Saturday, June 15, 2024

ಸತ್ಯ | ನ್ಯಾಯ |ಧರ್ಮ

ತಲ್ಲೂರು ನುಡಿಮಾಲೆ 2023| ಸೆ. 24ಕ್ಕೆ ಉಡುಪಿಗೆ ಬರಲಿದ್ದಾರೆ ಮಾಂಟೆಕ್‌ ಸಿಂಗ್‌ ಅಹ್ಲೂವಾಲಿಯಾ

ಉಡುಪಿ: ದೇಶದ ಉದಾರಿಕರಣದ ರೂವಾರಿಗಳಲ್ಲಿ ಒಬ್ಬ ಮಾಂಟೆಕ್‌ ಸಿಂಗ್‌ ಅಹ್ಲೂವಾಲಿಯಾ ಇದೇ ಸೆಪ್ಟೆಂಬರ್‌ 24ರಂದು ಉಡುಪಿಗೆ ಬರಲಿದ್ದಾರೆ. ಅಂದು ಅವರ ಇಂಗ್ಲಿಷ್‌ ಪುಸ್ತಕ ʼಬ್ಯಾಕ್‌ ಸ್ಟೇಜ್‌ʼ ನ ಕನ್ನಡ ಅವತರಣಿಕೆ ʼದಿ ಎಮ್‌ ಡಾಕ್ಯೂಮೆಂಟ್‌ʼ ಪುಸ್ತಕವೂ ಬಿಡುಗಡೆಯಾಗಲಿದೆ. ಇದನ್ನು ಹಿರಿಯ ಪತ್ರಕರ್ತ, ಅನುವಾದಕ ರಾಜಾರಾಮ್‌ ತಲ್ಲೂರು ಅವರು ಅನುವಾದಿಸಿದ್ದಾರೆ.

ಅಂದಿನ ಕಾರ್ಯಕ್ರಮದಲ್ಲಿ, ಮಾಂಟೆಕ್‌ ಸಿಂಗ್‌ ಅಹ್ಲೂವಾಲಿಯಾ ಅವರಿಂದ ಉಪನ್ಯಾಸವೂ ಇರಲಿದೆ. ಈ ಪುಸ್ತಕವು ಭಾರತದ ಅರ್ಥ ವ್ಯವಸ್ಥೆಯು 90ರ ದಶಕದಲ್ಲಿ ಕಂಡ ತಿರುವುಗಳ ಕುರಿತು ಚರ್ಚಿಸುತ್ತಲೇ, ಅಂಧಿನ ರಾಜಕೀಯ ಹಾಗೂ ಅಹ್ಲೂವಾಲಿಯಾರ ಬದುಕಿನ ಕುರಿತೂ ವಿವರಣೆಗಳನ್ನು ನೀಡುತ್ತದೆ.

ಈಗಾಗಲೇ ಹಲವು ಅನುವಾದಿತ ಪುಸ್ತಕಗಳು ಹಾಗೂ ಕರಿಡಬ್ಬಿ ಎನ್ನುವ ಕೊವಿಡ್‌ ಕಾಲದ ಬಹುಮುಖ್ಯ ದಾಖಲೀಕರಣದ ಪುಸ್ತಕ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿರುವ ಪ್ರಕಟಿಸಿರುವ ರಾಜಾರಾಮ್‌ ತಲ್ಲೂರು ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ತನ್ನ ಪ್ರತಿ ಬರಹದಲ್ಲೂ ಅಚ್ಚುಕಟ್ಟುತನವನ್ನು ಕಾಪಾಡಿಕೊಳ್ಳುವ ತಲ್ಲೂರರು, ಸಾಕ್ಷ್ಯಗಳಿಲ್ಲದೆ ಯಾವುದೇ ಅಂಕಿ-ಅಂಶಗಳನ್ನು ತಮ್ಮ ಬರಹಗಳಲ್ಲಿ ತುರುಕುವುದಿಲ್ಲ. ಹಾಗೆಯೇ ಕೇವಲ ಅಭಿಪ್ರಾಯವನ್ನ ವಿಶ್ಲೇಷಣೆಯೆಂದು ಕರೆಯದೆ ಪ್ರತಿಯೊಂದಕ್ಕೂ ಪೂರಕ ದಾಖಲೆ ಒದಗಿಸುವುದು ಅವರ ಬರವಣಿಗೆಯ ಹೆಚ್ಚುಗಾರಿಕೆ. ಅವರು ತಮ್ಮ ಸೋಷಿಯಲ್‌ ಮೀಡಿಯಾ ಬರವಣಿಗೆಯಲ್ಲಿ ಸಹ ಎಂದೂ ನಿರ್ಲಕ್ಷ್ಯದ ಬರವಣಿಗೆ ನೀಡಿದವರಲ್ಲ.

ಇನ್ನು ತಲ್ಲೂರು ನುಡಿಮಾಲೆ ಸಂಸ್ಥೆಯು ಈ ಹಿಂದೆ ಭಾರತದ ಅದ್ಭುತ ಗ್ರಾಮೀಣ ಭಾರತದ ವರದಿಗಾರ ಹಾಗೂ ಹಿರಿಯ ಪತ್ರಕರ್ತರಾದ ಪಿ. ಸಾಯಿನಾಥ್‌ ಅವರನ್ನು ಕುಂದಾಪುರಕ್ಕೆ ಕರೆಸಿ ಅವರಿಂದ ಉಪನ್ಯಾಸವನ್ನು ಏರ್ಪಡಿಸಿತ್ತು. ಜೊತೆಗೆ ಕುಂದಾಪುರ ಕನ್ನಡಕ್ಕೆ ಒಂದು ನಿಘಂಟನ್ನು ಪ್ರಕಟಿಸಿದ ಹೆಮ್ಮೆಯೂ ತಲ್ಲೂರು ನುಡಿಮಾಲೆಯದು. ಇದನ್ನು ರಚಿಸಿದವರು ಮತ್ತೋರ್ವ ಹಿರಿಯ ಪತ್ರಕರ್ತ ಹಾಗೂ ವ್ಯಂಗ್ಯಚಿತ್ರಕಾರ ಪಂಜು ಗಂಗೊ‍ಳ್ಳಿಯವರು.

ಮಾಂಟೆಕ್‌ ಸಿಂಗ್‌ ಅಹ್ಲೂವಾಲಿಯರ ಪುಸ್ತಕದ ಕನ್ನಡದ ಪ್ರತಿಷ್ಟಿತ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಅಕ್ಷತಾ ಹುಂಚದಕಟ್ಟೆಯವರ ನೇತೃತ್ವದ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ.

ಕಾರ್ಯಕ್ರಮವು ಉಡುಪಿಯ ಅಜ್ಜರಕಾಡಿನ ಪುರಭವನದಲ್ಲಿ ನಡೆಯಲಿದ್ದು, ಮೊದಲಿಗೆ ಪುಸ್ತಕ ಬಿಡುಗಡೆ ಹಾಗೂ ನಂತರ ಮೂಲ ಪುಸ್ತಕದ ಬರಹಗಾರರೊಡನೆ ಸಂವಾದ ನಡೆಯಲಿದೆ. ಸಂವಾದವನ್ನು ಕನ್ನಡದ ಹಿರಿಯ ಕತೆಗಾರ ಹಾಗೂ ಆರ್ಥಿಕ ತಜ್ಞ ಶ್ರೀರಾಮ್‌ ಅವರು ನಡೆಸಿಕೊಡಲಿದ್ದಾರೆ.

ಸೀಮಿತ ಪ್ರವೇಶಾವಕಾಶ ಇರುವುದರಿಂದ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಯಸುವವರು ಉಚಿತ ಪಾಸ್‌ಗಳಿಗಾಗಿ 98455 48478 ಅಥವಾ 95388 55776 ದೂರವಾಣಿಗೆ ವಾಟ್ಸಾಪ್/SMS ಕಳುಹಿಸಿಕೊಡುವಂತೆ ಸಂಘಟಕರು ಮನವಿ ಮಾಡಿದ್ದಾರೆ

All reactions:

8989

Related Articles

ಇತ್ತೀಚಿನ ಸುದ್ದಿಗಳು