ಬೆಂಗಳೂರು: ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯನದ ʼಹೆಡ್ ಬುಷ್ʼ ನಿನಿಮಾದ ಟ್ರೈಲರ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಟ್ರೈಲರ್ ಅನ್ನು ಭಾನುವಾರ ಸಂಜೆ ಪ್ರಸ್ತುತಪಡಿಸುತ್ತೆವೆ ಎಂದು ʼಹೆಡ್ ಬುಷ್ʼ ಚಿತ್ರತಂಡ ತಿಳಿಸಿದೆ.
ಈ ಕುರಿತು ನಟ ಡಾಲಿ ಧನಂಜಯ್ ಅವರು ಸಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಮ್ಮ ʼಹೆಡ್ ಬುಷ್ʼ ಸಿನಿಮಾದ ಟ್ರೈಲರ್ ಅನ್ನು ಇಂದು ಬೆಳಗ್ಗೆ 11.05 ಕ್ಕೆ ನಿಮ್ಮ ಮುಂದೆ ಪ್ರಸ್ತುತಪಡಿಸಬೇಕಿತ್ತು. ಆದರೆ ಕೆಲವು ತಾಂತ್ರಿಕ ಅಡೆತಡೆಗಳಿಂದ ಇಂದು ಸಂಜೆ 5.55 ಕ್ಕೆ ಬಿಡುಗಡೆ ಮಾಡಲಿದ್ದೇವೆ ಎಂದು ಮಾಹಿತಿ ತಿಳಿಸಿದ್ದು, ತಡವಾಗಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.

ಇಡೀ ಹೆಡ್ ಬುಷ್ ಚಿತ್ರ ತಂಡವು ಚಿತ್ರದ ಟ್ರೈಲರ್ ಅರ್ಪಿಸುವ ಮೊದಲು, ಬಂಡಿ ಮಾಕಾಳಮ್ಮನ ಆಶೀರ್ವಾದದೊಂದಿಗೆ ಪ್ರಯಾಣವನ್ನು ಶುರು ಮಾಡಿ, ಸಂಜೆ ದಾವಣಗೆರೆಗೆ ಭೇಟಿ ನೀಡಲಿದೆ.