುದು ಎಲ್ಲರ ಅಕ್ಕಿ, ಎಲ್ಲರ ಭತ್ತ?

ಯಾವುದೇ ಭಾಷೆಯೂ ಅಷ್ಟೇ. ಅದು ಪ್ರದೇಶದಿಂದ ಪ್ರದೇಶಕ್ಕೆ, ಕೆಲವೇ ಮೈಲಿಗಳ ಅಂತರದಲ್ಲಿ ಕೊಂಚಕೊಂಚವೇ ಬದಲಾಗುತ್ತಾ, ಬದಲಾಗುತ್ತಾ ಎರಡು ದೂರ ಪ್ರದೇಶಗಳ ಮಾತುಗಳು ಒಬ್ಬರಿನ್ನೊಬ್ಬರಿಗೆ ಅರ್ಥವೇ ಆಗದಿರುವುದನ್ನು ನೋಡುತ್ತೇವೆ. ಅದರ ರಾಗ, ಲಯ, ಬಳಸುವ ಪದಗಳು, ಅವುಗಳ ಬಳಕೆಯ ಕ್ರಮ, ವಾಕ್ಯ ರಚನೆ ಅಷ್ಟೇ ಏಕೆ, ಮೂಲ ವ್ಯಾಕರಣವೂ ಎದ್ದುಕಾಣುವಷ್ಟು ಬದಲಾಗಿರುತ್ತದೆ. ಕೆಲವೊಮ್ಮೆ ಒಂದು ಕಡೆಯಲ್ಲಿ ಸಾಮಾನ್ಯವಾಗಿ ಬಳಸುವ ಪದಗಳು ಇನ್ನೊಂದು ಕಡೆಯಲ್ಲಿ ಅಶ್ಲೀಲ, ಒರಟು ಅರ್ಥವನ್ನೂ ನೀಡಬಹುದು. ಜೊತೆಗೆ ಒಂದು ಪ್ರದೇಶದ ಭೌಗೋಳಿಕ ಪರಿಸರವು, ಅಲ್ಲಿನ ನಿತ್ಯಜೀವನದ ವ್ಯವಹಾರಗಳು ಅದರದ್ದೇ ಆದ ಪದಗಳ ಕಣಜವನ್ನೇ ಹುಟ್ಟುಹಾಕಿರಬಹುದು. ಮಲೆನಾಡಿನ, ಕರಾವಳಿ, ಬಯಲು ಸೀಮೆಯ- ಕಾಡು, ಕಡಲು, ಬಯಲುಗಳೇ ತಮ್ಮದೇ ಆದ ನೂರಾರು ಪದಗಳನ್ನು ಹುಟ್ಟುಹಾಕಿವೆ.

ಅದೇ ರೀತಿಯಲ್ಲಿ ಗಡಿಪ್ರದೇಶಗಳಲ್ಲಿ ಕನ್ನಡವು ನೆರೆಯ ಭಾಷೆಗಳಿಂದ ಕೊಡುಕೊಳ್ಳುವಿಕೆಯನ್ನು ನಡೆಸುತ್ತಲೇ ಇವೆ. ಅವುಗಳ ಪ್ರಭಾವ ದಟ್ಟವಾಗಿ ಕಾಣಬಹುದು. ಉದಾಹರಣೆಗ ಶೈಲಿ ಮತ್ತು ಪದಬಳಕೆಯಿಂದಲೇ ಕಾಸರಗೋಡಿನ ಕನ್ನಡ ಪತ್ರಕರ್ತರನ್ನು ಗುರುತಿಸಬಹುದು. ಅದೇ ರೀತಿಯಲ್ಲಿ ತುಳು, ಕೊಂಕಣಿ, ಬ್ಯಾರಿ, ಅರೆಬಾಸೆ, ಕುಂದಗನ್ನಡ, ಹವ್ಯಕ, ಮಲಯಾಳಂ, ಮುಂಬಯಿ ಸಂಪರ್ಕದ ಹಿಂದಿ, ಇಂಗ್ಲೀಶ್ ಹೀಗೆ ನಿತ್ಯವೂ ಹಲವು ಭಾಷೆಗಳು ಕಿವಿಗೆ ಬೀಳುವ ದಕ್ಷಿಣ ಕರಾವಳಿಯ ಜಿಲ್ಲೆಗಳಲ್ಲಿ ಕನ್ನಡದ ಮೇಲೆ ಈ ಭಾಷೆಗಳ ಪ್ರಭಾವ ಎದ್ದು ಕಾಣುತ್ತದೆ. ಮೇಲಾಗಿ ಇಲ್ಲಿ ಕನ್ನಡ ಓದು, ಬರಹ, ಮಾತುಬಲ್ಲವರು ಬಳಸುವ ಕನ್ನಡವು ಹೆಚ್ಚಾಗಿ ಶಾಲೆಗಳಲ್ಲಿ ಕಲಿಸುವ ಸಂಸ್ಕೃತ ತುಂಬಿದ ಪುಸ್ತಕದ ಕನ್ನಡದ ಜೊತೆಗೆಯೇ ತನ್ನದೇ ಆದ ಪ್ರಾದೇಶಿಕ ಸೊಗಡನ್ನು ಬೆಳೆಸಿಕೊಂಡಿದೆ ಎಂಬುದನ್ನು ಗುರುತಿಸಬೇಕು. ಇಲ್ಲಿ ಬಳಸುವ ಕನ್ನಡ ಪದಗಳು ಬೇರೆ ಕಡೆಗಳವರಿಗೆ ಅರ್ಥವಾಗದು. (ಉದಾ: ಅವನದ್ದೆಂತ ಸಾವು ಮಾರ್ರೆ? ಒಟ್ರಾಸಿ ಮಾತಾಡ್ತಾನೆ.) ಈ ಒಟ್ರಾಸಿ ಕಲಬುರ್ಗಿಯವರಿಗೆ ಗೊತ್ತಾಗುವುದೆ?

ಈ ಭಾಷೆಗಳು ಕನ್ನಡದ ಉಚ್ಚಾರಣೆಯಲ್ಲಿಯೂ ಪ್ರಭಾವ ಬೀರಿರುವುದನ್ನು ನೋಡಬಹುದು. “ಎಲ್ಲರ ಕನ್ನಡ”ದ ಪ್ರತಿಪಾದಕರ ನ್ಯಾಯಯುತ ದೂರೆಂದರೆ, ಹಳ್ಳಿಗರಿಗೆ ಮಹಾಪ್ರಾಣ ಮತ್ತು ಕೆಲವು ಅಕ್ಷರಗಳನ್ನು ಉಚ್ಚರಿಸಲು ಆಗುವುದಿಲ್ಲ ಎಂಬುದು. ಬ್ರಾಹ್ಮಣರ ತುಳು ಬಿಟ್ಟರೆ “ಳ” ಅಕ್ಷರವನ್ನೇ ಬಳಸದ ಹೆಚ್ಚಿನ ತುಳುವರಿಗೆ “ಳ” ಉಚ್ಚರಿಸಲು ಬರುವುದಿಲ್ಲ. ಆವರು ಮಾತಿನಲ್ಲಿ “ಲ” ಬಳಸುತ್ತಾರೆ. ಅದೇ ರೀತಿ “ಶ”ದ ಬದಲು “ಸ”, “ಣ”ದ ಬದಲು “ನ” ಬಳಸುವುದು ಹೆಚ್ಚು. ಅದೇ ರೀತಿಯಲ್ಲಿ, ಬ್ಯಾರಿಗಳು ಅದಲುಬದಲು ಎಂಬಂತೆ “ಲ”ದ ಬದಲು “ಳ” ಮತ್ತು “ಸ”ದ ಬದಲು “ಶ”, “ನ”ದ ಬದಲು “ಣ” ಬಳಸುವುದನ್ನು ಹೆಚ್ಚಾಗಿ ಕಾಣಬಹುದು. ಅಲ್ಲದೇ ಅವರಲ್ಲಿ ಮಹಾಪ್ರಾಣದ ಅನಗತ್ಯ ಬಳಕೆ ಸ್ವಲ್ಪ ಹೆಚ್ಚು. ಮಲಯಾಳಂ ಪ್ರಭಾವ ಇದಕ್ಕೆ ಕಾರಣವಿರಬಹುದು.

ಕೊಂಕಣಿಗಳು ಸ್ವಲ್ಪ ಅತಿ ಎನಿಸುವಷ್ಟು ಪುಸ್ತಕದ ಕನ್ನಡ ಮಾತನಾಡುತ್ತಾರೆ. ಜಿಎಸ್‌ಬಿ, ಸಾರಸ್ವತರು ಮತ್ತು ಕ್ರೈಸ್ತರು ಮಾತಾಡುವ ಕೊಂಕಣಿಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ, ಅದರ ದ್ರಾವಿಡವಲ್ಲದ ವ್ಯಾಕರಣದ ಪ್ರಭಾವ ಅವರ ಕನ್ನಡದ ಮೇಲೂ ಆಗುತ್ತದೆ. ಉದಾರಣೆಗೆ, ಕೊಂಕಣಿಯ ವಿಭಕ್ತಿಗಳಲ್ಲಿ “ಅವನಿಗೆ” ಮತ್ತು “ಅವನನ್ನು” ಎಂಬ ವ್ಯತ್ಯಾಸವಿಲ್ಲ. ಅದುದರಿಂದ ಅವರು “ಅವನನ್ನು ಕರೆ’ ಎಂದು ಹೇಳುವುದಿಲ್ಲ; “ಅವನಿಗೆ ಕರೆ” ಎಂದೇ ಹೇಳುತ್ತಾರೆ. (ಸಾಮಾನ್ಯವಾಗಿ ಅವನನ್ನು ಕರೆ, ಅವನಿಗೆ ಕೊಡು ಎಂದಿರಬೇಕಲ್ಲವೆ?) ಮರಾಠಿ ಪ್ರಭಾವದ ಪ್ರದೇಶಗಳಲ್ಲಿಯೂ ಇದನ್ನೇ ಗಮನಿಸಬಹುದು. ತಮಿಳು, ತೆಲುಗು ಗಡಿಗಳಲ್ಲೂ ಇಂತಹ ಪ್ರಭಾವ ಇದೆ. ಉದಾಹರಣೆಗೆ “ಕೇಳಿದೆ” ಎಂದು ಹೇಳಬಹುದಾದಲ್ಲಿ “ಕೇಳಲ್ಪಟ್ಟೆ” ಎಂಬ ಪ್ರಯೋಗವನ್ನು ನೋಡಬಹುದು.

ಇಷ್ಟವಾದ ಪುಸ್ತಕಗಳನ್ನು ಮತ್ತೆ ಮತ್ತೆ ಓದುವ ಪರಿಪಾಟದಂತೆ ಇತ್ತೀಚೆಗೆ ಮೂರು ಕನ್ನಡ ಪುಸ್ತಕಗಳನ್ನು ಓದಿದೆ. ಆದರೆ, ಈ ಬಾರಿ ಓದಿದ್ದು ಮಾತ್ರ ಸರಳಗನ್ನಡ ಮತ್ತು ಪ್ರಾದೇಶಿಕ ಭಾಷಾ ವೈವಿಧ್ಯವನ್ನು ಗಮನದಲ್ಲಿ ಇಟ್ಟುಕೊಂಡು. ಅವುಗಳಲ್ಲಿ ಒಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ “ಪಂಪ ಭಾರತ” ಅಥವಾ “ವಿಕ್ರಮಾರ್ಜುನ ವಿಜಯಂ”. ಇದರ ಜೊತೆಗೆ ಅನಂತ ರಂಗಾಚಾರ್ ಅವರ ಸಂಸ್ಕೃತಮಯ ಕನ್ನಡ ವಿವರಣೆಯಿದೆ.

ಕನ್ನಡದ ಆದಿಕವಿ ಎನ್ನಲಾಗುವ ಪಂಪನ ಕಾವ್ಯದಲ್ಲೇ ಹೇರಳವಾಗಿ ಸಂಸ್ಕೃತ ತುಂಬಿರುವಾಗ ಮೂಲಕನ್ನಡ ಹುಡುಕಲು ನಾವು ಎಷ್ಟು ಹಿಂದೆ ಹೋಗಬೇಕಾದೀತು? ಅವನೇ ತನ್ನನ್ನು ಕವಿತಾಗುಣಾರ್ಣವನೆಂದು ಸಂಸ್ಕೃತದಲ್ಲಿಯೇ ಹೇಳಿಕೊಳ್ಳುತ್ತಾನೆ. ಅವನ ಅಧ್ಯಾಯಗಳೂ ಪ್ರಥಮಾಶ್ವಾಸಂ, ದ್ವಿತೀಯ… ಎಂದು ಸಂಸ್ಕತದಲ್ಲಿಯೇ ಆರಂಭವಾಗುತ್ತದೆ. ಪಂಪನು “ಉತ್ತಮವಾದ ಕಾವ್ಯದ ತಿರುಳನ್ನೂ, ತನ್ನ ಕಾವ್ಯದ ಮೂಲತತ್ವವನ್ನೂ ಶ್ರುತಪಡಿಸಿರುವುದು” ಹೀಗೆ:
ಮೃದು ಪದಗತಿಯಿಂ ರಸಭಾ
ವದ ಪೆರ್ಚಿಂ ಪಣ್ಯವನಿತೆಯೊಲ್ ಕೃತಿಸೌಂದ
ರ್ಯದ ಚಾತುರ್ಯದ ಕಣಿಯಿನೆ
ವಿದಗ್ಧಬುಧಜನಮನ್, ಆಲೆಯಲೇವೇಡಾ

ಈ ಕನ್ನಡ ನಿಮಗೇನಾದರೂ ಅರ್ಥವಾಯಿತೆ? ಪಂಪ, ರನ್ನ, ಕುಮಾರವ್ಯಾಸ, ರಾಘವಾಂಕ… ಹೀಗೆ… ಹಳೆಗನ್ನಡ ಕಾವ್ಯಗಳು ಕುತೂಹಲಕಾರಿಯಾದರೂ, ಈಗ ಮರೆಯಾಗಿರುವ ಕನ್ನಡ ಪದಗಳನ್ನು ಹೊಂದಿವೆಯಾದರೂ, ಸಂಸ್ಕೃತಮಯ ವಿವರಣೆಗಳ ಜೊತೆ, ಬದಿಯಲ್ಲಿ ಡಿಕ್ಷನರಿ ಇಟ್ಟುಕೊಂಡು ಅರ್ಥಮಾಡಿಕೊಳ್ಳಬೇಕಾದ ಕಾವ್ಯಗಳಿಂದ ಕನ್ನಡದ ಪದಗಳನ್ನು ಹೆಕ್ಕಿ ತಂದು, ಸಂಸ್ಕೃತ ಪದಗಳ ಜಾಗದಲ್ಲಿ ಕೂರಿಸಿ ಸಿದ್ಧಪಡಿಸಿದ ಕನ್ನಡವು “ಎಲ್ಲರ ಕನ್ನಡ” ಆಗುವುದಾದರೂ ಹೇಗೆ?

ಇನ್ನೊಂದು ಪುಸ್ತಕ ದೇವನೂರ ಮಹದೇವರ “ದ್ಯಾವನೂರು ಮತ್ತು ಒಡಲಾಳ”. ಅವರು “ಕುಸುಮಬಾಲೆ” ಬರೆದಾಗ, ಅದು ಅರ್ಥವಾಗುವುದಿಲ್ಲ; ಅದನ್ನು ಮತ್ತೆ ಕನ್ನಡದಲ್ಲಿ ಬರೆಯಬೇಕೆಂದು ಹಂಗಿಸಿದವರು ಇದ್ದಾರೆ. ನಂಜನಗೂಡು ಕಡೆಯ ನೆಲದ ಕನ್ನಡ ದ್ಯಾವನೂರು ಮತ್ತು ಒಡಲಾಳದಲ್ಲಿದೆ. ಅದನ್ನು ಕನ್ನಡವಲ್ಲ ಎಂದು ಹೇಳಲಾದೀತೆ? ಅಲ್ಲಿ ಬರುವ ಅದ್ದರಿಸು, ಅವಚವಿ, ಕಲಕೆತ್ತಿ, ಬೆಂಮನ್ಸೆ ಮುಂತಾದ ಅಚ್ಚಗನ್ನಡ ಪ್ರಾದೇಶಿಕ ಪದಗಳನ್ನು ಎತ್ತಿತಂದು ಸಂಸ್ಕೃತ ಪದಗಳ ಜಾಗದಲ್ಲಿ ಕೂರಿಸಿದರೆ ಅದು “ಎಲ್ಲರ ಕನ್ನಡ” ಆಗುವುದೇ?

ಮೂರನೆಯದು ಯಶವಂತ ಚಿತ್ತಾಲರ “ಐವತ್ತೊಂದು ಕತೆಗಳು”. ಉತ್ತರ ಕನ್ನಡ, ಧಾರವಾಡ, ಮುಂಬೈಯಲ್ಲಿ ಮೊದಲು ಕನ್ನಡದಲ್ಲಿ, ನಂತರ ಇಂಗ್ಲೀಷಿನಲ್ಲಿ ತಾಂತ್ರಿಕ ಶಿಕ್ಷಣ ಪಡೆದ, ಕೊಂಕಣಿ ತಾಯಿನುಡಿಯ, ತಾವೇ ಹೇಳಿಕೊಂಡಂತೆ ಮುಂಬಯಿ ನಗರದಲ್ಲಿ ಕನ್ನಡ ಮಾತನಾಡುವವರ ಒಡನಾಟಕ್ಕೆ ಸದಾ ಹಾತೊರೆಯುತ್ತಿದ್ದ ಯಶವಂತ ಚಿತ್ತಾಲರ ಕತೆಗಳಲ್ಲಿ ಜೀವತಳೆಯುವ ಉತ್ತರ ಕನ್ನಡದ ಭಾಷೆ ಎಲ್ಲಾ ಪ್ರದೇಶಗಳ ಸಾಮಾನ್ಯ ಕನ್ನಡಿಗರಿಗೆ ಅರ್ಥವಾಗಬಹುದೆ? ಸಲಗಿ, ಚೂಳಿ, ತರ್ತೆ, ಪೇಂಟಿ, ಮೀನ ಆಸೆ, ನಾಣಿಗೆ ಇತ್ಯಾದಿಗಳ ಜೊತೆಗೆ- ಕೊಂಕಣಿ, ಮರಾಠಿ ಪ್ರಭಾವದ ಕನ್ನಡದ ಪದಗಳನ್ನು ಸಂಸ್ಕೃತ ಪದಗಳ ಜಾಗದಲ್ಲಿ ಕೂರಿಸಿದರೆ, ಅದು “ಎಲ್ಲರ ಕನ್ನಡ”ವಾದೀತೆ? ಇಲ್ಲಿನ ಕನ್ನಡದಲ್ಲಿ ಮೊದಲೇ ಹೇಳಿದಂತೆ “ಅವನಿಗೆ”, “ಅವನನ್ನು’ ಎಂಬುದಕ್ಕೆ ಒಟ್ಟಾಗಿ “ಅವನಿಗೆ’ ಎಂದೇ ಬಳಸಲಾಗುತ್ತದೆ. ಅಲ್ಲದೇ “ಅಲ್ಲಿ ಇರುವ” ಎಂಬುದನ್ನು ಭೂತಕಾಲ ಎಂಬಂತೆ “ಅಲ್ಲಿ ಇದ್ದ” ಎಂದು ಹೇಳಲಾಗುತ್ತದೆ. ಅಂದರೆ, ವ್ಯಾಕರಣದಲ್ಲಿಯೂ ಬೇರೆತನ.

ಈ ರೀತಿಯಾಗಿ ಧಾರವಾಡ-ಹುಬ್ಳಿ, ಹಾಸನ, ಮೈಸೂರು, ಮಂಡ್ಯ, ಬಳ್ಳಾರಿ, ಕುಂದ, ಅರೆ, ಹವ್ಯಕ ಮತ್ತು ಟಿವಿ, ರೇಡಿಯೋಗಳ ಇಂಗ್ಲೀಶ್ಗನ್ನಡ ಸೇರಿದಂತೆ ನೂರಾರು ಸ್ಥಳೀಯ ಕನ್ನಡ ಭಾಷೆಗಳಿರುವಾಗ, ಸಾವಿರಾರು ನೆಲದ ಪದಗಳು ಇರುವ, ನೂರಾರು ಲಯ, ಶೈಲಿ, ಸ್ವಂತಿಕೆ ಇರುವ ಭಾಷೆಯನ್ನು ಎಲ್ಲರಿಗೂ ಅರ್ಥವಾಗುವ “ಎಲ್ಲರ ಕನ್ನಡ”ವಾಗಿಸುವುದು ಹೇಗೆ? ಅದು ಸಾಧ್ಯವಿಲ್ಲದ ಮಾತು. ಸರಳವಾದ ಸಂಸ್ಕೃತ ಪದಗಳನ್ನು ಉಳಿಸಿಕೊಂಡು, ಸಾಧ್ಯವಾದಲ್ಲೆಲ್ಲಾ ಕನ್ನಡ ಪದಗಳನ್ನೇ ಬಳಸಿ, ಒಂದು ಸರಳ ಕನ್ನಡವನ್ನು ರೂಪಿಸಬಹುದು. ನಾನಿದನ್ನು ಬರವಣಿಗೆಯ ವಿಷಯದಲ್ಲಿ ಹೇಳುತ್ತಿದ್ದೇನೆ. ಆಡುಗನ್ನಡವನ್ನು ನಿಯಂತ್ರಿಸಲು ಸಾಧ್ಯವಿಲ್ಲ.

ಹಾಗೆ ನೋಡಿದರೆ ಪ್ರಾದೇಶಿಕ ಸೊಗಡಿನ ಕನ್ನಡ ಆಯಾ ಪ್ರದೇಶಗಳ ಆಡುಮಾತಿನಲ್ಲಿ ತಾನಾಗಿ ಬೆಳೆಯುತ್ತಿದೆ. ಎರಡು ಪ್ರದೇಶಗಳ ಜನರು ಜೊತೆ ಸೇರಿದಾಗ ತಮ್ಮದೇ ಸಂಪರ್ಕ ಭಾಷೆಯೊಂದನ್ನು ಸಹಜ ರೀತಿಯಲ್ಲಿ ಹುಟ್ಟುಹಾಕುತ್ತಾರೆ. ಸಾಹಿತ್ಯದಲ್ಲಿಯೂ ಪ್ರಾದೇಶಿಕ ಸೊಗಡು ಚಂದಗಾಣಾಗಿ ಹರಡುತ್ತಿದೆ. ಹಾಗೆ ನೋಡಿದರೆ, ಸರಳಗನ್ನಡ, ಎಲ್ಲರ ಕನ್ನಡ ಬೇಕಾಗಿರುವುದು ಸಾಮಾನ್ಯ ಜನರು ಸಹಜವಾಗಿ ಮಾತನಾಡುವುದಕ್ಕೆ ಅಲ್ಲ. ನಾವು ಬರೆಯುವ, ಭಾಷಣ ಬಿಗಿಯುವ, ಶಾಲೆಗಳಲ್ಲಿ ಕಲಿಸುವ, ಕಲಿಯುವ, ಸಂವಹನದ ಭಾಷೆಗೆ, ಮಾಧ್ಯಮಗಳ ಭಾಷೆಗೆ, ಮುಖ್ಯವಾಗಿ, ಬರವಣಿಗೆಯ ಅಂದರೆ, “ಲಿಖಿತ” ಭಾಷೆಗೆ, ಪಂಡಿತರ “ಸ್ವಯಂ ಘೋಷಿತ ಶಿಷ್ಟ ಭಾಷೆ”ಗೆ ಅದು ಬೇಕಾಗಿರುವುದು.

ಆದುದರಿಂದಲೇ, ಎಲ್ಲರಿಗೂ ಅರ್ಥವಾಗುವ, ಪ್ರಾದೇಶಿಕ ಸೊಗಡನ್ನು ಉಳಿಸಿಕೊಂಡ, ಸಂಸ್ಕೃತದ ನೊಗ ಇಳಿಸಿದ ಒಂದು ಸರಳಗನ್ನಡ ಸಂವಹನಕ್ಕಾಗಿ ನಮಗೆ ಬೇಕಾಗಿದೆ. ಇದು ಸಹಜವಾಗಿ ಆಗಬೇಕೇ ಹೊರತು, ಕೇವಲ ಮಹಾಪ್ರಾಣಗಳನ್ನು ಬಿಡುವುದರಿಂದ, ಬರೆಯುವ ಶೈಲಿಯನ್ನೇ ಬದಲಿಸಿ, ಹಳೆಗನ್ನಡ ಪದಗಳನ್ನು ತುಂಬಿ ಹೊಸದೊಂದು ಅಪರಿಚಿತ ಭಾಷೆಯನ್ನು ರೂಪಿಸುವುದರ ಮೂಲಕ ಅಲ್ಲ. ಹೇರಿಕೆ, ಒತ್ತಾಯ, ಅಣಕದಿಂದಲೂ ಆಲ್ಲ! ಕನ್ನಡಿಗರು ಎಂದರೆ, ಸಾಮಾಜಿಕ ತಾಣಗಳನ್ನು ಬಳಸುವವರು ಮಾತ್ರವಲ್ಲ. ಇವುಗಳ ಹೊರಗೆ ಕೋಟ್ಯಂತರ ಕನ್ನಡಿಗರಿದ್ದಾರೆ. ಅವರನ್ನು ಮುಟ್ಟುವುದು ಹೇಗೆ? ಈ ಎಲ್ಲಾ ಆಯಾಮಗಳ ಕುರಿತು ಮುಂದಿನ ಚಿಂತನೆಗಳು ನಡೆಯಬೇಕು. ಇದು ಬಾಣಲೆ ನೀರಿನಲ್ಲಿ ನಡೆಯುವ ಚಂಡಮಾರುತವಾಗಲಿ, ಅಂಗೈ ಒಳಗಿನ ಕ್ರಾಂತಿಯಾಗಲೀ ಅಲ್ಲ. ಜನರಿಗೆ ಒಗ್ಗದಿದ್ದರೆ, “ಎಲ್ಲರ ಕನ್ನಡ” ಯಾರಿಗೂ ಅರ್ಥವಾಗದ ಕನ್ನಡವಾದೀತು.

(ಪೀಪಲ್‌ನಲ್ಲಿ ಪ್ರಕಟವಾದ “ಸಂಸ್ಕೃತದ ದಬ್ಬಾಳಿಕೆಗೆ ಕನ್ನಡಿಗರ ಕೀಳರಿಮೆ ಕಾರಣ” ಮತ್ತು “ಕನ್ನಡದ ಬೆನ್ನೇರಿ ಕುಳಿತಿರುವ ಸಂಸ್ಕೃತ” ಎಂಬ ಬರಹಗಳನ್ನು ಓದಿ).

ಬ್ರಾಹ್ಮಣಶಾಹಿ ಯಜಮಾನ್ಯದ ಸರ್ವಾಧಿಕಾರ ಸ್ಥಾಪನೆಯೇ ಆರೆಸ್ಸೆಸ್ ಗುರಿ – ಬೊಗಸೆಗೆ ದಕ್ಕಿದ್ದು… 19
ದೇಶದಲ್ಲಿ ಆರೆಸ್ಸೆಸ್ಸಿನ, ಬ್ರಾಹ್ಮಣ್ಯದ ಕುಟಿಲ ಸಂಚುಗಳನ್ನು ವಿಫಲಗೊಳಿಸಬೇಕಾದರೆ, ಸಂವಿಧಾನವನ್ನು, ಕಾನೂನಿನ ಆಡಳಿತವನ್ನು, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಉಳಿಸಬೇಕಾದರೆ ಇರುವ ಒಂದೇ ಒಂದು ದಾರಿಯೆಂದರೆ, ಮುಂದಿನ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಕೆಳಗಿಳಿಸುವುದು

ಹಿಟ್ಲರ್‌ನ ನಾಝಿ ಪಕ್ಷದ ಸಂಘಟನೆಯ ಮಾದರಿಯಲ್ಲಿಯೇ ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂದರೆ, ಆರೆಸ್ಸೆಸ್- ಹಿಟ್ಲರನಂತೆ ಒಂದೊಂದು ಕೆಲಸಕ್ಕೂ ಒಂದೊಂದು ಅಡಿಯಾಳು ಸಂಘಟನೆಯನ್ನು ಹೊಂದಿದೆ. ಕೆಲವು ಪರಮ ಭ್ರಷ್ಟ ಅತಿಶ್ರೀಮಂತರು ಅದರ ಬೆನ್ನಿಗಿದ್ದರೆ, ಆದು ಅವರ ಬೆನ್ನಿಗಿದೆ. ಜೊತೆಗೆ ತನ್ನದು ಸಾಂಸ್ಕೃತಿಕ, ಸಮಾಜಸೇವಾ ಸಂಘಟನೆ ಎಂದು ಹೇಳುತ್ತಾ ಬಂದಿರುವ ಅದು, ಆಳುವ ಬಿಜೆಪಿಯನ್ನೇ ನಿಯಂತ್ರಿಸುತ್ತಿದೆ. ಇದೀಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಆರೆಸ್ಸೆಸ್ಸಿನ ಸುಪ್ತ ಕನಸುಗಳನ್ನು ಸಾಕಾರಗೊಳಿಸುತ್ತಿದೆ. ಆ ಸುಪ್ತ ಕನಸುಗಳಾದರೂ ಏನು?

ಈ ಕನಸುಗಳೆಂದರೆ, ಬ್ರಾಹ್ಮಣ್ಯದ ಪ್ರಾಬಲ್ಯ ಮತ್ತು ನೇತೃತ್ವದ ವರ್ಣಾಶ್ರಮವನ್ನು ಗಟ್ಟಿಗೊಳಿಸುವುದು, ದೇಶ ಮತ್ತು ಸಮಾಜದ ನಿಯಂತ್ರಣ, ಸಂವಿಧಾನದ ಬದಲು ಮನುವಾದವನ್ನು ತರುವುದು, ನ್ಯಾಯಾಂಗವನ್ನು ನಿಯಂತ್ರಿಸುವುದು, ಶೂದ್ರವರ್ಗವನ್ನು ಸೇವಕರನ್ನಾಗಿ ಮಾಡುವುದು, ಸನಾತನ ಮೌಲ್ಯ ಆಥವಾ ಕಂದಾಚಾರಗಳನ್ನು ಮರುಸ್ಥಾಪಿಸುವುದು; ದಲಿತರು ಮುಸ್ಲಿಮರು, ಕ್ರೈಸ್ತರನ್ನು ಸಾಮಾಜಿಕವಾಗಿ ಅಡಿಗೆ ತಳ್ಳುವುದು ಅಥವಾ ಬದಿಗೆ ಸರಿಸುವುದು ಮತ್ತು ಅಂತಿಮವಾಗಿ ಹಿಂದೂತ್ವದ, ಆಂದರೆ ಬ್ರಾಹ್ಮಣಶಾಹಿ ನಿಯಂತ್ರಣದ ಸರ್ವಾಧಿಕಾರ ಸ್ಥಾಪಿಸುವುದು. ಮೋದಿ ಸರಕಾರ ವಿಧೇಯ ಸೇವಕನಂತೆ ಈ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆ ಇಡುತ್ತಿರುವುದನ್ನು ಅಂತರರಾಷ್ಟ್ರೀಯವಾಗಿಯೂ ಗಮನಿಸಲಾಗಿದೆ. ಈ ಎಲ್ಲಾ ನಡೆಗಳನ್ನು ಮತ್ತೊಮ್ಮೆ ವಿವರಿಸಬೇಕಾಗಿಲ್ಲ.

ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹೊತ್ತಿನಲ್ಲೇ  ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ಮತ್ತು ಕಾಂಗ್ರೆಸ್ ಮತ್ತು ತೆರಿಗೆ ಇಲಾಖೆಯ ನಡುವಿನ ಸದ್ಯ ನ್ಯಾಯಾಲಯದಲ್ಲಿರುವ ಹಳೆಯ ಪ್ರಕರಣದಲ್ಲಿ ತೆರಿಗೆ ವಂಚನೆಯ ಆರೋಪ ಹೊರಿಸಿ ಮುಖ್ಯ ಪ್ರತಿಪಕ್ಷದ ಬ್ಯಾಂಕ್ ಖಾತೆಯನ್ನೇ ಸ್ಥಂಬನಗೊಳಿಸಿರುವುದು ಇತ್ತೀಚಿನ ಉದಾಹರಣೆಗಳು. ಈ ಹಿನ್ನೆಲೆಯಲ್ಲಿ ಆರೆಸ್ಸೆಸ್ಸಿನ ಒಳಹೊರಗನ್ನು ಸ್ವಲ್ಪ ತಿಳಿದುಕೊಳ್ಳಬೇಕಾದ ಅಗತ್ಯವಿದೆ.

1925ರ ಸೆಪ್ಟೆಂಬರ್ 27ರಂದು ಸ್ಥಾಪನೆಯಾದ ಆರೆಸ್ಸೆಸ್ ರಾಷ್ಟ್ರಪ್ರೇಮದ ಹೆಸರಿನಲ್ಲಿ ಪ್ರತಿಪಾದಿಸುತ್ತಾ ಬಂದಿರುವ ರಾಷ್ಟ್ರ ಯಾವುದು, ಅದಕ್ಕಾಗಿ ಬಳಸಿಕೊಳ್ಳುತ್ತಿರುವ ನಾಜಿ ತಂತ್ರಗಳು ಯಾವುವು, ಅದನ್ನು ಸ್ಥಾಪಿಸಿದ ಕೇಶವರಾವ್ ಬಲಿರಾಮ ಹೆಡಗೆವಾರ್ ಯಾರು ಮತ್ತು ಆತನ ವಿಚಾರಗಳೇನು ಎಂಬುದನ್ನು ತಿಳಿದುಕೊಳ್ಳುವುದು ಇಂದಿಗೆ ಪ್ರಸ್ತುತವಾಗಿದೆ.

ಆರೆಸ್ಸಿಗರು ಡಾಕ್ಟರ್ ಜೀ ಎಂದು ಕರೆಯುವ ಈ ವ್ಯಕ್ತಿ- ಜೀವ ಉಳಿಸುವ ವೈದ್ಯನಾಗದೆ ಸಮಾಜದಲ್ಲಿ ಪ್ರಾಣ ಹರಣಕ್ಕೆ ಕಾರಣವಾಗುವ ಕೋಮುವಾದ ಹರಡುವ ವೈದ್ಯನಾದದ್ದನ್ನು ನಾವು ಮನಗಾಣಬೇಕು. ಇಂದು ಈ ವ್ಯಕ್ತಿ ಪಠ್ಯ ಪುಸ್ತಕಗಳಲ್ಲಿ ಪಾಠವಾಗಿ ಮಕ್ಕಳ ಎಳೆ ಮನಸ್ಸುಗಳನ್ನು ಪ್ರವೇಶಿಸುತ್ತಿರುವಾಗ, ಕರಾವಳಿ, ಮಲೆನಾಡಿನ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿರುವ ಆರೆಸ್ಸೆಸ್ ಶಾಖೆಗಳಲ್ಲಿ ಕುಟಿಲವಾಗಿ ರೂಪಿಸಿದ ಆಟಗಳ ಮೂಲಕ ಈತನ ವಿಚಾರಗಳನ್ನು ಹರಡಲಾಗುತ್ತಿರುವಾಗ ಇದು ಇನ್ನಷ್ಟು ಪ್ರಸ್ತುತ.

ಆರೆಸ್ಸೆಸ್ಸಿಗೆ ಮೂಲ ಪ್ರೇರಣೆಯಾಗಿದ್ದದ್ದು ಕಾಂಗ್ರೆಸಿನ ಒಳಗೇ ಇದ್ದ “ಮೇಲ್ಜಾತಿ”ಯ ಹಿಂದೂ ಮಹಾಸಭಾ ಎಂಬ ಒಂದು ಸಮಾನಾಸಕ್ತಿ ಗುಂಪು. 1923ರಲ್ಲಿ ಇದು ಮದನ ಮೋಹನ ಮಾಳವೀಯ ಎಂಬವರ ನೇತೃತ್ವದಲ್ಲಿ ಒಂದು ಸ್ವಯಂ ಆಸ್ತಿತ್ವ ಇರುವ ಸಂಘಟನೆಯಾಗಿ ಹುಟ್ಟಿತು. ಇಂದು ಈತನನ್ನೂ ಒಬ್ಬ ರಾಷ್ಟ್ರೀಯ ನಾಯಕನಾಗಿ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ‘ಹಿಂದೂ’ ಹೆಸರಿನಲ್ಲಿ ಬ್ರಾಹ್ಮಣವಾದಿ ಮೇಲ್ಜಾತಿಗಳ ಹಿತರಕ್ಷಣೆಗಾಗಿಯೇ ಇದ್ದ ಈ ಸಂಘಟನೆ ತಳವರ್ಗದವರನ್ನು ಸೇರಿಸಿಕೊಳ್ಳಲೂ ಇಲ್ಲ. ತಳವರ್ಗದವರು ಅದನ್ನು ಮೂಸಿ ನೋಡಲೂ ಇಲ್ಲ. ಅದು ವರ್ಣಾಶ್ರಮ ಧರ್ಮ, ಬ್ರಾಹ್ಮಣ್ಯದ ಮೇಲ್ಮೆಯನ್ನು ಉಳಿಸಿಕೊಳ್ಳಲು ಬಯಸುವ ಒಂದು ಪಿತೂರಿಗಾರರ, ಪ್ರಚೋದಕರ ಹಲ್ಲಿಲ್ಲದ ಸಂಘಟನೆಯಾಗಿ ಉಳಿದುಕೊಂಡಿತ್ತು. ಇದೇ ವ್ಯಕ್ತಿಗಳು ಪಂಜಾಬ್ ಹಿಂದೂ-ಸಿಖ್ ನೆಲೆಯಲ್ಲಿ ವಿಭಜನೆಯಾಗಿ “ಹಿಂದೂ” ಹರ್ಯಾಣ ಹುಟ್ಟಲು ಕಾರಣರಾದವರು. ದೇಶವನ್ನು ಕೋಮು ನೆಲೆಯಲ್ಲಿ ವಿಭಜಿಸಲು ಮುಸ್ಲಿಂ ಲೀಗ್ ಜೊತೆ ಕೈ ಜೋಡಿಸಿ ಪಾಕಿಸ್ತಾನ, ಬಾಂಗ್ಲಾ ದೇಶ ಹುಟ್ಟಲು ಕಾರಣರಾದವರು.

ಮಾಳವೀಯರ ವಿಚಾರಗಳಿಂದ ಪ್ರಭಾವಿತರಾದ ಕೇಶವರಾವ್ ಬಲಿರಾಮ ಹೆಡಗೆವಾರ್ ಅವರ ಎಳೆ ಮನಸ್ಸಿಗೆ ಹೊಕ್ಕಿದ್ದೂ ಇದೇ ಬಾಲಿಶ ವಿಚಾರಗಳೇ ಆಗಿದ್ದವು. ಕೇವಲ 5000 ಸಾವಿರ ಸೈನಿಕರನ್ನು ಹೊಂದಿದ್ದ ರಾಬರ್ಟ್ ಕ್ಲೈವ್ ಹೇಗೆ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಡಿಗಲ್ಲು ಹಾಕಿದ? ಅಲ್ಲಾವುದ್ದೀನ್ ಖಿಲ್ಜಿ ಹೇಗೆ ಹದಿನೇಳು ಬಾರಿ ದಂಡಯಾತ್ರೆ ಮಾಡಿ ಸೋಮನಾಥ ಸಹಿತ ಹಲವಾರು ದೇವಾಲಯಗಳಿಗೆ ದಾಳಿ ಮಾಡಿ ಸಂಪತ್ತು ಲೂಟಿ ಮಾಡಿದ? ಇತ್ಯಾದಿ ವಿಚಾರಗಳು ಅವರ ತಲೆಯಲ್ಲಿದ್ದವು. ಆದರೆ, ಸೋಮನಾಥಪುರದಲ್ಲಿ ಬ್ರಾಹ್ಮಣರ ಅಪಾರ ಪ್ರಮಾಣದ ಸಂಪತ್ತನ್ನು ಬಚ್ಚಿಡಲಾಗಿತ್ತು; ಅದಕ್ಕಾಗಿ ಹಿಂದೂ ರಾಜರುಗಳೂ ಅದಕ್ಕೆ ಮತ್ತು ಅಂತಹಾ ಬೇರೆ ದೇವಾಲಯಗಳಿಗೆ ದಾಳಿ ಮಾಡಿದ್ದರು; ಇದರಿಂದ ಬಡ ಜನರಿಗಾಗಲೀ ದೇವಾಲಯ ಪ್ರವೇಶ ಇಲ್ಲದ ದಲಿತರಿಗಾಗಲೀ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ; ಖಿಲ್ಜಿಯ ಸೇನಾನಾಯಕ ಮಲ್ಲಿಕ್ ಕಾಫರ್ ಒಬ್ಬ ಮತಾಂತರಗೊಂಡ ಹಿಂದೂವಾಗಿದ್ದ; ಅವನು ಮತಾಂತರವಾಗಲು ಕಾರಣವೇನು? ದಾಳಿಗಳು ನಡೆದಾಗ ಹಿಂದೂ ರಾಜರುಗಳೇನು ಮಾಡುತ್ತಿದ್ದರು? ಭಾರತ ಎಂಬ ದೇಶ ಇತ್ತೆ? ಕ್ಲೈವ್ ಆದಿಯಾಗಿ ಬ್ರಿಟಿಷರ ವಿರುದ್ಧ ಎರಡು ಮೂರು ಶತಮಾನ ಕಾಲ ಹಿಂದೂಗಳಾಗಲಿ, ಮುಸ್ಲಿಮರಾಗಲೀ- ಭಾರತೀಯರು ಎಂಬ ನೆಲೆಯಲ್ಲಿ ಯಾಕೆ ಒಟ್ಟಾಗಲಿಲ್ಲ? ಬ್ರಿಟಿಷರೂ, ಮೊಗಲರೂ, ಅವರೂ, ಇವರೂ- ಎಲ್ಲಾ ಆಡಳಿತಗಾರರು ಒಂದೇ ಎಂಬ ಭಾವನೆ- ಮೇಲು ಕೀಳಿನ ಜಾತಿವ್ಯವಸ್ಥೆಗೆ ಒಗ್ಗಿಕೊಂಡಿದ್ದ ಭಾರತೀಯರಲ್ಲಿ ಇರಲಿಲ್ಲವೆ? ಎಲ್ಲರ ಸೇವೆ ಮಾಡಿ ಬದುಕಿದವರಾದ ಶೂದ್ರರು, ದಲಿತರನ್ನು, ಒಟ್ಟಾಗಿ ಹೇಳುವುದಾದರೆ ಕೆಳವರ್ಗಗಳ ಜನರನ್ನು ಆಳಿದವರು ಇದೇ ಬ್ರಾಹ್ಮಣರಲ್ಲವೆ?

ಈ ಪ್ರಶ್ನೆಗಳು ಬಹುಶಃ ಬ್ರಾಹ್ಮಣರಾಗಿದ್ದ ಹೆಡಗೆವಾರ್ ತಲೆಗೆ ಹೊಳೆದಿರಲಾರದು. ಆತ ಹಿಂದೂ ಏಕತೆಯನ್ನು ಪ್ರತಿಪಾದಿಸಿದಾಗ, ಆ ಹಿಂದೂತ್ವ- ಸಮಾನತೆಯ ಹಿಂದೂತ್ವ ಆಗಿರಲಿಲ್ಲ. ಬದಲಾಗಿ ಬಹುಸಂಖ್ಯಾತರು ಬ್ರಾಹ್ಮಣ್ಯವನ್ನು ಒಪ್ಪಿಕೊಂಡು, ಅವರ ಅಡಿಯಾಳುಗಳಾಗಿ ಉಳಿದವರು ಬದುಕುವ ಹಿಂದೂತ್ವವಾಗಿತ್ತು. ಅವರ ಹಿಂದೂತ್ವ ವೇದ-ಉಪನಿಷದ್‌ಗಳಲ್ಲಿ ಇದ್ದ ಕೆಲವು ಉದಾತ್ತ ತತ್ವಗಳು (ಋಗ್ವೇದದ ಸಹಾನುಭವತು, ಸಹಾನೌಭುನತ್ತು… ಜತೆಗೆ ಬಾಳುವ, ಜೊತೆಗೆ ಉಣ್ಣುವ..) ಮತ್ತು ಸರ್ವೇ ಜನಾ ಸುಖಿನೋ ಭವಂತು ಎಂಬಂತಹ ಆದರ್ಶಗಳ ಮೇಲೆ ನಿಂತಿರಲಿಲ್ಲ. ಮುಖ್ಯವಾಗಿ, ಮುಸ್ಲಿಮರ ವಿರುದ್ಧ ಹಿಂದೂಗಳು ಭೇದಭಾವವನ್ನು ಒಪ್ಪಿಕೊಂಡು ಒಂದಾಗಬೇಕು ಎಂಬ ಆಗ್ರಹದ ಮೇಲೆ ನಿಂತಿತ್ತು!

ವೈದ್ಯಕೀಯ ಕಲಿಯುತ್ತಿದ್ದಾಗ ಕಲ್ಕತ್ತಾದಲ್ಲಿ ಹೆಡಗೇವಾರ್ ಅವರಿಗೆ ಬಲಪಂಥೀಯ ಭೂಗತ ಗುಪ್ತ ಸಮಾಜಗಳ ಸಂಪರ್ಕ ಸಿಕ್ಕಿತು. ಅವರ ತಂತ್ರ-ಕುತಂತ್ರಗಳನ್ನು ಬಹುಶಃ ಚೆನ್ನಾಗಿಯೇ ಕಲಿತುಕೊಂಡರು. ಅವರು ಆರೆಸ್ಸೆಸ್ ಸ್ಥಾಪಿಸುವ ಕೆಲವರ್ಷ ಮೊದಲಷ್ಟೇ ಜರ್ಮನಿಯ ಜರ್ಮನ್ ನ್ಯಾಷನಲಿಸ್ಟ್ ಸೋಷಿಯಲಿಸ್ಟ್ ಪಾರ್ಟಿ ಸ್ಥಾಪನೆಯಾಗಿತ್ತು. ಅದರ ಸಂಘಟನಾ ಸಂರಚನೆ (Organisational structure) ವಿದ್ಯಾವಂತರಾಗಿದ್ದ ಹೆಡಗೇವಾರ್ ಅವರ ಗಮನಕ್ಕೆ ಬಂದಿರುವ ಎಲ್ಲಾ ಸಾಧ್ಯತೆಗಳಿವೆ. ಆ ಪಕ್ಷದಲ್ಲಿ ಮುಂದೆ ಎಸ್‌ಎಸ್ (ಸ್ಟ್ರೂಮ್ಸ್  ಸ್ಷ್ರಾಫೆಲ್- ಭದ್ರತಾ ಸಿಬ್ಬಂದಿ ಅಥವಾ ಚೌಕಿದಾರ್!) ಎಂದು ಕರೆಸಿಕೊಂಡ ಸಮವಸ್ತ್ರಧಾರಿ ಗೂಂಡಾ ವಿಭಾಗವಿತ್ತು. ಅದು ಮುಂದೆ ಭಯಾನಕ ಹಿಂಸಾಚಾರಕ್ಕೆ ಅಸ್ತ್ರವಾಯಿತು. ಅದೇ ಮಾದರಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತರಿಗೆ ಬ್ರಿಟಿಷ್ ಕಾಲದ ಆಗಿನ ಪೊಲೀಸರ ಸಮವಸ್ತ್ರದ ಮಾದರಿಯಲ್ಲಿ (ವಿದೇಶಿ!) ಖಾಕಿ ಚಡ್ಡಿ, ಬೆಲ್ಟು-ಬೂಟುಗಳನ್ನು ನೀಡಿದ್ದಲ್ಲದೆ, ಕೈಗೊಂದು ದಂಡವನ್ನೂ ನೀಡಲಾಯಿತು! ಇದೀಗ ಉತ್ತರದ ರಾಜ್ಯಗಳಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನೂ ನೀಡಲಾಗುತ್ತಿದೆ. ಮಕ್ಕಳ ಕೈಗೆ ತ್ರಿಶೂಲ, ಖಡ್ಗಗಳನ್ನು ನೀಡಲಾಗುತ್ತಿದೆ.

ಆರೆಸ್ಸೆಸ್‌ನ ಸಂಘಟನೆಯಲ್ಲಿ ನಾಜಿ ಸಂರಚನೆ ಇರುವುದನ್ನು ಗಮನಿಸಬಹುದು. ಒಬ್ಬ ಸರಸಂಘಚಾಲಕ (ಪರಮೋಚ್ಛ ನಾಯಕ- ಹಿಟ್ಲರನಂತೆ ಫ್ಯುರರ್) ಇರುತ್ತಾನೆ. ಆತ ಪ್ರಶ್ನಾತೀತ! ನಂತರ ಸಂಘಚಾಲಕರು, ಪ್ರಾದೇಶಿಕ ಸಂಚಾಲಕರು, ಪ್ರಾಂತ ಸಂಚಾಲಕರು, ತಳಮಟ್ಟದಲ್ಲಿ ಪ್ರಚಾರಕರು ಇರುತ್ತಾರೆ. ಇವರು ಈ ಸಂಘಟನೆಗೆ ಜನರನ್ನು, ಅದರಲ್ಲೂ ಬುದ್ಧಿ ಬೆಳೆಯದ ಎಳೆಯ ಬಾಲಕರನ್ನು ಸೇರಿಸುತ್ತಾರೆ. ಸಂಘದ ಶಾಖೆಗಳಲ್ಲಿ ಭಗವಾಧ್ವಜವನ್ನು ಇಟ್ಟುಕೊಂಡು ವ್ಯಾಯಾಮ ಮತ್ತಿತರ ಕವಾಯತುಗಳನ್ನು ಅರೆಮಿಲಿಟರಿ ಮಾದರಿಯಲ್ಲಿ ನಡೆಸಲಾಗುತ್ತದೆ. (ದಕ್ಷ-ಎಟೆನ್ಷನ್, ವಿಶ್ರಮ್- ಸ್ಟ್ಯಾಂಡ್ ಎಟ್ ಈಸ್, ವಿಸರ್ಜನ್- ಡಿಸ್‌ಪರ್ಸ್ ಇತ್ಯಾದಿ).

ಪ್ರತೀ ಶಾಖೆಯಲ್ಲಿ ಒಬ್ಬ ಬೌದ್ಧಿಕ್ ಪ್ರಮುಖ್ ಇರುತ್ತಾನೆ. ಪೊಲಿಟಿಕಲ್ ಕಮಿಸ್ಸಾರ್ ರೀತಿಯಲ್ಲಿ. ಆತ ಆರೆಸ್ಸೆಸ್ ಸಿದ್ಧಾಂತಗಳನ್ನು ಹೇಳಿಕೊಟ್ಟು ಬ್ರೈನ್‌ವಾಶ್ ಮಾಡುತ್ತಾನೆ. ಆತ ಮೇಲಿನವರ ನೇರ ನಿಯಂತ್ರಣದಲ್ಲಿದ್ದು ಉಳಿದವರಿಗಿಂತ ಮೇಲಿರುತ್ತಾನೆ. ಇಲ್ಲಿ ‘ಆತ’ ಎಂಬುದಕ್ಕೆ ಮಹತ್ವ ಇದೆ. ಆರೆಸ್ಸೆಸ್‌ನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ದೇಶವನ್ನು ಭಾರತ ಮಾತೆ ಎನ್ನುವ ಆರೆಸ್ಸೆಸ್ ಬಳಗದಲ್ಲಿ ರಾಷ್ಟ್ರ ಸೇವಿಕಾ ಸಂಘ ಎಂಬ ಪ್ರತ್ಯೇಕ ಸಂಘಟನೆ ಇದೆ. ಇದು ಸ್ವಯಂಸೇವಕನೊಬ್ಬನ ತಾಯಿ ಲಕ್ಷ್ಮೀಬಾಯಿ ಕೇಳ್ಕರ್ ಎಂಬವರಿಂದ ಪ್ರಾರಂಭವಾಯಿತು. 1936ರಲ್ಲಿ ಆಕೆ ಸಂಘದಲ್ಲೇ ಸ್ತ್ರೀಯರ ವಿಭಾಗ ಒಂದನ್ನು ಸ್ಥಾಪಿಸುವಂತೆ ಹೆಡಗೆವಾರರನ್ನು ಭೇಟಿ ಮಾಡಿದಾಗ, ಆತ ಸುತಾರಾಂ ಒಪ್ಪಲಿಲ್ಲ. ಕೊನೆಗೆ ಆರೆಸ್ಸೆಸ್ ಮಾದರಿಯಲ್ಲೇ ಪ್ರತ್ಯೇಕ ಸಂಘಟನೆ ಮಾಡಿಕೊಳ್ಳಿ ಎಂದರು.

ಬೌದ್ಧಿಕ್ ಪ್ರಮುಖ್‌ಗಳು ಶಾಖೆಯಲ್ಲಿ ಆಟ, ಕತೆಗಳ ಮೂಲಕ ಹೇಗೆ ದ್ವೇಷಭಾವನೆಯನ್ನು ಗೊತ್ತೇ ಆಗದಂತೆ ಬಿತ್ತುತ್ತಾರೆ ಎಂಬುದನ್ನು ಹಿಂದೆ ಜನಸಂಘದಲ್ಲಿ ಇದ್ದು ಶಾಸಕರೂ ಆಗಿದ್ದ ಎ.ಕೆ.ಸುಬ್ಬಯ್ಯ ಅವರು ತಮ್ಮ ಆರ್.ಎಸ್.ಎಸ್ ಅಂತರಂಗ ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ. (1988, ಸಂಗಾತಿ ಪ್ರಕಾಶನ. ಈಗ ಬೇರೆ ಪ್ರಕಾಶನಗಳೂ ಮರುಮುದ್ರಣ ಮಾಡಿವೆ.)

“ಒಂದು ಉದಾಹರಣೆ ಮಾತ್ರ ಇಲ್ಲಿಡುತ್ತೇನೆ. ‘ಮೈ ಶಿವಾಜಿ ಹೂಂ’ ಎನ್ನುವ ಆಟವನ್ನು ಶಾಖೆಗಳಲ್ಲಿ ಆಡಿಸುತ್ತಾರೆ. ಮಕ್ಕಳೆಲ್ಲರೂ ‘ಮೈ ಶಿವಾಜಿ ಹೂಂ, ಮೈ ಶಿವಾಜಿ ಹೂಂ’ ಎಂದು ಓಡಾಡುತ್ತಾರೆ. ಮಧ್ಯದಲ್ಲಿ ಒಬ್ಬ ‘ಮೈ ಔರಂಗಜೇಬ್ ಹೂಂ’ ಎನ್ನುತ್ತಾನೆ. ಉಳಿದ ಮಕ್ಕಳು ಮಕ್ಕಳೆಲ್ಲರೂ ಹೋಗಿ ‘ಮೈ ಔರಂಗಜೇಬ್ ಹೂಂ’ ಎಂದವನ ಮೇಲೆ ಬೀಳುತ್ತಾರೆ – ಅವನನ್ನು ಥಳಿಸುತ್ತಾರೆ.” ಎಂದು ಸುಬ್ಬಯ್ಯ ಬರೆದಿದ್ದಾರೆ. ಇಂತದ್ದೇ ಬ್ರೈನ್ ವಾಷಿಂಗ್ ಕೆಲಸವನ್ನು ನಾಜಿಗಳು ‘ಹಿಟ್ಲರ್ ಯೂತ್’ ಎಂಬ ಸಂಘಟನೆಯ ಹೆಸರಲ್ಲಿ ಮಾಡಿದ್ದರು.

ಹಿಂದೂ ಮಹಾಸಭಾದಲ್ಲಿ ಎರಡು-ಮೂರು ವರ್ಷ ಸಕ್ರಿಯರಾಗಿದ್ದ ಹೆಡಗೆವಾರ್ ಬ್ರಿಟಿಷ್ ಗುಲಾಮ ವಿನಾಯಕ ದಾಮೋದರ ಸಾವರ್ಕರ್ ಅವರ ವಿಚಾರಗಳಿಂದಲೂ ಪ್ರಭಾವಿತರಾಗಿದ್ದರು. ಅಂಡಮಾನ್ ಜೈಲಿನಲ್ಲಿದ್ದು, ನಂತರ ಬ್ರಿಟಿಷರಿಗೆ ‘ಕ್ಷಮಾಪಣಾ’ ಪತ್ರ ಬರೆದಿದ್ದ ಸಾವರ್ಕರ್ ಅವರನ್ನು ಈಗ ವೀರ ಸಾವರ್ಕರ್ ಎಂದು ಹೊಗಳುತ್ತಿರುವ ಹಿಂದೂತ್ವದ ಬೆಂಬಲಿಗರು, ಗೋಹತ್ಯೆ ಬಗ್ಗೆ ಸಾವರ್ಕರರ ವಿಚಾರಗಳನ್ನು ತಿಳಿದರೆ  ಕಂಗಾಲಾಗಿಬಿಡಬಹುದು. ತಿನ್ನುವವರನ್ನು ಅವರ ಪಾಡಿಗೆ ಬಿಟ್ಟರೆ ಒಳ್ಳೆಯದು ಎಂಬುದು ಅವರ ನಿಲುವು.

ಆರಂಭದಲ್ಲಿ ಹೆಡಗೆವಾರ್ ಅವರು ಬ್ರಿಟಿಷರ ವಿರುದ್ಧ ಪ್ರತಿರೋಧದಲ್ಲಿ ಭಾಗವಹಿಸಿ ಒಂದು ವರ್ಷ ಜೈಲು ಅನುಭವಿಸಿದ್ದರೂ, ನಂತರ ಬ್ರಿಟಿಷರ ವಿರುದ್ಧ ಒಂದು ಗಟ್ಟಿಯಾದ ನಿಲುವು ತಳೆಯಲು ಅಸಮರ್ಥವಾಗಿದ್ದರು ಎಂಬುದು ವಾಸ್ತವ. ಇದೀಗ ಭಗತ್‌ ಸಿಂಗ್ ಅವರಂತಹ ಕಮ್ಯುನಿಸ್ಟ್ ಒಲವಿದ್ದ ಕ್ರಾಂತಿಕಾರಿಗಳನ್ನು ತಮ್ಮವರೆಂದು ಹೇಳಿಕೊಳ್ಳುತ್ತಿರುವವರು, ಆಗ ಬ್ರಿಟಿಷರನ್ನು ಓಲೈಸುವ ಕಾರ್ಯದಲ್ಲಿ ತೊಡಗಿದ್ದರು ಎಂಬುದಕ್ಕೆ ಲಿಖಿತ ಸಾಕ್ಷ್ಯಾಧಾರಗಳಿದ್ದರೂ, ಒಂದು ಅಂಕಣದ ಸೀಮಿತತೆಯಲ್ಲಿ ಅದನ್ನು ಪ್ರಸ್ತುತಪಡಿಸಲಾಗದು. ಆರೆಸ್ಸೆಸ್ಸನ್ನು ಕೇವಲ ಒಂದು ಬಾರಿ ಮಾತ್ರ ನಿಷೇಧಿಸಿದ್ದ ಬ್ರಿಟಿಷರು, ಈ ಸಂಘಟನೆಯು ತಮ್ಮ ಆಡಳಿತಕ್ಕೆ ‘ಉಪಯೋಗಿ’ ಎಂದು ಬರೆದ ಪತ್ರಗಳು ಕೂಡ ಲಭ್ಯವಿವೆ.

‘ಧರ್ಮ-ಸಂಸ್ಕೃತಿ ರಕ್ಷಣೆ ಮೂಲಕ ಸ್ವಾತಂತ್ರ್ಯ’ ಇದು ಅವರ ಘೋಷಣೆ! ಅರ್ಥವೇನು?
ನಂತರ ಬಂದ ‘ಗುರೂಜಿ’ ಅಥವಾ ಎಂ.ಎಸ್. ಗೋಲ್ವಾಲ್ಕರ್ ಎಂಬ ಸರಸಂಘಚಾಲಕರು ಸ್ವಾತಂತ್ರ್ಯ  ಚಳವಳಿಯಿಂದ ಇನ್ನಷ್ಟು ದೂರ ಸರಿದರು. ಬ್ರಿಟಿಷರಿಗೆ ಪರವಾದ ನಿಲುವುಗಳನ್ನು ಕುರಿತು 1940ರಲ್ಲಿ ಎಲ್ಲಾ ಪ್ರಾದೇಶಿಕ ಸಂಘ ಚಾಲಕರಿಗೆ ಕಳುಹಿಸಲಾಗಿತ್ತು. ಗೋಲ್ವಾಲ್ಕರ್ ಅವರ ‘ಶ್ರೀ ಗುರೂಜಿ ದರ್ಶನ’ ಸಂಪುಟ 4ರಲ್ಲಿ (ಭಾರತೀಯ ವಿಚಾರ ಸಾಧನ ಪ್ರಕಾಶನ, 1974) ಇಂತಹ ಹಲವಾರು ವಿಚಾರಗಳನ್ನು ನೋಡಬಹುದು. (‘ವೇಬ್ಯಾಕ್ ಮೆಷಿನ್’ ಎಂಬ ನೆಟ್‌ನಲ್ಲಿ ಲಭ್ಯವಿರುವ ಪಿಡಿಎಫ್‌ನಲ್ಲಿ ಕೂಡಾ ಇಂತಹ ವಿಚಾರಗಳಿವೆ). ಶಂಶುಲ್ ಇಸ್ಲಾಂ ಅವರ ‘ರಿಲೀಜಿಯಸ್ ಡೈಮೆನ್ಷನ್ಸ್’ ಎಂಬ ಪುಸ್ತಕದಲ್ಲೂ ಬಹಳಷ್ಟು ವಿವರ –ದಾಖಲೆಗಳಿವೆ.

ಅದಿರಲಿ, ದೇಶಪ್ರೇಮಿ ಎಂದು ಕರೆದುಕೊಳ್ಳುತ್ತಿರುವ ಆರೆಸ್ಸೆಸ್- ಬ್ರಿಟಿಷ್ ಆಡಳಿತದಲ್ಲಿ ಒಂದು ಬಾರಿ ಮಾತ್ರ ನಿಷೇಧಕ್ಕೆ ಗುರಿಯಾಗಿತ್ತು. ಅದು 1947ರ ಮೊದಲ ಭಾಗದಲ್ಲಿ – ಅದೂ ಕೂಡ ಪಂಜಾಬ್ ಪ್ರಾಂತ್ಯದಲ್ಲಿ! ಕಾರಣ- ಸ್ವಾತಂತ್ರ್ಯ ಹೋರಾಟವಲ್ಲ – ಅವಿಭಜಿತ ಪಂಜಾಬಿನಲ್ಲಿ ಕೋಮುಗಲಭೆ ಹಬ್ಬಿಸಲು ಯತ್ನಿಸಿದ್ದು. ಆದರೆ, ಸ್ವಾತಂತ್ರ್ಯದ ಬಳಿಕ ಆರೆಸ್ಸೆಸ್ ಮೂರು ಭಾರಿ ನಿಷೇಧಿತವಾಯಿತು!. ಯಾವುದೇ ಜನಪರ ಹೋರಾಟದ ಕಾರಣಗಳಿಗಲ್ಲ!, ದೇಶದ ಶಾಂತಿಯನ್ನು ಕದಡಿದ ಕಾರಣಕ್ಕಾಗಿ! ‘ಕದಡಿದ ನೀರಲ್ಲಿ ಮೀನು ಹಿಡಿಯುವುದು’ ಎಂಬ ಮಾತು ಆರೆಸ್ಸೆಸ್ಸಿಗೆ ಚೆನ್ನಾಗಿ ಅನ್ವಯವಾಗುತ್ತದೆ.

ಮೊದಲ ಬಾರಿಗೆ 1948ರಲ್ಲಿಯೇ ಗೃಹ ಸಚಿವ, ಉಪಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಅದನ್ನು ನಿಷೇಧಿಸಿದ್ದರು- ಕಾರಣ? ಗಾಂಧೀಜಿ ಹತ್ಯೆಯ ನಂತರ- ನಾಗಪುರ ಆದಿಯಾಗಿ ಎಲ್ಲೆಡೆ ಅದು ಸಿಹಿಹಂಚಿದ್ದು!. ಈಗ ಬಿಜೆಪಿಯೇ ಅವರ ಪ್ರತಿಮೆ ನಿರ್ಮಿಸಿ ತಮ್ಮವರೆಂದು ಹೇಳಿಕೊಳ್ಳುತ್ತಿದೆ. ಎರಡನೇ ಬಾರಿ 1975-77ರಲ್ಲಿ ತುರ್ತು ಪರಿಸ್ಥಿತಿ ವೇಳೆ. ಇದಕ್ಕೆ ಕಾರಣ -ಬಲಪಂಥೀಯರು ಬಿತ್ತುತ್ತಿದ್ದ ವಿಷಬೀಜವಾಗಿದ್ದರೆ (ಸಿಪಿಐ ಇದಕ್ಕಾಗಿ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿತ್ತು), ಇನ್ನೊಂದು ಕಡೆಯಲ್ಲಿ ಕಮ್ಯುನಿಸ್ಟರು ಪ್ರಬಲವಾಗಿ ಸಂಸತ್ತಿನಲ್ಲೂ ಗಣನೀಯ ಸ್ಥಾನ ಪಡೆದದ್ದು. ಮತ್ತೊಂದು ಕಡೆಯಲ್ಲಿ ನಕ್ಸಲೀಯರು ಕಲ್ಕತ್ತಾವನ್ನೇ ಪ್ರತಿಭಟನಕಾರರಿಂದ ತುಂಬುವಂತಹ ಪ್ರಭಾವಿ ಮಟ್ಟಕ್ಕೆ ಬೆಳೆದದ್ದು. ಮೂವರು ತದ್ವಿರುದ್ಧ ಗುಣಲಕ್ಷಣಗಳ ವಿರೋಧಿಗಳನ್ನು ಒಂದೇ ಏಟಿಗೆ ಮಟ್ಟಹಾಕುವ ದುಸ್ಸಾಹಸಕ್ಕೆ ಇಂದಿರಾ ಗಾಂಧಿಯವರು ಕೈಹಾಕಿದ್ದರು.

ಮೂರನೇ ಬಾರಿ ಅದು ಅಲ್ಪಕಾಲದ ನಿಷೇಧಕ್ಕೆ ಒಳಗಾದದ್ದು, 1992ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿ ಮುಸ್ಲಿಮರ ವಿರುದ್ಧ ಶೂದ್ರರನ್ನು, ಅಷ್ಟೇ ಏಕೆ ಇವರಿಂದ ದಮನಿತರಾದ ದಲಿತರನ್ನು ಎತ್ತಿ ಕಟ್ಟಿ-‘ಹಿಂದೂ’ ಎಂಬುದಕ್ಕೆ ಒಂದು ವಂಚಕ ವ್ಯಾಖ್ಯಾನ ಬರೆದಾಗ!.

ಇದೀಗ ಹಿಜಾಬ್, ಹಲಾಲ್ ಇತ್ಯಾದಿ ವಿವಾದಗಳನ್ನು ಎಬ್ಬಿಸುವಾಗ ಇಂದೂ ಮುಸುಕಿನಲ್ಲಿ ಕುಳಿತ ಹಿಂದೂ-ರಾಜಪೂತ ಮಹಿಳೆಯರು ನೆನಪಾಗದೆ ಮುಸ್ಲಿಂ ಮಹಿಳೆಯರ ಹಿಜಾಬ್, ಬುರ್ಖಾ ನೆನಪಾಗುತ್ತದೆ. ದಲಿತರಿಗೆ ಸತ್ತ ದನವನ್ನು ಕೊಂಡೊಯ್ದು ತಿನ್ನಿ ಎಂಬ “ಉದಾರತೆ” ತೋರಿಸಿದ ಈ ದನ ತಿನ್ನುತ್ತಿದ್ದ ಬ್ರಾಹ್ಮಣ್ಯಕ್ಕೆ ಇಂದು ದನ ತಿನ್ನುವ ಮುಸ್ಲಿಮರು, ಕ್ರೈಸ್ತರು, ದಲಿತರು ಪಾಪಿಗಳಂತೆ ಕಾಣುತ್ತಿದ್ದಾರೆ.

ಕೊನೆಗೆ ಒಂದೇ ಮಾತು: ದೇಶದಲ್ಲಿ ಆರೆಸ್ಸೆಸ್ಸಿನ, ಬ್ರಾಹ್ಮಣ್ಯದ ಕುಟಿಲ ಸಂಚುಗಳನ್ನು ವಿಫಲಗೊಳಿಸಬೇಕಾದರೆ, ಸಂವಿಧಾನವನ್ನು, ಕಾನೂನಿನ ಆಡಳಿತವನ್ನು, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಉಳಿಸಬೇಕಾದರೆ ಇರುವ ಒಂದೇ ಒಂದು ದಾರಿಯೆಂದರೆ, ಮುಂದಿನ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಕೆಳಗಿಳಿಸುವುದು.

ಫ್ಯಾಸಿಸಂ ವಿರುದ್ಧ ಪ್ರಗತಿಪರರ ಒಗ್ಗಟ್ಟಿನ ಅಗತ್ಯದ ಕುರಿತು ಭಗತ್ ಸಿಂಗ್ ನುಡಿ
ಭಾರತದಲ್ಲಿ ಹಿಂದೂತ್ವವಾದಿ ಫ್ಯಾಸಿಸಂ ಗಟ್ಟಿಯಾಗಿ ನೆಲೆಯೂರಿ ಸಂಪೂರ್ಣ ಅಧಿಕಾರವನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿರುವ ಹೊತ್ತಿನಲ್ಲಿ ಪತ್ರಿಪಕ್ಷಗಳ, ಅದರಲ್ಲೂ ಮುಖ್ಯವಾಗಿ ಎಡ ಮತ್ತು ಪ್ರಗತಿಪರ ಶಕ್ತಿಗಳ ಒಗ್ಗಟ್ಟು ಅನಿವಾರ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಹಿನ್ನೆಲೆಯಲ್ಲಿ ರಷ್ಯನ್ ಕ್ರಾಂತಿಯ ಆರಂಭದ ದಿನಗಳಲ್ಲಿ ಲೆನಿನ್ 1920ರಲ್ಲಿ ಅವರು ಎಡಪಂಥದ ಬಾಲಗ್ರಹ ಪೀಡೆಗಳ ಬಗ್ಗೆ ಏನು ಬರೆದಿದ್ದಾರೆ ಎಂದು ಪರಿಶೀಲಿಸಿದರೆ, ಅವರು ಅಲ್ಲಿ ಮುಖ್ಯವಾಗಿ ರಾಜಕೀಯ ಹೊಂದಾಣಿಕೆಯ ಅಗತ್ಯ ಮತ್ತು ಸಂದರ್ಭಗಳನ್ನು ವಿವರಿಸಿದ್ದಾರೆ ಎಂಬುದು ತಿಳಿದುಬರುತ್ತದೆ.

ಕ್ರಾಂತಿಕಾರಿ ಭಗತ್ ಸಿಂಗ್ ಅವರು ಈ ಕೃತಿಯ ಕುರಿತು ಬರೆದಿರುವುದನ್ನು ಓದಿದರೆ, ನಮ್ಮ ಇಂದಿನ ಸಂದರ್ಭದಲ್ಲಿ ಕೆಲವು ಹೊಂದಾಣಿಕೆಗಳು ಅತ್ಯಗತ್ಯ ಮತ್ತು ಸೂಕ್ಷ್ಮ ತಾತ್ವಿಕ ವಿಚಾರಗಳ ಬಗ್ಗೆ ಕೂದಲು ಸೀಳುವ ಕೆಲಸವು ನಿಷ್ಪ್ರಯೋಜಕ ಮತ್ತು ಫ್ಯಾಸಿಸಂ ವಿರುದ್ಧದ ಹೋರಾಟಕ್ಕೆ ಮಾರಕ ಎಂಬುದು ತಿಳಿಯುತ್ತದೆ.

ಮೊದಲಿಗೆ ಕ್ರಾಂತಿಕಾರಿ ಭಗತ್ ಸಿಂಗ್ ಅವರು ಫೆಬ್ರವರಿ 2, 1932ರಲ್ಲಿ ಬರೆದ “ಯುವ ರಾಜಕೀಯ ಕಾರ್ಯಕರ್ತರಿಗೆ” ಎಂಬ ಬರಹದಲ್ಲಿ ಹೇಳಿರುವ ಅಂಶಗಳನ್ನು ಇಲ್ಲಿ ಚುಟುಕಾಗಿ ಉಲ್ಲೇಖಿಸುತ್ತಿದ್ದೇನೆ. ರಾಜಕೀಯ ಸಂದರ್ಭಗಳಲ್ಲಿ ಮಾಡಿಕೊಳ್ಳಬಹುದಾದ ಮತ್ತು ಮಾಡಿಕೊಳ್ಳಬಾರದ ರಾಜಿ ಅಥವಾ ಹೊಂದಾಣಿಕೆಗಳ ಬಗ್ಗೆ ಹೀಗೆ ಬರೆಯುತ್ತಾರೆ: “ನಾವು ಸಾಮಾನ್ಯವಾಗಿ ಯೋಚಿಸುವಂತೆ ರಾಜಿ ಅಥವಾ ಹೊಂದಾಣಿಕೆಯು ಅಂತಹ ಒಂದು ಅವಿವೇಕದ ಅಥವಾ ಖಂಡನೀಯ ವಿಷಯವೇನಲ್ಲ. ಬದಲಾಗಿ ಅದು ರಾಜಕೀಯ ಕಾರ್ಯತಂತ್ರದ ಅವಿಭಾಜ್ಯ ಅಂಶವಾಗಿದೆ. ಶೋಷಕರ ವಿರುದ್ಧ ಕಾದಾಡುವ ಯಾವುದೇ ದೇಶವು ಆರಂಭದಲ್ಲಿ ವಿಫಲವಾಗುವುದು ಮತ್ತು ತನ್ನ ಸಂಘರ್ಷದ ಮಧ್ಯದ ಅವಧಿಯಲ್ಲಿ ರಾಜಿ (ಹೊಂದಾಣಿಕೆ) ಮೂಲಕ ಭಾಗಶ: ಬೆಳವಣಿಗೆ ಹೊಂದುವುದು ಅನಿವಾರ್ಯ”. ಇದರ ಅರ್ಥವೆಂದರೆ, ಈಗ ನಮ್ಮ ದೇಶದಲ್ಲಿ ಇರುವ ಪರಿಸ್ಥಿತಿಯಂತೆ ಶತ್ರು ತೀರಾ ಪ್ರಬಲನಾಗಿದ್ದು, ನಾವು ದುರ್ಬಲರಾಗಿದ್ದಾಗ, ನಾವು ಶತ್ರುವಿನ ವಿರುದ್ಧ ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು. ಇದು ಇಂದಿಗೆ ಅತ್ಯಂತ ಪ್ರಸ್ತುತವಾದ ಮಾತು. ಪ್ರತಿಪಕ್ಷಗಳು ಇದರಿಂದ ಕಲಿಯ ಬೇಕಾಗಿದೆ.

ಇದಕ್ಕಾಗಿ ಭಗತ್ ಸಿಂಗ್, 1905ರಲ್ಲಿ ಬೃಹತ್ ಪ್ರಮಾಣದಲ್ಲಿ ಸ್ಫೋಟಗೊಂಡ ರಷ್ಯನ್ ಕ್ರಾಂತಿಕಾರಿ ಚಳವಳಿಯ ಉದಾಹರಣೆಯನ್ನು ನೀಡುತ್ತಾ, ಆ ಹೊತ್ತಿಗೆ ರಷ್ಯಾಕ್ಕೆ ಮರಳಿದ ಲೆನಿನ್ ಹಿಂಸಾತ್ಮಕ ಹೋರಾಟಕ್ಕೆ ಬೆಂಬಲ ನೀಡಿದ ಬಳಿಕವೂ, ನಂತರದ ದಿನಗಳಲ್ಲಿ ಡ್ಯುಮಾ (ಸಂಸತ್ತು) ಆರಂಭವಾದ ನಂತರದ ದಿನಗಳಲ್ಲಿ ಅದರಲ್ಲಿ ಭಾಗವಹಿಸುವುದರ ಪರವಾಗಿದ್ದರು ಎಂದು ಹೇಳುತ್ತಾರೆ.

1906ರ ಮೊದಲ ಡ್ಯುಮಾದಲ್ಲಿ ಭಾಗವಹಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಲೆನಿನ್, ಬದಲಾದ ಪರಿಸ್ಥಿತಿಗೆ ಅನುಗುಣವಾಗಿ 1907ರಲ್ಲಿ ಅದರಲ್ಲಿ ಭಾಗವಹಿಸುವುದರ ಪರವಾಗಿದ್ದರು ಎಂದು ಭಗತ್ ಸಿಂಗ್ ಹೇಳುತ್ತಾರೆ. “ಸಮಾಜವಾದದ ವಿಚಾರಗಳನ್ನು ಚರ್ಚಿಸುವುದಕ್ಕೆ ಡ್ಯುಮಾ ಒಂದು ವೇದಿಕೆಯಾಗಬೇಕೆಂದು ಲೆನಿನ್ ಬಯಸಿದ್ದರು” ಎಂದು ಭಗತ್ ‌ಸಿಂಗ್ ವಿವರಿಸುತ್ತಾರೆ.

“ನಾನು ಸೂಚಿಸಬಯಸಿದ ಒಂದು ಅಂಶವೆಂದರೆ, ರಾಜಿ ಅಥವಾ ಹೊಂದಾಣಿಕೆಯು ಹೋರಾಟವು ಬೆಳೆಯುತ್ತಿರುವಂತೆ ಆಗಾಗ ಎತ್ತಿಕೊಳ್ಳಬೇಕಾದ ಒಂದು ಅತ್ಯಗತ್ಯ ಆಯುಧವಾಗಿದೆ. ಆದರೆ, ಯಾವತ್ತೂ ನಮ್ಮ ಮುಂದೆ ಚಳವಳಿಯ ವಿಚಾರವನ್ನು ಮುಂದಿಟ್ಟುಕೊಡಿರಬೇಕು ಮತ್ತು ನಾವು ಸಾಧಿಸಲು ಹೋರಾಡುತ್ತಿರುವ ಗುರಿಯ ಕುರಿತು ಯಾವತ್ತೂ ಸ್ಪಷ್ಟತೆಯನ್ನು ಕಾಯ್ದುಕೊಳ್ಳಬೇಕು…” ಎಂದು ಭಗತ್ ಸಿಂಗ್ ಅವರು ಯುವಜನರಿಗೆ ನೀಡಿದ ಈ ಸಂದೇಶದಲ್ಲಿ ಬರೆದಿದ್ದಾರೆ.

ಇಲ್ಲಿ ಭಗತ್ ಸಿಂಗ್ ಅವರ ಈ ವಿಚಾರಗಳನ್ನು ಉಲ್ಲೇಖಿಸುತ್ತಿರುವ ಕಾರಣವೆಂದರೆ, ಅವರು ಈ ಬರಹದಲ್ಲಿ- ಲೆನಿನ್ ಆವರು “ಎಡ ಪಂಥದ” ಕಮ್ಯುನಿಸಂನ ಬಾಲಗ್ರಹ ಪೀಡೆಗಳ ಬಗ್ಗೆ ಬರೆದಿರುವುದರಲ್ಲಿ “ರಾಜಿ, ಹೊಂದಾಣಿಕೆ ವಿಷಯದಲ್ಲಿ ಖಚಿತವಾದ ಅಭಿಪ್ರಾಯಗಳನ್ನು ಹೊಂದಿದ್ದಾರೆ” ಎಂದು ಹೇಳಿರುವುದು ಮತ್ತು ಈ ಬರಹಕ್ಕೆ ಈ ವಿಚಾರಗಳೇ ಮೂಲಾಧಾರವಾಗಿರುವಂತೆ ಕಂಡುಬರುತ್ತಿರುವುದು.

ನಮ್ಮ ಪ್ರತಿಪಕ್ಷಗಳಿಗೆ ಹಲವಾರು ವರ್ಷಗಳ ವಯಸ್ಸಾಗಿದ್ದರೂ, ಬಾಲಗ್ರಹ ಪೀಡೆ ಇನ್ನೂ ಬಿಟ್ಟಹಾಗಿಲ್ಲ. ಆರೆಸ್ಸೆಸ್ ಮತ್ತು ಬಿಜೆಪಿ ದೇಶದ ಸಂವಿಧಾನವನ್ನೇ ಬದಲಿಸಿ ಮನುವಾದವನ್ನು ಹೇಗಾದರೂ ಹೇರಲು ಬಯಸುತ್ತಿರುವಾಗ, ಸರಕಾರಿ ತನಿಖಾ ಸಂಸ್ಥೆಗಳನ್ನು ಬಳಸಿ ಪ್ರತಿಪಕ್ಷಗಳನ್ನು ಬಗ್ಗುಬಡಿಯಲು ಹವಣಿಸುತ್ತಿರುವಾಗ, ನ್ಯಾಯಾಂಗ ಮಾತ್ರವಲ್ಲ, ಎಲ್ಲಾ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವಾಗ, ದಲಿತರು ಮತ್ತು ಅಲ್ಪಸಂಖ್ಯಾತರನ್ನು ದಮನಿಸುತ್ತಿರುವಾಗ, ಒಟ್ಟಿನಲ್ಲಿ ಸರ್ವಾಧಿಕಾರದ ಕಡೆಗೆ ದಾಪುಗಾಲು ಇಡುತ್ತಿರುವಾಗ ಪ್ರತಿಪಕ್ಷಗಳ ಒಗ್ಗಟ್ಟೇ ನಿರ್ಣಾಯಕ. ಚುನಾವಣೆ ಹತ್ತಿರ ಬರುತ್ತಿರುವಾಗಲೂ ಹೊಂದಾಣಿಕೆಗೆ ಹಿಂಜರಿಯುತ್ತಿರುವ ಪ್ರತಿಪಕ್ಷಗಳು, ಭಗತ್ ಸಿಂಗ್ ಅವರ ಜನ್ಮದಿನದ ಸಂದರ್ಭದಲ್ಲಿಯಾದರೂ ಹೊಂದಾಣಿಕೆಯ ಕುರಿತು ಅವರೇನು ಹೇಳಿದ್ದಾರೆ ಎಂದು ತಿಳಿದುಕೊಳ್ಳಲಿ.

-ನಿಖಿಲ್ ಕೋಲ್ಪೆ

ಕರಾವಳಿಯಲ್ಲಿ ಬೆಂಕಿ ; ಹಚ್ಚುವವರು, ಹಚ್ಚಿಸುವವರು – ಬೊಗಸೆಗೆ ದಕ್ಕಿದ್ದು.. 18
1977ರ ಕೋಮುಗಲಭೆಗಳಿಗೆ ಮುನ್ನ 1968ರಲ್ಲಿ ಮಂಗಳೂರಿನ ಬಂದರು ಪ್ರದೇಶದಲ್ಲಿ ಕೋಮುಗಲಭೆ ನಡೆದು ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದ. ಆದರೆ, ನಂತರ ದಕ್ಷಿಣ ಕನ್ನಡದಲ್ಲಿ ಗಂಭೀರ ಕೋಮುಗಲಭೆಗಳು ಕೆಲವರ್ಷ ನಡೆದಿರಲಿಲ್ಲ. 1988ರ ಗಲಭೆ, 1998-99ರಲ್ಲಿ ನಡೆದ ಅತ್ಯಂತ ಭೀಕರ ಗಲಭೆಗಳ ಬಗ್ಗೆ ಬೊಗಸೆಗೆ ದಕ್ಕಿದ್ದು-17ರಲ್ಲಿ ಬರೆದಿದ್ದೇನೆ. ಇಲ್ಲಿ ಘಟನೆಗಳನ್ನು ಕಾಲಾನುಕ್ರಮಣಿಕೆಯಲ್ಲಿ ಬರೆಯುವ ಬದಲು, ಯಾವೆಲ್ಲಾ ರೀತಿಯಲ್ಲಿ ಕೋಮುವಾದವನ್ನು, ದ್ವೇಷವನ್ನು  ಬೆಳೆಸಲಾಗುತ್ತಿದೆ ಎಂಬುದನ್ನು ವಿವರಿಸುತ್ತಾ, ಅದಕ್ಕೆ ಸಂಬಂಧಿಸಿದ ಬಿಡಿ ಘಟನೆಗಳ ವಿವರಗಳನ್ನು ಉದಾಹರಣೆಯಾಗಿ ನೀಡಲಾಗಿದೆ. ಇಲ್ಲಿ ಸಂಘಟನೆಗಳ ನಾಯಕರ ಹೆಸರುಗಳನ್ನು ಉಲ್ಲೇಖಿಸದೆ, ಕೋಮುಗಲಭೆಗೆ ಕಾರಣಗಳನ್ನು ಮಾತ್ರ ವಿಶ್ಲೇಷಿಸಲಾಗಿದೆ.

ಕೋಮು ಸಂಘಟನೆಗಳು
ಇಲ್ಲಿ ಮೊದಲಿಗೆ, ಕೋಮುವಾದದ ಬೆಳವಣಿಗೆ ಕಾರಣವಾದ ಸಂಘಟನೆಗಳನ್ನು ಗುರುತಿಸಬೇಕು. ಸಂಘಪರಿವಾರ ಎಂದು ಕರೆಯಲಾಗುವ ಆರೆಸ್ಸೆಸ್‌ನ ಅಂಗಸಂಸ್ಥೆಗಳಾದ ಹಿಂದೂ ಜಾಗರಣ ವೇದಿಕೆ, ಬಜರಂಗದಳ ಸಂಘಟನೆಗಳು, ಅವುಗಳಿಗೆ ಪ್ರತಿಸ್ಪರ್ಧಿಯಾಗಿ ಹುಟ್ಟಿಕೊಂಡಿದ್ದ ಹಿಂದೂ ಜಾಗರಣ ವೇದಿಕೆ ಮತ್ತು ಶ್ರೀರಾಮ ಸೇನೆ ಇತ್ಯಾದಿಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗುರುತಿಸಬೇಕು. ಆರೆಸ್ಸೆಸ್ ರಾಜಕೀಯ ರಹಿತ  ಸಂಘಟನೆ ಎಂದು ಹೇಳಿಕೊಳ್ಳುತ್ತಿದ್ದರೂ ಬಿಜೆಪಿಯನ್ನು (ಹಿಂದೆ ಜನಸಂಘವನ್ನು) ನಿಯಂತ್ರಿಸುವ ಬ್ರಾಹ್ಮಣ ನಾಯಕತ್ವದ ಸಂಘಟನೆಯಾಗಿದೆ.

ಕೆಲವು ಕೆಳಜಾತಿಗಳ ನಾಯಕತ್ವ ಇರುವ ಸ್ವಲ್ಪ ಕಲಿತ ಯುವಕರಿರುವ ಅಧೀನ ಸಂಘಟನೆ ಹಿಂದೂ ಜಾಗರಣ ವೇದಿಕೆಯಾಗಿದೆ. ಇದರ ಪ್ರಮುಖ ನಾಯಕರು ಮೇಲ್ಜಾತಿಯವರೇ. ಇದರ ಸದಸ್ಯರು ನೇರವಾಗಿ ಗಲಭೆಗಳಲ್ಲಿ ಭಾಗವಹಿಸದೆ ಸಂಘಟನೆ, ಪ್ರಚಾರ, ಪ್ರಚೋದನೆ, ಅಪಪ್ರಚಾರ, ಕಾರ್ಯತಂತ್ರಗಳ ಯೋಜನೆ,  ಅನುಷ್ಟಾನ ಇತ್ಯಾದಿಗಳಲ್ಲಿ ಹೆಚ್ಚಾಗಿ ತೊಡಗಿರುತ್ತಾರೆ. ಬಿಜೆಪಿಯ ಪಕ್ಷದ ಭಾವೀ ನಾಯಕರು ಮೂಡಿಬರುವುದು ಇಲ್ಲಿಂದಲೇ.

ಬಜರಂಗದಳವು ಹೆಚ್ಚು ವಿದ್ಯಾಭ್ಯಾಸವಿಲ್ಲದ, ಧರ್ಮದ ಬಗ್ಗೆ ಹೆಚ್ಚು ತಿಳಿದಿರದ ಕೆಳಜಾತಿಗಳಿಗೆ ಬಡ, ಮಧ್ಯಮ ವರ್ಗಗಳಿಗೆ ಸೇರಿದ ಅಂಧ ಸೈನಿಕರನ್ನು ಹೊಂದಿದೆ. ಇವರೇ ಹೆಚ್ಚಾಗಿ ಕೋಮುಶಾಂತಿ ಕದಡುವ ಕಾಲಾಳುಗಳಾಗಿ ನೇರವಾಗಿ ಭಾಗವಹಿಸುತ್ತಾರೆ. ಕ್ರಿಮಿನಲ್ ಹಿನ್ನೆಲೆ ಇರುವವರೂ ಇಲ್ಲಿದ್ದು, ಕೆಲವರು ಧರ್ಮಕ್ಕೆ ಸಂಬಂಧವೇ ಇಲ್ಲದ ಗುರುತರ ಅಪರಾಧಗಳಿಗಾಗಿ ಜೈಲು ಪಾಲಾಗಿದ್ದಾರೆ. ಎಲ್ಲಾ ಸಂಘಟನೆಗಳಲ್ಲಿ ಪ್ರಚೋದನಕಾರಿ ಮತ್ತು ಉದ್ರೇಕಕಾರಿ ಭಾಷಣ ಮಾಡುವವರು ಹುಟ್ಟಿಕೊಂಡಿದ್ದಾರೆ. ಇವರಲ್ಲಿ ಬಿಜೆಪಿಯ ಪ್ರಮುಖ ನಾಯಕರು ಮತ್ತು ಜನಪ್ರತಿನಿಧಿಗಳೂ ಸೇರಿದ್ದಾರೆ.

ಹಿಂದೂ ಯುವಸೇನೆಯು 1990 ದಶಕದಲ್ಲಿ ಆರೆಸ್ಸೆಸ್‌ನ ಬ್ರಾಹ್ಮಣ ಪ್ರಾಬಲ್ಯಕ್ಕೆ, ಆರೆಸ್ಸೆಸ್ಸಿನ ಸ್ಥಳೀಯ ನಾಯಕತ್ವಕ್ಕೆ ಪ್ರತಿಯಾಗಿ ಶೂದ್ರರು ಹುಟ್ಟು ಹಾಕಿದ ಸಂಘಟನೆ. ಇದು ಗಣೇಶೋತ್ಸವ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುತ್ತಾ, ಅಂಬ್ಯುಲೆನ್ಸ್ ಸೇವೆ ಇತ್ಯಾದಿ ಒದಗಿಸುತ್ತಾ, ಸಾಕಷ್ಟು ಪ್ರಬಲವಾಗಿ ಬೆಳೆಯುತ್ತಿತ್ತು. ಇದರಲ್ಲಿ ಹಿಂದೂ ಗೂಂಡಾ ಎಲಿಮೆಂಟುಗಳು ದೊಡ್ಡ ಪ್ರಮಾಣದಲ್ಲಿ ಇದ್ದವು. ಉತ್ತಮ ಸಂಘಟಕನಾಗಿದ್ದ ಇದರ ಸ್ಥಾಪಕ ಗುಣಕರ ಶೆಟ್ಟಿ ಮಂಗಳೂರಿನ ಗಣಪತಿ ಹೈಸ್ಕೂಲಿನ ಬಳಿ ಹಿಂದೂಗಳಿಂದಲೇ ಕೊಲೆಯಾದ ಬಳಿಕ ಅದರ ಪ್ರಭಾವ ಸಂಪೂರ್ಣ ಕುಸಿದು, ಸದಸ್ಯರು ಬೇರೆಬೇರೆ ಸಂಘಟನೆಗಳಲ್ಲಿ ಹರಿದು ಹಂಚಿಹೋದರು.

ಶ್ರೀರಾಮ ಸೇನೆಯು ಹಿಂದೂ ಹೆಸರಿನಲ್ಲಿ ಯಾವುದೇ ತಾತ್ವಿಕ ನೆಲೆಗಟ್ಟು ಇಲ್ಲದ, ಮುಖ್ಯವಾಗಿ ಗೂಂಡಾ ಎಲಿಮೆಂಟುಗಳಿಂದಲೇ ತುಂಬಿದ ಸಂಘಟನೆಯಾಗಿದೆ. ವಸೂಲಿ, ಬಡ್ಡಿ ವ್ಯವಹಾರ, ಗೋರಕ್ಷಣೆಯ ನೆಪದಲ್ಲಿ ದಾಳಿ, ನೈತಿಕ ಪೊಲೀಸ್‌ಗಿರಿ ಇತ್ಯಾದಿ ನೆಪದಲ್ಲಿ ಹಲ್ಲೆ ಮತ್ತು ದಾಳಿ, ಕೋಮುಪ್ರಚೋದಕ ಭಾಷಣ, ಅನ್ಯ ಕೋಮಿನವರ ಮೇಲೆ ಅಕಾರಣ ಹಲ್ಲೆ ಇತ್ಯಾದಿಗಳನ್ನು ನಡೆಸಿದ ಆರೋಪ ಈ ಸಂಘಟನೆಯ ಮೇಲಿದೆ.

ಮುಸ್ಲಿಮರು ಹಿಂದೆ ಇಂತಹಾ ಬಲವಾದ ಯೋಜಿತ ಸಂಘಟನೆಗಳನ್ನು ಹೊಂದಿರಲಿಲ್ಲ. ಅವರ ಕೃತ್ಯಗಳು ರಕ್ಷಣಾತ್ಮಕ ಮತ್ತು ಪ್ರತಿಕ್ರಿಯಾತ್ಮಕವಾಗಿದ್ದವು. ತಮ್ಮ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮಾತ್ರ ಅವರು ಆಕ್ರಮಣಕಾರಿಯಾಗಿದ್ದರು. ಕೋಮುಗಲಭೆಗಳ ಸಂದರ್ಭಗಳಲ್ಲಿ ಮಸೀದಿಗಳಲ್ಲಿ ಒಟ್ಟು ಸೇರುತ್ತಿದ್ದರು. ನಂತರ ಬೇರೆ ಬೇರೆ ಮಸೀದಿಗಳಿಗೆ ಸಂದೇಶ ಹೋಗಿ ಉದ್ರಿಕ್ತ ಪರಿಸ್ಥಿತಿ ಉಂಟಾಗುತ್ತಿತ್ತು. ಇದೊಂದು ರಕ್ಷಣಾತ್ಮಕ ಪ್ರತಿಕ್ರಿಯೆಯಾಗಿರುತ್ತಿತ್ತು.  ಆದರೆ, ಮುಸ್ಲಿಂ  ಧಾರ್ಮಿಕ ನಾಯಕರನ್ನು ಸಂಪರ್ಕಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿತ್ತು. ಕಾಂಗ್ರೆಸ್ ಅವರನ್ನು ಬೆಂಬಲಿಸುತ್ತಿತ್ತು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ಬಳಿಕ ಪರಿಸ್ಥಿತಿ ನಿಧಾನವಾಗಿ ಮತ್ತು ಸಂಪೂರ್ಣವಾಗಿ ಬದಲಾಯಿತು. ಹಲವಾರು ಉಗ್ರವಾದಿ, ಆಕ್ರಮಣಕಾರಿ ಸಂಘಟನೆಗಳು ಹುಟ್ಟಿಕೊಂಡವು. ಅವು ಧಾರ್ಮಿಕ ನಾಯಕರ ನಿಯಂತ್ರಣಕ್ಕೂ ಸಿಗದಾದವು.

ಎರಡು ಕೋಮುಗಳ ನಡುವಿನ ಕಂದರ ವಿಸ್ತಾರವಾಗುತ್ತಾ ಹೋಯಿತು. ಗ್ರಾಮ ಮಟ್ಟದಲ್ಲಿ ನಡೆಯುತ್ತಿದ್ದ ಭೂತದೈವಾರಾದನೆ ಜಾತ್ರೆಗಳಿಗೆ ಹೋಗುವುದನ್ನು ಮುಸ್ಲಿಮರು ನಿಲ್ಲಿಸಿದರು. ಹೋದವರನ್ನು ಹಿಂದೂ ಸಂಘಟನೆಗಳವರು ಹೊಡೆದೋಡಿಸಲು ಆರಂಭಿಸಿದರು. ದರ್ಗಾಗಳಿಗೆ ಹೋಗುತ್ತಿದ್ದ ಮುಸ್ಲಿಮೇತರರ ಸಂಖ್ಯೆ ಕಡಿಮೆಯಾಯಿತು. ಮುಸ್ಲಿಮರಲ್ಲಿಯೂ ಸಂಘಟನೆ, ಪ್ರತಿರೋಧ, ಆಂದೋಲನ ಬಲವಾಗುತ್ತಾ ಹೋಯಿತು. 1993-2006ರ ತನಕ ಈ ಪ್ರಕ್ರಿಯೆ ನಡೆಯಿತು. ಕರ್ನಾಟಕ ಫಾರಂ ಫಾರ್ ಡಿಗ್ನಿಟಿ (ಕೆಡಿಎಫ್) ಹುಟ್ಟಿಕೊಂಡು ಮುಸ್ಲಿಮರಿಗಾದ ಅನ್ಯಾಯಗಳ ವಿರುದ್ಧ ಪ್ರತಿಭಟನೆ ಆರಂಭಿಸಿತು. ಇಂತಹಾ ಚಟುವಟಿಕೆಗಳೇ ಮುಂದೆ ಹೆಚ್ಚು ಆಕ್ರಮಣಕಾರಿಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್.ಐ) ಸ್ಥಾಪನೆಗೆ ಕಾರಣವಾಯಿತು. ಅದು ಹಿಂದೂ ಸಂಘಟನೆಗಳ ಪ್ರತಿರೂಪವಾಗಿ, ಅವು ಹಿಂದೂ ಹುಡುಗಿಯರ ವಿರುದ್ಧ ಪೊಲೀಸ್‌ಗಿರಿ ನಡೆಸುವಂತೆ, ತಾನು ಮುಸ್ಲಿಂ ಮಹಿಳೆಯರ ಮೇಲೆ ಪೋಲೀಸ್‌ಗಿರಿಗೆ ಇಳಿಯಿತು. ಜೊತೆ ಸಂಘಪರಿವಾರದಂತೆ ಹಿಂಸಾಚಾರ, ಪ್ರತೀಕಾರ ಕೃತ್ಯಗಳಿಗೂ ಮುಂದಾಯಿತು. ಮುಂದೆ ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರೂಪದಲ್ಲಿ ರಾಜಕೀಯ ಪಕ್ಷವಾಗಿ ಚುನಾವಣಾ ರಾಜಕಾರಣಕ್ಕೆ ಇಳಿದ ಬಳಿಕ ಅದಕ್ಕೆ ಹೆಚ್ಚಿನ ಬಲವೂ ಬಂತು. ಚೌಕಾಸಿಯ ಶಕ್ತಿಯೂ ಬಂತು. ಸಮಸ್ಯೆ ಇನ್ನಷ್ಟು ಪ್ರಚೋದಕವೂ, ಜಟಿಲವೂ ಆಯಿತು. ಈ ಸಂಘಟನೆಗಳಲ್ಲೂ ತಾತ್ವಿಕ ಹಿನ್ನೆಲೆ ಇರುವವರು ಇದ್ದರೂ, ಗೂಂಡಾ ಮತ್ತು ಕ್ರಿಮಿನಲ್ ಎಲಿಮೆಂಟುಗಳು ದೊಡ್ಡ ಪ್ರಮಾಣದಲ್ಲಿವೆ. ಪ್ರಚೋದನಕಾರಿ ಭಾಷಣ ಮಾಡುವ ರಾಜಕೀಯ, ಧಾರ್ಮಿಕ ನಾಯಕರೂ ಇಲ್ಲಿಯೂ ಇದ್ದಾರೆ.

ಈ ರೀತಿಯ ಬೆಳವಣಿಗೆಗೆ ಕಾರಣವಾದ ಘಟನೆಗಳಲ್ಲಿ ಒಂದನ್ನು ಇಲ್ಲಿ ಗುರುತಿಸಲಾಗಿದೆ. ಇದು ಮುಂದೆ ಪೊಳಲಿ, ಮಾಡೂರು ಮುಂತಾದ ಪ್ರದೇಶಗಳು ಹಲವು ಕೊಲೆಗಳಿಗೆ ಸಾಕ್ಷಿಯಾಗಿ, ಕೋಮುಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿಕೊಳ್ಳುವುದಕ್ಕೆ ಕಾರಣವಾಯಿತು. 2006ರ ಅಕ್ಟೋಬರ್ 7ರಂದು ಬಜರಂಗ ದಳದ ಕಾರ್ಯಕರ್ತರ ಗುಂಪೊಂದು ಪೊಳಲಿಯಲ್ಲಿ ಅಂಬ್ಯುಲೆನ್ಸ್ ಒಂದನ್ನು ತಡೆದು ನಿಲ್ಲಿಸಿತು. ಬೊಳಿಯಾರಿನ ಮೊಹಮ್ಮದ್ ಅಶ್ರಫ್ ಎಂಬವರು ದುಬೈಗೆ ವಿಮಾನ ಹಿಡಿಯಲು ಇತರ ಏಳು ಮಂದಿ ಗೆಳೆಯರ ಜೊತೆ ಅವರಲ್ಲೊಬ್ಬರ ಅಂಬ್ಯುಲೆನ್ಸ್ ಕಾರಿನಲ್ಲಿ ಬಜ್ಪೆಗೆ ತೆರಳುತ್ತಿದ್ದರು. ಅವರನ್ನು ನಿಲ್ಲಿಸಿ ಕೆಳಗಿಳಿಸಿದ ಈ ಕಾರ್ಯಕರ್ತರು ಜೈ ಶ್ರೀ ರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದರು. ಅವರು ಒಪ್ಪದೇ ಇದ್ದಾಗ ಯದ್ವಾತದ್ವಾ ತಲವಾರು ಬೀಸಿದರು. ಅವರಲ್ಲಿ ಇಬ್ರಾಹಿಂ ಎಂಬವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಎಲ್ಲರೂ ಆಸ್ಪತ್ರೆ ಸೇರಿದರು. ಕೋಮುಗಲಭೆಗಳಲ್ಲಿ ನಡೆದ ಕೊಲೆ, ಪ್ರತೀಕಾರದ ಯೋಜಿತ ಕೊಲೆಗಳನ್ನು ಹೊರತುಪಡಿಸಿದರೆ, ಉಡುಪಿಯ ಹಿರಿಯಡ್ಕದಲ್ಲಿ ಪರಿಚಯವೂ ಇಲ್ಲದವರ ಮೇಲೆ, ಕೇವಲ ಕೋಮುಕಾರಣಕ್ಕಾಗಿ ಗೋಸಾಗಾಟದ ಆರೋಪದಲ್ಲಿ ಮುಸ್ಲಿಂ ತಂದೆ-ಮಗನನ್ನು ಬೆತ್ತಲೆಗೊಳಿಸಿ ಥಳಿಸಲಾದ ರಾಜ್ಯದ  ಮೊದಲ ಸಾಮೂಹಿಕ ಲಿಂಚಿಂಗ್ ಪ್ರಕರಣವು ಒಂದು ಅಮಾನುಷ ಘಟನೆ. ಇದರಲ್ಲಿ ತಂದೆ ಹುಸೈನಬ್ಬ ಎಂಬ ವೃದ್ಧ  ಸಾವಿಗೀಡಾಗಿದ್ದರು. ಇದರ ಆರೋಪಿಗಳು ಬಿಡುಗಡೆಗೊಂಡಾಗ ಹೂಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು. ಇದು ಮುಸ್ಲಿಂ ಉಗ್ರವಾದಿ, ಪ್ರತೀಕಾರವಾದಿ ಸಂಘಟನೆಗಳನ್ನು ಇನ್ನಷ್ಟು ಬಲಗೊಳಿಸಿತು.

ಆ ನಂತರ ಮೇ 13, 2003ರಲ್ಲಿ ಮಂಗಳೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಆಗಿನ ಅಧ್ಯಕ್ಷರಾಗಿದ್ದ  ಎಂ.ಡಿ. ಜಬ್ಬಾರ್ ಅವರನ್ನು ಹೆಂಡತಿ ಮಕ್ಕಳ ಎದುರೇ ಕೊಂದದ್ದು, ಪ್ರತೀಕಾರವಾಗಿ ನ್ಯಾಯಾಲಯದಲ್ಲಿ  ಬಿಡುಗಡೆಗೊಂಡ ಅದರ ಮುಖ್ಯ  ರೂವಾರಿ ಎನ್ನಲಾದ ಪೊಳಲಿ ಅನಂತು ಎಂಬಾತನನ್ನು ಕೊಂದದ್ದು ಸೇರಿದಂತೆ ಕೋಮುಸಂಬಂಧಿ ಕೊಲೆಗಳ ಸರಣಿಯೇ ನಡೆದಿದೆ. ಜೊತೆಗೆ ಯಾರ ಜೊತೆಗೂ ಜಗಳವಿಲ್ಲದ ಅಮಾಯಕ ವ್ಯಕ್ತಿಗಳೂ ಎರಡೂ ಕಡೆಗಳಲ್ಲಿ ಬಲಿಯಾಗಿದ್ದಾರೆ. ಇಲ್ಲಿ ಕೊಲೆಯಾದವರೂ, ಜೈಲಿನಲ್ಲಿ ಕೊಳೆತವರೂ ಎಲ್ಲರೂ ಕೆಳಜಾತಿಗಳ, ಕೆಳವರ್ಗಗಳ ಸಾಮಾನ್ಯ ಜನರಾಗಿರುವುದು ಗಮನಾರ್ಹ.

1990ರ ದಶಕದಲ್ಲಿ ಈಗ ಭಯೋತ್ಪಾದನೆ ಆರೋಪದಲ್ಲಿ ಜೈಲಿನಲ್ಲಿರುವ ಕೇರಳ ಪಿಡಿಎಫ್ ಪಕ್ಷದ ನಾಯಕನಾಗಿದ್ದ ಅಬ್ದುಲ್ ನಾಸೆರ್ ಮದನಿಯ ಮಂಗಳೂರು ಸಭೆಯು ಸಾಮಾನ್ಯ ಹಿಂದೂಗಳಲ್ಲಿಯೂ ನಡುಕ ಹುಟ್ಟಿಸುವಂತಿತ್ತು. ಆರೆಸ್ಸೆಸ್ ಮಾದರಿಯಲ್ಲಿ ಕಪ್ಪು ಮಿಲಿಟರಿ ರೀತಿಯ ಸಮವಸ್ತ್ರ ಧರಿಸಿದ ಕಾರ್ಯಕರ್ತರ ದಂಡೇ ಮೆರವಣಿಗೆ ಮತ್ತು ಸಭೆಯಲ್ಲಿತ್ತು. ಇದು ಕೂಡಾ ಸಾಮಾನ್ಯ ಹಿಂದೂ ಮತ್ತು ಮುಸ್ಲಿಮರಿಬ್ಬರೂ ಪರಸ್ಪರ ಹೆಚ್ಚು ಅಪನಂಬಿಕೆ ತೋರಿ, ಕೋಮುವಾದಿಗಳ ಕಡೆಗೆ ವಾಲುವಂತೆ ಮಾಡಿತು.

ಸಂಘಟನೆಗಳ ಸ್ವರೂಪ
ಜಿಲ್ಲೆಯಲ್ಲಿ ನಡೆದಿರುವ ಕೋಮುಗಲಭೆ ಮತ್ತು ಹಿಂಸಾಚಾರಗಳನ್ನು ಸ್ಥೂಲವಾಗಿ ಗಮನಿಸುವ ಮೊದಲು ಎರಡೂ ಕೋಮುಗಳ ಸಂಘಟನೆಗಳಲ್ಲಿ ಇರುವ ಸಮಾನತೆಗಳನ್ನು ಮತ್ತು ಅವುಗಳ ರಚನೆಗಳನ್ನು ಗುರುತಿಸುವ ಅಗತ್ಯವಿದೆ.

ಮುಖ್ಯವಾಗಿ ಎರಡೂ ರೀತಿಯ ಸಂಘಟನೆಗಳಲ್ಲಿ ಸೂತ್ರಧಾರಿಗಳಾಗಿರುವವರು ಅತ್ಯಂತ ಪ್ರಭಾವಿಗಳಾಗಿರುವ ಮೇಲ್ಜಾತಿ ಮತ್ತು ಮೇಲ್ವರ್ಗಗಳ ಮುಂದಾಳುಗಳು, ಶ್ರೀಮಂತ ವರ್ತಕರು, ಉದ್ಯಮಿಗಳು, ಧಾರ್ಮಿಕ ಅಥವಾ ರಾಜಕೀಯ ನಾಯಕರಾಗಿರುತ್ತಾರೆ. ಅವರು ಎಲ್ಲಿಯೂ ನೇರವಾಗಿ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದೇ ಎಲ್ಲವನ್ನೂ ನಿಯಂತ್ರಿಸುತ್ತಾರೆ. ಇವರನ್ನು ಮುಟ್ಟಲು ಯಾವುದೇ ಸರಕಾರ ಹಿಂಜರಿಯುವ ಪರಿಣಾಮವಾಗಿ ಪೊಲೀಸರೂ ಅಸಹಾಯಕರಾಗಿರಬೇಕಾಗುತ್ತದೆ. ಜಿಲ್ಲೆಯಲ್ಲಿ ಇದನ್ನು ಮೀರಿದ ಅನೇಕ ಅಧಿಕಾರಿಗಳು ವರ್ಗಾವಣೆಗೆ ಒಳಗಾದ ಹಲವು ನಿದರ್ಶನಗಳಿವೆ. ಇವರು ಗಲಭೆಗಳಲ್ಲಿ, ಕ್ರಿಮಿನಲ್ ಕೃತ್ಯಗಳಲ್ಲಿ ಬಂಧಿತರಾದವರನ್ನು ಬಿಡಿಸುವುದು, ನೆರವು ನೀಡುವುದು ಇತ್ಯಾದಿಗಳ ಮೂಲಕ ಜೀವನಪರ್ಯಂತ ಗುಲಾಮರನ್ನಾಗಿ ಮಾಡುತ್ತಾರೆ.

ಎರಡನೇ ರೀತಿಯವರೆಂದರೆ ಎರಡನೇ ಹಂತದ ನಾಯಕರಾಗಿರುವವರು. ಇಂತವರಲ್ಲಿ ಕೆಲವರು ತಾತ್ವಿಕ ನಿಷ್ಟೆ ಹೊಂದಿದ್ದರೂ, ಹೆಚ್ಚಿನವರು ಕೆಳಹಂತದ ರಾಜಕೀಯ ನಡೆಸುವ ಮರಿ ಪುಡಾರಿಗಳು, ಮರಳು, ಬಡ್ಡಿ ವ್ಯವಹಾರ, ಗೂಂಡಾಗಿರಿ, ವಸೂಲಿ, ಕ್ಲಬ್, ಜೂಜು, ವಾಹನ, ಭೂವ್ಯವಹಾರ, ಮ್ಯಾನ್ ಪವರ್ ಇತ್ಯಾದಿಯಾಗಿ ಅಕ್ರಮ ಚಟುವಟಿಕೆಗಳನ್ನೂ, ಅಂಗಡಿ, ಶೋರೂಂ, ಗುತ್ತಿಗೆ, ಮದ್ಯ ಮಾರಾಟ ಇತ್ಯಾದಿಯಾಗಿ ಅರೆಕಾನೂನು ಬಾಹಿರ, ಅಂದರೆ ಉದ್ದಿಮೆ ಕಾನೂನುಬದ್ಧವಾಗಿದ್ದರೂ ಅಕ್ರಮ ಚಟುವಟಿಕೆ ನಡೆಸುವ ವ್ಯವಹಾರಗಳಲ್ಲಿ ತೊಡಗಿಕೊಂಡವರಾಗಿದ್ದಾರೆ. ಇವರು ಧಾರ್ಮಿಕ, ಕ್ರೀಡಾ ಸೋಗಿನ ಕಾರ್ಯಕ್ರಮಗಳನ್ನು ನಡೆಸುತ್ತಾ, ನೆರವು ನೀಡುತ್ತಾ, ಬಾವುಟ, ಬಂಟಿಂಗ್, ಬ್ಯಾನರ್, ಕಟೌಟ್ ಇತ್ಯಾದಿಗಳಲ್ಲಿ ಸ್ಪರ್ಧೆ ನಡೆಸುತ್ತಾ, ಕ್ಷುಲ್ಲಕ ಕಾರಣಗಳಿಗಾಗಿ ತಂಟೆ ತಕರಾರು, ಉದ್ವಿಗ್ನತೆ ಎಬ್ಬಿಸುತ್ತಾ, ಸಭೆ, ಪ್ರತಿಭಟನೆಗಳನ್ನು ಆಯೋಜಿಸುತ್ತಾ ಇರುತ್ತಾರೆ. ಇಂತವರಿಗೆ ಗೂಂಡಾ ಎಲಿಮೆಂಟುಗಳನ್ನು ಪೋಷಿಸುವುದು, ತಮ್ಮ ಚಟುವಟಿಕೆಗಳಿಗೆ ರಾಜಕೀಯ, ಧಾರ್ಮಿಕ ನಾಯಕರ ಆಶೀರ್ವಾದ ಪಡೆಯುವುದು ಅನಿವಾರ್ಯವಾಗಿರುತ್ತದೆ. ಇವರು ಕೂಡಾ ಕಾನೂನಿನ ಕೈಗೆ ಸಿಗುವುದಿಲ್ಲ.

ಮೂರನೇ ವರ್ಗವೆಂದರೆ ಇಂತಹಾ ಗಲಭೆ ಗಲಾಟೆಗಳಲ್ಲಿ ಭಾಗವಹಿಸಿ ಜೀವ ಕಳೆದುಕೊಳ್ಳುವ, ಜೀವ ತೆಗೆಯುವ, ಜೀವ ಕಳೆದುಕೊಳ್ಳುವ, ಹಲ್ಲೆ ಮಾಡುವ, ಹಲ್ಲೆಗೆ ಒಳಗಾಗುವ, ಜೈಲುಪಾಲಾಗುವ, ಜೀವನ ಹಾಳುಮಾಡಿಕೊಳ್ಳುವ, ಹೆತ್ತವರು ಮತ್ತು ಕುಟುಂಬವನ್ನು ಸಂಕಟಕ್ಕೆ ತಳ್ಳುವ ಯುವಕರು. ಇವರಲ್ಲಿ ಕೆಲವರು ಪ್ರಾಮಾಣಿಕವಾಗಿಯೇ ಕೋಮು ಪಿತ್ತವನ್ನು ನೆತ್ತಿಗೇರಿಸಿಕೊಂಡವರು. ಇಂತವರಲ್ಲಿ ಕುಡುಕರು, ಗಾಂಜಾ ವ್ಯಸನಿಗಳು, ನಿರುದ್ಯೋಗಿಗಳು, ಸೋಮಾರಿಗಳು, ಶೋಕಿಲಾಲರು, ಗೂಂಡಾಗಳು, ಸೈಕೊಗಳು, ಕಳ್ಳ ದರೋಡೆಕೋರರು, ರೇಪಿಸ್ಟರೇ ಮೊದಲಾಗಿ ಪಕ್ಕಾ ಕ್ರಿಮಿನಲ್‌ಗಳು ಇರುತ್ತಾರೆ. ಮೊದಲಿಗೆ ಇವರಿಗೆ ನೆರವಾಗುವ ಸಂಘಟನೆಗಳು, ಪಕ್ಷಗಳು ಅವರು ತೊಂದರೆಗೆ ಸಿಲುಕಿ ಮುಳುಗುತ್ತಿರುವಾಗ ಕೈ ಬಿಡುತ್ತವೆ. ಅವರಿಗೂ ತಮಗೂ ಸಂಬಂಧವೇ ಇಲ್ಲ ಎಂದು ಹೇಳಿ ಕೈತೊಳೆದುಕೊಳ್ಳುತ್ತವೆ. ಸತ್ತಾಗ ಪ್ರತಿಭಟನೆಯ ನಾಟಕವಾಡುತ್ತಾ, ಪ್ರತೀಕಾರಕ್ಕಾಗಿ ಪ್ರಚೋದಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಇದು ಎಲ್ಲಾ ಬಣ್ಣಗಳ ಮಟ್ಟಿಗೂ ನಿಜ. ಹೆಚ್ಚಿನ ಸಲ ಎರಡೂ ಕೋಮುಗಳಿಗೆ ಸೇರಿದ ಇಂತವರ ನಡುವಿನ ವೈಯಕ್ತಿಕ ವ್ಯವಹಾರ ಮತ್ತು ಸ್ಪರ್ಧೆಗೆ ಸಂಬಂಧಿಸಿಯೇ ಕೋಮು ಉದ್ವಿಗ್ನತೆ ಉಂಟಾಗುತ್ತದೆ.

ನಾಲ್ಕನೇ ವರ್ಗವೇ ಇಂತಹಾ ಕೋಮುವಾದಿ ಚಟುವಟಿಕೆಗಳು, ಹಿಂಸಾಚಾರ, ಬಂದ್ ಪ್ರತಿಭಟನೆಗಳಿಂದ ಕೆಲಸವಿಲ್ಲದೇ ತೊಂದರೆ ಅನುಭವಿಸುವ, ಕೆಲವೊಮ್ಮೆ ಹಲ್ಲೆಗೂ ಒಳಗಾಗುವ ಕಾರ್ಮಿಕರಾದಿಯಾಗಿ ಜನಸಾಮಾನ್ಯರು. ಇವರು ಯಾವ ಚಟುವಟಕೆಗಳಲ್ಲಿ ಭಾಗವಹಿಸದಿದ್ದರೂ, ತೊಂದರೆ ಅನುಭವಿಸಿದರೂ ಮಾನಸಿಕವಾಗಿ ಒಂದಲ್ಲ ಒಂದು ಗುಂಪು ಅಥವಾ ಪಕ್ಷವನ್ನು ಮುಗ್ಧವಾಗಿ ಬೆಂಬಲಿಸುವವರು ಅಥವಾ ಸಮರ್ಥಿಸುವವರು.

ಇಲ್ಲೊಂದು ವಿಚಿತ್ರ ವಿದ್ಯಮಾನವನ್ನು ಗಮನಿಸಬೇಕು. ಅದೆಂದರೆ, ಸಾರ್ವಜನಿಕವಾಗಿ ಕಚ್ಚಾಡುವಂತೆ ಕಾಣಿಸಿಕೊಳ್ಳುವ ಒಂದನೇ ಮತ್ತು ಎರಡನೇ ಹಂತದ ನಾಯಕರು ಪರಸ್ಪರ ಸಂಪರ್ಕ, ವ್ಯವಹಾರದಲ್ಲಿದ್ದು, ಜನಸಾಮಾನ್ಯರನ್ನು ಮಾತ್ರ ಕಚ್ಚಾಡಿಸುವುದು. ಇದಕ್ಕೆ ಎರಡು ಉದಾಹರಣೆಗಳನ್ನು ಕೊಡಬಹುದು.

ರಾಜಕೀಯವಾಗಿ, ಎಸ್‌ಡಿಪಿಐಯ ಮೇಲೆ ಇರುವ ಆರೋಪವೆಂದರೆ, ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ತೀವ್ರ ವಿರುದ್ಧವಾಗಿರುವಂತೆ ತೋರಿಸಿಕೊಳ್ಳುತ್ತದೆ. ಕಾಂಗ್ರೆಸ್ ಅಷ್ಟು ಪ್ರಬಲ ವಿರೋಧ ಮಾಡುತ್ತಿಲ್ಲ; ಮೃದು ಹಿಂದೂತ್ವ ತಳೆಯುತ್ತಿದೆ ಎಂದು ಆರೋಪಿಸುತ್ತದೆ. ಆದರೆ ಚುನಾವಣೆಯ ವೇಳೆ ಸ್ಪರ್ಧಿಸಿ, ಮುಸ್ಲಿಂ ಮತಗಳನ್ನು ಒಡೆದು, ತಾನೂ ಗೆಲ್ಲದೆ, ತನ್ನ ಪರಮ ವೈರಿಯಾದ ಬಿಜೆಪಿ ಗೆಲ್ಲಲು ಸುಲಭ ಮಾಡಿಕೊಡುತ್ತಿದೆ ಎಂಬದೇ ಈ ಆರೋಪ.

ವ್ಯವಹಾರದ ಉದಾಹರಣೆ ಕೊಡಬೇಕೆಂದರೆ, ಶ್ರೀಮಂತ ಮುಸ್ಲಿಮರ ಒಡೆತನದ ಮಂಗಳೂರಿನ ಹೆಚ್ಚಿನ ಮಾಲ್, ಬಜಾರ್, ಆರ್ಕೇಡ್, ಶೋರೂಂಗಳ ಸೆಕ್ಯುರಿಟಿ ಗುತ್ತಿಗೆಯನ್ನು ಹಿಂದೂ ಸಂಘಟನೆಗಳು ನಡೆಸುವ ಸೆಕ್ಯೂರಿಟಿ ಏಜೆನ್ಸಿಗಳಿಗೆ ನೀಡಲಾಗಿದೆ. ಗಲಾಟೆ ಮಾಡುವವರೇ ಕಾವಲುಗಾರರಾದರೆ, ಗಲಾಟೆಯೇ ಇರುವುದಿಲ್ಲ ಎಂಬ ತರ್ಕ ಇರಬಹುದು. ಆದರೆ, ಈ ಕೋಮು ಸಂಘಟನೆಗಳಿಗೆ ತಮ್ಮ ಗೂಂಡಾ ಪಡೆಗಳಿಗೆ ಸುಲಭದ ಉದ್ಯೋಗ ಒದಗಿಸಿ, ಸಾಕಲು ಇದು ಅನುಕೂಲವಾಗುತ್ತದೆ. ಜನಸಾಮಾನ್ಯರಿಗೆ ಇದರ ಪರಿವೆಯೇ ಇರುವುದಿಲ್ಲ.

ಒಟ್ಟಿನಲ್ಲಿ ದಕ್ಷಿಣ ಕನ್ನಡದ ಕೋಮು ಸಮಸ್ಯೆಗೆ ಧರ್ಮ ಒಂದು ನೆಪವಾಗಿದ್ದು, ಅದರ ಮೂಲ ಮೇಲು ಜಾತಿ ಮತ್ತು ವರ್ಗಗಳ ರಾಜಕೀಯ ಮತ್ತು ಆರ್ಥಿಕ ಮಾಫಿಯಾದಲ್ಲಿದೆ. ಆರ್ಥಿಕವಾಗಿ ಮುಂದುವರಿದಿರುವ, ಅತೀಬುದ್ಧಿವಂತರ ಜಿಲ್ಲೆಗಳಲ್ಲಿ ಕೋಮುವಾದ ಬೆಳೆಯಲು ಈ ಆರ್ಥಿಕ ಕಾರಣವೂ ಒಂದಾಗಿರಬಹುದು ಮತ್ತು ಗೂಂಡಾಗಿರಿ ಮಾಡುವವರಿಗೆ ಒಂದು ಧಾರ್ಮಿಕ ಐಡೆಂಟಿಟಿ ಮತ್ತು ಹುಸಿ ಸ್ದಾನಮಾನ ದೊರಕಿಸಿಕೊಡುವುದು ಇನ್ನೊಂದು ಕಾರಣವಾಗಿರಬಹುದು.

ದಕ್ಷಿಣ ಕನ್ನಡದಲ್ಲಿಕೋಮುಗಲಭೆಗಳಕತೆ ಗೊತ್ತಾ?
ಬೊಗಸೆಗೆ ದಕ್ಕಿದ್ದು…17

-ನಿಖಿಲ್ ಕೋಲ್ಪೆ

ಕರ್ನಾಟಕ ಕರಾವಳಿಯಲ್ಲಿ ಕೋಮುವಾದದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ, ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಪರಿಸ್ಥಿತಿಯನ್ನೂ ಗಮನಿಸಬೇಕು. ಹಿಂದೆ ಬಹುತೇಕ ಗ್ರಾಮೀಣ ಹಿಂದೂಗಳು ಕೃಷಿ ಮತ್ತು ಹೈನುಗಾರಿಕೆ ಮುಂತಾದ ಕೃಷಿ ಸಂಬಂಧಿ ಉದ್ಯೋಗಗಳು, ಮೂರ್ತೆದಾರಿಕೆ (ತಾಳೆ ಮರದಿಂದ ಶೇಂದಿ ಇಳಿಸುವುದು), ಮೀನುಗಾರಿಕೆ, ಕುಂಬಾರಿಕೆಯಂತಹಾ ಜಾತಿ ಸಂಬಂಧಿ ಉದ್ಯೋಗಗಳಲ್ಲಿ ಮತ್ತು ಕೃಷಿಕೂಲಿಯಲ್ಲಿ ತೊಡಗಿದ್ದರು. ಮುಸ್ಲಿಮರು ಮೀನು, ದಿನಸಿ ಸೇರಿದಂತೆ ಬೇರೆಬೇರೆ ವ್ಯಾಪಾರಗಳಲ್ಲಿ ತೊಡಗಿದ್ದರು. ಈ ಉದ್ಯೋಗಗಳು ಪರಸ್ಪರ ಪೂರಕವಾಗಿದ್ದುದರಿಂದ ಯಾವುದೇ ಸ್ಪರ್ಧೆ ಇಲ್ಲದೇ ಸಾಮರಸ್ಯ ನೆಲೆಸಿತ್ತು.

ಇದನ್ನು ಇಂದಿಗೂ ನಡೆಯುತ್ತಿರುವ ಮೀನುಗಾರಿಕೆಯ ವೃತ್ತಿಯಲ್ಲಿ ಗಮನಿಸಬಹುದು. ಮೊಗವೀರ ಸಮುದಾಯದ ಮುಖ್ಯ ಉದ್ಯೋಗವೇ ಮೀನುಗಾರಿಕೆ. ಗಂಡಸರು ಮೀನು ಹಿಡಿಯುವ ಕೆಲಸವನ್ನು ಮಾಡಿದರೆ, ಮಹಿಳೆಯರು ಕರಾವಳಿ ಭಾಗದಲ್ಲಿ ಮೀನು ಮಾರಾಟ ಮಾಡುತ್ತಾರೆ. ಅವರೇ ದೈನಂದಿನ ವ್ಯವಹಾರದಲ್ಲಿ ಗಂಡಸರಿಗೆ ಸರಿಸಾಟಿಯಾಗಿ ಪಾಲುಗೊಳ್ಳಬೇಕಾಗಿದೆ. ಆದುದರಿಂದ, ಅವರು ದಿಟ್ಟತನಕ್ಕೆ ಹೆಸರಾಗಿದ್ದಾರೆ. ಆದರೆ, ಒಳಭಾಗದ ಹಳ್ಳಿಗಳಿಗೆ ಮೀನು ಪೂರೈಕೆ, ಮಾರಾಟ ಮಾಡುವವರಲ್ಲಿ 90 ಶೇಕಡಾ ಮುಸ್ಲಿಮರೇ ಆಗಿದ್ದಾರೆ. ಈಗ ಪೈಪೋಟಿಗೆಂದು ಆರೆಸ್ಸೆಸ್ ಪ್ರೇರಿತ ಶೂದ್ರರೂ ಮೀನು ಮಾರಾಟ ಆರಂಭಿಸಿದ್ದಾರೆ. ಈ ಎರಡೂ ವೃತ್ತಿಗಳು ಪರಸ್ಪರ ಪೂರಕವಾಗಿದ್ದು, ಸೌಹಾರ್ದ ಅನಿವಾರ್ಯವಾಗಿದೆ. ಆದರೆ, ವ್ಯವಹಾರ ಸಂಬಂಧಿ ಚೌಕಾಶಿಯ ಜೊತೆಗೆ, ಪರಸ್ಪರ ಅಸೂಯೆಗಳೂ ಇರುತ್ತವೆ. ಇದು ಕೋಮುಗಲಭೆಗಳ ಸಂದರ್ಭದಲ್ಲಿ ಭುಗಿಲೇಳುತ್ತದೆ. ಅನಿವಾರ್ಯವಾಗಿ ಅಷ್ಟೇ ಬೇಗನೇ ತಣಿಯುತ್ತದೆ ಕೂಡಾ.

ಜಿಲ್ಲೆಯಲ್ಲಿ ಕೋಮು ಗಲಭೆಗಳು ನಡೆದಾಗ ಅವು ಹೆಚ್ಚಿನ ತೀವ್ರತೆ ಪಡೆಯುವುದು ಮೊಗವೀರ ಮತ್ತು ಮುಸ್ಲಿಂ ಸಮುದಾಯಗಳು ಹೆಚ್ಚಾಗಿರುವ ಸ್ಥಳಗಳಲ್ಲಿ ಎಂಬ ಕುತೂಹಲಕಾರಿ ಅಂಶವನ್ನು ಗಮನಿಸಬಹುದು. (ಉದಾಹರಣೆಗೆ ಬೈಕಂಪಾಡಿ, ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ, ಉಳ್ಳಾಲ ಇತ್ಯಾದಿ). ಈ ಮೂಲಕ ಕೋಮುವಾದದ ಸಮಸ್ಯೆಯು ಒಂದು ರೀತಿಯ ಮನೋವೈಜ್ಞಾನಿಕ ಆಯಾಮ ಹೊಂದಿರುವುದನ್ನು ಕಾಣಬಹುದು. ಕೋಮುಗಲಭೆಗಳ ಸಂದರ್ಭಗಳಲ್ಲಿ, ಹಳ್ಳಿಗಳಲ್ಲಿ ಮುಸ್ಲಿಂ ಮೀನು ವ್ಯಾಪಾರಿಗಳ ಮೇಲೆ ನಡೆದ ಅಪ್ರಚೋದಿತ ದಾಳಿಗಳನ್ನು ಗಮನಿಸಬಹುದು.

ಆದರೆ, ಜಿಲ್ಲೆಯಲ್ಲಿ ಇನ್ನೊಂದು ವ್ಯಾವಹಾರಿಕ ವೈರುಧ್ಯವನ್ನು ಕಾಣಬಹುದು. ಗೌಡ ಸಾರಸ್ವತ ಸಮುದಾಯದ ಬಹುತೇಕ ಜನರು ಅಂಗಡಿ ವ್ಯಾಪಾರವನ್ನು ಅವಲಂಬಿಸಿದವರು. ಅದೇ ರೀತಿಯಲ್ಲಿ ಮುಸ್ಲಿಮರು ಕೂಡಾ ವ್ಯಾಪಾರವನ್ನೇ ಅವಲಂಬಿಸಿರುವುದರಿಂದ ಹಿತಾಸಕ್ತಿ ಸಂಘರ್ಷಗಳು ಇರುತ್ತವೆ. ಜಿಲ್ಲೆಯಲ್ಲಿರುವ ಪೇಟೆಗಳ ರಚನೆಯನ್ನು ಗಮನಿಸಬಹುದು. ಮುಖ್ಯಪೇಟೆಯನ್ನು ಮೇಲಿನ ಪೇಟೆ ಎಂದು ಕರೆಯಲಾಗುತ್ತಿದ್ದು, ಅಲ್ಲಿ ಜಿಎಸ್‌ಬಿ ಸಮುದಾಯದ ಪ್ರಾಬಲ್ಯ ಇರುತ್ತದೆ. ಅದೇ ರಸ್ತೆಯ ಇನ್ನೊಂದು ಭಾಗದಲ್ಲಿ ತಪ್ಪದೇ ಒಂದು ‘ಕೆಳಗಿನ ಪೇಟೆ’ ಇದ್ದು, ಅಲ್ಲಿ ಮುಸ್ಲಿಮರ ಪ್ರಾಬಲ್ಯ ಇರುತ್ತದೆ. ಮೇಲಿನ ಪೇಟೆಯಲ್ಲಿ ದೇವಾಲಯಗಳೂ, ಕೆಳಗಿನ ಪೇಟೆಯಲ್ಲಿ ಮಸೀದಿಗಳೂ ಇರುತ್ತವೆ.

ಕೋಮುಗಲಭೆಗಳು, ತಂಟೆಗಳು ಇಂತಹಾ ಪೇಟೆಗಳಲ್ಲಿ ಹೆಚ್ಚಾಗಿ ಭುಗಿಲೇಳುವುದನ್ನು ಗಮನಿಸಬಹುದು. (ಉದಾಹರಣೆಗೆ ಬಿ.ಸಿ.ರೋಡ್-ಕೈಕಂಬ, ಬಂಟ್ವಾಳ, ಕಲ್ಲಡ್ಕ, ಪಾಣೆಮಂಗಳೂರು, ಬಂದರು-ಕಾರ್‌ಸ್ಟ್ರೀಟ್, ಪುತ್ತೂರು, ವಿಟ್ಲ, ಉಪ್ಪಿನಂಗಡಿ) ಇಲ್ಲಿನ ಹಿಂದೂ-ಮುಸ್ಲಿಂ ವ್ಯಾಪಾರಿಗಳು ನೇರವಾಗಿ ಗಲಭೆಗಳಲ್ಲಿ ಭಾಗವಹಿಸಿರುವುದಾಗಲೀ, ಬಂಧನಕ್ಕೆ ಒಳಗಾಗಿರುವುದಾಗಲೀ ತೀರಾ ಅಪರೂಪ. ಆದರೆ, ಹಿನ್ನೆಲೆಯಲ್ಲಿ ಅವರ ಪಾತ್ರವಿರುವುದು ಕಂಡುಬರುತ್ತದೆ. ಅಲ್ಲಿ ನಡೆಯುವ ಗಲಭೆಗಳಲ್ಲಿ ಭಾಗವಹಿಸುವವರು ಸಾಮಾನ್ಯವಾಗಿ, ಸಾಮಾನ್ಯ ಮುಸ್ಲಿಮರು ಮತ್ತು ಬಿಲ್ಲವ, ಕುಲಾಲ (ಕುಂಬಾರ) ಇತ್ಯಾದಿಯಾಗಿ ಗ್ರಾಮೀಣ ಸಮುದಾಯದವರು. ಬ್ರಾಹ್ಮಣ ಅಥವಾ ಗೌಡ ಸಾರಸ್ವತ ಸಮುದಾಯಗಳ ಒಬ್ಬರೂ ಇಂತಹ ಗಲಭೆಗಳಲ್ಲಿ ಸತ್ತದ್ದಾಗಲೀ, ಬಂಧನಕ್ಕೆ ಒಳಗಾದದ್ದಾಗಲೀ ನನಗಂತೂ ಗೊತ್ತಿಲ್ಲ. ಊರು ಹೊತ್ತಿ ಉರಿಯುತ್ತಿರುವಾಗ ಅವರು ಮನೆಯ ಬಾಗಿಲು ಭದ್ರಪಡಿಸಿಕೊಂಡು ಪಿಟೀಲು ಬಾರಿಸುತ್ತಾರೆ.

ಇತ್ತೀಚೆಗೆ ಆಧುನೀಕರಣ, ನಗರೀಕರಣದ ಕಾರಣದಿಂದ ಸಾಂಪ್ರದಾಯಿಕ ಉದ್ಯೋಗಗಳು ನಶಿಸಿ, ಹೊಸಹೊಸ ರೀತಿಯ ಉದ್ಯೋಗ, ಉದ್ದಿಮೆ, ವ್ಯಾಪಾರಗಳನ್ನು ಅವಲಂಬಿಸಲೇ ಬೇಕಾಗಿರುವುದರಿಂದ, ಅವುಗಳಿಗಾಗಿ ವಿವಿಧ ಸಮುದಾಯಗಳ ನಡುವೆ ಉಂಟಾಗುವ ಪೈಪೋಟಿ, ವ್ಯವಹಾರಗಳು ಕೋಮುಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತವೆ ಎಂಬುದನ್ನು ಗಮನಿಸಬೇಕು.

ರಾಜಕೀಯ ಕಾರಣಗಳಿಗಾಗಿ ವಿವಿಧ ಪಕ್ಷಗಳು ಮತ್ತು ಸಂಘಟನೆಗಳು ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿವೆ. ಕೋಮು ಧ್ರುವೀಕರಣ ಮತ್ತು ಮತಬ್ಯಾಂಕ್ ರಾಜಕಾರಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಸಮಸ್ಯೆ ಉಲ್ಭಣಿಸುವುದಕ್ಕೆ ಕಾರಣಗಳಾಗಿವೆ. ರಾಜಕೀಯ ಪಕ್ಷಗಳ ಅಪರಾಧೀಕರಣ, ಕ್ರಿಮಿನಲ್‌ಗಳಿಗೆ ರಾಜಕೀಯ ಆಶ್ರಯ, ಪೊಲೀಸ್ ಕೆಲಸಗಳಲ್ಲಿ ಪ್ರಭಾವಿ ರಾಜಕಾರಣಿಗಳ ಹಸ್ತಕ್ಷೇಪ, ಠಾಣೆಗಳಿಗೆ ಮುತ್ತಿಗೆ ಹಾಕಿ ಒತ್ತಡ ಹೇರುವ ತಂತ್ರ, ಕೋಮು ಉದ್ವಿಗ್ನತೆಯನ್ನು ಶಮನ ಮಾಡುವ ಬದಲು ಇನ್ನಷ್ಟು ಪ್ರಚೋದನೆ ನೀಡುವ ಉದ್ರೇಕಕಾರಿ ಭಾಷಣಗಳನ್ನು ಮಾಡುವುದು ಇತ್ಯಾದಿಗಳೂ ಕೋಮುವಾದದ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿವೆ. ಗಾಂಜಾ ಇತ್ಯಾದಿ ಮಾದಕ ವಸ್ತುಗಳ ಮಾರಾಟ ಜಾಲಗಳೂ ತಮ್ಮ ಪಾಲು ಸಲ್ಲಿಸಿವೆ. ಅದನ್ನು ಪರಿಶೀಸುವುದಕ್ಕಿಂತ ಮೊದಲು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊತ್ತಮೊದಲಾಗಿ ಕೋಮುಗಲಭೆ ಆರಂಭವಾದ ಹಿನ್ನೆಲೆಯನ್ನು ಪರಿಶೀಲಿಸುವುದು ಅಗತ್ಯ.

ಸುಲಭವಾಗಿ ಸಿಗುವ ದಾಖಲೆಗಳನ್ನು ಮಾತ್ರವೇ ನೋಡಿ ಹೇಳುವುದಾದರೆ, 1968ರಲ್ಲಿ ಕರಾವಳಿ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕನ್ನಡದಲ್ಲಿ ಕೋಮು ಉದ್ವಿಗ್ನತೆ ಹೆಚ್ಚಿತ್ತು. ಸುಳ್ಳು ವದಂತಿಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೂ ತಲಪಿದವು. ಆ ಸಂದರ್ಭದಲ್ಲಿಯೇ ಮಂಗಳೂರಿನಲ್ಲಿ ಮಟನ್ ಖಾದರ್ ಎಂಬಾತನಿಗೂ, ಮೀನು ಮಾರುವ ಒಬ್ಬರು ಮೊಗವೀರ ಮಹಿಳೆಗೂ ಪ್ರೇಮಸಂಬಂಧವಿದೆ ಎಂಬ ವದಂತಿ ಮೊದಲ ಗಲಭೆಗೆ ಕಾರಣವಾಯಿತು. ಈ ಗಲಭೆಯಲ್ಲಿ ಮಂಗಳೂರಿನ ಹಳೆ ಬಂದರು ಪ್ರದೇಶದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ಸಾವಿಗೀಡಾದ ಬಗ್ಗೆ ಮಾಹಿತಿ ಸಿಗುತ್ತದೆ.

1975ರ ಹೊತ್ತಿಗೆ, ಅಂದರೆ ತುರ್ತು ಪರಿಸ್ಥಿತಿಯ ಹೊತ್ತಿಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಬಲವಾಗಿದ್ದು, ಬಹುತೇಕ ಎಲ್ಲಾ ಮುಸ್ಲಿಮರು, ಕ್ರೈಸ್ತರು ಹಾಗೂ ಬಹುಸಂಖ್ಯೆಯಲ್ಲಿ ಹಿಂದೂಗಳು ಕಾಂಗ್ರೆಸನ್ನು ಬೆಂಬಲಿಸುತ್ತಿದ್ದರು. ಮುಸ್ಲಿಂ ಲೀಗ್ ಇದ್ದರೂ, ಪ್ರಬಲವಾಗಿರಲಿಲ್ಲ. ಕಾಂಗ್ರೆಸ್‌ಗೆ ಎದುರಾಳಿಯಾಗಿ ಇದ್ದದ್ದು, ಆರೆಸ್ಸೆಸ್ ಮತ್ತು ಸಂಘ ಪರಿವಾರದ ಬೆಂಬಲವಿರುವ ಹಿಂದೂವಾದಿ ಜನಸಂಘ. ಅದು ಆರೆಸ್ಸೆಸ್ಸಿನ ಸಂಘಟಿತ ಅಪಪ್ರಚಾರ, ಕೋಮುವಿಷ ಬಿತ್ತನೆಯ ಹೊರತಾಗಿಯೂ ಹೆಚ್ಚಿನ ಹಿಂದೂಗಳು ಅದಕ್ಕೆ ಓಟು ಹಾಕುತ್ತಿರಲಿಲ್ಲ. ಅದು ನಂತರ ಪ್ರತಿಪಕ್ಷಗಳ ಕೂಟವಾದ ಜನತಾ ಪಕ್ಷದಲ್ಲಿ ವಿಲಯನವಾಗಿ, ಆ ಬಳಿಕ ವಿಭಜನೆಗೊಂಡು ಈಗಿನ ಭಾರತೀಯ ಜನತಾ ಪಕ್ಷವಾಗಿ, ತನ್ನನ್ನು ಹಿಂದೂ ಪಕ್ಷ ಎಂದು ಘೋಷಿಕೊಂಡಿತು.

ಆ ಹೊತ್ತಿನಲ್ಲಿ ಮಂಗಳೂರು, ಕಲ್ಲಡ್ಕ, ಪಾಣೆಮಂಗಳೂರು, ವಿಟ್ಲ, ಬಂಟ್ವಾಳ, ಉಪ್ಪಿನಂಗಡಿ ಮತ್ತು ಪುತ್ತೂರಿನಲ್ಲಿ ಕೋಮುವಾದಿ ಧ್ರುವೀಕರಣದ ಪ್ರಯತ್ನಗಳು ಜೋರಾಗಿ ನಡೆಯುತ್ತಿದ್ದವು. ಅಲ್ಲಿ ಆರೆಸ್ಸೆಸ್, ಸಂಘಟನಾತ್ಮಕವಾಗಿ ಹೆಚ್ಚಿನ ಬಲ ಹೊಂದಿತ್ತು. ಮುಸ್ಲಿಮರಲ್ಲಿ ಹೇಳಿಕೊಳ್ಳುವ ಸಂಘಟನೆಗಳು ಇರಲಿಲ್ಲವಾದರೂ, ದೊಡ್ಡ ಸಂಖ್ಯೆ ಮತ್ತು ಕಾಂಗ್ರೆಸ್ ಬೆಂಬಲದಿಂದ ಅವರಲ್ಲಿ ಕೆಲವರು ರಾಜಕೀಯವಾಗಿ ಸಾಕಷ್ಟು ಸಶಕ್ತರಾಗಿದ್ದರು. ವಿಟ್ಲ ವಿಧಾನಸಭಾ ಕ್ಷೇತ್ರವು ಬಿ.ಎ. ಉಮ್ಮರಬ್ಬ ಸೇರಿದಂತೆ ಹಲವಾರು ಮುಸ್ಲಿಂ ಶಾಸಕರನ್ನು ಆಯ್ಕೆ ಮಾಡಿದ್ದು, ಜನರು ಸಾಮಾನ್ಯವಾಗಿ ಕೋಮುವಾದಿಗಳಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ.

ಇಂತಹಾ ಸಂದರ್ಭದಲ್ಲಿ, ಅಂದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಲ್ಲಡ್ಕದಲ್ಲಿ ಇಸ್ಮಾಯಿಲ್ ಎಂಬ ವ್ಯಾಪಾರಿಯೊಬ್ಬರು ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕನಾಗಿ ಬೆಳೆಯುತ್ತಾ, ಪೊಲೀಸ್ ವಲಯದಲ್ಲೂ ಪ್ರಭಾವ ಹೊಂದಿದ್ದರು. ಆ ಸಂದರ್ಭದಲ್ಲಿ ಪ್ರತಿಪಕ್ಷಗಳ ಅನೇಕ ನಾಯಕರು, ಹಿಂದೂ ಸಂಘಟನೆಗಳ ನಾಯಕರು ಆಂತರಿಕ ಭದ್ರತಾ ಕಾಯಿದೆ (Maintenance of Internal Security Act-MISA) ಅನ್ವಯ ಬಂಧಿತರಾಗಿದ್ದರು. ಪೊಲೀಸ್ ದೌರ್ಜನ್ಯವೂ ನಡೆಯುತ್ತಿತ್ತು. ಇದಕ್ಕೆ ಇಸ್ಮಾಯಿಲ್ ಅವರ ಕುಮ್ಮಕ್ಕು ಕಾರಣ ಎಂದು ಈ ಸಂಘಟನೆಗಳವರು ಭಾವಿಸಿದ್ದರು.

ಒಂದು ರಾತ್ರಿ ಇಸ್ಮಾಯಿಲ್ ಅವರನ್ನು ನಕಲಿ ಪೊಲೀಸ್ ಜೀಪ್‌ನಲ್ಲಿ, ನಕಲಿ ಪೋಲೀಸ್ ಉಡುಪಿನಲ್ಲಿ ಬಂದವರು ಕರೆದೊಯ್ದಿದ್ದರು. ಅವರ ಶವ ನಂತರ ಕೊಳೆತ ಸ್ಥಿತಿಯಲ್ಲಿ ನದಿಯಲ್ಲಿ ಪತ್ತೆಯಾಗಿತ್ತು. ಇಸ್ಮಾಯಿಲ್ ಕೊಲೆ ಪ್ರಕರಣ ಎಂದು ಕುಖ್ಯಾತವಾದ ಈ ಪ್ರಕರಣದಲ್ಲಿ, ಪೊಲೀಸರು ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳ ಹಿಂದೂ ಸಂಘಟನೆಗಳ ಕೆಲವು ಪ್ರಮುಖ ನಾಯಕರನ್ನು ಬಂಧಿಸಿದ್ದರು. ಅವರಲ್ಲಿ ಕೆಲವರು ಅಮಾಯಕ ವ್ಯಾಪಾರಿಗಳೂ ಇದ್ದರು. ಆಗ ತುರ್ತು ಪರಿಸ್ಥಿತಿ ಇದ್ದುದರಿಂದ ಪೊಲೀಸರನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇರಲಿಲ್ಲ. ಕೊಲೆಯಿಂದಾಗಿ ಮುಸ್ಲಿಮರಿಗೂ, ಯದ್ವಾತದ್ವಾ ಬಂಧನದಿಂದಾಗಿ ಹಿಂದೂಗಳಿಗೂ ಅಸಮಾಧಾನ ಒಳಗೊಳಗೇ ಹೊಗೆಯಾಡುತ್ತಿತ್ತು. ಈ ಪ್ರಕರಣದ ಸಂದರ್ಭದಲ್ಲಿಯೇ ಕಲ್ಲಡ್ಕ ಪ್ರಭಾಕರ ಭಟ್ಟ ಈ ಭಾಗದಲ್ಲಿ ಪ್ರಖ್ಯಾತ ಮತ್ತು ಕುಖ್ಯಾತ ಎರಡೂ ಆದದ್ದು.

ಇದು ಕೋಮುಗಲಭೆಯ ರೂಪದಲ್ಲಿ ಹೊರಹೊಮ್ಮಿದ್ದು, 1977ರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು, ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ. ಮೊರಾರ್ಜಿ ದೇಸಾಯಿ ಸರಕಾರ ಅಧಿಕಾರಕ್ಕೆ ಬಂದಾಗ ಇಂದಿರಾ ಗಾಂಧಿಯವರನ್ನು ಬಂಧಿಸಲಾಯಿತು. ಆಗ ಪ್ರತಿಭಟನೆಯಾಗಿ ಕಾಂಗ್ರೆಸ್ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಹೊರಟಿತು. ಹಿಂದೂ ಬಾಹುಳ್ಯವಿದ್ದ ಮೇಲಿನ ಪೇಟೆ, ಮುಸ್ಲಿಂ ಪ್ರಾಬಲ್ಯದ ಕೆಳಗಿನ ಪೇಟೆಗಳು ಇದ್ದಂತಹ ಪಾಣೆಮಂಗಳೂರು, ಬಂಟ್ವಾಳ, ಬಿ.ಸಿ.ರೋಡ್ ಮುಂತಾದ ಪೇಟೆಗಳಲ್ಲಿ ಇದು ಅಪಾಯಕಾರಿಯಾಗಿತ್ತು. ಏಕೆಂದರೆ, ಅಂಗಡಿಗಳನ್ನು ಮುಚ್ಚಿಸಲು ಹೊರಟ ಕಾಂಗ್ರೆಸಿಗರಲ್ಲಿ ಮುಸ್ಲಿಮರೇ ಹೆಚ್ಚಾಗಿದ್ದರು.

ಘರ್ಷಣೆಗಳು ನಡೆದು, ಇಡೀ ಪ್ರಕರಣ ಕೋಮುಗಲಭೆಯ ಸ್ವರೂಪ ಪಡೆಯಿತು. ಬೇಕಾಬಿಟ್ಟಿ ವದಂತಿಗಳು ಹಬ್ಬಿ ಗ್ರಾಮೀಣ ಪ್ರದೇಶಗಳಿಂದ ಯುವಕರು ಬರುತ್ತಿದ್ದಂತೆ, ಗಲಭೆ ಗಂಭೀರ ಸ್ವರೂಪ ಪಡೆದು ಎಲ್ಲಡೆ ವ್ಯಾಪಿಸಿತು. ಬಿ.ಸಿ. ರೋಡ್ ಕೈಕಂಬದ ಮಸೀದಿ ಸೇರಿದಂತೆ ಹಲವು ಪೂಜಾಸ್ಥಳಗಳ ಮೇಲೆ ದಾಳಿ, ಕಲ್ಲೆಸೆತ ಇತ್ಯಾದಿ ನಡೆದು ಹಲವರು ಗಂಭೀರವಾಗಿ ಗಾಯಗೊಂಡರು. ಈ ಸಂದರ್ಭದಲ್ಲಿ ಹಲವರನ್ನು ಪೊಲೀಸರು ಬಂಧಿಸಿದರು. ಆದರೆ, ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದುದರಿಂದ ಹಿಂದೂ ಮತ್ತು ಮುಸ್ಲಿಂ ಬಂಧಿತರ ನಡುವೆ ಪೊಲೀಸರು ತಾರತಮ್ಯ ನಡೆಸುತ್ತಿದ್ದಾರೆ ಎಂದೂ, ಕಾಂಗ್ರೆಸ್ ಮುಸ್ಲಿಮರನ್ನು ಮಾತ್ರ ರಕ್ಷಿಸುತ್ತಿದೆ ಎಂದೂ ವದಂತಿ ಹಬ್ಬಿಸಲಾಯಿತು. ಆರೆಸ್ಸೆಸ್ ಆಗಲೂ, ಈಗಲೂ ಈ ವಿಷಯದಲ್ಲಿ ಎತ್ತಿದ ಕೈ.

ಆಗ ಉಂಟಾದ ಕಂದರ ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿದ್ದು, ಹಿಂದೂವಾದಿ ಸಂಘಟನೆಗಳು ಪ್ರಾಬಲ್ಯ ಹೆಚ್ಚಿಸುತ್ತಾ ಬಂದಿವೆ. ಒಂದು ಬಣ್ಣದ ಕೋಮುವಾದ ಇನ್ನೊಂದು ಬಣ್ಣದ ಕೋಮುವಾದವನ್ನು ಹುಟ್ಟುಹಾಕುತ್ತದೆ ಮತ್ತು ಅವು ಪರಸ್ಪರರ ಕಾರಣದಿಂದ ಬೆಳೆಯುತ್ತದೆ ಎಂಬುದಕ್ಕೆ ಸರಿಯಾಗಿ ಮುಸ್ಲಿಮರಲ್ಲಿಯೂ ಹಲವಾರು ಸಂಘಟನೆಗಳು ಹುಟ್ಟಿಕೊಂಡವು. ಇವುಗಳು ಕಾಂಗ್ರೆಸಿಗೆ ವಿರೋಧವಾಗಿದ್ದು, ತೀವ್ರಗಾಮಿ ನಿಲುವನ್ನು ಹೊಂದಿದ್ದವು. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆದುನಿಂತಿರುವ ಕೋಮುವಾದದ ಸಮಸ್ಯೆಯ ಮೂಲಕಾರಣ ಇರುವುದು ಇಲ್ಲಿಯೇ!

ಮತ್ತೆ 1979ರಲ್ಲಿ ಖ್ಯಾತ ಚಿತ್ರ ನಿರ್ದೇಶಕ, ಲೇಖಕ ವಿಶುಕುಮಾರ್ ಅವರ ಕನ್ನಡ ಚಿತ್ರ ‘ಕರಾವಳಿ’ಯ ಕಾರಣದಿಂದ ಗಲಭೆ ಉಂಟಾಯಿತು. ಅದು ಮೀನುಗಾರ ಮುಸ್ಲಿಂ ಯುವಕ ಮತ್ತು ಮೊಗವೀರ ಸಮುದಾಯದ ಮಹಿಳೆಯ ನಡುವಿನ ಪ್ರೇಮಕತೆಯಾಗಿದ್ದುದೇ ಇದಕ್ಕೆ ಕಾರಣ. ಈ ಗಲಭೆಗಳಲ್ಲಿ ಭಾಗವಹಿಸಿದವರಲ್ಲಿ ಬಿಲ್ಲವರೂ ಇದ್ದು, ಇದೇ ವಿಶುಕುಮಾರ್ ಅವರೇ ಬಿಲ್ಲವ ಅವಳಿ ವೀರರಾದ ಕೋಟಿ-ಚೆನ್ನಯರ ಸೂಪರ್ ಹಿಟ್ ಚಿತ್ರ ತೆಗೆದವರು ಎಂದೂ ಅವರು ನೋಡಲಿಲ್ಲ.

ಈ ಗಲಭೆಗಳು ಮಂಗಳೂರಿನ ಹೊಯ್ಗೆಬಜಾರ್, ಕುದ್ರೋಳಿ, ಬಂದರು ಮುಂತಾದ ಪ್ರದೇಶಗಳಲ್ಲಿ ತೀವ್ರವಾಗಿತ್ತು. ಈ ಘಟನೆಯಲ್ಲಿ ಕೆಲವರು ಪ್ರಾಣಕಳೆದುಕೊಂಡರು ಎಂದು ಹೇಳಲಾಗುತ್ತದೆಯಾದರೂ, ನಿಖರ ಮಾಹಿತಿ ಸದ್ಯಕ್ಕೆ ನನ್ನಲ್ಲಿ ಲಭ್ಯವಿಲ್ಲ. ಈ ಘಟನೆಯಲ್ಲಿ ಮುಸ್ಲಿಮರ ಮತ್ತು ಗೌಡ ಸಾರಸ್ವತ ಸಮುದಾಯದವರ ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದು ಮಾಹಿತಿ ಸಿಗುತ್ತದೆ.

ಹಿಂದೆಲ್ಲಾ ಉಳ್ಳಾಲ ಪ್ರದೇಶವು ಕೋಮುಸೌಹಾರ್ದಕ್ಕೆ ಹೆಸರಾಗಿತ್ತು. ಇದಕ್ಕೆ ದೊಡ್ಡ ಇತಿಹಾಸವಿದ್ದು, ಆ ಕುರಿತು “ಬೊಗಸೆಗೆ ದಕ್ಕಿದ್ದು-16″ರಲ್ಲಿ ಬರೆದಿದ್ದೇನೆ. ಕೃಷ್ಣಜನ್ಮಾಷ್ಟಮಿಯ ಸಂದರ್ಭದಲ್ಲಿ ಮುಸ್ಲಿಮರು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. 1980ರ ದಶಕದಲ್ಲಿ ಮಲ್ಲಕಂಭಕ್ಕೆ ಹಂದಿಯ ಕೊಬ್ಬನ್ನು ಸವರಲಾಗುತ್ತದೆ ಎಂದು ಇಂತಹಾ ಉತ್ಸವಗಳಲ್ಲಿ ಭಾಗವಹಿಸುವುದನ್ನು ‘ಶಿರ್ಕ್’ ಎಂದು ಕರೆಯುವ ಕೆಲವು ಅತಿಸಂಪ್ರದಾಯವಾದಿ ಮುಸ್ಲಿಮರು ಈ ವದಂತಿ ಹಬ್ಬಿಸಿದರು ಎಂದು ಸುದ್ದಿಯಾಗಿತ್ತು. ಆಗಿನಿಂದ ಮುಸ್ಲಿಮರ ಭಾಗವಹಿಸುವಿಕೆ ಕಡಿಮೆಯಾಗುತ್ತಾ ಹೋಯಿತು. ಇಂದು ಸಾಮಾನ್ಯ ಸ್ಥಿತಿಯಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದದಿಂದಲೇ ಸಹಬಾಳ್ವೆ ನಡೆಸುತ್ತಿದ್ದರೂ, ಸದಾ ಬೂದಿ ಮುಚ್ಚಿದ ಕೆಂಡದಂತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಅದು ಸ್ಫೋಟಕ ಸ್ಥಿತಿ ತಲಪುತ್ತದೆ. ಚುನಾವಣೆಗಳು ಹತ್ತಿರ ಬಂದಾಗ ಬೆಂಕಿ ಹಚ್ಚುವ ಸಂಸದರೂ, ಶಾಸಕರೂ, ದ್ವೇಷಪ್ರೇಮಿಗಳೂ ಒಂದು ಬೆಂಕಿ ಕಡ್ಡಿ ಹೊತ್ತಿಸಿದರೂ ಸಾಕು, ಅದು ಸಿಡಿಯುತ್ತದೆ.

ನಂತರ, 1989ರಲ್ಲಿ ಬೈಕಂಪಾಡಿ, ಹೊಸಬೆಟ್ಟು- ಹೀಗೆ ದಕ್ಷಿಣ ಕನ್ನಡದ ಕಡಲತಡಿಯ ಉದ್ದಕ್ಕೂ ಕೋಮುಗಲಭೆ ಉಂಟಾಗಿತ್ತಾದರೂ, ಅದು ಮುಖ್ಯವಾಗಿ ಭಾರೀ ಪ್ರಮಾಣದಲ್ಲಿ ಅಂಗಡಿಗಳ ಲೂಟಿ, ಬೆಂಕಿ ಹಚ್ಚುವಿಕೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಲ್ಲಿಯೇ ಕೊನೆಗೊಂಡಿತು. ಜೀವಹಾನಿಯೇನೂ ಆಗಲಿಲ್ಲ.

ನಂತರ ಸಣ್ಣಪುಟ್ಟ ಸಂಘರ್ಷಗಳು ಅಲ್ಲಲ್ಲಿ ನಡೆದೇ ಇದ್ದರೂ, ಇತಿಹಾಸದ ಅತೀ ದೊಡ್ಡ ಕೋಮುಗಲಭೆ ನಡೆದದ್ದು 1998-99ರಲ್ಲಿ. 1998ರ ಡಿಸೆಂಬರ್ 29ರಂದು ಆರಂಭವಾದ ಈ ಗಲಭೆ ಸುರತ್ಕಲ್ ಸಮೀಪದ ಚೊಕ್ಕಬೆಟ್ಟುವಿನಲ್ಲಿ ಆರಂಭವಾಗಿ ನಂತರದಲ್ಲಿ ಸುತ್ತಲಿನ ಕೃಷ್ಣಾಪುರ, ಬೈಕಂಪಾಡಿ, ಕುಳಾಯಿ, ಹೊಸಬೆಟ್ಟು, ತಡಂಬೈಲ್, ಕಾನ, ಕಾಟಿಪಳ್ಳ, ನಂತರ ಮಂಗಳೂರು ನಗರ, ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳಿಗೆ ವ್ಯಾಪಿಸಿತ್ತು. ಈ ಗಲಭೆಯಲ್ಲಿ ಎಂಟು ಮಂದಿ ಅಧಿಕೃತ ಮೂಲಗಳ ಪ್ರಕಾರ ಪ್ರಾಣ ಕಳೆದುಕೊಂಡಿದ್ದರು. ಇವರಲ್ಲಿ ಆರು ಮಂದಿ ಮುಸ್ಲಿಮರು ಮತ್ತು ಇಬ್ಬರು ಹಿಂದೂಗಳು. ಅನಧಿಕೃತ ವರದಿಗಳ ಪ್ರಕಾರ ಈ ಸಂಖ್ಯೆ 16 ಆಗಿತ್ತು. 100ಕ್ಕೂ ಹೆಚ್ಚು ಮಂದಿ ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಮನೆಗೆ ನುಗ್ಗಿ ಹೆಂಗಸರು, ಮಕ್ಕಳು, ವೃದ್ಧರ ಮೇಲೆಯೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಅಮಾನುಷ ಘಟನೆಗಳೂ ನಡೆದಿದ್ದವು. ಘಟನೆಯಲ್ಲಿ ಭಾರೀ ಆಸ್ತಿಪಾಸ್ತಿ ಹಾನಿ ಸಂಭವಿಸಿದ್ದು, 165 ಮನೆಗಳನ್ನು ಧ್ವಂಸ ಮಾಡಲಾಗಿದ್ದು, ಇವುಗಳಲ್ಲಿ 98 ಮುಸ್ಲಿಮರು ಮತ್ತು 67 ಹಿಂದೂಗಳ ಮನೆಗಳಾಗಿದ್ದವು. ಮುಸ್ಲಿಮರ ನಾಲ್ಕು ಆರಾಧನಾ ಸ್ಥಳಗಳನ್ನು ಧ್ವಂಸ ಮಾಡಲಾಗಿತ್ತು. ಈ ಅಂಕಿ-ಅಂಶಗಳನ್ನು ನೀಡುತ್ತಿರುವ ಕಾರಣವೆಂದರೆ- ಕಾರಣ ಏನೇ ಇರಲಿ, ಯಾರೇ ಇರಲಿ- ಎರಡೂ ಕಡೆಗಳವರು ಧರ್ಮಗಳ ಹೆಸರಿನಲ್ಲಿ ಮನುಷ್ಯತ್ವ ಮರೆತು ನಾಯಿಗಳ ರೀತಿ ಕಾದಾಡಿದ್ದರು ಎಂಬುದನ್ನು ಸೂಚಿಸುವುದಾಗಿದೆ.‌‌‌

ಗಲಭೆ ಕಾರಣ ಕ್ಷುಲ್ಲಕವಾದದ್ದು. ಚೊಕ್ಕಬೆಟ್ಟುವಿನಲ್ಲಿ ಗುಜರಿ ಮಾರುವವನೊಬ್ಬ ಒಂದು ಮನೆಯಿಂದ ಗುಜರಿ ಕದ್ದಿದ್ದ. ಆತನನ್ನು ಹಿಡಿದ ಮನೆಯವರು, ನೆರೆಯವರು ಆತನಿಗೆ ಥಳಿಸಿದ್ದರು. ಇದು ಒಂದು ಸಮುದಾಯದ ಕೆಲವರು, ಕಲ್ಲೆಸೆತ ಆರಂಭಿಸುವುದಕ್ಕೆ ಕಾರಣವಾಗಿತ್ತು. ಆದರೆ, ಇದು ಕೇವಲ ನೆಪವಾಗಿತ್ತು. ಇದಕ್ಕಿಂತಲೂ ಮೊದಲು ಬೇರೆ ಮೂರು ಪ್ರತ್ಯೇಕ ಘಟನೆಗಳು ನಡೆದಿದ್ದವು.

1998ರ ನವೆಂಬರ್‌ನಲ್ಲಿ ಕುಳಾಯಿಯಲ್ಲಿ ಕ್ರೈಸ್ತರ ಸಣ್ಣ ಪಂಥವಾದ ಇವಾಂಜಲಿಕ್ (ಇವರು ಕೆಥೋಲಿಕ್ ಅಲ್ಲ) ಚರ್ಚಿಗೆ ನುಗ್ಗಿದ ಹಿಂದೂತ್ವವಾದಿಗಳು ರಾಜಾರೋಷವಾಗಿ ನುಗ್ಗಿ ಎಲ್ಲರನ್ನು ಥಳಿಸಿ, ಅದನ್ನು ಧ್ವಂಸಗೊಳಿಸಿದ್ದರು. ಇದು ದೇಶದಾದ್ಯಂತ ಕ್ರೈಸ್ತ ಧಾರ್ಮಿಕ ಸಂಸ್ಥೆಗಳ ಮೇಲೆ ನಡೆಯುತ್ತಿದ್ದ ದಾಳಿಗಳ ಭಾಗವಾಗಿತ್ತು. ಇಲ್ಲಿ ಆ ತನಕ ಕೆಥೋಲಿಕರ ಮೇಲೆ ಯಾವುದೇ ದಾಳಿಗಳು ನಡೆದಿರಲಿಲ್ಲವಾದರೂ (ನಂತರ ನಡೆದವು) ಇಂತಹಾ ಭಯಹುಟ್ಟಿಸುವ ಕೃತ್ಯ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಆತಂಕ ಸೃಷ್ಟಿಸಿತ್ತು.

ಇನ್ನೊಂದು ಘಟನೆ ಎಂದರೆ, ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯನ್ನು ಚುಡಾಯಿಸಿದ ಎಂಬ ಆರೋಪದಲ್ಲಿ ಆತನಿಗೆ ಹಿಂದೂತ್ವವಾದಿಗಳ ಗುಂಪೊಂದು ಥಳಿಸಿದ್ದು. ಅದರ ಆರೋಪಿಗಳನ್ನು ಪೊಲೀಸರು ಬಂಧಿಸಿದಾಗ ಪೊಲೀಸರು ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ಪೊಲೀಸರ ಕೆಲಸವನ್ನು ತಾವೇ ಮಾಡುತ್ತೇವೆ, ತಮ್ಮನ್ನು ಅವರು ಬಂಧಿಸುವಂತಿಲ್ಲ ಎಂಬ ಮನೋಭಾವ ಹುಟ್ಟಿ ಇಂದಿನ ವರೆಗೆ ಬೆಳೆದುಬಂದಿರುವುದು ಬಹುಶಃ ಇದೇ ಘಟನೆಯಿಂದ. ಈ ಘಟನೆ ಕೂಡಾ ಕಂದರವನ್ನು ಆಳಗೊಳಿಸಿತ್ತು. ಮೋರಲ್ ಪೊಲೀಸಿಂಗ್ ಎಂಬ ನಾಜಿ ದುಷ್ಟ ವಿದ್ಯಮಾನದ ಆರಂಭ ಇಲ್ಲಿಯೇ ಆದುದು.

ಆಗಲೇ ಇನ್ನೊಂದು ಘಟನೆಯೂ ನಡೆದಿತ್ತು. ಸುರತ್ಕಲ್‌ನಲ್ಲಿ ಹಾಕಿದ್ದ ಯಕ್ಷಗಾನದ ಬ್ಯಾನರ್ ಒಂದನ್ನು ಕಿಡಿಗೇಡಿಗಳು ಹರಿದುಹಾಕಿದ್ದರು. ಆಗ ಉಂಟಾದ ಉದ್ವಿಗ್ನತೆಯಿಂದ ಯಕ್ಷಗಾನ ಪ್ರದರ್ಶನವೇ ನಿಂತಿತ್ತು. ಇದು ಕೂಡಾ ಧಾರ್ಮಿಕ ಭಾವನೆಗೆ ನೋವುಂಟುಮಾಡುವ ಕೆಲಸವೇ ಆಗಿತ್ತು. ಕೆಲವೇ ಕಿಡಿಗೇಡಿ ಕೃತ್ಯಗಳು, ಪರಿಸ್ಥಿತಿ ಅರಿಯುವುದರಲ್ಲಿ ಪೊಲೀಸ್ ಗುಪ್ತಚರ್ಯೆಯ ವೈಫಲ್ಯ, ಪೊಲೀಸರ ಕಾರ್ಯದಲ್ಲಿ ರಾಜಕಾರಣದ ಹಸ್ತಕ್ಷೇಪ, ಕಾನೂನನ್ನು ಕೈಗೆತ್ತಿಕೊಳ್ಳುವುದು ಇತ್ಯಾದಿಗಳು ಹೇಗೆ ಪರಿಸ್ಥಿತಿಯನ್ನು ಹದಗೆಡಿಸಬಲ್ಲವು ಎಂಬುದನ್ನು ಈ ಘಟನೆಗಳು ತೋರಿಸುತ್ತವೆ.

ಈ ಗಲಭೆ ಹರಡುವುದಕ್ಕೆ ವದಂತಿಗಳೂ ಕಾರಣವಾಗಿದ್ದವು. ಇವುಗಳನ್ನು ಹರಡುವುದಕ್ಕೆ ಎರಡೂ ಕಡೆಗಳ ರಾಜಕೀಯ ಹಿತಾಸಕ್ತಿಗಳ ಪ್ರೇರಣೆಯೂ ಇತ್ತು. ವದಂತಿಯ ಸ್ವರೂಪಗಳು ಉಳಿದ ಕಡೆಗಳಂತೆಯೇ ಇದ್ದವು; ಈಗಲೂ ಇವೆ. ‘ನಮ್ಮವರ’ ಮೇಲೆ ದಾಳಿ ಮಾಡುತ್ತಿದ್ದಾರೆ, ‘ನಮ್ಮವರ’ ಮನೆಗೆ ನುಗ್ಗಿ ಹೊಡೆದಿದ್ದಾರೆ, ನಮ್ಮ ಹೆಣ್ಣು ಮಕ್ಕಳ ಮೇಲೆ, ಅಕ್ಕತಂಗಿಯರ ಮೇಲೆ ಅತ್ಯಾಚಾರ ಮಾಡಿದ್ದಾರೆ, ‘ನಮ್ಮ’ ತಂದೆ ತಾಯಿಯ ಮೇಲೆ ಕೈ ಹಾಕಿದ್ದಾರೆ, ಪೊಲೀಸರು ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ, ‘ನಮ್ಮವರಿಗೆ’ ಹೊಡೆದಿದ್ದಾರೆ- ಇವು ಹಿಂದೆ ಬಾಯಿಮಾತಿನ ಮೂಲಕ ನಡೆಯುತ್ತಿದ್ದವು, ಇಂದು ಸಾಮಾಜಿಕ ಜಾಲತಾಣಗಳ ಕಾರಣದಿಂದ ಕ್ಷಣಮಾತ್ರದಲ್ಲಿ ನಡೆಯುತ್ತಿವೆ.

ಇಲ್ಲಿ ಆರಂಭವಾದ ಗಲಭೆಗಳ ಪರಿಣಾಮ ಇಲ್ಲಿಗೇ ನಿಲ್ಲಲಿಲ್ಲ. ಸುರತ್ಕಲ್ ಪರಿಸರದಲ್ಲಿಯೇ ಹಲವಾರು ಕೊಲೆಗಳು, ಪ್ರತೀಕಾರಗಳು ನಂತರದ ವರ್ಷಗಳಲ್ಲಿ ನಡೆದವು, ಈಗಲೂ ಈ ಉದ್ವಿಗ್ನತೆ ಮುಂದುವರಿಯುತ್ತಿದೆ. ಆಗಾಗ ಬೆಂಕಿ ಹಚ್ಚಲಾಗುತ್ತಿದೆ. ಬಿಜೆಪಿ ಸಂಸದ, ಶಾಸಕರು ಮತ್ತು ಆರೆಸ್ಸೆಸ್ ಗಿರಾಕಿಗಳು ಅದರಲ್ಲಿ ಚಳಿಕಾಯಿಸುತ್ತಿದ್ದಾರೆ.

ಸಂಸ್ಕೃತ ತಲೆಗೇರಿ ಕೂರಲು ಕನ್ನಡಿಗರ ಕೀಳರಿಮೆಯೇ ಕಾರಣ
ಇತ್ತೀಚಿನ ವರ್ಷಗಳಲ್ಲಿ, ಮುಖ್ಯವಾಗಿ ಫೇಸ್‌ಬುಕ್‌ನಲ್ಲಿ ಎಲ್ಲರ ಕನ್ನಡ, ತಿಳಿಗನ್ನಡ, ಸರಳಗನ್ನಡ ಹೆಸರುಗಳಲ್ಲಿ ಕನ್ನಡದ ಮೇಲೆ ಸಂಸ್ಕೃತದ ಯಜಮಾನಿಕೆಯ ಬಗ್ಗೆ, ಮಹಾಪ್ರಾಣಗಳನ್ನು ಕೈಬಿಡುವ ಬಗ್ಗೆ ಚರ್ಚೆಗಳು- ಕೆಲವೊಮ್ಮೆ ಕೆಲವರ ಅತಿರೇಕ, ಫೆನೆಟಿಕ್ ಎನ್ನಬಹುದಾದ ಸಲಹೆಗಳನ್ನೂ ಒಳಗೊಂಡಿರುತ್ತವೆ. ಈ ಸಮಸ್ಯೆಯ ಹಲವು ಪಾತಳಿಗಳಲ್ಲಿ ಒಂದನ್ನಷ್ಟೇ- ಅಂದರೆ, ಸಂಸ್ಕೃತದ ಯಜಮಾನಿಕೆಯನ್ನಷ್ಟೇ- ಕೇಂದ್ರವಾಗಿಟ್ಟ ಕೆಲವು ಅನಿಸಿಕೆಗಳು ಇಲ್ಲಿವೆ.

ನಮಗೆ ಶಾಲೆಯಲ್ಲಿ – ಮುದ್ದಣನ “ರಾಮಾಶ್ವಮೇಧ”ದ್ದಿರಬೇಕು- “ಮುದ್ದಣ ಮನೋರಮೆಯ ಸಲ್ಲಾಪ” ಎಂಬ ಪಾಠವೊಂದಿತ್ತು. ಹಳೆಗನ್ನಡದಲ್ಲಿದ್ದ ಇದನ್ನು ಬರೆದ ಜನ ಮುದ್ದಣ- ಕೆಲವು ನೂರು ವರ್ಷಗಳ ಹಿಂದಿನವನಾಗಿರದೆ, ಉಡುಪಿಯ ಮಿಷನ್ ಹೈಸ್ಕೂಲಿನಲ್ಲಿ ಪಿಟಿ ಮಾಸ್ತರರಾಗಿದ್ದ ಲಕ್ಷ್ಮೀನಾರಣಪ್ಪ ಎಂಬವರಾಗಿದ್ದರು ಎಂಬುದು ನನ್ನನ್ನಂತೂ ಭಯಂಕರ ಅಚ್ಚರಿಯಲ್ಲಿ ಕೆಡವಿತ್ತು. ಆಧುನಿಕ ಕಾಲದ ಮನುಷ್ಯರಿಗೆ ಅರ್ಥವಾಗಲು ಸ್ವಲ್ಪವಾದರೂ ತಿಣುಕಬೇಕಾದ ಹಳೆಗನ್ನಡದಲ್ಲಿ ಇವರು ಯಾಕೆ ಬರೆದರು? ಸಮಕಾಲೀನ ಕನ್ನಡದಲ್ಲಿಯೇ ಬರೆಯಲಿಲ್ಲವೇಕೆ?

ಇದನ್ನು ಬರೆಯುತ್ತಿರುವಾಗ ಅವರ ನೆನಪಾಗುತ್ತಿರುವ ಕಾರಣವೆಂದರೆ: ಇಲ್ಲಿನ ಅನಿಸಿಕೆಗಳಿಗೆ ಸಮನಾದವು ಅಲ್ಲಿಯೂ ಇವೆ. ಮುದ್ದಣನ ಭಾಷೆ ಅರ್ಥವಾಗದ ಮನೋರಮೆ ಟೀಕಿಸುತ್ತಾಳೆ: “ನೀರಿಳಿಯದ ಗಂಟಲೊಳ್ ಕಡಬು ತುರುಕಿದಂತಾಯಿತು”. ಈಗ ಸರಳ ಕನ್ನಡದ ದನಿ ಎತ್ತಿರುವವರ ಅಳಲು ಇದೇ: ಸಂಸ್ಕೃತಮಯ ಕನ್ನಡವು ಸಾಮಾನ್ಯ ಕನ್ನಡಿಗರ ಗಂಟಲಲ್ಲಿ ಇಳಿಯದಂತಾಗಿದೆ ಎಂಬುದು. ಅದೇ ಹೊತ್ತಿಗೆ ಸಂಸ್ಕೃತ ಪದಬಳಕೆಯ ಬಗ್ಗೆ ಮುದ್ದಣ ಹೇಳುತ್ತಾನೆ: “ಕರಿಮಣಿ ಸರದೊಳ್ ಹವಳಮಂ ಕೋದಂತೆ” ಅಲ್ಲೊಂದಿಲ್ಲೊಂದು ಇರಲಿ ಎಂದು.

ನನ್ನಂತವರ ಆಕ್ಷೇಪ ಇರುವುದು: ಇದಕ್ಕೆ ಬದಲಾಗಿ, ಈಗ ಹವಳದ ಸರದಲ್ಲಿ ಕರಿಮಣಿಯ ಕೋದಂತೆ ಕನ್ನಡದ ಗತಿಯಾಗುತ್ತಿದೆ; ಹವಳದ ನಡುವೆ ಕನ್ನಡ ಕತ್ತುರಿಯ ಕರಿಮಣಿ ಕಾಣದಂತೆ ಮಾಯವಾಗುತ್ತಿದೆ ಮತ್ತು ಇದನ್ನು ಒಂದು ಉದ್ದೇಶದಿಂದಲೇ, ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂಬುದು. ಸಂಸ್ಕೃತದ ಪದಗಳನ್ನು ಬಳಸಿದರೂ ಅಭಿಮಾನದಿಂದ “ಕನ್ನಡ ಕತ್ತುರಿಯಲ್ತೆ?” ಎಂದು ಹೇಳಿದ್ದ ಮುದ್ದಣ ಯಾನೆ ಲಕ್ಷ್ಮೀನಾರಣಪ್ಪ ಕೂಡಾ ಈಗ ಇದ್ದಿದ್ದರೆ, ಈ ಬಗ್ಗೆ ದನಿ ಎತ್ತುತ್ತಿದ್ದರು.

ಕನ್ನಡವನ್ನು ಸರಳಗೊಳಿಸಲು ಮಹಾಪ್ರಾಣಗಳನ್ನು, ಅನುನಾಸಿಕ, ವಿಸರ್ಗಗಳನ್ನು ಕೈಬಿಟ್ಟರೆ ಸಾಕು ಎಂದು ಕೆಲವರು ತಿಳಿದುಕೊಂಡಂತಿದೆ. ಮತ್ತೆ ಕೆಲವರು ಸಂಸ್ಕೃತ ಪದಗಳನ್ನೆಲ್ಲಾ ಕೈಬಿಡಬೇಕೆಂದು- ಇದು ಬಹಳ ಸುಲಭದ ಕೆಲಸ ಎಂಬಂತೆ ಹೇಳುತ್ತಾರೆ. ಅದಕ್ಕಾಗಿ ಕೆಲವರು ಮೃತ ಸಂಸ್ಕೃತದಂತೆ ಯಾರಿಗೂ ಅರ್ಥವೇ ಆಗದ ಹಳೆಗನ್ನಡ ಕಾವ್ಯಗಳಿಂದ “ಸತ್ತ ಕನ್ನಡ ಪದ”ಗಳನ್ನು ಅಗೆದು ಅಗೆದು ತಂದು ಜೀವಕೊಡಲು ಮುಂದಾಗಿದ್ದಾರೆ. ಮತ್ತೆ ಕೆಲವರು ಇನ್ನೂ ಮುಂದೆ ಹೋಗಿ, ಸುಲಭದಲ್ಲಿ ಬರೆಯಬಹುದಾದ, ಈಗಾಗಲೇ ಅಭ್ಯಾಸವಾಗಿರುವ “ಒಂದು” ಎಂಬುದನ್ನೂ “ಒನ್ದು” ಎಂದು ಬರೆಯಿರಿ; “ಕೈ” ಎಂಬುದನ್ನು “ಕಯ್” ಎಂದು ಬರೆಯಿರಿ ಇತ್ಯಾದಿಯಾಗಿ ಹೇಳುತ್ತಿದ್ದಾರೆ. ಇವೆಲ್ಲವುಗಳ ಬಗ್ಗೆ ಬರೆಯಲು ಇಲ್ಲಿ ಜಾಗ ಸಾಲದಿರುವುದರಿಂದ, ಬರೇ ನಮ್ಮ ಕೀಳರಿಮೆ, ಸಂಸ್ಕೃತದ ಹೇರಿಕೆ ಮತ್ತು ಯಜಮಾನಿಕೆಯ ಬಗ್ಗೆ ಮಾತ್ರ ಈ ಬರಹವಿದೆ.

ಯಾವುದೇ ಭಾಷೆಯ ಬಗ್ಗೆ ಭಾಷಾ ಶಾಸ್ತ್ರಜ್ಞರು (ಭಾಷಾ ಬಲ್ಲಿದರು) ಮಾತ್ರ ಮಾತಾಡಬೇಕು, ಬರೆಯಬೇಕು ಎಂಬ ಕರಾರು ಇಲ್ಲದೇ ಇರುವುದರಿಂದ ಮತ್ತು ಕನ್ನಡಕ್ಕೆ ಈಗಿನ ಗತಿ ತಂದಿರುವುದಕ್ಕೆ ಕಾರಣ ಇಂತ ಭಾಷಾ “ಶಾಸ್ತ್ರಿ”ಗಳೇ ಆಗಿರುವುದರಿಂದ, ಬಾಲ್ಯದಿಂದ ಬ್ಯಾರಿ, ಕೊಂಕಣಿಯಂತ ಹಲವು ಭಾಷೆಗಳು ಕಿವಿಗೆ ಬೀಳುತ್ತಲೇ, ಶಾಲೆಯಲ್ಲಿ ಕನ್ನಡ ಕಲಿತು ಅನ್ನಕ್ಕಾಗಿ ಅದರ ನೆರಳಲ್ಲಿಯೇ ಬದುಕಿರುವ, ತುಳು ತಾಯಿನುಡಿಯ, ಇಂಗ್ಲೀಷ್ ಬಲ್ಲ, ಅನುವಾದಕ, ಪತ್ರಕರ್ತನ ಅನುಭವದಿಂದ ಮಾತ್ರವೇ ಈ ಅನಿಸಿಕೆಗಳು ಬಂದಿವೆ; ಪಾಂಡಿತ್ಯದಿಂದಲ್ಲ.

ಹಳೆಗನ್ನಡ ಕಾವ್ಯಗಳಲ್ಲಿ ಸಂಸ್ಕತ ಬಹಳ ಹಿಂದೆಯೇ ಸೇರಿಹೋಗಿರುವುದನ್ನು ನಾವು ಕಾಣುತ್ತೇವೆ. ಆದರೆ, ಅದು ಜನಸಾಮಾನ್ಯರ ಮಟ್ಟಕ್ಕೆ ಇಳಿದು ಬರಲಿಲ್ಲ. ಯಾಕೆಂದರೆ, ಇಂತಹ ಕಾವ್ಯಗಳು ರಾಜರುಗಳ ಅಸ್ತಾನದಲ್ಲಿ ವಂದಿಮಾಗಧರು, ಪಂಡಿತರುಗಳು, ಮೇಲ್ಜಾತಿ- ವರ್ಗದ “ಶಿಕ್ಷಿತ”ರಿಗೆ ಸೀಮಿತವಾಗಿತ್ತೇ ಹೊರತು, ಅಕ್ಷರ ವಂಚನೆಯ ಶಿಕ್ಷೆಗೆ ಗುರಿಯಾದವರನ್ನು ಮುಟ್ಟಲಿಲ್ಲ. ಆದುದರಿಂದಲೇ, ಆಡು ಮಾತುಗಳಲ್ಲೂ, ಮಾತಿನಿಂದಲೇ ಹರಡಿದ ಜಾನಪದ ಹಾಡುಗಳಲ್ಲಿಯೂ, ಜನಕಾವ್ಯಗಳಲ್ಲೂ, ಸಾಮಾನ್ಯ ಜನರು ಸಾಮಾನ್ಯ ಜನರಿಗಾಗಿ ಬರೆದು ಹಾಡಿದ ವಚನಗಳಲ್ಲೂ ಸಂಸ್ಕೃತದ ಪ್ರಭಾವ ತೀರಾ ಕಡಿಮೆ ಇರುವುದನ್ನು ಕಾಣಬಹುದು. ಹಾಗಾಗಿಯೇ ನಮ್ಮ ಹಳ್ಳಿಗರ ಆಡುಗನ್ನಡದಲ್ಲಿ ಸಂಸ್ಕೃತ ಪದಗಳು ಹೆಚ್ಚಿಲ್ಲ.

ಇಂತಹ ಸ್ಥಿತಿಯಲ್ಲಿ ಸಂಸ್ಕೃತದ ಹಿಂಬಾಗಿಲ ಹರಡುವಿಕೆಗೆ ಕಾರಣವಾದದ್ದು ಸಾಮಾನ್ಯ ಜನರಿಗೂ ಓದುಬರಹ ಕಲಿಸಲು ಹೊರಟ ಆಧುನಿಕ ಶಾಲಾ ಶಿಕ್ಷಣ ಎಂಬುದು ಒಂದು ವಿಚಿತ್ರವಾದರೂ ನಿಜ. ಇದನ್ನೇ ಪೆರಾಡಾಕ್ಸ್ ಅಂದರೆ, ಹೆಚ್ಚುಕಡಿಮೆ- ವಿರೋಧಾಭಾಸ ಎಂದು ಕರೆಯುವುದು. ಮೊದಲಿಗೆ ಶಿಕ್ಷಕರಾಗಿದ್ದವರು ಬಹುತೇಕ ಬ್ರಾಹ್ಮಣಾದಿ ಸಂಸ್ಕೃತಾಭಿಮಾನಿ ಮೇಲ್ಜಾತಿಯವರು ಎಂಬುದನ್ನು ನೆನಪಿನಲ್ಲಿ ಇಡೋಣ. ಕನ್ನಡದ ಮಕ್ಕಳಿಗೂ, ತುಳು, ಬ್ಯಾರಿ, ಕೊಂಕಣಿ, ಕೊಡವ ಇತ್ಯಾದಿ ತಾಯಿನುಡಿಯ ಮಕ್ಕಳಿಗೂ ಕನ್ನಡ “ಓದು ಬರಹ” ಕಲಿಸಲು ಹೊರಟು, ಅವರು ಮಾಡಿದ್ದೇನು? ಜನರಿಂದ ದೂರವಾದ ಮೃತ ಸಂಸ್ಕೃತವನ್ನು, ಅದೇ ಕಾರಣಕ್ಕಾಗಿ ಸತ್ತ ಬೆರಕೆ ಹಳೆಗನ್ನಡದ ಜೊತೆಜೊತೆಗೆ ಈ ಮಕ್ಕಳ ಗಂಟಲೊಳಗೆ ತುರುಕಿ, ಅವರ ನೆಲದ ಆಡು ಭಾಷೆಯಿಂದ ಬೇರೆ ಮಾಡಿದ್ದು. ಅದರ ಬಗ್ಗೆಯೇ ಕೀಳರಿಮೆ ಮೂಡಿಸಿದ್ದು. ನೆಲದ ಭಾಷೆಯನ್ನೇ ಪರಕೀಯ ಮಾಡಿ, ನೆಲಕ್ಕೆ ತಳ್ಳಿದ್ದು.

ಪರಿಣಾಮವಾಗಿ, ಈ ಕೀಳರಿಮೆಯಿಂದಾಗಿ ತಲೆಮಾರಿನ ಬಳಿಕ ತಲೆಮಾರು ತಮ್ಮ ಸ್ವಂತ ಭಾಷೆಯ ಬಗ್ಗೆ ನಾಚಿಕೆಪಡುತ್ತಾ, ಪುರೋಹಿತಶಾಹಿಯ ಸಂಸ್ಕೃತಕ್ಕೂ, ವಸಾಹತುಶಾಹಿಯ ಇಂಗ್ಲೀಷಿಗೂ ಗುಲಾಮರಾಗಿ ಬಾಳುವಂತಾಯಿತು. ನನ್ನ ಕಲ್ಪನೆಯ ಬ್ರಾಹ್ಮಣ ಪಂಡಿತರಾದ ಪ್ರೊ. ಕಂದೂರು ಸುಬ್ಬಯ್ಯ ಬಟ್ಟರೂ, ಡಾ. ಬಸಪ್ಪ ದಾನಪ್ಪ ಹಿರೇಮಠರೂ, ತಮ್ಮ ಗ್ರಾಮ್ಯ ಹೆಸರುಗಳನ್ನು ನಾಚಿಕೆಯಿಂದ ಮರೆಮಾಚಿ ಪ್ರೊ. ಕೆ. ಎಸ್. ಭಟ್, ಡಾ. ಬಿ. ಡಿ. ಹಿರೇಮಠ್ ಆಗಬೇಕಾದಷ್ಟು ಕೀಳರಿಮೆ ಬೆಳೆಸಿಕೊಂಡರೆ, ಕೆಳಜಾತಿಯ ಪಾಮರರ ಗತಿಯೇನು? ಮುಂದೆ ಚಂದಪ್ಪ ಚಂದ್ರಹಾಸನೂ, ಸೂರಪ್ಪ ಸೂರ್ಯಕುಮಾರನೂ ಆಗಿ, ಈಗ ಎಲ್ಲಾ ಹೆಸರುಗಳು ಬಹುತೇಕ ಸಂಸ್ಕೃತವೇ ಆಗಿವೆ. ಹೀಗಿರುವಾಗ ಕನ್ನಡದಲ್ಲಿ ಸಂಸ್ಕೃತ ನುಸುಳಿ, ತಲೆಗಿಂತ ದೊಡ್ಡ ಕಿರೀಟವಾಗಿ ತಲೆಭಾರವಾಗದೇ ಇದ್ದೀತೆ?

ಇವೆಲ್ಲವೂ ಆರಂಭವಾದುದು “ಗುರುವರ್ಯರ, ಗುರುಬ್ರಹ್ಮರ ಪಾದಕಮಲಗಳಲ್ಲಿ, ಚರಣಾರವಿಂದಗಳಲ್ಲಿ”. ಶಾಲೆಯಲ್ಲಿ ತಮ್ಮದೇ ಭಾಷೆ ಕಲಿಯಲು ಬಂದ ಕನ್ನಡದ ಮಕ್ಕಳು ನೀರಿಂದ ಹೊರತೆಗೆದ ಮೀನುಗಳಂತಾಗಿ ತಮ್ಮದೇ ಭಾಷೆ ಕಲಿಯಲಾಗದ ದಡ್ಡರೆನಿಸಿಕೊಂಡರೆ, ಹೆಚ್ಚೆಚ್ಚು ಸಂಸ್ಕೃತ ಪದಗಳನ್ನು, ವಿಶೇಷಣಗಳನ್ನು, ಉಪಮೆಗಳನ್ನು “ಕರತಲಾಮಲಕ”ವಾಗಿ ಬಳಸಿದವರು “ಶುದ್ಧ” ಕನ್ನಡದ “ಶ್ರೇಷ್ಟ” ಸಾಹಿತಿಗಳಾಗಿ ಮುಂದಿನ ತಲೆಮಾರುಗಳಿಗೆ ಮಾದರಿಗಳಾದರು. ಬೂಸಾ ಸಾಹಿತ್ಯವೇ “ಕನ್ನಡ ಕಲಿಕೆ”ಯ ಮೂಲವಾಯಿತು. ಶಾಲಾ ಪ್ರಬಂಧ, ಭಾಷಣ ಸ್ಪರ್ಧೆಗಳಲ್ಲಿ, ಪರೀಕ್ಷೆಗಳಲ್ಲಿ ಮುಂದೆ ಪತ್ರಿಕೆಗಳಲ್ಲಿ ನಡೆದದ್ದು ಇದೇ!

ಸರಿಯಾಗಿ ಇಂಗ್ಲೀಷ್ ಗೊತ್ತಿಲ್ಲದಿದ್ದರೂ ತಮ್ಮ ಭಾಷೆಯಲ್ಲಿ ಮಾತಾಡುವಾಗ ನಾಲ್ಕಾರು ಇಂಗ್ಲೀಷ್ ಪದಗಳನ್ನು ಉದುರಿಸಿ ತಾವು ಶ್ರೇಷ್ಟರು, ಸುಶಿಕ್ಷಿತರು ಎಂಬ ಸ್ಖಲನ ಸುಖ ಅನುಭವಿಸುವವರೂ, ಕನ್ನಡದ ಪದಗಳಿದ್ದರೂ ಅರ್ಥವಾಗದ ಸಂಸ್ಕೃತ ಪದಗಳನ್ನು ಬಳಸಿ “ಶ್ರೇಷ್ಟ-ಶಿಷ್ಟ ಕನ್ನಡ”ದ ಭ್ರಮೆಯಲ್ಲಿ ಇರುವವರೂ ಒಂದೇ ರೀತಿಯ ಜನ. ಈಗ ಸಂಸ್ಕೃತವನ್ನು ವಿರೋಧಿಸಲು ಮತ್ತು ಅದರಿಂದ ಆದಷ್ಟು ಕಳಚಿಕೊಳ್ಳಲು ಇರುವ ಕಾರಣವೆಂದರೆ, ಅದು ಮೇಲುಕೀಳಿನ, ಹೇರಿಕೆಯ, ಜನರ ನಡೆನುಡಿಗಳಲ್ಲಿ ಹರಡಿ ನಿಧಾನವಾಗಿ ಕೊಲ್ಲುವ ವಿಷವಾಗಿದೆ ಎಂಬುದು.

ಯಾವುದೇ ಸಂಸ್ಕೃತವೇ ಗೊತ್ತಿಲ್ಲದ ಭಯಂಕರ ಭಾಷಣಕಾರ ತನ್ನ ಭಾಷಣ ಆರಂಭಿಸುವುದೇ ಒಂದು ಉರುಹೊಡೆದ ಸಂಸ್ಕೃತ ಶ್ಲೋಕದಿಂದ. ನಂತರ ಇದರ ತಾತ್ಪರ್ಯ ಎಂದರೆ… ಎಂದು ಕನ್ನಡದಲ್ಲಿ ವಿವರಿಸಿ ಸವಕಲು ಬ್ರಾಹ್ಮಣ್ಯದ ಮೌಲ್ಯಗಳನ್ನು ಒದರಿದನೆಂದರೆ ಕೇಳುಗರೆಲ್ಲಾ ಪ್ರೀ ಪ್ರೋಗ್ರಾಂ ಮಾಡಿದವರಂತೆ ತಲೆದೂಗಿ, ಅಹಾ ಎನ್ನುತ್ತಾರೆ. ನಿಜ. ನಮ್ಮ ಜನರ ಮನಸ್ಸುಗಳನ್ನು ಇಂತವಕ್ಕೆ ಸೂಕ್ಷ್ಮವಾಗಿ ಟ್ಯೂನ್ ಮಾಡಿ ಇಡಲಾಗಿದೆ. ನಂತರ ಜನರ ಭಾಷೆಯಲ್ಲಿ ಅನುವಾದ ಮಾಡಿ ಹೇಳಬೇಕು ಎಂದಾದರೆ, ಮೊದಲು ಸಂಸ್ಕೃತದಲ್ಲಿ ಒದರುವ ಅಗತ್ಯವಾದರೂ ಏನು? ಉದ್ದೇಶ ಏನೆಂದರೆ, ನಮ್ಮ ಸಂಸ್ಕೃತದಲ್ಲಿ ಇದು ಇದೆ, ನಿಮ್ಮ ಭಾಷೆಯಲ್ಲಿ ಇಲ್ಲ ಎಂದು ತೋರಿಸಿ ಯಜಮಾನಿಕೆ ಸ್ಥಾಪಿಸುವುದು.

ನನ್ನ ಬಾಲ್ಯದಲ್ಲಿ ಬೆಳಕು ಹರಿಯುವ ಮೊದಲೇ ದಿನ ಶುರುವಾಗುತ್ತಿದ್ದುದೇ ಸಂಸ್ಕೃತದ ಕಮಲಳ ಮೊಲೆಯಿಂದ! ಚಡ್ಡೀಕೇಂದ್ರ ಕಲ್ಲಡ್ಕದಿಂದ ಮೈಕು ಕಿರಿಚುತ್ತಿದ್ದ ಕಮಲಾ ಕುಚ… ವೆಂಕಟೇಶ್ವರ ಸುಪ್ರಭಾತ ಕೇಳಲು ಇಂಪಾಗಿ ಕುಶಿಯಾಗುತ್ತಿದ್ದರೂ, ಎಲ್ಲರ ತಲೆಯೊಳಗೆ ಸಂಸ್ಕೃತ ಪದಗಳ ಮಳೆಯಾಗುತ್ತಿತ್ತು. ಬತ್ತ ಕುಟ್ಟುವ ಹಟ್ಟಿಯಲ್ಲಿ ಮಲಗುತ್ತಿದ್ದ ಕೊರಗರ ಹುಡುಗ ಬಲ್ಲು- ನನ್ನ ಅಣ್ಣನಂತಿದ್ದವನು- ಕೂಡಾ ಇದೇ ರಾಗದಲ್ಲಿ ಅಸಡ್ಡಾಳ ಪದಗಳಲ್ಲಿ ಅವನದ್ದೇ ಸುಪ್ರಭಾತ ಹಾಡುತ್ತಿದ್ದ. ಅದು ನಮ್ಮಂತ ಸೂದ್ರ ಮುಂಡೇವಕ್ಕೆ ಸಂಸ್ಕೃತ ಸುಪ್ರಭಾತದಷ್ಟೇ ಅರ್ಥವಾಗುತ್ತಿತ್ತು! ಆದರೆ, ಅದು ಸಂಸ್ಕೃತ ಒಂದು ದೇವಭಾಷೆ ಎಂಬುದರ ಜೊತೆಗೆ, ಬ್ರಾಹ್ಮಣ ಶ್ರೇಷ್ಟತೆಯ ಭ್ರಮೆಯನ್ನು ಸಾಮಾನ್ಯ ಜನರ ಮೆದುಳಲ್ಲಿ ಮೊಳೆ ಹೊಡೆದಂತೆ ಕೂರಿಸಿತು. ನಂತರ ವಿಪ್ರ ಕಲ್ಪನೆಯ ಪೌರಾಣಿಕ ಪ್ರಸಂಗಗಳ ಯಕ್ಷಗಾನ ಬಯಲಾಟಗಳು, ತಾಳಮದ್ದಳೆಗಳು ಮತ್ತು ಹರಿಕತೆಗಳು ಇಂತಹ ಕಲ್ಪನೆ, ಕೀಳರಿಮೆಗಳನ್ನು ಗಾರೆ ಹಾಕಿ ಗಟ್ಟಿಗೊಳಿಸಿದವು.

ನಮ್ಮದೇ ಭಾಷೆಯಲ್ಲಿ ಉಚ್ಚರಿಸಿದ ದೇಹಭಾಗಗಳು, ಸಂಸ್ಕೃತದಲ್ಲಿ ಹೇಳಿದರೆ, ಲಿಂಗದಂತೆ ಪವಿತ್ರವಾದವು. ಉಚ್ಚೆ, ಹೇಲು, ಹೂಸುಗಳು ನಮ್ಮ ಭಾಷೆಯಲ್ಲಿ ವಾಸನೆ, ಅಸಹ್ಯ ಎನಿಸುತ್ತಿದ್ದವು, ಸಂಸ್ಕೃತದಲ್ಲಿ ಮಲ, ಮೂತ್ರ, ಅಪಾನವಾಯುವಾದ ಕೂಡಲೇ ಸುವಾಸನೆಯಿಂದ ಕೂಡಿ ಸಹ್ಯವಾದವು! ನಾವು ಓದುತ್ತಿದ್ದ ಪತ್ರಿಕೆಗಳೂ ಅಷ್ಟೇ! ಸಂಸ್ಕೃತಭ್ರೂಯಿಷ್ಟ! ಈ ವಿಷ ಮುಂದೆ ಸಮಾಜದ ಎಲ್ಲ ದೇಹಭಾಗಗಳಿಗೆ ಹರಡಿತು. ಮೆದುಳಿಗೇ ಹರಡಿದ ಮೇಲೆ ಇನ್ನೇನು ಹೇಳುವುದು!

ಇಂತ ಪರಿಸ್ಥಿತಿಯಲ್ಲಿ ಕನ್ನಡವನ್ನು ಸರಳ ಮಾಡಬೇಕು, ಜನಭಾಷೆಗೆ ಸಿಗಬೇಕಾದ ಗೌರವವನ್ನು ಮತ್ತೆ ಮರಳಿಸಬೇಕಾದರೆ, ಮೊದಲು ಮಾಡಬೇಕಾದ ಕೆಲಸವೆಂದರೆ, ಸಂಸ್ಕೃತವನ್ನು ಅದರ ಮಠಪೀಠದಿಂದ ಕೆಳಗುರುಳಿಸುವುದು ಮತ್ತು ನಿಮ್ಮದೇ ಭಾಷೆಯ ಬಗ್ಗೆ ನಮಗಿರುವ ಕೀಳರಿಮೆಯನ್ನು ಬೇರು ಸಮೇತ ಕಿತ್ತೆಸೆಯುವುದು. ಶಿಷ್ಟ-ಗ್ರಾಮ್ಯ ಎಂಬ ಮೇಲುಕೀಳನ್ನು ವಿರೋಧಿಸುವುದು. ಇದಕ್ಕಾಗಿ, ಈ ಮೃತ ಸಂಸ್ಕೃತವು ಎಲ್ಲೆಲ್ಲಿ ಹೇಗೆಹೇಗೆ ನುಸುಳಿದೆ, ನುಸುಳಿಸಲಾಗುತ್ತಿದೆ ಮತ್ತು ಅದನ್ನು ಹೇಗೆ ಹೊರತೆಗೆದು ಅಂತ್ಯಸಂಸ್ಕಾರ ನಡೆಸಬೇಕು ಎಂಬುದರ ಬಗ್ಗೆ ಮೊದಲು ಚರ್ಚೆ ನಡೆಯಬೇಕು. ಚರ್ಚೆ ನಡೆಸೋಣ. ಈಗ ಸಂಸ್ಕೃತದಂತೆ ಹಿಂದಿಯೂ ಆಕ್ರಮಣದ, ತನಗಿಂತ ಹಳೆಯ ನೆಲದ ಭಾಷೆಗಳನ್ನು ಅಡಿಯಾಳು ಮಾಡಲು ಹೊರಟಿರುವ ಭಾಷೆ ಎಂಬುದನ್ನು ಮರೆಯದಿರೋಣ.

-ನಿಖಿಲ್ ಕೋಲ್ಪೆ