Friday, June 14, 2024

ಸತ್ಯ | ನ್ಯಾಯ |ಧರ್ಮ

OLX ಮೂಲಕ ವಂಚನೆ : ಬೆಂಗಳೂರಿನಲ್ಲಿ ಮೂರೇ ದಿನಗಳಲ್ಲಿ 68 ಲಕ್ಷ ಕಳೆದುಕೊಂಡ ಟೆಕ್ಕಿ

OLX ಮೂಲಕ ಹಾಸಿಗೆ ಮಾರಾಟ ಮಾಡುವ ನೆಪದಲ್ಲಿ ಬೆಂಗಳೂರಿನ ಟೆಕ್ಕಿ ಒಬ್ಬರಿಗೆ ಬರೋಬ್ಬರಿ 68 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕ ವಂಚನೆ ಪ್ರಕರಣ ಹೆಚ್ಚಿದ್ದು, ಪೊಲೀಸರ ಪ್ರಕಾರ, ನಗರದಲ್ಲಿ ಇದುವರೆಗೆ ಈ ರೀತಿ ವಂಚಕರು ಕಬಳಿಸಿದ ಅತಿ ದೊಡ್ಡ ಮೊತ್ತ ಇದಾಗಿದೆ.

ಆನ್‌ಲೈನ್ ಮಾರುಕಟ್ಟೆಯ ಪ್ರಸಿದ್ಧ OLX ನಲ್ಲಿ ಜಾಹೀರಾತನ್ನು ಪ್ರಕಟಿಸುವ ಮೂಲಕ ಬಳಸಿದ ಹಾಸಿಗೆಯನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವಾಗ 39 ವರ್ಷದ ಇಂಜಿನಿಯರ್ ಸೈಬರ್‌ ವಂಚನೆಯಲ್ಲಿ 68 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಡಿಸೆಂಬರ್ 9 ರಂದು ಎಚ್‌ಎಸ್‌ಆರ್ ಲೇಔಟ್ ನಿವಾಸಿ ಆದೀಶ್ (ಹೆಸರು ಬದಲಾಯಿಸಲಾಗಿದೆ) ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 419 (ವ್ಯಕ್ತಿಯಿಂದ ವಂಚನೆ) ಮತ್ತು 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. )

ಆದೀಶ್ ಇತ್ತೀಚೆಗೆ OLX ನಲ್ಲಿ ತನ್ನ ಹಾಸಿಗೆಯ ಛಾಯಾಚಿತ್ರಗಳ ಜೊತೆಗೆ 15,000 ರೂ ಬೆಲೆಯನ್ನು ಉಲ್ಲೇಖಿಸಿ ಮಾರಾಟ ಮಾಡಲು ಬಯಸಿದ ಜಾಹೀರಾತನ್ನು ಪೋಸ್ಟ್ ಮಾಡಿದ್ದಾನೆ. ಡಿಸೆಂಬರ್ 6 ರಂದು ಸಂಜೆ 7 ಗಂಟೆಗೆ ಇಂದಿರಾನಗರದ ಪೀಠೋಪಕರಣ ಅಂಗಡಿಯ ಮಾಲೀಕ ರೋಹಿತ್ ಮಿಶ್ರಾ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ಅವರಿಗೆ ಕರೆ ಬಂದಿತ್ತು. ತಾನು OLX ನಲ್ಲಿ ಪೋಸ್ಟ್ ನೋಡಿದ್ದೇನೆ ಮತ್ತು ಹಾಸಿಗೆಯನ್ನು ಖರೀದಿಸಲು ಆಸಕ್ತಿ ಹೊಂದಿದ್ದೇನೆ ಎಂದು ಅವರು ಆದೀಶ್‌ಗೆ ತಿಳಿಸಿದ್ದಾರೆ.

ಹಾಸಿಗೆಯ ಬೆಲೆಯನ್ನು ಚರ್ಚಿಸಿದ ನಂತರ, ಶರ್ಮಾ ಅವರು ಡಿಜಿಟಲ್ ಪಾವತಿ (Online Payment) ಅಪ್ಲಿಕೇಶನ್ ಮೂಲಕ ಹಣವನ್ನು ತಮ್ಮ ಖಾತೆಗೆ ಕಳುಹಿಸುವುದಾಗಿ ಆದಿಶ್‌ಗೆ ತಿಳಿಸಿದರು. ಒಂದು ನಿಮಿಷದ ನಂತರ, ಮಿಶ್ರಾ ಅವರು ತಮ್ಮ UPI ಐಡಿಗೆ ಹಣವನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ, ಆ ಕಾರಣ ಆದೀಶ್ ಅವರಿಗೆ 5 ರೂಪಾಯಿ ಕಳುಹಿಸಲು ಕೇಳಿದ್ದಾರೆ.

ನಂತರ ಮಿಶ್ರಾ ಮತ್ತೊಮ್ಮೆ ಆದಿಶ್‌ಗೆ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಒಂದು ಬಾರಿ 5,000 ರೂ. ಹಣ ಪಡೆದ ನಂತರ 7,500 ರೂಪಾಯಿ ಕಳಿಸಿ, ನಂತರ 15,000 ರೂಪಾಯಿ ಕಳಿಸುವುದಾಗಿ ಹೇಳಿದ್ದಾರೆ. ನಂತರ ಒಂದೇ ಬಾರಿಗೆ ನಂಬಿಕೆ ಉಳಿಸಿಕೊಳ್ಳಲು 30,000 ರೂಪಾಯಿ ಅದೀಶ್ ಅವರಿಗೆ ಕಳುಹಿಸಿದ್ದಾರೆ. ಹಾಗೆಯೇ OTP ಶೇರ್ ಮಾಡಿ OTP ತಿಳಿಸುವಂತೆ ಕೇಳಿದ್ದಾರೆ.

ಈ ನಡುವೆ ಮಿಶ್ರಾ ಎಂಬ ವ್ಯಕ್ತಿ ಆನ್ಲೈನ್ ಪಾವತಿಯಲ್ಲಿ ಅಷ್ಟು ಪರಿಣತಿ ಹೊಂದಿಲ್ಲ ಎಂಬಂತೆ ಅದೀಶ್ ಭಾವಿಸಿದ್ದಾರೆ. ಆ ನಂತರ ಅದೀಶ್ ಖಾತೆಯಿಂದ ಹಂತಹಂತವಾಗಿ ಹಣ ಖರ್ಚಾಗಲು ಪ್ರಾರಂಭವಾಗಿದೆ. ಕೊನೆಯ ಹಂತಕ್ಕೆ ಒಟ್ಟಾರೆ 68 ಲಕ್ಷ ರೂಪಾಯಿ ವಂಚಕರ ಖಾತೆಗೆ ಜಮಾ ಆದ ನಂತರ ಅದೀಶ್ ಎಚ್ಚರಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಸಾಮಾನ್ಯವಾಗಿ ಇಂತಹ ವಂಚಕರ ಬಲಿಪಶುಗಳು 5 ಲಕ್ಷದವರೆಗೆ ಕಳೆದುಕೊಂಡದ್ದು ಇದೆ ಎಂದು ಪೊಲೀಸರು ಹೇಳಿದರು. “ಆದರೆ ಇದು ದೊಡ್ಡ ಮೊತ್ತವಾಗಿದೆ. ವಂಚಕರು ಕಳುಹಿಸಿದ ಲಿಂಕ್‌ಗಳನ್ನು ಆದೀಶ್ ಕ್ಲಿಕ್ ಮಾಡಿ OTP ಗಳನ್ನು ಸಹ ಹಂಚಿಕೊಂಡಿದ್ದಾರೆ, ಹೀಗಾಗಿ ಹಣವನ್ನು ಕಳೆದುಕೊಂಡಿದ್ದಾರೆ,” ಎಂದು ಪೊಲೀಸರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು