ʼತಾಕತ್ತಿದ್ದರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿʼ : ಸಿದ್ದುಗೆ ಯತ್ನಾಳ್‌ ಸವಾಲ್!‌

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಾಟಿ ಕೋಳಿ ತಿಂದು ಮಡಿಕೇರಿ ಬಸವೇಶ್ವರ ದೇಗುಲಕ್ಕೆ ಹೋಗಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದ್ದು, ಬಿಜೆಪಿ ನಾಯಕರುಗಳು  ವಾಗ್ದಾಳಿ ನಡೆಸುತ್ತಿದ್ದಾರೆ.

ಈ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಪ್ರತಿಕ್ರಿಯೆ ನೀಡಿದ್ದು ʼತಾಕತ್ತಿದ್ದರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿʼ ಎಂದು ಸಿದ್ದರಾಮಯ್ಯ ನವರಿಗೆ ಸವಾಲು ಹಾಕಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ನಾಡಿನಲ್ಲಿ ಕೆಲವೊಂದು ದೇವಸ್ಥಾನಗಳಿಗೆ ಅವುಗಳದೇ ಆದ ರೂಡಿ,ಸಂಪ್ರದಾಯ,ಪದ್ದತಿಗಳು ಇದ್ದು ಅವುಗಳನ್ನು ಯಾರೇ ಆಗಲಿ ಮೀರಬಾರದು, ಮೀರಿದರೆ ಆಸ್ತಿಕರ ಮನಸ್ಸಿಗೆ ನೋವಾಗುತ್ತದೆ. ಈ ರೀತಿ ಸಿದ್ದರಾಮಯ್ಯ ಅಲ್ಲಾ ಬೇರೆಯಾರೂ ಕೂಡ ಮಾಡಬಾರದು. ಸಿದ್ದರಾಮಯ್ಯ ಅವರೇ ನಿಮಗೆ  ಅಷ್ಟೊಂದು ತಾಕತ್ತಿದ್ರೆ ಹಂದಿಮಾಂಸ ತಿಂದು ಮಸೀದಿಗೆ ಹೋಗಿ ಎಂದು ಯತ್ನಾಳ್ ಬಹಿರಂಗವಾಗಿ ಸವಾಲ್‌ ಎಸೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು