Saturday, July 26, 2025

ಸತ್ಯ | ನ್ಯಾಯ |ಧರ್ಮ

ಭಾರತದಲ್ಲಿ ಟೆಲಿಗ್ರಾಂ ಮೇಲೆ ನಿಷೇಧ ಸಾಧ್ಯತೆ?

ಹೊಸದಿಲ್ಲಿ, ಆಗಸ್ಟ್ 26: ಜನಪ್ರಿಯ ಮೆಸೇಜಿಂಗ್ ಆಪ್ ಗಳಲ್ಲಿ ಒಂದಾದ ಟೆಲಿಗ್ರಾಂ ಭಾರತದಲ್ಲಿ ಬ್ಯಾನ್ ಆಗುವ ಸಾಧ್ಯತೆ ಇದೆ. ವಂಚನೆ, ಜೂಜಾಟದಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಆ್ಯಪ್ ಬಳಕೆಯಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ.

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಪ್ರಸ್ತುತ ಈ ಆರೋಪಗಳ ಬಗ್ಗೆ ಗೃಹ ಸಚಿವಾಲಯ ಮತ್ತು ಐಟಿ ಇಲಾಖೆಯ ಸಹಯೋಗದೊಂದಿಗೆ ತನಿಖೆ ನಡೆಸುತ್ತಿದೆ.

ಟೆಲಿಗ್ರಾಮ್‌ನಲ್ಲಿನ ಕಾನೂನುಬಾಹಿರ ಚಟುವಟಿಕೆಗಳ ಜೊತೆಗೆ, ಇದು ಭಾರತದ ಐಟಿ ಮಾನದಂಡಗಳನ್ನು ಅನುಸರಿಸುತ್ತಿದೆಯೇ ಎನ್ನುವುದನ್ನು ತನಿಖೆಯಿಂದ ತಿಳಿಯಲಾಗುತ್ತದೆ. ಟೆಲಿಗ್ರಾಮ್ ನಿಯಮಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದರೆ ಆ್ಯಪ್ ಬ್ಯಾನ್ ಆಗುವ ಸಾಧ್ಯತೆ ಇದೆ.

ಏತನ್ಮಧ್ಯೆ, ಮಾನವ ಕಳ್ಳಸಾಗಣೆ, ವಂಚನೆ ಮತ್ತು ಸೈಬರ್ ಬೆದರಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಫ್ರೆಂಚ್ ಅಧಿಕಾರಿಗಳು ಟೆಲಿಗ್ರಾಮ್ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡುರೊವ್ ಅವರನ್ನು ಮೂರು ದಿನಗಳ ಹಿಂದೆ ಬಂಧಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page