srinivas karkala – Peepal Media

ಮೊಲೆಗಳನ್ನು ಸವರುತ್ತ ಆತನ ಕೈಗಳು ನನ್ನ ಹೊಟ್ಟೆಯತ್ತ ಸರಿದವು…”
ಆರ್ ಎಸ್ ಎಸ್ ಸ್ವಾವಲಂಬಿ, ಸ್ವತಂತ್ರ ಆಲೋಚನೆ ಹೊಂದಿರುವ ಹೆಣ್ಣುಮಕ್ಕಳನ್ನು ಇಷ್ಟಪಡುವುದಿಲ್ಲ. ಅವರ ಸಿದ್ಧಾಂತದ ಪ್ರಕಾರ ಹೆಣ್ಣು ಶಾಂತವಾಗಿರಬೇಕು, ವಿಧೇಯಳಾಗಿರಬೇಕು. ಪ್ರತಿಭಟನೆಯನ್ನಂತೂ ಮಾಡಲೇಬಾರದು. ಈ ಗೆರೆ ಮೀರುವವರಿಗೆ ಪಾಠ ಕಲಿಸಬೇಕು ಎನ್ನುವುದು ಅವರ ನಿಲುವು. ಈ ಪಾಠ ಕಲಿಸಹೊರಟು ಈಗ ಅವರು ಕೈ ಸುಟ್ಟುಕೊಂಡಿದ್ದಾರೆ – ಶ್ರೀನಿವಾಸ ಕಾರ್ಕಳ

“ಫೋಟೋ ತೆಗೆಯುವಂತೆ ನಟಿಸುತ್ತಾ, ಆರೋಪಿಯು (ಬ್ರಿಜ್ ಭೂಷಣ್ ಶರಣ್ ಸಿಂಗ್) ತನ್ನೆಡೆಗೆ ನನ್ನನ್ನು ಒತ್ತಿಹಿಡಿದ. ಉದ್ದೇಶಪೂರ್ವಕವಾಗಿಯೇ ತನ್ನ ಕೈಗಳಿಂದ ನನ್ನ ಮೊಲೆಗಳನ್ನು ಸವರಿದ…

ಯಾವುದೇ ರೀತಿಯ ದೈಹಿಕ ಸಂಬಂಧ ಹೊಂದುವುದರಲ್ಲಿ ನನಗೆ ಆಸಕ್ತಿ ಇಲ್ಲ ಎಂದು ನಿನಗೆ ಈ ಹಿಂದೆಯೇ ಹೇಳಿದ್ದೆ. ನನ್ನನ್ನು ಹಿಂಬಾಲಿಸುವುದನ್ನು ನೀನು ನಿಲ್ಲಿಸಬೇಕು ಎಂದು ನಾನು ಅವನಿಗೆ ಸ್ಪಷ್ಟವಾಗಿ ಹೇಳಿದೆ…” (ಅಪ್ರಾಪ್ತ ಹರೆಯದ ಕುಸ್ತಿಪಟು).

“ಆದಿನ ನಾನು ಒಂದು ಹೋಟೆಲ್ ಗೆ ಡಿನ್ನರ್ ಗೆ ಹೋಗಿದ್ದೆ. ಅಲ್ಲಿದ್ದ ಆರೋಪಿಯು ತನ್ನ ಡಿನ್ನರ್ ಟೇಬಲ್ ಗೆ ಬರುವಂತೆ ನನ್ನನ್ನು ಕರೆದ. ನಾನು ಅಲ್ಲಿ ಹೋದಾಗ ನನ್ನ ಸಮ್ಮತಿಯೇ ಇಲ್ಲದೆ ಆತ ತನ್ನ ಕೈಗಳನ್ನು ನನ್ನ ಮೊಲೆಗಳ ಮೇಲೆ ಇರಿಸಿದ, ತಬ್ಬಿಕೊಂಡ. ನಾನು ಬೆಚ್ಚಿಬಿದ್ದೆ. ಆರೋಪಿಯು ಅಲ್ಲಿಗೇ ನಿಲ್ಲಿಸಲಿಲ್ಲ. ಮತ್ತೆ ನನ್ನ ಮೊಲೆಗಳನ್ನು ಅವಚಿ ಹಿಡಿದ. ಮತ್ತೆ ಕೈಗಳನ್ನು ಹೊಟ್ಟೆಯತ್ತ ಸರಿಸಿದ. ಹೀಗೆ ಮೂರು ನಾಲ್ಕು ಬಾರಿ ಮಾಡಿದ…!

ಆರೋಪಿಯು ಕುಸ್ತಿ ಫೆಡರೇಶನ್ (WFI) ಕಚೇರಿಯಲ್ಲಿ ಅಸಭ್ಯ ರೀತಿಯಲ್ಲಿ ನನ್ನ ಅಂಗೈ, ಮೊಣಕಾಲು, ತೊಡೆ, ಭುಜಗಳನ್ನು ನನ್ನ ಸಮ್ಮತಿಯಿಲ್ಲದೆಯೇ ಮುಟ್ಟತೊಡಗಿದ. ನಾನು ನಿಂತಲ್ಲಿಯೇ ನಡುಗಲಾರಂಭಿಸಿದೆ. ಆತ ತನ್ನ ಕೈಗಳನ್ನು ನನ್ನ ಮೊಲೆಗಳ ಮೇಲಿರಿಸಿದ.. ನನ್ನ ಉಸಿರನ್ನು ಪರೀಕ್ಷಿಸುವ ನೆಪದಲ್ಲಿ ಕೈಗಳನ್ನು ನನ್ನ ಹೊಟ್ಟೆಯತ್ತ ಸರಿಸಿದ. ನನ್ನ ಮಾನಭಂಗ ಮಾಡುವ ಉದ್ದೇಶದಿಂದ ಸಲ್ಲದ ರೀತಿಯಲ್ಲಿ ನನ್ನನ್ನು ಮುಟ್ಟುವುದು ಆತನ ಉದ್ದೇಶವಾಗಿತ್ತು…” (ಕುಸ್ತಿಪಟು 1)

“ಮ್ಯಾಟ್ ಮೇಲೆ ನಾನು ಮಲಗಿದ್ದಾಗ ಆರೋಪಿಯು ನನ್ನ ಬಳಿಗೆ ಬಂದ. ನನ್ನತ್ತ ಬಾಗಿದ. ನನ್ನ ಕೋಚ್ ಇಲ್ಲದ ಆ ಹೊತ್ತಿನಲ್ಲಿ ನನ್ನ ಸಮ್ಮತಿಯಿಲ್ಲದೆ ನನ್ನ ಟಿ ಶರ್ಟ್ ಎಳೆದ, ತನ್ನ ಕೈಗಳನ್ನು ನನ್ನ ಮೊಲೆಗಳ ಮೇಲಿರಿಸಿದ. ಉಸಿರು ಪರೀಕ್ಷಿಸುವ ನೆಪದಲ್ಲಿ ತನ್ನ ಕೈಗಳನ್ನು ನನ್ನ ಹೊಟ್ಟೆಗಳತ್ತ ಸರಿಸಿದ…

ಫೆಡರೇಶನ್ ಕಚೇರಿಗೆ ಹೋಗಿದ್ದಾಗ ಆತ ನನ್ನನ್ನು ತನ್ನ ಕೊಠಡಿಗೆ ಕರೆದ. ನನ್ನ ಜೊತೆ ಬಂದಿದ್ದ ನನ್ನ ಸಹೋದರನನ್ನು ಹೊರಗಿರಲು ಹೇಳಿದರು. ಇತರರು ಹೋದ ಬಳಿಕ ಆರೋಪಿಯು ಕೊಠಡಿಯ ಬಾಗಿಲು ಮುಚ್ಚಿ ನನ್ನನ್ನು ತನ್ನತ್ತ ಬರಸೆಳೆದು ಬಲವಂತವಾಗಿ ದೈಹಿಕ ಸಂಪರ್ಕ ಮಾಡಲು ಯತ್ನಿಸಿದ…” (ಕುಸ್ತಿಪಟು 2)

ಆರೋಪಿಯು ಫೋನ್ ನಲ್ಲಿ ನನ್ನ ಹೆತ್ತವರೊಂದಿಗೆ ಮಾಡನಾಡಲು ಹೇಳಿದ. ಆಗ ನನ್ನಲ್ಲಿ ನನ್ನ ಫೋನ್ ಇರಲಿಲ್ಲ. ತಾನು ಕುಳಿತಿದ್ದ ತನ್ನ ಬೆಡ್ ನತ್ತ ಬರುವಂತೆ ನನ್ನನ್ನು ಕರೆದ. ಅಲ್ಲಿಗೆ ಹೋದಾಗ ಹಠಾತ್ತಾಗಿ ನನ್ನ ಸಮ್ಮತಿಯೇ ಇಲ್ಲದೆ ನನ್ನನ್ನು ಅಪ್ಪಿಕೊಂಡ…

ತನ್ನ ಲೈಂಗಿಕ ಉದ್ದೇಶಗಳನ್ನು ಇನ್ನಷ್ಟು ಈಡೇರಿಸಿಕೊಳ್ಳಲು ಕೆಲವು ಆಮಿಷಗಳನ್ನು ಒಡ್ಡಿದ. ಅಂದರೆ, ಲೈಂಗಿಕವಾಗಿ ಸಹಕರಿಸಿದರೆ ನನ್ನ ಕ್ರೀಡಾ ಅಗತ್ಯದ ಸಾಧನ ಸಲಕರಣೆಗಳನ್ನು ಒದಗಿಸುವುದಾಗಿ ಹೇಳಿದ…” (ಕುಸ್ತಿಪಟು 3).

“ಆರೋಪಿಯು ನನ್ನನ್ನು ತನ್ನ ಬಳಿಗೆ ಕರೆದು ನನ್ನ ಟಿ ಶರ್ಟ್ ಎಳೆದ. ಉಸಿರನ್ನು ತಪಾಸಣೆ ಮಾಡುವ ನೆಪದಲ್ಲಿ ನನ್ನ ಹೊಕ್ಕಳ ಮೇಲೆ ಕೈ ಇರಿಸಿದ…

ಸಿಂಗ್ ಹುಡುಗಿಯರನ್ನು ಅಸಭ್ಯ ರೀತಿಯಲ್ಲಿ ಬಳಸಿಕೊಳ್ಳಲು ಯತ್ನಿಸುತ್ತಿದ್ದುದರಿಂದ, ನಾನೂ ಸೇರಿದಂತೆ ನಾವೆಲ್ಲರೂ ಬೆಳಗಿನ ತಿಂಡಿ, ಮಧ್ಯಾಹ್ನದೂಟ ಮತ್ತು ರಾತ್ರಿಯ ಊಟಕ್ಕೆ ಒಂಟಿಯಾಗಿ ಹೋಗಬಾರದು, ಗುಂಪಾಗಿ ಹೋಗಬೇಕು ಎಂದು ನಿರ್ಧರಿಸಿದೆವು…” (ಕುಸ್ತಿಪಟು 4).

“ತಂಡದ ಫೋಟೋಗ್ರಾಫ್ ಗಾಗಿ ನಾನು ಕೊನೆಯ ಸಾಲಿನಲ್ಲಿ ನಿಂತಿದ್ದಾಗ ಆರೋಪಿ ಬಂದು ನನ್ನ ಜತೆ ನಿಂತ. ಕೆಲವೇ ಕ್ಷಣಗಳಲ್ಲಿ ಆತನ ಕೈಗಳು ನನ್ನ ಬಟಕ್ ಮೇಲಿರುವುದು ನನಗೆ ತಿಳಿಯಿತು. ನಾನು ಗಾಬರಿಬಿದ್ದೆ. ಆತನ ವರ್ತನೆ ಅಸಭ್ಯವಾಗಿತ್ತು, ಆಕ್ಷೇಪಾರ್ಹವಾಗಿತ್ತು. ನಾನು ದೂರ ಸರಿಯಲೆತ್ನಿಸಿದಾಗ ಆತ ಬಲವಂತವಾಗಿ ನನ್ನನ್ನು ಹಿಡಿದುಕೊಂಡ…” (ಕುಸ್ತಿಪಟು 5).

“ನನ್ನ ಜತೆ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಆತ ನನ್ನನ್ನು ತನ್ನೆಡೆಗೆ ಎಳೆದುಕೊಂಡ. ನನ್ನನ್ನು ನಾನು ರಕ್ಷಿಸಿಕೊಳ್ಳಲು ಆರೋಪಿಯಿಂದ ದೂರ ಸರಿಯಲು ಯತ್ನಿಸಿದೆ. ಆತನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮತ್ತೆ ಮತ್ತೆ ಆತನ ಯತ್ನವನ್ನು ಪ್ರತಿರೋಧಿಸಿದೆ. ಆತನನ್ನು ದೂರ ತಳ್ಳಲು ಯತ್ನಿಸಿದೆ. ‘ಏನು ಭಾರೀ ಸ್ಮಾರ್ಟ್ ಆಗಲು ಯತ್ನಿಸುತ್ತಿದ್ದಿ? ಮುಂದೆ ಯಾವುದೇ ಸ್ಪರ್ಧೆಯಲ್ಲಿ ಆಡುವ ಇಚ್ಚೆ ಇಲ್ಲವಾ?’ ಎಂದು ಗದರಿದ…” (ಕುಸ್ತಿಪಟು 6)

ಅಪರಾಧದ ಸೆಕ್ಷನ್ ಗಳು

ಇವು ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದ ಭಾರತದ ಮಹಿಳಾ ಕುಸ್ತಿಪಟುಗಳು ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಶರಣ್ ಮೇಲೆ ದಾಖಲಿಸಿರುವ ದೂರುಗಳು. ಲೈಂಗಿಕ ಸಹಕಾರದ ಬೇಡಿಕೆಯ ಎರಡು ಪ್ರಕರಣಗಳು ಮತ್ತು ಕನಿಷ್ಠ 15 ಲೈಂಗಿಕ ಕಿರುಕುಳದ ಪ್ರಕರಣಗಳ ಉಲ್ಲೇಖವಿವೆ ಇಲ್ಲಿ. ಸಲ್ಲದ ರೀತಿಯಲ್ಲಿ ಸ್ಪರ್ಶ, ಮಾನಭಂಗ, ಕೈಗಳಿಂದ ಮೊಲೆ ಸವರುವುದು, ಹೊಕ್ಕಳು ಮುಟ್ಟುವುದು; ಹಿಂಬಾಲಿಸುವುದು ಸೇರಿದಂತೆ ಬೆದರಿಕೆಯ ಅನೇಕ ಘಟನೆಗಳು ಇವುಗಳಲ್ಲಿ ಸೇರಿವೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಈ ಎಫ್ ಐ ಆರ್ ಗಳನ್ನು ಎಪ್ರಿಲ್ 28, 2023 ರಂದು ದಿಲ್ಲಿ ಪೊಲೀಸರ ಮುಂದೆ ದಾಖಲಿಸಲಾಗಿತ್ತು.

ಎರಡೂ ಎಫ್ ಐ ಆರ್ ಗಳಲ್ಲಿ ಐಪಿಸಿ ಸೆಕ್ಷನ್ 354 (ಮಾನಭಂಗ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲವಂತ), 354ಎ (ಲೈಂಗಿಕ ಕಿರುಕುಳ) ಮತ್ತು 34 (ಸಾಮಾನ್ಯ ಉದ್ದೇಶ) ಉಲ್ಲೇಖಿಸಲಾಗಿದ್ದು, ಇವಕ್ಕೆ ಒಂದರಿಂದ ಮೂರು ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಬಹುದಾಗಿದೆ. ಮೊದಲನೆ ಎಫ್ ಐ ಆರ್ ನಲ್ಲಿ ಆರು ವಯಸ್ಕ ಕುಸ್ತಿಪಟುಗಳ ಆರೋಪಗಳಿವೆ.

ಎರಡನೆ ಎಫ್ ಐ ಆರ್ ಅಪ್ರಾಪ್ತ ವಯಸ್ಕಳ ತಂದೆಯ ದೂರನ್ನು ಆಧರಿಸಿದೆ. ಇಲ್ಲಿ ಪೋಕ್ಸೋ ಕಾಯಿದೆಯ ಸೆಕ್ಷನ್ 10 ನ್ನು ಉಲ್ಲೇಖಿಸಲಾಗಿದೆ. ಇದಕ್ಕೆ ಐದರಿಂದ ಏಳು ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಬಹುದಾಗಿದೆ. ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾದ ಲೈಂಗಿಕ ಕಿರುಕುಳದ  ಘಟನೆಗಳು ಭಾರತ ಮತ್ತು ಭಾರತದ ಹೊರಗೆ 2012 ರಿಂದ 2022 ರ ನಡುವೆ ನಡೆದಿವೆ.

2021 ರಲ್ಲಿಯೇ ಗಮನಕ್ಕೆ ತರಲಾಗಿತ್ತು

ಸಿಂಗ್ ಕುರಿತಂತೆ ಈ ಮಹಿಳಾ ಕುಸ್ತಿಪಟುಗಳು ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದು ಈಗಲ್ಲ. 2021 ರಲ್ಲಿಯೇ ಪದಕ ವಿಜೇತರ ಸನ್ಮಾನ ಕಾರ್ಯಕ್ರಮದಲ್ಲಿ ಒಬ್ಬ ಸಂತ್ರಸ್ತೆ ಇದನ್ನು ದೇಶದ ಪ್ರಧಾನಿಯವರ ಗಮನಕ್ಕೆ ತಂದಿದ್ದರು. ಆದರೆ, ಕ್ರೀಡಾ ಇಲಾಖೆ ಇದನ್ನು ನೋಡಿಕೊಳ್ಳುತ್ತದೆ ಎಂದು ಹೇಳಿ ಮೋದಿಯವರು ಸಾಗ ಹಾಕಿದ್ದರು.

ಯಾವ ನ್ಯಾಯವೂ ಸಿಗುವ ಸಾಧ್ಯತೆ ಇಲ್ಲ ಅನಿಸಿದಾಗ ಸುಮಾರು ಆರು ತಿಂಗಳ ಹಿಂದೆ ಕುಸ್ತಿಪಟುಗಳು ಬಹಿರಂಗವಾಗಿ ಪ್ರತಿಭಟನೆ ಆರಂಭಿಸಿದರು. ಅವರಿಗೆ ಕ್ರೀಡಾ ತಾರೆಗಳಾದ ಅಭಿನವ್ ಬಿಂದ್ರಾ, ನೀರಜ್ ಚೋಪ್ರಾ, ಕಪಿಲ್ ದೇವ್, ಅನಿಲ್ ಕುಂಬ್ಳೆ, ವಿಜೇಂದ್ರ ಸಿಂಗ್, ಸುನಿಲ್ ಚೇತ್ರಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಸಹಿತ ದೇಶದಾದ್ಯಂತದ ಪ್ರಜ್ಞಾವಂತರ ಬೆಂಬಲ ದೊರೆಯಿತು.

ಆದರೆ ‘ಬೇಟಿ ಬಚಾವ್ ಬೇಟಿ ಪಡಾವ್’ ಸ್ಲೋಗನ್ ಪ್ರಿಯ ಪ್ರಧಾನಿ, ಮಹಿಳಾ ಮಂತ್ರಿಗಳು ಸೇರಿದಂತೆ ಅವರ ಸರಕಾರಕ್ಕೆ ಇದೊಂದು ಗಂಭೀರ ವಿಷಯ ಅನಿಸಲೇ ಇಲ್ಲ! ಸರಕಾರವೇ ಆರೋಪಿಯನ್ನು ರಕ್ಷಿಸಲು ನಿಂತುದರಿಂದ ಪೊಲೀಸರೂ ಅದೇ ದಾರಿ ಹಿಡಿದರು. ಅವರು ಎಫ್ ಐ ಆರ್ ಕೂಡಾ ದಾಖಲಿಸಲಿಲ್ಲ. ಎಫ್ ಐ ಆರ್ ದಾಖಲಿಸುವಂತೆ ಆಗ್ರಹಿಸಲು ಕುಸ್ತಿಪಟುಗಳು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ಕೊನೆಗೆ ಕೋರ್ಟ್ ನ ಆದೇಶಕ್ಕೆ ತಲೆಬಾಗಿ ಪೊಲೀಸರು ಎಫ್ ಐ ಆರ್ ದಾಖಲಿಸಿದರು. ಆದರೂ ತನಿಖೆ ವೇಗ ಪಡೆಯದಿದ್ದಾಗ ಹೊಸ ಸಂಸತ್ ಕಟ್ಟಡ ಉದ್ಘಾಟನೆಯ ದಿನ  ಮಹಿಳಾ ಪಂಚಾಯತ್ ನಡೆಸಲು ಕುಸ್ತಿಪಟುಗಳು ಮುಂದುವರಿದರು.

ತಿರುಗುಬಾಣ

ಅವರಿಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಬಿಟ್ಟಿದ್ದರೆ ಏನೂ ಆಗುತ್ತಿರಲಿಲ್ಲವೇನೋ. ಆದರೆ ಈ ಸರಕಾರಕ್ಕೆ ಎಲ್ಲ ಪ್ರತಿಭಟನೆಯನ್ನೂ ಪೊಲೀಸ್ ಬಲ ಬಳಸಿ ಹತ್ತಿಕ್ಕುವ ಸರ್ವಾಧಿಕಾರಿ ಬುದ್ಧಿ. ಪ್ರತಿಭಟನಾ ಮೆರವಣಿಗೆ ಹೊರಟ ಮಹಿಳಾ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಅಮಾನುಷವಾಗಿ ಎಳೆದಾಡಿದರು, ಬಂಧಿಸಿದರು, ಜಂತರ್ ಮಂತರ್ ನಿಂದ ಅವರನ್ನು ಖಾಲಿ ಮಾಡಿಸಿದರು.

ದೇಶಕ್ಕೆ ಕೀರ್ತಿ ತಂದ ಕುಸ್ತಿಪಟುಗಳನ್ನು ಸರಕಾರದ ಪೊಲೀಸರು ನಡೆಸಿಕೊಂಡ ರೀತಿಯು  ಸರಕಾರಕ್ಕೆ ತಿರುಗುಬಾಣವಾಯಿತು; ಪ್ರತಿಭಟನಾಕಾರರಿಗೆ ವರದಾನವಾಯಿತು. ಸಾಕ್ಷಿ ಮಲಿಕ್ ಮತ್ತು ವಿನೇಶ್ ಪೋಗಟ್ ಭಾರತದ ಧ್ವಜ ಹಿಡಿದು ನೆಲದಲ್ಲಿ ಬಿದ್ದಿದ್ದ ದೃಶ್ಯ  ಇಡೀ ಹೋರಾಟದ ಒಂದು ರೂಪಕವೆನಿಸಿತು.

ಈ ಪೈಲ್ವಾನರಿಗೆ ದೇಶದ ರೈತ ಸಂಘಟನೆಯ ಬೆಂಬಲವೂ ದೊರೆಯಿತು. ತಮ್ಮ ಮೇಲಿದ್ದ ದೌರ್ಜನ್ಯ ವಿರೋಧಿಸಿ ತಮ್ಮ ಪದಕಗಳನ್ನು ಗಂಗಾನದಿಯಲ್ಲಿ ಎಸೆಯುವುದಾಗಿ ಕುಸ್ತಿಪಟುಗಳು ಘೋಷಿಸಿದಾಗ ಅಲ್ಲಿಗೆ ಧಾವಿಸಿದ ಟಿಕಾಯತ್ ಬಳಗ ಸಮಸ್ಯೆ ಪರಿಹರಿಸಲು ಕೆಲವು ದಿನಗಳ ಸಮಯ ನೀಡಬೇಕಾಗಿ ಕೋರಿತು. ಅದೇ ಹೊತ್ತಿನಲ್ಲಿ ಖಾಪ್ ಪಂಚಾಯತ್ ಬೃಹತ್ ಸಭೆ ನಡೆಸುವುದಾಗಿ ಘೋಷಿಸಿತು.

ದೇಶದ ಹೆಚ್ಚಿನ ಕುಸ್ತಿಪಟುಗಳನ್ನು ತಯಾರುಗೊಳಿಸುವುದು ಹರ್ಯಾಣಾ. ಮಹಿಳಾ ಕುಸ್ತಿಪಟುಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಹರ್ಯಾಣದ ಪ್ರತಿಯೊಬ್ಬರನ್ನೂ ಕೆರಳಿಸಿದೆ. ಅಲ್ಲಿನ ಪ್ರತಿಯೊಬ್ಬರೂ ಬಿಜೆಪಿ ಸರಕಾರ ನಡೆದುಕೊಂಡಿರುವ ರೀತಿಯ ಬಗ್ಗೆ ಆಕ್ರೋಶಿತರಾಗಿದ್ದಾರೆ, ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪರಿಸ್ಥಿತಿ ಬಿಜೆಪಿಗೆ ಪ್ರತಿಕೂಲವಾಗುವುದನ್ನು ಅರಿತೋ ಏನೋ, ನಿನ್ನೆಯಷ್ಟೇ (ಮೇ 4,) ಕುಸ್ತಿಪಟುಗಳನ್ನು ಅಮಿತ್ ಶಾ ಭೇಟಿಯಾಗಿರುವುದಾಗಿ ವರದಿಯಾಗಿದೆ.

ಸರಕಾರ ಆರೋಪಿಯನ್ನು ಯಾಕೆ ರಕ್ಷಿಸುತ್ತಿದೆ?

ಬಿಜೆಪಿ ಮತ್ತು ಮೋದಿ ಸರಕಾರ ಲೈಂಗಿಕ ಕಿರುಕುಳದ ಆರೋಪಿಯನ್ನು ಯಾಕೆ ಈ ರೀತಿ ರಕ್ಷಿಸುತ್ತಿದೆ ಎನ್ನುವುದಕ್ಕೆ ಎರಡು ಕಾರಣಗಳನ್ನು ನೀಡಲಾಗುತ್ತಿದೆ. ಮೊದಲನೆಯದಾಗಿ, ಕಳೆದ ಸುಮಾರು ಮುವ್ವತ್ತು ವರ್ಷಗಳಿಂದ ಚುನಾವಣೆಯಲ್ಲಿ ಗೆಲ್ಲುತ್ತಿರುವ ಈ ಬಿಜೆಪಿ ಸಂಸದ ತನ್ನ ಪ್ರದೇಶದ ಐದಾರು ಸಂಸದೀಯ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾನೆ. ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಇಂತಹ ಹೊತ್ತಿನಲ್ಲಿ ಆತನನ್ನು ಎದುರುಹಾಕಿಕೊಳ್ಳುವ ತಪ್ಪನ್ನು ಯಾವುದೇ ರಾಜಕೀಯ ಪಕ್ಷವೂ ಮಾಡದು.

ಎರಡನೆಯದು ಮತ್ತು ಬಹಳ ಮುಖ್ಯವಾದುದು ಲೇಖಕ ಮುಕುಲ್ ಕೇಶವನ್ ಹೇಳುವಂತೆ ಆರ್ ಎಸ್ ಎಸ್/ ಬಿಜೆಪಿಯ ಅಸ್ತಿತ್ವದ ವಿಷಯ. ಮೂಲತಃ ಈ ಸಂಘಟನೆ ಪಿತೃ ಪ್ರಧಾನ ಮತ್ತು ಸ್ತ್ರೀದ್ವೇಷಿ ಮನಸ್ಥಿತಿ ಹೊಂದಿರುವಂಥದ್ದು. ಅಲ್ಲಿ ಹೆಣ್ಣುಮಕ್ಕಳಿಗೆ ಜಾಗ ಇಲ್ಲ. ಇದ್ದರೂ ಅದು ಮೊನ್ನೆ ಹೊಸ ಸಂಸತ್ ಕಟ್ಟಡ ಉದ್ಘಾಟನೆಯ ಒಂದು ಗ್ರೂಪ್ ಫೋಟೋದಲ್ಲಿ ಪ್ರಧಾನಿಗಳು, ಪುರೋಹಿತರ ಕೊನೆಯಲ್ಲಿ ನಿರ್ಮಲಾ ಸೀತಾರಾಮನ್ ರನ್ನು ನಿಲ್ಲಿಸಲಾಗಿತ್ತಲ್ಲ, ಆ ಜಾಗ.

ಆರ್ ಎಸ್ ಎಸ್ ಸ್ವಾವಲಂಬಿ, ಸ್ವತಂತ್ರ ಆಲೋಚನೆ ಹೊಂದಿರುವ ಹೆಣ್ಣುಮಕ್ಕಳನ್ನು ಇಷ್ಟಪಡುವುದಿಲ್ಲ. ಅವರ ಸಿದ್ಧಾಂತದ ಪ್ರಕಾರ ಹೆಣ್ಣು ಶಾಂತವಾಗಿರಬೇಕು, ವಿಧೇಯಳಾಗಿರಬೇಕು. ಪ್ರತಿಭಟನೆಯನ್ನಂತೂ ಮಾಡಲೇಬಾರದು. ಈ ಗೆರೆ ಮೀರುವವರಿಗೆ ಪಾಠ ಕಲಿಸಬೇಕು ಎನ್ನುವುದು ಅವರ ನಿಲುವು. ಈ ಪಾಠ ಕಲಿಸಹೊರಟು ಈಗ ಅವರು ಕೈ ಸುಟ್ಟುಕೊಂಡಿದ್ದಾರೆ.

‘ಯತ್ರ ನಾರ್ಯಸ್ತು ಪೂಜ್ಯಂತೆ’ ಎಂದ ದೇಶದಲ್ಲಿ ಇಂದಿಗೂ, ಅಂದರೆ ಹೆಚ್ಚುಕಡಿಮೆ 21 ನೇ ಶತಮಾನದ ಕಾಲು ಭಾಗ ಕಳೆದ ಮೇಲೂ ಹೆಣ್ಣುಮಕ್ಕಳ ನಿಜ ಪರಿಸ್ಥಿತಿ ಹೇಗಿದೆ ಎಂಬುದನ್ನು ಕುಸ್ತಿಪಟುಗಳ ಪ್ರತಿಭಟನೆಯ ಈ ಪ್ರಕರಣ ತೋರಿಸಿಕೊಟ್ಟಿದೆ. ಒಂದೆಡೆಯಲ್ಲಿ, ಬದಲಾಗದ ಸಮಾಜದ ಸಂಪ್ರದಾಯಬದ್ಧ ಮನಸ್ಥಿತಿ, ಆಳುವವರ ಪುರುಷ ಪ್ರಧಾನ ಮನಸ್ಥಿತಿ, ಇನ್ನೊಂದೆಡೆ ಸಂತ್ರಸ್ತರ ನೆರವಿಗೆ ಬಾರದ ಕಾನೂನುಗಳು, ನ್ಯಾಯಾಲಯಗಳು! ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಕುಸ್ತಿಪಟುಗಳ ಕತೆಯೇ ಹೀಗಾದಾಗ ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಕತೆ ಹೇಗಿರಬಹುದು? ಲೈಂಗಿಕ ಕಿರುಕುಳಗಳು ಸಾಮಾನ್ಯವೇ ಆಗಿರುವ ಸಮಾಜದಲ್ಲಿ ಎಷ್ಟು ಮಂದಿ ಸಾಮಾನ್ಯ ಹೆಣ್ಣುಮಕ್ಕಳು ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯ ಪಡೆಯುವುದು ಸಾಧ್ಯ?!

ಶ್ರೀನಿವಾಸ ಕಾರ್ಕಳ

ಲೇಖಕರು

ಇದನ್ನೂ ಓದಿ-ಕುಸ್ತಿಪಟುಗಳ ಮೇಲೆ ನಡೆದ ಅತ್ಯಾಚಾರ ದೇಶದ ಮೇಲಿನ ಅತ್ಯಾಚಾರವಲ್ಲವೇ?

ಮಹಿಳಾ ಕುಸ್ತಿ ಪಟುಗಳ ಹೋರಾಟ | ಇದೆಂಥಾ ಕ್ರೌರ್ಯ?!

ಆ ಐವತ್ತು ಸಾವಿರ ಬಡಪಾಯಿಗಳು ಇನ್ನೇನು ಬೀದಿಗೆ ಬೀಳುವವರಿದ್ದರು !
ಆರೋಪಿಗಳನ್ನು ಅಪರಾಧಿಗಳು ಎಂದು ಪ್ರಭುತ್ವವೇ ತೀರ್ಮಾನಿಸಿ ಬುಲ್ಡೋಜರ್ ಬಳಸಿ ಮನೆಗಳನ್ನು ಒಡೆದುಹಾಕುವ ಕ್ರೂರ ಅನಾಗರಿಕ ಪದ್ಧತಿ ತಕ್ಷಣ ನಿಲ್ಲಬೇಕು. ದೇಶದ ನ್ಯಾಯಾಂಗ ಅಂತಹ ಸಂವಿಧಾನ ವಿರೋಧಿ ಮತ್ತು ಮಾನವಹಕ್ಕುಗಳ ವಿರೋಧಿ ಕ್ರಮಗಳಿಗೆ ಅವಕಾಶ ಕೊಡಕೂಡದು….ಇದು ಇಂದಿನ ಶ್ರೀನಿ ಕಾಲಂ. ತಪ್ಪದೆ ಓದಿ.

ಆ ದೃಶ್ಯ ನಿಜಕ್ಕೂ ಮನ ಕಲಕುವಂತಿತ್ತು; ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಹೆಂಗಸರು, ಮಕ್ಕಳು, ಇಳಿವಯಸಿನವರು ತೆರೆದ ಜಾಗದಲ್ಲಿ ಮೌನವಾಗಿ ರೋಧಿಸುತ್ತಾ ಪ್ರತಿಭಟನೆ ನಡೆಸುತ್ತಿದ್ದರು. ಒಮ್ಮೊಮ್ಮೆ ಕ್ಯಾಂಡಲ್ ಹಿಡಿದು ನಡೆಯುತ್ತಿದ್ದರು. ತೆರೆದ ಕರಗಳನ್ನು ಎದೆಗಾನಿಸಿ ದೇವರನ್ನು ಸಾಮೂಹಿಕವಾಗಿ ಪ್ರಾರ್ಥಿಸುತ್ತಿದ್ದರು. ಅವರ ಮುಖ ಬಾಡಿತ್ತು. ಕಣ್ಣುಗಳಲ್ಲಿ ಯಾತನೆಯಿತ್ತು. ಆರ್ತ ಭಾವನೆ ಮಡುಗಟ್ಟಿತ್ತು. ಯಾರಾದರೂ ಸಹಾಯ ಮಾಡಿ ಎಂಬ ಯಾಚನೆಯ ಭಾವವಿತ್ತು.

ಎಂದಿನಂತೆ ತಮ್ಮ ನಿಷ್ಠೆಯನ್ನು ಆಳುವವರ ಪದತಲದಲ್ಲಿ ಇರಿಸಿರುವ, ಒಟ್ಟಾರೆಯಾಗಿ ಮನುಷ್ಯ ಸಂವೇದನೆಯನ್ನೇ ಕಳೆದುಕೊಂಡಿರುವ, ತಮ್ಮ ವೃತ್ತಿಯ ಕರ್ತವ್ಯವನ್ನೇ ಮರೆತಿರುವ ಮುಖ್ಯವಾಹಿನಿ ಮಾಧ್ಯಮಗಳು ಈ ಹೃದಯವಿದ್ರಾವಕ ಬೆಳವಣಿಗೆಗಳಿಗೆ ಬೆನ್ನು ಹಾಕಿದ್ದವು; ತಪ್ಪಿಯೂ ಆ ಬಗ್ಗೆ ಸುದ್ದಿ ಮಾಡುತ್ತಿರಲಿಲ್ಲ. ಆದರೆ, ಸಾಮಾಜಿಕ ಮಾಧ್ಯಮಗಳ ಮೂಲಕ ಅವು ಹೊರ ಜಗತ್ತಿನ ಜನರನ್ನು ತಲಪಲಾರಂಭಿಸಿದ್ದವು. ಮತೀಯ ನೆಲೆಯಲ್ಲಿ ಅಂಧರಾಗದೆ ಇನ್ನೂ ಒಂದಿಷ್ಟು ಮನುಷ್ಯತ್ವ ಉಳಿಸಿಕೊಂಡಿರುವವರು ಕಳವಳಗೊಂಡು ಪ್ರತಿಕ್ರಿಯಿಸಲಾರಂಭಿಸಿದ್ದರು.

ರೈಲ್ವೇ ಜಮೀನು ಅತಿಕ್ರಮಣ ವಿವಾದ

ವಿಷಯ ಏನು ಗೊತ್ತೇ? ಉತ್ತರಾಖಂಡದ ಬಂಬುಲ್ ಪುರ, ಮೊಹಲ್ಲಾ ನಾಯ್ ಬಸ್ತಿಯಲ್ಲಿ ಎಪ್ಪತ್ತು ವರ್ಷಗಳಿಗೂ ಅಧಿಕ ಕಾಲದಿಂದ 4,365 ಕುಟುಂಬಗಳ ಸುಮಾರು ಐವತ್ತು ಸಾವಿರ ಮಂದಿ ವಾಸಿಸುತ್ತಿದ್ದರು. ಪಾರಾ ಮಿಲಿಟರಿ ಬಳಸಿ ಇವರ ಮನೆಗಳನ್ನು ಬುಲ್ ಡೋಜರ್ ಗಳಿಂದ ನೆಲ ಸಮ ಮಾಡಲು ಅಲ್ಲಿನ ಸರಕಾರ ಮುಂದಾಗಿತ್ತು. ‘ಈ 29 ಎಕರೆಯು ರೈಲ್ವೇಗೆ ಸಂಬಂಧಿಸಿದ ಭೂಮಿ, ಇದನ್ನು ನೀವು ಅತಿಕ್ರಮ ಮಾಡಿಕೊಂಡಿದ್ದೀರಿ, ಹಾಗಾಗಿ ನೀವು ಇದನ್ನು ಖಾಲಿ ಮಾಡಬೇಕು’ ಎನ್ನುವುದು ಸರಕಾರದ ಆದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಹೈಕೋರ್ಟ್ ಕೂಡಾ ‘ಇನ್ನು ಒಂದು ವಾರದೊಳಗೆ ಅಲ್ಲಿನ ಮನೆಗಳನ್ನು ಖಾಲಿ ಮಾಡಿಸಬೇಕು’ ಎಂದು ಆದೇಶ ನೀಡಿತ್ತು.

ಇದು ನಡೆದುದು ಡಿಸೆಂಬರ್ 20, 2022 ರಂದು. ಸುಮಾರು ಐವತ್ತು ಸಾವಿರ ಜನರು ಮನೆ ಮಾರು ಕಳೆದುಕೊಂಡು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೈಕೋರ್ಟ್ ಹೇಳಿದ ಮೇಲೆ, ಅದೂ ಒಂದು ಮತೀಯರ ಮೇಲೆ ದ್ವೇಷ ಸಾಧಿಸುವ ಪಕ್ಷವೇ ಆಡಳಿತದಲ್ಲಿ ಇರುವಾಗ ಪರಿಸ್ಥಿತಿ ಏನಾಗಬಹುದು? ಜನ ಚಿಂತಾಕ್ರಾಂತರಾಗಿದ್ದರು. ಹೈಕೋರ್ಟೇ ಹೇಳಿದೆ ಮನೆ ಒಡೆಯಲು. ಬಹುತೇಕ ಮಾಧ್ಯಮಗಳು ಒಂದು ಪಕ್ಷಕ್ಕೆ ಒಂದು ಮತಧರ್ಮಕ್ಕೆ ನಿಷ್ಠರಾಗಿರುವವು. ಅವು ಸಹಾಯಕ್ಕೆ ಬರಲಾರವು. ಇನ್ನುಳಿದುದು ಸುಪ್ರೀಂ ಕೋರ್ಟ್ ಒಂದೇ. ಅದು ಸಹಾಯಕ್ಕೆ ಬರುವುದು ಎಂಬ ಖಾತ್ರಿಯೇನು? ಜನರಿಗೆ ಮೌನವಾಗಿ ತಮ್ಮ ನೋವು ತೋಡಿಕೊಳ್ಳುವುದು ಮತ್ತು ದೇವರನ್ನು ಪ್ರಾರ್ಥಿಸುವುದು ಬಿಟ್ಟರೆ ಬೇರೆ ದಾರಿಯಿರಲಿಲ್ಲ.

2022 ಕಳೆಯಿತು. 2023 ಬಂತು. ಜನವರಿ 4 ರಂದು ಹಿರಿಯ ವಕೀಲ ಪ್ರಶಾಂತ ಭೂಷಣ್ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡರ ಬಳಿ ಪರಿಸ್ಥಿತಿಯ ಗಂಭೀರತೆ ವಿವರಿಸಿದರು. ತಕ್ಷಣ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಪ್ರಾರ್ಥಿಸಿದರು. ಮಾರನೆಯ ದಿನ ಕೈಗೆತ್ತಿಕೊಳ್ಳುವುದಾಗಿ ಸಿಜೆಐ ತಿಳಿಸಿದರು.

ಸುಪ್ರೀಂ ಕೋರ್ಟ್ ಮಧ್ಯಪ್ರವೇಶ

ಜನವರಿ 5, 2023. ಹಲದ್ವಾನಿಯ ಜನರು ಮಾತ್ರವಲ್ಲ ಇಡೀ ದೇಶವೇ ಕಾತರದಿಂದ ಸುಪ್ರೀಂ ಕೋರ್ಟ್ ನ ನಿರ್ಧಾರವನ್ನು ಎದುರು ನೋಡುತ್ತಿತ್ತು. ಸಂತ್ರಸ್ತರ ಪರವಾಗಿ ಪ್ರಸಿದ್ಧ ವಕೀಲರಾದ ಪ್ರಶಾಂತ ಭೂಷಣ್, ಕೊಲಿನ್ ಗೊನ್ಸಾಲ್ವೆಸ್, ಸಿದ್ಧಾರ್ಥ ಲೂತ್ರಾ, ಸಲ್ಮಾನ್ ಖುರ್ಷಿದ್ ವಾದ ಮಂಡಿಸಿ, ಈ ಬಡಪಾಯಿಗಳು ಎಪ್ಪತ್ತು ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದಾರೆ, ಅವರಲ್ಲಿ ಎಲ್ಲ ರೀತಿಯ ದಾಖಲೆಪತ್ರಗಳಿವೆ, ಎಲ್ಲ ರೀತಿಯ ತೆರಿಗೆ ಪಾವತಿಸುತ್ತಿದ್ದಾರೆ, ಸ್ಥಳೀಯ ನಿವಾಸಿಗಳ ಹೆಸರನ್ನು ಮನೆ ತೆರಿಗೆ ರಿಜಿಸ್ಟರ್ ನ ಪುರಸಭೆಯ ದಾಖಲೆಗಳಲ್ಲಿ ನಮೂದಿಸಲಾಗಿದೆ ಮತ್ತು ಅವರು ಹಲವು ವರ್ಷಗಳಿಂದ ನಿಯಮಿತವಾಗಿ ಮನೆ ತೆರಿಗೆ ಪಾವತಿಸುತ್ತಿದ್ದಾರೆ. ಅಲ್ಲಿ ಐದು ಸರಕಾರಿ ಶಾಲೆಗಳು, ಆಸ್ಪತ್ರೆ, ಎರಡು ಓವರ್ ಹೆಡ್ ನೀರಿನ ಟ್ಯಾಂಕ್ ಎಲ್ಲವೂ ಇವೆ. ಅವರಿಗೆ ತಮ್ಮ ವಾದ ಮಂಡಿಸಲು ಅವಕಾಶವೇ ಇಲ್ಲದೆ ಏಕಪಕ್ಷೀಯ ತೀರ್ಪಿನ ಮೂಲಕ ಅವರನ್ನು ಒಕ್ಕಲೆಬ್ಬಿಸಲಾಗುತ್ತಿದೆ; ಇದಕ್ಕಾಗಿ ಪಾರಾಮಿಲಿಟರಿಯನ್ನು ಬಳಸಲಾಗುತ್ತಿದೆ, ಇದು ಸಂವಿಧಾನ ದತ್ತ ಬದುಕುವ ಹಕ್ಕಿನ ಉಲ್ಲಂಘನೆ ಎಂದು ವಾದಿಸಿದರು.

ಆದರೆ ಸರಕಾರ ತನ್ನ ಪಟ್ಟು ಸಡಿಲಿಸಲಿಲ್ಲ. ಅದು ರೈಲ್ವೇ ಭೂಮಿ, ಅಭಿವೃದ್ಧಿ ಕಾರ್ಯಗಳಿಗೆ ಆ ಜಾಗ ಬೇಕು, ಅವರು ಅತಿಕ್ರಮಿಸಿ ಅಲ್ಲಿ ಮನೆ ಕಟ್ಟಿಕೊಂಡಿದ್ದಾರೆ, ಅದನ್ನು ತೆರವು ಗೊಳಿಸಲೇಬೇಕು ಎಂದು ವಾದಿಸಿತು. ಆದರೆ ಜಸ್ಟಿಸ್ ಸಂಜಯ್ ಕಿಶನ್ ಕೌಲ್ ಮತ್ತು ಜಸ್ಟಿಸ್ ಅಭಯ್ ಶ್ರೀನಿವಾಸ್ ಓಕಾ ಪೀಠವು ಸರಕಾರದ ವಾದವನ್ನು ಒಪ್ಪಲಿಲ್ಲ. ಇದರಲ್ಲಿ ಅನೇಕ ಗಂಭೀರ ವಿಷಯಗಳು ಒಳಗೊಂಡಿವೆ, ಸಾವಿರ ಸಾವಿರ ಜನರನ್ನು ರಾತ್ರೋ ರಾತ್ರೆ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ, ಇದನ್ನು ಮಾನವೀಯ ನೆಲೆಯಲ್ಲಿ ನೋಡಬೇಕು, ಅದೂ ಅಲ್ಲದೆ ಜನರ ವಿರುದ್ಧ ಪಾರಾಮಿಲಿಟರಿ ಬಳಸುವುದು ಸರಿಯಲ್ಲ ಎಂದಿತು ಮತ್ತು ಉತ್ತರಾಖಂಡ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತು. ಸಂಬಂಧ ಪಟ್ಟವರಿಗೆ ನೋಟೀಸ್ ಜಾರಿ ಮಾಡಿತು. ಹಲದ್ವಾನಿಯ ಜನರು ತಾತ್ಕಾಲಿಕವಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ರಾಜಕೀಯ ದ್ವೇಷ

ಹೀಗೆ ಹತ್ತಿರ ಹತ್ತಿರ ಅರ್ಧ ಲಕ್ಷದಷ್ಟು ಮಂದಿಯ ಮನೆಯನ್ನು ಪುಡಿಗೈದು ಅವರನ್ನು ಬೀದಿಗೆ ಹಾಕಲು ಉತ್ತರಾಖಂಡ ಸರಕಾರ ಮುಂದಾಗಲು ಮತ್ತು ಅದಕ್ಕೆ ಆ ಸರಕಾರದ ಹಿಂದಿನ ರಾಜಕೀಯ ಪಕ್ಷವು ಬೆಂಬಲ ನೀಡಲು ಇನ್ನೂ ಒಂದು ಮುಖ್ಯ ರಾಜಕೀಯ ಕಾರಣ ಇದೆ ಎನ್ನಲಾಗಿದೆ. ಅದೆಂದರೆ, ಅಲ್ಲಿನ ಜನಸಂಖ್ಯೆಯಲ್ಲಿ ಬಹುತೇಕ ಮಂದಿ ಮುಸ್ಲಿಂ ಸಮುದಾಯದವರು. ಕಳೆದ ಮೂರು ವಿಧಾನಸಭೆಯೂ ಸೇರಿದಂತೆ ಹೆಚ್ಚಿನ ಎಲ್ಲಾ ಕಾಲದಲ್ಲೂ ಅಲ್ಲಿನ ಮತದಾರರು ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಿದವರು; ಕಾಂಗ್ರೆಸ್ ಅನ್ನು ಬೆಂಬಲಿಸಿದವರು. ಈ ಸಿಟ್ಟು ಕೂಡಾ ಇದರ ಹಿಂದೆ ಕೆಲಸ ಮಾಡಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

2022 ನೇ ಇಸವಿಯಾಗುವಾಗ ದೇಶದ ಪ್ರತಿಯೊಂದು ಕುಟುಂಬವೂ ಸ್ವಂತ ಸೂರು ಹೊಂದಲಿದೆ ಎಂದು ಈಗಿನ ಪ್ರಧಾನಿಗಳು ಘೋಷಿಸಿ ವರ್ಷಗಳೇ ಕಳೆದು ಹೋದವು. ಇಂದಿಗೂ ವಸತಿ ಇಲ್ಲದ ಮಂದಿ ಈ ದೇಶದಲ್ಲಿ ಕೋಟ್ಯಂತರ. ಈ ನಡುವೆ ದೇಶದಲ್ಲಿ ‘ಬುಲ್ ಡೋಜರ್ ಸಂಸ್ಕೃತಿ’ಯೊಂದು ಆರಂಭವಾಗಿದೆ. ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಮಾನಿಸಬೇಕಿರುವುದು ಈ ದೇಶದ ಕೋರ್ಟುಗಳು. ಆದರೆ ಆರೋಪಿಗಳಿಗೆ ಶಿಕ್ಷೆ ನೀಡುವುದನ್ನು ಪ್ರಭುತ್ವಗಳೇ ಆರಂಭಿಸಿವೆ. ಅದೂ ಎಂತಹ ಶಿಕ್ಷೆ? ಹುಡುಗನೊಬ್ಬ ಅಪರಾಧ ಮಾಡಿದ ಎಂಬ ಆರೋಪದ ಮೇಲೆ ಆತನ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಸಹೋದರ ಸಹೋದರಿಯರು ವಾಸಿಸುವ ಮನೆಗಳನ್ನು ಕೆಡಹುವ ಮೂಲಕ ಆ ನಿರಪರಾಧಿಗಳಿಗೆಲ್ಲ ಸಾಮೂಹಿಕ ಶಿಕ್ಷೆ ನೀಡುವ ಕ್ರಮ!

ಒಂದು ಮನೆ ಎಂಬುದು ಕುಟುಂಬಗಳ ಜೀವಮಾನದ ಕನಸು. ಅದನ್ನು ನನಸಾಗಿಸಲು ಅವರು ಪಡುವ ಶ್ರಮವೋ ಮಾತಿಗೆ ನಿಲುಕದ್ದು. ಅಂತಹ ಮನೆಯನ್ನು ಬುಲ್ ಡೋಜರ್ ಬಳಸಿ ಕ್ಷಣ ಮಾತ್ರಗಳಲ್ಲಿ ಉರುಳಿಸುವುದು. ಸಾಲದೆಂಬಂತೆ ಇದಕ್ಕೆ ಮತೀಯ ನೆಲೆಯಲ್ಲಿ ಸಾರ್ವಜನಿಕ ಸಮ್ಮತಿ! ನೋಡಿಯೂ ನೋಡದಂತೆ ವರ್ತಿಸುವ ನ್ಯಾಯಾಂಗ!

ದೇಶದ ಅನೇಕ ಕಡೆಗಳಲ್ಲಿ ಕಟ್ಟಡಗಳನ್ನು ಅಕ್ರಮ ಎಂಬ ನೆಲೆಯಲ್ಲಿ ಉರುಳಿಸುವುದನ್ನು ನೋಡುತ್ತಿದ್ದೇವೆ. ಕೇರಳದಲ್ಲಿ ಗಗನ ಚುಂಬಿಗಳನ್ನು ಕೆಡವಲಾಗಿತ್ತು. ಇತ್ತೀಚೆಗೆ ದಿಲ್ಲಿಯ ಬಳಿ ಬಹುಮಹಡಿ ವಸತಿ ಸಂಕೀರ್ಣವನ್ನು ಉರುಳಿಸಿದ್ದನ್ನು ಈ ದೇಶ ‘ಸಂಭ್ರಮಿಸಿದೆ’. ಬೆಂಗಳೂರಿನ ರಾಜಾ ಕಾಲುವೆ ಒತ್ತುವರಿಯಾಗಿದೆ, ಅಲ್ಲಿನ ನೀರು ಹರಿಯಲು ಜಾಗ ಇಲ್ಲದೆ ಕೃತಕ ನೆರೆಯಿಂದ ಮನೆ ಮಾರು ಮುಳುಗಡೆಯಾಗುತ್ತಿದೆ, ಅಲ್ಲಿನ ಕಟ್ಟಡಗಳನ್ನು ಒಡೆದುಹಾಕಲಾಗುವುದು ಎಂಬ ಸುದ್ದಿ ಓದುತ್ತಲೇ ಇದ್ದೇವೆ. ಈಗಾಗಲೇ ಉಲ್ಲೇಖಿಸಿದಂತೆ ಆರೋಪಿಗಳನ್ನು ತನಿಖೆಯೇ ಇಲ್ಲದೆ ಅಪರಾಧಿಗಳು ಎಂದು ಘೋಷಿಸಿ ಅವರ ಮನೆಗಳನ್ನು ಉರುಳಿಸಲಾಗುತ್ತಿದೆ. ಈಗ ರೈಲ್ವೇ ಭೂಮಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಐವತ್ತು ಸಾವಿರ ಮಂದಿಯ ಬದುಕು ಕಸಿದುಕೊಳ್ಳುವ ಯತ್ನ!

ಮುಖ್ಯ ಪ್ರಶ್ನೆಗಳು

ಇಲ್ಲಿ ಕೆಲವು ಮುಖ್ಯ ಪ್ರಶ್ನೆಗಳು ಮೂಡುತ್ತವೆ. ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ನೆಲೆಸಿದ್ದಾರಾದರೆ, ಅವರು ಅಲ್ಲಿ ಮನೆ ಕಟ್ಟುವಾಗ ಸಂಬಂಧ ಪಟ್ಟ ಇಲಾಖೆ, ಅಧಿಕಾರಿಗಳು ಏನು ಮಾಡುತ್ತಿದ್ದರು? ಅದನ್ನು ತಡೆಯಬೇಕಿತ್ತಲ್ಲವೇ? ಯಾವುದೇ ಒಂದು ಮನೆಯನ್ನು ಗಗನ ಚುಂಬಿ ಕಟ್ಟಡವನ್ನು ರಾತ್ರೋ ರಾತ್ರಿ ಕಟ್ಟುವುದಕ್ಕಾಗುತ್ತದೆಯೇ? ಅದಕ್ಕೆ ವರ್ಷಗಳೇ ಹಿಡಿಯುವುದಿಲ್ಲವೇ? ಇಂತಹ ಕಟ್ಟಡಗಳನ್ನು ಒಡೆದುಹಾಕುವುದು ಎಂದರೆ ಅದೊಂದು ನೇಶನಲ್ ವೇಸ್ಟ್ ಅಲ್ಲವೇ? ಅಲ್ಲದೆ ಇಂತಹ ಅಕ್ರಮ ಕಟ್ಟಡ ಕಟ್ಟಲು ನೆರವಾದ ಅಥವಾ ಅವಕಾಶ ಮಾಡಿಕೊಟ್ಟ ಅಧಿಕಾರಿಗಳಿಗೆ ಯಾವ ಶಿಕ್ಷೆ? ಈ ದೇಶದಲ್ಲಿ ಹಾಗೆ ಶಿಕ್ಷೆಯಾದ ಉದಾಹರಣೆಗಳಿವೆಯೇ? ಮರೆಯಲಾಗದ ಪಾಠದಂತಹ ಶಿಕ್ಷೆ ನೀಡಿದರೆ ಆಗ ಮುಂದೆ ಇಂತಹ ಅಧಿಕಾರ ದುರುಪಯೋಗದ ಘಟನೆಗಳು ಮರುಕಳಿಸುವುದಿಲ್ಲ ಅಲ್ಲವೇ?

ಎಲ್ಲಕ್ಕಿಂತಲೂ ಮುಖ್ಯವಾಗಿ ಕಾನೂನು ಯಾವತ್ತೂ ಮಾನವೀಯ ಮುಖವನ್ನು ಹೊಂದಿರಬೇಕು. ಕಾನೂನು ನಿಯಮಗಳನ್ನು ನಾವೇ ಮಾಡಿರುವುದು. ಅವುಗಳನ್ನು ಸೂಕ್ತ ರೀತಿಯಲ್ಲಿ ಸಂದರ್ಭಕ್ಕೆ ಸರಿಯಾಗಿ ಬದಲಾಯಿಸಬೇಕಾದವರೂ ನಾವೇ. ಅವುಗಳನ್ನು ಪಾಲಿಸಬೇಕು, ಜಾರಿಗೊಳಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವುಗಳನ್ನು ಜಾರಿಗೊಳಿಸುವಾಗ ಬಡವರು ಮತ್ತು ಧನಿಕರ ನಡುವೆ ಭೇದ ಮಾಡಬಾರದು. ವಿಶೇಷವಾಗಿ ಬಡವರ ಮನೆಗಳನ್ನು ಯಾವುದೇ ಕಾರಣಕ್ಕೂ ನೆಲಸಮ ಮಾಡುವಷ್ಟರ ಮಟ್ಟಿನ ಅಮಾನವೀಯತೆಯನ್ನು ತೋರಬಾರದು. ಇಲ್ಲ, ಆ ಮನೆಗಳನ್ನು ತೆರವುಗೊಳಿಸುವುದು ಅನಿವಾರ್ಯವೇ? ಸರಿ, ಅವರಿಗೆ ಬದಲಿ ವ್ಯವಸ್ಥೆಯನ್ನಾದರೂ ಮಾಡಿಕೊಡಬೇಕಲ್ಲವೇ?  ಎಷ್ಟಾದರೂ ಅವರೂ ನಮ್ಮ ದೇಶದ ಪ್ರಜೆಗಳೇ ಅಲ್ಲವೇ?

ಹಲದ್ವಾನಿಯಂತಹ ಘಟನೆಗಳು ಇನ್ನಾದರೂ ಕಾನೂನನ್ನು ಹೆಚ್ಚು ಮಾನವೀಯಗೊಳಿಸುವ ಮತ್ತು ಅದರ ಜಾರಿಯಲ್ಲಿ ಸದಾ ಬಡವರ ಪರ ಸಹಾನುಭೂತಿ ಇರುವಂತೆ ನೋಡಿಕೊಳ್ಳುವ ಹೊಸ ಆಲೋಚನೆಗೆ ದಾರಿಯಾಗಲಿ. ಎಲ್ಲಕ್ಕಿಂತ ಮುಖ್ಯವಾಗಿ ಆರೋಪಿಗಳನ್ನು ಅಪರಾಧಿಗಳು ಎಂದು ಪ್ರಭುತ್ವವೇ ತೀರ್ಮಾನಿಸಿ ಬುಲ್ಡೋಜರ್ ಬಳಸಿ ಮನೆಗಳನ್ನು ಒಡೆದುಹಾಕುವ ಕ್ರೂರ ಅನಾಗರಿಕ ಪದ್ಧತಿ ತಕ್ಷಣ ನಿಲ್ಲಬೇಕು. ದೇಶದ ನ್ಯಾಯಾಂಗ ಅಂತಹ ಸಂವಿಧಾನ ವಿರೋಧಿ ಮತ್ತು ಮಾನವ ಹಕ್ಕುಗಳ ವಿರೋಧಿ ಕ್ರಮಗಳಿಗೆ ಅವಕಾಶ ಕೊಡಕೂಡದು.

ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.