Friday, October 11, 2024

ಸತ್ಯ | ನ್ಯಾಯ |ಧರ್ಮ

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಈಗ ತೆಲಂಗಾಣದ ಡಿಎಸ್ಪಿ

ಭಾರತೀಯ ಕ್ರಿಕೆಟ್ ನ ಟೀಂ ಇಂಡಿಯಾ ಆಟಗಾರ ಹಾಗೂ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ ಮೊಹಮ್ಮದ್ ಸಿರಾಜ್ ಅವರಿಗೆ ಹೊಸ ಹುದ್ದೆ ಅಲಂಕರಿಸಿದ್ದಾರೆ. ಅವರು ಈಗ ತೆಲಂಗಾಣದ ಡೆಪ್ಯೂಟಿ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ತೆಲಂಗಾಣ ಮೂಲದ ಬಾಕ್ಸರ್ ನಿಖಾತ್ ಝರೀನ್ ಹಾಗೂ ಕ್ರಿಕೆಟರ್ ಮೊಹಮ್ಮದ್ ಸಿರಾಜ್‌ಗೆ ತಮ್ಮ ತಮ್ಮ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಗ್ರೂಪ್ 1 ದರ್ಜೆಯ ಹುದ್ದೆಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಘೋಷಣೆ ಮಾಡಿದ್ದರು. ಅದರಂತೆ ತೆಲಂಗಾಣದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್(ಡಿಜಿಪಿ) ಅವರಿಂದ ಸಿರಾಜ್ ಡಿಸಿಪಿಯಾಗಿ ಚಾರ್ಜ್ ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್‌ಗೆ ಸಂಸದ ಎಂ ಅನಿಲ್ ಕುಮಾರ್ ಯಾದವ್, ಮತ್ತೋರ್ವ ಸಂಸದ ಮೊಹಮ್ಮದ್ ಫಾಹೀಮುದ್ದೀನ್ ಖುರೇಶಿ ಹಾಜರಿದ್ದರು.

ಹುದ್ದೆ ಸ್ವೀಕರಿಸಿದ ನಂತರ ಟ್ವಿಟ್ ಮಾಡಿರುವ ಸಿರಾಜ್ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹಾಗೆಯೇ ತೆಲಂಗಾಣ ಪೊಲೀಸರು, “ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್, ತೆಲಂಗಾಣದ ಡಿಎಸ್‌ಪಿಯಾಗಿ ನೇಮಕವಾಗಿದ್ದಾರೆ. ಅವರು ಕ್ರಿಕೆಟ್‌ನಲ್ಲಿ ತೋರಿದ ಸಾಧನೆ ಹಾಗೂ ನಮ್ಮ ರಾಜ್ಯವು ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಕ್ಕಾಗಿ ಈ ಗೌರವ ನೀಡಲಾಗಿದೆ. ಅವರು ಕ್ರಿಕೆಟಿಗರಾಗಿ ಮುಂದುವರೆಯಲಿದ್ದು, ಈ ಹೊಸ ಪಾತ್ರದ ಮೂಲಕ ಹಲವರಿಗೆ ಸ್ಪೂರ್ತಿಯಾಗಲಿದ್ದಾರೆ” ಎಂದು ಶುಭ ಹಾರೈಸಿದ್ದಾರೆ.  

Related Articles

ಇತ್ತೀಚಿನ ಸುದ್ದಿಗಳು

You cannot copy content of this page