Tuesday, August 20, 2024

ಸತ್ಯ | ನ್ಯಾಯ |ಧರ್ಮ

ವಿಡಿಯೋ ಸ್ಟೋರಿ| ಭೂಕುಸಿತದಿಂದ ತೀಸ್ತಾ ಅಣೆಕಟ್ಟಿನ ವಿದ್ಯುತ್ ಕೇಂದ್ರ ನಾಶ

ಗುವಾಹಟಿ: ಸಿಕ್ಕಿಂನಲ್ಲಿ ಭಾರೀ ಅಪಘಾತವೊಂದು ಸಂಭವಿಸಿದೆ. ಇದರಲ್ಲಿ ತೀಸ್ತಾ ನದಿಯ ಸ್ಟೇಜ್ 5 ಅಣೆಕಟ್ಟು‌ ಸಂಪೂರ್ಣವಾಗಿ ನಾಶವಾಗಿದೆ. ಇಂದು ಆ ವಿದ್ಯುತ್ ಕೇಂದ್ರದಲ್ಲಿ ಭೂಕುಸಿತ ಸಂಭವಿಸಿದೆ.

ಭೂಕುಸಿತದಲ್ಲಿ ರಾಷ್ಟ್ರೀಯ ಜಲವಿದ್ಯುತ್ ನಿಗಮಕ್ಕೆ ಸೇರಿದ ಸ್ಥಾವರ ಸಂಪೂರ್ಣ ಹಾನಿಗೀಡಾಗಿದೆ. 510 ಮೆಗಾವ್ಯಾಟ್ ವಿದ್ಯುತ್ ಕೇಂದ್ರದ ಇಡೀ ಗುಡ್ಡ ಜರಿದು ಬಿದ್ದಿದೆ. ಕಳೆದ ಕೆಲವು ವಾರಗಳಿಂದ ಮಧ್ಯಂತರವಾಗಿ ಸಣ್ಣ ಪ್ರಮಾಣದ ಭೂಕುಸಿತಗಳು ಸಂಭವಿಸಿದ್ದವು. ಆದರೆ ಮಂಗಳವಾರ ಬೆಳಗ್ಗೆ ಆ ಬೆಟ್ಟದಿಂದ ಬೃಹತ್ ಬಂಡೆಗಳು ಜಾರಿ ಬಿದ್ದಿವೆ. ಇದರ ಪರಿಣಾಮವಾಗಿ ಇಡೀ ವಿದ್ಯುತ್ ಕೇಂದ್ರ ಅವಶೇಷಗಳಡಿ ಸಿಲುಕಿಕೊಂಡಿದೆ.

ಈ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಪದೇ ಪದೇ ಭೂಕುಸಿತ ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಆ ನಿಲ್ದಾಣದಿಂದ ಜನರನ್ನು ಸ್ಥಳಾಂತರಿಸಲಾಗಿತ್ತು. ವಿದ್ಯುತ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಕೆಲವರು ಭೂಕುಸಿತದ ವೇಳೆ ವಿಡಿಯೋ ತೆಗೆದಿದ್ದಾರೆ.

ಪ್ರಸ್ತುತ 5ನೇ ಹಂತದ ಡ್ಯಾಮ್ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲೋನಾಕ್ ಗ್ಲೇಶಿಯಲ್ ಸರೋವರದಲ್ಲಿ ಮೇಘಸ್ಫೋಟ ಸಂಭವಿಸಿ ಹಠಾತ್ ಪ್ರವಾಹ ಉಂಟಾಗಿತ್ತು. ಅಂದಿನಿಂದ ಪವರ್‌ ಪ್ಲಾಂಟ್ ಕೆಲಸ ಮಾಡುತ್ತಿಲ್ಲ. ಚುಂಗ್ಟಾಂಗ್‌ನಲ್ಲಿರುವ ತೀಸ್ತಾ ಅಣೆಕಟ್ಟಿನ ಭಾಗಗಳು ಹಠಾತ್ ಪ್ರವಾಹದಿಂದ ಕೊಚ್ಚಿಹೋಗಿವೆ. ಇದು‌ ಸಿಕ್ಕಿಂ ರಾಜ್ಯದ ಅತಿದೊಡ್ಡ ಜಲವಿದ್ಯುತ್ ಯೋಜನೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page