ರೇಣುಕಾಸ್ವಾಮಿ ಅವರ ಕೈ, ಕಾಲು, ಬೆನ್ನು ಮತ್ತು ಎದೆಯಲ್ಲಿ ಗಮನಾರ್ಹ ರಕ್ತಸ್ರಾವ ಸೇರಿದಂತೆ ದೇಹದಾದ್ಯಂತ 15 ಗಂಭೀರವಾದ ಗಾಯಗಳಾಗಿವೆ ಎಂದು ವಿಧಿವಿಜ್ಞಾನ ಸಾಕ್ಷ್ಯಗಳು ಸೂಚಿಸಿವೆ.
ರೇಣುಕಾಸ್ವಾಮಿ ಅವರ ಮರಣೋತ್ತರ ಪರೀಕ್ಷೆಯ ವರದಿಯು ಅವರ ಸಾವಿಗೆ ಮುನ್ನ ಅವರ ಮೇಲೆ ನಡೆದ ದೌರ್ಜನ್ಯದ ಭಯಾನಕ ವಿವರಗಳನ್ನು ಅನಾವರಣಗೊಳಿಸಿದೆ.
ಶವಪರೀಕ್ಷೆಯ ವರದಿಯ ಪ್ರಕಾರ, ರೇಣುಕಾಸ್ವಾಮಿ ಅವರು ಆಘಾತ ಮತ್ತು ರಕ್ತಸ್ರಾವಕ್ಕೆ ಒಳಗಾಗುವ ಮೊದಲು ಕ್ರೂರವಾದ ಹೊಡೆತ ಮತ್ತು ಕರೆಂಟ್ ಶಾಕ್ ಗೆ ಒಳಗಾಗಿದ್ದ ಎಂದು ಸೂಚಿಸಲಾಗಿದೆ. ರಾಷ್ಟ್ರೀಯ ಮಾಧ್ಯಮ ಇಂಡಿಯಾ ಟುಡೇ ವರದಿಯ ಪ್ರಕಾರ, ಅಪರಾಧ ನಡೆದ ಜಾಗದಲ್ಲಿ ಆಘಾತಕಾರಿ ಹೊಡೆತಗಳು ಬಿದ್ದಿರುವುದು ಸಾಭೀತಾಗಿದೆ. ಆತನ ದೇಹದ ಮೇಲೆ ಅಂದ್ರೆ.. ಜಜ್ಜಿದ ಮೂಗು, ಹರಿದು ಹೋಗಿರುವ ಕಿವಿ ಮತ್ತು ಛಿದ್ರವಾಗಿರುವ ಮರ್ಮಾಂಗ.. ಇವುಗಳು ಹಲ್ಲೆಯ ಭೀಕರತೆಗೆ ಸಾಕ್ಷಿ ಹಿಡಿದಿವೆ.
ರೇಣುಕಾಸ್ವಾಮಿಯ ಕೈ, ಕಾಲು, ಬೆನ್ನು ಮತ್ತು ಎದೆಯಲ್ಲಿ ಗಮನಾರ್ಹ ರಕ್ತಸ್ರಾವ ಸೇರಿದಂತೆ ದೇಹದ 15 ಕಡೆಗಳಲ್ಲಿ ಗಂಭೀರವಾದ ಗಾಯಗಳಾಗಿವೆ ಎಂದು ವಿಧಿವಿಜ್ಞಾನ ಸಾಕ್ಷ್ಯಗಳು ತಿಳಿಸಿವೆ. ತೀವ್ರ ಹಲ್ಲೆಯಿಂದ ಉಂಟಾದ ರಕ್ತ ಹೆಪ್ಪುಗಟ್ಟುವಿಕೆಯೇ ರೇಣುಕಾಸ್ವಾಮಿ ಸಾವಿಗೆ ಕಾರಣ ಎಂದು ಶವಪರೀಕ್ಷೆ ಎತ್ತಿ ತೋರಿಸಿದೆ. ಮರದ ದೊಣ್ಣೆ ಮತ್ತು ಬೆಲ್ಟ್‌ನಿಂದಲೂ ಸಹ ಹೊಡೆದಿರುವುದು FSL ರಿಪೋರ್ಟ್ ನಲ್ಲಿ ಎಂದು ವರದಿಯಾಗಿದೆ.
ಇನ್ನಷ್ಟು ಆಘಾತಕಾರಿ ಅಂಶಗಳೆಂದರೆ ಆತನ ಸಾವಿನ ನಂತರ ಮೋರಿಯ ಪಕ್ಕದಲ್ಲಿ ಬಿದ್ದಿದ್ದ ಶವವನ್ನು ನಾಯಿಗಳು ಇನ್ನಷ್ಟು ಛಿದ್ರಗೊಳಿಸಿವೆ. ಆತನ ಮುಖ ಮತ್ತು ದೇಹದ ಇನ್ನಿತರ ಭಾಗಗಳನ್ನು ನಾಯಿಗಳು ತಿಂದಿರುವುದು ಇಡೀ ಪ್ರಕರಣದ ಭೀಕರ ಅಂಶಗಳನ್ನು ಎತ್ತಿ ಹಿಡಿದಿದೆ.
ರೇಣುಕಾಸ್ವಾಮಿಯ ಮೇಲೆ ತೀವ್ರವಾಗಿ ಹಲ್ಲೆಯಾಗುವ ಮುನ್ನ ಆತನಿಗೆ ಮೊದಲು ಹೊಡೆದ ವ್ಯಕ್ತಿ ಪ್ರಕರಣದ A1 ಆರೋಪಿ ಆಗಿರುವ ಪವಿತ್ರಾ ಗೌಡ ಎಂದು ತಿಳಿದು ಬಂದಿದೆ. ಆ ನಂತರವೇ ದರ್ಶನ್ ಸೇರಿದಂತೆ ಉಳಿದ ಎಲ್ಲಾ ಆರೋಪಿಗಳು ಹೊಡೆದದ್ದು ಎಂದು FSL ನಲ್ಲಿ ವರದಿಯಾಗಿದೆ.
ಪವಿತ್ರಾ ಗೌಡ ಬಗ್ಗೆ ಅನುಚಿತ ಕಾಮೆಂಟ್ ಮಾಡಿದ ನಂತರ ದರ್ಶನ್ ಮತ್ತು ಪವಿತ್ರಾ ಸೇರಿದಂತೆ ಇಬ್ಬರು ನಟರು ರೇಣುಕಾಸ್ವಾಮಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪ್ರಕರಣದ ಶಂಕಿತ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಜೂನ್ 8 ರಂದು ಚಿತ್ರದುರ್ಗದ ಆತನ ಸ್ವಗ್ರಾಮದಿಂದ ಆತನನ್ನು ಅಪಹರಿಸಿ ಬೆಂಗಳೂರಿನ ಶೆಡ್‌ಗೆ ಸಾಗಿಸಿ ಅಲ್ಲಿ ಚಿತ್ರಹಿಂಸೆ ನೀಡಿ ಕೊಂದಿರುವುದಾಗಿ ಪೊಲೀಸ್ ರಿಮಾಂಡ್ ಪ್ರತಿಯಲ್ಲಿ ಒಪ್ಪಿಕೊಂಡಿದ್ದಾರೆ.
ತನಿಖೆ ಬಹುತೇಕ ಅಂತ್ಯವಾಗಿದ್ದು ಗುರುವಾರ ಸಂಜೆಗೆ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ.