ಕೆನಡಾದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಮಧ್ಯರಾತ್ರಿ ಟೊರೊಂಟೊ ಬಳಿ ಟೆಸ್ಲಾ ಕಾರು ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಭಾರತೀಯರು ಪ್ರಾಣ ಕಳೆದುಕೊಂಡರು.
ಮೃತರಲ್ಲಿ ಇಬ್ಬರು ಗುಜರಾತ್‌ನ ಗೋಧ್ರಾಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ.
ಗೋಧ್ರಾ ಮೂಲದ 30 ವರ್ಷದ ಕೇತಾ ಗೋಹಿಲ್ ಮತ್ತು 26 ವರ್ಷದ ನಿಲ್ ಗೊಹಿಲ್ ಇತರ ಇಬ್ಬರು ಜನರೊಂದಿಗೆ ಟೆಸ್ಲಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ಪ್ರಯಾಣಿಸುತ್ತಿದ್ದ ಟೆಸ್ಲಾ ಟೊರೊಂಟೊ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಅಪಘಾತದ ನಂತರ ಕಾರಿನ ಬ್ಯಾಟರಿಗೆ ಬೆಂಕಿ ಹೊತ್ತಿಕೊಂಡಿರುವುದು ಪತ್ತೆಯಾಗಿದೆ.
ಈ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ. ಈ ವೇಳೆ ಅಲ್ಲೇ ಸಾಗುತ್ತಿದ್ದ ವಾಹನ ಸವಾರರು ಕಾರಿನಲ್ಲಿದ್ದವರನ್ನು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬೆಂಕಿಯನ್ನು ದಾಟಲು ಅವರ ಪ್ರಯತ್ನಗಳು ವ್ಯರ್ಥವಾಯಿತು.