Saturday, August 17, 2024

ಸತ್ಯ | ನ್ಯಾಯ |ಧರ್ಮ

ತೆಲಂಗಾಣ: ರೈತರ ಬೆಳೆ ಸಾಲ ಮನ್ನಾ

ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿಯವರು ಗುರುವಾರದಂದು ಮೊದಲ ಹಂತದ ಬೆಳೆ ಸಾಲ ಮನ್ನಾ ಯೋಜನೆಗೆ ಚಾಲನೆ ನೀಡಿದ್ದು ರಾಜ್ಯದಾದ್ಯಂತ 1.1 ಮಿಲಿಯನ್ ರೈತರ ಸಾಲದ ಖಾತೆಗಳಿಗೆ ತಲಾ ₹ 1 ಲಕ್ಷವನ್ನು ಜಮಾ ಮಾಡಿದ್ದಾರೆ.

ರಾಜ್ಯ ಸಚಿವಾಲಯದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ 500 ರೈತ ಸಂಘಟನೆಗಳೋಂದಿಗೆ ಸಂವಾದ ನಡೆಸಿದ ರೇವಂತ್ ರೆಡ್ಡಿ, ಮೊದಲ ಹಂತದಲ್ಲಿ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ₹ 1 ಲಕ್ಷದವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡಲಾಗುತ್ತಿದೆ ಎಂದು ತಿಳಿಸಿದರು. ಈ ರೈತರ ಸಾಲದ ಖಾತೆಗಳಿಗೆ ಸುಮಾರು ₹ 6,098 ಕೋಟಿ ಬಿಡುಗಡೆ ಮಾಡಲಾಗಿದ್ದು, ಬ್ಯಾಂಕ್‌ಗಳು ರೈತರ ಸಾಲವನ್ನು ತೀರಿಸಲು ಬಳಸಲಿವೆ ಎಂದು ತಿಳಿಸಿದರು.

ಎರಡನೇ ಹಂತದಲ್ಲಿ ರೈತರ ₹1.5 ಲಕ್ಷದವರೆಗಿನ ಸಾಲವನ್ನು ಜುಲೈ ಅಂತ್ಯದೊಳಗೆ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ₹ 2 ಲಕ್ಷದವರೆಗೆ ಸಾಲ ಬಾಕಿ ಇರುವ ರೈತರ ಸಾಲ ಮನ್ನಾ ಯೋಜನೆಯನ್ನು ಆಗಸ್ಟ್ 15 ರೊಳಗೆ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

“ಒಟ್ಟಾರೆಯಾಗಿ, 40 ಲಕ್ಷ (4 ಮಿಲಿಯನ್) ರೈತರಿಗೆ ಪ್ರಯೋಜನವಾಗುವ ಸಾಲ ಮನ್ನಾ ಯೋಜನೆಗೆ ₹ 31,000 ಕೋಟಿ ಖರ್ಚು ಮಾಡಲಾಗುವುದು” ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮೇ 2023 ರಲ್ಲಿ ವಾರಂಗಲ್‌ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ರೈತರ ಕುರಿತು ತಮ್ಮ ಪ್ರಣಾಳಿಕೆಯನ್ನು ಅನಾವರಣಗೊಳಿಸುವಾಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಅಸಲು ಮತ್ತು ಬಡ್ಡಿಯನ್ನು ಒಳಗೊಂಡಂತೆ ₹ 2 ಲಕ್ಷದವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡುವ ಭರವಸೆ ನೀಡಿದ್ದನ್ನು ರೇವಂತ್ ರೆಡ್ಡಿ ನೆನಪಿಸಿಕೊಂಡರು.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಯಾವುದೇ ಸರ್ಕಾರಗಳು ಒಂದೇ ಬಾರಿಗೆ ₹ 31,000 ಕೋಟಿ ಸಾಲ ಮನ್ನಾ ಮಾಡಿಲ್ಲ ಎಂದ ಅವರು ಹಿಂದಿನ ಬಿಆರ್‌ಎಸ್ ಸರ್ಕಾರ 2018 ರಲ್ಲಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರವೂ ಬೆಳೆ ಸಾಲ ಮನ್ನಾ ಮಾಡಲು ವಿಫಲವಾಗಿತ್ತು ಎಂದು ತಿಳಿಸಿದರು..

ಮುಂದುವೆರದು “ಕಳೆದ 10 ವರ್ಷಗಳಲ್ಲಿ, BRS ಸರ್ಕಾರವು ಕೇವಲ ₹ 21,000 ಕೋಟಿಯನ್ನು ಮನ್ನಾ ಮಾಡಿದೆ ಮತ್ತು ಹಲವಾರು ಕಂತುಗಳಲ್ಲಿ ಹಣವನ್ನು ಬಿಡುಗಡೆ ಮಾಡಿದೆ” ಎಂದು ಬಿಆರ್‌ಎಸ್‌ ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಉಲ್ಲೇಖಿಸಿದರು.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಖುದ್ದಾಗಿ ಧನ್ಯವಾದ ಹೇಳಲು ನಾನು ಮತ್ತು ತನ್ನ ಸಂಪುಟ ಸಹೋದ್ಯೋಗಿಗಳು ಶೀಘ್ರದಲ್ಲೇ ದೆಹಲಿಗೆ ಹೋಗುವುದಾಗಿ ರೇವಂತ್ ರೆಡ್ಡಿ ತಿಳಿಸುತ್ತಾ “ನಾವು ವಾರಂಗಲ್‌ನಲ್ಲಿ ಧನ್ಯವಾದ ಸಲ್ಲಿಸುವ ಸಾರ್ವಜನಿಕ ರ್ಯಾಲಿಯನ್ನು ನಡೆಸುತ್ತೇವೆ, ಇದಕ್ಕಾಗಿ ರಾಹುಲ್ ಗಾಂಧಿಯನ್ನು ಆಹ್ವಾನಿಸಲಾಗುವುದು” ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page