ಧರ್ಮಸ್ಥಳ ಪ್ರಕರಣ ಸಂಬಂಧ ತನಿಖೆಗೆ ಸರ್ಕಾರ ಎಸ್ ಐಟಿ ರಚನೆ ಮಾಡಿದ್ದು, ಸತ್ಯ ಹೊರಬಂದಿದೆ. ಹೀಗಾಗಿ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಧರ್ಮಸ್ಥಳ ದೇವಸ್ಥಾನದ ಆಡಳಿತಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಧರ್ಮಸ್ಥಳ ಬೇರೆ, ಧರ್ಮಸ್ಥಳ ಊರಿನವರು ಬೇರೆಯಲ್ಲ. ಎಷ್ಟು ನಿಷ್ಠುರವಾದ ದಬ್ಬಾಳಿಕೆ ನಮ್ಮ ಮೇಲೆ ನಡೆದಿದೆ ಎಂದು ನಿವೂ ನೋಡಿದ್ದೀರಿ. ಯಾಕಿಷ್ಟು ದ್ವೇಷ ನನ್ನ ಮೇಲೆ? ಯಾಕಿಷ್ಟು ಹಗೆತನ? ನಾನು ಯಾರನ್ನೂ ಹೀಯಾಳಿಲ್ಲ, ಯಾರನ್ನೂ ದ್ವೇಷ ಮಾಡಿಲ್ಲ. ನಾವು ಸತ್ಯದಿಂದ ಇದ್ದೇವೆ. ನನಗೆ ವಿಶ್ವಾಸವಿದೆ ಎಂದು ಹೇಳಿದರು.
ಎಸ್ಐಟಿಯಿಂದ ಅರ್ಧ ವರದಿ ಬಂದಿದೆ. ಹಾಗಾಗಿ ನಿಂದು ಧರ್ಯವಾಗಿದ್ದೇನೆ. ಇಷ್ಟು ಮಾತನಾಡುತ್ತಿದ್ದೇನೆ. ಈಗ ಮನಸ್ಸು ನಿರಾಳವಾಗಿದೆ. ನಮ್ಮ ಮೇಲೆ ದೃಢನಂಬಿಕೆ ಇಟ್ಟ ಎಲ್ಲರಿಗೂ ಧನ್ಯವಾದ. ನಾವು ತಪ್ಪು ಮಾಡದ ಕಾರಣ ನಮಗೆ ಆತ್ಮವಿಶ್ವಾಸವಿದೆ. ನಮ್ಮ ಹೊಳಪು ಹಾಗೇ ಉಳಿದಿದೆ. ಇದಕ್ಕೆ ನಾನು ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ. ಎಲ್ಲವನ್ನೂ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ನೋಡಿಕೊಳ್ಳುತ್ತಾರೆ. ನಾವು ಸತ್ಯದಿಂದ ಇದ್ದೇವೆ ಎಂದು ಹೇಳಿದರು.