Monday, January 5, 2026

ಸತ್ಯ | ನ್ಯಾಯ |ಧರ್ಮ

ಮಾನವ ಅನುಕರಣೀಯ ಪ್ರವೃತ್ತಿ ಹೊಂದಿದ್ದು ಸಹಜ ಜೀವನ ಸಾಗಿಸುತ್ತಿಲ್ಲ –  ಕೃಷಿ ತಜ್ಞ ಸುಭಾಷ್ ಪಾಳೇಕರ್

ಹಳೇಬೀಡು: ಭೂಮಿ ಉಳಿಯಬೇಕು, ಜನರು ಉಳಿಯಬೇಕು ಎಂಬ ಮನೋಭಾವವನ್ನು ರೈತರಲ್ಲಿ ಮಾತ್ರ ಕಾಣಬಹುದಾಗಿದೆ. ಎಂದು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪುಷ್ಪಗಿರಿಯಲ್ಲಿ ನಡೆದ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಭೂಮಿಯ ಉಳಿವಿಗಾಗಿ ಕೈ ಮುಟ್ಟಿ ಕೆಲಸ ಮಾಡುತ್ತಿರುವ ಸುಭಾಷ್ ಪಾಳೆಕರ್ ಇಳಿ ವಯಸ್ಸಿನಲ್ಲಿಯೂ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.ಕೃಷಿ ಒಂದು ಪವಿತ್ರ ಕಸುಬು, ಕೃಷಿಯಲ್ಲದೆ ಜನರ ಜೀವನ ಸಾಧ್ಯವಿಲ್ಲ. ಭೂಮಿಯನ್ನು ಉಳಿಸಿಕೊಂಡು ರೈತರು ಬದುಕುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಗಾರ ನಡೆಯುತ್ತಿದೆ ಎಂದು ಸ್ವಾಮೀಜಿ ಹೇಳಿದರು.

ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್ ಮಾತನಾಡಿ,
ಮಾನವ ಅನುಕರಣೀಯ ಪ್ರವೃತ್ತಿ ಹೊಂದಿದ್ದು ಸಹಜ ಜೀವನ ಸಾಗಿಸುತ್ತಿಲ್ಲ . ಅಗೋಚರವಾಗಿ ನಿಯಂತ್ರಣಕ್ಕೆ ಒಳಪಟ್ಟು ಬಹುರಾಷ್ಟ್ರೀಯ ಕಂಪನಿಯನ್ನು ಅನುಕರಣೀಯ ಮಾಡುತ್ತಿದ್ದಾನೆ.ಭಾರತದ ಆರ್ಥಿಕತೆ ಸತ್ತಿದೆ ಎಂದು ಅಮೇರಿಕಾ ಅಧ್ಯಕ್ಷರು ಹೇಳಿದ್ದಾರೆ. ಆದರೆ ಭಾರತದ ಆರ್ಥಿಕತೆ ಅಮೇರಿಕಾಕ್ಕಿಂತ ಬಲವಾಗಿದೆ ಎಂಬುದನ್ನು ಪ್ರತಿಪಾದಿಸುತ್ತೇನೆಕೃಷಿಯಲ್ಲಿ ರಾಸಾಯನಿಕ ಬಳಕೆ ಗಿಂತ ಸಾವಯವ ಕೃಷಿಯಿಂದ ಭೂಮಿಗೆ ಹೆಚ್ಚಿನ ಅಘತವಾಗುತ್ತದೆ. ಸಾವಯವದಿಂದ ಅಣುಬಾಂಬ್ ಸಿಡಿಸಿದಷ್ಟು ಅಪಾಯವಿದೆ ಎಂದರು.ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ಕೃಷಿ ಸುಭಾಷ್ ಪಾಳೇಕರ್ ಅವರ ವಿಚಾರವನ್ನು ಪತ್ರಿಕೆಗಳಲ್ಲಿ ಓದಿದ್ದೇವು. ಸಾಮಾಜಿಕ ಜಾಲಾತಾಣದಲ್ಲಿ ನೋಡಿದ್ದೇವು. ಈಗ ವೇದಿಕೆಯಲ್ಲಿ ಅವರ ಜೊತೆಯಲ್ಲಿರುವುದು ಸಂತಸ ತಂದಿದೆ. ರಸಗೊಬ್ಬರ, ಕೀಟ, ಕ್ರಿಮಿ ಹಾಗೂ ಶಿಲೀಂದ್ರ ನಾಶಕಗಳಿಗೆ ರೈತರು ಬಂಡವಾಳ ಹಾಕುತ್ತಿದ್ದಾರೆ. ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯಿಂದ ರೈತರು ಬದುಕು ಹಸನಾಗುತ್ತದೆ ಎಂದರು.

ಸಾಮೂಹಿಕ ಅಧ್ಯಕ್ಷಿಯ ಮಂಡಳಿ ಸದಸ್ಯೆ ಅನುಸೂಯಮ್ಮ ಮಾತನಾಡಿ, ಬಹುರಾಷ್ಟ್ರೀಯ ಕಂಪನಿಗಳನ್ನು ಉದ್ದಾರ ಮಾಡುವಂತಹ ಬೀಜ ಕಾಯ್ದೆ ಜಾರಿಗೆ ಬಂದರೆ ಪಾರಾಂಪಾರಿಕ ರೈತರು ಬದುಕುವುದು ಕಷ್ಟ. ಕಾಯ್ದೆ ಅನುಷ್ಠಾನ ಆಗದಂತೆ ರೈತರು ಹೊರಾಡಬೇಕಾಗಿದೆ ಎಂದರು.ರಾಜ್ಯ ರೈತ ಸಂಘ ಸಾಮೂಹಿಕ ಅಧ್ಯಕ್ಷಿಯ ಮಂಡಳಿ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿದರು. ರೈತ ಸಂಘ ಸಾಮೂಹಿಕ ಅಧ್ಯಕ್ಷಿಯ ಮಂಡಳಿ ಸದಸ್ಯ ಕೆ.ಟಿ.ಗಂಗಾಧರ ರೈತ ಧ್ವಜಾರೋಹಣ ನೆರವೇರಿಸಿದರು.ಪಾರಾಂಪರಿಕ ಕೃಷಿಗೆ ಹೆಸರಾದ ಕೊಟ್ಟೂರಿನ ರೈತ ಮಹಿಳೆಯರು ಜನಪದ ಗಾಯನದ ಮುಖಾಂತರ ರಾಶಿ ಪೂಜೆ ನೆರವೇರಿಸಿದರು.ನೇಪಾಳ, ಶ್ರೀಲಂಕಾ, ಕಾಂಬೋಡಿಯಾ ದೇಶದ ರೈತರೊಂದಿಗೆ ದೇಶದ ವಿವಿಧ ಭಾಗದ ರೈತರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು. ಚಂದನ್ ಕುಮಾರ್ ಗಾಯನ ಸುಧೆ ಹರಿಸಿದರು.ಶಾಸಕ ಎಚ್.ಕೆ.ಸುರೇಶ್, ಅಂತರ ರಾಷ್ಟ್ರೀಯ ರೈತ ಮುಖಂಡರಾದ ನೇಪಾಳದ ಯದುವೀರ್ ಸಿಂಗ್, ಕೃಷ್ಣ.ಬಿ.ಸಿ, ಲಾ ವಿಮಾ ಕ್ಯಾಪಸೀಯಾ, ಪುಷ್ಪಗಿರಿ ಮಠದ ಕಾರ್ಯದರ್ಶಿ ಎಸ್.ಎಚ್.ರಾಜಶೇಖರ್, ನಿರ್ಮಲ ಗೋಮಾತೆ ಟ್ರಸ್ಟ್ ಮುಖ್ಯಸ್ಥ ಅನಂತರಾವ್, ಮುಖಂಡರಾದ ಹೊನ್ನೂರು ಪ್ರಕಾಶ್, ಅರೇಹಳ್ಳಿ ರಾಜೇಗೌಡ, ಕಣಗಾಲ್ ಮೂರ್ತಿ ಇದ್ದರು.

ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ.
ಸಿದ್ದರಾಮಯ್ಯ ಸರ್ಕಾರ ಉಳಿಯಲು ರೈತಪರ ಯೋಜನೆ ಜಾರಿಯಾಗಬೇಕು ಎಂದು ರಾಜ್ಯ ರೈತಸಂಘ ಸಾಮೂಹಿಕ ಅಧ್ಯಕ್ಷಿಯ ಮಂಡಳಿ ಸದಸ್ಯ ಸಿದ್ದರಾಮಯ್ಯ ಎಪಿಎಂಸಿ ಕಾಯ್ದೆ, ಕರಾರು ಕೃಷಿ ಪದ್ದತಿ ಹಾಗೂ ಭೂಸುಧಾರಣಾ ಕಾಯ್ದೆ ಕೈಬಿಡಬೇಕು.ಇಲ್ಲದಿದ್ದರೆ ಸಿದ್ದರಾಮಯ್ಯ ಅವರಿಗೆ ಉಳಿಗಾಲವಿಲ್ಲ.

ಪ್ರೊ.ನಂಜುಂಡಸ್ವಾಮಿ ಮನಸ್ಸು ಮಾಡಿದ್ದರೆ ಎರಡೂ ಭಾರಿ ಮುಖ್ಯಮಂತ್ರಿ ಆಗುತ್ತಿದ್ದರು. ನಾವೇಲ್ಲ ಹಲವು ಬಾರಿ ಮಂತ್ರಿ ಶಾಸಕರಾಗುತ್ತಿದ್ದೇವು. ನಂಜುಂಡಸ್ವಾಮಿ ಅವರಿಗೆ ರೈತಪರ ಕಾಳಜಿ ಇತ್ತ. ಅವರಿಗೆ ಅಧಿಕಾರ ಬೇಕಿರಲಿಲ್ಲ. ಪಾಳೆಕರ್ ಕೃಷಿ ಪದ್ದತಿಯನ್ನು ಎಲ್ಲಾ ವಿಶ್ವವಿದ್ಯಾಲಯ ಶಾಲಾ ಕಾಲೇಜುಗಳಲ್ಲಿ ಪಠ್ಯ ವಿಷಯವಾಗಿ ಓದುವಂತಾಗಬೇಕು. ಎಂದು ಗಂಗಾಧರ್ ಹೇಳಿದರು.

ನಿವೃತ್ತ ಅಡ್ವೋಕೇಟ್ ಜನರಲ್ ರವಿವರ್ಮ ಮಾತನಾಡಿ, ಜನರಿಗೆ ವಿಷಮುಕ್ತ ಆಹಾರ ಪೂರೈಕೆ, ರೈತರನ್ನು ಸಾಲ ಮುಕ್ತರನ್ನಾಗಿ ಮಾಡುವುದು ಹಾಗೂ ರೈತರ ಆತ್ಮಹತ್ಯೆ ತಪ್ಪಿಸಲು ನೈಸರ್ಗಿಕ ಕೃಷಿ ಕಾರ್ಯಗಾರ ನಡೆಸಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page