Sunday, June 16, 2024

ಸತ್ಯ | ನ್ಯಾಯ |ಧರ್ಮ

ತುಳುನಾಡಿನ ದೈವಾರಾಧನೆಗೆ ಸಂಸದ ತೇಜಸ್ವಿ ಸೂರ್ಯ ಅವರಿಂದ ಅವಮಾನ

ಬೆಂಗಳೂರು: ಇತ್ತೀಚೆಗೆ ಎಲ್ಲೆಂದರಲ್ಲಿ ತುಳುನಾಡಿನ ದೈವಾರಾಧನೆ ಪ್ರದರ್ಶನಗಳು ಹೆಚ್ಚಾಗುತ್ತಿದ್ದು, ದೈವಗಳ ಹೆಸರಿನಲ್ಲಿ ದುಡ್ಡು ಮಾಡುತ್ತಿವೆ. ಈ ವಿರುದ್ಧ ದೈವಾರಾಧಕರು ಸಿಡಿದೇಳುತ್ತಿರುವ ಬೆನ್ನಲ್ಲೇ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರಿಂದಲೂ ದೈವಾರಾಧನೆಗೆ ಅವಮಾನವಾಗಿರುವ ಘಟನೆ ನಡೆದಿದೆ.

ಶುಕ್ರವಾರದಂದು ಬೆಂಗಳೂರಿನ ತಣಿಸಂದ್ರ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರೇರಿತ ರಾಷ್ಟ್ರೋತ್ಥನ ಪರಿಷತ್‌ನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಾರ್ಷಿಕೋತ್ಸವದ ವೇದಿಕೆಯಲ್ಲಿ ತುಳುನಾಡಿನ ದೈವಾರಾಧನೆ ಪ್ರದರ್ಶನ ನೀಡಿದ್ದು, ಸಂಸದ ತೇಜಸ್ವಿ ಸೂರ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ತೇಜಸ್ವಿ ಅವರು ತನ್ನ ಕಾಲಿಗೆ ಹಾಕಿದ್ದ ಶೂ ತೆಗೆಯದೇ ದೈವ ನರ್ತನದಲ್ಲಿ ಬಳಸುವ ಜೀಟಿಗೆಯನ್ನು ಕೈಯಲ್ಲಿ ಹಿಡಿದಿದ್ದು, ದೈವಾರಾಧನೆಗೆ, ದೈವ ನರ್ತಕರಿಗೆ ಅವಮಾನವಾಗುವಂತೆ ವರ್ತಿಸಿದ್ದಾರೆ.

ತೇಜಸ್ವಿ ಸೂರ್ಯ ಅವರ ಈ ವರ್ತನೆಯ ವಿರುದ್ಧ ದೈವಾರಾಧಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇಷ್ಟೆಲ್ಲಾ ಬೆಳವಣಿಗೆಗಳು ಮುಂದುವರೆಯುತ್ತಿದ್ದರೂ, ತುಳುನಾಡಿನ ಶಾಸಕರುಗಳು ಸಂಸದರು ಮೌನವಾಗಿರುವುದರ ಬಗ್ಗೆಯೂ ಕಿಡಿಕಾರಿದ್ದಾರೆ.

ಸಂಸದ ತೇಜಸ್ವಿಯವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದ ಬಗ್ಗೆ ಹಂಚಿಕೊಂಡಿದ್ದು, ಕೈಯಲ್ಲಿ ಜೀಟಿಕೆ ಹಿಡಿದು ಕಾಲಲ್ಲಿ ಶೂ ಹಾಕಿಕೊಂಡೇ ದೈವದ ಪಕ್ಕ ಫೋಟೋ ತೆಗೆಸಿಕೊಂಡಿರುವುದನ್ನು ಅದನ್ನು ತಮ್ಮ ಪೇಜ್‌ ಅಲ್ಲಿ ಹಾಕಿಕೊಂಡಿದ್ದರು. ಆದರೆ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ರಾತ್ರೋರಾತ್ರಿ ಆ ಫೋಟೋವನ್ನು ಡಿಲೀಟ್‌ ಮಾಡಿದ್ದು, ಅನುಮಾನಕ್ಕೆ ಕಾರಣವಾಗಿದೆ. ಆದರೆ ಅದೇ ದಿನ ಅವರು ಶೂ ಹಾಕಿಕೊಂಡಿದ್ದ ಬೇರೆ ಫೋಟೋ ಅವರ ಫೇಸ್ಬುಕ್‌ ಪುಟದಲ್ಲಿ ಕಾಣಬಹುದು.

ತೇಜಸ್ವಿಯವರ ಈ ನಡೆಯ ವಿರುದ್ಧ ಅಖಿಲ ಭಾರತ ಹಿಂದೂ ಮಹಾ ಸಭಾ ಆಕ್ರೋಶ ವ್ಯಕ್ತ ಪಡಿಸಿದ್ದು,

ಜೈ ಹಿಂದೂ ರಾಷ್ಟ್ರ…

ಇದೇನಾ ಸಂಸ್ಕೃತಿ???

ಇದೇನಾ ಪದ್ಧತಿ ???

ಭಾರತೀಯ ಜನತಾ ಪಕ್ಷಕ್ಕೆ ಹಿಂದೂ ಸಂಸ್ಕೃತಿಯ ಬಗ್ಗೆ/  ದೈವರಾದನೆಯ ಬಗ್ಗೆ/ ಹಿಂದೂ ಸಮುದಾಯದ ಬಗ್ಗೆ, ಇರುವಂತಹ ಗೌರವವನ್ನು ನೋಡಿ….

ಆಡಳಿತದಲ್ಲಿರುವಂತಹ ಡಬಲ್ ಇಂಜಿನ್ ಸರಕಾರದ ಮಾನ್ಯ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ರವರು ಚಪ್ಪಲಿಯನ್ನ ಧರಿಸಿ ನಿಂತಿರುವುದನ್ನ ಕಣ್ಣಾರೆ ನೋಡಿ…

ಇಂಥವರಿಂದ ಹಿಂದೂ ಸಮಾಜ ಏನನ್ನು ಅಪೇಕ್ಷಿಸಲು ಸಾಧ್ಯ???

ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದು ಕಿಡಿಕಾರಿದೆ.

ಜೈ ಹಿಂದೂ ರಾಷ್ಟ್ರ…

ಇದೇನಾ ಸಂಸ್ಕೃತಿ ???

ಇದೇನ ಪದ್ಧತಿ ???

ಭಾರತೀಯ ಜನತಾ ಪಕ್ಷಕ್ಕೆ ಹಿಂದೂ ಸಂಸ್ಕೃತಿಯ ಬಗ್ಗೆ /ದೈವರಾದನೆಯ ಬಗ್ಗೆ /ಹಿಂದೂ ಸಮುದಾಯದ ಬಗ್ಗೆ, ಇರುವಂತಹ ಗೌರವವನ್ನು ನೋಡಿ ….

ಆಡಳಿತದಲ್ಲಿರುವಂತಹ ಡಬಲ್ ಇಂಜಿನ್ ಸರಕಾರದ ಮಾನ್ಯ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ರವರು ಚಪ್ಪಲಿಯನ್ನ ಧರಿಸಿ ನಿಂತಿರುವುದನ್ನ ಕಣ್ಣಾರೆ ನೋಡಿ…

ಇಂಥವರಿಂದ ಹಿಂದೂ ಸಮಾಜ ಏನನ್ನು ಅಪೇಕ್ಷಿಸಲು ಸಾಧ್ಯ???

ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದು ಕಿಡಿಕಾರಿದೆ.

Related Articles

ಇತ್ತೀಚಿನ ಸುದ್ದಿಗಳು