ತಮಿಳುನಾಡು ವೈರಲ್‌ ವಿಡಿಯೋ: ದರ್ಪ ತೋರಿದ್ದು ನಿರ್ಮಲಾ ಮೇಡಂ, ಕ್ಷಮೆ ಕೇಳಿದ್ದು ಅಣ್ಣಾಮಲೈ!

ಚೆನ್ನೈ: ಕೊಯಮತ್ತೂರಿನ ಹೋಟೆಲ್ ಸರಣಿ ಮಾಲೀಕ ಶ್ರೀನಿವಾಸನ್ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡುವೆ ನಡೆದ ಖಾಸಗಿ ಸಂಭಾಷಣೆಯ ವೀಡಿಯೊ ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಅದರಲ್ಲಿ ಹೋಟೆಲ್‌ ಮಾಲಿಕೆ ಸಚಿವೆಯೆದುರು ಕೈಮುಗಿದು ನಿಂತು “ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ ನನ್ನನ್ನು ಕ್ಷಮಿಸಿ ಮೇಡಮ್‌” ಎಂದು ಅವರು ಕೈ ಮುಗಿದು ಬೇಡುವುದನ್ನು ಕಾಣಬಹುದಾಗಿತ್ತು.

ಈ ವಿಡೀಯೋ ಹಾಗೂ ಹೋಟೆಲ್‌ ಮಾಲಿಕ ಸಚಿವೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸುತ್ತಿರುವ ವಿಡಿಯೋಗಳನ್ನು ಹಂಚಿಕೊಂಡು ಕಾಂಗ್ರೆಸ್‌ ಪಕ್ಷ, ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವರು ನಿರ್ಮಲಾ ಸೀತಾರಾಮನ್‌ ಅವರ ದರ್ಪದ ನಡೆಯನ್ನು ಟೀಕಿಸಿದ್ದರು.

ಆ ಖಾಸಗಿ ಭೇಟಿಯ ವಿಡಿಯೋವನ್ನು ಬಿಡುಗಡೆ ಮಾಡಿದ ಪಕ್ಷದ ನಡೆಯ ಕುರಿತಾಗಿಯೂ ಪ್ರಶ್ನೆಗಳು ಎದ್ದಿದ್ದವು. ಈ ಹಿನ್ನಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡ ತಮ್ಮ ಪಕ್ಷದ ಪದಾಧಿಕಾರಿಗಳ ಕ್ರಮಕ್ಕೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಶುಕ್ರವಾರ ಕ್ಷಮೆಯಾಚಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು