Tuesday, June 25, 2024

ಸತ್ಯ | ನ್ಯಾಯ |ಧರ್ಮ

ತಮಿಳುನಾಡು: ಅಂತರ್ಜಾತಿ ವಿವಾಹ ಮಾಡಿಸಿದ್ದಕ್ಕೆ ಸಿಪಿಎಂ ಕಚೇರಿ ದ್ವಂಸ ಮಾಡಿದ ದುಷ್ಕರ್ಮಿಗಳು

ತಿರುನೆಲ್ವೇಲಿ: ಸವರ್ಣಿಯ ಜಾತಿಯ ಯುವತಿ ಮತ್ತು ದಲಿತ ಯುವಕನ ವಿವಾಹ ಮಾಡಿಸಿದ್ದಕ್ಕಾಗಿ ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್‌ವಾದಿ) ಕಚೇರಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆಯುವತಿಯ ಕುಟುಂಬದ ಸದಸ್ಯರು ಸೇರಿದಂತೆ 8 ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಸ್ಥಳೀಯರ ಹೇಳಿಕೆಯ ಪ್ರಕಾರ ಪಾಲಯಂಗೊಟ್ಟೈನ ಪರಿಶಿಷ್ಟ ಸಮುದಾಯದ ಅರುಂತಥಿಯಾರ್ ಜಾತಿಗೆ ಸೇರಿದ ಮದನ್ ಮತ್ತು ಪೆರುಮಾಳ್ಪುರಂನ ಪಿಳ್ಳೈ ಸಮುದಾಯದ ದಾಕ್ಷಾಯಿಣಿ 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವತಿಯ ಕುಟುಂಬವು ಅಂತರ್ಜಾತಿ ವಿವಾಹವನ್ನು ಒಪ್ಪದ ಕಾರಣ ಪ್ರೇಮಿಗಳಿಬ್ಬರು ಸ್ಥಳೀಯ ಸಿಪಿಎಂ ಕಾರ್ಯಕರ್ತರನ್ನು ಸಂಪರ್ಕಿಸಿದ್ದರು. ಸಿಪಿಐ(ಎಂ) ಪಕ್ಷ ಮುಂದೆ ಬಂದು ಪ್ರೇಮಿಗಳಿಗೆ ಸಹಾಯ ಮಾಡಿತ್ತು. ಕಳೆದ ಅವರು ಗುರುವಾರ ಅಸ್ಪೃಶ್ಯತೆ ನಿರ್ಮೂಲನಾ ಮೋರ್ಚಾದ ಸಹಾಯದಿಂದ ವಿವಾಹವಾಗಿದ್ದರು ಎನ್ನಲಾಗಿದೆ.

ವಿವಾಹ ಕಾರ್ಯಕ್ರಮದ ನಂತರ ವಧು ಧಾಕ್ಷಾಯಿಣಿ ಕುಟುಂಬವು ಸಿಪಿಐ(ಎಂ) ಕಚೇರಿಗೆ ದಾಳಿ ಮಾಡಿದೆ. ಪೊಲೀಸರು ಕೂಡಲೇ ಪಕ್ಷದ ಕಚೇರಿ ತೆರಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ ಧಾಕ್ಷಾಯಿಣಿ ಕುಟುಂಬದ ಸದಸ್ಯರು ಕಚೇರಿಯ ಬಾಗಿಲು ಮುರಿದು ಪಕ್ಷದ ಪದಾಧಿಕಾರಿಗಳು ಹಾಗೂ ಪೊಲೀಸರೊಂದಿಗೆ ವಾಗ್ವಾದಕ್ಕಿಳಿಯುವುದನ್ನು ದೃಶ್ಯಗಳಲ್ಲಿ ನೋಡಬಹುದಾಗಿದೆ.

ನವವಿವಾಹಿತರು ಸಿಪಿಐ(ಎಂ) ಕಚೇರಿಯಲ್ಲಿದ್ದಾರೆ ಎಂಬ ಮಾಹಿತಿ ಪಡೆದ ಹುಡುಗಿಯ ಕುಟುಂಬ, ಪಕ್ಷದ ಕಚೇರಿಗೆ ಧಾವಿಸಿ ಅವರನ್ನು ಹುಡುಕಾಟ ನಡೆಸಿದ್ದಾರೆ. ಇದು ಬಾಲಕಿಯ ಕುಟುಂಬದ ಸದಸ್ಯರು ಮತ್ತು ಸಿಪಿಐ(ಎಂ) ಪದಾಧಿಕಾರಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿ ಕಚೇರಿಯ ಧ್ವಂಸಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು