Sunday, July 27, 2025

ಸತ್ಯ | ನ್ಯಾಯ |ಧರ್ಮ

ತೆಲಂಗಾಣ ಸಂಸದ ಅರವಿಂದ್‌ ಧರ್ಮಪುರಿ ಮನೆ ಧ್ವಂಸ : ಬಿಜೆಪಿ ಕಿಡಿ

ಬೆಂಗಳೂರು : ತೆಲಂಗಾಣದ ನಿಝಾಮಾಬಾದ್‌ ಬಿಜೆಪಿ ಸಂಸದ ಅರವಿಂದ್‌ ಧರ್ಮಪುರಿ ಅವರ ಮನೆ ಮೇಲೆ ಗೂಂಡಾವರ್ತನೆ ತೋರಿದ ಟಿಆರ್‌ಎಸ್‌ ಕಾರ್ಯಕರ್ತರನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಬಿಜೆಪಿ ದಾಳಿಯ ವಿರುದ್ಧ ಕಿಡಿಕಾರಿದೆ.

ನವೆಂಬರ್‌ 18, ಶುಕ್ರವಾರದಂದು ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ಭಾರತ ರಾಷ್ಟ್ರ ಸಮಿತಿ ಕಾರ್ಯಕರ್ತರು ಹೈದರಾಬಾದ್‌ನಲ್ಲಿರುವ ಬಿಜೆಪಿ ಸಂಸದ ಅರವಿಂದ್‌ ಧರ್ಮಪುರಿ ಅವರ ಮನೆಯ ಮೇಲೆ ದಾಳಿ ಮಾಡಿ ಮನೆಯನ್ನು ಧ್ವಂಸಗೊಳಿಸಿದ್ದಾರೆ.

ತೆಲಂಗಾಣದ ಬಿಜೆಪಿ ಸಂಸದ ಅರವಿಂದ್‌ ಧರ್ಮಪುರಿಯವರು ಕಾಂಗ್ರೆಸ್‌ ಪಕ್ಷಕ್ಕೆ ಸೇರಲು ಬಯಸಿದ್ದಾರೆ ಎಂದು ಅರವಿಂದ್‌ ಅವರ ಮಗಳು ಕವಿತಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಕರೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದು, ಟಿಆರ್‌ಎಸ್‌ ಕಾರ್ಯಕರ್ತರು ಸಂಸದರ ಮನೆಯನ್ನು ಮುತ್ತಿಗೆ ಹಾಕಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ , ʼ ತೆಲಂಗಾಣದ ನಿಝಾಮಾಬಾದ್‌ ಬಿಜೆಪಿ ಸಂಸದ ಅರವಿಂದ್‌ ಧರ್ಮಪುರಿ ಅವರ ಮನೆ ಮೇಲೆ ಆಡಳಿತಾರೂಢ ಟಿಆರ್‌ಎಸ್‌ ಪಕ್ಷದ ಗೂಂಡಾಗಳು ದಾಳಿ ಮಾಡಿರುವುದನ್ನು ರಾಜ್ಯ ಬಿಜೆಪಿ ಬಲವಾಗಿ ಖಂಡಿಸುತ್ತದೆ. ದ್ವೇಷ ರಾಜಕಾರಣದ ಭಾಗವಾಗಿ ಗೂಂಡಾವರ್ತನೆ ತೋರಿದ ಟಿಆರ್‌ಎಸ್‌ ಕಾರ್ಯಕರ್ತರನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page